Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಗೋಡೆಯನ್ನು ಹೇಗೆ ಪ್ಲ್ಯಾಸ್ಟರ್ ಮಾಡುವುದು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವ ಮೊದಲು, ಅದು ಏನೆಂದು ಅರ್ಥಮಾಡಿಕೊಳ್ಳುವುದು ತುಂಬಾ ಮುಖ್ಯ. ಪ್ಲ್ಯಾಸ್ಟರಿಂಗ್ ಎನ್ನುವುದು ಗೋಡೆಗಳು, ಛಾವಣಿಗಳು ಅಥವಾ ವಿಭಾಗಗಳ ಮೇಲ್ಮೈಗೆ ಪ್ಲ್ಯಾಸ್ಟರ್ ಎಂದು ಕರೆಯಲಾಗುವ ಒಂದು ಮಿಶ್ರಣದ ನಯವಾದ, ಸಮ ಪದರವನ್ನು ಅನ್ವಯಿಸುವ ಪ್ರಕ್ರಿಯೆಯಾಗಿದೆ. ಈ ಮಿಶ್ರಣವು ಸಾಮಾನ್ಯವಾಗಿ ಸಿಮೆಂಟ್, ಮರಳು ಮತ್ತು ನೀರನ್ನು ಒಳಗೊಂಡಿರುತ್ತದೆ, ಆದಾಗ್ಯೂ ಸುಣ್ಣ ಅಥವಾ ಜಿಪ್ಸಂನಂತಹ ಹೆಚ್ಚುವರಿ ಪದಾರ್ಥಗಳನ್ನು ಕಾರ್ಯಸಾಧ್ಯತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಸೇರಿಸಬಹುದು. ರಕ್ಷಣಾತ್ಮಕ ಲೇಪನವನ್ನು ಒದಗಿಸುವುದು, ರಚನೆಯ ಬಾಳಿಕೆ ಮತ್ತು ನೋಟವನ್ನು ಹೆಚ್ಚಿಸುವುದೇ ಪ್ಲ್ಯಾಸ್ಟರಿಂಗ್‍ನ ಪ್ರಾಥಮಿಕ ಉದ್ದೇಶವಾಗಿದೆ. ಪ್ಲ್ಯಾಸ್ಟರಿಂಗ್ ನಯವಾದ, ಸಮತಟ್ಟಾದ ಮೇಲ್ಮೈಯನ್ನು ರಚಿಸಲೂ ಸಹ ಸಹಾಯ ಮಾಡುತ್ತದೆ, ಇದು ಪೈಂಟಿಂಗ್ ಅಥವಾ ಇತರ ಅಲಂಕಾರಿಕ ಮೆರುಗುಗಳಿಗೆ ಸೂಕ್ತವಾಗಿದೆ.
ಮತ್ತೊಂದೆಡೆ, ಕಲ್ಲಿನ ನಿರ್ಮಾಣದಲ್ಲಿ ಇಟ್ಟಿಗೆಗಳು ಅಥವಾ ಕಲ್ಲುಗಳ ನಡುವೆ ತೆರೆದ ಜಾಯಿಂಟುಗಳಿಗೆ ಫಿನಿಶಿಂಗ್ ಕೊಡುವ ಪ್ರಕ್ರಿಯೆಯಾಗಿದೆ. ಈ ತಂತ್ರದಲ್ಲಿ ಗಾರೆ ಮಿಶ್ರಣದಿಂದ ಜಾಯಿಂಟುಗಳನ್ನು ತುಂಬುವ ಕೆಲಸವಿರುತ್ತದೆ, ಇದನ್ನು ಹೆಚ್ಚಾಗಿ ಸಿಮೆಂಟ್, ಮರಳು ಮತ್ತು ನೀರಿನಿಂದ ಪ್ಲಾಸ್ಟರ್ ಮಾಡುವುದನ್ನು ಹೋಲುತ್ತದೆ. ನೀರು ನುಗ್ಗದಂತೆ ತಡೆಯುವುದು ಮತ್ತು ಕಟ್ಟಡದ ರಚನಾತ್ಮಕ ಸಮಗ್ರತೆಯನ್ನು ಹೆಚ್ಚಿಸುವುದೇ ಕಟ್ಟಡ ನಿರ್ಮಾಣದಲ್ಲಿ ಪಾಯಿಂಟಿಂಗ್‍ನ ಪ್ರಾಥಮಿಕ ಉದ್ದೇಶವಾಗಿದೆ. ಇದು ಒಟ್ಟಾರೆ ಗೋಚರತೆಗೆ ಕೊಡುಗೆಯನ್ನೂ ಸಹ ನೀಡುತ್ತದೆ, ಪ್ರತ್ಯೇಕ ಘಟಕಗಳ ಮೇಲೆ ಬೆಳಕುಚೆಲ್ಲುತ್ತದೆ. ಅಚ್ಚುಕಟ್ಟಾದ ಮೆರುಗಿನ ಆಕರ್ಷಕ ನೋಟವನ್ನು ಗೋಡೆಗಳಿಗೆ ಕೊಡುತ್ತದೆ.
ಪ್ಲ್ಯಾಸ್ಟರಿಂಗ್ ಮತ್ತು ಪಾಯಿಂಟಿಂಗ್ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಸಂದರ್ಭದಲ್ಲಿ, ನಾವು ಕೆಲವು ಪ್ರಮುಖ ವ್ಯತ್ಯಾಸಗಳನ್ನು ಅರ್ಥಮಾಡಿಕೊಳ್ಳಬೇಕು:
ಪ್ಲ್ಯಾಸ್ಟರಿಂಗ್‍ಅನ್ನು ಸಂಪೂರ್ಣ ಮೇಲ್ಮೈಗಳಿಗೆ ಹಾಕಲಾಗುತ್ತದೆ, ಗೋಡೆಗಳು ಮತ್ತು ಛಾವಣಿಗಳನ್ನು ಆವರಿಸುತ್ತದೆ, ನಯವಾದ ಮತ್ತು ಸ್ಥಿರವಾದ ಮುಕ್ತಾಯವನ್ನು ಒದಗಿಸುತ್ತದೆ. ಮತ್ತೊಂದೆಡೆ, ಪಾಯಿಂಟಿಂಗ್ ಅನ್ನು ನಿರ್ದಿಷ್ಟವಾಗಿ ಇಟ್ಟಿಗೆಗಳು ಅಥವಾ ಕಲ್ಲುಗಳಂತಹ ಪ್ರತ್ಯೇಕ ಘಟಕಗಳ ನಡುವಿನ ಜಾಯಿಂಟ್‍ಗಳಿಗೆ ಹಾಕಲಾಗುತ್ತದೆ.
ಪ್ಲ್ಯಾಸ್ಟರಿಂಗ್ ಕೆಲಸವು ಪ್ರಾಥಮಿಕವಾಗಿ ಮೇಲ್ಮೈನ ಹೊರನೋಟವನ್ನು ಹೆಚ್ಚಿಸುವುದರ ಮೇಲೆ ಗಮನವಿಡುತ್ತದೆ. ಬಾಹ್ಯ ಅಂಶಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದು ಅಲಂಕಾರಿಕ ಮತ್ತು ಕ್ರಿಯಾತ್ಮಕ ಕೋಟಿಂಗ್(ಲೇಪನ)ಅನ್ನು ರಚಿಸುತ್ತದೆ. ಇದಕ್ಕೆ ವಿರುದ್ಧವಾಗಿ, ಪಾಯಿಂಟಿಂಗ್ ಒಂದು ರಚನಾತ್ಮಕ ಬಲವರ್ಧನೆಯಾಗಿ ಕೆಲಸ ಮಾಡುತ್ತದೆ, ನೀರಿನ ಪ್ರವೇಶವನ್ನು ತಡೆಗಟ್ಟುತ್ತದೆ ಮತ್ತು ಕಲ್ಲಿನ ರಚನೆಗಳ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತದೆ.
ಸಾಮಾನ್ಯವಾಗಿ ಪ್ಲಾಸ್ಟರಿಂಗ್ ಮಾಡುವ ಕೆಲಸಕ್ಕೆ ಸಿಮೆಂಟ್, ಮರಳು ಮತ್ತು ನೀರಿನ ಮಿಶ್ರಣವನ್ನು ಬಳಸುತ್ತದೆ, ಆದರೆ ಪಾಯಿಂಟಿಂಗ್ ಪ್ರಧಾನವಾಗಿ ಗಾರೆಗಳನ್ನು ಬಳಸುತ್ತದೆ. ಪ್ರಾಜೆಕ್ಟ್ ನ ನಿರ್ದಿಷ್ಟ ಅವಶ್ಯಕತೆಗಳ ವಸ್ತುಗಳ ಆಧಾರದ ಮೇಲೆ ಆಯ್ಕೆಯು ಬದಲಾಗಬಹುದು.
ಪ್ಲ್ಯಾಸ್ಟರಿಂಗ್ ಕೆಲಸದಲ್ಲಿ ಪ್ಲಾಸ್ಟರ್‍ಅನ್ನು ಸಮವಾಗಿ ಹರಡಲು ಮತ್ತು ಅಪೇಕ್ಷಿತ ವಿನ್ಯಾಸವನ್ನು ಸಾಧಿಸಲು ಟ್ರೋವೆಲ್‍ಗಳು, ಫ್ಲೋಟ್‍ಗಳು ಮತ್ತು ಇತರ ಟೂಲ್‍ಗಳ ಬಳಕೆಯಿಂದ ಕೂಡಿರುತ್ತದೆ. ಘಟಕಗಳ ನಡುವಿನ ಅಂತರವನ್ನು ನಿಖರವಾಗಿ ತುಂಬಲು ಪಾಯಿಂಟಿಂಗ್‌ಗೆ ವಿಶೇಷವಾದ ಪಾಯಿಂಟಿಂಗ್ ಪರಿಕರಗಳು ಬೇಕಾಗುತ್ತದೆ.
ಸಂಪೂರ್ಣ ಗೋಡೆಗಳು ಅಥವಾ ಛಾವಣಿಗಳಂತಹ ದೊಡ್ಡ ಪ್ರದೇಶಗಳಿಗೆ ಪ್ಲ್ಯಾಸ್ಟರಿಂಗ್ ಮಾಡಲಾಗುತ್ತದೆ, ವಿಶಾಲವಾಗಿ ಅಪ್ಲಿಕೇಶನ್ ಮತ್ತು ಹೆಚ್ಚು ವ್ಯಾಪಕವಾದ ಮೇಲ್ಮೈ ತಯಾರಿಕೆಯ ಅಗತ್ಯವಿದೆ. ಮತ್ತೊಂದೆಡೆ, ಪಾಯಿಂಟಿಂಗ್ ಅನ್ನು ವಿಶಿಷ್ಟವಾಗಿ ಸಣ್ಣಸಣ್ಣ ವಿಭಾಗಗಳಲ್ಲಿ ನಡೆಸಲಾಗುತ್ತದೆ, ಪ್ರತ್ಯೇಕ ಘಟಕಗಳ ನಡುವಿನ ಜಾಯಿಂಟ್‍ಗಳ ಮೇಲೆ ನಿರ್ದಿಷ್ಟವಾಗಿ ಗಮನ ಕೇಂದ್ರೀಕರಿಸುತ್ತದೆ.
ದೊಡ್ಡ ಮೇಲ್ಮೈ ಪ್ರದೇಶವಿರುವ ಕಾರಣ, ಸಾಮಾನ್ಯವಾಗಿ ಪ್ಲ್ಯಾಸ್ಟರಿಂಗ್‌ಗೆ ಹೆಚ್ಚಿನ ಸಮಯ ಮತ್ತು ಶ್ರಮ ಬೇಕಾಗುತ್ತದೆ. ಇದು ಪ್ಲ್ಯಾಸ್ಟರ್‌ಬೋರ್ಡ್ ಅಳವಡಿಸುವ ಮತ್ತು ಬೇಸ್‌ಕೋಟ್ ಹಚ್ಚುವಂತಹ ಹೆಚ್ಚುವರಿ ಹಂತಗಳನ್ನೂ ಸಹ ಒಳಗೊಂಡಿರಬಹುದು. ಪಾಯಿಂಟಿಂಗ್, ಎಂಬುದು ಸ್ಥಳೀಯ ಪ್ರಕ್ರಿಯೆಯಾದ ಕಾರಣ, ಸಾಮಾನ್ಯವಾಗಿ ಹೆಚ್ಚು ವೇಗದಿಂದ ಕೂಡಿದ್ದು ವೆಚ್ಚ-ಪರಿಣಾಮಕಾರಿಯಾಗಿದೆ.
ಕಟ್ಟಡದ ಒಟ್ಟಾರೆ ಸೌಂದರ್ಯಕ್ಕೆ ಪ್ಲಾಸ್ಟರಿಂಗ್ ಕೆಲಸ ಗಮನಾರ್ಹ ಕೊಡುಗೆ ನೀಡುತ್ತದೆ, ಇದು ನಯವಾದ ಫಿನಿಶ್ಡ್ ಲುಕ್ ಇರುವ ಮೆರುಗನ್ನು ನೀಡುತ್ತದೆ. ಟೆಕ್ಸ್ಚರ್ ಆಗಿರುವ ಅಥವಾ ಪಾಲಿಶ್ ಮಾಡಿದ ಮೇಲ್ಮೈಗಳಂತಹ ವಿವಿಧ ಅಲಂಕಾರಿಕ ಫಿನಿಶ್ಡ್ ಲುಕ್‍ಗಳಿಗೆ ಅನುಮತಿಸುತ್ತದೆ. ಪಾಯಿಂಟಿಂಗ್, ದೃಷ್ಟಿಗೋಚರವಾಗಿ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ಪ್ರತ್ಯೇಕ ಘಟಕಗಳನ್ನು ಹೈಲೈಟ್ ಮಾಡುವ ಮೂಲಕ ಮತ್ತು ಸ್ವಚ್ಛವಾದ, ಅಚ್ಚುಕಟ್ಟಾಗಿ ಕೀಲುಗಳನ್ನು ರಚಿಸುವ ಮೂಲಕ ಕಲ್ಲಿನ ರಚನೆಗಳ ಪಾತ್ರ ಮತ್ತು ಆಕರ್ಷಣೆಯನ್ನು ಹೆಚ್ಚಿಸುತ್ತದೆ.
ಪ್ಲ್ಯಾಸ್ಟರಿಂಗ್ ಮೇಲ್ಮೈಯನ್ನು ಉತ್ತಮ ಸ್ಥಿತಿಯಲ್ಲಿಡಲು ಪುನಃ ಬಣ್ಣ ಬಳಿಯುವ ಅಥವಾ ತೇಪೆ ಹಾಕುವಂತಹ ಆವರ್ತಕ ನಿರ್ವಹಣೆಯ ಅಗತ್ಯವಿದೆ. ಪಾಯಿಂಟಿಂಗ್ ಕೆಲಸವನ್ನು, ಒಮ್ಮೆ ಸರಿಯಾಗಿ ಮಾಡಿದರೆ, ಸಾಮಾನ್ಯವಾಗಿ ಕನಿಷ್ಠ ನಿರ್ವಹಣೆ ಬೇಕಾಗುತ್ತದೆ, ಏಕೆಂದರೆ ಕೀಲುಗಳನ್ನು ರಕ್ಷಿಸುವುದು ಮತ್ತು ಕಲ್ಲಿನ ರಚನಾತ್ಮಕ ಸಮಗ್ರತೆಯನ್ನು ಕಾಪಾಡಿಕೊಳ್ಳುವುದೇ ಅದರ ಪ್ರಾಥಮಿಕ ಕಾರ್ಯವಾಗಿದೆ.
ಕೊನೆಯ ಹಂತದಲ್ಲಿ, ನಿರ್ಮಾಣ ಪ್ರಕ್ರಿಯೆಯಲ್ಲಿ ಪ್ಲ್ಯಾಸ್ಟರಿಂಗ್ ಮತ್ತು ಪಾಯಿಂಟಿಂಗ್ ಕಾರ್ಯಗಳೆರಡೂ ಪ್ರಮುಖ ಪಾತ್ರಗಳನ್ನು ವಹಿಸುತ್ತವೆ. ನೀವು ಮನೆಮಾಲೀಕರಾಗಿರಲಿ, ಗುತ್ತಿಗೆದಾರರಾಗಿರಲಿ ಅಥವಾ ವಾಸ್ತುಶಿಲ್ಪಿಯಾಗಿರಲಿ, ನಿಮ್ಮ ನಿರ್ಮಾಣ ಪ್ರಾಜೆಕ್ಟ್ ಗಳ ಬಗ್ಗೆ ತಿಳುವಳಿಕೆಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಪ್ಲ್ಯಾಸ್ಟರಿಂಗ್ ಮತ್ತು ಪಾಯಿಂಟ್‌ಗಳ ನಡುವಿನ ವ್ಯತ್ಯಾಸ ಗುರುತಿಸುವುದು ಅತ್ಯಗತ್ಯ. ಪ್ಲ್ಯಾಸ್ಟರಿಂಗ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮತ್ತು ನಿಮ್ಮ ಮನೆಗೆ ಅದನ್ನು ಸರಿಯಾದ ರೀತಿಯಲ್ಲಿ ಹೇಗೆ ಮಾಡಬೇಕೆಂಬ ಆಸಕ್ತಿ ನಿಮಗಿದ್ದರೆ, ಈ ಉಪಯುಕ್ತ ವೀಡಿಯೊವನ್ನು ಪರಿಶೀಲಿಸಿ: ನಿಮ್ಮ ಮನೆಗೆ ಪ್ಲಾಸ್ಟರ್ ಮಾಡಲು ಸರಿಯಾದ ಮಾರ್ಗ. ವೃತ್ತಿಪರ ಪ್ಲ್ಯಾಸ್ಟರಿಂಗ್ ಫಲಿತಾಂಶಗಳನ್ನು ಸಾಧಿಸಲು ಈ ವೀಡಿಯೊ ಮೌಲ್ಯಯುತವಾದ ಒಳನೋಟಗಳನ್ನು ಮತ್ತು ಹಂತ-ಹಂತದ ಮಾರ್ಗದರ್ಶನವನ್ನು ಒದಗಿಸುತ್ತದೆ.