ಛಾವಣಿಯಿಂದ ನೀರು ಸೋರಲು ಕಾರಣಗಳು ಏನು ?
1). ಛಾವಣಿಯ ಬಿರುಕು
ಛಾವಣಿಯಲ್ಲಿ ಇರುವ ಬಿರುಕುಗಳು ನೀರು ಸೋರಲು ಪ್ರಮುಖ ಕಾರಣವಾಗಿದೆ. ಈ ಬಿರುಕುಗಳು ಬರಲು ಹಲಾವಾರು ಕಾರಣಗಳು ಇವೆ, ಅವುಗಳೆಂದರೆ ಕಟ್ಟಡ ಎಷ್ಟು ಹಳೆಯದು, ವಾತಾವರಣ ಅಥವಾ ಸರಿಯಾಗಿ ಕಟ್ಟಡ ಕಟ್ಟದೇ ಇರುವುದು ಆಗಿದೆ. ಕಾಲ ಕಳೆದಂತೆ ಕಟ್ಟಡವು ಬಿಸಿಲು,ಗಾಳಿ ಮತ್ತು ನೀರಿನ ಪ್ರಭಾವದಿಂದ ಛಾವಣಿಯನ್ನು ಕೆಡಿಸುತ್ತದೆ ಮತ್ತು ಬಿರುಕು ಬಿಡಲು ಕಾರಣವಾಗುತ್ತದೆ. ಮತ್ತು ಕಟ್ಟಡದ ಛಾವಣಿಯನ್ನು ಕಟ್ಟುವ ಸಮಯದಲ್ಲಿ ಸರಿಯಾಗಿ ಕಟ್ಟದೆ ಇದ್ದರೆ ನೀರಿಕ್ಷಿತ ಸಮಯಕ್ಕಿಂತ ಮೊದಲೆ ಬಿರುಕು ಕಾಣಿಸಿಕೊಳ್ಳ ಬಹುದು. ಛಾವಣಿಗ ಬಿರುಕುಗಳು ನೀರು ಚಾವಣಿಯ ಒಳಗೆ ಸೋರುವಂತೆ ಮಾಡುತ್ತವೆ ಮತ್ತು ಇದರಿಂದಾಗಿ ನೀರಿನ ಹಾನಿಯಿಂದ ಶಿಲೀಂದ್ರಗಳು ಬೆಳೆಯುತ್ತವೆ. ಇವುಗಳ ಬಗ್ಗೆ ಗಮನಕೊಡದೆ ಇದ್ದರೆ ಸಣ್ಣ ಬಿರುಕುಗಳು ದೊಡ್ಡ ಬಿರುಕುಗಳಾಗಿ ಹೆಚ್ಚಿನ ಸಮಸ್ಯೆಗೆ ಕಾರಣವಾಗಬಹುದು. ನಿಯಮಿತವಾಗಿ ಛಾವಣಿಯನ್ನು ಪರೀಕ್ಷಿಸುತ್ತಿದ್ದರೆ ಬಿರುಕುಗಳನ್ನು ಮೊದಲೆ ಗುರುತಿಸಲು ಮತ್ತು ಸರಿಯಾದ ಛಾವಣಿ ಅಥವಾ ಸೀಲಿಂಗ್‌ನಿಂದ ನೀರು ಸೋರುವುದನ್ನು ದುರಸ್ತಿ ಮಾಡಬಹುದು.
2) ಛಾವಣಿಯ ತಪ್ಪಾದ ಇಳಿಜಾರು
ಛಾವಣಿಯ ಅಸಮರ್ಪಕ ಇಳಿಜಾರು ಸಹ ನೀರು ಸೋರುವಿಕೆಗೆ ಕಾರಣವಾಗಬಹುದು. ಛಾವಣಿಯ ಇಳಿಜಾರು ತುಂಬ ಮುಖ್ಯವಾಗುತ್ತದೆ ಏಕೆಂದರೆ ಸರಿಯಾದ ಇಳಿಜಾರು ಮಳೆನೀರು ಮತ್ತು ಕರಗಿದ ಹಿಮವು ಇಳಿಜಾರಿನಲ್ಲಿ ಹರಿದು ಚರಂಡಿಗೆ ಅಥವಾ ಒಳಚರಂಡಿಗೆ ಸೇರುತ್ತದೆ. ಇಳಿಜಾರು ತುಂಬ ಆಳವಾಗಿಲ್ಲದೆ ಇದ್ದರೆ ಅಥವಾ ಸಮತಟ್ಟಗಿದ್ದರೆ ನೀರು ಛಾವಣಿಯ ಮೇಲೆ ನಿಂತು ಸೋರುವಿಕೆಗೆ ಮತ್ತು ನೀರಿನ ಹಾನಿಗೆ ಕಾರಣವಾಗಬಹುದು. ಈ ಸನ್ನಿವೇಗಳು ಹೆಚ್ಚು ಮಳೆ ಬರುವ ಅಥವಾ ಹೆಚ್ಚು ಹಿಮಪಾತವಾಗುವ ಸ್ಥಳಗಳಲ್ಲಿ ನಿಜವಾಗುತ್ತವೆ. ಇಳಿಜಾರು ಹೆಚ್ಚು ಕಡಿದಾಗಿದ್ದರೆ ನೀರು ತುಂಬ ವೇಗವಾಗಿ ಹರಿದುಬಂದು ಚರಂಡಿಯು ಉಕ್ಕಿಹರಿದು ನೀರಿನ ಹಾನಿಯಾಗುತ್ತದೆ. ಛಾವಣಿಯನ್ನು ಕಟ್ಟುವಾಗ ಅಥವಾ ರಿಪೇರಿ ಮಾಡುವಾಗ, ನೀರು ಸೋರದಂತೆ ಇಳಿಜಾರು ಸರಿಯಾಗಿ ಇರುವಂತೆ ಖಚಿತಪಡಿಸಿಕೊಳ್ಳಿ.
3) ಫ್ಲಾಶಿಂಗ್ ನ ಹಾನಿ
ಫ್ಲಾಶಿಂಗ್ ಎಂದರೆ ಇದು ಒಂದು ತೆಳುವಾದ ವಸ್ತುವಾಗಿದೆ. ಇದನ್ನು ಲೋಹದಿಂದ ಮಾಡಿರುತ್ತಾರೆ, ಇದನ್ನು ಸಂದುಗಳನ್ನು ಮತ್ತು ಆಂಗಲ್ ಗಳನ್ನು ಕಾಪಾಡಿಕೊಳ್ಳಲು ಬಳಸುತ್ತಾರೆ. ಇದನ್ನು ಚಿಮಣಿ, ಛಾವಣಿಕಿಟಕಿ, ದಾರಿಗಳ ಮತ್ತು ಛಾವಣಿಯ ಮುಂದೆ ಹಾಸಲಾದ ಹಾಸುಗಳ ಮೇಲೆ ಕಾಣಬಹುದು. ಒಂದೊಮ್ಮೆ ಈ ಫ್ಲಾಶಿಂಗ್ ಗಳನ್ನು ಸರಿಯಾಗಿ ಹಾಕದೆ ಇದ್ದರೆ ಅಥವಾ ಹಾಳಾಗಿದ್ದರೆ ನೀರು ಛಾವಣಿಯ ಮೇಲೆ ಸೋರಲು ಕಾರಣವಾಗುತ್ತದೆ. ಕಾಲಾಂತರದಲ್ಲಿ ವಾತಾವರಣ ಅಂಶಗಳಿಗೆ ಫ್ಲಾಶಿಂಗ್ ಗಳು ತೆರೆದುಕೊಂಡಾಗ ಅವುಗಳು ಹಾಳಾಗುತ್ತವೆ ಇದರಿಂದ ಒಡಕು ಮತ್ತು ಅಂತರಗಳು ಉಂಟಾಗುತ್ತವೆ. ಹೆಚ್ಚುವರಿಯಾಗಿ ಫ್ಲಾಶಿಂಗ್ ಗಳನ್ನು ಸರಿಯಾಗಿ ಹಾಕದೆ ಇದ್ದಾಗ ಇವುಗಳು ಸಡಿಲವಾಗುತ್ತವೆ ಅಥವಾ ಛಾವಣಿಯಿಂದ ಬೇರ್ಪಟ್ಟು, ಕಟ್ಟಡದ ಒಳಗೆ ನೀರು ಸೋರಲು ಕಾರಣವಾಗಬಹುದು. ನಿಯಮಿತವಾಗಿ ಫ್ಲಾಶಿಂಗ್ ಗಳನ್ನು ಪರೀಕ್ಷಿಸಿ ಮತ್ತು ನಿರ್ವಹಿಸುತ್ತಿದ್ದರೆ ಯಾವುದೇ ಸಮಸ್ಯೆಯಿದ್ದರೆ ಅದನ್ನು ಕಂಡುಹಿಡಿಯಲು ಮತ್ತು ಮುಮನದಾಗುವ ಹಾನಿಯನ್ನು ತಡೆಯಬಹುದು.
4) ಟೈಲ್ಸ್ ನ ಹಾನಿ
ಟೈಲ್ಸ್ ಗಳು ಜನಪ್ರಿಯವಾದ ಛಾವಣಿಯನ್ನು ಮಾಡುವ ವಸ್ತುವಾಗಿದೆ ಮತ್ತು ಇದು ತುಂಬ ವರ್ಷಗಳ ಕಾಲ ಬಾಳಿಕೆಬರುತ್ತವೆ. ಅದಾಗ್ಯು ಟೈಲ್ಸ್ ಗಳು ಕಾಲಾಂತರದಲ್ಲಿ ಹವಾಮಾನದಿಂದ ಅಥವಾ ಸರಿಯಾಗಿ ಕೂರಿಸದೆ ಇದ್ದರೆ ಅವುಗಳು ಹಾನಿಯಾಗುತ್ತವೆ. ಯಾವಾಗ ಟೈಲ್ಸ್ ಗಳು ಹಾನಿಗೊಳಗಾದ ಅಥವಾ ಒಡೆದು ಹೋದಾಗ ಕಟ್ಟಡದ ಒಳಗೆ ನೀರು ಬರಲು ಅನುವು ಮಾಡಿಕೊಡುತ್ತವೆ. ಸಣ್ಣದಾದ ಬಿರುಕಿನಿಂದ ಸೋರುವ ನೀರು ಸಹ ನೀರಿನ ಹಾನಿ ಮತ್ತು ಮತ್ತು ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಒಂದಿಷ್ಟು ಸಂದರ್ಭಗಳಲ್ಲಿ ಕಾಣೆಯಾದ ಅಥವಾ ಒಡೆದ ಟೈಲ್ಸ್ ಗಳನ್ನು ಸುಲಭವಾಗಿ ಬದಲಾಯಿಸಬಹುದು, ಆದರೆ ಕೆಲವೊಂದು ಸಮಯದಲ್ಲಿ ಪೂರ್ತಿಯಾಗಿ ಛಾವಣಿಯನ್ನೇ ಬದಲಾಯಿಸ ಬೇಕಾಗಬಹುದು.
5) ಅನುಚಿತ ನಿರ್ವಹಣೆ
ಸರಿಯಾಗಿ ಛಾವಣಿಯನ್ನು ನಿರ್ವಹಣೆಯನ್ನು ಮಾಡದೆ ಇರುವುದು ಸಹ ಛಾವಣಿಯು ಸೋರುವುದಕ್ಕೆ ಮುಖ್ಯ ಕಾರಣವಾಗಿದೆ. ನಿಯಮಿತವಾಗಿ ಚಾವಣಿಯನ್ನು ನಿರ್ವಹಣೆ ಮಾಡುವುದು ಅಂದರೆ ಚರಂಡಿಯನ್ನು ಚೊಕ್ಕ ಮಾಡುವುದು, ಅವಶೇಷಗಳನ್ನು ತೆಗೆಯುವುದು ಮತ್ತು ಹಾನಿಯನ್ನು ಪರಿಶೀಲಿಸುತ್ತಿರುವುದು ಛಾವಣಿಯನ್ನು ಒಳ್ಳೆಯ ಸ್ಥಿತಿಯಲ್ಲಿ ಇರಿಸಿಕೊಳ್ಳಲು ತುಂಬ ಮುಖ್ಯವಾಗುತ್ತದೆ. ನಿಯಮಿತವಾಗಿ ನಿರ್ವಹಣೆಯನ್ನು ಮಾಡಲು ವಿಫಲವಾದಾಗ ಛಾವಣಿಯ ಮೇಲೆ ಕಸ ಮತ್ತು ನೀರು ಸಂಗ್ರಹಣೆಯಾಗುತ್ತದೆ ಮತ್ತು ಇದು ಛಾವಣಿಯ ಹಾನಿಗೆ ಮತ್ತು ಸೋರುವಿಕೆಗೆ ಕಾರಣವಾಗುತ್ತದೆ. ಇದಕ್ಕಿಂತ ಹೆಚ್ಚಾಗಿ ಸಣ್ಣ ಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡಿದಾಗ ಇದು ಗಮನಾರ್ಹ ಸಮಸ್ಯೆಗಳಿಗೆ ಕಾರಣವಾಗಿತ್ತದೆ.
6) ಹೆಚ್ಚಿನ ಛಾವಣಿಯ ತೇವಾಂಶ
ಮನೆಯ ಸರಿಯಾಗಿಲ್ಲದ ವೆಂಟಿಲೇಶನ್, ಹಾವಾಮಾನದ ಪರಿಸ್ಥಿತಿ ಅಥವಾ ಛಾವಣಿಯ ರಚನೆಯಲ್ಲಿ ಸೋರುವಿಕೆಯು ತೇವಾಂಶವು ಛಾವಣಿಯ ಮೇಲೆ ಶೇಖರಣೆಗೊಳ್ಳಲು ಕಾರಣವಾಗುತ್ತದೆ. ಕಾಲಾಂತರದಲ್ಲಿ ತೇವಾಂಶವು ಹೆಚ್ಚಾಗಿ ಶಿಲೀಂಧ್ರಗಳು ಬೆಳೆದು ಛಾವಣಿಯ ರಚನೆಯು ದುರ್ಬಲವಾಗಲು ಮತ್ತು ಸೋರಲು ಕಾರಣವಾಗುತ್ತದೆ. ತೇವಾಂಶವು ಲೋಹದ ಛಾವಣಿಯ ಮುಚ್ಚಿಗೆಯು ತುಕ್ಕು ಹಿಡಿಯುತ್ತದೆ ಮತ್ತು ನೀರು
ಸೋರಿ ಮುಂದಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಾಟರ್ ಪ್ರೂಪಿಂಗ್ ನ ಹಲವಾರು ಉಪಯೋಗ ಗಳಿಂದ ಹೆಚ್ಚಿನ ಸಮಯದಲ್ಲಿ ಛಾವಣಿಯನ್ನು ವಾಟರ್ ಪ್ರೂಪಿಂಗ್ ಮಾಡುವುದು ಸಮಸ್ಯೆಗೆ ಪರಿಹಾರವಾಗಿದೆ.
7) ತುಕ್ಕು
ಛಾವಣಿಯು ಸೋರಲು ತುಕ್ಕು ಮಾತ್ತೊಂದು ಕಾರಣವಾಗಿದೆ ನಿರ್ದಿಷ್ಟವಾಗಿ ಲೋಹದ ಛಾವಣಿಯಲ್ಲಿ. ಲೋಹದ ಛಾವಣಿಯ ವಸ್ತುವು ಕಾಲಾಂತರದಲ್ಲಿ ಮಳೆ, ಗಾಳಿ ಮತ್ತು ಬಿಸಿಲಿನ ಅಂಶಗಳಿಂದ ತುಕ್ಕು ಹಿಡಿಯುತ್ತದೆ. ಛಾವಣಿಗೆ ತುಕ್ಕು ಹಿಡಿದಾಗ ಅದು ದುರ್ಬಲವಾಗುತ್ತದೆ ಇದರಿಂದ ಛಾವಣಿಯು ಸುಲಭವಾಗಿ ಒಡೆದು ಹೋಗುವ ಸಾಧ್ಯತೆ ಇರುತ್ತದೆ ಮತ್ತು ಇದರಿಂದ ಬಿರುಕು ಉಂಟಾಗುತ್ತದೆ.ಇದಕ್ಕಿಂತ ಹೆಚ್ಚಾಗಿ ತುಕ್ಕು ಛಾವಣಿಯೊಂದಿಗೆ ಇರುವ ಉಳಿದ ವಸ್ತುಗಳಿಗೂ ಸಹ ಹರಡಿ ಅವುಗಳು ಸಡಿಲವಾಗಲು ಕಾರಣವಾಗುತ್ತವೆ. ಇದು ಮುಂದೆ ಮತ್ತೊಂದಿಷ್ಟು ಹಾನಿಗೆ ಮತ್ತು ಸೋರುವಿಕೆಗೆ ಕಾರಣವಾಗುತ್ತದೆ.
8) ಹಳೆಯದಾಗುವಿಕೆ
ಛಾವಣಿಯು ಹಳೆಯದಾಗುವುದು ಸೋರುವಿಕೆಗೆ ನೈಸರ್ಗಿಕ ಕಾರಣವಾಗಿದೆ. ಕಾಲಾಂತರದಲ್ಲಿ ಛಾವಣಿಯ ವಸ್ತುಗಳು ಹವಾಮಾನದ ಅಂಶಗಳಿಂದ, ಸವಕಳಿಯಿಂದ ಮತ್ತು ಇನ್ನಿತರ ಅಂಶಗಳಿಂದ ತುಕ್ಕು ಹಿಡಿಯುತ್ತವೆ. ಛಾವಣಿಯ ವಸ್ತುಗಳು ಹಳೆಯಾದಂತೆ ಬಿರಕು ಬಿಟ್ಟು ಸುಲಭವಾಗಿ ಒಡೆದುಹೊಗಬಹುದು ಅಥವಾ ಅವುಗಳ ರಕ್ಷಣೆಗೆ ಇರುವ ಪದರವು ಹರಿದು ಹೋಗಬಹುದು. ಇದು ಸೋರುವಿಕೆಗೆ ಮತ್ತು ನೀರಿನ ಹಾನಿಗೆ ಕಾರಣವಾಗುತ್ತದೆ. ಜೊತೆಗೆ ಛಾವಣಿಯ ವಸ್ತುಗಳು ಹಳೆಯದಾದಂತೆ ಅವುಗಳ ನೀರನ್ನು ಹಿಮ್ಮೆಟ್ಟಿಸುವ ಸಾಮರ್ಥ್ಯವು ಕಡಿಮೆಯಾಗುತ್ತದೆ ಇದರಿಂದ ನೀರು ಛಾವಣಿಯ ಮೇಲ್ಮೈ ಮೇಲೆ ನಿಂತು ಸೋರಲು ಕಾರಣವಾಗುತ್ತದೆ. ನಿಯಮಿತವಾಗಿ ಪರೀಕ್ಷೀಸುವುದು ಮತ್ತು ನಿರ್ವಹಣೆಯಿಂದ ಹಳೆಯದಾಗುವಿಕೆಯ ಲಕ್ಷಣಗಳನ್ನು ಕಂಡುಹಿಡಿಯಲು ಮತ್ತು ಅವುಗಳು ಹೆಚ್ಚಿನ ಹಾನಿಯನ್ನು ಉಂಟುಮಾಡುವ ಮೊದಲು ಸರಿಮಾಡಬಹುದು.