ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಕಾಂಕ್ರೀಟ್ನ ಸಂಕೋಚನ ಸದೃಢತೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ

ಕಟ್ಟಡ ನಿರ್ಮಾಣದಲ್ಲಿ, ಕಾಂಕ್ರೀಟ್ ಸಾಮಗ್ರಿಯ ಅಕ್ಷೀಯ ಭಾರಗಳನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನು ಅಳೆಯುವ ಸಂಕೋಚನ ಸದೃಢತೆ ಪರೀಕ್ಷೆಯು ಒಂದು ಮೂಲಭೂತ ಮಾನದಂಡವಾಗಿ ಬಿಟ್ಟಿದೆ. ಕಾಂಕ್ರೀಟ್ನ ಸಂಕೋಚನ ಸದೃಢತೆಯ ಈ ಮಹತ್ವದ ಪರೀಕ್ಷೆಯು ರಾಚನಿಕ ಸಮಗ್ರತೆಯನ್ನು ಖಚಿತಪಡಿಸುವುದರೊಂದಿಗೆ ಬಾಳಿಕೆ ಬರುವ ಮತ್ತು ಒಳ್ಳೆಯ ತಾಳಿಕೆಹೊಂದಿರುವ ಕಟ್ಟಡಗಳಿಗೆ ಅಡಿಪಾಯವನ್ನು ಹಾಕುತ್ತದೆ.

Share:


  ಸಂಕೋಚನ ಸದೃಢತೆಯು ಅಕ್ಷೀಯ ಭಾರಗಳನ್ನು ಪ್ರತಿರೋಧಿಸುವ ಕಾಂಕ್ರೀಟ್ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ ಮತ್ತದು ಕಟ್ಟಡದ ರಾಚನಿಕ ತಾಳಿಕೆಯನ್ನು ಖಾತ್ರಿಪಡಿಸುತ್ತದೆ.

 

•  ಪ್ರಾಜೆಕ್ಟ್ ಮ್ಯಾನೇಜರ್‌ಗಳು ಆನ್-ಸೈಟ್ ಗುಣಮಟ್ಟ ನಿಯಂತ್ರಣಕ್ಕೆ ನಿರ್ಣಾಯಕವಾದಂತ ಪ್ರಭಾವ, ಕಾರ್ಯಸಾಧ್ಯತೆ ಮತ್ತು ನಿಖರತೆಯ ಆಧಾರದ ಮೇಲೆ ಪರೀಕ್ಷಾ ವಿಧಾನಗಳನ್ನು ಆಯ್ಕೆ ಮಾಡಬೇಕು.

 

•  ಇಂಜಿನಿಯರ್‌ಗಳು, ನಗರ ಅಭಿವೃದ್ಧಿಯಲ್ಲಿ ರಚನಾತ್ಮಕ ಸ್ಥಿರತೆಯನ್ನು ಖಾತ್ರಿಪಡಿಸಿಕೊಳ್ಳುವ ನಿಟ್ಟಿನಲ್ಲಿ, ಸಂಕೋಚನ ಸದೃಢತೆಯನ್ನು ನಿರ್ಧರಿಸಲು ನಿಖರವಾದ ಲೆಕ್ಕಾಚಾರಗಳನ್ನು ಅವಲಂಬಿಸಿರುತ್ತಾರೆ.


ಕಾಂಕ್ರೀಟ್ನ ಸಂಕೋಚನ ಸದೃಢತೆಯನ್ನು ಪರಿಶೀಲಿಸುವುದು ನಿರ್ಮಾಣ ಯೋಜನೆಯಲ್ಲಿನ ಒಂದು ಪ್ರಮುಖ ಕ್ರಮವಾಗಿದೆ. ಕಾಂಕ್ರೀಟ್ನ ಕರ್ಷಕ ಬಲವನ್ನು ಮೌಲ್ಯಮಾಪನ ಮಾಡುವುದು ಮತ್ತೊಂದು ಪ್ರಮುಖ ಅಂಶವಾಗಿದೆ, ಏಕೆಂದರೆ ಇದು ಕಾಂಕ್ರೀಟ್ ರಚನೆಯ ದೀರ್ಘಾಯುಷ್ಯ ಮತ್ತು ಬಾಳಿಕೆಗಳ ಮೇಲೆ ಗಣನೀಯವಾಗಿ ಪರಿಣಾಮ ಬೀರುತ್ತದೆ. ಕಾಂಕ್ರೀಟ್ ಸದೃಢತೆ ಪರೀಕ್ಷೆಯ ವಿಧಾನಗಳನ್ನು ಆಯ್ಕೆಮಾಡುವಾಗ, ಪ್ರಾಜೆಕ್ಟ್ ಮ್ಯಾನೇಜರ್ ಪ್ರತಿ ವಿಧಾನವು ತಮ್ಮ ವೇಳಾಪಟ್ಟಿಯ ಮೇಲೆ ಬೀರಬಹುದಾದ ಪ್ರಭಾವವನ್ನು ಪರಿಗಣಿಸಬೇಕು. ಕಾಂಕ್ರೀಟ್‌ನ ಕೆಲವು ಸಂಕೋಚನ ಸದೃಢತೆಯ ಪರೀಕ್ಷೆಗಳನ್ನು ಆನ್-ಸೈಟ್‌ನಲ್ಲಿಯೇ, ಅಂದರೆ ನಿರ್ಮಾಣ ತಾಣದಲ್ಲಿಯೇ, ನಡೆಸಬಹುದು ಆದರೆ ಕೆಲ ಇತರ ಪರೀಕ್ಷೆಗಳ ಡೇಟಾವನ್ನು ಪಡೆಯಲು ಪ್ರಯೋಗಾಲಯ ಸೌಲಭ್ಯಗಳ ಅಗತ್ಯವಿರುತ್ತದೆ ಮತ್ತು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಬಹುದು.

 

ತೆಗೆದುಕೊಂಡ ಸಮಯದ ಜೊತೆಗೆ, ನಿರ್ವಾಹಕರು ಪರೀಕ್ಷಾ ವಿಧಾನಗಳ ನಿಖರತೆಯನ್ನು ಸಹ ಪರಿಗಣಿಸಬೇಕು. ಪರೀಕ್ಷಾ ವಿಧಾನವು ಕಾಂಕ್ರೀಟ್ ರಚನೆಯ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ಆ ಕುರಿತ ನಿರ್ಧಾರ ಒಂದು ಪ್ರಮುಖ ಮಾನದಂಡವಾಗಿದೆ.


ಕಾಂಕ್ರೀಟ್ನ ಸಂಕೋಚನ ಸದೃಢತೆ ವ್ಯಾಖ್ಯಾನ

ಕಾಂಕ್ರೀಟ್‌ನ ಸಂಕೋಚನ ಸದೃಢತೆಯನ್ನು ಗಟ್ಟಿಗೊಂಡ ಕಾಂಕ್ರೀಟ್‌ನ ಸ್ಥಿತಿಸ್ಥಾಪಕತ್ವ ಅಥವಾ ತಾಳಿಕೆಯನ್ನು ಅಳೆಯುವ ಕಾಂಕ್ರೀಟ್ನ ಸಂಕೋಚನ ಪರೀಕ್ಷೆ ಎಂದು ವ್ಯಾಖ್ಯಾನಿಸಲಾಗಿದೆ. ಕಾಂಕ್ರೀಟ್ ಅನ್ನು ಸಂಕೋಚನಕ್ಕೆ ಒಳಪಡಿಸಬಹುದಾದ ಹೊರೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ವಿಶ್ಲೇಷಿಸುವ ಮೂಲಕ ಅದನ್ನು ಅಳೆಯಲಾಗುತ್ತದೆ.


ಕಾಂಕ್ರೀಟ್ನ ಸಾಮರ್ಥ್ಯ ಪರೀಕ್ಷೆಯ ಪ್ರಾಮುಖ್ಯತೆ

ನಿರ್ಮಾಣ ತಾಣದಲ್ಲಿ ಕ್ಯುರೇಟ್ ಮಾಡಲಾದ ಕಾಂಕ್ರೀಟ್ ಮಿಶ್ರಣವು ಕೆಲಸದ ವಿವರಣೆಯಲ್ಲಿ ತಿಳಿಸಲಾದ ಸದೃಢತೆಯ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಎಂದು ಕಂಡುಹಿಡಿಯಲು ಕಾಂಕ್ರೀಟಿನ ಸಂಕೋಚನ ಸದೃಢತೆಯನ್ನು ಪರಿಶೀಲಿಸುವುದು ಬಹಳ ಮುಖ್ಯ.

 

ಕಾಂಕ್ರೀಟ್ ಸಂಕೋಚನ ಪರೀಕ್ಷೆಗಳ ಮೂಲಕ ಸದೃಢತೆ, ಸ್ಥಿರತೆ, ಘಟಕ ತೂಕ, ಗಾಳಿಯ ಅಂಶ ಮತ್ತು ತಾಪಮಾನಗಳಂತಹ ಅಂಶಗಳನ್ನು ಅಳೆಯಲಾಗುವುದರಿಂದ ಪ್ರಾಜೆಕ್ಟ್ ಮ್ಯಾನೇಜರ್ ಕಾಂಕ್ರೀಟ್‌ನ ಗುಣಲಕ್ಷಣಗಳ ಬಗ್ಗೆ ಒಂದು ಅಂದಾಜನ್ನು ಪಡೆದುಕೊಳ್ಳುತ್ತಾರೆ. ಈ ಪರೀಕ್ಷೆಗಳಲ್ಲಿನ ಸ್ಥಿರವಾದ ಫಲಿತಾಂಶಗಳು ಅದರ ದೀರ್ಘಕಾಲೀನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಬದಲಾವಣೆಗಳನ್ನು ಪತ್ತೆಹಚ್ಚಲು ಮ್ಯಾನೇಜರ್‌ಗೆ ಸಹಾಯ ಮಾಡುತ್ತದೆ.


ಕಾಂಕ್ರೀಟ್ನ ಸಂಕೋಚನ ಸದೃಢತೆ ಪರೀಕ್ಷೆಯ ವಿಧಾನಗಳು

ಕಾಂಕ್ರೀಟ್ನ ಸಂಕೋಚನ ಸದೃಢತೆಯನ್ನು ಪರೀಕ್ಷಿಸಲು ಹಲವು ಇತರ ವಿಧಾನಗಳು ಮತ್ತು ಪರೀಕ್ಷೆಗಳಿವೆ. ಈ ಕೆಲವು ವಿಧಾನಗಳನ್ನು ನೋಡೋಣ ಬನ್ನಿ:

 


1) ರಿಬೌಂಡ್ ಹ್ಯಾಮರ್ ಅಥವಾ ಸ್ಮಿಡ್ಟ್ ಹ್ಯಾಮರ್



ಈ ವಿಧಾನದಲ್ಲಿ, ಒಂದು ಸುತ್ತಿಗೆಯನ್ನು ಸ್ಪ್ರಿಂಗ್ ರಿಲೀಸ್ ಕಾರ್ಯವಿಧಾನದಿಂದ ಸಕ್ರಿಯಗೊಳಿಸಿ ಪ್ಲಂಜರ್ ಒಂದನ್ನು ಕಾಂಕ್ರೀಟ್ ಮೇಲ್ಮೈ ಮೂಲಕ ತೂರಿಸುವಂತೆ ಹೊಡೆಯಲಾಗುತ್ತದೆ. ಸುತ್ತಿಗೆ ಮತ್ತು ಕಾಂಕ್ರೀಟ್ ಮೇಲ್ಮೈ ನಡುವಿನ ರಿಬೌಂಡ್ ಅಂತರಕ್ಕೆ 10 ಮತ್ತು 100 ರ ನಡುವಿನ ಒಂದು ಮೌಲ್ಯವನ್ನು ನಿಗದಿಪಡಿಸಲಾಗಿರುತ್ತದೆ. ನಂತರ ಈ ಮಾಪನದೊಂದಿಗೆ ಕಾಂಕ್ರೀಟ್ನ ಸದೃಢತೆಯನ್ನು ನಿಗದಿಪಡಿಸಲಾಗುತ್ತದೆ.

 

ತುಲನಾತ್ಮಕವಾಗಿ, ಕಾಂಕ್ರೀಟ್ನ ಸಂಕೋಚನ ಸದೃಢತೆಯನ್ನು ಪರಿಶೀಲಿಸುವ ಈ ವಿಧಾನವು ಬಳಸಲು ಸುಲಭವಾಗಿದೆ. ಆದರೆ, ನಿಖರವಾದ ಫಲಿತಾಂಶಗಳನ್ನು ಪಡೆಯಲು ಆಳದ ಕೋರ್ ಸ್ಯಾಂಪಲ್ಗಳನ್ನು ಬಳಸಿಕೊಂಡು ಪ್ರಿ-ಕ್ಯಾಲಿಬ್ರೇಷನ್ ಮಾಡಿರುವುದು ಅಗತ್ಯ. ಇದಲ್ಲದೆ, ಇದನ್ನು ನೇರವಾಗಿ ಆನ್-ಸೈಟ್‌ನಲ್ಲಿಯೇ ಮಾಡಬಹುದಾದು ಮತ್ತು ಇದು ಸಮಯವನ್ನು ಉಳಿಸಲು ಸಹಾಯ ಮಾಡುತ್ತದೆಯಾದರೂ, ಫಲಿತಾಂಶಗಳು ಮೇಲ್ಮೈ ಪರಿಸ್ಥಿತಿಗಳು ಅಥವಾ ಇತರ ಅಂಶಗಳಿಂದಾಗಿ ದಾರಿ ತಪ್ಪಬಹುದು.


2) ಪೆನೆಟ್ರೆಷನ್ (ತೂರುವಿಕೆ) ಪ್ರತಿರೋಧ ಪರೀಕ್ಷೆ

ಪೆನೆಟ್ರೆಷನ್ (ತೂರುವಿಕೆ) ಪ್ರತಿರೋಧ ಪರೀಕ್ಷೆಯನ್ನು ಪೂರ್ಣಗೊಳಿಸಲು, ಸಾಧನವೊಂದನ್ನು ಬಳಸಿ ಒಂದು ಸಣ್ಣ ಪಿನ್ ಅಥವಾ ಪ್ರೋಬ್ ಅನ್ನು ಕಾಂಕ್ರೀಟ್ ಮೇಲ್ಮೈಯೊಳಗೆ ತೂರಿಸಲಾಗುತ್ತದೆ. ಸ್ಥಳದಲ್ಲಿನ ಕಾಂಕ್ರೀಟ್ನ ಸದೃಢತೆಯು ಮೇಲ್ಮೈಯೊಳಗೆ ತೂರಿಸಲು ಅಗತ್ಯವಿರುವ ಬಲ ಮತ್ತು ರಂಧ್ರದ ಆಳವನ್ನು ಆಧರಿಸಿರುತ್ತದೆ.

 

ಕಾಂಕ್ರೀಟ್ನ ಸಂಕೋಚನ ಸದೃಢತೆಯನ್ನು ಪರಿಶೀಲಿಸುವ ಈ ವಿಧಾನವು ನಿಖರವಾದ ಫಲಿತಾಂಶಗಳನ್ನು ಒದಗಿಸಲು ಹಲವಾರು ಕಾಂಕ್ರೀಟ್ ಮಾದರಿಗಳನ್ನು ಬಳಸಿಕೊಂಡು ಪ್ರಿ-ಕ್ಯಾಲಿಬ್ರೇಷನ್ ಮಾಡುವ ಅಗತ್ಯವಿರುತ್ತದೆ. ಇದನ್ನು ಸುಲಭವಾಗಿ ಆನ್-ಸೈಟ್‌ನಲ್ಲಿ ನಡೆಸಬಹುದಾಗಿದ್ದರೂ, ಮಾಪನಗಳು ಮೇಲ್ಮೈ ಪರಿಸ್ಥಿತಿಗಳು ಮತ್ತು ಬಳಸಿದ ಅಗ್ರಿಗೇಟ್‌ಗಳ ವಿಧಗಳಿಂದ ಪ್ರಭಾವಿತವಾಗಿರುತ್ತವೆ.


3) ಅಲ್ಟ್ರಾಸಾನಿಕ್ ಪಲ್ಸ್ ವೆಲಾಸಿಟಿ



ಈ ವಿಧಾನವು ಕಾಂಕ್ರೀಟ್ನ ಚಪ್ಪಡಿ ಅಥವಾ ಸ್ಲ್ಯಾಬ್‌ನಾದ್ಯಂತ ಒಂದು ಕಂಪಿಸುವ ಶಕ್ತಿಯ ಪಲ್ಸ್‌ನ ವೇಗವನ್ನು ಲೆಕ್ಕಾಚಾರ ಮಾಡುತ್ತದೆ. ಈ ಶಕ್ತಿಯು ಕಾಂಕ್ರೀಟಿನ ಚಪ್ಪಡಿಯ ಮೂಲಕ ಹಾದುಹೋಗುವಲ್ಲಿನ ಸುಲಭತೆಯು ಅದರ ಸಾಂದ್ರತೆ, ಸ್ಥಿತಿಸ್ಥಾಪಕತ್ವ ಮತ್ತು ವಿರೂಪತೆ ಅಥವಾ ಒತ್ತಡದ ಪ್ರತಿಯ ಪ್ರತಿರೋಧದ ಡೇಟಾವನ್ನು ನೀಡುತ್ತದೆ. ನಂತರ ಈ ಡೇಟಾವನ್ನು ಬಳಸಿಕೊಂಡು ಸ್ಲ್ಯಾಬ್ನ ಸದೃಢತೆಯನ್ನು ನಿರ್ಧರಿಸಲಾಗುತ್ತದೆ.

 

ತಂತ್ರವು ಕಟ್ಟಡಕ್ಕೆ ನಾಶಮಾಡದಂತದ್ದಾಗಿದ್ದು ಕಾಂಕ್ರೀಟ್‌ನಲ್ಲಿನ ಬಿರುಕುಗಳು ಮತ್ತು ಪೊಳ್ಳುಗಳಂತಹ ದೋಷಗಳನ್ನು ಗುರುತಿಸಬಹುದಾಗಿದೆ. ಆದರೆ, ಫಲಿತಾಂಶಗಳು ಪ್ರಮುಖವಾಗಿ ರಿಇನ್ಫೋರ್ಸ್ಮೆಂಟ್‌ಗಳು, ಅಗ್ರಿಗೇಟ್‌ಗಳು ಮತ್ತು ಕಾಂಕ್ರೀಟ್ ಘಟಕದ ತೇವಾಂಶಗಳಿಂದ ಪ್ರಭಾವಿತವಾಗುತ್ತವೆ ಮತ್ತು ಹಲವಾರು ಮಾದರಿಗಳನ್ನು ಬಳಸಿಕೊಂಡು ಪ್ರಿ-ಕ್ಯಾಲಿಬ್ರೇಷನ್ ಮಾಡುವ ಅಗತ್ಯವಿರುತ್ತದೆ.


4) ಪುಲ್ಔಟ್ ಪರೀಕ್ಷೆ

ಈ ಪರೀಕ್ಷೆಯ ಹಿಂದಿನ ಮೂಲಭೂತ ಉಪಾಯವೆಂದರೆ ಕಾಂಕ್ರೀಟ್ ಅನ್ನು ಅದರ ಒಳಗೆ ತೂರಿಸಿದ ಅಥವಾ ನಿರ್ಮಿಸುವಾಗಲೇ ಸಿಗಿಸಿದ ಲೋಹದ ರಾಡ್ ಬಳಸಿ ಎಳೆಯುವುದಾಗಿದೆ. ಕಾಂಕ್ರೀಟ್ನ ಸಂಕೋಚನ ಸದೃಢತೆಯು ಎಳೆದ ಶಂಕುವಿನಾಕಾರದ ರೂಪ ಮತ್ತು ಕಾಂಕ್ರೀಟ್ ಅನ್ನು ಸೆಳೆಯಲು ಅಗತ್ಯವಾದ ಬಲಗಳನ್ನು ಆಧರಿಸಿರುತ್ತದೆ.

 

ಈ ವಿಧಾನವನ್ನು ಹಳೆಯ ಮತ್ತು ಹೊಸ ನಿರ್ಮಾಣ ಸ್ಥಳಗಳಲ್ಲಿ ಪರಿಣಾಮಕಾರಿಯಾಗಿ ನಡೆಸಬಹುದಾದರೂ, ಇದು ಕಾಂಕ್ರೀಟ್ ಅನ್ನು ನಾಶಮಾಡುವುದನ್ನು ಒಳಗೊಂಡಿರುತ್ತದೆ. ಈ ಕಾಂಕ್ರೀಟ್ ಸಂಕೋಚನ ಸದೃಢತೆ ಪರೀಕ್ಷೆಯಲ್ಲಿ ನಿಖರವಾದ ಫಲಿತಾಂಶಗಳನ್ನು ಪಡೆಯುವುದು ಬಹಳಷ್ಟು ಮಾದರಿಗಳನ್ನು ಬಳಸುವುದನ್ನು ಅಗತ್ಯಪಡಿಸುತ್ತದೆ.


5) ಡ್ರಿಲ್ಡ್ (ಕೊರೆಯಲಾದ) ಕೋರ್

ಈ ವಿಧಾನದಲ್ಲಿ, ಕಾಂಕ್ರೀಟ್ ಸುರಿಯುವ ಪ್ರದೇಶವನ್ನು ಸಿಲಿಂಡರ್ ಆಕಾರದ ಅಚ್ಚುಗಳಿಂದ ಮುಚ್ಚಲಾಗುತ್ತದೆ. ಸ್ಲ್ಯಾಬ್ನಲ್ಲಿ ಉಳಿಯುವ ಈ ಅಚ್ಚುಗಳು ತಾಜಾ ಕಾಂಕ್ರೀಟ್ನಿಂದ ತುಂಬುತ್ತವೆ. ಗಟ್ಟಿಯಾದ ನಂತರ ಈ ಮಾದರಿಗಳನ್ನು ತೆಗೆದು ಸದೃಢತೆ ಪರೀಕ್ಷಿಸಲು ಸಂಕೋಚನಕ್ಕೆ ಒಳಪಡಿಸಲಾಗುತ್ತದೆ.

 

ಫೀಲ್ಡ್-ಕ್ಯೂರ್ಡ್ ಮಾದರಿಗಳಿಗೆ ವಿರುದ್ಧವಾಗಿ, ಇಲ್ಲಿ ಮಾದರಿಯಲ್ಲಿನ ಕಾಂಕ್ರೀಟ್ ಅನ್ನು ತಾಣದಲ್ಲಿನ ಸ್ಲ್ಯಾಬ್‌ನದೇ ಕ್ಯೂರಿಂಗ್ ಪರಿಸ್ಥಿತಿಗಳಲ್ಲಿ ಉಪಚರಿಸಲಾಗಿರುತ್ತದೆಯಾದ್ದರಿಂದ ಇದು ಹೆಚ್ಚು ನಿಖರವಾಗಿರುತ್ತದೆ ಎಂದು ಭಾವಿಸಲಾಗಿದೆ. ಆದರೆ, ಈ ರೀತಿಯ ನಿರ್ಮಾಣವು ಸ್ಲ್ಯಾಬ್‌ನ ರಾಚನಿಕ ಸ್ಥಿರತೆಗೆ ಕುಂದು ಮಾಡುವುದನ್ನು ಒಳಗೊಂಡಿರುತ್ತದೆ ಮತ್ತು ಡೇಟಾವನ್ನು ಲ್ಯಾಬ್‌ನಲ್ಲಿಯೇ ಪಡೆಯಬೇಕಿರುತ್ತದೆ. ಅದರ ತರುವಾತ, ತೆಗೆದ ರಂಧ್ರಗಳನ್ನು ಅವು ಇದ್ದ ಸ್ಥಳದಲ್ಲಿ ಸರಿಪಡಿಸಬೇಕು.


6) ಜಾಗದಲ್ಲಿಯೇ ಎರಕಹೊಯ್ದ ಸಿಲಿಂಡರ್‌ಗಳು

ಈ ವಿಧಾನದಲ್ಲಿ ಕೋರ್ ಡ್ರಿಲ್ ಅನ್ನು ಬಳಸಿ ಗಟ್ಟಿಗೊಂಡ ಕಾಂಕ್ರೀಟ್ ಅನ್ನು ಸ್ಲ್ಯಾಬ್ನಿಂದ ತೆಗೆಯಲಾಗುತ್ತದೆ. ಜಾಗದಲ್ಲಿನ ಇನ್-ಸಿಟು ಕಾಂಕ್ರೀಟ್‌ನ ಸದೃಢತೆಯನ್ನು ಅಳೆಯಲು, ಆ ಮಾದರಿಗಳನ್ನು ತರುವಾಯ ಯಂತ್ರದಲ್ಲಿ ಸಂಕೋಚನಕ್ಕೆ ಒಳಪಡಿಸಲಾಗುತ್ತದೆ.

 

ಸದೃಢತೆಗಾಗಿ ಪರೀಕ್ಷಿಸಲ್ಪಟ್ಟ ಕಾಂಕ್ರೀಟು ಅದೇ ಉಷ್ಣ ಇತಿಹಾಸ ಮತ್ತು ಜಾಗದಲ್ಲಿನ ಸ್ಲ್ಯಾಬ್‌ನ ಕ್ಯೂರಿಂಗ್ ಪರಿಸ್ಥಿತಿಗಳಿಗೆ ಒಡ್ಡಿಕೊಂಡಿರುವುದರಿಂದ, ಈ ಮಾದರಿಗಳನ್ನು ಫೀಲ್ಡ್-ಕ್ಯೂರ್ಡ್ ಮಾದರಿಗಳಿಗಿಂತ ಹೆಚ್ಚು ನಿಖರವೆಂದು ಪರಿಗಣಿಸಲಾಗುತ್ತದೆ. ಆದಾಗ್ಯೂ, ಕಾಂಕ್ರೀಟ್ನ ಸಂಕೋಚನ ಸದೃಢತೆಯನ್ನು ಪರಿಶೀಲಿಸುವ ಈ ವಿಧಾನವು ಕಟ್ಟಡಕ್ಕೆ ನಾಶ ಉಂಟುಮಾಡುವಂತಹದಾಗಿದ್ದು ಡೇಟಾದ ಮಾಪನಕ್ಕಾಗಿ ಪ್ರಯೋಗಾಲಯವು ಅಗತ್ಯವಿರುತ್ತದೆ.


7) ವೈರ್‌ಲೆಸ್ ಮೆಚುರಿಟಿ ಸೆನ್ಸರ್‌ಗಳು

ಈ ವಿಧಾನವು ಕಾಂಕ್ರೀಟ್ನ ಹೈಡ್ರೇಶನ್ ತಾಪಮಾನದ ಇತಿಹಾಸವು ಕಾಂಕ್ರೀಟ್ನ ಗುಣಮಟ್ಟ ಮತ್ತು ಬಲಕ್ಕೆ ನಿಕಟವಾಗಿ ಸಂಬಂಧಿಸಿದೆ ಎಂಬ ವಿಚಾರವನ್ನು ಆಧರಿಸಿದೆ. ಸುರಿಯುವ ಮೊದಲು, ವೈರ್ಲೆಸ್ ಸೆನ್ಸರ್‌ಗಳನ್ನು ರಿಬಾರ್ ಮೇಲೆ ಜೋಡಿಸಿ ಕಾಂಕ್ರೀಟ್ ಫಾರ್ಮ್ವರ್ಕ್ನಲ್ಲಿ ಸೇರಿಸಲಾಗಿರುತ್ತದೆ.

 

ಸೆನ್ಸರ್‌ ತಾಪಮಾನ ಮಾಹಿತಿಯನ್ನು ಸಂಗ್ರಹಿಸುತ್ತದೆ, ಅದು ನಿಸ್ತಂತುವಾಗಿ ಒಂದು ಸ್ಮಾರ್ಟ್ ಸಾಧನಕ್ಕೆ ವರ್ಗಾಯಿಸಲ್ಪಟ್ಟು ಅಪ್ಲಿಕೇಶನ್‌ವೊಂದರಲ್ಲಿ ಸಂಗ್ರಹಿಸಲ್ಪಡುತ್ತದೆ. ಈ ಡೇಟಾ ಮತ್ತು ಅಪ್ಲಿಕೇಶನ್‌ನಲ್ಲಿ ಹೊಂದಿಸಲಾದ ಮೆಚುರಿಟಿ ಸಮೀಕರಣವನ್ನು ಆಧರಿಸಿ, ಕಾಂಕ್ರೀಟ್‌ನ ಸಂಕೋಚನ ಸದೃಢತೆಯನ್ನು ಲೆಕ್ಕಹಾಕಲಾಗುತ್ತದೆ.


ಕಾಂಕ್ರೀಟ್ನ ಸಂಕೋಚನ ಸದೃಢತೆ ಪರೀಕ್ಷೆಯ ಲೆಕ್ಕಾಚಾರ

ಕಾಂಕ್ರೀಟ್ನ ಸಂಕೋಚನ ಸದೃಢತೆಯನ್ನು ಅರ್ಥಮಾಡಿಕೊಳ್ಳುವಲ್ಲಿ, ಸದೃಢತೆ ಪರೀಕ್ಷೆಯ ಲೆಕ್ಕಾಚಾರವು ಅತ್ಯಂತ ಪ್ರಮುಖವಾಗಿದೆ. ಈ ಪ್ರಕ್ರಿಯೆಯು ಕಾಂಕ್ರೀಟ್ ಸಿಲಿಂಡರ್ ಅನ್ನು ಮುರಿಯಲು ಅಗತ್ಯವಾದ ಸದೃಢತೆಯನ್ನು ನಿರ್ಧರಿಸುತ್ತದೆ, ಇದು ಸಂಕೋಚನ ಸದೃಢತೆಯ ಮೌಲ್ಯವನ್ನು ಉಂಟುಮಾಡುತ್ತದೆ. ಇಂಜಿನಿಯರ್‌ಗಳು ಒತ್ತಡವನ್ನು ತಡೆದುಕೊಳ್ಳುವ ವಸ್ತುವಿನ ಸಾಮರ್ಥ್ಯವನ್ನು ನಿರ್ಣಯಿಸಲು ನಿಖರವಾದ ಗಣಿತದ ಸೂತ್ರಗಳನ್ನು ಬಳಸುತ್ತಾರೆ. ಆಮೂಲಕ ರಚನೆಗಳು ಸುರಕ್ಷತಾ ಮಾನದಂಡಗಳನ್ನು ಪೂರೈಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ.

 

ನಗರಗಳು ಬೆಳೆದಂತೆ, ಈ ಸದೃಢತೆ ಮೌಲ್ಯಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಬಳಸುವುದು ರಚನೆಗಳನ್ನು ಸುರಕ್ಷಿತ ಮತ್ತು ದೀರ್ಘಬಾಳಿಕೆಯಾವನ್ನಾಗಿಸಲು ಮಹತ್ವಪೂರ್ಣವಾಗಿದೆ. ಇಂಜಿನಿಯರ್‌ಗಳು ಮತ್ತು ಬಿಲ್ಡರ್‌ಗಳು ಈ ನಿಖರವಾದ ಲೆಕ್ಕಾಚಾರಗಳನ್ನು ಅವಲಂಬಿಸಿ ದೇಶದಾದ್ಯಂತ ಕಟ್ಟಡಗಳು ತಮ್ಮ ಸಾಮರ್ಥ್ಯದ ಮೇಲೆ ನೇರ ಪರಿಣಾಮ ಬೀರುವ ವಿವಿಧ ಸನ್ನಿವೇಶಗಳನ್ನು ತಡೆದುಕೊಳ್ಳಬಲ್ಲವು ಎಂಬುದನ್ನು ಖಾತರಿಪಡಿಸುತ್ತಾರೆ.



ಕಾಂಕ್ರೀಟ್ನ ಸಂಕೋಚನ ಸದೃಢತೆ ಪರೀಕ್ಷೆಯು ವಿನ್ಯಾಸಕರು ಮತ್ತು ಗುಣಮಟ್ಟ ನಿಯಂತ್ರಣ ಎಂಜಿನಿಯರ್ಗಳು ಅತ್ಯಂತ ಮೌಲ್ಯಯುತವೆಂದು ಪರಿಗಣಿಸುವ ಗುಣವಾಗಿದೆ. ಅದೇ ಸಮಯದಲ್ಲಿ, ಕಾಂಕ್ರೀಟ್ನ ಕರ್ಷಕ ಸದೃಢತೆಯು ಒಂದು ನಿರ್ಣಾಯಕ ಮಾನದಂಡವಾಗಿದೆ, ಇದು ದೀರ್ಘಾವಧಿಯಲ್ಲಿ ರಚನೆಗಳ ಬಾಳಿಕೆ ಮತ್ತು ಫ್ಲೆಕ್ಸಿಬಿಲಿಟಿಯ ಮೇಲೆ ಗಣನೀಯ ಪರಿಣಾಮ ಬೀರುತ್ತದೆ. ನಿಮ್ಮ ವಿಧಾನವನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ನೀವು ಬಲ್ಲ ಮತ್ತು ಉತ್ತಮವೆಂದು ನಂಬಿರುವ ಮಾಹಿತಿಯನ್ನಷ್ಟು ಅವಲಂಬಿಸುವಂತಹ ಸರಳವಾದ ಸಂಗತಿಯಾಗಬಹುದು. ಆದಾಗ್ಯೂ, ಸಾಧ್ಯವಾದಷ್ಟು ನಿಖರವಾದ ಫಲಿತಾಂಶಗಳನ್ನು ಪಡೆಯಲು ನಿಖರತೆ, ತೆಗೆದುಕೊಂಡ ಸಮಯ ಮತ್ತು ಆಗಬಹುದಾದ ನಾಶದಂತಹ ಮಾನದಂಡಗಳನ್ನು ಪರಿಗಣಿಸುವುದು ಅತ್ಯಗತ್ಯ. ಅಷ್ಟಕ್ಕೂ, ಕಾಂಕ್ರೀಟ್ನ ಸಂಕೋಚನ ಸದೃಢತೆಯ ಮೇಲೆ ಪರಿಣಾಮ ಬೀರುವ ಅಂಶಗಳ ಬಗ್ಗೆ ಮಾಹಿತಿಯನ್ನು ಓದುವುದು ಮತ್ತು ಪಡೆಯುವುದು ಒಂದು ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.



ಸಂಬಂಧಿತ ಲೇಖನಗಳು


ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....