ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಉತ್ತರಕ್ಕೆ ಮುಖ ಮಾಡಿರುವ ಮನೆ ವಾಸ್ತು: ಮಹತ್ವ ಮತ್ತು ವಿನ್ಯಾಸದ ಕುರಿತು ಸಲಹೆಗಳು

ಪಾಸಿಟಿವ್ ಎನರ್ಜಿಯ ಹರಿವಿಗಾಗಿ 30x30 ರಿಂದ 40x50 ಅಳತೆಯ ಪ್ಲಾಟ್​​ನ ಗಾತ್ರವನ್ನು ಉತ್ತಮಗೊಳಿಸುವುದರಿಂದ ಹಿಡಿದು ಆಯಕಟ್ಟಿನ ಕೋಣೆಯ ನಿಯೋಜನೆ ಮತ್ತು ಸಾಮಾನ್ಯ ವಿನ್ಯಾಸದ ದೋಷಗಳನ್ನು ನಿಭಾಯಿಸುವವರೆಗೆ, ಈ ಉತ್ತರ ದಿಕ್ಕಿನ ಮನೆ ವಾಸ್ತು ಸಲಹೆಗಳೊಂದಿಗೆ ನಿಮ್ಮ ವಾಸಸ್ಥಳವನ್ನು ಪರಿವರ್ತಿಸಿ.

Share:


ವಾಸ್ತು ಶಾಸ್ತ್ರ, ವಾಸ್ತುಶಿಲ್ಪ ಮತ್ತು ಆಕಾಶದ ಪ್ರಾಚೀನ ಭಾರತೀಯ ವಿಜ್ಞಾನ, ನೈಸರ್ಗಿಕ ಶಕ್ತಿಗಳೊಂದಿಗೆ ಸಾಮರಸ್ಯದಿಂದ ಮನೆಗಳನ್ನು ವಿನ್ಯಾಸಗೊಳಿಸಲು ಮಾರ್ಗಸೂಚಿಗಳನ್ನು ಒದಗಿಸುತ್ತದೆ. ವಾಸ್ತುವಿನ ಪ್ರಮುಖ ಅಂಶವೆಂದರೆ ಮನೆಯಲ್ಲಿ ಹೊಸದಾಗಿ ಹೊಮದಾಣಿಗೆ ಮಾಡುವುದು ಮತ್ತು ಉತ್ತರಾಭಿಮುಖವಾಗಿರುವ ಆಸ್ತಿಗಳನ್ನು ವಿಶೇಷವಾಗಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಈ ಬ್ಲಾಗ್‌ನಲ್ಲಿ, ಉತ್ತರ ದಿಕ್ಕಿನ ಮನೆ ವಾಸ್ತುವಿನ ಮಹತ್ವವನ್ನು ನಾವು ಅನ್ವೇಷಿಸುತ್ತೇವೆ. ಜೊತೆಗೆ ಅವುಗಳ ವಾಸ್ತು ಉಪಯೋಗಗಳನ್ನು ಪಡೆಯುವಂತೆ ಪ್ಲಾನ್ ಮಾಡಲು ಸಲಹೆಗಳನ್ನು ನೀಡುತ್ತೇವೆ.

 

 



ಪ್ರಮುಖಾಂಶಗಳು

 

  • ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆಗಳನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಉತ್ತರ ಧ್ರುವದಿಂದ ಕಾಂತೀಯ ಶಕ್ತಿಯೊಂದಿಗೆ ಅವುಗಳ ಜೋಡಣೆಯಿಂದಾಗಿ ಸಮೃದ್ಧಿ ಮತ್ತು ಏಳಿಗೆಯನ್ನು ಹೆಚ್ಚಿಸುತ್ತವೆ.

 

  • ಪ್ರತಿಯೊಂದು ರೂಮ್​ ಕೂಡ ಸೂಕ್ತವಾದ ಸ್ಥಳವನ್ನು ಹೊಂದಿದೆ. ಸಾಮಾಜಿಕ ಸಾಮರಸ್ಯಕ್ಕಾಗಿ ಮನೆಯ ಈಶಾನ್ಯದಲ್ಲಿ ಲಿವಿಂಗ್ ರೂಮ್​ಗಳನ್ನು, ಅಗ್ನಿಯ ಅಂಶವನ್ನು ಬಳಸಿಕೊಳ್ಳಲು ಆಗ್ನೇಯದಲ್ಲಿ ಅಡುಗೆ ಮನೆ ಮತ್ತು ಶಾಂತಿ ಮತ್ತು ಸ್ಥಿರತೆಗಾಗಿ ದಕ್ಷಿಣ ಅಥವಾ ನೈಋತ್ಯದಲ್ಲಿ ಬೆಡ್​ರೂಮ್​ಗಳನ್ನು ಮಾಡಬೇಕು.

 

  • ವಾಸ್ತು ಪ್ರಕಾರ ಶಿಫಾರಸು ಮಾಡಿದ ಹೊಂದಿಕೊಳ್ಳುವ ಹಾಗೂ ಸಜೀವ ಬಣ್ಣಗಳು (ಪ್ರವೇಶಗಳಿಗೆ ಹಸಿರು ಮತ್ತು ಮಲಗುವ ಕೋಣೆಗಳಿಗೆ ಮಣ್ಣಿನ ಟೋನ್​ಗಳಂತಹವು), ಮನೆಯೊಳಗೆ ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸಬಹುದು.

 

  • ಉತ್ತರ ದಿಕ್ಕಿನ ಮನೆಯ ಪ್ಲಾನ್​ಗಾಗಿ, ಮೇನ್ ಡೋರ್ ಅಥವಾ ಅಡುಗೆಮನೆಯ ಸ್ಥಾನವನ್ನು ಬದಲಾಯಿಸುವುದು, ಮುಖ್ಯ ಎಂಟ್ರನ್ಸ್​ ಬದಲಾಯಿಸುವುದು ಮತ್ತು ಗೋಡೆಗಳಿಗೆ ಸರಿಯಾದ ಬಣ್ಣಗಳನ್ನು ಮತ್ತೆ ಬಳಿಯುವುದು ಮುಂತಾದ ಸರಳ ಬದಲಾವಣೆಗಳ ಮೂಲಕ ಮನೆಯನ್ನು ವಾಸ್ತು ಪ್ರಕಾರ ಸಾಕಷ್ಟು ಸುಧಾರಿಸಬಹುದು.

 

  • ಸಣ್ಣ 30x30 ಅಳತೆಯ ಪ್ಲಾಟ್ ಅಥವಾ ದೊಡ್ಡ 40x50 ಅಳತೆಯ ಪ್ಲಾಟ್​ನಲ್ಲಿ ನಿರ್ಮಾಣ ಮಾಡುತ್ತಿರಲಿ, ವಾಸ್ತು ತತ್ವಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಿಂದ ಪಾಸಿಟಿವ್ ಎನರ್ಜಿಯ ಹರಿವು ಮತ್ತು ಪ್ಲಾಟ್ ಜಾಗೆಯ ಬಳಕೆಯನ್ನು ಹೆಚ್ಚು ಮಾಡಿಕೊಳ್ಳಬಹುದು. ವಿವಿಧ ಅಳತೆಯ ಪ್ಲಾಟ್​ಗಳಿಗೆ ಸೂಕ್ತವಾದ ಸಲಹೆಯನ್ನು ವಾಸ್ತು ಒದಗಿಸುತ್ತದೆ.

ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆ ವಾಸ್ತುವಿನ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ, ಉತ್ತರವು ಸಂಪತ್ತಿನ ಒಡೆಯನಾದ ಕುಬೇರನ ದಿಕ್ಕು. ಹೀಗಾಗಿ ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆಗಳು ಸಮೃದ್ಧಿ ಮತ್ತು ಏಳಿಗೆಯನ್ನು ಹೊಂದುತ್ತವೆ ಎಂಬ ನಂಬಿಕೆಯಿದೆ.  ಉತ್ತರ ಧ್ರುವದಿಂದ ಹೊರಹೊಮ್ಮುವ ಕಾಂತೀಯ ಶಕ್ತಿಯು ಮನೆಯೊಳಗೆ ಪಾಸಿಟಿವಿಟಿ ಹಾಗೂ ಎನರ್ಜಿಯನ್ನು ಹೊಂದಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಈ ಕಾರಣಗಳಿಗಾಗಿ, ಅನೇಕ ಜನರು ತಮ್ಮ ಮನೆಗೆ ಉತ್ತರ ದಿಕ್ಕಿನ ಮನೆ ಕಟ್ಟುವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.


ಉತ್ತರ ದಿಕ್ಕಿನ ಮನೆ ವಾಸ್ತು ಟಿಪ್ಸ್

 

1) ಎಂಟ್ರನ್ಸ್​



ಮನೆಗೆ ಶಕ್ತಿಯ ಹೆಬ್ಬಾಗಿಲು, ಉತ್ತರ ದಿಕ್ಕಿಗೆ ಮುಖ ಮಾಡಿರುವ ಮನೆಯ ಎಂಟ್ರನ್ಸ್​ ವಾಸ್ತು ಪ್ರಕಾರ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು.  ಪಾಸಿಟಿವ್ ಎನರ್ಜಿಯನ್ನು ಮನೆಯೊಳಗೆ ಮುಕ್ತವಾಗಿ ಹರಿಯುವಂತೆ ಮಾಡುವ ಅತ್ಯಂತ ಮಂಗಳಕರ ತಾಣವೆಂದು ಇದನ್ನು ಪರಿಗಣಿಸಲಾಗಿದೆ. ಬಣ್ಣಗಳ ವಿಷಯದಲ್ಲಿ, ಹಸಿರು ಅಥವಾ ನೀಲಿ ಬಣ್ಣಗಳಂತಹ ರೋಮಾಂಚಕ ಬಣ್ಣಗಳನ್ನು ಬಳಸುವುದರಿಂದ ಪ್ರವೇಶದ್ವಾರದ ಮಂಗಳವನ್ನು ಹೆಚ್ಚಿಸಬಹುದು.

 

2) ಲಿವಿಂಗ್ ರೂಮ್



ಈಶಾನ್ಯ ಮೂಲೆಯು ಉತ್ತರ ದಿಕ್ಕಿನ ಮನೆಯಲ್ಲಿ ಲಿವಿಂಗ್​ ರೂಮ್​ ಮಾಡಲು ಉತ್ತಮ ಸ್ಥಳವಾಗಿದೆ. ಯಾಕೆಂದರೆ ಈ ದಿಕ್ಕು ಮಾನಸಿಕ ಸ್ಪಷ್ಟತೆ ಮತ್ತು ಸಾಮಾಜಿಕ ಸಭೆಗಳಿಗೆ ಸಂಬಂಧಿಸಿದೆ.  ಉತ್ತರ ದಿಕ್ಕಿನ ಮನೆ ವಾಸ್ತುದಲ್ಲಿ ಸ್ಥಿರತೆಯನ್ನು ಹೆಚ್ಚಿಸಲು ಮತ್ತು ವಾಸಿಸುವ ಜಾಗೆಯ ಬಳಕೆಯನ್ನು ಹೆಚ್ಚಿಸಲು ಪೀಠೋಪಕರಣಗಳನ್ನು ರೂಮ್​ನ ಪಶ್ಚಿಮ ಅಥವಾ ನೈಋತ್ಯ ಮೂಲೆಯಲ್ಲಿ ಇಡಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ. ಸೌಮ್ಯವಾದ ನೀಲಿಬಣ್ಣದ ಮತ್ತು ಮಣ್ಣಿನ ಅನುಭವ ಕೊಡುವ ಸಮಾನವಾದ, ಸಾಮರಸ್ಯದ ವಾತಾರವಣವನ್ನು ಕೊಡುತ್ತವೆ. 

 

3) ಅಡುಗೆ ಮನೆ



ಆಗ್ನೇಯ ಮೂಲೆಯು ಅಡುಗೆ ಮನೆಗೆ ಸೂಕ್ತವಾಗಿದೆ, ಏಕೆಂದರೆ ಇದು ಅಗ್ನಿ ಅಥವಾ ಬೆಂಕಿಯ ಭಾಗವಾಗಿದೆ. ಅಡುಗೆ ಮಾಡುವಾಗ, ಅಡುಗೆ ಮಾಡುವವರು ತಕ್ಕಮಟ್ಟಿನ ಹೆಚ್ಚು ಪ್ರಯೋಜನಕ್ಕಾಗಿ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಪ್ರಿಡ್ಜ್​ನ ನಿಯೋಜನೆಯು ನೈಋತ್ಯದಲ್ಲಿರಬೇಕು; ಸಿಂಕ್ ಮತ್ತು ಸ್ಟೋವ್​ಗಳನ್ನು​ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಇಟ್ಟಿರಬೇಕು.  ಬೆಂಕಿಯ ಅಂಶವನ್ನು ತೋರಿಸುವಂತಹ ಹಳದಿ, ಕಿತ್ತಳೆ ಅಥವಾ ಕೆಂಪು ಬಣ್ಣಗಳಂತಹ ಗಾಢವಾದ ಬಣ್ಣಗಳನ್ನು ಬಳಸಿ.

 

4) ಬೆಡ್​ ರೂಮ್​



ಶಾಂತಿ ಮತ್ತು ಗ್ರೌಂಡಿಂಗ್​ ಅನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಮಲಗುವ ಕೋಣೆ ಆದರ್ಶಪ್ರಾಯವಾಗಿ ದಕ್ಷಿಣ ಅಥವಾ ನೈಋತ್ಯ ದಿಕ್ಕಿನಲ್ಲಿರಬೇಕು. ಮಲಗುವ ಸಮಯದಲ್ಲಿ, ವಾಸಮಾಡುವವರು ದಕ್ಷಿಣ ದಿಕ್ಕಿನೆಡೆಗೆ ತಲೆ ಮಾಡಿ ಮಲಗುವಂತೆ ಹಾಸಿಗೆಯನ್ನು ಹಅಸಬೇಕು. ವಿಶಿಷ್ಟವಾಗಿ ಮನೆಯ ಯೋಜನೆಯಲ್ಲಿ ಉತ್ತರಕ್ಕೆ ಮುಖ ಮಾಡಿರುವ ಮನೆಯ ವಾಸ್ತು, ಬೆಡ್​ ರೂಮ್​ನಲ್ಲಿ ನ್ಯೂಟ್ರಲ್ ಅಥವಾ ಮಣ್ಣಿನಂತಹ ಬಣ್ಣಗಳನ್ನು ಶಾಂತತೆ ಮತ್ತು ಪುನಶ್ಚೈತನಗೊಳಿಸುವ ವಾತಾವರಣ ನಿರ್ಮಿಸುತ್ತವೆ ಎಂದು ಬಳಸಲಾಗುತ್ತದೆ.

 

5) ಬಾತ್​ರೂಮ್ ಮತ್ತು ಟಾಯ್ಲೆಟ್



ಬಾತ್​ರೂಮ್​ ಅಥವಾ ಟಾಯ್ಲೆಟ್​ ಮನೆಯಲ್ಲಿ ಪಶ್ಚಿಮ ಅಥವಾ ವಾಯುವ್ಯ ಭಾಗದಲ್ಲಿರಬೇಕು. ಆದರೆ ಅದು ನೇರವಾಗಿ ಈಶಾನ್ಯ ಮೂಲೆಯಲ್ಲಿ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾಕೆಂದರೆ ಈಶಾನ್ಯ ಮೂಲೆ ಪಾಸಿಟಿವ್ ಎನರ್ಜಿಯನ್ನು ಒದಗಿಸುತ್ತದೆ. ಡ್ರೈನೇಜ್ ಅಥವಾ ನೀರು ಹೊರಹೋಗಲು ಈಶಾನ್ಯ ದಿಕ್ಕಿನಲ್ಲಿ ವ್ಯವಸ್ಥೆ ಮಾಡಬೇಕು. ಹೀಗೆ ಮಾಡಿದಲ್ಲಿ ಮನೆಯಿಂದ ನೆಗೆಟಿವ್ ಎನರ್ಜಿಯ ಹರಿವನ್ನು ಸರಳವಾಗಿಸುತ್ತದೆ.

 

6) ಗಾರ್ಡನ್​ ಮತ್ತು ಹೊರಾಂಗಣ ಏರಿಯಾ



ಆಸ್ತಿಯ ಈಶಾನ್ಯ ಭಾಗವು ಗಾರ್ಡನ್ ಮಾಡಲು ಪರಿಪೂರ್ಣವಾಗಿದೆ, ಯಾಕೆಂದರೆ ಅದು ಬೆಳಗಿನ ಸೂರ್ಯನ ಎಳೆ ಬಿಸಿಲನ್ನು ತಾಜಾತನದೊಂದಿಗೆ ಮನೆ ಒಳಗೆ ತರಲು ಸಹಾಯ ಮಾಡುತ್ತದೆ. ಅದೃಷ್ಟವನ್ನು ತರುತ್ತದೆ ಎಂದು ನಂಬಲಾದ ತುಳಸಿ ಗಿಡ ಅಥವಾ ಬಿದಿರು ಸಸ್ಯದಂತಹ ವಾಸ್ತು ಸಸ್ಯಗಳನ್ನು ಆಯ್ಕೆಮಾಡಿಕೊಳ್ಳಿ. ಉತ್ತರ ಮತ್ತು ಪೂರ್ವ ದಿಕ್ಕಿನಲ್ಲಿ ದೊಡ್ಡ ಮರಗಳು ಇರದಂತೆ ನೋಡಿಕೊಳ್ಳಿ, ಯಾಕೆಂದರೆ ಅವು ಪಾಸಿಟಿವ್ ಎನರ್ಜಿಯನ್ನು ಬರದಂತೆ ತಡೆಯಬಹುದು.


ಉತ್ತರ ದಿಕ್ಕಿನ ಮನೆಯ ವಾಸ್ತುಗಾಗಿ ಸಾಮಾನ್ಯ ತಪ್ಪುಗಳು ಮತ್ತು ಅವುಗಳನ್ನು ಸರಿಪಡಿಸುವುದು

 

1) ಮೇನ್ ಡೋರ್​ ಸ್ಥಳಾಂತರ

 

ತಪ್ಪು: ಮೇನ್​ ಡೋರ್​ ಅನ್ನು ತಪ್ಪಾದ ಸ್ಥಳದಲ್ಲಿ ಅಥವಾ ತಡೆಯಾಗಿರುವಂತೆ ಅಳವಡಿಸುವುದು.

 

ಸರಿಪಡಿಸುವುದು:  ಕಸಕಡ್ಡಿಯ ಪ್ರದೇಶವನ್ನು ತೆರವುಗೊಳಿಸಿ. ಮೇನ್​ ಡೋರ್​ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ಅಗತ್ಯವಿದ್ದರೆ ಈ ದಿಕ್ಕಿಗೆ ಎಂಟ್ರನ್ಸ್​ ಅನ್ನು ಸ್ಥಳಾಂತರಿಸಿರಿ.

 

2) ನಿರ್ಬಂಧಿಸಿದ ಎಂಟ್ರನ್ಸ್​

 

ತಪ್ಪು: ಭೌತಿಕವಾಗಿ ಅಥವಾ ದೃಷ್ಟಿಗೆ ನಿರ್ಬಂಧಿಸಿದಂತೆ ಕಂಡು ಬರುವ ಎಂಟ್ರನ್ಸ್​.

 

ಸರಿಪಡಿಸುವುದು:  ಮನೆಯೊಳಗೆ ಪಾಸಿಟಿವ್ ಎನರ್ಜಿಯ ಹರಿವನ್ನು ತಡೆಯುವ ಯಾವುದೇ ಅಡೆತಡೆಗಳನ್ನು ನಿವಾರಿಸಿ.

 

3) ಅಡುಗೆ ಮಾಡುವ ಸ್ಥಳ

 

ತಪ್ಪು: ಈಶಾನ್ಯ ದಿಕ್ಕಿನಂತಹ ವಾಸ್ತು ಪ್ರಕಾರ ಇಲ್ಲದ ಪ್ರದೇಶದಲ್ಲಿ ಅಡುಗೆಮನೆಯನ್ನು ಮಾಡಬೇಕು.

 

ಸರಿಪಡಿಸುವುದು:  ಮನೆಯ ಆಗ್ನೇಯ ಭಾಗದೊಂದಿಗೆ ಅಡುಗೆ ಸ್ಥಳವನ್ನು ಹೊಂದಿಸಿ. ಜೊತೆ ಅಡುಗೆ ಮಾಡುವಾಗ ಅಡುಗೆಯವರು ಪೂರ್ವಕ್ಕೆ ಮುಖ ಮಾಡಿ ಅಡುಗೆ ಮಾಡಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಿ.

 

4) ಬಾತ್​ರೂಮ್ ಹಾಗೂ ಟಾಯ್ಲೆಟ್ ಸ್ಥಾನ

 

ತಪ್ಪು: ತಪ್ಪಾಗಿ ಮಾಡಿರುವ ಬಾತ್​ರೂಮ್​ ಹಾಗೂ ಟಾಯ್ಲೆಟ್​ ನೆಗೆಟಿವ್ ಎನರ್ಜಿಯನ್ನು ಬಿಡುಗಡೆ ಮಾಡಬಹುದು.

 

ಸರಿಪಡಿಸುವುದು:  ಪಾಸಿಟಿವಿಟಿ ಹರಿವು ಇರುವಂತೆ ಮಾಡಲು ಅವುಗಳನ್ನು ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರುವಂತೆ ವಾಸ್ತುವನ್ನು ಪಾಲಿಸಿರಿ.

 

5) ಬಣ್ಣದ ಪರಿಹಾರಗಳು

 

ತಪ್ಪು: ವಾಸ್ತು ತತ್ವಗಳಿಗೆ ಹೊಂದಿಕೆಯಾಗದ ಬಣ್ಣಗಳನ್ನು ಬಳಸುವುದು.

 

ಸರಿಪಡಿಸುವುದು:  ಪಾಸಿಟಿವ್ ಎನರ್ಜಿಯ ಹರಿವನ್ನು ಹೆಚ್ಚಿಸಲು ವಾಸ್ತು ಶಾಸ್ತ್ರವವು ಶಿಫಾರಸು ಮಾಡುವ ಬಣ್ಣಗಳಾದ ನೀಲಿ ಅಥವಾ ಹಸಿರು ಬಣ್ಣಗಳಿಂದ ಗೋಡೆಗಳನ್ನು ಪೇಂಟ್ ಮಾಡಿ.

 

ಯೋಗ್ಯ ಮಾರ್ಪಾಟುಗಳೊಂದಿಗೆ ಈ ಸಾಮಾನ್ಯ ತಪ್ಪುಗಳನ್ನು ಪರಿಹರಿಸುವ ಮೂಲಕ, ಉತ್ತರ ದಿಕ್ಕಿನ ಮನೆಯ ಪ್ಲಾನ್​ ಹೊಂದಾಣಿಕೆಯ ಜೀವನ ಪರಿಸರಕ್ಕಾಗಿ ವಾಸ್ತು ತತ್ವಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ.


ವಿಭಿನ್ನ ಅಳತೆಯ ಪ್ಲಾಟ್​​​ಗಳನ್ನು ಪರಿಣಾಮಕಾರಿಯಾಗಿ ಪ್ಲಾನ್ ಮಾಡುವುದು

ನಿಮ್ಮ ಮನೆಯನ್ನು ಉತ್ತರ ದಿಕ್ಕಿನ ಮನೆ ವಾಸ್ತು ತತ್ವಗಳೊಂದಿಗೆ ಹೊಂದಿಬೇಕಾದಾಗ, ನಿಮ್ಮ ಪ್ಲಾಟ್ ವಿಸ್ತೀರ್ಣವು ಜಾಗೆಗಳು ವಿನ್ಯಾಸ ಮತ್ತು ಜೋಡಣೆಯ ಮೇಲೆ ಬಹಳಷ್ಟು ಪ್ರಭಾವ ಬೀರುತ್ತದೆ. ವಾಸ್ತು ಶಾಸ್ತ್ರವನ್ನು ಅನುಸರಿಸುವಾಗ ವಿಭಿನ್ನ ಪ್ಲಾಟ್​ಗಳ ಅಳತೆಯನ್ನು ಪರಿಣಾಮಕಾರಿಯಾಗಿ ಯೋಜಿಸುವುದು ಹೇಗೆ ಎಂಬುದು ಇಲ್ಲಿದೆ:

 

1) ಸಾಮಾನ್ಯವಾಗಿರುವ ಉತ್ತರಕ್ಕೆ ಮುಖ ಮಾಡಿರುವ ಮನೆ ಕಟ್ಟಲು ಪಾಲಿಸಬೇಕಾದವು

ಪ್ಲಾಟ್​ನ ಅಳತೆಯನ್ನು ನೋಡದೆಯೇ, ಉತ್ತರಕ್ಕೆ ಮುಖ ಮಾಡಿರುವ ವಾಸ್ತುವಿನ ಮನೆಯ ಯೋಜನೆಯು ಮೂಲವಾಗಿ ಎಂಟ್ರನ್ಸ್​ ಮೇಲೆ ಕೇಂದ್ರೀಕರಿಸಬೇಕು. ಇದು ಧನಾತ್ಮಕ ಬದಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ, ಮೇಲಾಗಿ ಈಶಾನ್ಯ ವಲಯದಲ್ಲಿ.

 

2) ಪ್ರಮಾಣಿತ ಗಾತ್ರಗಳಲ್ಲಿ ದಕ್ಷತೆ

ಪ್ರಮಾಣಿತ 30x40 ಅಳತೆಯ ಮನೆ ಯೋಜನೆಗೆ ಉತ್ತರ ದಿಕ್ಕಿಗೆ ಮುಖ ಮಾಡಿ, ಜಾಗದ ಸಮರ್ಥ ಬಳಕೆ ಪ್ರಮುಖವಾಗಿದೆ. ವಿನ್ಯಾಸವು ಈಶಾನ್ಯದಲ್ಲಿ ಚೆನ್ನಾಗಿ ಬೆಳಗಿದ ವಾಸದ ಪ್ರದೇಶ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಬೆಡ್​ ರೂಮ್​ಗಳು ಮತ್ತು ಖಾಲಿ ಜಾಗವನ್ನು ತಪ್ಪಿಸಲು ಕನಿಷ್ಠ ಪಡಸಾಲೆಗಳನ್ನು ಒಳಗೊಂಡಿರಬೇಕು. 

 

3) ವಿಶಾಲವಾದ ಪ್ಲಾಟ್​ ಡಿಸೈನ್​ ಮಾಡುವುದು

40x50 ಅಳತೆಯ ಮನೆಯ ಪ್ಲಾನ್​ ಉತ್ತರಕ್ಕೆ ದಿಕ್ಕಿಗೆ ಮುಖ ಮಾಡಿರುವ ಪ್ಲಾಟ್​ನ ಸಂಕೀರ್ಣ ವಿನ್ಯಾಸದ ಅಂಶಗಳಿಗೆ ಹೆಚ್ಚಿನ ಸ್ಥಳವನ್ನು ಒದಗಿಸುತ್ತದೆ. ನೈಋತ್ಯದಲ್ಲಿ ಭಾರವಾದ ಸ್ಟ್ರಕ್ಚರ್​ಗಳನ್ನುಇಡುವಾಗ ಈಶಾನ್ಯದಲ್ಲಿ ವಿಸ್ತಾರವಾದ ಕೈತೋಟ ಅಥವಾ ಗಾರ್ಡನ್​ಗಳಿಗೆ ಅವಕಾಶ ಕಲ್ಪಿಸುವ ಮೂಲಕ ಮನೆಯನ್ನು ಪರಿಣಾಮಕಾರಿಯಾಗಿ ವಿಭಾಗಿಸಲು ವಾಸ್ತುವನ್ನು ಬಳಸಬಹುದು.

 

4) ಸಣ್ಣ ಪ್ಲಾಟ್ ಅಳವಡಿಕೆಗಳು

ಕಾಂಪ್ಯಾಕ್ಟ್ 30x30 ಮನೆ ಯೋಜನೆಗಳು ಮತ್ತು ಉತ್ತರ-ಮುಖದ ಪ್ಲಾಟ್‌ಗಳಲ್ಲಿ, ಬಾಹ್ಯಾಕಾಶ ಉಪಯುಕ್ತತೆಯನ್ನು ಹೆಚ್ಚಿಸುವ ವಾಸ್ತು ಅಂಶಗಳ ಮೇಲೆ ಕೇಂದ್ರೀಕರಿಸಲಾಗುತ್ತದೆ. ಧನಾತ್ಮಕತೆಯನ್ನು ಹೆಚ್ಚಿಸಲು ಧ್ಯಾನ ಅಥವಾ ಪೂಜಾ ಕೊಠಡಿಗಳಿಗೆ ಈಶಾನ್ಯ ಮೂಲೆಯನ್ನು ಆಪ್ಟಿಮೈಸ್ ಮಾಡಿ ಮತ್ತು ಬಹು-ಕ್ರಿಯಾತ್ಮಕ ಪೀಠೋಪಕರಣಗಳನ್ನು ಪರಿಗಣಿಸಿ.

 

5) ಉತ್ತರ ದಿಕ್ಕಿನ ಮನೆ ವಾಸ್ತು ಯೋಜನೆಗೆ 30x40 ಅಳತೆಯ ಬ್ಲೂಪ್ರಿಂಟ್

ಉತ್ತರ ದಿಕ್ಕಿನ ವಾಸ್ತುವಿನ ಈ ಮನೆಯ ಪ್ಲಾನ್ ಸಮತೋಲಿತ ವಾಸ್ತು ವಿನ್ಯಾಸಕ್ಕೆ ಸಾಕಷ್ಟು ಅವಕಾಶವನ್ನು ನೀಡುತ್ತದೆ. ನೀವು ಉತ್ತರದಲ್ಲಿ ಸ್ವಾಗತಿಸುವ ಎಂಟ್ರನ್ಸ್​ ಅಳವಡಿಸಬಹುದು. ವಾಸ್ತು ಮಾರ್ಗಸೂಚಿಗಳ ಪ್ರಕಾರ ಲಿವಿಂಗ್ ರೂಮ್​ ಮತ್ತು ಮಲಗುವುದಕ್ಕೆ ಜಾಗೆಯನ್ನು ಕೊಡಬಹುದು. ಜೊತೆಗೆ ಅತ್ಯುತ್ತಮ ಶಕ್ತಿಯ ಹರಿವಿಗಾಗಿ ಆಗ್ನೇಯದಲ್ಲಿ ಅಡುಗೆಮನೆಯನ್ನು ಮಾಡಬಹುದು.




ಕೊನೆಯಲ್ಲಿ, ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಉತ್ತರಕ್ಕೆ ಮಖ ಮಾಡಿರುವ ಮನೆಯನ್ನು ಹೊಂದಿಸುವುದು ಸಕಾರಾತ್ಮಕತೆ, ಸಾಮರಸ್ಯ ಮತ್ತು ಏಳಿಗೆಯನ್ನು ಒದಗಿಸುವ ವಾಸದ ಸ್ಥಳವನ್ನು ರಚಿಸುವತ್ತ ಒಂದು ಹೆಜ್ಜೆಯಾಗಿದೆ. ಈ ಉತ್ತರಾಭಿಮುಖ ಮನೆ ವಾಸ್ತು ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಯಾವುದೇ ತಪ್ಪುಗಳನ್ನು ತಪ್ಪಿಸುವ ಮೂಲಕ ನಿಮ್ಮ ಮನೆಯನ್ನು ಪಾಸಿಟಿವ್ ಎನರ್ಜಿಯಿಂದ ತುಂಬಿದ ಜಾಗವಾಗಿ ಪರಿವರ್ತಿಸಬಹುದು. ಜೊತೆಗೆ ಪ್ರತಿ ಜಾಗವು ಸೌಖ್ಯವನ್ನು ಕೊಡುವ ಭರವಸೆಯನ್ನು ಒದಗಿಸುತ್ತದೆ.



ಸಂಬಂಧಿತ ಲೇಖನಗಳು


ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....