ನಿಮ್ಮ ಅಗತ್ಯಗಳಿಗಾಗಿ ವಿವಿಧ ರೀತಿಯ ನೀರಿನ ಟ್ಯಾಂಕ್‌ಗಳ ನಡುವೆ ಆಯ್ಕೆ ಮಾಡುವಾಗ, ಪ್ರತಿಯೊಂದು ಗುಣಲಕ್ಷಣಗಳು ಮತ್ತು ಅನುಕೂಲಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಇಲ್ಲಿ, ನಾವು ವಿವಿಧ ನೀರಿನ ಟ್ಯಾಂಕ್ ಪ್ರಕಾರಗಳು, ಅವುಗಳ ನಿರ್ದಿಷ್ಟ ವೈಶಿಷ್ಟ್ಯಗಳು, ಪ್ರಯೋಜನಗಳು ಮತ್ತು ಅವುಗಳನ್ನು ಎಲ್ಲಿ ಬಳಸಲು ಸೂಕ್ತವಾಗಿರುತ್ತದೆ ಎಂಬುದನ್ನು ವಿಶ್ಲೇಷಿಸಲಿದ್ದೇವೆ.
1. ಪ್ಲಾಸ್ಟಿಕ್ ಟ್ಯಾಂಕ್‌ಗಳು
ಪ್ಲಾಸ್ಟಿಕ್ ಟ್ಯಾಂಕ್‌ಗಳು ವಿಶೇಷವಾಗಿ ಪಾಲಿಥಿನ್‌ನಿಂದ ಮಾಡಲ್ಪಟ್ಟಿರುತ್ತವೆ. ಅವುಗಳ ಬಹುಮುಖ ಸಾಮರ್ಥ್ಯ, ಕೈಗೆಟುಕುವ ದರ ಮತ್ತು ಸುಲಭ ಅಳವಡಿಕೆಯಿಂದಾಗಿ ಜನಪ್ರಿಯವಾಗಿವೆ. ಇವು ಮನೆಗಳಲ್ಲಿ ಬಳಸಲಾಗುವ ನೀರಿನ ಟ್ಯಾಂಕ್‌ಗಳ ಪ್ರಮುಖ ವಿಧಗಳಾಗಿವೆ ಮತ್ತು ವಿಭಿನ್ನ ಶೇಖರಣಾ ಸಾಮರ್ಥ್ಯಗಳಿಗೆ ಅನುಗುಣವಾಗಿ ವಿವಿಧ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತವೆ. ಪ್ಲಾಸ್ಟಿಕ್ ಟ್ಯಾಂಕ್ ಗಳ ಕೆಲವು ಪ್ರಮುಖ ಗುಣಲಕ್ಷಣಗಳು, ಅನುಕೂಲಗಳು ಮತ್ತು ಎಲ್ಲಿ ಬಳಸಲು ಸೂಕ್ತ ಎನ್ನುವುದನ್ನು ಈ ಕೆಳಗೆ ನೀಡಲಾಗಿದೆ:
- ಹಗುರತೂಕ ಮತ್ತು ಅಳವಡಿಕೆ ಸುಲಭ
- ತುಕ್ಕು ನಿರೋಧಕ
- ಕಡಿಮೆ ನಿರ್ವಹಣಾ ಅವಶ್ಯಕತೆಗಳು
- ವಿವಿಧ ಗಾತ್ರಗಳು ಮತ್ತು ಆಕಾರಗಳಲ್ಲಿ ದೊರೆಯುತ್ತದೆ
- ನೆಲದ ಮೇಲಿನ ಮತ್ತು ನೆಲದ ಅಡಿಯಲ್ಲಿ ಬಳಸಲು ಸೂಕ್ತವಾಗಿದೆ
a) ಪಾಲಿಥೀನ್ ಟ್ಯಾಂಕ್‌ಗಳು
ಪಾಲಿಥಿನ್ ಟ್ಯಾಂಕ್‌ಗಳು ಹಗುರವಾಗಿದ್ದರೂ ಸಹ ದೀರ್ಘ ಬಾಳಿಕೆ ಬರುತ್ತವೆ. ಇದರಿಂದಾಗಿ ಅವು ಸವೆತ ಮತ್ತು ತುಕ್ಕು ನಿರೋಧಕವಾಗಿರುತ್ತವೆ. ಅವುಗಳನ್ನು ಯುವಿ-ಸ್ಟೆಬಿಲೈಸ್ ಮಾಡಲಾಗಿರುವುದರಿಂದ ಅವು ಬಿಸಿಲಿಗೆ ಒಡ್ಡಿಕೊಂಡಾಗಲೂ ಸುದೀರ್ಘ ಬಾಳಿಕೆ ಬರುತ್ತವೆ. ಪಾಲಿಥಿನ್ ಟ್ಯಾಂಕ್‌ಗಳನ್ನು ನೆಲದ ಮೇಲೆ ಮತ್ತು ನೆಲದ ಒಳಗೆ ಅಳವಡಿಸಲು ಸೂಕ್ತವಾಗಿವೆ. ವಸತಿ, ಕೃಷಿ ಮತ್ತು ಸಣ್ಣ ಪ್ರಮಾಣದ ವಾಣಿಜ್ಯ ಬಳಕೆಗಳಿಗೆ ಇವು ಅತ್ಯುತ್ತಮ ಆಯ್ಕೆಯಾಗಿವೆ. ಇವು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಸ್ಥಳಾಂತರಿಸುವುದು ಮತ್ತು ಸುಲಭ ಹೊಂದಿಕೆಯ ಅಗತ್ಯವಿರುವ ಪ್ರದೇಶಗಳಲ್ಲಿ ಮಳೆನೀರು ಕೊಯ್ಲು, ನೀರಾವರಿ ಮತ್ತು ನೀರಿನ ಸಂಗ್ರಹಣೆಗಾಗಿ ಸಾಮಾನ್ಯವಾಗಿ ಬಳಸಲಾಗುವ ನೀರಿನ ಟ್ಯಾಂಕ್‌ಗಳಾಗಿವೆ.
2. ಕಾಂಕ್ರೀಟ್ ಟ್ಯಾಂಕ್‌ಗಳು
ಕಾಂಕ್ರೀಟ್ ಟ್ಯಾಂಕ್ ಗಳು ತಮ್ಮ ದೃಢತೆ ಮತ್ತು ದೀರ್ಘಬಾಳಿಕೆಗೆ ಹೆಸರುವಾಸಿಯಾಗಿವೆ. ಈ ಟ್ಯಾಂಕ್‌ಗಳನ್ನು ಸಾಮಾನ್ಯವಾಗಿ ರಿಇನ್‌ಫೋರ್ಸ್ಡ್ ಕಾಂಕ್ರೀಟ್ ಬಳಸಿ ಸ್ಥಳದಲ್ಲೇ ನಿರ್ಮಿಸಲಾಗುತ್ತದೆ. ಇದರಿಂದ ಗಟ್ಟಿಮುಟ್ಟಾದ ಮತ್ತು ಸುದೀರ್ಘ ಬಾಳಿಕೆ ಬರುವ ನೀರುವ ಶೇಖರಣಾ ವ್ಯವಸ್ಥೆಯನ್ನು ಒದಗಿಸುತ್ತದೆ. ಅವುಗಳನ್ನು ಸಾಮಾನ್ಯವಾಗಿ ಕೃಷಿಗಾಗಿ ನೀರಿನ ಸಂಗ್ರಹಣೆ, ಅಗ್ನಿಶಾಮಕ ಮತ್ತು ಮುನ್ಸಿಪಲ್ ಬಳಕೆ ಸೇರಿದಂತೆ ದೊಡ್ಡ ಪ್ರಮಾಣದ ವಾಣಿಜ್ಯ ಅಥವಾ ಕೈಗಾರಿಕಾ ಉದ್ಧೇಶಗಳಿಗಾಗಿ ಬಳಸಲಾಗುತ್ತದೆ.
ಕಾಂಕ್ರೀಟ್ ಟ್ಯಾಂಕ್‌ಗಳ ಪ್ರಮುಖ ಲಕ್ಷಣಗಳು ಮತ್ತು ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ:
- ಇದು ಹಲವಾರು ದಶಕಗಳವರೆಗೆ ಸುದೀರ್ಘ ಬಾಳಿಕೆ ಬರುತ್ತದೆ
- ಅತ್ಯುತ್ತಮ ಬೆಂಕಿ ನಿರೋಧಕತೆ ಮತ್ತು ಸ್ಥಿರತೆ
- ದೊಡ್ಡ ಪ್ರಮಾಣದ ವಾಣಿಜ್ಯ ಅಥವಾ ಔದ್ಯೋಗಿಕ ನೀರಿನ ಸಂಗ್ರಹಕ್ಕೆ ಸೂಕ್ತವಾಗಿದೆ
- ವಾತಾವರಣದಲ್ಲಿ ಉಷ್ಣತೆಯ ಬದಲಾವಣೆಗೆ ನಿರೋಧಕತೆಯನ್ನು ಒದಗಿಸುತ್ತದೆ
- ದೊಡ್ಡ ಪ್ರಮಾಣದ ವಾಣಿಜ್ಯ ಅಥವಾ ಔದ್ಯೋಗಿಕ ನೀರಿನ ಸಂಗ್ರಹಕ್ಕೆ ಸೂಕ್ತವಾಗಿದೆ
3. ಸ್ಟೀಲ್ ಟ್ಯಾಂಕ್‌ಗಳು
ಉಕ್ಕಿನ ಟ್ಯಾಂಕ್‌ಗಳು ತಮ್ಮ ಸಾಮರ್ಥ್ಯ, ವಿಶ್ವಾಸಾರ್ಹತೆ ಮತ್ತು ಬಹುಮುಖ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಅವುಗಳನ್ನು ವಿಭಿನ್ನ ಉಕ್ಕಿನ ವಸ್ತುಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ನಿರ್ಮಿಸಬಹುದು. ಪ್ರತಿಯೊಂದೂ ಸಹ ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿರುತ್ತವೆ. ಸ್ಟೀಲ್‌ನಿಂದ ಮಾಡಿದ ಕೆಲವು ವಿಭಿನ್ನ ರೀತಿಯ ನೀರಿನ ಟ್ಯಾಂಕ್ ಗಳನ್ನು ಅನ್ವೇಷಿಸೋಣ:
a) ಕಾರ್ಬನ್ ವೆಲ್ಡೆಡ್ ಸ್ಟೀಲ್ ಟ್ಯಾಂಕ್‌ಗಳು
ಕಾರ್ಬನ್ ವೆಲ್ಡೆಡ್ ಸ್ಟೀಲ್ ಟ್ಯಾಂಕ್‌ಗಳನ್ನು ಸ್ಟೀಲ್ ಪ್ಲೇಟ್‌ಗಳನ್ನು ಒಟ್ಟಿಗೆ ವೆಲ್ಡಿಂಗ್ ಮಾಡುವ ಮೂಲಕ ತಯಾರಿಸಲಾಗುತ್ತದೆ. ಅವು ಹೆಚ್ಚು ಬಾಳಿಕೆ ಬರುತ್ತವೆ, ತುಕ್ಕು ನಿರೋಧಕವಾಗಿರುತ್ತವೆ ಮತ್ತು ನಿರ್ದಿಷ್ಟ ಶೇಖರಣಾ ಅವಶ್ಯಕತೆಗಳಿಗೆ ಅನುಗುಣವಾಗಿ ತಯಾರಿಸಬಹುದಾಗಿರುತ್ತವೆ. ಅವು ಗಾತ್ರ ಮತ್ತು ಆಕಾರದಲ್ಲಿ ಬಹುಮುಖ ಸಾಮರ್ಥ್ಯವನ್ನು ಒದಗಿಸುತ್ತವೆ ಇದರಿಂದ ವಿವಿಧ ಶೇಖರಣಾ ಸಾಮರ್ಥ್ಯಗಳನ್ನು ಹೊಂದಲು ಸಾಧ್ಯವಿರುತ್ತದೆ. ಕಾರ್ಬನ್ ವೆಲ್ಡ್ ಸ್ಟೀಲ್ ಟ್ಯಾಂಕ್‌ಗಳು ಕುಡಿಯುವ ನೀರು, ತ್ಯಾಜ್ಯ ನೀರು, ರಾಸಾಯನಿಕಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಸಂಗ್ರಹಿಸಲು ವ್ಯಾಪಕವಾಗಿ ಬಳಸಲಾಗುತ್ತದೆ. ಇದು ತಾನು ಸಂಗ್ರಹಿಸಿ ಇರಿಸಿಕೊಂಡ ವಸ್ತುಗಳ ಸುರಕ್ಷಿತತೆ ಮತ್ತು ವಿಶ್ವಾಸಾರ್ಹತೆಯನ್ನು ಒದಗಿಸುತ್ತದೆ.
b) ಬೋಲ್ಟೆಡ್ ಸ್ಟೀಲ್ ಟ್ಯಾಂಕ್‌ಗಳು
ಬೋಲ್ಟೆಡ್ ಸ್ಟೀಲ್ ಟ್ಯಾಂಕ್‌ಗಳನ್ನು ಪ್ರಿಫ್ಯಾಬ್ರಿಕೇಟೆಡ್ ಸ್ಟೀಲ್ ಪ್ಯಾನೆಲ್‌ಗಳನ್ನು ಒಟ್ಟಿಗೆ ಬೋಲ್ಟ್ ಮಾಡುವ ಮೂಲಕ ನಿರ್ಮಿಸಲಾಗುತ್ತದೆ. ಅವು ಗಾತ್ರದ ದೃಷ್ಟಿಯಿಂದ ಸುಲಭ ಹೊಂದಾಣಿಕೆಯನ್ನು ಮತ್ತು ಸುಲಭವಾಗಿ ವಿಸ್ತರಿಸಬಹುದಾಗಿರುತ್ತವೆ ಅಥವಾ ಸ್ಥಳಾಂತರಿಸಬಹುದಾಗಿರುತ್ತವೆ. ಈ ಟ್ಯಾಂಕ್‌ಗಳು ಭಾರೀ-ಹೊರೆಯನ್ನು ತಡೆದುಕೊಳ್ಳಬಲ್ಲ ಮತ್ತು ಗಣನೀಯ ಸಾಮರ್ಥ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇದು ಕೈಗಾರಿಕಾ ಅಥವಾ ವಾಣಿಜ್ಯ ಬಳಕೆಗೆ ಸೂಕ್ತವಾಗಿರುತ್ತದೆ. ಮಳೆನೀರಿನ ಕೊಯ್ಲು, ತ್ಯಾಜ್ಯನೀರಿನ ಸಂಸ್ಕರಣೆ ಮತ್ತು ಕುಡಿಯುವ ನೀರಿನ ಸಂಗ್ರಹಣೆ ಸೇರಿದಂತೆ ವಾಣಿಜ್ಯ ಮತ್ತು ಕೈಗಾರಿಕಾ ನೀರಿನ ಶೇಖರಣಾ ಅಗತ್ಯಗಳಿಗಾಗಿ ಅವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
c) ಕೋರುಗೇಟೆಡ್ ಸ್ಟೀಲ್ ಟ್ಯಾಂಕ್‌ಗಳು
ಕೋರುಗೇಟೆಡ್ ಸ್ಟೀಲ್ ಟ್ಯಾಂಕ್ ಗಳನ್ನು ಕೋರುಗೇಟೆಡ್ ವಿನ್ಯಾಸದೊಂದಿಗೆ ಗಾಲ್ವನೈಸ್ಡ್ ಸ್ಟೀಲ್ ಪ್ಯಾನೆಲ್‌ಗಳಿಂದ ತಯಾರಿಸಲಾಗುತ್ತದೆ. ಅವು ರಚನಾತ್ಮಕವಾಗಿ ಬಲಯುತವಾಗಿರುತ್ತವೆ ಮತ್ತು ಬಾಹ್ಯ ಒತ್ತಡಗಳಿಗೆ ಪ್ರತಿರೋಧವನ್ನು ಒದಗಿಸುತ್ತವೆ ಮತ್ತು ನೆಲದ ಮೇಲಿನ ಬಳಕೆಗಳಿಗೆ ಸೂಕ್ತವಾಗಿವೆ. ಕೋರುಗೇಟೆಡ್ ಸ್ಟೀಲ್ ಟ್ಯಾಂಕ್‌ಗಳನ್ನು ಸಾಮಾನ್ಯವಾಗಿ ಜಾನುವಾರುಗಳಿಗೆ ನೀರುಣಿಸಲು ಮತ್ತು ನೀರಾವರಿಯಂತಹ ಕೃಷಿ ಉದ್ದೇಶಗಳಿಗಾಗಿ ಮತ್ತು ಅಗ್ನಿ ಶಾಮಕ ವ್ಯವಸ್ಥೆಗಳಿಗೆ ಬಳಸಲಾಗುತ್ತದೆ.