ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ನಿರ್ಮಾಣದಲ್ಲಿ ಅಡಿಪಾಯ ಎಂದರೇನು ಅವುಗಳ ವಿಧಗಳು ಮತ್ತು ಉಪಯೋಗಗಳು

ಅಡಿಪಾಯಗಳು ಮನೆ ನಿರ್ಮಾಣದ ಬೆನ್ನೆಲುಬು ಇದ್ದಂತೆ. ಈ ಬ್ಲಾಗ್ ಅಡಿಪಾಯಗಳ ನಿರ್ಣಾಯಕ ಪಾತ್ರವನ್ನು ವಿವರಿಸುತ್ತದೆ. ಜೊತೆಗೆ ವಿವಿಧ ಫೌಂಡೇಶನ್​ ಅಡಿಪಾಯದ ಪ್ರಕಾರಗಳು ಮತ್ತು ಅವುಗಳ ಬಳಕೆಗಳ ಒಳನೋಟಗಳನ್ನು ನೀಡುತ್ತದೆ. ಅಡಿಪಾಯಗಳು ಭಾರ ಹೊತ್ತುಕೊಳ್ಳುವ ಮೂಲಕ ನಿರ್ಮಾಣದಲ್ಲಿ ಪ್ರತಿ ಮನೆಗೆ ಸುರಕ್ಷತೆ, ಸ್ಥಿರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಹೇಗೆ ಕೊಡುತ್ತವೆ ಎಂಬುದನ್ನು ಅನ್ವೇಷಿಸಿ.

Share:


ಮನೆಯ ನಿರ್ಮಾಣದಲ್ಲಿ, ಅಡಿಪಾಯವೇ ಎಲ್ಲವೂ. ಪ್ರತಿ ಗಟ್ಟಿಯಾದ ಅಡಿಪಾಯದ ಹೃದಯಭಾಗದಲ್ಲಿ "ಅಡಿ" ಎಂದು ಕರೆಯಲ್ಪಡುವ ನಿರ್ಣಾಯಕ ಅಂಶವಿದೆ. ನಿರ್ಮಾಣದಲ್ಲಿ ಒಂದು ಅಡಿಪಾಯವು ಕಟ್ಟಡದ ಅಪಾರ ಭಾರವನ್ನು ಕಟ್ಟಡದಿಂದ ಸುರಕ್ಷಿತವಾಗಿ ಕೆಳಗಿರುವ ನೆಲಕ್ಕೆ ವರ್ಗಾಯಿಸಲು ನಿಖರವಾಗಿ ವಿನ್ಯಾಸಗೊಳಿಸಿದ ರಚನಾತ್ಮಕ ಅಂಶವಾಗಿದೆ. ಕಟ್ಟಡಗಳು ಸ್ಥಿರವಾಗಿ ಮತ್ತು ನೇರವಾಗಿರುವುದನ್ನು ಖಾತ್ರಿಪಡಿಸುವಲ್ಲಿ ಅಡಿಪಾಯಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅಸಮವಾದ ಸ್ಥಳ ಅಥವಾ ಸ್ಟ್ರಕ್ಚರಲ್ ವೈಫಲ್ಯಗಳನ್ನು ತಡೆಯಲು ಭಾರವನ್ನು ಸಮವಾಗಿ ಹಂಚುತ್ತವೆ. ಅವುಗಳ ಪ್ರಾಮುಖ್ಯತೆಯನ್ನು ಗಮನಿಸಿದರೆ, ವಿವಿಧ ರೀತಿಯ ಮತ್ತು ವಿನ್ಯಾಸಗಳಲ್ಲಿ ಅಡಿಪಾಯಗಳ ನಿರ್ಮಾಣ ಮಾಡುವುದು ಅಚ್ಚರಿಯ ವಿಚಾರವಲ್ಲ. ಪ್ರತಿಯೊಂದೂ ವಿಭಿನ್ನ ನಿರ್ಮಾಣದ ಯೋಜನೆಗೆ ನಿರ್ದಿಷ್ಟ ಅವಶ್ಯಕತೆಗಳು ಮತ್ತು ಸವಾಲುಗಳನ್ನು ಪೂರೈಸಲು ಅಗತ್ಯಕ್ಕೆ ತಕ್ಕ ಅಡಿಪಾಯ ಅನುಗುಣವಾಗಿರುತ್ತದೆ. ವಿವಿಧ ರೀತಿಯ ಮಣ್ಣಿನಿಂದ ಹಿಡಿದು ಕಟ್ಟಡದ ಭಾರದವರೆಗೆ, ಹಲವಾರು ಅಂಶಗಳು ಫೌಂಡೇಶನ್ ಅಡಿಪಾಯದ ಪ್ರಕಾರಗಳ ಆಯ್ಕೆಯ ಮೇಲೆ ಪ್ರಭಾವ ಬೀರುತ್ತವೆ, ಅದಕ್ಕಾಗಿಯೇ ಅವುಗಳ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ಎಚ್ಚರಿಕೆಯಿಂದ ಪ್ಲ್ಯಾನ್ ಮಾಡಿಕೊಳ್ಳುವುದು ಹಾಗೂ ಸೂಕ್ತ ಪರಿಣತಿಯ ಅವಶ್ಯಕತೆ ಇರುತ್ತದೆ.

 

 



ಪ್ರಮುಖಾಂಶಗಳು

 

  • ಅಡಿಪಾಯಗಳು ನಿರ್ಮಾಣದಲ್ಲಿ ಅಗತ್ಯವಾದ ರಚನಾತ್ಮಕ ಅಂಶಗಳಾಗಿವೆ. ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನೆಲೆಗೊಳ್ಳಲು ಅಥವಾ ಸ್ಟ್ರಕ್ಚರ್​ಗಳು ವಿಫಲವಾಗುವದನ್ನು ತಡೆಯಲು ಕಟ್ಟಡದ ಭಾರವನ್ನು ನೆಲಕ್ಕೆ ಸಮವಾಗಿ ಹಂಚಿಕೆ ಮಾಡುತ್ತವೆ.
 
  • ಸ್ಪ್ರೆಡ್ ಫೂಟಿಂಗ್‌ಗಳು, ಡೀಪ್ ಫೂಟಿಂಗ್‌ಗಳು, ಸ್ಟ್ರಿಪ್ ಫೂಟಿಂಗ್‌ಗಳು, ಸ್ಟೆಪ್ ಫೂಟಿಂಗ್‌ಗಳು, ಇಳಿಜಾರಾದ ಫೂಟಿಂಗ್‌ಗಳು, ಸ್ಟ್ರಾಪ್ ಫೂಟಿಂಗ್‌ಗಳು, ಗ್ರೇಡ್ ಬೀಮ್‌ಗಳು ಮತ್ತು ಫ್ಲೋಟಿಂಗ್ ಫೂಟಿಂಗ್‌ಗಳಂತಹ ನಿರ್ದಿಷ್ಟ ನಿರ್ಮಾಣದ ಅಗತ್ಯಗಳಿಗೆ ತಕ್ಕಂತೆ ವಿವಿಧ ರೀತಿಯ ಅಡಿಪಾಯಗಳು ಅಸ್ತಿತ್ವದಲ್ಲಿವೆ.
 
  • ಯಾವ ಪ್ರಕಾರದ ಅಡಿಪಾಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಅಡಿಯ ಮಣ್ಣಿ ವಿಧ, ಕಟ್ಟಡದ ಭಾರ, ಸ್ಥಳಕ್ಕೆ ಸಂಬಂಧಿಸಿದ ನಿರ್ಬಂಧಗಳು ಮತ್ತು ಪರಿಸರ ಪರಿಸ್ಥಿತಿಗಳಂತಹ ಅಂಶಗಳನ್ನು ಅವಲಂಬಿಸಿರುತ್ತದೆ. 
 
  • ತೂಕದ ಹಂಚಿಕೆಯು, ವಿವಿಧ ಮಣ್ಣುಗಳ ಮೇಲೆ ಸ್ಥಿರತೆ, ನೆಲೆಸುವಿಕೆ ಮತ್ತು ಮುಳುಗುವಿಕೆಯನ್ನು ತಡೆಗಟ್ಟುವುದು, ಪರಿಸರ ಶಕ್ತಿಗಳ ವಿರುದ್ಧ ಲಂಗರು ಹಾಕುವುದು ಮತ್ತು ತೇವಾಂಶದಿಂದ ಎತ್ತರವನ್ನೂ ಒಳಗೊಂಡಂತೆ ನಿರ್ಮಾಣದಲ್ಲಿ ಅಡಿಪಾಯಗಳು ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸುತ್ತವೆ.
 
  • ಸ್ಟ್ರಕ್ಚರ್​ಗಳ ಸ್ಥಿತಿಸ್ಥಾಪಕತ್ವ ಮತ್ತು ಬಾಳಿಕೆಯನ್ನು ಖಾತ್ರಿಪಡಿಸಿಕೊಳ್ಳಲು, ಸುರಕ್ಷಿತ ಮತ್ತು ಬಾಳಿಕೆ ಬರುವ ಮನೆಗಳಿಗೆ ಅಡಿಪಾಯ ಹಾಕಲು ವಿವಿಧ ಅಡಿಪಾಯಗಳ ಪ್ರಕಾರಗಳ ಕಾರ್ಯಗಳು ಮತ್ತು ಅಳವಡಿಕೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

ನಿರ್ಮಾಣದಲ್ಲಿ ಅಡಿಪಾಯ ಎಂದರೇನು?



ಸರಳವಾಗಿ ಹೇಳುವುದಾದರೆ, ಅಡಿಪಾಯಗಳು ಕಟ್ಟಡದ ಕೆಳಭಾಗದ ಭಾಗಗಳಾಗಿವೆ. ಅವು ಭಾರವನ್ನು ಸಮಾನಾಂತರವಾಗಿ ಹರಡುತ್ತವೆ. ಹಾಗೆ ಮಾಡಿದಾಗ ನೆಲವು ಯಾವುದೇ ಸಮಸ್ಯೆಗಳಿಲ್ಲದೆ ಭಾರವನ್ನು ತಡೆದುಕೊಳ್ಳುತ್ತದೆ.  ಭಾರವು ಸೂಕ್ತವಾಗಿ ಮತ್ತು ಸಮವಾಗಿ ಹಂಚಿಕೆಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಕಟ್ಟಡಗಳು ಕುಸಿಯುವುದು, ವಾಲುವುದು ಅಥವಾ ಬಿರುಕು ಬಿಡುವುದನ್ನು ತಡೆಯುವ ನಿರ್ಮಾಣದಲ್ಲಿ ಎದುರಿಗೆ ಕಾಣದ ನಾಯಕರೆಂದು ನೀವು ಅಂದುಕೊಳ್ಳಬಹುದು.  ಬಹಳಷ್ಟು ಸಲ, ಅವುಗಳನ್ನು ಕಾಂಕ್ರೀಟ್‌ನಂತಹ ಕಠಿಣವಾದ ವಸ್ತುಗಳಿಂದ ತಯಾರಿಸಲಾಗುತ್ತದೆ. ಜೊತೆಗೆ ಗೋಡೆಗಳು ಅಥವಾ ಕಾಲಮ್‌ಗಳಂತಹ ಹೆಚ್ಚಿನ ಆಧಾರದ ಅಗತ್ಯವಿರುವ ಕಟ್ಟಡದ ಭಾಗಗಳ ಕೆಳಗೆ ನೆಲದ ಅಡಿಯಲ್ಲಿ ಕಾಣದಂತಿರುತ್ತವೆ.

 

ತೂಕವನ್ನು ಹಂಚಿಕೆ ಮಾಡುವ ಮೂಲಕ, ವಿಭಿನ್ನ ಕಾಂಕ್ರೀಟ್ ಫಂಡೇಶನ್ ಅಡಿಪಾಯದ ಪ್ರಕಾರಗಳು ಸಮವಾಗಿರದ ನೆಲವನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಕಟ್ಟಡದ ಕೆಳಗಿರುವ ನೆಲದ ಒಂದು ಭಾಗವು ಇತರ ಬೇರೆ ಭಾಗಕ್ಕಿಂತ ಹೆಚ್ಚು ಕುಸಿದಾಗ ಅದನ್ನು ನೆಲೆಗೊಳಿಸಬೇಕಾಗುತ್ತದೆ. ಯಾಕೆಂದರೆ ಅದು ಪಾಲಿನ ಭಾರವನ್ನು ಹೊತ್ತುಕೊಳ್ಳುವುದಿಲ್ಲ. ಇದು ಎಲ್ಲಾ ರೀತಿಯ ಸಮಸ್ಯೆಗಳು ಉಂಟಾಗಬಹುದು. ಕಾಂಕ್ರೀಟ್ ಬಿರುಕುಗಳು ಉಂಟಾಗಬಹುದು, ಇನ್ನು ಕೆಲಸವು ಕೆಟ್ಟ ಸಂದರ್ಭಗಳಲ್ಲಿ ಕಟ್ಟಡಗಳು ಬೀಳುತ್ತವೆ. ನಿರ್ಮಾಣದಲ್ಲಿ ಟಡಿಪಾಯಗಳನ್ನು ಅವುಗಳನ್ನು ಹಾಕಿರುವ ನೆಲದ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗುತ್ತದೆ. ಯಾಕೆಂದರೆ ಎಲ್ಲಾ ಮಣ್ಣು ಒಂದೇ ರೀತಿ ಇರುವುದಿಲ್ಲ. ಜೊತೆಗೆ ಕೆಲವು ಪ್ರಕಾರಗಳಿಗೆ ವಸ್ತುಗಳನ್ನು ಹೊತ್ತುಕೊಳ್ಳಲು ಸ್ವಲ್ಪ ಹೆಚ್ಚುವರಿ ಕೆಲಸ ಬೇಕಾಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಅಡಿಪಾಯಗಳು ಕಟ್ಟಡಗಳು ದೃಢವಾಗಿ ಹಾಗೂ ಸ್ಥಿರವಾಗಿ ನಿಲ್ಲುವಂತೆ ಮಾಡುತ್ತವೆ.


ಅಡಿಪಾಯದ ಪ್ರಕಾರಗಳು

ನಿರ್ಮಾಣ ಯೋಜನೆಗಳ ಸ್ಥಿತಿಸ್ಥಾಪಕತ್ವ ಮತ್ತು ದೃಢತೆಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಭೂವೈಜ್ಞಾನಿಕ, ಸ್ಟ್ರಕ್ಚರಲ್ ಹಾಗೂ ಪ್ರಾದೇಶಿಕ ಸವಾಲುಗಳನ್ನು ಪರಿಹರಿಸುವ ಪ್ರತಿಯೊಂದು ಫೌಂಡೇಶನ್ ಅಡಿಪಾಯದ ಪ್ರಕಾರವು ನಿರ್ದಿಷ್ಟ ಅಗತ್ಯವನ್ನು ಪೂರೈಸುತ್ತದೆ.

 

 

1) ಸ್ಪ್ರೆಡ್ ಫೂಟಿಂಗ್ಸ್​ ಅಥವಾ ಅಗಲವಾದ ಅಡಿಪಾಗಳು:

ನಿರ್ಮಾಣದಲ್ಲಿ ಸಾಮಾನ್ಯ ರೀತಿಯ ಅಡಿಪಾಯಗಳಲ್ಲಿ ಅಗಲವಾದ ಅಡಿಪಾಯಗಳು ಪ್ರತ್ಯೇಕ ಕಾಲಮ್‌ಗಳು ಅಥವಾ ಕಂಬಗಳಿಗೆ ದೃಢತೆಯನ್ನು ಒದಗಿಸುತ್ತವೆ.  ಅವು ಮಣ್ಣಿನ ಅಗಲವಾದ ಪ್ರದೇಶದ ಮೇಲೆ ಸ್ಟ್ರಕ್ಚರ್​ನ ಭಾರವನ್ನು ಹಂಚುತ್ತವೆ. ನೆಲೆಗೊಳ್ಳುವುದರಿಂದ ಉಂಟಾಗಬಹುದಾದ ಅಪಾಯವನ್ನು ಕಡಿಮೆ ಮಾಡುತ್ತವೆ.

 

ಎ) ಪ್ರತ್ಯೇಕವಾದ ಅಡಿಪಾಯಗಳು



ಇವುಗಳನ್ನು ಪ್ರಾಥಮಿಕವಾಗಿ ಪ್ರತ್ಯೇಕ ಕಾಲಮ್‌ಗಳು ಅಥವಾ ಕಂಬಗಳಿಗಾಗಿ ಬಳಸಲಾಗುತ್ತದೆ.  ಅವು ಒಂದೇ ಅಡಿಪಾಯಗಳಾಗಿ ಕಾರ್ಯನಿರ್ವಹಿಸುತ್ತವೆ, ಅದು ನಿರ್ದಿಷ್ಟವಾಗಿ ಪ್ರತಿ ಕಾಲಮ್‌ನ ಹೊರೆಯನ್ನು ನೆಲಕ್ಕೆ ಹಂಚಿಕೆ ಮಾಡುತ್ತದೆ ಹಾಗೂ ವಿತರಿಸುತ್ತದೆ. ಕಾಲಮ್‌ಗಳು ಅಂತರದಲ್ಲಿರುವ ನಿದರ್ಶನಗಳಿಗೆ ಸೂಕ್ತವಾಗಿದೆ.

 

ಬಿ) ಕಂಬೈನ್ಡ್ ಫೂಟಿಂಗ್ಸ್ ಅಥವಾ ಸಂಯೋಜಿಸಲಾದ ಅಡಿಪಾಯ

ಒತ್ತೊತ್ತಾಗಿರುವ ಕಾಲಮ್‌ಗಳು ಅಥವಾ ಜಾಗೆಯ ಗಡಿಗಳಿಂದಾಗಿ ಸ್ಥಳದ ನಿರ್ಬಂಧ ಇದ್ದಾಗ, ಇಂತಹ ಸಂಯೋಜಿತ ಅಡಿಪಾಯವನ್ನು ಬಳಸಿಕೊಳ್ಳಲಾಗುತ್ತದೆ. ಈ ಫೌಂಡೇಶನ್​ನ ಅಡಿಪಾಯದ ಪ್ರಕಾರಗಳು ಬಹು ಕಾಲಮ್‌ಗಳನ್ನು ಬೆಂಬಲಿಸುತ್ತವೆ, ಅವುಗಳ ಸಾಮೂಹಿಕ ಹೊರೆಗಳನ್ನು ಪರಿಣಾಮಕಾರಿಯಾಗಿ ಹಂಚಿಕೆ ಮಾಡುತ್ತವೆ.

 

ಸಿ) ಮ್ಯಾಟ್ ಫೌಂಡೇಶನ್ಸ್ (ರಾಫ್ಟ್ ಫೂಟಿಂಗ್ಸ್)

 



ಭಾರೀ ಹೊರೆಗಳನ್ನು ಹೊಂದಿರುವ ದೊಡ್ಡ ರಚನೆಗಳಿಗೆ ಇವು ಅತ್ಯಂತ ಸೂಕ್ತವಾಗಿವೆ. ಮ್ಯಾಟ್ ಅಡಿಪಾಯಗಳು ಆಧಾರವಾಗಿರುವ ಮಣ್ಣಿನ ಯಾವುದೇ ಒಂದು ಪಾಯಿಂಟ್​ ಮೇಲೆ ಅತಿಯಾದ ಒತ್ತಡವನ್ನು ತಡೆಗಟ್ಟಲು ಸ್ಟ್ರಕ್ಚರ್​ನ ಸಂಪೂರ್ಣ ಭಾರವನ್ನು ಸಮವಾಗಿ ಹಂಚಿಕೆ ಮಾಡುವ ಮೂಲಕ ಅಗಲವಾದ ಆಧಾರವನ್ನು ಕೊಡುತ್ತವೆ.

 

 

2) ಡೀಪ್ ಫೂಟಿಂಗ್ಸ್ ಅಥವಾ ಆಳವಾದ ಅಡಿಪಾಯ

ಮೇಲ್ಮೈ ಬಳಿಯಿರುವ ಮಣ್ಣಿನಲ್ಲಿ ರಚನೆಗೆ ಆಧಾರ ಕೊಡುವ ಅಗತ್ಯವಾದ ಶಕ್ತಿ ಇಲ್ಲದಿದ್ದಾಗ, ಆಳವಾದ ಅಡಿಪಾಯಗಳು ಅಗತ್ಯವಾಗಿ ಸಹಾಯಕ್ಕೆ ಬರುತ್ತವೆ.  ಇದೊಂದು ಫೌಂಡೇಶನ್​ ಅಡಿಪಾಯದ ಪ್ರಕಾರವಾಗಿದ್ದು, ಅದು ನೆಲದಲ್ಲಿ ಆಳವಾಗಿ ಸೇರಿಕೊಳ್ಳುತ್ತದೆ. ಹೆಚ್ಚು ಸ್ಥಿರವಾದ ಮಣ್ಣು ಅಥವಾ ಕಲ್ಲಿನ ಪದರಗಳನ್ನು ತಲುಪಿ ನೆಲೆಯನ್ನು ಕೊಡುತ್ತದೆ.

 

ಎ) ಪೈಲ್ ಫೌಂಡೇಶನ್ಸ್



ಇವು ಉದ್ದವಾದ, ತೆಳ್ಳಗಿನ ಕಾಲಮ್‌ಗಳನ್ನು ನೆಲದೊಳಗೆ ಭೂಮಿಯನ್ನು ಆಳವಾಗಿ ತೋಡಿ ಅಥವಾ ತಿರುಗಿಸಿ ಹಾಕಲಾಗುತ್ತದೆ. ಪೈಲ್ ಅಡಿಪಾಯಗಳು ದುರ್ಬಲ ಮೇಲ್ಮೈ ಪದರಗಳನ್ನು ಬೈಪಾಸ್ ಮಾಡುವ ಮೂಲಕ ಆಳವಾದ, ಹೆಚ್ಚು ಸ್ಥಿರವಾದ ಮಣ್ಣು ಅಥವಾ ಕಲ್ಲಿನ ಪದರಗಳಿಗೆ ಕಟ್ಟಡದ ಹೊರೆಯನ್ನು ವರ್ಗಾಯಿಸಲು ಬಳಸಲಾಗುತ್ತದೆ.

 

ಬಿ) ಡ್ರಿಲ್ಡ್ ಪಿಯರ್ಸ್ (ಕೈಸನ್ ಫೌಂಡೇಶನ್ಸ್)

 



ನೆಲದಲ್ಲಿ ಆಳವಾಗಿ ಕೊರೆಯುವ ಮೂಲಕ ಮತ್ತು ಕಾಂಕ್ರೀಟ್ ಅಥವಾ ಇತರ ಬಲಪಡಿಸುವ ವಸ್ತುಗಳೊಂದಿಗೆ ಖಾಲಿಯನ್ನು ತುಂಬುವ ಮೂಲಕ ಇವುಗಳನ್ನು ಮಾಡಲಾಗುತ್ತದೆ. ಮೇಲ್ಮೈ ಮಣ್ಣು ಒದಗಿಸಲಾಗದ ಆಳವಾದ, ಸ್ಥಿರವಾದ ಆಧಾರದ ಅಗತ್ಯವಿರುವ ಸ್ಟ್ರಕ್ಚರ್​ಗಳಿಗೆ ಈ ಅಡಿಪಾಯಗಳು ಅತ್ಯಂತ ಸೂಕ್ತವಾಗಿವೆ.

 

 

3) ಸ್ಟ್ರಿಪ್ ಫೂಟಿಂಗ್ಸ್ (ನಿರಂತರ ಅಡಿಪಾಯಗಳು)



ಕಾಂಕ್ರೀಟ್‌ನ್ನು ಸುರಿಯುವ ಮೂಲಕ ಲೋಡ್ ಬೇರಿಂಗ್ ಗೋಡೆಗಳ ಉದ್ದಕ್ಕೂ ಅಥವಾ ಕಾಲಮ್‌ಗಳ ಜೋಡಣೆಗಳ ಉದ್ದಕ್ಕೂ ಹಾಕಲಾಗುತ್ತದೆ. ಇದು ಅಡಿಪಾಯಕ್ಕೆ ಆಧಾರವನ್ನು ಕೊಡುತ್ತದೆ. ಸ್ಟ್ರಿಪ್ ಫೂಟಿಂಗ್‌ಗಳು ಭಾರದ ವಿತರಣೆಯನ್ನು ಸ್ಟ್ರಕ್ಚರ್​ ಪರಿಧಿಯ ಉದ್ದಕ್ಕೂ ಸಮವಾಗಿ ಹಂಚಿಕೆ ಮಾಡುತ್ತದೆ. 

 

 

4) ಸ್ಟೆಪ್ಡ್ ಫೂಟಿಂಗ್ಸ್

ಇಳಿಜಾರಿನ ಭೂಪ್ರದೇಶದಲ್ಲಿ ನಿರ್ಮಾಣದಲ್ಲಿ ಅಳವಡಿಸಲಾಗುತ್ತದೆ. ಮೆಟ್ಟಿಲುಗಳ ಅಡಿಪಾಯದ ಮಟ್ಟವನ್ನು ಇಳಿಜಾರಿಗೆ ಹೊಂದಿಕೊಳ್ಳುತ್ತವೆ.  ನಿರ್ಮಾಣದಲ್ಲಿ ಈ ರೀತಿಯ ಅಡಿಪಾಯವು ಸ್ಟ್ರಕ್ಚರಲ್ ಸಮಗ್ರತೆಯನ್ನು ನಿರ್ವಹಿಸುತ್ತದೆ. ಜೊತೆಗೆ ವಿವಿಧ ಎತ್ತರಗಳಲ್ಲಿ ಭಾರದ ಹಂಚಿಕೆಯನ್ನೂ ಕೂಡ ನಿರ್ವಹಿಸುತ್ತದೆ.



5) ಇಳಿಜಾರಾದ ಅಡಿಪಾಯಗಳು

ಭೂಪ್ರದೇಶದ ನೈಸರ್ಗಿಕ ಇಳಿಜಾರಿನೊಂದಿಗೆ ಜೋಡಿಸಲು ಅಥವಾ ಹೊಂದಿಸಲು ನಿರ್ದಿಷ್ಟವಾಗಿ ಇಂತಹ ಅಡಿಪಾಯಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಇಳಿಜಾರಿನ ಫೌಂಡೇಶನ್ ಅಡಿಪಾಯದ ಪ್ರಕಾರವಾಗಿದ್ದು, ನೆಲದ ಪರಿಸ್ಥಿತಿಗಳಿಗೆ ಹೊಂದಿಕೆಯಾಗುವಂತೆ ಅಡಿಯ ಅಂಚನ್ನು ಹೊಂದಿಸುವ ಮೂಲಕ ಸ್ಥಿರತೆಯನ್ನು ಹೆಚ್ಚಿಸುವ ಮೂಲಕ ಭಾರದ ವರ್ಗಾವಣೆಯನ್ನು ಉತ್ತಮಗೊಳಿಸುತ್ತದೆ.

 

 

6) ಸ್ಟ್ರಾಪ್ ಫೂಟಿಂಗ್ಸ್ (ಕ್ಯಾಂಟಿಲಿವರ್ ಫೂಟಿಂಗ್ಸ್)

ಎರಡು ಪ್ರತ್ಯೇಕ ಫೂಟಿಂಗ್‌ಗಳನ್ನು ಲಿಂಕ್ ಮಾಡಲು ಬಳಸಲಾಗುತ್ತದೆ. ಸ್ಟ್ರಾಪ್ ಫೂಟಿಂಗ್‌ಗಳು ಬಲವರ್ಧನೆಯ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಅವು ಸಂಪರ್ಕಿತ ಅಡಿಪಾಯಗಳ ಮಧ್ಯೆ ಇರುವ ಸ್ಟ್ರಕ್ಚರಲ್ ಅಂಶಗಳನ್ನು ಸ್ಥಿರಗೊಳಿಸುತ್ತವೆ ಮತ್ತು ಆಧಾರ ಕೊಡುತ್ತವೆ.

 

 

7) ಗ್ರೇಡ್ ಬೀಮ್ಸ್



ಬಲವರ್ಧಿತ ಕಾಂಕ್ರೀಟ್ ಬೀಮ್​ಗಳು ನೆಲದ ಮಟ್ಟದಲ್ಲಿ ಅಥವಾ ಕೆಳಗಿರುವ ಗೋಡೆಗಳು ಅಥವಾ ಇತರ ರಚನಾತ್ಮಕ ಅಂಶಗಳಿಗೆ ಬಲವಾದ ಸಮತಲ ಆಧಾರವನ್ನು ಒದಗಿಸುತ್ತವೆ. ಗ್ರೇಡ್ ಬೀಮ್​ಗಳು ನಿರ್ಮಾಣದಲ್ಲಿ ಒಂದು ವಿಧದ ಅಡಿಪಾಯವಾಗಿದ್ದು, ಅದು ನೇರವಾಗಿ ಮಣ್ಣಿಗೆ ವರ್ಗಾವಣೆಯಾಗುವ ಭಾರವನ್ನು ಸಂಘಟಿಸುತ್ತದೆ ಮತ್ತು ಕಡಿಮೆ ಮಾಡುತ್ತದೆ.

 

 

8) ಫ್ಲೋಟಿಂಗ್ ಅಡಿಪಾಯ



ಫ್ರಾಸ್ಟ್ ಹೀವ್‌ನಿಂದ ಸಂಭಾವ್ಯ ಹಾನಿಯನ್ನು ಎದುರಿಸಲು ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ, ಇವುಗಳು ಫೌಂಡೇಶನ್ ಫೂಟಿಂಗ್ ಪ್ರಕಾರವಾಗಿದ್ದು ಅದು ಫ್ರಾಸ್ಟ್ ಲೈನ್‌ನ ಕೆಳಗೆ ವಿಸ್ತರಿಸುತ್ತದೆ ಅಥವಾ ಘನೀಕರಿಸುವ ನೆಲದ ತಾಪಮಾನದಿಂದ ಸ್ಟ್ರಕ್ಚರ್​ ಅನ್ನು ರಕ್ಷಿಸಲು ನಿರೋಧನವನ್ನು ಸಂಯೋಜಿಸುತ್ತದೆ.


ನಿರ್ಮಾಣದಲ್ಲಿ ಅಡಿಪಾಯಗಳ ಉಪಯೋಗಗಳು

ನಿರ್ಮಾಣ ಯೋಜನೆಗಳಿಗೆ ಅಡಿಪಾಯವು ಮೂಲಭೂತವಾಗಿದೆ. ಜೊತೆಗೆ ವಿವಿಧ ಅಡಿಪಾಯದ ತಳಹದಿಯ ಪ್ರಕಾರಗಳು ಕಟ್ಟಡಗಳ ಸ್ಟ್ರಕ್ಚರಲ್ ಸಮಗ್ರತೆ ಮತ್ತು ಬಾಳಿಕೆಯನ್ನು ಖಾತ್ರಿಪಡಿಸುವ ಹಲವಾರು ನಿರ್ಣಾಯಕ ಕಾರ್ಯಗಳನ್ನು ಮಾಡುತ್ತವೆ. ಅವುಗಳ ಬಳಕೆಯು ರಚನೆಯ ಪ್ರಕಾರ, ಪರಿಸರ ಪರಿಸ್ಥಿತಿಗಳು ಮತ್ತು ಮಣ್ಣಿನ ಗುಣಲಕ್ಷಣಗಳನ್ನು ಅವಲಂಬಿಸಿ ಬದಲಾಗುತ್ತದೆ. ನಿರ್ಮಾಣದಲ್ಲಿ ಅಡಿಭಾಗಗಳು ವಹಿಸುವ ಪ್ರಮುಖ ಪಾತ್ರಗಳನ್ನು ಕೆಳಗೆ ನೀಡಲಾಗಿದೆ:

 

1) ಭಾರದ ಹಂಚಿಕೆ

ವಿಭಿನ್ನ ಅಡಿಪಾಯದ ತಳಹದಿಯ ಪ್ರಕಾರಗಳ ಪ್ರಾಥಮಿಕ ಕಾರ್ಯವು ಮೇಲಿನ ಸ್ಟ್ರಕ್ಚರ್​ನ ಹೊರೆಯನ್ನು ಕೆಳಗಿನ ನೆಲದಲ್ಲಿ ಸಮವಾಗಿ ಹಂಚಿಕೆ ಮಾಡುವುದು. ಕಟ್ಟಡವು ಮಣ್ಣಿನ ಯಾವುದೇ ಒಂದು ಪಾಯಿಂಟ್​ನ ಮೇಲೆ ಹೆಚ್ಚಿನ ಒತ್ತಡ ಬೀಳುವುದಿಲ್ಲ ಎಂಬುದನ್ನು ಅಡಿಪಾಯವು ಖಚಿತಪಡಿಸುತ್ತದೆ. ಒಂದೇ ಕಡೆ ಭಾರ ಬೀಳುವಂತೆ ಮಾಡುವುದರಿಂದ ಅಸಮ ನೆಲೆಗೊಳ್ಳುವಿಕೆ ಅಥವಾ ಅಡಿಪಾಯದ ವೈಫಲ್ಯಕ್ಕೆ ಕಾರಣವಾಗಬಹುದು.

 

2) ವಿವಿಧ ಮಣ್ಣುಗಳ ಮೇಲೆ ಸ್ಥಿರತೆ

ವಿವಿಧ ಮಣ್ಣಿನ ವಿಧಗಳು ತೂಕವನ್ನು ಹೊಂದುವ ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿವೆ. ಈ ಪರಿಸ್ಥಿತಿಗಳಿಗೆ ಸ್ಟ್ರಕ್ಚರ್​ಗಳನ್ನು ಹೊಂದಿಸಲು ಅಡಿಪಾಯಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ. ಇದು ಆಳವಾದ ತಳಹದಿಗಳೊಂದಿಗೆ ಹೆಚ್ಚು ಸ್ಥಿರವಾದ ಮಣ್ಣಿನ ಪದರಗಳನ್ನು ತಲುಪುವುದನ್ನು ಒಳಗೊಂಡಿರುತ್ತದೆ. ಅಥವಾ ಅಗಲವಾದ, ಆಳವಿಲ್ಲದ ಅಡಿಪಾಯಗಳೊಂದಿಗೆ ಕಡಿಮೆ ಸ್ಥಿರವಾದ ಮಣ್ಣಿನಲ್ಲಿ ಹೊರೆಯನ್ನು ಹರಡುತ್ತದೆ.

 

3) ನೆಲೆನಿಲ್ಲುವಂತೆ ಮಾಡುವುದು ಮತ್ತು ಕುಸಿಯುವುದನ್ನು ತಡೆಯುವುದು

ಸ್ಟ್ರಕ್ಚರ್​ನ ಹೊರೆಯನ್ನು ಸಮವಾಗಿ ಹಂಚುವ ಮೂಲಕ, ಸ್ಟ್ರಕ್ಚರ್​ ಅಡಿಪಾಯಗಳು ಕಟ್ಟಡಗಳು ನೆಲೆ ನಿಲ್ಲುವಂತೆ ಮಾಡುತ್ತವೆ, ಜೊತೆಗೆ ಕುಸಿಯದಂತೆ ತಡೆಯುತ್ತದೆ. ಮೆತ್ತನೆಯ ಅಥವಾ ಅಸ್ಥಿರವಾದ ಮಣ್ಣನ್ನು ಹೊಂದಿರುವ ಪ್ರದೇಶಗಳಲ್ಲಿ ಇದು ವಿಶೇಷವಾಗಿ ಅಗತ್ಯವಾಗಿದೆ. ಅಲ್ಲಿ ಸರಿಯಾದ ಅಡಿಪಾಯವಿಲ್ಲದೆ, ಕಟ್ಟಡಗಳು ವಾಲಬಹುದು, ಬಿರುಕು ಬಿಡಬಹುದು ಅಥವಾ ಕುಸಿಯಬಹುದು.

 

4) ಪರಿಸರ ಶಕ್ತಿಗಳ ವಿರುದ್ಧ ಆಂಕರ್ರಿಂಗ್ ರಚನೆಗಳು

ಕಟ್ಟಡದ ಅಡಿಪಾಯಗಳು ಕೇವಲ ಹೊರೆಯನ್ನು ಮಾತ್ರ ಹೊರುವುದಿಲ್ಲ, ಜೊತೆಗೆ ಆದರೆ ಗಾಳಿ, ಭೂಕಂಪಗಳು ಮತ್ತು ಪ್ರವಾಹಗಳಂತಹ ನೈಸರಗಿಕ ವಿಕೋಪಗಳಂತಹ ಶಕ್ತಿಗಳ ವಿರುದ್ಧ ಸ್ಟ್ರಕ್ಚರ್​ಗೆ ಆಧಾರವನ್ನು ಕೊಡುತ್ತವೆ.  ಸರಿಯಾಗಿ ವಿನ್ಯಾಸಗೊಳಿಸಲಾದ ಫೌಂಡೇಶನ್ ಅಡಿಪಾಯವು ಕಟ್ಟಡಗಳು ಈ ಶಕ್ತಿಗಳನ್ನು ಬದಲಾಯಿಸದೆ ಅಥವಾ ಉರುಳಿಸದೆ ತಡೆದುಕೊಳ್ಳುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

 

5) ಮೇಲಿನ ತೇವಾಂಶ

ಕಟ್ಟಡದ ಅಡಿಪಾಯಗಳು ಕಟ್ಟಡಗಳ ಫೌಂಡೇಶನ್ ಮಟ್ಟವನ್ನು ಹೆಚ್ಚಿಸಬಹುದು. ಅಂತರ್ಜಲ ಅಥವಾ ಮಳೆಯಿಂದ ತೇವಾಂಶದ ವ್ಯಾಪ್ತಿಯ ಮೇಲೆ ನಿರ್ಣಾಯಕ ಸ್ಟ್ರಕ್ಚರಲ್ ಅಂಶಗಳನ್ನು ಇರಿಸಬಹುದು. ನೀರಿನ ಹಾನಿ ಮತ್ತು ಅಚ್ಚು ಅಥವಾ ರಚನಾತ್ಮಕ ದುರ್ಬಲಗೊಳ್ಳುವಿಕೆಯ ಸಂಬಂಧಿತ ಅಪಾಯವನ್ನು ತಡೆಗಟ್ಟುವಲ್ಲಿ ಇದು ವಿಶೇಷವಾಗಿ ಮೌಲ್ಯಯುತವಾಗಿದೆ.

 

6) ಮತ್ತಷ್ಟು ಸ್ಟ್ರಕ್ಚರಲ್ ಅಂಶಗಳಿಗೆ ಅಡಿಪಾಯ

ಅಡಿಪಾಯದ ಗೋಡೆಗಳು, ಕಾಲಮ್‌ಗಳು ಅಥವಾ ಚಪ್ಪಡಿಗಳಂತಹ ಮತ್ತಷ್ಟು ಸ್ಟ್ರಕ್ಚರಲ್ ಅಂಶಗಳ ನಿರ್ಮಾಣಕ್ಕಾಗಿ ಅಡಿಪಾಯಗಳು ಘನ, ಮಟ್ಟದ ನೆಲೆಯನ್ನು ಒದಗಿಸುತ್ತವೆ. ಈ ಅಂಶಗಳನ್ನು ಸುರಕ್ಷಿತವಾಗಿ ಹಾಕಲಾಗಿದೆ ಅಥವಾ ಜೋಡಿಸಲಾಗಿದೆ ಎಂಬುದನ್ನು ಅವು ಖಚಿತಪಡಿಸುತ್ತವೆ. ಇದು ಒಟ್ಟಾರೆ ಸ್ಟ್ರಕ್ಚರಲ್ ಸಮಗ್ರತೆಗೆ ಅಗತ್ಯವಾಗಿದೆ.

 

7) ಇಳಿಜಾರಾದ ಭೂಪ್ರದೇಶಗಳಿಗೆ ಹೊಂದಿಕೊಳ್ಳುವುದು

ಬೆಟ್ಟದ ಅಥವಾ ಇಳಿಜಾರಿನ ಪ್ರದೇಶಗಳಲ್ಲಿ, ನಿರ್ದಿಷ್ಟ ಫೌಂಡೇಶನ್ ಅಡಿಪಾಯದ ವಿಧಗಳು, ಉದಾಹರಣೆಗೆ ಮೆಟ್ಟಿಲು ಅಥವಾ ಇಳಿಜಾರಾದ ಅಡಿಪಾಯಗಳು, ಕಟ್ಟಡಗಳಿಗೆ ಮಟ್ಟದ ವೇದಿಕೆಗಳನ್ನು ರಚಿಸಲು ಸಹಾಯ ಮಾಡುತ್ತದೆ.  ಅವರು ಇಳಿಜಾರಿನ ಅಂಚನ್ನು ಸರಿದೂಗಿಸುವ ಮೂಲಕ ಇಳಿಜಾರುಗಳ ಮೇಲೆ ಸುರಕ್ಷಿತ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತವೆ. ಕಾಲಕಳೆದಂತೆ ಸ್ಟ್ರಕ್ಚರ್​ ಸ್ಥಿರ ಮತ್ತು ಒಂದೇ ರೀತಿಯಾಗಿ ಉಳಿಯುತ್ತದೆ ಎಂಬುದನ್ನು ಖಚಿತಪಡಿಸುತ್ತವೆ.

 

8) ಕಟ್ಟಡ ಸಂಕೇತಗಳು ಮತ್ತು ಮಾನದಂಡಗಳ ಅನುಸರಣೆ

ಕಟ್ಟಡ ನಿರ್ಮಾಣದಲ್ಲಿ ತಳಹದಿಗಳನ್ನು ಸ್ಥಳೀಯ ಕಟ್ಟಡ ಸಂಕೇತಗಳು ಮತ್ತು ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಬೇಕು. ಇದು ಸುರಕ್ಷತೆ, ಸ್ಥಿರತೆ ಮತ್ತು ಬಾಳಿಕೆಗೆ ಕನಿಷ್ಠ ಅವಶ್ಯಕತೆಗಳನ್ನು ಸೂಚಿಸುತ್ತದೆ.  ನಿರೀಕ್ಷಿತ ಹೊರೆಗಳು ಮತ್ತು ಪರಿಸರ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ಸ್ಟ್ರಕ್ಚರ್​ಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಇದು ಖಚಿತಪಡಿಸುತ್ತದೆ. ನಿವಾಸಿಗಳು ಮತ್ತು ಸಾರ್ವಜನಿಕರ ರಕ್ಷಣೆಯನ್ನು ಮಾಡುತ್ತದೆ.



 

ನಿರ್ಣಾಯಕ ಕಾರ್ಯಗಳು ಮತ್ತು ವಿಭಿನ್ನ ಅಡಿಪಾಯದ ಅಡಿಪಾಯದ ಪ್ರಕಾರಗಳು ಮತ್ತು ಅಳವಡಿಕೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಯಾಕೆಂದರೆ ಈ ಅಂಶಗಳು ಸ್ಥಿತಿಸ್ಥಾಪಕ ಮತ್ತು ಬಾಳಿಕೆ ಬರುವ ಸ್ಟ್ರಕ್ಚರ್​ ಅನ್ನು ರಚಿಸುವಲ್ಲಿ ಮೊದಲ ಹಂತವಾಗಿದೆ. ನಿರ್ಮಾಣದಲ್ಲಿ ಅಡಿಪಾಯಗಳು ಚಿಂತನಶೀಲ ವಿನ್ಯಾಸ ಮತ್ತು ಅನುಷ್ಠಾನವು ಸುರಕ್ಷತೆ ಮತ್ತು ಬಾಳಿಕೆ ನೀಡುವ ಮನೆಗಳಿಗೆ ಅಡಿಪಾಯವನ್ನು ಹಾಕುತ್ತವೆ. ಅವು ಸಮಯ ಮತ್ತು ಪ್ರಕೃತಿಯ ಪರೀಕ್ಷೆಗಳ ವಿರುದ್ಧ ದೃಢವಾಗಿ ನಿಲ್ಲುತ್ತವೆ ಎಂಬುದನ್ನು ಅಡಿಪಾಯಗಳು ಖಚಿತೊಡಿಸುತ್ತವೆ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....