ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ನಿಮ್ಮ ಮನೆಗಾಗಿ ಮನೆ ನಕ್ಷೆಯ 10 ಸರಳ ವಿನ್ಯಾಸಗಳು

ಮನೆಯನ್ನು ನಿವಾಸವನ್ನಾಗಿ ಬದಲಾಯಿಸುವ ಕೆಲಸವು ಸೂಕ್ತವಾದ ಬ್ಲ್ಯೂಪ್ರಿಂಟ್​ ಅನ್ನು ಆಯ್ಕೆಮಾಡುವುದರೊಂದಿಗೆ ಶುರುವಾಗುತ್ತದೆ. ಈ ಬ್ಲಾಗ್ ವಿವಿಧ ಅಗತ್ಯಗಳು, ಜೀವನಶೈಲಿಗಳು ಮತ್ತು ಬಜೆಟ್‌ಗಳಿಗೆ ಸೂಕ್ತವಾದ ವೈವಿಧ್ಯಮಯ ಮನೆ ನಕ್ಷೆ ವಿನ್ಯಾಸಗಳ ಒಳನೋಟಗಳನ್ನು ನೀಡುತ್ತದೆ. ಪ್ರಸ್ತುತ ಅಗತ್ಯತೆಗಳು, ಮುಂದೆ ಮಾಡಬಹುದಾದ ಯೋಜನೆಗಳು ಮತ್ತು ವೈಯಕ್ತಿಕ ಅಭಿರುಚಿಗೆ ಹೊಂದಿಕೆಯಾಗುವ ಸರಿಯಾದ ವಿನ್ಯಾಸವನ್ನು ಆಯ್ಕೆ ಮಾಡಲು ನಿಮಗೆ ಸಹಾಯ ಮಾಡಲು ಸಲಹೆಗಳನ್ನು ಒದಗಿಸುತ್ತದೆ. ನಿಮ್ಮ ಮನೆಯು ಸಮಯದ ಪರೀಕ್ಷೆಯಾಗಿದೆ ಎಂದು ಖಚಿತಪಡಿಸಿಕೊಳ್ಳುವುದು.

Share:


ಮನೆ ನಿರ್ಮಾಣದ ಪಯಣ ಆರಂಭಿಸುವುದು ಹುಮ್ಮಸ್ಸು ತರುವ ಹಾಗೂ ಎದೆಗುಂದಿಸುವ ಎರಡೂ ವಿಷಯಗಳನ್ನು ಒಳಗೊಂಡಿರುತ್ತದೆ. ಆರಾಮದಾಯಕ, ಕ್ರಿಯಾತ್ಮಕ ಮತ್ತು ಸುಂದರವಾಗಿ ಕಾಣುವ ಮನೆಯ ಫೌಂಡೇಶನ್ ಅದರ ವಿನ್ಯಾಸದಲ್ಲಿದೆ. ಇದನ್ನು ಸಾಮಾನ್ಯವಾಗಿ ಮನೆ ನಕ್ಷೆ ಎಂದು ಕರೆಯಲಾಗುತ್ತದೆ. ಮmನೆ ನಿರ್ಮಾಣ ಪ್ರಕ್ರಿಯೆಯಲ್ಲಿ ಚೆನ್ನಾಗಿ ಯೋಜಿಸಿದ ಮನೆ ನಕ್ಷೆಯು ಮಾರ್ಗದರ್ಶನ ಮಾಡುತ್ತದೆ. ಜೊತೆಗೆ ಅಂತಿಮವಾಗಿ ನೀವು ಬಯಸಿದಂತೆ, ನಿಮ್ಮ ಇಷ್ಟಕ್ಕೆ ತಕ್ಕಂತೆ ಅಗತ್ಯಗಳನ್ನು ಪೂರೈಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ಈ ಬ್ಲಾಗ್ ನಿಮ್ಮ ಕನಸಿನ ಮನೆಯನ್ನು ಹೊಂದಲು ಸ್ಪೂರ್ತಿ ನೀಡಲು ಹತ್ತು ಸರಳ ಮತ್ತು ಬಹುಮುಖ ಮನೆ ನಕ್ಷೆ ವಿನ್ಯಾಸಗಳನ್ನು ಕೊಡುತ್ತದೆ. ಪ್ರತಿ ವಿನ್ಯಾಸವು ಏನನ್ನು ನೀಡುತ್ತದೆ ಮತ್ತು ಅದು ನಿಮಗೆ ಏಕೆ ಪರಿಪೂರ್ಣ ಹೊಂದಾಣಿಕೆ ಆಗಬಹುದು ಎಂಬುದನ್ನು ವಿವರಿಸುತ್ತದೆ.

 

 



ಪ್ರಮುಖಾಂಶಗಳು

 

  • ಕುಟುಂಬದ ಗಾತ್ರ, ಜೀವನಶೈಲಿ, ಗೌಪ್ಯತೆ ಅಗತ್ಯತೆಗಳು ಮತ್ತು ಭವಿಷ್ಯದ ಅಗತ್ಯತೆಗಳಂತಹ ಅಂಶಗಳನ್ನು ಪರಿಗಣಿಸಿ, ಮನೆಯ ನಕ್ಷೆ ಅಥವಾ ನಕ್ಷೆಯ ವಿನ್ಯಾಸವನ್ನು ಆಯ್ಕೆಮಾಡುವ ಮೊದಲು ನಿಮ್ಮ ಅಗತ್ಯಗಳನ್ನು ನೋಡಿಕೊಳ್ಳುವುದು ಬಹಳ ಮುಖ್ಯ.

 

  • ಮನೆಯ ನಕ್ಷೆ ವಿನ್ಯಾಸಗಳಲ್ಲಿ ಸರಳತೆಯು ಪ್ರಮುಖವಾಗಿದೆ, ಸುಗಮ ನಿರ್ಮಾಣ ಕೆಲಸಗಳನ್ನು ಮತ್ತು ಬೆಲೆಗೆ ತಕ್ಕ ಮೌಲ್ಯದಂತೆ ನಿರ್ಮಿಸುವುದನ್ನು ಸುಗಮಗೊಳಿಸುತ್ತದೆ.

 

  • ಸಂಕೀರ್ಣ ವಿನ್ಯಾಸಗಳು ದುಬಾರಿ ಹಾಗೂ ನಿರ್ಮಾಣ ಸವಾಲುಗಳಿಗೆ ಕಾರಣವಾಗುವುದರಿಂದ, ಅತಿಯಾದ ಸಮುಚ್ಛಯ ತಪ್ಪಿಸಿ.

 

  • ವಾಸ್ತುಶಿಲ್ಪಿಗಳು ಅಥವಾ ವಿನ್ಯಾಸ ವೃತ್ತಿಪರರ ವೃತ್ತಿಪರ ಸಹಾಯವು ನಿಮ್ಮ ದೃಷ್ಟಿಯನ್ನು ಪ್ರಾಯೋಗಿಕ ಮತ್ತು ನೇರವಾದ ಮನೆ ನಕ್ಷೆ ವಿನ್ಯಾಸಕ್ಕೆ ಭಾಷಾಂತರಿಸುತ್ತದೆ.

 

  • ಶಕ್ತಿಯ ದಕ್ಷತೆ ಸೇರಿದಂತೆ ಅಲ್ಪಾವಧಿಯ ವೆಚ್ಚಗಳು ಮತ್ತು ದೀರ್ಘಾವಧಿಯ ನಿರ್ವಹಣೆ ವೆಚ್ಚಗಳನ್ನು ಪರಿಗಣಿಸಿ ವೆಚ್ಚ-ಪರಿಣಾಮಕಾರಿತ್ವಕ್ಕೆ ಆದ್ಯತೆ ನೀಡಿ.

 

  • ವಿಳಂಬವನ್ನು ತಪ್ಪಿಸಲು ಮತ್ತು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಲು ನಿರ್ಮಿಸಲು ಸುಲಭವಾದ ವಿನ್ಯಾಸಗಳನ್ನು ಆಯ್ಕೆಮಾಡಿ.

 

  • ಅತ್ಯುತ್ತಮ ಮನೆ ನಕ್ಷೆ ವಿನ್ಯಾಸವು ಭವಿಷ್ಯದ ಜೀವನಶೈಲಿಯ ಬದಲಾವಣೆಗಳು ಮತ್ತು ಅವಶ್ಯಕತೆಗಳನ್ನು ನಿರೀಕ್ಷಿಸುತ್ತದೆ, ನಿಮ್ಮ ಮನೆಯು ಕಾಲಾನಂತರದಲ್ಲಿ ಕ್ರಿಯಾತ್ಮಕವಾಗಿ ಮತ್ತು ಸರಿಹೊಂದಿಸುತ್ತದೆ ಎಂದು ಖಚಿತಪಡಿಸುತ್ತದೆ.

ಮನೆ ನಿರ್ಮಾಣಕ್ಕಾಗಿ ಮನೆ ನಕ್ಷೆಯ ಪ್ರಾಮುಖ್ಯತೆ

ನಿಮ್ಮ ಮನೆಯ ಬ್ಲ್ಯೂಪ್ರಿಂಟ್​ ಅನ್ನು ಸಾಮಾನ್ಯವಾಗಿ ಮನೆ ನಕ್ಷೆ ಎಂದು ಹೇಳಲಾಗುತ್ತದೆ. ಅದು ಹೇಗೆ ಕಟ್ಟಬೇಕು ಎಂಬುದರ ದೃಶ್ಯ ನಿರೂಪಣೆಯಾಗಿರುತ್ತದೆ. ಅದರೊಂದಿಗೆ ರೂಮ್​ಗಳು ಮತ್ತು ಸ್ಥಳಗಳ ವಿನ್ಯಾಸವನ್ನು ಮಾತ್ರವಲ್ಲದೆ ದಿನನಿತ್ಯದ ಜೀವನವನ್ನೂ ಒಳಗೊಳ್ಳುತ್ತದೆ. ಸರಿಯಾದ ಮನೆ ನಕ್ಷೆ ವಿನ್ಯಾಸವು ಅತ್ಯುತ್ತಮ ಸ್ಥಳಾವಕಾಶವನ್ನು ಕೊಡುತ್ತದೆ. ಜೊತೆಗೆ ನಿಸರ್ಗದಿಂದ ಸಿಗುವ ಗಾಳಿ-ಬೆಳಕು ಒಳಗೆ ಬರುವುದನ್ನು ಹೆಚ್ಚಿಸುತ್ತದೆ. ಅಂತಿಮವಾಗಿ ನಿಮ್ಮ ವಾಸಸ್ಥಳದಲ್ಲಿ ನೆಮ್ಮದಿ ಮತ್ತು ನಿಮ್ಮ ಅಗತ್ಯಗಳನ್ನು ಸಾರ್ಥಕಗೊಳಿಸುತ್ತದೆ. ನಿಮ್ಮ ಕನಸಿನ ಮನೆಯನ್ನು ವಾಸ್ತವ ರೂಪಕ್ಕೆ ತರುವಲ್ಲಿ ಇದು ಮೊದಲ ಹೆಜ್ಜೆಯಾಗಿದೆ.


ಮನೆ ನಕ್ಷೆಯ 10 ಸರಳ ವಿನ್ಯಾಸಗಳು

 

1. ಒಂದೇ ಅಂತಸ್ತಿನ ಮನೆ



ಅಂದರೆ ಏನು?

ಒಂದೇ ಅಂತಸ್ತಿನ ಮನೆಯು ಒಂದು ಪ್ರಕಾರದ ಮನೆಯಾಗಿದ್ದು, ಇದರಲ್ಲಿ ಬೆಡ್​ರೂಮ್​ಗಳು, ಲಿವಿಂಗ್ ರೂಮ್ ಮತ್ತು ಕಿಚನ್ ಸೇರಿದಂತೆ ಪ್ರತಿಯೊಂದು ಭಾಗವೂ ಒಂದೇ ಅಂತಸ್ತಿನಲ್ಲಿ ಇರುತ್ತವೆ. ಈ ಮನೆ ನಕ್ಷೆ ವಿನ್ಯಾಸದಲ್ಲಿ ಮೆಟ್ಟಿಲುಗಳ ಅಗತ್ಯ ಇರುವುದಿಲ್ಲ. ಸರಾಗವಾದ ಮತ್ತು ಸರಳವಾಗಿ ಇರುವ ಲವಲವಿಕೆಯ ಪರಿಸರವನ್ನು ಬಯಸುವವರಿಗೆ ಇದು ಅತ್ಯಂತ ಸೂಕ್ತವಾಗಿದೆ. ಸರಳವಾಗಿ ನಡೆಯಲು ಆಗದಂತಹ ಸಮಸ್ಯೆಗಳನ್ನು ಹೊಂದಿರುವವರು ಅಥವಾ ಸುಲಭವಾಗಿ ಎಲ್ಲ ಸೌಕರ್ಯಗಳು ಒಂದೇ ಕಡೆ ಇರಬೇಕು ಎಂಬುದಕ್ಕೆ ಆದ್ಯತೆ ಕೊಡುವವರು ಈ ರೀತಿಯ ವಿನ್ಯಾಸವನ್ನು ಬಯಸುತ್ತಾರೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ಕುಟುಂಬದ ಹಿರಿಯರು ಮತ್ತು ನಡೆದಾಡುವ ಸಮಸ್ಯೆಗಳಿರುವ ಕುಟುಂಬದ ಸದಸ್ಯರಿಗೆ ಈ ರೀತಿಯ ಮನೆ ಹೊಂದಿಕೆಯಾಗುತ್ತದೆ.

 

2) ಜೊತೆಗೆ ಇಂಥ ಮನೆಗಳನ್ನು ಕಟ್ಟಲು ಕಡಿಮೆ ನಿರ್ಮಾಣ ಸಾಮಗ್ರಿಗಳು ಸಾಕಾಗುತ್ತವೆ. ಜೊತೆಗೆ ಸಾಮಾನ್ಯವಾಗಿ ಮನೆಯನ್ನು ಇಟ್ಟುಕೊಳ್ಳುವುದು ಸುಲಭ ಮತ್ತು ಕಡಿಮೆ ಖರ್ಚಿನದ್ದಾಗಿದೆ.

 

3) ಇದು ಕಡಿಮೆ ಜಾಗೆಯಲ್ಲಿ ವಾಸಕ್ಕೆ ಸಾಕಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ.

 

4) ಈ ವಿನ್ಯಾಸವು ಪ್ರತಿದಿನವೂ ಮೆಟ್ಟಿಲುಗಳನ್ನು ಹತ್ತುವುದನ್ನು ತಪ್ಪಿಸುತ್ತದೆ.

 

2. ಸ್ಟುಡಿಯೋ ಅಪಾರ್ಟ್ಮೆಂಟ್ ಲೇಔಟ್



ಅಂದರೆ ಏನು?

ಸ್ಟುಡಿಯೋ ಅಪಾರ್ಟ್‌ಮೆಂಟ್‌ ವಿನ್ಯಾಸವು ವಿಶಾಲವಾದ ತೆರೆದ ಪ್ರದೇಶದಿಂದ ಕೂಡಿರುತ್ತದೆ. ಲಿವಿಂಗ್ ಏರಿಯಾ, ಬೆಡ್​ರೂಮ್​ ಮತ್ತು ಕಿಚನ್​ ಈ ಎಲ್ಲವನ್ನೂ ಒಂದೇ ಸ್ಥಳದಲ್ಲಿ ಮಾಡಲಾಗುತ್ತದೆ. ವಿಶೇಷವಾಗಿ ಈ ರೀತಿಯ ವಿನ್ಯಾಸದಲ್ಲಿ ಬಾತ್​ರೂಮ್ ಅನ್ನು ಮಾತ್ರ ಪ್ರತ್ಯೇಕವಾಗಿ ಮಾಡಲಾಗಿರುತ್ತದೆ. ಈ ರೀತಿಯ ಮನೆ ನಕ್ಷೆ ವಿಸ್ಯಾಸದ ಲೇಔಟ್ ಸಹಾಯದಿಂದ ಚಿಕ್ಕ ವಾಸದ ಪ್ರದೇಶದಲ್ಲಿ ಹೆಚ್ಚಿನ ಸ್ಥಳವನ್ನು ಹೊಂದುವುದು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಇಂತಹ ಮನೆಗಳನ್ನು ಕಟ್ಟಲಾಗುತ್ತದೆ. ಯಾಕೆಂದರೆ ಇದು ನಗರ ಪ್ರದೇಶದ ಜೀವನಕ್ಕೆ ಕೈಗೆಟುಕುವ ವಿಧಾನವಾಗಿದೆ. ಅಚ್ಚುಕಟ್ಟಾದ, ಅನುಕೂಲಕರ ವಾತಾವರಣದ ಮೂಲಕ ಅಗತ್ಯವಾದುದನ್ನು ಒದಗಿಸುತ್ತದೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ಓಪನ್ ಸ್ಪೇಸ್ ಲೇಔಟ್ ವಿನ್ಯಾಸದಿಂದಾಗಿ, ಅಪಾರ್ಟ್ಮೆಂಟ್​ನ ಪ್ರತಿ ಚದುರ ಇಂಚು ಜಾಗೆಯನ್ನೂ ಅನೇಕ ರೀತಿಯಲ್ಲಿ ಬಳಸಿಕೊಳ್ಳಲು ಅನುಕೂಲವಾಗುತ್ತದೆ.

 

2) ಬಹುಮಹಡಿ ಯೋಜನೆಯ ಬಹುಮುಖತೆಯಿಂದಾಗಿ, ನಿವಾಸಿಗಳು ತಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಹಾಗೂ ಜೀವನಶೈಲಿಗೆ ತಕ್ಕಂತೆ ನಾನಾ ರೀತಿ ಉಪಯೋಗಿಸಬಹುದಾದ ಪೀಠೋಪಕರಣಗಳನ್ನು ಸೃಜನಾತ್ಮಕವಾಗಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

 

3) ಸಣ್ಣ ಜಾಗೆಯಲ್ಲಿ ಮನೆ ಕಟ್ಟುವುದರಿಂದ ಮನೆಯನ್ನು ನಿರ್ವಹಿಸುವುದು ಸುಲಭವಾಗುತ್ತದೆ. ಹೀಗಾಗಿ ನಿಮಗೆ ವಿಶ್ರಾಂತಿ ಮತ್ತು ಇತರ ಕೆಲಸಗಳಿಗಾಗಿ ಹೆಚ್ಚಿನ ಸಮಯ ಸಿಗುತ್ತದೆ.   

 

4) ಯುವಕರು ಅಥವಾ ಯುವ ದಂಪತಿಗೆ ತಮ್ಮ ಜೀವನ ಆರಂಭಿಸಲು ಇದು ಸೂಕ್ತವಾಗಿದೆ. ಯೋಗ್ಯವಾದ ಖರ್ಚಿನಲ್ಲಿ ಆರಾಮದಾಯಕ ಆವಸಕ್ಕೆ ಸ್ಥಳವನ್ನು ಕೊಡುತ್ತದೆ.

 

3. ಎರಡು ಅಂತಸ್ತುಗಳ ಡ್ಯುಪ್ಲೆಕ್ಸ್ ಮನೆ



ಅಂದರೆ ಏನು?

ಎರಡು ಅಂತಸ್ತುಗಳ ಡ್ಯುಪ್ಲೆಕ್ಸ್ ಮನೆಯನ್ನು ಪ್ರತ್ಯೇಕವಾಗಿ ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿಯೊಂದೂ ಎರಡೂ ಮಹಡಿಗಳಲ್ಲಿ ಇರುತ್ತದೆ. ಮನೆ ನಕ್ಷೆ ವಿನ್ಯಾಸವು ಸಾಮಾನ್ಯವಾಗಿ ನೆಲ ಮಹಡಿಯಲ್ಲಿ ಲಿವಿಂಗ್​ ಸ್ಪೇಸ್​ ಅನ್ನು ಮತ್ತು ಮೇಲಿನ ಮಹಡಿಯಲ್ಲಿ ಬೆಡ್​ರೂಮ್​ಗಳನ್ನು ಒಳಗೊಂಡಿರುತ್ತದೆ. ನಗರ ಅಥವಾ ಉಪನಗರದ ಪ್ರದೇಶಗಳಲ್ಲಿ ಲಂಬ ಜಾಗವನ್ನು ಹೀಗೆ ಸಮರ್ಥವಾಗಿ ಬಳಸಿಕೊಳ್ಳುಲಾಗುತ್ತದೆ. ತಮ್ಮ ಮನೆಯೊಳಗೆ ವಿಶಿಷ್ಟವಾದ ಲಿವಿಂಗ್ ಹಾಗೂ ವಿಶ್ರಾಂತಿಯ ಜಾಗೆಯನ್ನು ಬಯಸುವವರಿಗೆ ಈ ವಿನ್ಯಾಸವು ಸಹಾಯಕಾರಿಯಾಗಿದೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ಈ ವಿನ್ಯಾಸವು ಮನೆಯೊಳಗೆ ಸ್ಪಷ್ಟವಾದ ವಲಯವನ್ನು ಒದಗಿಸುತ್ತದೆ, ಇದು ದೊಡ್ಡ ಕುಟುಂಬ ಅಥವಾ ಅತಿಥಿಗಳಿಗೆ ಪ್ರೈವಸಿಯನ್ನು ಒದಗಿಸುತ್ತದೆ.  

 

2) ಸಣ್ಣ ಭೂಮಿ ಜಾಗೆಯನ್ನು ಹೊಂದಿರುವ ಆಸ್ತಿ ಮಾಲೀಕರಿಗೆ, ಈ ವಿನ್ಯಾಸದ ಮೂಲಕ ಬಳಸಬಹುದಾದ ನೆಲದ ಜಾಗವನ್ನು ದ್ವಿಗುಣಗೊಳಿಸಬಹುದು.

 

3) ಅದರ ಒತ್ತಾಗಿರುವ ಸೈಜ್​ನ ಕಾರಣದಿಂದ, ನಗರದ ವಸತಿ ಪ್ರದೇಶಗಳು ಅಥವಾ ಗೇಟೆಡ್ ಸಮುದಾಯಗಳಲ್ಲಿ ಡ್ಯುಪ್ಲೆಕ್ಸ್ ಮನೆಯು ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ.

 

4) ಮನೆಯಲ್ಲಿ ಹೆಚ್ಚು ಜನರಿರುವ ಸ್ಥಳಗಳಿಂದ ಪ್ರತ್ಯೇಕಿಸುವುದರಿಂದ ಪ್ರೈವಸಿಯನ್ನು ಒದಗಿಸುತ್ತದೆ.

 

4. ಎಲ್-ಆಕಾರದ ಮಹಡಿ ಯೋಜನೆ



ಅಂದರೆ ಏನು?

ಎಲ್-ಆಕಾರದ ಮಹಡಿ ಯೋಜನೆಯು ಹೆಸರೇ ಹೇಳುವಂತೆ ರೂಮ್​ಗಳನ್ನು 'L' ಆಕಾರದಲ್ಲಿ ಮಾಡಲಾಗಿರುತ್ತದೆ. ಇದು ಮನೆಯ ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಅನುಕೂಲಕರವಾದ ಪ್ರತ್ಯೇಕತೆಯನ್ನು ನೀಡುತ್ತದೆ. ಈ ಮನೆ ನಕ್ಷೆ ಯೋಜನೆಯು ನೈಸರ್ಗಿಕವಾಗಿ ಅಂಗಳ ಅಥವಾ ಇಂಟಿರೀಯರ್​ಗೆ ಅವಕಾಶ ಕಲ್ಪಿಸುತ್ತದೆ. ಹೊರಾಂಗಣ ಜೀವನವನ್ನು ಆನಂದಿಸುವ ಮನೆಮಾಲೀಕರಿಗೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) 'L' ಆಕಾರವು ನೈಸರ್ಗಿಕವಾಗಿ ಕೇಂದ್ರ ಹೊರಾಂಗಣ ಪ್ರದೇಶವನ್ನು ರೂಪಿಸುತ್ತದೆ. ಇದು ಲಾನ್, ಅಂಗಳ ಅಥವಾ ಗಾರ್ಡನ್​ಗೆ ಪರಿಪೂರ್ಣವಾಗಿದೆ.

 

2) 'L' ಆಕಾರದಲ್ಲಿರುವ ರೂಮ್​ಗಳು ಕನಿಷ್ಟ ಎರಡು ಕಡೆಗಳಿಂದ ನೈಸರ್ಗಿಕ ಬೆಳಕನ್ನು ಪಡೆಯುತ್ತವೆ.

 

3) ಅದರ 'L' ಆಕಾರದಿಂದಾಗಿ, ಈ ಸಣ್ಣ ಮನೆಯ ಮಹಡಿ ಯೋಜನೆಯು ಮನೆಯ ವಿವಿಧ ವಿಭಾಗಗಳ ನಡುವೆ ಪ್ರೈವಸಿಯನ್ನು ಕಾಪಾಡುತ್ತದೆ.

 

5. ಟೌನ್‌ಹೌಸ್ ವಿನ್ಯಾಸ



ಅಂದರೆ ಏನು?

 ಟೌನ್‌ಹೌಸ್‌ಗಳು ಬಹು ಮಹಡಿಯ ಮನೆಗಳಾಗಿದ್ದು, ನಗರವಾಸಿಗಳಿಗಾಗಿಯೇ ವಿನ್ಯಾಸಗೊಳಿಸಲಾಗುತ್ತದೆ. ಅವು ಕಿರಿದಾದ, ಲಂಬವಾದ ಸ್ಟ್ರಕ್ಚರ್​ಗಳ ಗುಣಲಕ್ಷಣಗಳನ್ನು ಹೊಂದಿವೆ. ಜೊತೆಗೆ ಕೆಲವೊಮ್ಮೆ ಪಕ್ಕದ ಕಟ್ಟಡಗಳೊಂದಿಗೆ ಗೋಡೆಗಳನ್ನು ಹಂಚಿಕೊಳ್ಳುತ್ತವೆ. ಈ ಮನೆಯ ನೆಲದ ನಕ್ಷೆ ವಿನ್ಯಾಸವು ಹಲವಾರು ಮಹಡಿಗಳಲ್ಲಿ ಜಾಗದ ಸಮರ್ಥ ಬಳಕೆಯನ್ನು ಒತ್ತಿಹೇಳುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ಸಾಮಾನ್ಯವಾದ ಒತ್ತೊತ್ತಾಗಿ ವಾಸಿಸಲು ಹಾಗೂ ಊಟ ಮಾಡಲು ಮತ್ತು ಮಲಗಲು ಬೇರೆಬೇರೆ ಪ್ರದೇಶಗಳನ್ನು ಒದಗಿಸುತ್ತದೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ಜನಸಂದಣಿಯ ನಗರಗಳಲ್ಲಿ, ಈ ಲಂಬ ಸ್ಟ್ರಕ್ಚರ್​ ಲಭ್ಯವಿರುವ ಪ್ರತಿಯೊಂದು ತುಣುಕು ಜಾಗವನ್ನೂ ಬಳಸಿಕೊಳ್ಳುತ್ತದೆ.

 

2) ಪ್ರತ್ಯೇಕವಾದ ಮಹಡಿಗಳೊಂದಿಗೆ, ನಿವಾಸಿಗಳು ವಾಸಿಸುವ, ಕೆಲಸ ಮಾಡುವ ಮತ್ತು ಮಲಗುವ ಸ್ಥಳಗಳನ್ನು ಒದಗಿಸಲಾಗುತ್ತದೆ.

 

3) ಮೇಲ್ಛಾವಣಿಯನ್ನು ರೂಫ್​ಟಾಪ್​ ಗಾರ್ಡನ್ ಅಥವಾ ಟೆರೆಸ್​ನಂತಹ ಕ್ರಿಯಾತ್ಮಕ ಸ್ಥಳವಾಗಿ ಪರಿವರ್ತಿಸಬಹುದು.

 

4) ಟೌನ್‌ಹೌಸ್‌ಗಳು ನಿಕಟವಾದ ನೆರೆಹೊರೆ ಮತ್ತು ಸಮುದಾಯದ ಅನುಭವವನ್ನು ನೀಡುತ್ತವೆ. 

 

6. ಬಂಗಲೆ ಶೈಲಿ



ಅಂದರೆ ಏನು?

ಬಂಗಲೆ ಶೈಲಿಯ ಮನೆಗಳು ಒಂದೇ ಅಂತಸ್ತಿನದ್ದಾಗಿರುತ್ತವೆ. ಆದರೂ ಕೂಡ ಅವುಗಳ ನಿರ್ಮಾಣದಲ್ಲಿ ಪರಂಪರಾಗತ ವಾಸ್ತುಶಿಲ್ಪ ಹಾಗೂ ವಿನ್ಯಾಸದಲ್ಲಿ ನಿರ್ದಿಷ್ಟ ಅಂಶಗಳಾದ ವಿಶಾಲವಾದ ವರಾಂಡಾಗಳು, ಇಳಿಜಾರಾದ ರೂಫ್​ಗಳು ಮತ್ತು ಕರಕುಶಲತೆಗೆ ಹೆಚ್ಚಿನ ಮಹತ್ವವನ್ನು ಕೊಡಲಾಗಿರುತ್ತದೆ. ದಕ್ಷಿಣ ಏಷ್ಯಾದ ವಾಸ್ತುಶಿಲ್ಪ ಮತ್ತು ಪಾಶ್ಚಿಮಾತ್ಯ ಶೈಲಿಯ ಮಿಶ್ರಣದಿಂದ ರೂಪುಗೊಂಡಿವೆ. ಬಂಗಲೆಗಳು ವಿನ್ಯಾಸ ವಿಷಯದಲ್ಲಿ ಮಾತ್ರವಲ್ಲ, ಅನುಕೂಲಕರವಾದ ಮತ್ತು ಜೀವನದ ಸಂಪೂರ್ಣ ಪರಿಸರವನ್ನು ಉತ್ತೇಜಿಸುವ ಸೌಂದರ್ಯದ ಬಗ್ಗೆಯೂ ಇವೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ಎಲ್ಲವೂ ಒಂದೇ ಮಹಡಿಯಲ್ಲಿ ಇರುತ್ತವೆ, ಬಂಗಲೆಗಳಲ್ಲಿ ಮೆಟ್ಟಿಲುಗಳು ಇರುವುದಿಲ್ಲ.

 

2) ಬಂಗಲೆಗಳು ಭಾರತದ ವಾಸ್ತುಶಿಲ್ಪ ಪರಂಪರೆಯ ಒಂದು ಭಾಗವಾಗಿವೆ.

 

3) ಮೆಟ್ಟಿಲುಗಳು ಹಾಗೂ ಬಹುಮಡಿಗಳು ಇಲ್ಲದಿರುವುದರಿಂದ ಅಪಘಾತಗಳ ಅಪಾಯವು ಗಮನಾರ್ಹವಾಗಿ ಕಡಿಮೆಯಾಗುತ್ತದೆ

 

4) ವೆರಾಂಡಾ ಅಥವಾ ಪಡಸಾಲೆಯು ಹೊರಾಂಗಣ ಜೀವನ ವಿಧಾನವನ್ನು ಒದಗಿಸುತ್ತದೆ

 

7. ವಿಭಜಿತ ಮಹಡಿ ಮನೆ



ಅಂದರೆ ಏನು?

 ವಿಭಜಿತ ಮಹಡಿ ಮನೆಗಳು ಫ್ಲೋರ್​ ಪ್ಲಾನ್ ಒಳಗೊಂಡಿರುತ್ತವೆ. ಅಲ್ಲಿ ಮಹಡಿಗಳು ವಿಭಜಿಸಲ್ಪಟ್ಟಿರುತ್ತವೆ ಅಥವಾ ಬೇರೆಬೇರೆ ರೀತಿಯಾಗಿರುತ್ತವೆ. ಸಾಮಾನ್ಯವಾಗಿ ಭೂಮಿಯ ನೈಸರ್ಗಿಕ ಇಳಿಜಾರಿಗೆ ಸರಿಹೊಂದಿಸಲು ಹೀಗೆ ವಿನ್ಯಾಸಗೊಳಿಸಲಾಗಿರುತ್ತದೆ. ಈ ಶೈಲಿಯು ಬೆಡ್​ರೂಮ್​ಗಳು ಮತ್ತು ಲಿವಿಂಗ್ ರೂಮ್‌ಗಳಂತಹ ವಾಸಿಸುವ ಸ್ಥಳಗಳನ್ನು ಕಡಿಮೆ ಮೆಟ್ಟಿಲುಗಳ ಮೂಲಕ ಹತ್ತಲು ಬರುವಂತೆ ವಿವಿಧ ಹಂತಗಳಲ್ಲಿ ಪರಿಣಾಮಕಾರಿಯಾಗಿ ಪ್ರತ್ಯೇಕಿಸಲಾಗಿರುತ್ತದೆ. ಇದು ಮನೆಯಲ್ಲಿ ಒಂದೆಡೆಯಿಂದ ಬೇರೆಡೆಗೆ ಸಂಪರ್ಕಿಸುವಾಗ ಪ್ರೈವಸಿಯನ್ನು ಕೊಡುತ್ತದೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ಜಾಗೆಯು ಇಳಿಜಾರಿನಲ್ಲಿ ಅಥವಾ ಅಸಮವಾದ ಭೂಪ್ರದೇಶದಲ್ಲಿದ್ದರೆ ಈ ವಿನ್ಯಾಸವು ವಿಶೇಷವಾಗಿ ಸಹಾಯಕವಾಗಿರುತ್ತದೆ.

 

2) ವಿವಿಧ ಹಂತಗಳು ಮನೆಯೊಳಗೆ ಉತ್ತಮ-ವಿಶಿಷ್ಟ ವಲಯಗಳಿಗೆ ಅವಕಾಶ ಮಾಡಿಕೊಡುತ್ತವೆ. ಜೊತೆಗೆ ಅನುಕೂಲಕ್ಕಾಗಿ ಅವುಗಳನ್ನು ಸಮೀಪದಲ್ಲಿರಿಸುತ್ತವೆ.

 

3) ಬೇರೆ ಬೇರೆ ವಲಯಗಳು ಸಾಮಾನ್ಯ ಪ್ರದೇಶಗಳಿಂದ ದೂರವಿರುವ ನಿಶ್ಯಬ್ದ ಸ್ಥಳವನ್ನು ಬಿಡುವಿಲ್ಲದ ಮನೆಯಲ್ಲೂ ಸಹ ಅನುಮತಿಸುತ್ತದೆ.

 

4) ವಿಭಿನ್ನ ಅಂತಸ್ತಿನ ಫ್ಲೋರ್​ಗಳು ಮನೆಯೊಳಗೆ ಮತ್ತು ಹೊರಗಿನಿಂದ ನೋಡಲು ಸೌಂದರ್ಯವನ್ನು ನೀಡುತ್ತವೆ.

 

8. ಗುಮ್ಮಟ-ಆಕಾರದ ಮನೆ



ಅಂದರೆ ಏನು?

ಗುಮ್ಮಟ-ಆಕಾರದ ಮನೆಗಳು ವಿಶಿಷ್ಟವಾದ ಜೀವನ ಅನುಭವವನ್ನು ಕೊಡುವ ಬಾಗಿದ, ಗೋಳಾಕಾರದ ಸ್ಟ್ರಕ್ಚರ್​ಗಳೊಂದಿಗೆ ಎದ್ದು ಕಾಣುತ್ತವೆ. ಜ್ಯಾಮಿತೀಯ ಮನೆ ನಕ್ಷೆ ವಿನ್ಯಾಸವು ಕೇವಲ ಸುಂದರವಾಗಿ ಇರುವುದಿಲ್ಲ ಜೊತೆಗೆ ಕ್ರಿಯಾತ್ಮಕವಾಗಿಯೂ ಇರುತ್ತದೆ. ಯಾಕೆಂದರೆ ಇದು ಮನೆಯ ಶಕ್ತಿಯ ದಕ್ಷತೆ ಮತ್ತು ಸ್ಟ್ರಕ್ಚರಲ್ ಬಾಳಿಕೆಗೆ ಕೊಡುಗೆ ನೀಡುತ್ತದೆ. ಅಸಾಂಪ್ರದಾಯಿಕ ಮತ್ತು ಪರಿಸರ ಸ್ನೇಹಿ ವಾಸಸ್ಥಳವನ್ನು ಹುಡುಕುವವರಿಗೆ ಇದು ಆಕರ್ಷಕ ಆಯ್ಕೆಯಾಗಿದೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ದುಂಡಗಿನ ಆಕಾರವು ಗಾಳಿಯ ಪ್ರಸರಣವನ್ನು ಸುಧಾರಿಸುತ್ತದೆ. ಉಷ್ಣವನ್ನು ಕಡಿಮೆ ಮಾಡುವುದರಿಂದ ಮನೆ ತಂಪಾಗಿಡುವ ವೆಚ್ಚವನ್ನು ಕಡಿಮೆ ಮಾಡುತ್ತದೆ

 

2) ವಿಶಿಷ್ಟವಾದ ದುಂಡಗಿನ ಆಕಾರದೊಂದಿಗೆ ಇಂತಹ ಮನೆಗಳು ಮನೆ ಎದ್ದು ಕಾಣುತ್ತವೆ.

 

3) ಗೋಳಾಕಾರದ ವಿನ್ಯಾಸವು ರಚನಾತ್ಮಕ ಒತ್ತಡವನ್ನು ಒಂದೇ ರೂಪದಲ್ಲಿ ಹಂಚಿಕೆ ಮಾಡುತ್ತದೆ. ಇದು ಹೆಚ್ಚು ಬಾಳಿಕೆ ಬರುವುದರೊಂದಿಗೆ ಭೂಕಂಪನ ನಿರೋಧಕವಾಗಿದೆ.

 

4) ಗೋಳಾಕಾರದ ಮನೆ ವಿನ್ಯಾಸವು ಕನಿಷ್ಠತೆಯು ಬಳಸುವ ಒಟ್ಟಾರೆ ವಸ್ತುಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

 

9. ವಸಾಹತುಶಾಹಿ ಶೈಲಿಯ ಮನೆ



ಅಂದರೆ ಏನು?

 ಇಂತಹ ಮನೆಗಳ ಮುಂಭಾಗವು ಸಮಾನವಾಗಿ ಹಾಗೂ ವ್ಯವಸ್ಥಿತ ಮಹಡಿ ಯೋಜನೆಗಳಿಂದ ಇವುಗಳು ಗುರಿತಿಸಲ್ಪಡುತ್ತವೆ. ವಸಾಹತುಶಾಹಿ ಶೈಲಿಯ ಮನೆಗಳು ಸಾಮಾನ್ಯವಾಗಿ ಎರಡೂ ಬದಿಯಲ್ಲಿ ಸಮಾನ ಅಂತರದ ರೂಮ್​ಗಳನ್ನು ಹೊಂದಿರುವ ಸೆಂಟ್ರಲ್ ಹಾಲ್​ ಅನ್ನು ಒಳಗೊಂಡಿರುತ್ತವೆ. ಈ ಮನೆಗಳು ಸಾಮಾನ್ಯವಾಗಿ ಎರಡು ಅಥವಾ ಹೆಚ್ಚಿನ ಅಂತಸ್ತುಗಳನ್ನು ವ್ಯಾಪಿಸುತ್ತವೆ. ಜೊತೆಗೆ ಅಲಂಕಾರಿಕ ಅಂಶಗಳೊಂದಿಗೆ ಪೂರ್ಣಗೊಳ್ಳುತ್ತವೆ ಐತಿಹಾಸಿಕ ವಾಸ್ತುಶಿಲ್ಪದ ಶೈಲಿಗಳಿಂದ ಕೂಡಿರುತ್ತವೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ವಸಾಹತುಶಾಹಿ ಶೈಲಿಯ ಮನೆಗಳು ಸಾಮಾನ್ಯವಾಗಿ ಪ್ರತಿಷ್ಠೆ ಮತ್ತು ಸೊಬಗುಗಳಿಂದ ಕೂಡಿರುತ್ತವೆ.

 

2) ಮನೆಯ ಸಮಾನತೆಯಿಂದಾಗಿ, ಶಾಂತತೆ ತರುವ ಮತ್ತು ಕಲಾತ್ಮಕವಾಗಿ ಆಹ್ಲಾದಕರವಾದ ಸಮತೋಲನವಿದೆ.

 

3) ಸಾಂಪ್ರದಾಯಿಕವಾಗಿ ದೊಡ್ಡ ಗಾತ್ರದೊಂದಿಗೆ, ಈ ಮನೆಗಳು ದೊಡ್ಡ ಕುಟುಂಬಗಳಿಗೆ ಆರಾಮವಾಗಿ ಅವಕಾಶ ಕಲ್ಪಿಸುತ್ತವೆ.

 

4) ವಸಾಹತುಶಾಹಿ ಮನೆಯ ರಚನೆಯು ಉತ್ತಮವಾಗಿ ನಿರ್ದಿಷ್ಟಪಡಿಸಿದ ಏಕಾಂತ (ಬೆಡ್​ರೂಮ್​ಗಳು) ಮತ್ತು ಸಾರ್ವಜನಿಕ (ವಾಸದ, ಡೈನಿಂಗ್ ಹಾಲ್​ಗಳು) ಸ್ಥಳಗಳನ್ನು ಒದಗಿಸುತ್ತವೆ.

 

10. ಕಂಟೈನರ್ ಹೋಮ್



ಅಂದರೆ ಏನು?

ಕಂಟೈನರ್ ಮನೆಗಳನ್ನು ಸ್ಟೀಲ್ ಶಿಪ್ಪಿಂಗ್ ಕಂಟೈನರ್‌ಗಳಿಂದ ರಚಿಸಲಾಗುತ್ತದೆ. ಅವುಗಳನ್ನು ಅನನ್ಯವಾದ ಹಾಗೂ ಸಮರ್ಥನೀಯ ವಾಸಸ್ಥಳಗಳಾಗಿ ಪರಿವರ್ತಿಸಲಾಗಿರುತ್ತದೆ. ಈ ಮನೆಗಳು ತುಂಬಾ ಸಾಮಾನ್ಯವಲ್ಲ ಆದರೆ ಅವುಗಳ ಕನಿಷ್ಠ ಮನೆ ನಕ್ಷೆ ವಿನ್ಯಾಸ ಮತ್ತು ಮಾಡ್ಯುಲರ್ ಸ್ಟ್ರಕ್ಚರ್​ಗೆ ಎದ್ದು ಕಾಣುತ್ತವೆ, ಇದು ಸೃಜನಶೀಲ ವಾಸ್ತುಶಿಲ್ಪದ ಪರಿಹಾರಗಳನ್ನು ಕೊಡುತ್ತವೆ. ಶಾಶ್ವತ ಮನೆಗಳಾಗಿ ಸೌಕರ್ಯ ಕೊಡುವುದರೊಂದಿಗೆ ತಾತ್ಕಾಲಿಕ ಕಚೇರಿಗಳು ಅಥವಾ ವಸತಿಗಾಗಿ ನಿರ್ಮಾಣ ಸ್ಥಳಗಳಲ್ಲಿ ಕಂಟೇನರ್ ಮನೆಗಳನ್ನು ಆಗಾಗ್ಗೆ ಬಳಸಲಾಗುತ್ತದೆ. ಕಂಟೈನರ್ ಮನೆಗಳು ಮನೆ ನಿರ್ಮಾಣದ ಸಮಯದಲ್ಲಿ ಉಪಯೋಗಿಸಲು ತಾತ್ಕಾಲಿಕ ವಸತಿ ಮತ್ತು ನಾವೀನ್ಯದ, ಪರಿಸರ ಸ್ನೇಹಿ ಮನೆಗಳಾಗಿ ಬಹುಮುಖವಾದ ಚಿಕ್ಕ ಮನೆಯ ಮಹಡಿ ಪ್ಲಾನ್​ಗಳನ್ನು ಹೊಂದಿವೆ.

 

ಈ ಪ್ರಕಾರದ ಮನೆಗಳಿಂದ ದೊರೆಯುವ ಪ್ರಯೋಜನಗಳೇನು?

1) ಬಳಸಿದ ಶಿಪ್ಪಿಂಗ್ ಕಂಟೈನರ್‌ಗಳನ್ನು ಅಪ್‌ಸೈಕ್ಲಿಂಗ್ ಅಥವಾ ಮತ್ತೆ ಬಳಕೆ ಮಾಡುವ ಮೂಲಕ ಈ ಮನೆಗಳ ನಿರ್ಮಾಣ ತ್ಯಾಜ್ಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಜೊತೆಗೆ ಸಂಪನ್ಮೂಲಗಳನ್ನು ಸಂರಕ್ಷಿಸಬಹುದು.

 

2) ಸಾಮಾನ್ಯವಾಗಿ, ಕಂಟೇನರ್‌ಗಳನ್ನು ಬಳಸುವುದರಿಂದ ಆರಂಭಿಕ ರಚನೆಯ ವೆಚ್ಚವನ್ನು ಬಹಳಷ್ಟು ಕಡಿಮೆ ಮಾಡಬಹುದು.

 

3) ಮನೆಯ ಮೂಲ ರಚನೆಯನ್ನು ಮೊದಲೇ ನಿರ್ಮಾಣ ಮಾಡಲಾಗಿರುತ್ತದೆ. ಕಂಟೇನರ್​ಗಳನ್ನು ಅಗತ್ಯಕ್ಕೆ ಬೇಕಾದಾಗ ಅವುಗಳ ಭಾಗಗಳನ್ನು ಜೋಡಿಸಿ ಅಳವಡಿಸುವ ಮೂಲಕ ಬಳಕೆ ಮಾಡಲಾಗುತ್ತದೆ.

 

4) ಒಂದಕ್ಕಿಂತ ಹೆಚ್ಚು ಕಂಟೇನರ್​ಗಳನ್ನು ವಿವಿಧ ಸಂರಚನೆಗಳಲ್ಲಿ ಮಾಡಬಹುದು. ಅದರಿಂದ ಬಹುಮುಖ ವಿನ್ಯಾಸಗಳಿಗೆ ಅನುವು ಮಾಡಿಕೊಡುತ್ತದೆ.


ಸರಳವಾದ ಮನೆ ನಕ್ಷೆ ವಿನ್ಯಾಸವನ್ನು ಆಯ್ಕೆಮಾಡುವ ಮೊದಲು ಪರಿಗಣಿಸಬೇಕಾದ ವಿಷಯಗಳು 

 

1) ನಿಮ್ಮ ಅಗತ್ಯಗಳನ್ನು ತಿಳಿದುಕೊಳ್ಳಿ

ನಿಮ್ಮ ಕುಟುಂಬದ ಗಾತ್ರ, ನಿಮ್ಮ ದಿನನಿತ್ಯದ ಜೀವನಶೈಲಿ, ನಿಮ್ಮ ಪ್ರೈವಸಿ ಅಗತ್ಯತೆಗಳು, ಕೆಲವು ಸಣ್ಣ ಮನೆಯ ಫ್ಲೋರ್​ ಪ್ಲಾನ್​ಗಳೊಂದಿಗೆ ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಅಗತ್ಯವಿದೆ ಎಂದು ನಿರ್ಣಯಿಸುವ ಮೂಲಕ ಪ್ರಾರಂಭಿಸಿ.

 

2) ಸರಳತೆಯೇ ಕೀಲಿಕೈ

ಸಾರಾಗವಾಗಿ ಹಾಗೂ ಸರಳವಾದ ಮನೆ ನಕ್ಷೆ ವಿನ್ಯಾಸದ ಉದ್ದೇಶ. ಇದು ನಿರ್ಮಾಣ ಪ್ರಕ್ರಿಯೆಯನ್ನು ಸುಗಮವಾಗಿಸುವುದು ಮಾತ್ರವಲ್ಲದೆ ಮೌಲ್ಯಕ್ಕೆ ತಕ್ಕಂತೆ ಬೆಲೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

 

3) ಅತಿಯಾದ ಗೊಂದಲಗಳನ್ನು ತಪ್ಪಿಸಿ

ನೆನಪಿಡಿ, ಸಂಕೀರ್ಣ ವಿನ್ಯಾಸವು ಹೆಚ್ಚಿನ ವೆಚ್ಚಗಳು ಮತ್ತು ನಿರ್ಮಾಣ ಸವಾಲುಗಳಿಗೆ ಕಾರಣವಾಗಬಹುದು.  ಕ್ರಿಯಾತ್ಮಕತೆ ಮತ್ತು ಬಜೆಟ್ ನಡುವಿನ ಉತ್ತಮ ಸಮತೋಲನಕ್ಕಾಗಿ ಅದನ್ನು ಸರಳವಾಗಿ ಇರಿಸಿ.

 

4) ವೃತ್ತಿಪರತೆಯ ಸಹಾಯವನ್ನು ಪರಿಗಣಿಸಿ

ವಾಸ್ತುಶಿಲ್ಪಿಗಳು ಅಥವಾ ವಿನ್ಯಾಸ ವೃತ್ತಿಪರರೊಂದಿಗೆ ತೊಡಗಿಸಿಕೊಳ್ಳಿ, ಅವರು ನಿಮ್ಮ ಕನಸನ್ನು ಅರ್ಥಮಾಡಿಕೊಂಡು ಮತ್ತು ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವ ಪ್ರಾಯೋಗಿಕ, ಸರಳವಾದ ಮನೆ ನಕ್ಷೆ ತಯಾರಿಸುತ್ತಾರೆ.

 

5) ಮೌಲ್ಯಕ್ಕೆ ತಕ್ಕ ಬೆಲೆ

ಅಲ್ಪಾವಧಿಯಲ್ಲಿ ಮಾತ್ರವಲ್ಲದೆ ದೀರ್ಘಾಕಾಲದಲ್ಲಿಯೂ ಮಿತವ್ಯಯದ ವಿನ್ಯಾಸಗಳಿಗೆ ಮಹತ್ವಕೊಡಿ. ಇದು ಶಕ್ತಿಯ ದಕ್ಷತೆ ಮತ್ತು ನಿರ್ವಹಣಾ ವೆಚ್ಚಗಳನ್ನು ಕಂಡುಕೊಳ್ಳುವುದನ್ನು ಒಳಗೊಂಡಿರುತ್ತದೆ.

 

6) ಸುಲಭ ನಿರ್ಮಾಣ

ಅನಗತ್ಯ ತೊಡಕುಗಳಿಲ್ಲದೆ ಬಿಲ್ಡರ್‌ಗಳು ಕಾರ್ಯಗತಗೊಳಿಸಬಹುದಾದ ವಿನ್ಯಾಸಗಳನ್ನು ಆಯ್ಕೆ ಮಾಡಿ. ಹೀಗೆ ಆಯ್ಕೆ ಮಾಡಿದಲ್ಲಿ ಅನಗತ್ಯವಾಗಿ ತಡವಾಗುವುದನ್ನು ತಪ್ಪಿಸುತ್ತದೆ ಮತ್ತು ಕಾರ್ಮಿಕ ವ್ಯಯಿಸುವ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

 

ಈ ವಿಷಯಗಳ ಮೇಲೆ ಗಮನ ಕೊಡುವ ಮೂಲಕ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಮತ್ತು ಅವುಗಳಿಗೆ ಅನುಗುಣವಾಗಿ ಸರಳ, ಕ್ರಿಯಾತ್ಮಕ ಮತ್ತು ಪರಿಣಾಮಕಾರಿ ಮನೆ ನಕ್ಷೆ ವಿನ್ಯಾಸವನ್ನು ನೀವು ಪಡೆಯಬಹುದು.



ಇವು ನೀವು ಆಯ್ಕೆಮಾಡಬಹುದಾದ ಸರಳ ಮನೆ ನಕ್ಷೆ ವಿನ್ಯಾಸಗಳಿಗೆ ಕೆಲವು ಉದಾಹರಣೆಗಳಾಗಿವೆ. ನೆನಪಿಡಿ, ನಿಮಗಾಗಿ ಉತ್ತಮ ವಿನ್ಯಾಸವು ಕೇವಲ ಈಗ ಮಾತ್ರ ನಿಮ್ಮ ಅಗತ್ಯಗಳನ್ನು ಪೂರೈಸುವುದು ಮಾತ್ರವಲ್ಲದೆಯೇ ಭವಿಷ್ಯದಲ್ಲಿಯೂ ನಿಮ್ಮ ಜೀವನಶೈಲಿ ಮತ್ತು ಅವಶ್ಯಕತೆಗಳನ್ನು ಪೂರೈಸುತ್ತದೆ. ವಿನ್ಯಾಸವನ್ನು ನಿರ್ಧರಿಸುವ ಮೊದಲು ನಿಮ್ಮ ಕುಟುಂಬದ ಗಾತ್ರ, ಪ್ಲಾಟಿನ ಭೌಗೋಳಿಕ ಸ್ಥಳ, ನಿಮ್ಮ ಬಜೆಟ್ ಮತ್ತು ನಿಮ್ಮ ವೈಯಕ್ತಿಕ ಆದ್ಯತೆಗಳನ್ನು ಮೊದಲೇ ಪರಿಗಣಿಸಿರಿ. ನೆಮ್ಮದಿಯ ಮನೆಯ ಯೋಜನೆ!



ಸಂಬಂಧಿತ ಲೇಖನಗಳು


ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....