ಕಾಂಕ್ರೀಟ್ ಪ್ರತ್ಯೇಕಗೊಳ್ಳುವಿಕೆಗೆ ಕಾರಣಗಳು
ಕಾಂಕ್ರೀಟ್‌ನ ಪ್ರತ್ಯೇಕಗೊಳ್ಳುವಿಕೆಯ ಮೇಲೆ ಪರಿಣಾಮ ಬೀರುವ ಕಾರಣಗಳು ಮತ್ತು ಅಂಶಗಳು ಹಲವಾರು.
1. ಕಾಂಕ್ರೀಟ್ ಪದಾರ್ಥಗಳ ಅಸಮ ಪ್ರಮಾಣ:
ಕಾಂಕ್ರೀಟ್ ಮಿಶ್ರಣದಲ್ಲಿನ ಘಟಕ ವಸ್ತುಗಳ ಪ್ರಮಾಣವು ಏಕರೂಪವಾಗಿಲ್ಲದಿದ್ದರೆ, ಅದು ಪ್ರತ್ಯೇಕಗೊಳ್ಳುವಿಕೆಗೆ ಕಾರಣವಾಗಬಹುದು. ಹೆಚ್ಚಿನ ನೀರು-ಸಿಮೆಂಟ್ ಅನುಪಾತವು ನೀರಿನ ಅಧಿಕ ತೂಕದ ಕಾರಣದಿಂದಾಗಿ ಅಗ್ರಿಗೇಟ್‌ಗಳು ತಳಭಾಗದಲ್ಲಿ ನೆಲೆಗೊಳ್ಳಲು ಕಾರಣವಾಗಬಹುದು.
2. ಕಾಂಕ್ರೀಟ್ ಮಿಕ್ಸಿಂಗ್‌ಗೆ ಅಗತ್ಯವಿದ್ದಷ್ಟು ಸಮಯ ನೀಡದಿರುವುದು:
ಕಾಂಕ್ರೀಟ್ ಅನ್ನು ಸಂಪೂರ್ಣವಾಗಿ ಮಿಶ್ರಣ ಮಾಡದಿದ್ದರೆ, ಮಿಶ್ರಣದ ಕೆಲವು ಪ್ರದೇಶಗಳು ಹೆಚ್ಚು ಅಥವಾ ಕಡಿಮೆ ಕೆಲವು ಅಂಶಗಳನ್ನು ಹೊಂದಿರಬಹುದು, ಇದು ಪ್ರತ್ಯೇಕಗೊಳ್ಳುವಿಕೆಗೆ ಕಾರಣವಾಗುತ್ತದೆ.
3. ಕಾಂಕ್ರೀಟ್ ಮಿಶ್ರಣದ ನಿರ್ವಹಣೆ:
ಕಾಂಕ್ರೀಟ್ ಮಿಶ್ರಣದ ಅಸಮರ್ಪಕ ನಿರ್ವಹಣೆ ಕೂಡ ಪ್ರತ್ಯೇಕಗೊಳ್ಳುವಿಕೆಗೆ ಕಾರಣವಾಗಬಹುದು. ನೀವು ಕಾಂಕ್ರೀಟ್ ಅನ್ನು ಹಸ್ತಚಾಲಿತವಾಗಿ ಬೆರೆಸಿದರೆ, ಮಿಶ್ರಣ ಪ್ರಕ್ರಿಯೆಯಲ್ಲಿ ಅಸಮತೆಗಳು ಉಂಟಾಗಬಹುದು. ಇದು ಪ್ರತ್ಯೇಕಗೊಳ್ಳುವಿಕೆಗೆ ಕಾರಣವಾಗುತ್ತದೆ.
4. ಕಾಂಕ್ರೀಟ್ ಮಿಶ್ರಣವನ್ನು ಇರಿಸುವುದು:
ಕಾಂಕ್ರೀಟ್ ಸಾಗಣೆಯ ಸಂದರ್ಭದಲ್ಲೂ ಕಾಂಕ್ರೀಟ್ ಪ್ರತ್ಯೇಕಗೊಳ್ಳುವಿಕೆಗೆ ದೊಡ್ಡ ಕಾರಣವಾಬಹುದು. ಕಾಂಕ್ರೀಟ್ ಅನ್ನು ಹಾಕುವ ವಿಧಾನವು ನಿರ್ಣಾಯಕವಾಗಿದೆ. ಕಾಂಕ್ರೀಟ್ ಅನ್ನು ತುಂಬ ಎತ್ತರದಿಂದ ಸುರಿದರೆ ಅಥವಾ ಅದನ್ನು ಹೆಚ್ಚು ದೂರದವರೆಗೆ ಸಾಗಿಸಿದರೆ, ಭಾರವಾದ ಅಗ್ರಿಗೇಟ್‌ಗಳು ತಳಕ್ಕೆ ಇಳಿಯಲು ಮತ್ತು ಉಳಿದ ಮಿಶ್ರಣದಿಂದ ಪ್ರತ್ಯೇಕಗೊಳ್ಳಲು ಕಾರಣವಾಗಬಹುದು.
5. ಕಾಂಕ್ರೀಟ್ ಕಂಪನ:
ಕಂಪನವನ್ನು ಸಾಮಾನ್ಯವಾಗಿ ಕಾಂಕ್ರೀಟ್ ಮಿಶ್ರಣದ ಒಳಗೆ ಸೇರಿಕೊಂಡಿರುವ ಗಾಳಿಯ ಕಣಗಳನ್ನು ಒಗ್ಗೂಡಿಸಲು ಮತ್ತು ತೆಗೆದುಹಾಕಲು ಬಳಸಲಾಗುತ್ತದೆ, ಅತಿಯಾದ ಕಂಪನದಿಂದಲೂ ಅಗ್ರಿಗೇಟ್‌ಗಳು ತಳಕ್ಕೆ ಇಳಿಯಲು ಮತ್ತು ಉಳಿದ ಮಿಶ್ರಣದಿಂದ ಪ್ರತ್ಯೇಕವಾಗಲು ಕಾರಣವಾಬಹುದು. ಆ ಮೂಲಕವೂ ಪ್ರತ್ಯೇಕಗೊಳ್ಳುವಿಕೆಯನ್ನು ಉಂಟುಮಾಡಬಹುದು.