4. ಸಿಮೆಂಟ್ ಚೀಲವನ್ನು ಎತ್ತುವಾಗ ಅಥವಾ ಇಡುವಾಗ ಹುಕ್ ಬಳಸಬಾರದು
ಸಿಮೆಂಟ್ ಚೀಲಗಳನ್ನು ಎತ್ತಲು ಅಥವಾ ಇಡುವಾಗ ಹುಕ್ಕುಗಳನ್ನು ಬಳಸುವುದರಿಂದ ಹೆಚ್ಚಾಗಿ ಚೀಲಗಳು ಹಾಳಾಗುವ ಅಪಾಯವಿರುತ್ತದೆ. ಕೊಕ್ಕೆಗಳು ಚೀಲಗಳಿಗೆ ಚುಚ್ಚಬಹುದು ಅಥವಾ ಅವನ್ನು ಹರಿದು ಹಾಕಬಹುದು, ಇದರಿಂದ ಧೂಳು ಮತ್ತು ತೇವಾಂಶ ಒಳಗೆ ಹೋಗಲು ಅನುವಾಗುತ್ತದೆ. ಜೊತೆಗೆ ಇದು ಸಿಮೆಂಟ್ ಗುಣಮಟ್ಟವನ್ನು ಹಾಳು ಮಾಡಬಹುದು. ನಿಮ್ಮ ಬಂಡವಾಳ ಮತ್ತು ನಿಮ್ಮ ಸಾಮಾಗ್ರಿಗಳ ಗುಣಮಟ್ಟ ಕಾಪಾಡಲು, ಫೋರ್ಕ್‌ಲಿಫ್ಟ್‌ಗಳು, ಪ್ಯಾಲೆಟ್ ಜ್ಯಾಕ್‌ಗಳು ಅಥವಾ ಲಿಫ್ಟಿಂಗ್ ಸ್ಟ್ರಾಪ್‌ಗಳಂತಹ ಅದಕ್ಕಾಗಿಯೇ ಇರುವ ಸಿಮೆಂಟ್ ಹ್ಯಾಂಡ್ಲಿಂಗ್ ಸಾಧನಗಳನ್ನು ಉಪಯೋಗಿಸಿ. ಈ ಉಪಕರಣಗಳು ಸುರಕ್ಷಿತ ಮತ್ತು ಹಾನಿಯಾಗದಂತೆ ನಿರ್ವಹಣೆಯನ್ನು ಮಾಡಲು ಸಹಾಯ ಮಾಡುತ್ತವೆ. ಆಗ ನಿಮ್ಮ ಸಿಮೆಂಟ್ ಉತ್ತಮ ಸ್ಥಿತಿಯಲ್ಲಿ ಉಳಿಯುತ್ತದೆ ಮತ್ತು ನಿಮಗೆ ಅಗತ್ಯವಿರುವಾಗ ನಿರ್ಮಾಣಕ್ಕೆ ಸಿದ್ಧವಾಗಿರುತ್ತದೆ.
5. ಸಿಮೆಂಟ್ ಚೀಲಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡಿ.
ಗುಣಮಟ್ಟದ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಉಂಟಾಗಬಹುದಾದ ಮಾಲೀನ್ಯವನ್ನು ತಡೆಗಟ್ಟಲು ವಿವಿಧ ರೀತಿಯ ಇತರ ಸಾಮಗ್ರಗಳಿಂದ ಸಿಮೆಂಟ್ ಅನ್ನು ಪ್ರತ್ಯೇಕವಾಗಿ ಸಂಗ್ರಹಿಸುವುದು ಅತ್ಯಗತ್ಯ. ನಿಮ್ಮ ಸಿಮೆಂಟ್‌ನ ಸಮಗ್ರತೆಯನ್ನು ಖಚಿತಪಡಿಸಿಕೊಳ್ಳಲು ರಸಗೊಬ್ಬರಗಳಂತಹ ಇತರ ಸಾಮಗ್ರಿಗಳಿಂದ ಪ್ರತ್ಯೇಕವಾಗಿ ಮೀಸಲಾದ ಶೇಖರಣಾ ಪ್ರದೇಶದಲ್ಲಿ ಸಿಮೆಂಟ್ ಚೀಲಗಳನ್ನು ಸಂಗ್ರಹಿಸಿಡಬೇಕು.
6. ಹಳೆಯದನ್ನು ಮೊದಲು ಬಳಸಿ
ಸಿಮೆಂಟ್ ಚೀಲಗಳನ್ನು ಬಳಸುವಾಗ ಮೊದಲು ತಂದ ಚೀಲಗಳನ್ನು ಮೊದಲು ಬಳಸುವ ಪದ್ದತಿಯನ್ನು ಅಭ್ಯಾಸ ಮಾಡಿಕೊಳ್ಳಬೇಕು. ಮೊದಲೇ ತಂದಿರುವ ಹಳೆಯ ಚೀಲಗಳನ್ನು ಮೊದಲು ಬಳಸಬೇಕು. ಸಿಮೆಂಟ್ ಚೀಲಗಳ ಪ್ರತಿ ಸ್ಟಾಕ್‌ನಲ್ಲಿ ರಶೀದಿಯ ದಿನಾಂಕವನ್ನು ತೋರಿಸುವ ಲೇಬಲ್ ಸಿಮೆಂಟ್ ತಯಾರಾಗಿರುವ ಕಾಲವನ್ನು ನಿರ್ಧರಿಸಲು ಸಹಾಯ ಮಾಡುತ್ತದೆ. ಗೋದಾಮಿನಲ್ಲಿ ಸಿಮೆಂಟ್ ಶೇಖರಣೆಯನ್ನು ಮಾಡುವಾಗ, ಚೀಲಗಳನ್ನು ಅವುಗಳನ್ನು ತಂದಿರುವ ಕ್ರಮದಲ್ಲಿ ಬಳಸಲು ಅನುಕೂಲವಾಗುವ ರೀತಿಯಲ್ಲಿ ಜೋಡಿಸಿ ಇಡಬೇಕು.
7. ಬಳಸಿ ಉಳಿದ ಸಿಮೆಂಟ್ ಅನ್ನು ಜಾಗರೂಕತೆಯಿಂದ ಸಂಗ್ರಹಿಸಿಡಿ
ಬಳಸಿ ಉಳಿದ ಸಿಮೆಂಟ್ ಅನ್ನು ಅರ್ಧ-ಖಾಲಿ ಚೀಲಗಳಲ್ಲಿ ಶೇಖರಿಸಿಡಬೇಕು. ಮತ್ತು ಹೀಗೆ ಉಳಿದಿರುವುದನ್ನು ಮೊದಲು ಬಳಸಬೇಕು. ನಿಮ್ಮ ಬಳಿ ಉಳಿದಿರುವ ಸಿಮೆಂಟ್ ಇದ್ದರೆ, ಅದನ್ನು ಮತ್ತೆ ಚೀಲಕ್ಕೆ ತುಂಬಲು ಗಟ್ಟಿಯಾದ ಗಾಳಿಯಾಡದ ಪ್ಲಾಸ್ಟಿಕ್ ಚೀಲಗಳನ್ನು ಬಳಸಬೇಕು. ಚೀಲಗಳ ಬಾಯಿ ಹೊಲೆಯುವಾಗ ತೂತುಗಳಾಗುವುದನ್ನು ತಪ್ಪಿಸಲು ಡಕ್ಟ್ ಟೇಪ್ ಅಥವಾ ತಂತಿಗಳಿಂದ ಮುಚ್ಚಬೇಕು.