Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಪಿಂಗಾಣಿ ಟೈಲ್ ಒಂದು ಬಗೆಯ ಸೆರಾಮಿಕ್ ಟೈಲ್ ಆಗಿದ್ದು, ಇದನ್ನು ಹೆಚ್ಚಿನ ತಾಪಮಾನದಲ್ಲಿ ಸೂಕ್ಷ್ಮ ಜೇಡಿಮಣ್ಣಿನಿಂದ ಸುಟ್ಟು ತಯಾರಿಸಲಾಗುತ್ತದೆ. ಈ ಸುಡುವ ಪ್ರಕ್ರಿಯೆಯು 0.5% ಕ್ಕಿಂತ ಕಡಿಮೆ ನೀರನ್ನು ಹೀರಿಕೊಳ್ಳುವ ಕಾರಣ ಗಟ್ಟಿಯಾಗಿರುವ ಮತ್ತು ಹೆಚ್ಚು ಬಾಳಿಕೆ ಬರುವ ಟೈಲ್ ಅನ್ನು ರೂಪಿಸುತ್ತದೆ. ಪಿಂಗಾಣಿ ಟೈಲ್ ಗಳ ಸಾಂದ್ರತೆಯು ಅವುಗಳನ್ನು ಕಲೆಗಳು, ಗೀರುಗಳು ಮತ್ತು ತೇವಾಂಶ ನಿರೋಧಕವಾಗಿಸುವುದರಿಂದ ಸ್ನಾನಗೃಹಗಳು ಮತ್ತು ಅಡಿಗೆಮನೆಗಳಂತಹ ಹೆಚ್ಚಿನ ಓಡಾಟ ಅಥವಾ ನೀರಿಗೆ ಒಡ್ಡಿಕೊಳ್ಳುವ ಪ್ರದೇಶಗಳಿಗೆ ಅವುಗಳನ್ನು ಅತ್ಯುತ್ತಮ ಆಯ್ಕೆಯನ್ನಾಗಿ ಮಾಡುತ್ತದೆ. ಪಿಂಗಾಣಿ ಟೈಲ್ ಗಳು ವಿವಿಧ ಬಣ್ಣಗಳು, ಮಾದರಿಗಳು ಮತ್ತು ಉತ್ತಮ ಅಂತಿಮ ಸ್ಪರ್ಶದೊಂದಿಗೆ ವ್ಯಾಪಕ ಶ್ರೇಣಿಯ ವಿನ್ಯಾಸ ಆಯ್ಕೆಗಳನ್ನು ಸಹ ನೀಡುತ್ತವೆ.
ಪಿಂಗಾಣಿ ಟೈಲ್ ಗಳ ಪ್ರಮುಖ ಅನುಕೂಲವೆಂದರೆ ಅವುಗಳ ವ್ಯಾಪಕ ವಿನ್ಯಾಸದ ಬಹುಮುಖತೆ. ಅವು ವ್ಯಾಪಕ ಶ್ರೇಣಿಯ ಬಣ್ಣಗಳು, ಮಾದರಿಗಳು ಮತ್ತು ಅಂತಿಮ ಸ್ಪರ್ಶದೊಡಗೂಡಿ ಲಭ್ಯವಿವೆ. ಇದು ಒಳಾಂಗಣ ವಿನ್ಯಾಸದಲ್ಲಿ ಕೊನೆಯಿಲ್ಲದ ಅಸಂಖ್ಯಾತ ಸೃಜನಶೀಲ ಆಯ್ಕೆಯ ಸಾಧ್ಯತೆಗಳನ್ನು ಒದಗಿಸುತ್ತದೆ. ನಯ, ನೂತನ, ನವೀನ ಮತ್ತು ಅತ್ಯಾಧುನಿಕ ವಿನ್ಯಾಸದ ಪಿಂಗಾಣಿ ಟೈಲ್ ಗಳು ನೈಸರ್ಗಿಕ ಕಲ್ಲು, ಮರ ಅಥವಾ ಬಟ್ಟೆಯ ವಿನ್ಯಾಸವನ್ನು ಹೋಲುವ ಮೂಲಕ ನಿಮ್ಮ ಮನೆ ಅಥವಾ ಕಚೇರಿಗೆ ಅಪೇಕ್ಷಿತ ಕಣ್ಮನ ಸೆಳೆಯುವ ಮೋಹಕ ಸೌಂದರ್ಯವನ್ನು ನೀಡಲು ನಿಮಗೆ ಅನುವು ಮಾಡಿಕೊಡುತ್ತವೆ. ಮಾತ್ರವಲ್ಲದೆ, ಗ್ರೌಟಿಂಗ್‌ಗೆ ಬಂದಾಗ, ಪಿಂಗಾಣಿ ಟೈಲ್ ಗಳೊಂದಿಗೆ ಎಪಾಕ್ಸಿ ಗ್ರೌಟ್ ಅನ್ನು ಬಳಸುವುದರಿಂದ ವರ್ಧಿತ ಬಾಳಿಕೆ ಮತ್ತು ಕಲೆ ನಿರೋಧಕತೆಯನ್ನು ಒದಗಿಸುತ್ತದೆ. ಇದು ದೀರ್ಘಕಾಲೀನ ಮತ್ತು ಸುಲಭ ನಿರ್ವಹಣೆಯ ಸಾಧ್ಯತೆಯನ್ನು ಖಾತ್ರಿಗೊಳಿಸುತ್ತದೆ.
ಮತ್ತೊಂದೆಡೆ, ಸೆರಾಮಿಕ್ ಟೈಲ್‌ಗಳನ್ನು ಜೇಡಿಮಣ್ಣು, ಖನಿಜಗಳು ಮತ್ತು ನೀರಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಪಿಂಗಾಣಿ ಟೈಲ್‌ಗಳಿಗಿಂತ ಕಡಿಮೆ ತಾಪಮಾನದಲ್ಲಿ ಸೆರಾಮಿಕ್ ಟೈಲ್‌ಗಳನ್ನು ಸುಡಲಾಗುತ್ತದೆ. ಇದರಿಂದಾಗಿ ಇವು ಸ್ವಲ್ಪ ಕಡಿಮೆ ಗಟ್ಟಿಯಾದ ಮತ್ತು ಹೆಚ್ಚು ಬಿಡುಸಾಗಿ ಉತ್ಪನ್ನವಾಗುತ್ತವೆ. ಸೆರಾಮಿಕ್ ಟೈಲ್‌ಗಳ ನೀರಿನ ಹೀರಿಕೊಳ್ಳುವಿಕೆಯ ಪ್ರಮಾಣ ಸಾಮಾನ್ಯವಾಗಿ 0.5% ಕ್ಕಿಂತ ಹೆಚ್ಚಿರುವ ಕಾರಣ ಅವು ಪಿಂಗಾಣಿ ಟೈಲ್‌ಗಳಿಗಿಂತ ಸ್ವಲ್ಪ ಕಡಿಮೆ ಬಾಳಿಕೆ ಬರಬಹುದಾದರೂ, ಅವು ಸವೆಯುವಿಕೆ ಮತ್ತು ತುಂಡಾಗದಂತೆ ಉತ್ತಮ ಪ್ರತಿರೋಧವನ್ನು ನೀಡುವ ಕಾರಣ ಇದು ಹೆಚ್ಚಿನ ವಸತಿ ಸಮುಚ್ಚಯಗಳಿಗೆ ಸೂಕ್ತವಾಗಿದೆ. ಸೆರಾಮಿಕ್ ಟೈಲ್‌ಗಳು ವಿವಿಧ ಶೈಲಿಗಳು, ಗಾತ್ರಗಳು ಮತ್ತು ವಿನ್ಯಾಸಗಳಲ್ಲಿ ಲಭ್ಯವಿದ್ದು ನಿಮ್ಮ ಒಳಾಂಗಣದ ಸೃಜನಶೀಲ ಅಭಿವ್ಯಕ್ತಿ ಮತ್ತು ಗ್ರಾಹಕೀಕರಣಕ್ಕೆ ಅವಕಾಶವನ್ನು ನೀಡುತ್ತದೆ.
ವಿವಿಧ ವಿನ್ಯಾಸದ ಆದ್ಯತೆಗಳನ್ನು ಪೂರೈಸಲು ಸೆರಾಮಿಕ್ ಟೈಲ್ ಗಳು ವಿವಿಧ ಶೈಲಿಗಳು, ಗಾತ್ರಗಳು ಮತ್ತು ವಿನ್ಯಾಸಗಳಲ್ಲಿ ಲಭ್ಯವಿವೆ. ನೀವು ಸ್ವಚ್ಛ ಮತ್ತು ಕನಿಷ್ಠ ನೋಟ ಅಥವಾ ದಪ್ಪ ಮತ್ತು ಮನಮೋಹಕ ನೋಟವನ್ನು ಬಯಸುತ್ತೀರಾ? ನಿಮ್ಮ ಅಪೇಕ್ಷಿತ ಸೌಂದರ್ಯದ ಆಯ್ಕೆಗೆ ಸರಿಹೊಂದುವಂತೆ ಸೆರಾಮಿಕ್ ಟೈಲ್ಸ್ ಲಭ್ಯವಿದೆ. ಬಿಂಬ, ಹೊಳಪು, ವಿನ್ಯಾಸ ಮತ್ತು ಮಾದರಿಯ ಆಯ್ಕೆಗಳನ್ನು ಒಳಗೊಂಡಂತೆ ವಿವಿಧ ಅಂತಿಮ ಸ್ಪರ್ಶಗಳೊಂದಿಗೆ ಅವುಗಳನ್ನು ನೋಡಬಹುದು.
ಅಂತಿಮವಾಗಿ ಪಿಂಗಾಣಿ ಅಥವಾ ಸೆರಾಮಿಕ್ ಟೈಲ್ ಇವುಗಳ ಮಧ್ಯೆ ಯಾವುದು ಉತ್ತಮ ಆಯ್ಕೆ ಎಂದು ನಿರ್ಧರಿಸುವುದು ನಿಮ್ಮ ನಿರ್ದಿಷ್ಟ ಅಗತ್ಯತೆಗಳು ಮತ್ತು ಟೈಲ್ ಗಳನ್ನು ಹಾಕುವ ಸ್ಥಳವನ್ನು ಅವಲಂಬಿಸಿರುತ್ತದೆ. ಪ್ರತಿಯೊಂದು ಪ್ರಕಾರಕ್ಕೂ ಪರಿಗಣಿಸಬೇಕಾದ ಕೆಲವು ಪ್ರಮುಖ ಗುಣಗಳು ಇಲ್ಲಿವೆ:
ಪಿಂಗಾಣಿ ಟೈಲ್ ಗಳು ಗಟ್ಟಿಯಾದ ಮತ್ತು ಹೆಚ್ಚು ಬಾಳಿಕೆ ಬರುವ ಟೈಲ್ ಗಳಾಗಿದ್ದು, ಅವುಗಳು ಕೆತ್ತುವಿಕೆ, ಗೀರುಗಳು ಮತ್ತು ತೇವಾಂಶವನ್ನು ಹೆಚ್ಚು ನಿರೋಧಿಸುತ್ತವೆ. ಸೆರಾಮಿಕ್ ಟೈಲ್ಸ್, ಸ್ವಲ್ಪ ಕಡಿಮೆ ಗಟ್ಟಿಯಾಗಿದ್ದರೂ, ಇನ್ನೂ ಬಾಳಿಕೆ ಬರುವ ಹೆಚ್ಚಿನ ವಸತಿ ಸಮುಚ್ಚಯಗಳಿಗೆ ಸೂಕ್ತವಾಗಿದೆ.
ಪಿಂಗಾಣಿ ಟೈಲ್ ಗಳು ಕಡಿಮೆ ನೀರನ್ನು ಹೀರಿಕೊಳ್ಳುವ ದರವನ್ನು ಹೊಂದಿರುವುದರಿಂದಾಗಿ ಅವು ನೀರಿನಿಂದ ಹಾನಿಗೊಳಗಾಗುವುದನ್ನು ಹೆಚ್ಚು ನಿರೋಧಿಸುತ್ತವೆ. ಸೆರಾಮಿಕ್ ಟೈಲ್ಸ್, ಹೆಚ್ಚು ಸರಂಧ್ರವಾಗಿದ್ದರೂ, ನೀರಿಗೆ ಒಡ್ಡಿಕೊಳ್ಳುವ ಸಾಧ್ಯತೆ ಕಡಿಮೆ ಇರುವ ಅಥವಾ ಸರಿಯಾಗಿ ಹೊದಿಸಿರುವ ಸ್ಥಳಗಳಲ್ಲಿ ಹೆಚ್ಚು ಬಳಸಬಹುದು.
ಪಿಂಗಾಣಿ ಮತ್ತು ಸೆರಾಮಿಕ್ ಟೈಲ್ಸ್ ಗಳೆರಡೂ ವಿವಿಧ ಬಣ್ಣಗಳು, ಮಾದರಿಗಳು ಮತ್ತು ಅಂತಿಮ ಸ್ಪರ್ಶಗೊಳಿಸುವಿಕೆಗಳು ಸೇರಿದಂತೆ ವ್ಯಾಪಕ ಶ್ರೇಣಿಯಲ್ಲಿ ವಿನ್ಯಾಸದ ಆಯ್ಕೆಗಳನ್ನು ನೀಡುತ್ತವೆ. ಪಿಂಗಾಣಿ ಟೈಲ್ ಗಳು ಹೆಚ್ಚು ಸಂಕೀರ್ಣವಾದ ವಿನ್ಯಾಸಗಳನ್ನು ಹೊಂದಿದ್ದರೂ ಸೆರಾಮಿಕ್ ಟೈಲ್ ಗಳು ವಿಭಿನ್ನ ಕಣ್ಮನ ಸೆಳೆಯುವ ಮೋಹಕ ವಿನ್ಯಾಸಕ್ಕೆ ಸರಿಹೊಂದುವಂತೆ ಸಾಕಷ್ಟು ಆಯ್ಕೆಗಳನ್ನು ಒದಗಿಸುತ್ತವೆ.
ಪಿಂಗಾಣಿ ಟೈಲ್ ಗಳು ಅವುಗಳ ಉತ್ಪಾದನಾ ಪ್ರಕ್ರಿಯೆ ಮತ್ತು ಉತ್ತಮ ಗುಣಮಟ್ಟದಿಂದಾಗಿ ಸೆರಾಮಿಕ್ ಟೈಲ್ ಗಳಿಗಿಂತ ಹೆಚ್ಚು ದುಬಾರಿಯಾಗಿವೆ. ಸೆರಾಮಿಕ್ ಟೈಲ್ ಗಳು ಸಾಮಾನ್ಯವಾಗಿ ಹೆಚ್ಚು ಬಜೆಟ್ ಸ್ನೇಹಿ ಮಾತ್ರವಲ್ಲ ಜೊತೆಗೆ ಆಕರ್ಷಕ ಸೌಂದರ್ಯವನ್ನು ಒದಗಿಸುತ್ತವೆ.
ಒಟ್ಟಾರೆಯಾಗಿ, ಪಿಂಗಾಣಿ ಮತ್ತು ಸೆರಾಮಿಕ್ ಟೈಲ್ ಗಳು ಒಂದೇ ಆಗಿವೆಯೇ? ಇಲ್ಲ, ಎಂದೆಂದಿಗೂ ಅಲ್ಲ. ಬಾತ್‌ರೂಂಗಳು ಮತ್ತು ಅಡಿಗೆಮನೆಗಳಂತಹ ತೇವಾಂಶ ಸ್ಥಳಗಳಲ್ಲಿ, ಅಸಾಧಾರಣ ಬಾಳಿಕೆ ಮತ್ತು ಪ್ರತಿರೋಧದ ಅಗತ್ಯವಿರುವ ಪ್ರದೇಶಗಳಲ್ಲಿ ಪಿಂಗಾಣಿ ಟೈಲ್ ಗಳು ಅತ್ಯುತ್ತಮ ಆಯ್ಕೆಯಾಗಿವೆ. ಮತ್ತೊಂದೆಡೆ, ಸೆರಾಮಿಕ್ ಟೈಲ್ ಗಳು ಹೆಚ್ಚಿನ ವಸತಿ ಸಮುಚ್ಚಯಗಳಿಗೆ ಸೂಕ್ತವಾದ ಬಹುಮುಖ ಮತ್ತು ಬಜೆಟ್ ಸ್ನೇಹಿ ಆಯ್ಕೆಯಾಗಿವೆ. ಆದ್ದರಿಂದ ನಿರ್ಧರಿಸುವಾಗ, ಪಿಂಗಾಣಿಗಿಂತ ಸೆರಾಮಿಕ್ ಉತ್ತಮವೇ (ಅಥವಾ ಪ್ರತಿಕ್ರಮದಲ್ಲಿ) ಮತ್ತು ಪಿಂಗಾಣಿ ಮತ್ತು ಸೆರಾಮಿಕ್ ಟೈಲ್ ಗಳ ಮಧ್ಯೆ ನಿಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವಾಗ ನೀವು ಈ ಮೇಲಿನ ಅಂಶಗಳನ್ನು ಪರಿಗಣಿಸುವುದು ಸೂಕ್ತ.
ಫ್ಲೋರಿಂಗ್ ಮತ್ತು ಗೋಡೆಯ ಜಾಗಗಳಿಗೆ ಅಂಟಿಸಲು ಇವೆರಡೂ ಜನಪ್ರಿಯ ಆಯ್ಕೆಗಳಾಗಿರುವುದರಿಂದ, ಪಿಂಗಾಣಿ vs ಸೆರಾಮಿಕ್ ಟೈಲ್ ಗಳ ನಡುವಿನ ಆಯ್ಕೆಯು ಬಾಳಿಕೆ, ಬಹುಮುಖತೆ ಮತ್ತು ವಿನ್ಯಾಸಕ್ಕೆ ಸಂಬಂಧಿಸಿದಂತೆ ನಿಮ್ಮ ಆದ್ಯತೆಗಳನ್ನು ಅವಲಂಬಿಸಿರುತ್ತದೆ. ಪಿಂಗಾಣಿ ಮತ್ತು ಸೆರಾಮಿಕ್ ನಡುವಿನ ಭಿನ್ನತೆಯನ್ನು ಅರಿತುಕೊಂಡ ನಂತರ, ನಿಮ್ಮ ಯೋಜನೆಗೆ ಸೂಕ್ತವಾದ ಆಯ್ಕೆ ಮಾಡಲು ನಿಮ್ಮ ನಿರ್ದಿಷ್ಟ ಅಗತ್ಯಗಳು ಮತ್ತು ಆದ್ಯತೆಗಳನ್ನು ಪರಿಗಣಿಸಿ. ಟೈಲ್ ಬಿರುಕು ಬಿಡಲು ಕಾರಣಗಳಂತಹ ಟೈಲ್-ಸಂಬಂಧಿತ ವಿಷಯಗಳ ಬಗೆಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ಆಸಕ್ತಿಯನ್ನು ಹೊಂದಿದ್ದರೆ, ಟೈಲ್ ಬಿರುಕಿನ ಕುರಿತ ನಮ್ಮ ಸಂಬಂಧಿತ ಬ್ಲಾಗ್ ಅನ್ನು ಪರಿಶೀಲಿಸಿ.