1. ಪ್ರವೇಶ ಬಾಗಿಲನ್ನು ಇರಿಸಬೇಕಿರುವ ಸ್ಥಳ
ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣಾಭಿಮುಖ ಮನೆಗಳ ಪ್ರವೇಶ ಬಾಗಿಲನ್ನು ಇರಿಸುವಿಕೆಯನ್ನು ಸಾಮಾನ್ಯವಾಗಿ ದಕ್ಷಿಣ ಪ್ರವೇಶ ವಾಸ್ತು ಎಂದು ಕರೆಯಲಾಗುತ್ತದೆ ಹಾಗೂ ಇದು ಒಂದು ನಿರ್ಣಾಯಕ ಅಂಶವಾಗಿದೆ ಏಕೆಂದರೆ ಇದು ನಿಮ್ಮ ಮನೆಯ ಒಳಗೆ ಶಕ್ತಿಯ ತರುವ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ. ಅದನ್ನು ದಕ್ಷಿಣಾಭಿಮುಖ ಗೋಡೆಯ ಬಲಭಾಗದಲ್ಲಿ ಇರಿಸುವ ಮತ್ತು ಅದನ್ನು ಬಲಕ್ಕೆ ಒಳಮುಖವಾಗಿ ತೆರೆದುಕೊಳ್ಳುವಂತೆ ಮಾಡುವ ಮೂಲಕ, ನೀವು ಸಕಾರಾತ್ಮಕ ಮತ್ತು ಪ್ರಯೋಜನಕಾರಿ ಶಕ್ತಿಗಳು ಒಳಕ್ಕೆ ಹರಿದು ಬರಲು ಅವಕಾಶವನ್ನು ನೀಡುತ್ತೀರಿ. ಆ ಮೂಲಕ ಶಾಂತಿ ಮತ್ತು ಸಮೃದ್ಧಿಯನ್ನು ನೆಲೆಗೊಳಿಸುತ್ತೀರಿ.
2. ಅಂಡರ್‌ಗ್ರೌಂಡ್ ನೀರಿನ ಸ್ಟೋರೇಜ್‌ನ ನಿರ್ಮಾಣ
ಅಂಡರ್‌ಗ್ರೌಂಡ್ ನೀರಿನ ಟ್ಯಾಂಕ್ ಅಥವಾ ಸ್ಟೋರೇಜ್ ಸಾಮಾನ್ಯವಾಗಿ ನಿಮ್ಮ ಸೈಟ್‌ನ ಈಶಾನ್ಯ ಭಾಗದಲ್ಲಿರಬೇಕು. ವಾಸ್ತುವಿನ ಪ್ರಕಾರ, ನೀರು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿರುತ್ತದೆ. ಹೀಗಾಗಿ, ಈ ಪ್ರದೇಶದಲ್ಲಿ ನಿಮ್ಮ ನೀರಿನ ಸ್ಟೋರೇಜ್ ಅನ್ನು ನಿರ್ಮಿಸುವುದರಿಂದ ನಿಮ್ಮ ಮನೆಯಲ್ಲಿ ಧನಾತ್ಮಕ, ಸಂಪತ್ತನ್ನು ಆಕರ್ಷಿಸುವಂತಹ ಶಕ್ತಿಯ ಹರಿವನ್ನು ಹೆಚ್ಚಿಸಬಹುದು.
3. ಗೋಡೆಗಳ ದಪ್ಪ
ದಕ್ಷಿಣಾಭಿಮುಖವಾದ ಮನೆ ವಾಸ್ತುವಿನಲ್ಲಿ, ಗೋಡೆಗಳ ದಪ್ಪವೂ ಸಹ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ಮನೆಯ ದಕ್ಷಿಣ ಮತ್ತು ಪಶ್ಚಿಮ ಗೋಡೆಗಳನ್ನು ದಪ್ಪ ಮತ್ತು ಎತ್ತರವಾಗಿ ನಿರ್ಮಿಸುವ ಮೂಲಕ, ನಿಮ್ಮ ಮನೆಯನ್ನು ಯಾವುದೇ ರೀತಿಯ ನಕಾರಾತ್ಮಕ ಶಕ್ತಿಗಳನ್ನು ಯಶಸ್ವಿಯಾಗಿ ತಡೆಗಟ್ಟಬಹುದು. ದಪ್ಪವಾದ ಗೋಡೆಗಳು ಸ್ಟ್ರಕ್ಚರ್‌ಗೆ ಸ್ಥಿರತೆ ಮತ್ತು ಸಾಮರ್ಥ್ಯದ ಅಂಶವನ್ನು ನೀಡುತ್ತವೆ.
4. ಅಡುಗೆಮನೆಯ ಸ್ಥಳ
ವಾಸ್ತು ಶಾಸ್ತ್ರದ ಪ್ರಕಾರ ದಕ್ಷಿಣಾಭಿಮುಖ ಮನೆಗಳಲ್ಲಿನ ಅಡುಗೆಮನೆಯು ಆಗ್ನೇಯ ಭಾಗದಲ್ಲಿರಬೇಕು. ಬೆಂಕಿ ಇಲ್ಲಿ ಪ್ರಧಾನ ಅಂಶವಾಗಿರುತ್ತದೆ ಮತ್ತು ಅಡುಗೆಮನೆಯನ್ನು ಈ ದಿಕ್ಕಿನಲ್ಲಿ ನಿರ್ಮಿಸುವುದು ಎಂದರೆ ಈ ಬೆಂಕಿ ಅಂಶವನ್ನು ಬುದ್ಧಿವಂತಿಕೆಯಿಂದ ಬಳಸುವುದಾಗಿರುತ್ತದೆ. ಇದು ನಿಮ್ಮ ಮನೆಯ ವಾಸಿಸುವವರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
5. ಬೆಡ್ ರೂಂನ ದಿಕ್ಕು
ಮಾಸ್ಟರ್ ಬೆಡ್ ರೂಮ್ ನೈಋತ್ಯ ದಿಕ್ಕಿನಲ್ಲಿರಬೇಕು, ಏಕೆಂದರೆ ಈ ದಿಕ್ಕು ಸ್ಥಿರತೆಯನ್ನು ನೀಡುತ್ತದೆ ಮತ್ತು ನೆಮ್ಮದಿಯ ನಿದ್ರೆಯನ್ನು ಉತ್ತೇಜಿಸುತ್ತದೆ. ಇದು ಸಂಬಂಧಗಳನ್ನು ಬಲಪಡಿಸುತ್ತದೆ ಮತ್ತು ಸಾಮರಸ್ಯವನ್ನು ಉಂಟು ಮಾಡಲು ನೆರವಾಗುತ್ತದೆ ಎಂದು ನಂಬಲಾಗಿದೆ. ಆದರೆ, ಬೆಡ್ ರೂಂಗಳನ್ನು ಎಂದಿಗೂ ಈಶಾನ್ಯದಲ್ಲಿ ನಿರ್ಮಿಸಬಾರದು. ಏಕೆಂದರೆ ಇದು ದಕ್ಷಿಣಾಭಿಮುಖ ಮನೆ ವಾಸ್ತುವಿನ ಪ್ರಕಾರ ಅಶಾಂತಿ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು.