ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಆಟೋಕ್ಲೇವ್ಡ್ ಎರೇಟೆಡ್ ಕಾಂಕ್ರೀಟ್ (AAC) ಬ್ಲಾಕ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು

ನೀವು ಪರಿಸರ ಪ್ರಜ್ಞೆಯೊಂದಿಗೆ ಮನೆಯೊಂದನ್ನು ಕಟ್ಟಲು ಬಯಸುತ್ತೀರಾದರೆ ಎಎಸಿ ಬ್ಲಾಕ್‌ಗಳು ಅತ್ಯುತ್ತಮ ಆಯ್ಕೆ. ಆಟೋಕ್ಲೇವ್ಡ್‌ ಎರೇಟೆಡ್ ಕಾಂಕ್ರೀಟ್ (ಎಎಸಿ) ಒಂದು ಪ್ರಮಾಣಿತ ಗ್ರೀನ್ ಬಿಲ್ಡಿಂಗ್ ನಿರ್ಮಾಣ ಸಾಮಗ್ರಿಯಾಗಿದ್ದು, ಹಗುರತೂಕದ, ಭಾರ ತಾಳಿಕೆಯ, ಹೆಚ್ಚಿನ ನಿರೋಧಕ ಶಕ್ತಿಯುಳ್ಳ, ದೀರ್ಘ ಬಾಳಿಕೆಯ, ಮತ್ತು ಕೆಂಪು ಇಟ್ಟಿಗೆಗಳಿಗಿಂತ ಮೂರುಪಟ್ಟು ಹಗುರವಾದ ಸಾಧನವಾಗಿದೆ.

Share:



ಎಎಸಿ ಬ್ಲಾಕ್‌ಗಳನ್ನು ಸ್ವೀಡಿಶ್ ವಾಸ್ತುಶಿಲ್ಪಿಯೊಬ್ಬ 1924ರ ನವೆಂಬರ್‌ನಲ್ಲಿ ಸಂಶೋಧಿಸಿದ. ಶಿಥಿಲವಾಗದ, ಬೆಂಕಿ ಹತ್ತಿಕೊಳ್ಳದ, ಮತ್ತು ಗೆದ್ದಲುಗಳಿಂದ ಮುಕ್ತವಾದ ನಿರ್ಮಾಣ ಸಾಮಗ್ರಿಯ ಶೋಧನೆಯಲ್ಲಿದ್ದಾಗ ಎಎಸಿ ಬ್ಲಾಕ್‌ಗಳನ್ನು ಆತ ಕಂಡುಹಿಡಿದ. ಈ ಲೇಖನದಲ್ಲಿ ನಾವು ವಿವಿಧ ಬಗೆಯ ಎಎಸಿ ಬ್ಲಾಕ್‌ಗಳು, ಅವುಗಳ ಅನುಕೂಲತೆಗಳು ಮತ್ತು ಅನಾನುಕೂಲತೆಗಳ ಬಗ್ಗೆ ಚರ್ಚಿಸಲಿದ್ದೇವೆ.


ಎಎಸಿ ಬ್ಲಾಕ್‌ಗಳು ಎಂದರೇನು?

ಆಟೋಕ್ಲೇವ್ಡ್‌ ಎರೇಟೆಡ್ ಕಾಂಕ್ರೀಟ್ (ಎಎಸಿ) ಬ್ಲಾಕ್‌ ಒಂದು ಕಡಿಮೆ ನಿರ್ವಹಣೆಯ ಪ್ರಿಕಾಸ್ಟ್‌ ನಿರ್ಮಾಣ ಸಾಮಗ್ರಿಯಾಗಿದ್ದು, ಅತ್ಯುತ್ತಮ ತಾಪ ನಿರೋಧಕ ಮತ್ತು ದೀರ್ಘ ಬಾಳಿಕೆಯನ್ನು ಹೊಂದಿದೆ. ಎಎಸಿ ಬ್ಲಾಕ್‌ಗಳ ತಾಪಮಾನ ನಿರೋಧಕ ಗುಣವು ಕಟ್ಟಡವನ್ನು ತಂಪಾಗಿರಿಸುತ್ತದೆ ಮತ್ತು ಹೊರಗಿನ ಬಿಸಿ ಒಳಗೆ ಬರುವುದನ್ನು ತಡೆಯುತ್ತದೆ. ಎಎಸಿ ಬ್ಲಾಕ್‌ಗಳು ಅಡಿಪಾಯದ ಮೇಲೆ ಬೀಳುವ ಭಾರವನ್ನು ತಗ್ಗಿಸುತ್ತದೆ, ನಿರ್ಮಾಣದಲ್ಲಿ ಉಕ್ಕಿನ ಬಳಕೆಯನ್ನು ಮತ್ತು ಗಾರೆಯ ಬಳಕೆಯನ್ನು ಕಡಿಮೆ ಮಾಡುತ್ತದೆ.

 

ಎಎಸಿ ಬ್ಲಾಕ್‌ನ ವಿಧಗಳು

 

  • ಬೆಂಕಿ ನಿರೋಧಕ ಎಎಸಿ ಬ್ಲಾಕ್‌ಗಳು

     

  • 200 ಎಂಎಂ ಎಎಸಿ ಬ್ಲಾಕ್

     

  • 100 ಎಂಎಂ ಎಎಸಿ ಬ್ಲಾಕ್

     

  • ದೀರ್ಘ ಬಾಳಿಕೆಯ ಎಎಸಿ ಬ್ಲಾಕ್‌

     

  • ಆಯತಾಕಾರದ ಹಾರುಬೂದಿ ಎಎಸಿ ಬ್ಲಾಕ್‌ಗಳು



ಎಎಸಿ ಬ್ಲಾಕ್‌ಗಳ ಅನುಕೂಲತೆಗಳು

 

 

- ಸುಲಭ & ವೇಗವಾಗಿ ಕಾರ್ಯಸಾಧ್ಯತೆ:

ಎಎಸಿ ಬ್ಲಾಕ್‌ಗಳು ಅರ್ಧದಷ್ಟು ತೂಕ ಮತ್ತು ಸಾಂಪ್ರದಾಯಿಕ ಇಟ್ಟಿಗೆಗಳಿಗಿಂತ ಹತ್ತು ಪಟ್ಟು ಗಾತ್ರವನ್ನು ಹೊಂದಿರುತ್ತವೆ. ಈ ಒಂದು ವೈಶಿಷ್ಟ್ಯದಿಂದಾಗಿ ಸರಳವಾದ ಜೋಡಣೆ ಸಾಧ್ಯವಾಗುತ್ತದೆ ಮತ್ತು ಅಪೇಕ್ಷಿತ ಹೊಂದಿಕೆಯನ್ನು ಒದಗಿಸುತ್ತದೆ, ಹೊಂದಾಣಿಕೆಗಳನ್ನು ಮಾಡುವುದು, ಕತ್ತರಿಸುವುದು, ಬಯಸಿದಂತೆ ರೂಪ ನೀಡುವುದು ಎಲ್ಲ ಸುಲಭವಾಗಿ ಆಗುತ್ತದೆ. ಎಎಸಿ ಬ್ಲಾಕ್‌ಗಳು ಕಡಿಮೆ ಜಾಯಿಂಟ್‌ಗಳು ಮತ್ತು ಸ್ಥಿರವಾದ ಆಯಾಮಗಳನ್ನು ಹೊಂದಿರುತ್ತವೆ, ಅವುಗಳನ್ನು ಇಡಲು ಸುಲಭವಾಗುತ್ತದೆ ಮತ್ತು ನಿರ್ಮಾಣ ಪ್ರಕ್ರಿಯೆ ವೇಗವಾಗಿರುತ್ತದೆ. ಕೊನೆಯದಾಗಿ, ಹಗುರವಾದ ಬ್ಲಾಕ್‌ಗಳ ಸಾಗಣೆ ಕೂಡ ಸುಲಭವಾಗಿರುತ್ತದೆ. ಸಾಂಪ್ರದಾಯಿಕ ಇಟ್ಟಿಗೆ ಸಾಗಣೆ ವೆಚ್ಚಗಳಿಗೆ ಹೋಲಿಸಿದರೆ ಒಟ್ಟಾರೆ ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ವೆಚ್ಚವನ್ನು ಕಡಿಮೆ ಮಾಡಲು ಕೂಡ ಇದ ಸಹಾಯ ಮಾಡುತ್ತದೆ.

ವಿಪತ್ತು ನಿರೋಧಕ

ಸಾಮಾನ್ಯವಾಗಿ ಕಟ್ಟಡವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಎರಡು ಲಂಬ ಬಲಗಳೆಂದರೆ ಸ್ವಯಂ ತೂಕ ಮತ್ತು ಗುರುತ್ವಾಕರ್ಷಣೆ. ಉದಾಹರಣೆಗೆ, ಭೂಕಂಪಗಳು, ಸಮತಲ ಬಲಗಳನ್ನು ಉಂಟುಮಾಡುತ್ತವೆ. ಉತ್ಪಾದನಾ ಪ್ರಕ್ರಿಯೆಯ ಪರಿಣಾಮವಾಗಿ, ಎಎಸಿ ಬ್ಲಾಕ್‌ಗಳು ಅತ್ಯಂತ ಬಲಶಾಲಿಯಾಗಿರುತ್ತವೆ. ಇದು ದೀರ್ಘ ಬಾಳಿಕೆಯ ಡ್ಯೂರೆಬಲ್ ಫಿನಿಶ್ಡ್‌ ಸ್ಟ್ರಕ್ಚರ್‌ಗೆ ಕಾರಣವಾಗುತ್ತದೆ. ಸಾಂಪ್ರದಾಯಿಕ ಇಟ್ಟಿಗೆಗಳಿಗೆ ಹೋಲಿಸಿದರೆ, ಎಎಸಿ ಇಟ್ಟಿಗೆಗಳು ಹೆಚ್ಚಿನ ಭೂಕಂಪನ ಆಘಾತಗಳನ್ನು ನಿಭಾಯಿಸಬಲ್ಲವು.

- ಉಷ್ಣ ನಿರೋಧನ ಮತ್ತು ಶಕ್ತಿ ಸಂರಕ್ಷಣೆ

ಹೈಡ್ರೋಜನ್‌ ಜತೆಗೆ ಕಾಂಕ್ರೀಟ್ ಅನ್ನು ಫೋಮ್ ಮಾಡುವ ಮೂಲಕ, ಆ ವಸ್ತುವು ಅತ್ಯುತ್ತಮವಾದ ಶಾಖ ನಿರೋಧಕತೆಯನ್ನು ಒದಗಿಸುತ್ತದೆ, ಚಳಿಗಾಲದಲ್ಲಿ ತಾಪಮಾನವು ಬೆಚ್ಚಗಿರುತ್ತದೆ ಮತ್ತು ಬೇಸಿಗೆಯಲ್ಲಿ ತಂಪಾಗಿರುತ್ತದೆ. ಹೀಗಾಗಿ, ಇದು ನಿಮ್ಮ ಹವಾನಿಯಂತ್ರಣ ವೆಚ್ಚವನ್ನು ಸುಮಾರು 25% ರಷ್ಟು ಕಡಿಮೆ ಮಾಡುತ್ತದೆ. ಅವುಗಳ ಇಂಧನ- ದಕ್ಷತೆಯ ಉತ್ಪಾದನೆಯಿಂದಾಗಿ, ಎಎಸಿ ಬ್ಲಾಕ್‌ಗಳು ತಮ್ಮ ಜೀವಿತಾವಧಿಯ ಉದ್ದಕ್ಕೂ ಶಕ್ತಿ-ಸಮರ್ಥವಾಗಿರುತ್ತವೆ.

ಧ್ವನಿ ನಿರೋಧಕ

ಎಎಸಿ ಬ್ಲಾಕ್‌ಗಳು ಹಗುರವಾಗಿದ್ದು, ಮತ್ತು ಸೂಕ್ಷ್ಮ ರಂಧ್ರಗಳನ್ನು ಹೊಂದಿರುವುದರಿಂದ ಅವು ಶಬ್ದವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಈ ಕಾರಣಗಳಿಗಾಗಿ ಎಎಸಿ ಬ್ಲಾಕ್‌ಗಳನ್ನು ಸ್ಟುಡಿಯೋಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಇತ್ಯಾದಿಗಳ ನಿರ್ಮಾಣದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಸುಸ್ಥಿರ ಮತ್ತು ಜೇಬಿಗೆ ಹಗುರ

ಎಎಸಿ ಬ್ಲಾಕ್‌ಗಳನ್ನು ನೈಸರ್ಗಿಕ, ವಿಷಕಾರಿಯಲ್ಲದ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಕನಿಷ್ಟ ಪ್ರಮಾಣದ ತ್ಯಾಜ್ಯದೊಂದಿಗೆ ಉತ್ಪಾದಿಸಲಾಗುತ್ತದೆ. ಉತ್ಪಾದಿಸಿದ ಕೆಲವು ತ್ಯಾಜ್ಯ ಅಥವಾ ಉಳಿಕೆಗಳನ್ನು ಮರುಬಳಕೆ ಮಾಡಬಹುದು ಅಥವಾ ಅಗ್ರಿಗೇಟ್‌ಗಳನ್ನು ತಯಾರಿಸಲು ಬಳಸಬಹುದು. ಅವುಗಳಲ್ಲಿ ಜೈವಿಕವಾಗಿ ನಾಶವಾಗದ ವಸ್ತುಗಳನ್ನು ಬಳಸಿರುವುದರಿಂದ ಕಟ್ಟಡವನ್ನು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ ಮತ್ತು ಸ್ಥಿರವಾಗಿರುತ್ತದೆ, ಕೊಳೆತು ಹಾಳಾಗುವುದನ್ನು ತಡೆಯುತ್ತದೆ. ಇದಲ್ಲದೆ, ಎಎಸಿ ಬ್ಲಾಕ್‌ಗಳು ಹಗುರವಾದ, ಶಕ್ತಿ-ಸಮರ್ಥ ಮತ್ತು ಜೋಡಣೆಗೆ ಸರಳವಾಗಿರುವುದರಿಂದ, ಅವು ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡುತ್ತದೆ.

ಬೆಂಕಿ ನಿರೋಧಕ:

ಇತರ ಕಟ್ಟಡ ಸಾಮಗ್ರಿಗಳಿಗೆ ಹೋಲಿಸಿದರೆ, ಎಎಸಿ ಬ್ಲಾಕ್‌ಗಳು ದಹಿಸಲಾಗದವು ಮತ್ತು ಅವುಗಳ ದಪ್ಪವನ್ನು ಅನುಸರಿಸಿ ಆರು ಗಂಟೆಗಳವರೆಗೆ ಬೆಂಕಿಯ ಪ್ರತಿರೋಧವನ್ನು ಒದಗಿಸುತ್ತವೆ. ಮತ್ತು 1,200 ಡಿಗ್ರಿ ಸೆಲ್ಶಿಯಸ್ ವರೆಗೂ ತಾಪ ನಿರೋಧಕತೆ ಒದಗಿಸುತ್ತವೆ. ಆದ್ದರಿಂದ, ಇದು ಗಮನಾರ್ಹವಾದ ಅಗ್ನಿ ಸುರಕ್ಷತೆ ಪರಿಣಾಮಗಳನ್ನು ಹೊಂದಿದೆ.

 

ತೇವಾಂಶ ನಿರೋಧಕ:

ತೇವಾಂಶವು ಕಟ್ಟಡಕ್ಕೆ ಗಮನಾರ್ಹ ಪ್ರಮಾಣಧಲ್ಲಿ ಹಾನಿ ಉಂಟುಮಾಡಬಲ್ಲದು. ಎಎಸಿ ಬ್ಲಾಕ್‌ಗಳ ಒಳಗಿರುವ ಅತಿ ಸೂಕ್ಷ್ಮ ರಂಧ್ರಗಳು ಅತಿ ಕಡಿಮೆ ಪ್ರಮಾಣದ ನೀರಿನ ಹೀರಿಕೆಯನ್ನು ಖಾತ್ರಿಪಡಿಸುತ್ತವೆ. ಪರಿಣಾಮವಾಗಿ ಅವುಗಳು ಉತ್ತಮ ತೇವ ನಿರೋಧಕತೆಯನ್ನು ಒದಗಿಸುತ್ತವೆ.

 

ಎಎಸಿ ಬ್ಕಾಕ್‌ಗಳ ಅನಾನುಕೂಲತೆಗಳು

 

-ಅವುಗಳ ದುರ್ಬಲ ಸ್ವಭಾವದ ಕಾರಣ, ಎಎಸಿ ಬ್ಲಾಕ್‌ಗಳ ನಿರ್ವಹಣೆ ಮತ್ತು ಸಾಗಣೆ ವೇಳೆ ಮಣ್ಣಿನ ಕೆಂಪು ಇಟ್ಟಿಗೆಗಿಂತ ಹೆಚ್ಚಿನ ಎಚ್ಚರಿಕೆ- ಜಾಗರೂಕತೆ ಅಗತ್ಯವಿದೆ. ಎಎಸಿ ಬ್ಲಾಕ್‌ಗಳು ಪ್ರತಿ ಯೂನಿಟ್‌ಗೆ ದುಬಾರಿಯಾಗಿದೆ, ಆದರೆ ಒಟ್ಟಾರೆ ಮೇಸ್ತ್ರಿ ವೆಚ್ಚಗಳು ಕಡಿಮೆಯಾಗುತ್ತವೆ. ಏಕೆಂದರೆ ಜೋಡಣೆಯ ಸಮಯದಲ್ಲಿ ಕಡಿಮೆ ಸಿಮೆಂಟ್ ಗಾರೆ ಸಾಕಾಗುತ್ತದೆ.

 

-ಎಎಸಿ ಬ್ಲಾಕ್‌ಗಳು ಸ್ವಭಾವತಃ ದುರ್ಬಲವಿರುವುದರಿಂದ ಬಹಳ ಬೇಗನೆ ತುಂಡಾಗಬಹುದು. ಒಳಗಿನ ಟೊಳ್ಳುತನದಿಂದ ಇದು ಸ್ವಭಾವತಃ ದುರ್ಬಲವಾಗಿರುತ್ತದೆ.

 

-ಅವುಗಳು ಅತಿ ಹೆಚ್ಚು ಪ್ರಮಾಣದಲ್ಲಿ ನೀರಿನ್ನು ಹೀರಿಕೊಳ್ಳುವ ಗುಣ ಹೊಂದಿರುತ್ತವೆ. ಇದರಿಂದಾಗಿ ಕಟ್ಟಡದ ಸಂರಚನೆಯಲ್ಲಿ ಬಿರುಕುಗಳು ಕಾಣಿಸಬಹುದು. ತೇವಾಂಶವನ್ನು ಹೀರಿದಾಗ ಹಿಗ್ಗುವುದು, ಶುಷ್ಕ ವಾತಾವರಣದಲ್ಲಿ ಕುಗ್ಗುವುದರಿಂದ ಬಿರುಕು ಕಾಣಿಸಿಕೊಳ್ಳಬಹುದು.

 

-ಒಳಾಂಗಣ ಫಿನಿಶಿಂಗ್‌ಗಳು ಕಡಿಮೆ ತೇವಾಂಶವನ್ನು ಹೀರಿಕೊಳ್ಳುವಂತಿರಬೇಕು ಮತ್ತು ಹೊರಾಂಗಣ ಫಿನಿಶಿಂಗ್‌ಗಳು ಅತ್ಯಧಿಕ ತೇವಾಂಶದ ಸಂದರ್ಭಗಳಲ್ಲಿ ಹೆಚ್ಚಿನ ತೇವಾಂಶವನ್ನು ಬೇಧಿಸಲು ಸಾಧ್ಯವಾಗುವಂತಿರಬೇಕು.




ಈಗ, ಎಎಸಿ ಬ್ಲಾಕ್‌ ವಿಧಗಳ ಬಗ್ಗೆ ಮತ್ತು ಅವುಗಳ ಅನುಕೂಲಗಳು ಹಾಗೂ ಅನಾನುಕೂಲಗಳ ಬಗ್ಗೆ ಎಲ್ಲವನ್ನೂ ನೀವು ತಿಳಿದುಕೊಂಡಿರಿ. ನಿಮ್ಮ ಮನೆಯ ಅಥವಾ ಯಾವುದೇ ಪ್ರಾಜೆಕ್ಟ್‌ನ ನಿರ್ಮಾಣಕ್ಕೆ ಎಎಸಿ ಬ್ಲಾಕ್‌ಗಳನ್ನು ಬಳಸಲು ಯೋಚಿಸುವಿರಾದರೆ ಅಲ್ಟ್ರಾ ಟೆಕ್‌ ನ ಎಎಸಿ ಬ್ಲಾಕ್‌ಗಳನ್ನು ಒಮ್ಮೆ ಪರಿಶೀಲಿಸಿ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....