ಬಣ್ಣದ ಮೇಲೆ ಬಬ್ಲಿಂಗ್ ಅನ್ನು ಚಿತ್ರಿಸಿದ ಗೋಡೆಯ ಸಮಗ್ರತೆಯನ್ನು ರಾಜಿ ಮಾಡುವ ಹಲವಾರು ಅಂಶಗಳಿಗೆ ಕಾರಣವೆಂದು ಹೇಳಬಹುದು. ಸಮಸ್ಯೆಯನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈ ಸಮಸ್ಯೆಯ ಹಿಂದಿನ ಕೆಲವು ಸಾಮಾನ್ಯ ಕಾರಣಗಳು ಮತ್ತು ಅವುಗಳನ್ನು ಪರಿಹರಿಸಲು ಪರಿಹಾರಗಳನ್ನು ಅನ್ವೇಷಿಸೋಣ:
1. ಕೊಳಕಾಗಾಗಿರುವ ಪೇಂಟಿಂಗ್ ಮೇಲ್ಮೈ
ಕೊಳಕಾಗಿರುವ ಅಥವಾ ಸರಿಯಾಗಿ ಸ್ವಚ್ಛಗೊಳಿಸದೇ ಇರುವ ಗೋಡೆಯ ಮೇಲೆ ಬಣ್ಣವನ್ನು ಹಚ್ಚುವುದು ಪೇಂಟ್ ಬಬ್ಲಿಂಗ್ ಉಂಟಾಗಲು ಇರುವ ಮೂಲ ಕಾರಣವಾಗಿದೆ. ಬಣ್ಣ ಬಳಿಯಬೇಕಾಗಿರುವ ಮೇಲ್ಮೈ ಧೂಳು, ಕೊಳೆ, ಗ್ರೀಸ್ ಅಥವಾ ಇತರ ವಸ್ತುಗಳಿಂದ ಕೂಡಿರುವುದು ಬಣ್ಣವು ಸರಿಯಾಗಿ ಅಂಟಿಕೊಳ್ಳದಂತೆ ತಡೆಯುತ್ತದೆ. ಅದರ ಪರಿಣಾಮವಾಗಿ, ಬಣ್ಣವು ಒಣಗಿದಂತೆ ಗುಳ್ಳೆಗಳು ಅಥವಾ ಹಕ್ಕಳೆಯು ರೂಪುಗೊಳ್ಳಬಹುದು.
ಈ ಸಮಸ್ಯೆಗೆ ಪರಿಹಾರ
ಈ ಸಮಸ್ಯೆ ಉಂಟಾಗದಂತೆ ಮಾಡಲು, ಬಣ್ಣ ಬಳಿಯುವುದನ್ನು ಆರಂಭಿಸುವುದಕ್ಕೂ ಮುಂಚಿತವಾಗಿ ಗೋಡೆಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಮತ್ತು ಸಿದ್ಧಪಡಿಸುವುದು ಅತ್ಯಗತ್ಯ. ಸ್ಕ್ರಾಪರ್ ಅಥವಾ ಮರಳು ಕಾಗದವನ್ನು ಬಳಸಿಕೊಂಡು ಹಕ್ಕಳೆ, ಹೊಸಲನ್ನು ಸಂಪೂರ್ಣವಾಗಿ ತೆಗೆದುಹಾಕಿರಿ. ನಂತರ, ಧೂಳು, ಗ್ರೀಸ್ ಮತ್ತು ಇತರ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ಸಾಬೂನಿನ ದ್ರಾವಣದಂತಹ ಅಥವಾ ಗೋಡೆ ಸ್ವಚ್ಛಗೊಳಿಸಲೆಂದೇ ಇರುವ ವಿಶೇಷ ವಾಲ್ ಕ್ಲೀನರ್ ಜೊತೆಗೆ ಗೋಡೆಗಳನ್ನು ತೊಳೆಯಿರಿ. ಹೀಗೆ ಸ್ವಚ್ಛಗೊಳಿಸಿದ ಮೇಲ್ಮೈಯನ್ನು ಬಣ್ಣ ಹಚ್ಚುವ ಮೊದಲು ಮೊದಲು ಅದನ್ನು ಸಂಪೂರ್ಣವಾಗಿ ಒಣಗಲು ಬಿಡಿ.
2. ಪ್ರೈಮರ್ ಬಳಕೆಯನ್ನು ಮಾಡದಿರುವುದು
ಗೋಡೆಯ ಮೇಲ್ಮೈ ಮತ್ತು ಬಣ್ಣ, ಇವುಗಳನ್ನು ಅಂಟಿಸುವ ಮಹತ್ವದ ಏಜೆಂಟ್ ಆಗಿ ಪ್ರೈಮರ್ ಕೆಲಸ ಮಾಡುತ್ತದೆ. ಅದರೊಂದಿಗೆ ಗೋಡೆಗೆ ಬಣ್ಣವು ಸರಿಯಾಗಿ ಬಣ್ಣ ಅಂಟಿಕೊಳ್ಳಲು ಪ್ರೈಮರ್ ಸಹಾಯ ಮಾಡುತ್ತದೆ. ಇಷ್ಟೇ ಅಲ್ಲದೆ ಗೋಡೆಗಳ ಮೇಲೆ ಪೇಂಟ್ ಬಬ್ಲಿಂಗ್ ಏಳುವ ಸಾಧ್ಯತೆಯನ್ನು ಕೂಡ ಈ ಪ್ರೈಮರ್ ಕಡಿಮೆ ಮಾಡುತ್ತದೆ. ಪ್ರೈಮರ್ ಅನ್ನು ಬಳಕೆ ಮಾಡದಿರುವುದು, ಪ್ರಮುಖವಾಗಿ ಸೋರುವ ಅಥವಾ ಬಣ್ಣ ಹಚ್ಚದಿರುವ ಸ್ಥಳಗಳಲ್ಲಿ ಬಬ್ಲಿಂಗ್ಗೆ ಕಾರಣವಾಗಬಹುದು.
ಇದಕ್ಕೆ ಪರಿಹಾರ
ಪೇಂಟಿಂಗ್ ಮಾಡುವ ಮೊದಲು, ಮೇಲ್ಮೈಗೆ ಸೂಕ್ತವಾದ ಪ್ರೈಮರ್ ಅನ್ನು ಅನ್ವಯಿಸಲು ಖಚಿತಪಡಿಸಿಕೊಳ್ಳಿ. ಪ್ರೈಮರ್ ಏಕರೂಪದ ಮತ್ತು ಸ್ಥಿರವಾದ ನೆಲೆಯನ್ನು ಸೃಷ್ಟಿಸುತ್ತದೆ, ಬಣ್ಣದ ಅಂಟಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಗುಳ್ಳೆಗಳನ್ನು ತಡೆಯುತ್ತದೆ. ಮೇಲ್ಮೈ ವಸ್ತು ಮತ್ತು ನೀವು ಬಳಸಲು ಉದ್ದೇಶಿಸಿರುವ ಬಣ್ಣದ ಪ್ರಕಾರ ಎರಡಕ್ಕೂ ಹೊಂದಿಕೆಯಾಗುವ ಪ್ರೈಮರ್ ಅನ್ನು ಆರಿಸಿ.
3. ತೇವಾಂಶವಿರುವ ಮೇಲ್ಮೈಯಲ್ಲಿ ಬಣ್ಣ ಹಚ್ಚುವುದು
ತೇವಾಂಶ ಇರುವ ಮೇಲ್ಮೈಯಲ್ಲಿ ಬಣ್ಣ ಬಳಿಯುವುದು ಪೇಂಟ್ ಬಬ್ಲಿಂಗ್ ಉಂಟಾಗಲು ಪ್ರಮುಖ ಕಾರಣವಾಗಿದೆ. ನೀರು ಅಥವಾ ಹೆಚ್ಚಿನ ತೇವಾಂಶ ಗೋಡೆ ಮೇಲ್ಮೈಯಲ್ಲಿರುವುದರಿಂದ ಪೇಂಟ್ ಸರಿಯಾಗಿ ಅಂಟಿಕೊಳ್ಳದೆ ಪದರಿನ ಅಡಿಯಲ್ಲಿ ಉಳಿಯಬಹುದು. ನಂತರ ತೇವಾಂಶವು ಆವಿಯಾಗಿ ಒಣಗಿ ಹೋಗಿ ನೀರಿನಂಶ ಕಡಿಮೆಯಾಗುತ್ತದೆ. ಆಗ ತೇವಾಂಶವಿದ್ದ ಸ್ಥಳಗಳಲ್ಲಿ ಬಣ್ಣದ ಗುಳ್ಳೆಗಳು ಅಥವಾ ಹಕ್ಕಳೆ ಉಂಟಾಗುತ್ತದೆ.
ಈ ಸಮಸ್ಯೆಗೆ ಪರಿಹಾರ
ಗೋಡೆಗಳ ಮೇಲ್ಮೈ ಹಸಿಯಾಗಿರುವ ಕಾರಣದಿಂದ ಉಂಟಾಗುವ ಪೇಂಟ್ ಬಬ್ಲಿಂಗ್ ಸಮಸ್ಯೆಯನ್ನು ಪರಿಹರಿಸಲು, ತೇವಾಂಶದ ಮೂಲವನ್ನು ಗುರುತಿಸುವ ಮೂಲಕ ಪರಿಹರಿಸುವುದು ಮುಖ್ಯವಾಗಿದೆ. ಪಂಬ್ಲಿಂಗ್ ವ್ಯವಸ್ಥೆಯಲ್ಲಿ ಸೋರಿಕೆ, ಛಾವಣಿಯು ಸೋರುವುದು ಅಥವಾ ಯಾವುದೇ ನೀರಿನ ಸೋರಿಕೆಯ ಸಮಸ್ಯೆಯ ಪ್ರದೇಶವನ್ನು ಪರೀಕ್ಷಿಸಿ. ಇಂತಹ ಸೋರಿಕೆಯನ್ನು ಸರಿಪಡಿಸಿ ಮತ್ತು ಬಾತ್‌ರೂಮ್ ಮತ್ತು ಅಡಿಗೆಮನೆಗಳಂತಹ ಹೆಚ್ಚಿನ ತೇವಾಂಶಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಸರಿಯಾಗಿ ಗಾಳಿ ಆಡುವುದನ್ನು ಖಚಿತಪಡಿಸಿಕೊಳ್ಳಿ, ಮೇಲಾಗಿ, ಬಣ್ಣ ಹಚ್ಚುವ ಮೊದಲು ಮೇಲ್ಮೈ ಸಂಪೂರ್ಣವಾಗಿ ಒಣಗಲು ಸಾಕಷ್ಟು ಸಮಯಾವಕಾಶವನ್ನು ನೀಡಿ.
4. ಮನೆಯ ಸುತ್ತಮುತ್ತಲಿನ ಹೆಚ್ಚಿನ ತಾಪಮಾನ
ವಿಪರೀತ ಶಾಖ ಅಥವಾ ಹೆಚ್ಚಿನ ತಾಪಮಾನವು ಬಣ್ಣವನ್ನು ಒಣಗಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ. ಇದು ಗುಳ್ಳೆಗಳು ಉಂಟಾಗಲು ಕಾರಣವಾಗುತ್ತದೆ. ಹಚ್ಚಿದ ಬಣ್ಣವು ಬೇಗನೆ ಒಣಗಿದಾಗ, ಬಣ್ಣದ ಪದರಿನೊಳಗಿನ ಸಾಲ್ವೆಂಟ್ ಅಥವಾ ತೇವಾಂಶವು ಹೊರಗೆ ಹೋಗಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ, ಇದರಿಂದಾಗಿಯೂ ಗುಳ್ಳೆಗಳು ಉಂಟಾಗುತ್ತವೆ.
ಈ ಸಮಸ್ಯೆಗೆ ಪರಿಹಾರ
ಹೆಚ್ಚಿನ ತಾಪಮಾನದಿಂದ ಉಂಟಾಗುವ ಪೇಂಟ್ ಬಬ್ಲಿಂಗ್ ಅನ್ನು ತಡೆಗಟ್ಟಲು, ಅತ್ಯಂತ ಬಿಸಿ ವಾತಾವರಣದ ಪರಿಸ್ಥಿತಿಗಳಲ್ಲಿ ಬಣ್ಣ ಹಚ್ಚುವುದನ್ನು ತಪ್ಪಿಸಲು ಸಲಹೆ ನೀಡಲಾಗುತ್ತದೆ. ದಿನದ ತಂಪಾದ ಸಮಯವನ್ನು ನೋಡಿಕೊಂಡು ಅಥವಾ ಕಡಿಮೆ ತಾಪಮಾನದ ತಿಂಗಳಿನಲ್ಲಿ ಬಣ್ಣ ಹಚ್ಚಬೇಕು. ಅದರೊಂದಿಗೆ, ಸಾಲ್ವೆಂಟ್ಗಳು ಮತ್ತು ತೇವಾಂಶವು ಒಣಗಿಸುವ ಪ್ರಕ್ರಿಯೆಯಲ್ಲಿ ಸರಿಯಾಗಿ ಗಾಳಿಯಾಡುವುದನ್ನು ಖಚಿತಪಡಿಸಿಕೊಳ್ಳಿ.
5. ಸರಿಯಲ್ಲದ ರೋಲರ್ ಕವರ್ ಬಳಸುವುದು
ಯೋಗ್ಯವಾಗಿರದ ರೋಲರ್ ಕವರ್ ಅನ್ನು ಬಳಸುವುದು ಕೂಡ ಬಬ್ಲಿಂಗ್ ಉಂಟಾಗಲು ಕಾರಣವಾಗಬಹುದು. ತಪ್ಪಾದ ರೋಲರ್ ಕವರ್ ಬಣ್ಣವನ್ನು ಸಮವಾಗಿ ಬಳಿಯುವುದಿಲ್ಲ. ಜೊತೆಗೆ ಲಿಂಟ್ ಅಥವಾ ಎಳೆಗಳನ್ನು ಬಣ್ಣದೊಂದಿಗೆ ಬಿಟ್ಟುಬಿಡಬಹುದು. ಅದರಿಂದಾಗಿ ಅಸಮವಾದಬಣ್ಣದ ಪದರುಗಳು ಮತ್ತು ನಂತರ ಅದು ಬಬ್ಲಿಂಗ್ ಸಮಸ್ಯೆ ಎದುರಾಗಲು ಕಾರಣವಾಗುತ್ತದೆ.
ಪರಿಹಾರ
ರೋಲರ್ ಕವರ್ ಅನ್ನು ಆಯ್ಕೆಮಾಡುವಾಗ, ನೀವು ಬಣ್ಣ ಬಳಿಯುತ್ತಿರುವ ಮೇಲ್ಮೈಯ ವಿಧ ಮತ್ತು ನೀವು ಬಳಸುತ್ತಿರುವ ಬಣ್ಣದ ಪ್ರಕಾರವನ್ನು ಪರಿಗಣಿಸಿ. ವಿವಿಧ ರೋಲರ್ ಕವರ್‌ಗಳನ್ನು ನಿರ್ದಿಷ್ಟ ಮೇಲ್ಮೈಗಳಿಗಾಗಿ ಮಾತ್ರ ವಿನ್ಯಾಸಗೊಳಿಸಲಾಗಿರುತ್ತದೆ. ಉದಾಹರಣೆಗೆ ನಯವಾದ ಅಥವಾ ಒರಟಾಗಿರುವ ಗೋಡೆಗಳು ಮತ್ತು ಲ್ಯಾಟೆಕ್ಸ್ ಅಥವಾ ತೈಲ ಆಧಾರಿತ ವಿವಿಧ ರೀತಿಯ ರೋಲರ್ ಬಳಕೆ ಮಾಡಬೇಕು. ನುಣುಪಾದ ಮತ್ತು ಸಮನಾದ ಬಣ್ಣ ಹತ್ತುವಂತೆ ಮಾಡಲು ಸೂಕ್ತವಾದ ರೋಲರ್ ಕವರ್ ಅನ್ನು ಆಯ್ಕೆಮಾಡಿಕೊಳ್ಳಿರಿ.
ಪೇಂಟ್ ಬಬ್ಲಿಂಗ್ಗಳ ಈ ಸಾಮಾನ್ಯ ಕಾರಣಗಳನ್ನು ಸರಿಪಡಿಸಲು ಸೂಚಿಸಿರುವ ಮತ್ತು ಶಿಫಾರಸು ಮಾಡಿರುವ ಪರಿಹಾರಗಳನ್ನು ಅನುಸರಿಸುವ ಮೂಲಕ, ನಿಮ್ಮ ಗೋಡೆಗಳ ಮೇಲೆ ಬಣ್ಣ ಹಕ್ಕಳೆ ಏಳುವುದನ್ನು ನೀವು ಕಡಿಮೆ ಮಾಡಬಹುದು. ಆದಾಗ್ಯೂ, ತೀವ್ರವಾದ ಅಥವಾ ನಿರಂತರವಾಗಿ ಪೇಂಟ್ ಬಬ್ಲಿಂಗ್ ಸಮಸ್ಯೆಗಳಿಗೆ ಮೂಲ ಕಾರಣಗಳನ್ನು ಗುರುತಿಸಲು ಮತ್ತು ಅದಕ್ಕೆ ಸೂಕ್ತವಾದ ಪರಿಹಾರಗಳನ್ನು ಪಡೆದುಕೊಳ್ಳಲು ವೃತ್ತಿಪರರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳುವುದು ಅಗತ್ಯವಾಗಿದೆ ಎಂಬುದನ್ನು ಮನಗಾಣಿರಿ.