ನೋಡಲು ಆಕರ್ಷಕವಾಗಿರುವ ಈ ಮಾದರಿಯಲ್ಲಿ ಇಟ್ಟಿಗೆಗಳನ್ನು ಜ಼ಿಗ್‍ಜ಼್ಯಾಗ್ ಮಾದರಿಯಲ್ಲಿ ಇರಿಸುವುದರಿಂದ ವಿವಿಧ ಬಗೆಯ ಬಾಂಡ್‌ಗಳ ಪೈಕಿ ಈ ಬಾಂಡ್ ಅತ್ಯಂತ ವಿಶಿಷ್ಟವಾಗಿದೆ. ಇದು ನಯನ ಮನೋಹರವಾಗಿದ್ದರೂ ಸಹ ಸಾಮಾನ್ಯವಾಗಿ ಇದನ್ನು ಕಟ್ಟಡದ ಗೋಡೆಗಳಲ್ಲಿ ಬಳಸುವುದಿಲ್ಲ, ಕಾರಣ ಇದರ ಬಲದ ಪರಿಮಿತಿ.
8. ರೇಕಿಂಗ್ ಬಾಂಡ್
ಈ ವಿಧದಲ್ಲಿ ಇಟ್ಟಿಗೆಗಳನ್ನು ಒಂದು ಕೋನದಲ್ಲಿ ಜೋಡಿಸುವ ಮೂಲಕ ವಿಶಿಷ್ಟ ಕರ್ಣೀಯ ವಿನ್ಯಾಸಗಳನ್ನು ಸೃಷ್ಟಿಸಲಾಗುತ್ತದೆ. ಈ ಮಾದರಿಗಳು ಪೂರ್ಣವಾಗಿ ಅಲಂಕಾರಿಕ ಉದ್ದೇಶ ಹೊಂದಿರುತ್ತವೆ ಅಥವಾ ಗೋಡೆಯ ಸ್ಥಿರತೆಯನ್ನು ವೃದ್ಧಿಸುತ್ತವೆ.
- ಹೆರಿಂಗ್‍ಬೋನ್ ಬಾಂಡ್: ಹೆರಿಂಗ್‍ಬೋನ್‍ನಲ್ಲಿ ನಿರ್ದಿಷ್ಟವಾಗಿ ಇಟ್ಟಿಗೆಗಳನ್ನು ಕರ್ಣೀಯವಾಗಿ ವಿರುದ್ಧ ದಿಕ್ಕಿನಲ್ಲಿ V ಆಕಾರದಲ್ಲಿ ಜೋಡಿಸಲಾಗುತ್ತದೆ,ಇದು ಸಾಕಷ್ಟು ಬಲವನ್ನು ನೀಡುವುದಲ್ಲದೆ ನೋಡಲು ಸಹ ಆಕರ್ಷಕವಾಗಿರುತ್ತದೆ.
- ಕರ್ಣೀಯ ಬಾಂಡ್: ಈ ವಿಧಾನದಲ್ಲಿ ಕರ್ಣೀಯವಾಗಿ ಇಟ್ಟಿಗೆಯ ಪದರಗಳನ್ನು ಜೋಡಿಸಲಾಗುತ್ತದೆ, ಸಾಮಾನ್ಯವಾಗಿ ಇದು ಭಾರೀ ಗಾತ್ರದ ಗೋಡೆಗಳ ಬಲವನ್ನು ಹೆಚ್ಚಿಸಲು ಮತ್ತು ದಪ್ಪನೆಯ ವಿಭಜಕಗಳನ್ನು ನಿರ್ಮಿಸಲು ಬಳಕೆಯಾಗುತ್ತದೆ.
9. ಫೇಸಿಂಗ್ ಬಾಂಡ್
ಇದನ್ನು ಮುಖ್ಯವಾಗಿ ಸ್ಟ್ರೆಚರ್ ಬಾಂಡ್‌ದಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿರುತ್ತದೆ, ಆದರೆ ನಡುವೆ ನಿಯಮಿತ ಅಂತರದಲ್ಲಿ ಹೆಡರ್‍ಗಳನ್ನೂ ಸೇರಿಸಲಾಗುತ್ತದೆ.
10. ಸ್ಕಾಟಿಶ್ ಬಾಂಡ್
ಸ್ಕಾಟಿಶ್ ಬಾಂಡ್‌ನಲ್ಲಿ ಹಲವಾರು ಸ್ಟ್ರೆಚರ್‌ಗಳ ಸಾಲುಗಳು ಮತ್ತು ಒಂದು ಹೆಡರ್‌ನ ಸಾಲನ್ನು ಬಳಸಿ ಗಟ್ಟಿಯಾದ ಹಾಗೂ ವಿಶಿಷ್ಟ ಮಾದರಿಯ ಗೋಡೆಯನ್ನು ಕಟ್ಟಲಾಗುತ್ತದೆ. ಅಮೇರಿಕನ್ ಬಾಂಡ್ ಕೂಡ ಇದೇ ಥರಹದ್ದಾಗಿದ್ದು ಇದು ಹೆಡರ್ ಕೋರ್ಸ್ ಗಿಂತ ಮೊದಲು ವಿವಿಧ ಸ್ಟ್ರೆಚರ್ ಕೋರ್ಸ್ ಗಳನ್ನು ಆಯಾ ಜಾಗದ ಅಭ್ಯಾಸದಂತೆ ಬಳಸಲಾಗುತ್ತದೆ.
11. ಇಲಿ ಬೋನು ಬಾಂಡ್
ಇದೊಂದು ಟೊಳ್ಳು ಗೋಡೆಯ ಮಾದರಿಯಾಗಿದ್ದು ಇದರಲ್ಲಿ ಇಟ್ಟಿಗೆಗಳನ್ನು ಅವುಗಳ ತುದಿಯಲ್ಲಿ ಇಡಲಾಗುತ್ತದೆ. ಇದು ಗೋಡೆಯಲ್ಲಿ ರಂಧ್ರಗಳನ್ನು ಸೃಷ್ಟಿಸಿ ಶಾಖ ನಿರೋಧಕವಾಗಿ ಕೆಲಸ ಮಾಡುತ್ತದೆ. ಇದು ಕಡಿಮೆ ಇಟ್ಟಿಗೆಗಳನ್ನು ಬಳಸುವುದಲ್ಲದೇ ಕಡಿಮೆ ವೆಚ್ಚದಲ್ಲಿ ಕಟ್ಟಬಹುದಾಗಿದ್ದು ಆದರೆ ಅದರ ಸಂಕೀರ್ಣತೆಯಿಂದ ನುರಿತ ಕೆಲಸಗಾರರ ಅವಶ್ಯಕತೆ ಇರುತ್ತದೆ.
ಇಟ್ಟಿಗೆ ಕಟ್ಟಡಗಳಲ್ಲಿ ಉತ್ತಮ ಬಾಂಡ್‌ಗಾಗಿ 10 ನಿಯಮಗಳು.
1. ಪರಸ್ಪರ ಹೊಂದುವಂತಹ ಇಟ್ಟಿಗೆಗಳನ್ನು ಬಳಸಿ. ಎಲ್ಲ ಇಟ್ಟಿಗೆಗಳು ಒಂದೇ ಗಾತ್ರ ಹಾಗೂ ಆಕಾರದ್ದಾಗಿರುವಂತೆ ನೋಡಿಕೊಳ್ಳಿ.
2. ಗಾರೆಯನ್ನು ಸಮನಾಗಿರಿಸಿ. ಇಟ್ಟಿಗೆಗಳ ನಡುವೆ ಸಮನಾದ ದಪ್ಪದ (ಪೆನ್ಸಿಲ್ ನಷ್ಟು ದಪ್ಪ) ಗಾರೆಯನ್ನು ಬಳಸಿ.
3. ಸರಿಯಾದ ಮಾದರಿಯನ್ನು ಆರಿಸಿ: ಗೋಡೆ ಕಟ್ಟಲು ಉತ್ತಮವಾದ ಇಟ್ಟಿಗೆ ಪೇರಿಸುವ ಮಾದರಿಯನ್ನು ಆರಿಸಿ.
4. ಇಟ್ಟಿಗೆಗಳನ್ನು ಓವರ್‌ಲ್ಯಾಪ್ ಮಾಡಿ: ಗೋಡೆಯು ಮೇಲಿನಿಂದ ಕೆಳತನಕ ಇಟ್ಟಿಗೆಯ ನೇರ ರೇಖೆ ಬರದಂತೆ ಓವರ್‌ಲ್ಯಾಪ್ ಮಾಡಿ. ಇದು ಗೋಡೆಯನ್ನು ಬಲಿಷ್ಠವಾಗಿಸುತ್ತದೆ.
5. ಸಂದುಗಳನ್ನು ಸರಿಯಾಗಿ ಮುಚ್ಚಿ: ನೀರು ಒಳಬರದಂತೆ ತಡೆಯಲು ಇಟ್ಟಿಗೆಗಳ ನಡುವಿನ ಅಂತರವನ್ನು ಸಂಪೂರ್ಣವಾಗಿ ಮುಚ್ಚಿ.
6. ಖಾಲಿ ಜಾಗಗಳನ್ನು ಸರಿಯಾಗಿ ಮುಚ್ಚಿ: ಗೋಡೆಯ ತುದಿಯಲ್ಲಿ ಬಾಕಿ ಜಾಗ ಉಳಿದಿದ್ದರೆ ಅದನ್ನು ತುಂಡು ಇಟ್ಟಿಗೆಗಳಿಂದ ಅಥವಾ ಅರ್ಧ ಇಟ್ಟಿಗೆಗಳಿಂದ ಪೂರ್ತಿಗೊಳಿಸಿ.
7. ಸರಿಯಾದ ಪೇಸ್ಟ್ ಮಿಶ್ರಣವನ್ನು ಬಳಸಿ: ಗಾರೆ ಬಹಳ ದಿನ ಬಾಳಲು ಮತ್ತು ಗಟ್ಟಿಯಾಗಿರಲು ಅದನ್ನು ಸರಿಯಾದ ಸಾಮಗ್ರಿಗಳಿಂದ ಯೋಗ್ಯ ರೀತಿಯಲ್ಲಿ ತಯಾರಿಸಿ.
8. ಮೊದಲು ಇಟ್ಟಿಗೆಗಳನ್ನು ತೇವಗೊಳಿಸಿ. ಇಟ್ಟಿಗೆಗಳು ಗಾರೆಯಿಂದ ನೀರನ್ನು ಹೀರಿಕೊಳ್ಳದಿರಲು ಅವನ್ನು ಬಳಸುವ ಮೊದಲು ನೀರಿನಿಂದ ಒದ್ದೆಯಾಗಿಸಿ. ಇದು ಅವು ಸರಿಯಾಗಿ ಅಂಟಿಕೊಳ್ಳಲು ಸಹಾಯ ಮಾಡುತ್ತದೆ.
9. ನೇರ ಮತ್ತು ಮಟ್ಟವಾಗಿರಿಸಿ: ಗೋಡೆ ಕಟ್ಟುವಾಗ ಅದು ನೇರವಾಗಿದೆಯ ಹಾಗೂ ಸಮತಲವಾಗಿದೆಯಾ ಎಂದು ಪರೀಕ್ಷಿಸಿಕೊಳ್ಳಿ.
10. ಸರಿಯಾಗಿ ಒಣಗಿಸಿ: ಗಾರೆ ಗಟ್ಟಿಯಾಗಲು ಹಾಗೂ ಸರಿಯಾಗಿ ಹಿಡಿದುಕೊಳ್ಳಲು ಗೋಡೆ ಸರಿಯಾಗಿ ಒಣಗುವಂತೆ ನೋಡಿಕೊಳ್ಳಿ.