Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ನಿರ್ಮಾಣದ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಎಲ್ಲ ಹಂತಗಳಿಗೆ ಒಟ್ಟಾರೆಯಾಗಿ ತಗಲುವ ವೆಚ್ಚದ ಮೊತ್ತವನ್ನು ಅರಿತುಕೊಳ್ಳುವುದರಿಂದ ನಿಖರವಾದ ಬಜೆಟ್ ಅನ್ನು ತಯಾರಿಸಿಕೊಳ್ಳಬೇಕು. ಈ ಪ್ರಕ್ರಿಯೆಯು ಮನೆ ಕಟ್ಟಲು ಸೈಟ್ ಅನ್ನು ಸಿದ್ಧಗೊಳಿಸುವುದು, ಫೌಂಡೇಶನ್ ಹಾಕುವುದು, ರಚನೆ, ಪ್ಲಂಬಿಂಗ್ ಮತ್ತು ವಿದ್ಯುತ್ ಕೆಲಸ, ಇಂಟಿರಿಯರ್ ಕೆಲಸ ಮತ್ತು ಭೂದೃಶ್ಯವನ್ನು ಮಾಡಿಕೊಳ್ಳುವುದನ್ನು ವಿಶೇಷವಾಗಿ ಒಳಗೊಂಡಿರುತ್ತದೆ. ಪ್ರತಿಯೊಂದು ಹಂತವು ಒಟ್ಟು ವೆಚ್ಚದಲ್ಲಿ ಖಚಿತವಾದ ಶೇಕಡಾವಾರು ಮೊತ್ತವನ್ನು ಹೊಂದಿರುತ್ತದೆ. ಉದಾಹರಣೆಗೆ, ಸೈಟ್ ಸಿದ್ಧಪಡಿಕೆಯು ಬಜೆಟ್‌ನ ಸುಮಾರು ಶೇ. 5ರಷ್ಟನ್ನು ಒಳಗೊಂಡಿರಬಹುದು, ಆದರೆ ಇಂಟೀರಿಯರ್ ಕೆಲಸ ಮುಗಿಸವುದಕ್ಕೆ ಶೇ. 25ರಷ್ಟು ಅಥವಾ ಅದಕ್ಕಿಂತ ಹೆಚ್ಚು ಹಣ ಖರ್ಚಾಗುತ್ತದೆ. ಈ ಶೇಕಡಾವಾರು ಪ್ರಮಾಣವನ್ನು ಅರ್ಥಮಾಡಿಕೊಳ್ಳುವ ಮೂಲಕ ನೀವು ನಿರ್ಮಾಣದ ವಿವಿಧ ಹಂತಗಳು ಪ್ರಗತಿಯಲ್ಲಿರುವಾಗ ಮನೆಯನ್ನು ಪರಿಣಾಮಕಾರಿಯಾಗಿ ನಿರ್ಮಿಸಲು ನಿಮ್ಮ ಬಜೆಟ್ ಅನ್ನು ನಿಯೋಜಿಸಲು ಸಹಾಯ ಮಾಡುತ್ತದೆ.
ಉತ್ತಮ ಯೋಜಿತ ನಿರ್ಮಾಣ ಬಜೆಟ್ ಬರೀ ಸಂಖ್ಯೆ ಮಾತ್ರವಲ್ಲ; ಇದು ನಿಮ್ಮ ಯೋಜನೆಯ ಯಶಸ್ಸಿಗೆ ಮಾರ್ಗಸೂಚಿಯಾಗಿದೆ. ನಿರ್ಮಾಣ ಬಜೆಟ್ ಏಕೆ ಅತ್ಯಗತ್ಯ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ:
ಬಜೆಟ್ ಅನ್ನು ನಿರ್ಧಾರ ಮಾಡಿಕೊಳ್ಳುವುದರಿಂದ ನಿಮ್ಮ ಖರ್ಚುಗಳನ್ನು ಯೋಜಿಸಲು ಮತ್ತು ಅದಕ್ಕೆ ಅನುಗುಣವಾಗಿ ಹಣವನ್ನು ನಿಯೋಜಿಸಲು ನಿಮಗೆ ಸಹಾಯ ಮಾಡುತ್ತದೆ. ಇದು ನೀವು ವಾಸ್ತವ ಗುರಿಗಳನ್ನು ಇಟ್ಟುಕೊಳ್ಳುವುದರೊಂದಿಗೆ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಮತ್ತು ನಿಮ್ಮಲ್ಲಿರುವ ಹಣದಲ್ಲಿಯೇ ವೆಚ್ಚ ಸರಿದೂಗಿಸಲು ಸಹಾಯ ಮಾಡುತ್ತದೆ.
ಬಜೆಟ್ ಜೊತೆಗೆ, ನಿಮ್ಮ ಅವಶ್ಯಕತೆ ಮತ್ತು ಅಗತ್ಯತೆಗಳಿಗೆ ನೀವು ಮೊದಲೇ ಆದ್ಯತೆ ನೀಡಬಹುದು. ಯಾವುದೇ ಐಚ್ಛಿಕ ವೈಶಿಷ್ಟ್ಯಗಳು ಅಥವಾ ಅಪ್‌ಗ್ರೇಡ್‌ಗಳನ್ನು ಪರಿಗಣಿಸುವಾಗ ನಿಮ್ಮ ಪ್ರಾಜೆಕ್ಟ್‌ನ ಅಗತ್ಯ ಅಂಶಗಳಿಗೆ ಹಣವನ್ನು ಕಾಯ್ದಿರಿಸುವುವುದಕ್ಕೆ ಬಜೆಟ್‌ನಿಂದ ಸಾಧ್ಯವಾಗುತ್ತದೆ.
ನಿಮ್ಮ ಬಜೆಟ್ ಅನ್ನು ಕೂಲಂಕುಷವಾಗಿ ಮೇಲ್ವಿಚಾರಣೆ ಮಾಡುವ ಮೂಲಕ, ನೀವು ಅನಗತ್ಯ ವೆಚ್ಚಗಳನ್ನು ತಡೆಯಬಹುದು, ವೆಚ್ಚವನ್ನು ಕಡಿಮೆ ಮಾಡುವ ಅವಕಾಶಗಳನ್ನು ಗುರುತಿಸಬಹುದು ಮತ್ತು ನಿರ್ಮಾಣ ಪ್ರಕ್ರಿಯೆಯ ಉದ್ದಕ್ಕೂ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಉತ್ತಮವಾಗಿ ನಿರ್ವಹಿಸಲಾಗುವ ಬಜೆಟ್ ನಿಮಗೆ ಹಣಕಾಸಿನ ತೊಂದರೆಗಳು ಹಾಗೂ ಅನಿರೀಕ್ಷಿತ ವೆಚ್ಚಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನಿರ್ಮಾಣ ಸಮಯದಲ್ಲಿ ಎದುರಾಗಬಹುದಾದ ಯಾವುದೇ ಅನಿರೀಕ್ಷಿತ ವೆಚ್ಚಗಳನ್ನು ಸರಿದೂಗಿಸಲು ಪೂರ್ವ ಸಿದ್ಧತೆ ಮಾಡಿಕೊಳ್ಳಲು ಲೆಕ್ಕವನ್ನಿಡಲು ಸಹಾಯ ಮಾಡುತ್ತದೆ.
ಒಂದು ಮನೆ ಕಟ್ಟಲು ಬೇಕಾಗುವ ನಿರೀಕ್ಷಿತ ವೆಚ್ಚಗಳನ್ನು ಹಾಗೂ ಹಣಕಾಸಿನ ಅಂಶಗಳನ್ನು ಸಮಗ್ರ ನಿರ್ಮಾಣ ಬಜೆಟ್ ಒಳಗೊಂಡಿರುತ್ತದೆ. ನಿರ್ಮಾಣ ಬಜೆಟ್‌ನಲ್ಲಿ ಸಾಮಾನ್ಯವಾಗಿ ಒಳಗೊಂಡಿರುವ ಪ್ರಮುಖ ಅಂಶಗಳು ಇಲ್ಲಿವೆ:
ಇದು ಯೋಜನೆಗೆ ಅಗತ್ಯವಿರುವ ಎಲ್ಲಾ ಸಾಮಗ್ರಿಗಳ ವೆಚ್ಚವನ್ನು ಒಳಗೊಂಡಿರುತ್ತದೆ. ಉದಾಹರಣೆಗೆ ಮನೆ ನಿರ್ಮಾಣದಲ್ಲಿ ಬಳಕೆಯಾಗುವ ಕಟ್ಟಿಗೆ, ಕಾಂಕ್ರೀಟ್, ರೂಫಿಂಗ್ ಸಾಮಗ್ರಿಗಳು, ವೈರಿಂಗ್, ಪ್ಲಂಬಿಂಗ್ ಜೋಡಣೆ ಮತ್ತು ಫ್ಲೋರಿಂಗ್ ವೆಚ್ಚಗಳನ್ನು ಒಳಗೊಂಡುತ್ತದೆ.
ಕಾಂಟ್ರಾಕ್ಟರ್‌ಗಳು, ಸಬ್ಕಾಂಟ್ರಾಕ್ಟರ್‌ಗಳು ಮತ್ತು ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳುವುದು ಬಜೆಟ್‌ನ ಮಹತ್ವದ ಭಾಗವಾಗಿದೆ. ಪ್ರೊಜೆಕ್ಟ್‌ನ ಗಾತ್ರ ಮತ್ತು ಸಂಕೀರ್ಣತೆಗೆ ಅನುಗುಣವಾಗಿ ಕಾರ್ಮಿಕ ವೆಚ್ಚಗಳು ಬದಲಾಗಬಹುದು.
ಕಟ್ಟಡ ಪರವಾನಗಿಗಳು, ತಪಾಸಣೆ ಶುಲ್ಕಗಳು ಮತ್ತು ಯಾವುದೇ ಇತರ ನಿಯಂತ್ರಕ ಅಗತ್ಯತೆಗಳನ್ನು ಬಜೆಟ್‌ನಲ್ಲಿ ಸೇರಿಸುವ ಅಗತ್ಯವಿದೆ.
ನೀವು ವಾಸ್ತುಶಿಲ್ಪಿ ಅಥವಾ ವಿನ್ಯಾಸ ವೃತ್ತಿಪರರೊಂದಿಗೆ ಕೆಲಸ ಮಾಡುತ್ತಿದ್ದರೆ, ಅವರ ಶುಲ್ಕವನ್ನು ಸೇರಿಸಬೇಕು.
ಸೈಟ್ ಅನ್ನು ಸ್ವಚ್ಛಗೊಳಿಸುವುದು, ಅಗೆಯುವುದು, ಸಮತಟ್ಟು ಮಾಡಿಕೊಳ್ಳುವುದು, ಗುಂಡಿ ತೆಗೆಯುವುದರ ಜೊತೆಗೆ ಯಾವುದೇ ಅಗತ್ಯ ಕೆಲಸಗಳನ್ನು ಬಜೆಟ್ ತಯಾರಿಸುವಾಗ ಪರಿಗಣಿಸಬೇಕು.
ನೀರು, ವಿದ್ಯುತ್, ಗ್ಯಾಸ್ ಮತ್ತು ಒಳಚರಂಡಿ ವ್ಯವಸ್ಥೆಗಳಂತಹ ಸೌಲಭ್ಯಗಳ ಸಂಪರ್ಕ ಪಡೆಯಲು ತಗಲುವ ವೆಚ್ಚಗಳನ್ನು ಲೆಕ್ಕ ಹಾಕಬೇಕು.
ನಿರ್ಮಾಣ ಕಾಮಗಾರಿಯಲ್ಲಿ ಅನಿರೀಕ್ಷಿತವಾಗಿ ಎದುರಾಗುವ ವೆಚ್ಚಗಳು ಅಥವಾ ಬದಲಾವಣೆಗಳನ್ನು ಸರಿದೂಗಿಸಲು ತುರ್ತು ನಿಧಿಯನ್ನು ಇಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ.
ನಿಮ್ಮನ್ನು ಮತ್ತು ಯೋಜನೆಯನ್ನು ರಕ್ಷಿಸಲು ಬಿಲ್ಡರ್‌ನ ರಿಸ್ಕ್ ಇನ್ಶೂರೆನ್ಸ್ ಮತ್ತು ಸಾರ್ವಜನಿಕ ಹೊಣೆಗಾರಿಕೆ ವಿಮೆಯನ್ನು ಮಾಡಿಸುವುದು ಮುಖ್ಯವಾಗಿದೆ.
ನೀವು ನಿರ್ಮಾಣ ಸಾಲವನ್ನು ತೆಗೆದುಕೊಳ್ಳುತ್ತಿದ್ದರೆ, ಬಡ್ಡಿ ಪಾವತಿಗಳು ಮತ್ತು ಸಂಬಂಧಿತ ಶುಲ್ಕಗಳನ್ನು ಮೊದಲೇ ಪರಿಗಣಿಸಿ.
ಭೂಮಿಯನ್ನು ಸಮತಟ್ಟು ಮಾಡುವುದು, ಸಂಚಾರಕ್ಕೆ ದಾರಿ ಮತ್ತು ಹೊರಾಂಗಣ ಸೌಕರ್ಯಗಳ ವೆಚ್ಚವನ್ನು ಒಳಗೊಂಡಂತೆ ಒಟ್ಟಾರೆ ಬಜೆಟ್ ಅನ್ನು ಪೂರ್ಣಗೊಳಿಸುತ್ತದೆ.
ಯಶಸ್ವಿ ಮನೆ ನಿರ್ಮಾಣ ಯೋಜನೆಗೆ ಉತ್ತಮ ಯೋಜಿತ ನಿರ್ಮಾಣ ಬಜೆಟ್ ಅತ್ಯಗತ್ಯ. ಇದು ನಿಮಗೆ ಸಂಘಟಿತವಾಗಿರಲು, ವಾಸ್ತವಿಕ ಗುರಿಗಳನ್ನು ತಲುಪಲು ಮತ್ತು ಪ್ರಕ್ರಿಯೆಯ ಉದ್ದಕ್ಕೂ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಬಂಡವಾಳವನ್ನು ಎಚ್ಚರಿಕೆಯಿಂದ ಹಂಚಿಕೆ ಮಾಡುವುದು ಮತ್ತು ಖರ್ಚನ್ನು ಮೇಲ್ವಿಚಾರಣೆ ಮಾಡುವ ಮೂಲಕ, ನಿಮ್ಮ ಹಣಕಾಸಿನ ಮಿತಿಗಳಲ್ಲಿ ಖರ್ಚು ಮಾಡುವುದರಿಂದ ನಿರ್ಮಾಣ ಹಂತಗಳನ್ನು ಸರಳವಾಗಿ ಮುಗಿಸಬಹುದು. ನೆನಪಿಡಿ, ಉತ್ತಮವಾಗಿ ನಿರ್ವಹಿಸಲಾಗುವ ಬಜೆಟ್ ನಿಮ್ಮ ಕನಸಿನ ಮನೆಯ ಫೌಂಡೇಶನ್ ಆಗಿರುತ್ತದೆ.