ಕಾಂಕ್ರೀಟ್‌ನಲ್ಲಿ ಅಪೇಕ್ಷಿತ ಶಕ್ತಿ, ಬಾಳಿಕೆ ಮತ್ತು ಪ್ರತಿರೋಧ ಗುಣಲಕ್ಷಣಗಳನ್ನು ಪಡೆದುಕೊಳ್ಳಲು ಸರಿಯಾಗಿ ಕ್ಯೂರಿಂಗ್ ಮಾಡುವುದು ಅತ್ಯಗತ್ಯವಾಗಿದೆ. ತೇವಾಂಶವನ್ನು ಹೆಚ್ಚಿಸಲು ಹಾಗೂ ದೃಢವಾದ ಕಾಂಕ್ರೀಟ್ ಮ್ಯಾಟ್ರಿಕ್ಸ್ ಸ್ಟ್ರಕ್ಚರ್ ಉಂಟಾಗುವಂತೆ ಮಾಡಲು ಸೂಕ್ತವಾದ ತೇವಾಂಶ ಮತ್ತು ತಾಪಮಾನದ ಪರಿಸ್ಥಿತಿಗಳನ್ನು ನಿರ್ವಹಿಸುವುದನ್ನು ಕೂಡ ಕ್ಯೂರಿಂಗ್ ಮಾಡುವುದು ಒಳಗೊಂಡಿರುತ್ತದೆ. ಈ ಪ್ರಕ್ರಿಯೆಯು ಸಿಮೆಂಟ್ ಕಣಗಳನ್ನು ಒಟ್ಟಿಗೆ ಬಂಧಿಸಲು ಮತ್ತು ಅವುಗಳನ್ನು ಒಟ್ಟುಗೂಡಿಸಲು ಅವಕಾಶ ಮಾಡಿಕೊಡುತ್ತದೆ. ಇದು ದಟ್ಟವಾದ ಮತ್ತು ಬಾಳಿಕೆ ಬರುವ ಕಾಂಕ್ರೀಟ್ ಸ್ಟ್ರಕ್ಚರ್ ನಿರ್ಮಾಣಕ್ಕೆ ಕಾರಣವಾಗುತ್ತದೆ. ಕ್ಯೂರಿಂಗ್ ಸಮಯದಲ್ಲಿ, ತೇವಾಂಸವನ್ನು ಹಿಡಿದಿಟ್ಟುಕೊಳ್ಳುವ ಪ್ರಕ್ರಿಯೆಯು ಮುಂದುವರಿಯುತ್ತದೆ. ಕಾಂಕ್ರೀಟ್ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಕ್ಯೂರಿಂಗ್ ಕಾಂಪೌಂಡ್‌ಗಳನ್ನು ಬಳಸದೆ ಮಾಡುವ ಕಾಂಕ್ರೀಟ್ ಕ್ಯೂರಿಂಗ್, ದಿನ ಕಳೆದಂತೆ ಕಾಂಕ್ರೀಟ್ ಬಿರುಕುಗಳು, ಮುದುರಿಕೊಳ್ಳುವುದು ಮತ್ತು ಕಡಿಮೆ ಬಾಳಿಕೆ ಬರುವಂತಾಗಲು ಕಾರಣವಾಗುತ್ತದೆ. ನಂತರ ಇದು ಕಾಲಾನಂತರದಲ್ಲಿ ಸ್ಟ್ರಕ್ಚರ್ಗಳ ಸಮಗ್ರತೆಯನ್ನು ಕಡಿಮೆ ಮಾಡಬಹುದು.
ಕಾಂಕ್ರೀಟ್ ಕ್ಯೂರಿಂಗ್ ಕಾಂಪೌಂಡ್ಗಳ ಪ್ರಕಾರಗಳು
1) ಸಿಂಥೆಟಿಕ್ ರೆಸಿನ್ ಕಾಂಪೌಂಡ್
ಸಿಂಥೆಟಿಕ್ ರೆಸಿನ್ ಕಾಂಪೌಂಡ್‌ಗಳು ಎಪಾಕ್ಸಿ ಅಥವಾ ಪಾಲಿಯುರೆಥೇನ್‌ನಂತಹ ರೆಸಿನ್ ರಾಳಗಳನ್ನು ಬಳಸಿಕೊಂಡು ತಯಾರಿಸಲಾಗಿರುತ್ತದೆ. ಈ ಕಂಪೌಂಡ್ಗಳು ಕಾಂಕ್ರೀಟ್ ಮೇಲ್ಮೈಯಲ್ಲಿ ತೆಳುವಾದ ಲೇಪವನ್ನು ರೂಪಿಸುತ್ತವೆ. ಕ್ಯೂರಿಂಗ್ ಪ್ರಕ್ರಿಯೆಯಲ್ಲಿ ತೇವಾಂಶ ಹೋಗುವುದರದ ವಿರುದ್ಧ ತಡೆಗೋಡೆಯನ್ನು ಒದಗಿಸುತ್ತವೆ.
ಪ್ರಯೋಜನೆಗಳು:
- ಕ್ಯೂರಿಂಗ್ ಸರಿಯಾಗಿ ಆಗುವಂತೆ ಹೆಚ್ಚಿನ ತೇವಾಂಶವನ್ನು ಒದಗಿಸುತ್ತದೆ.
- ಕಾಂಕ್ರೀಟ್ ಬಾಳಿಕೆ ಮತ್ತು ಸವೆತ ಮತ್ತು ರಾಸಾಯನಿಕಗಳಿಗೆ ಪ್ರತಿರೋಧವನ್ನು ಹೆಚ್ಚಿಸುತ್ತದೆ.
- ಯುವಿ ಕಿರಣಗಳನ್ನು ತಡೆಯುವ ಮೂಲಕ ದೀರ್ಘಾವಧಿ ರಕ್ಷಣೆಯನ್ನು ಕೊಡುತ್ತದೆ.
- ಕಾಂಕ್ರೀಟ್ ಮೇಲ್ಮೈಗಳಿಗೆ ಗಟ್ಟಿಯಾಗಿ ಅಂಟಿಕೊಳ್ಳುವುದನ್ನು ಖಚಿತಪಡಿಸುವುದರೊಂದಿಗೆ ದೀರ್ಘಾಯುಷ್ಯವನ್ನು ಖಾತ್ರಿಗೊಳಿಸುತ್ತದೆ.
2) ಅಕ್ರಿಲಿಕ್ ಕಂಪೌಂಡ್
ಅಕ್ರಿಲಿಕ್ ಕಂಪೌಂಡ್ಗಳು ಅಕ್ರಿಲಿಕ್ ಪಾಲಿಮರ್‌ಗಳನ್ನು ಒಳಗೊಂಡಿರುವ ನೀರು ಆಧಾರಿತ ಕ್ಯೂರಿಂಗ್ ಕಂಪೌಂಡ್ಗಳಾಗಿವೆ. ಇದೊಂದು ರೀತಿಯ ಕಾಂಕ್ರೀಟ್ ಕ್ಯೂರಿಂಗ್ ಕಂಪೌಂಡ್ ಆಗಿದ್ದು, ಕಾಂಕ್ರೀಟ್ ಮೇಲ್ಮೈಯಲ್ಲಿ ತೆಳುವಾದ ಲೇಪನವನ್ನು ರೂಪಿಸುತ್ತದೆ. ಜೊತೆಗೆ ಕ್ಯೂರಿಂಗ್ ಪ್ರಕ್ರಿಯೆಯಲ್ಲಿ ತೇವಾಂಶದ ಹಿಡಿದಿಟ್ಟುಕೊಳ್ಳುವಂತೆ ಮಾಡುತ್ತದೆ ಹಾಗೂ ರಕ್ಷಣೆಯನ್ನು ಕೊಡುತ್ತದೆ.
ಪ್ರಯೋಜನೆಗಳು:
- ತೇವಾಂಶವನ್ನು ಉಳಿಸಿಕೊಂಡು ಕ್ರಮೇಣ ತೇವಾಂಶವು ಹೋಗುವಂತೆ ಮಾಡುವ ಮೂಲಕ ಸರಿಯಾಗಿ ಕ್ಯೂರಿಂಗ್ ಆಗಲು ಸುಗಮಗೊಳಿಸುತ್ತದೆ.
- ಕಡಿಮೆ ಸಮಯದಲ್ಲಿ ಒಣಗುತ್ತದೆ ಹಾಗೂ ಯುವಿ ಕಿರಣಗಳಿಗೆ ಪ್ರತಿರೋಧವನ್ನು ಒಡ್ಡುತ್ತದೆ.
- ಸ್ಪಷ್ಟವಾದ ಮ್ಯಾಟ್ ಫಿನಿಶ್‌ನೊಂದಿಗೆ ಕಾಂಕ್ರೀಟ್‌ನ ಸೌಂದರ್ಯವನ್ನು ಹೆಚ್ಚಿಸುತ್ತದೆ.
- ವಿವಿಧ ಕಾಂಕ್ರೀಟ್ ಬಳಕೆಗಳಲ್ಲಿ ಸೂಕ್ತವಾಗಿ ಅಂಟಿಕೊಳ್ಳುತ್ತದೆ ಹಾಗೂ ಬಾಳಿಕೆಯನ್ನು ನೀಡುತ್ತದೆ.
3) ವ್ಯಾಕ್ಸ್ ಕಾಂಪೌಂಡ್
ವ್ಯಾಕ್ಸ್ ಕಂಪೌಂಡ್ಗಳು ಸಾಲ್ವೆಂಟ್ಗಳಲ್ಲಿ ಕರಗಿಸಲಾದ ವ್ಯಾಕ್ಸ್-ಆಧಾರಿತ ವಸ್ತುಗಳಿಂದ ತಯಾರಿಸಲಾಗಿರುತ್ತದೆ. ಕಾಂಕ್ರೀಟ್ ಮೇಲ್ಮೈಗೆ ಹಚ್ಚಿದಾಗ ಅವು ತೆಳುವಾದ ವ್ಯಾಕ್ಸ್ ಲೇಪನ ಉಂಟಾಗುವಂತೆ ಮಾಡುತ್ತವೆ. ಹೀಗಾಗಿ ತೇವಾಂಶವನ್ನು ತಡೆಹಿಡಿಯುವ ಮೂಲಕ ಕ್ಯೂರಿಂಗ್ ಆಗುವ ಪ್ರಕ್ರಿಯೆಗೆ ಸಹಾಯ ಮಾಡುತ್ತದೆ.
ಪ್ರಯೋಜನೆಗಳು:
- ತೇವಾಂಶ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ, ಶೀಘ್ರವಾಗಿ ಒಣಗುವುದನ್ನು ತಡೆಯುತ್ತದೆ ಹಾಗೂ ಕ್ರ್ಯಾಕ್ಗಳು ಮತ್ತು ಮುದುರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
- ಹೊಳಪಿನ ಮೆರಗು ಕೊಡುವ ಮೂಲಕ ಕಾಂಕ್ರೀಟ್ ಸೌಂದರ್ಯವನ್ನು ಹೆಚ್ಚಿಸುತ್ತದೆ.
- ಅಲಂಕಾರಿಕ ಕಾಂಕ್ರೀಟ್ ಉಪಯೋಗಗಳಿಗೆ ಮತ್ತು ವಾಸ್ತುಶಿಲ್ಪದ ಫಿನಿಶಿಂಗ್ ಬರುವಂತೆ ಮಾಡಲು ಸೂಕ್ತವಾಗಿದೆ.
- ಸವೆಯುವುದು ಮತ್ತು ಅದರ ವಿರುದ್ಧ ಸಾಮಾನ್ಯ ರಕ್ಷಣೆ ನೀಡುತ್ತದೆ.
4) ಕ್ಲೋರಿನೇಟೆಡ್ ರಬ್ಬರ್ ಕಾಂಪೌಂಡ್
ಕ್ಲೋರಿನೇಟೆಡ್ ರಬ್ಬರ್ ಕಾಂಪೌಂಡ್‌ಗಳು ಕ್ಲೋರಿನೇಟೆಡ್ ರಬ್ಬರ್ ರಾಳಗಳನ್ನು ಹೊಂದಿರುವ ಸಾಲ್ವೆಂಟ್-ಆಧಾರಿತ ಕ್ಯೂರಿಂಗ್ ಕಂಪೌಂಡ್ಗಳಾಗಿವೆ. ಅವುಗಳು ಕಾಂಕ್ರೀಟ್ ಮೇಲ್ಮೈಯಲ್ಲಿ ಬಾಳಿಕೆ ಬರುವ ತೆಳುವಾದ ಲೇಪವನ್ನು ರೂಪಿಸುತ್ತವೆ. ಜೊತೆಗೆ ಕ್ಯೂರಿಂಗ್ ಸಮಯದಲ್ಲಿ ರಕ್ಷಣೆ ಕೊಡುತ್ತವೆ ಮತ್ತು ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.
ಪ್ರಯೋಜನೆಗಳು:
- ಜಲನಿರೋಧಕ ತಡೆಗೋಡೆ ರೂಪಿಸುತ್ತದೆ, ಕ್ಯೂರಿಂಗ್ ಸಮಯದಲ್ಲಿ ತೇವಾಂಶ ನಷ್ಟವಾಗುವುದನ್ನು ತಡೆಯುತ್ತದೆ.
- ಅತ್ಯುತ್ತಮವಾಗಿ ಅಂಟಿಕೊಳ್ಳುತ್ತದೆ, ಬಾಳಿಕೆ ಬರುತ್ತದೆ ಮತ್ತು ಸುಲಭವಾಗಿ ಸವೆಯುವುದಿಲ್ಲ.
- ಹೊರಾಂಗಣದಲ್ಲಿ ಬಳಸಲು ಹಾಗೂ ಕಠಿಣ ಪರಿಸರಕ್ಕೆ ಸೂಕ್ತವಾಗಿದೆ.
- ಸರಿಯಾದ ಮೇಲ್ಮೈ ತಯಾರಿಕೆಯೊಂದಿಗೆ ದೀರ್ಘಕಾಲೀನ ರಕ್ಷಣೆಯನ್ನು ಒದಗಿಸುತ್ತದೆ.
5) ಸ್ವಯಂ ಕ್ಯೂರಿಂಗ್ ಕಾಂಪೌಂಡ್
ಇವುಗಳನ್ನು ಆಂತರಿಕ ಕ್ಯೂರಿಂಗ್ ಏಜೆಂಟ್‌ಗಳು ಎಂದು ಸಹ ಗುರುತಿಸಲಾಗುತ್ತದೆ. ಸ್ವಯಂ-ಕ್ಯೂರಿಂಗ್ ಕಂಪೌಂಡ್ಗಳು ನಂತರದ ದಿನಗಳಲ್ಲಿ ನೀರನ್ನು ಬಿಡುಗಡೆ ಮಾಡುತ್ತವೆ. ಜೊತೆಗೆ ಕಾಂಕ್ರೀಟ್‌ನ ಅಡೆತಡೆಯಿಲ್ಲದ ತೇವಾಂಶ ಉಂಟಾಗಲು ಸಹಾಯ ಮಾಡುತ್ತವೆ. ಹೆಸರೇ ಸೂಚಿಸುವಂತೆ, ಈ ಕಾಂಕ್ರೀಟ್ ಕ್ಯೂರಿಂಗ್ ಏಜೆಂಟ್‌ಗಳು ಕಾಂಕ್ರೀಟ್‌ನಿಂದಲೇ ಕ್ಯೂರಿಂಗ್ ಪ್ರಕ್ರಿಯೆಗೆ ಸಹಾಯ ಮಾಡುತ್ತವೆ. ಇದು ಹೆಚ್ಚು ಒಂದೇ ರೂಪದ ಹಾಗೂ ಸ್ಥಿರವಾದ ಕ್ಯೂರಿಂಗ್ ಉಂಟಾಗುವಂತೆ ಮಾಡುತ್ತದೆ.
ಪ್ರಯೋಜನೆಗಳು:
- ಕಾಂಕ್ರೀಟ್‌ನ ಎಲ್ಲ ಕಡೆಗೂ ತೇವಾಂಶವನ್ನು ಖಚಿತಪಡಿಸುತ್ತದೆ. ಮೇಲ್ಮೈ ಮೇಲೆ ಕ್ರ್ಯಾಕ್ ಉಂಟಾಗುವುದನ್ನು ಕಡಿಮೆ ಮಾಡುತ್ತದೆ.
- ನೀರಿನ ಕೊರತೆ ಇರುವಂತಹ ಕಡೆಗಳಲ್ಲಿ ಅಥವಾ ಒಣ ಪ್ರದೇಶಗಳಲ್ಲಿ ನಿರ್ಮಾಣ ಮಾಡುವ ಸಂದರ್ಭಗಳಲ್ಲಿ ಹೊರಗಿನಿಂದ ನೀರು ಪೂರೈಕೆಯ ಬೇಡಿಕೆಯನ್ನು ಬಹಳಷ್ಟು ಕಡಿಮೆ ಮಾಡುತ್ತದೆ.
- ಹೊರಾಂಗಣ ಕ್ಯೂರಿಂಗ್ ಸವಾಲಾಗಿರುವ ಸ್ಟ್ರಕ್ಚರ್ಗಳಲ್ಲಿ ಬಳಸಲು ಅತ್ಯಂತ ಸೂಕ್ತವಾಗಿದೆ.