ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಚಡಿ ಕಟ್ಟುವ ಟೈಲ್ಸ್ ಎಂದರೇನು ಮತ್ತು ನಮಗೆ ಅವು ಯಾಕೆ ಬೇಕು

ಒಳಾಂಗಣ ವಿನ್ಯಾಸ ಮತ್ತು ಮನೆ ಸುಧಾರಣೆಯಲ್ಲಿ ಚಡಿ ಕಟ್ಟಲು ಬಳಸುವ ಟೈಲ್ಸ್​ಗಳ ಉದ್ದೇಶ ಮತ್ತು ಪ್ರಯೋಜನಗಳನ್ನು ಅನ್ವೇಷಿಸಿ.

Share:


ಚಡಿ ಟೈಲ್ಸ್​ಗಳು ನಿಮ್ಮ ರೂಮ್​ಗಳಿಗೆ ಕೇವಲ ಸೌಂದರ್ಯವನ್ನು ಮಾತ್ರ ಕೊಡುವುದಿಲ್ಲ, ಜೊತೆಗೆ ಅಗತ್ಯವಾದ ರಕ್ಷಣೆಯನ್ನು ಕೊಡುವ ಕೆಲಸವನ್ನು ಕೂಡ ಮಾಡುತ್ತವೆ. ವಿಶಿಷ್ಟವಾಗಿ ಮನೆಯೊಳಗಿನ ಗೋಡೆಯ ಕೇಳ ಭಾಗದಲ್ಲಿ ಇವುಗಳನ್ನು ಹಾಕಲಾಗುತ್ತದೆ. ಗೋಡೆಯ ಮೇಲ್ಮೈ ಹಾಗೂ ಮಹಡಿಗಳ ನಡುವಿನ ಭಾಗದಲ್ಲಿ ಈ ಟೈಲ್ಸ್​ಗಳು ಅತ್ಯಗತ್ಯವಾಗಿವೆ. ಒರೆಸಿ ಸ್ವಚ್ಛಗೊಳಿಸುವ, ಉಜ್ಜುವುದರಿಂದ ಉಂಟಾಗುವ ಸವಕಳಿಯಿಂದಾಗಿ ಸಂಭವಿಸಬಹುದಾದ ಹಾನಿಯಿಂದ ಹಾಗೂ ನೀರಿನಿಂದ ಉಂಟಾಗುವ ಹಾನಿಗಳಿಂದ ಗೋಡೆಗಳನ್ನು ರಕ್ಷಿಸಲು ಅವು ಸಹಾಯ ಮಾಡುತ್ತವೆ. ಈ ಬ್ಲಾಗ್‌ನಲ್ಲಿ, ನಾವು ವಿವಿಧ ರೀತಿಯ ಚಡಿ ಕಟ್ಟುವ ಟೈಲ್ಸ್‌ಗಳು, ಅವುಗಳ ಪ್ರಯೋಜನಗಳು ಮತ್ತು ಅವುಗಳನ್ನು ನಿಮ್ಮ ಮನೆ ಅಥವಾ ಕಛೇರಿಯ ಜಾಗದಲ್ಲಿ ಹಾಕುವುದರಿಂದ ಹೇಗೆ ಕೆಲಸ ಮತ್ತು ಶೈಲಿ ಎರಡನ್ನೂ ಸುಧಾರಿಸಬಹುದು ಎಂಬುದನ್ನು ತಿಳಿದುಕೊಳ್ಳೋಣ. ನೀವು ನವೀಕರಿಸುತ್ತಿರಲಿ ಅಥವಾ ಮೊದಲೇ ಇರುವುದನ್ನು ಸುಧಾರಣೆ ಮಾಡುತ್ತಿರಲಿ ಇಂತಹ ಸಂದರ್ಭಗಳಲ್ಲಿ ಚಡಿ ಕಟ್ಟವಲ್ಲಿ ಟೈಲ್‌ಗಳ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಆರ್ಸೆನಲ್ ವಿನ್ಯಾಸ ಮತ್ತು ನಿರ್ವಹಣಾ ಸಾಧನಗಳಿಗೆ ಸೇರಿಸುತ್ತದೆ.

 

 


ಚಡಿ ಕಟ್ಟುವ ಟೈಲ್ಸ್ ಎಂದರೇನು?

ಚಡಿ ಕಟ್ಟುವಾಗ ಬಳಸುವ ಟೈಲ್ಸ್ ಎಂಬುದು ಒಂದು ನಿರ್ದಿಷ್ಟ ರೀತಿಯ ಟೈಲ್ಸ್​ ಆಗಿದ್ದು, ನೆಲವು ಗೋಡೆಯನ್ನು ಸೇರುವ ಸ್ಥಳದಲ್ಲಿ ಅಳವಡಿಸಲು ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ವಸತಿ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಇವುಗಳು ಅಗತ್ಯವಾದ ಅಲಂಕಾರಿಕ ಮತ್ತು ಕ್ರಿಯಾತ್ಮಕ ಅಂಶವಾಗಿ ಕಾರ್ಯನಿರ್ವಹಿಸುತ್ತವೆ. ಈ ಟೈಲ್ಸ್​ಗಳು ನುಣುಪಾದ ಬದಲಾವಣೆಗಳನ್ನು ಒದಗಿಸುತ್ತವೆ. ಅವು ರೂಮಿನ ಆಕರ್ಷಣೆಯನ್ನು ಹೆಚ್ಚಿಸುತ್ತವೆ. ನಡೆದಾಡುವಾಗ, ಪೀಠೋಪಕರಣಗಳನ್ನು ಸರಿಸುವಾಗ ಹಾಗೂ ಸ್ವಚ್ಛಗೊಳಿಸುವ ಕೆಲಸಗಳಿಂದ ಉಂಟಾಗುವ ಸವಕಳಿಯನ್ನು ತಡೆಯುವ ಮೂಲಕ ರಕ್ಷಣೆ ನೀಡುತ್ತವೆ. ತೇವಾಂಶ ಮತ್ತು ಭೌತಿಕ ಹಾನಿಯಿಂದ ಗೋಡೆಗಳನ್ನು ರಕ್ಷಿಸುವಲ್ಲಿ ಅವುಗಳ ಪ್ರಾಯೋಗಿಕ ಬಳಕೆಯನ್ನು ಮೀರಿ, ಚಡಿ ಟೈಲ್ಸ್​ಗಳು ಗೋಡೆ ಮತ್ತು ನೆಲದ ನಡುವೆ ಇರುವ ಅಸಮ ಮೂಲಗಳನ್ನು ಹಾಗೂ ಅಂತರವನ್ನು ಸಹ ಸರಿ ಮಾಡುತ್ತವೆ. ಇದು ನಯಗೊಳಿಸಿದ ಮತ್ತು ಮೆರಗುಗೊಳಿಸಿದ ನೋಟವನ್ನು ಕೊಡುತ್ತದೆ.


ವಿಭಿನ್ನ ಚಡಿ ಟೈಲ್ಸ್ ವಿನ್ಯಾಸ

 

ಶೈಲಿ 1: ಸೆರಾಮಿಕ್ ಚಡಿ ಟೈಲ್ಸ್



ಸೆರಾಮಿಕ್ ಚಡಿ ಟೈಲ್ಸ್‌ಗಳು ಅವುಗಳ ಬಾಳಿಕೆ ಮತ್ತು ವ್ಯಾಪಕ ಶ್ರೇಣಿಯ ಬಣ್ಣಗಳು ಮತ್ತು ಮಾದರಿಗಳಿಂದಾಗಿ ಜನಪ್ರಿಯವಾಗಿವೆ. ಕಿಚನ್​ ಮತ್ತು ಬಾತ್​ರೂಮ್​ಗಳಿಗೆ ಸೂಕ್ತವಾಗಿವೆ. ಅವುಗಳನ್ನು ಸ್ವಚ್ಛಗೊಳಿಸುವುದು ಹಾಗೂ ನಿರ್ವಹಿಸುವುದು ಸುಲಭವಾಗಿದ್ದು, ತೇವಾಂಶಕ್ಕೆ ಒಳಗಾಗುವ ಪ್ರದೇಶಗಳಿಗೆ ಇದು ಪ್ರಾಯೋಗಿಕ ಆಯ್ಕೆಯಾಗಿದೆ.

 

ಶೈಲಿ 2: ಕಟ್ಟಿಗೆಯ ಮೆರಗು ಕೊಡುವ ಚಡಿ ಟೈಲ್ಸ್



ಕಟ್ಟಿಗೆಯಂತೆ ಕಾಣುವ ಚಡಿ ಟೈಲ್ಸ್​ಗಳು ಬಾಳಿಕೆಯೊಂದಿಗೆ ಕಟ್ಟಿಗೆಯ ಆಕರ್ಷಣೆಯೊಂದಿಗೆ ನೋಟವನ್ನು ನೀಡುತ್ತವೆ. ಅವು ಲಿವಿಂಗ್ ರೂಮ್​ಗಳು ಹಾಗೂ ಬೆಡ್​ರೂಮ್​ಗಳಿಗೆ ಅತ್ಯುತ್ತಮವಾಗಿ ಹೊಂದುವಂತಾಗಿದ್ದು, ಅಲ್ಲಿ ನೀವು ನಿಜವಾದ ಕಟ್ಟಿಗೆಯನ್ನು ನಿರ್ವಹಣೆ ಮಾಡಿದಂತೆ ಮಾಡುವ ಅಗತ್ಯವಿಲ್ಲದೆ ಸ್ನೇಹಶೀಲ, ನೈಸರ್ಗಿಕ ನೋಟ ಕಾಣುವಂತೆ ಮಾಡಬಹುದು.

 

ಶೈಲಿ 3: ಮಾರ್ಬಲ್ ಮೆರಗಿನ ಚಡಿ ಟೈಲ್ಸ್



ಸೊಬಗಿನ ಸ್ಪರ್ಶವನ್ನು ಹುಡುಕುತ್ತಿರುವವರಿಗೆ, ಮಾರ್ಬಲ್ ಫಿನಿಶ್ ಸ್ಕರ್ಟಿಂಗ್ ಟೈಲ್ಸ್‌ಗಳು ತಮ್ಮ ಹೊಳಪಿನ ಮೆರಗಿನೊಂದಿಗೆ ಮತ್ತು ವಿಶಿಷ್ಟವಾದ ವೀನಿಂಗ್‌ನೊಂದಿಗೆ ಐಷಾರಾಮಿ ಅನುಭವವನ್ನು ನೀಡುತ್ತದೆ. ಎಂಟ್ರನ್ಸ್​ ಬಾಗಿಲುಗಳು ಹಾಗೂ ಹಜಾರಗಳಿಗೆ ಈ ಟೈಲ್ಸ್​ಗಳು ಉತ್ತಮವಾಗಿವೆ, ಎಂಟ್ರನ್ಸ್​ ಮೇಲೆ ಪ್ರಭಾವಶಾಲಿ ಪರಿಣಾಮವನ್ನುಂಟು ಮಾಡುತ್ತವೆ.

 

ಶೈಲಿ 4: ಮೆಟಾಲಿಕ್ ಮೆರಗಿನ ಚಡಿ ಟೈಲ್ಸ್​ಗಳು

ಮೆಟಾಲಿಕ್ ಫಿನಿಶ್ ಟೈಲ್‌ಗಳು ಆಧುನಿಕ ಮತ್ತು ನಯವಾದ ನೋಟವನ್ನು ಪರಿಚಯಿಸುತ್ತವೆ, ಇದು ಒಟ್ಟಿಗಿರುವ ಸ್ಥಳಗಳಿಗೆ ಸೂಕ್ತವಾಗಿದೆ. ಇದು ಆಧುನಿಕ ಟೈಲ್ ಚಡಿ ಹಾಕುವುದು ಯೋಜನೆಯ  ಕನಿಷ್ಠ ವಿನ್ಯಾಸಗಳಲ್ಲಿ ಪ್ರಾಧಾನ್ಯವಾಗಿ ಕಾರ್ಯನಿರ್ವಹಿಸುತ್ತದೆ. ಸೂಕ್ಷ್ಮ ಹೊಳಪನ್ನು ಮತ್ತು ಮೊನಚಾದ ನೋಟವನ್ನು ನೀಡುತ್ತದೆ.


ಮನೆಯ ಸುತ್ತಲೂ ಚಡಿ ಟೈಲ್ಸ್ ಅನ್ನು ಎಲ್ಲಿ ಬಳಸಬೇಕು



ಸ್ಕರ್ಟಿಂಗ್ ಟೈಲ್ಸ್ ಅನ್ನು ಮನೆಯ ವಿವಿಧ ಪ್ರದೇಶಗಳಲ್ಲಿ ಬಳಸಬಹುದು, ಅವುಗಳೆಂದರೆ:

 

1. ಬಾತ್​ರೂಮ್​ಗಳು: ಬಾತ್​ರೂಮ್​ಗಳಲ್ಲಿ ಹಾಕಲು ಸ್ಕರ್ಟಿಂಗ್ ಟೈಲ್ಸ್ ಸೂಕ್ತವಾಗಿದೆ, ಏಕೆಂದರೆ ಅವುಗಳು ನೀರು ನಿರೋಧಕವಾಗಿದ್ದು ಸುಲಭವಾಗಿ ಸ್ವಚ್ಛಗೊಳಿಸಬಹುದು.

 

2. ಅಡುಗೆಮನೆಗಳು: ಅಡುಗೆಮನೆಗಳಲ್ಲಿ ಚಡಿ ಟೈಲ್ಸ್​ಗಳ ಗೋಡೆಗಳನ್ನು ನೀರಿನ ಒದ್ದೆಯನ್ನು ಹಾಗೂ ಸೋರಿಕೆಗಳಿಂದ ರಕ್ಷಿಸುತ್ತವೆ. ಹೀಗಾಗಿ ಅವುಗಳನ್ನು ಅಡುಗೆ ಮನೆಗೆ ಪ್ರಾಯೋಗಿಕ ಆಯ್ಕೆಯನ್ನಾಗಿ ಮಾಡುತ್ತದೆ. ಗೋಡೆಯನ್ನು ಮುಚ್ಚಲು ಅವುಗಳನ್ನು ಮೇಲೆ ವಿವಿಧ ಎತ್ತರದ ವರೆಗೆ ಚಡಿ ಕಟ್ಟಬಹುದು.

 

3. ಹಜಾರಗಳು ಮತ್ತು ಹೆಚ್ಚಿನ ದಟ್ಟಣೆಯ ಪ್ರದೇಶಗಳು: ಸೆರಾಮಿಕ್ ಅಥವಾ ಪಿಂಗಾಣಿ ಚಡಿ ಟೈಲ್‌ಗಳು ಬಾಳಿಕೆ ಬರುತ್ತವೆ. ಅಚವು ಹಜಾರದಂತಹ ಹೆಚ್ಚಿನ ದಟ್ಟಣೆಯ ಪ್ರದೇಶಗಳಿಗೆ ಅತ್ಯಂತ ಸೂಕ್ತವಾಗಿವೆ.

 

4. ಲಿವಿಂಗ್ ರೂಮ್​ಗಳು ಹಾಗೂ ಬೆಡ್​ ರೂಮ್​ಗಳು: ಚಡಿ ಟೈಲ್ಸ್​​ಗಳು ಲಿವಿಂಗ್ ರೂಮ್​ಗಳು ಹಾಗೂ ಬೆಡ್​ರೂಮ್​ಗಳ ಒಟ್ಟಾರೆ ಸೌಂದರ್ಯವನ್ನು ಹೆಚ್ಚಿಸುತ್ತವೆ. ಜೊತೆಗೆ ಹೊಂದಿಕೊಂಡಿರುವ ನೋಟವನ್ನು ಸೃಷ್ಟಿಸುತ್ತದೆ.


ಚಡಿ ಬೋರ್ಡ್‌ಗಳಿಗಾಗಿ ವಿವಿಧ ಬಣ್ಣಗಳನ್ನು ಅನ್ವೇಷಿಸುವುದು



ಚಡಿ ಟೈಲ್ಸ್ ವಿನ್ಯಾಸಕ್ಕಾಗಿ ಸರಿಯಾದ ಬಣ್ಣವನ್ನು ಆರಿಸುವುದರಿಂದ ಕೋಣೆಯ ಭಾವನೆ ಹಾಗೂ ಕಣ್ಣಿಗೆ ಕಾಣುವುದರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ.

 

1. ನ್ಯೂಟ್ರಲ್ ಬಣ್ಣಗಳು: ಬಿಳಿ ಬಣ್ಣ, ಬೀಜ್ ಬಣ್ಣ ಮತ್ತು ಬೂದು ಬಣ್ಣವು ಶಾಶ್ವತವಾದ ಆಯ್ಕೆಗಳಾಗಿದ್ದು ಅವು ಸ್ಥಳಗಳನ್ನು ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಕಾಣುವಂತೆ ಮಾಡುತ್ತವೆ. ಅವು ಬಹುಮುಖತೆಯನ್ನು ನೀಡುತ್ತವೆ ಮತ್ತು ಗೋಡೆಯ ಬಣ್ಣಗಳ ವ್ಯಾಪಕ ಶ್ರೇಣಿಯನ್ನು ಸುಲಭವಾಗಿ ಪೂರೈಸಬಹುದು.

 

2. ಬೋಳ್ಡ್​ ಶೇಡ್​ಗಳು: ಕಪ್ಪು ಅಥವಾ ಹೊಳೆಯುವ ಬಣ್ಣದ ಚಡಿ ಟೈಲ್‌ಗಳು ವಿಶೇಷವಾಗಿ ಆಧುನಿಕ ಅಥವಾ ಕಡಿಮೆ ಸ್ಥಳಗಳಲ್ಲಿ ಗಮನಾರ್ಹ ಆಕರ್ಷತೆಯನ್ನು ಕೊಡಬಹುದು. ಈ ಆಯ್ಕೆಯು ಕೋಣೆಯ ವಿನ್ಯಾಸವನ್ನು ಎದ್ದು ಕಾಣುವಂತೆ ಮತ್ತು ಸ್ಥಳಕ್ಕೆ ವಿಶಿಷ್ಟತೆಯನ್ನು ಒದಗಿಸುತ್ತವೆ.

 

3.  ಗೋಡೆಯ ಬಣ್ಣಕ್ಕೆ ಹೊಂದಾಣಿಕೆ: ನುಣುಪಾದ ಹಾಗೂ ಒಂದೇ ರೀತಿಯ ನೋಟಕ್ಕಾಗಿ, ಗೋಡೆಗಳಂತೆಯೇ ಅದೇ ಬಣ್ಣದಲ್ಲಿ ಟೈಲ್ಸ್​ಗಳನ್ನು ಚಡಿಗೆ ಹಾಕುವುದರಿಂದ ಕೋಣೆಯ ಎತ್ತರವನ್ನು ಕಣ್ಣಿಗೆ  ಹೆಚ್ಚಿಸಬಹುದು, ಇದು ಹೆಚ್ಚು ವಿಶಾಲವಾಗಿ ಹಾಗೂ ಸೊಗಸಾಗಿ ಕಾಣುತ್ತದೆ.

 

4. ಪೂರಕ ಬಣ್ಣಗಳು: ಗೋಡೆಗಳಿಗಿಂತ ತೆಳುವಾದ ಅಥವಾ ಗಾಢವಾದ ಶೇಡ್​ ಅನ್ನು ಹೊಂದಿರುವ ಚಡಿ ಟೈಲ್ಸ್​ಗಳನ್ನು ಆಯ್ಕೆ ಮಾಡುವುದರಿಂದ ಜಾಗವನ್ನು ಸೂಕ್ಷ್ಮವಾಗಿ ವ್ಯಾಖ್ಯಾನಿಸಬಹುದು ಮತ್ತು ಕೋಣೆಯ ಸೌಂದರ್ಯವನ್ನು ಹೆಚ್ಚಿಸಬಹುದು.



 

ಚಡಿ ಟೈಲ್ಸ್ ಕ್ರಿಯಾತ್ಮಕತೆ ಮತ್ತು ಸ್ಥಳದ ಸೌಂದರ್ಯದ ಆಕರ್ಷಣೆ ಎರಡರಲ್ಲೂ ಪ್ರಮುಖ ಅಂಶವಾಗಿದೆ. ಲಭ್ಯವಿರುವ ವಿವಿಧ ವಿನ್ಯಾಸಗಳು ಮತ್ತು ಬಣ್ಣಗಳೊಂದಿಗೆ, ಗೋಡೆಗಳನ್ನು ರಕ್ಷಿಸಲು ಮತ್ತು ಯಾವುದೇ ಕೋಣೆಯ ಅಲಂಕಾರಕ್ಕೆ ಅಂತಿಮ ಸ್ಪರ್ಶವನ್ನು ಸೇರಿಸಲು ಅವು ಪರಿಪೂರ್ಣ ಪರಿಹಾರವನ್ನು ನೀಡುತ್ತವೆ.




ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....