ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಏಕಮುಖ ಮತ್ತು ದ್ವಿಮುಖ ಸ್ಲಾಬ್ಗಳ ನಡುವಿನ ವ್ಯತ್ಯಾಸವನ್ನು ತಿಳಿಯುವುದು

ನಿರ್ಮಾಣ ಮತ್ತು ವಿನ್ಯಾಸದಲ್ಲಿ ನಿರ್ಣಾಯಕ ಅಂಶಗಳಾಗಿರುವ ಏಕಮುಖ ಮತ್ತು ದ್ವಿಮುಖ ಸ್ಲಾಬ್‍ಗಳ ನಡುವಿನ ಪ್ರಮುಖ ವ್ಯತ್ಯಾಸಗಳನ್ನು ಕಂಡುಕೊಳ್ಳಿ.

Share:


ಮುಖ್ಯಾಂಶಗಳು 

 

  • ಏಕಮುಖ ಸ್ಲಾಬ್ ಎರಡು ಕಡೆ ತೊಲೆಗಳಿಂದ ಆಧರಿಸಲ್ಪಟ್ಟಿದ್ದು ಭಾರವನ್ನು ಒಂದೇ ದಿಕ್ಕಿನಲ್ಲಿ ಹೊರುತ್ತದೆ, ಇದು ಉದ್ದನೆಯ ಮತ್ತು ಸಪೂರದ ರಚನೆಗಳಿಗೆ ಸೂಕ್ತವಾಗಿದೆ.
 
  • ದ್ವಿಮುಖ ಸ್ಲಾಬ್ ಎಲ್ಲಾ ಕಡೆಗಳಿಂದ ತೊಲೆಗಳಿಂದ ಆಧರಿಸಲ್ಪಟ್ಟಿದ್ದು ಎರಡು ದಿಕ್ಕಿನಲ್ಲಿ ಬಾಗಿರುತ್ತದೆ, ಹೆಚ್ಚಿನ ಭಾರ ಮತ್ತು ವ್ಯಾಪ್ತಿಗೆ ಇದು ಸೂಕ್ತವಾಗಿದೆ.
 
  • ಏಕಮುಖಿ ಸ್ಲಾಬ್ ಭಾರವನ್ನು ಎರಡು ತೊಲೆಗಳ ಮೇಲೆ ಬಿಡುತ್ತದೆ; ದ್ವಿಮುಖ ಸ್ಲಾಬ್ ಗೋಡೆ ಅಥವಾ ಕಂಬಗಳಿಗೆ ಭಾರವನ್ನು ವರ್ಗಾಯಿಸುತ್ತದೆ.
 
  • ಏಕಮುಖ ಸ್ಲಾಬ್‍ಗೆ ಕಡಿಮೆ ಉಕ್ಕು ಸಾಕಾಗುತ್ತದೆ; ದ್ವಿಮುಖ ಸ್ಲಾಬ್ ಎರಡು ಕಡೆ ವ್ಯಾಪಿಸಿರುವುದರಿಂದ ಹೆಚ್ಚು ಬೇಕಾಗುತ್ತದೆ. 
 
  • 3.6 ಮೀಟರ್ ತನಕದ ವ್ಯಾಪ್ತಿಗೆ ಏಕಮುಖ ಸ್ಲಾಬ್‍ಗಳು ಲಾಭದಾಯಕ; ದ್ವಿಮುಖ ಸ್ಲಾಬ್‍ಗಳು 6 ಮೀಟರ್ ತನಕದ ವ್ಯಾಪ್ತಿಗೆ ಸಮರ್ಥವಾಗಿರುತ್ತವೆ.


 ಸ್ಲಾಬ್ ಎಂದರೆ ಕಟ್ಟಡಗಳ ನೆಲ ಮತ್ತು ಮೇಲ್ಛಾವಣಿಯನ್ನು ನಿರ್ಮಿಸುವ ಕಾಂಕ್ರೀಟಿನ ಅಡ್ಡ ಸಮತಟ್ಟು ಮೇಲ್ಮೈಗಳು. ಅವುಗಳಲ್ಲಿ ಎರಡು ವಿಧ : ಏಕಮುಖ ಮತ್ತು ದ್ವಿಮುಖ ಸ್ಲಾಬ್‍ಗಳು. ಏಕಮುಖ ಮತ್ತು ದ್ವಿಮುಖ ಸ್ಲಾಬ್‍ಗಳು ಕಟ್ಟಡ ನಿರ್ಮಾಣದ ಎಂಜಿನಿಯರಿಂಗಿನಲ್ಲಿ ಮೂಲಭೂತ ಅಂಶಗಳಾಗಿದ್ದು ತಮ್ಮದೇ ವಿಶಿಷ್ಟ ಗುಣಗಳನ್ನು ಹೊಂದಿವೆ. ಸಮರ್ಥ ಮತ್ತು ಸುರಕ್ಷಿತ ಕಟ್ಟಡಗಳ ವಿನ್ಯಾಸಕ್ಕೆ ಏಕಮುಖ ಮತ್ತು ದ್ವಿಮುಖ ಸ್ಲಾಬ್‍ಗಳ ನಡುವಿನ ವ್ಯತ್ಯಾಸವನ್ನು ತಿಳಿಯುವುದು ಬಹು ಮುಖ್ಯ. ಈ ಬ್ಲಾಗ್ ಲೇಖನದಲ್ಲಿ ನಾವು ಏಕಮುಖ ಮತ್ತು ದ್ವಿಮುಖ ಸ್ಲಾಬ್‍ಗಳ ನಡುವಿನ ಪ್ರಮುಖ ವ್ಯತ್ಯಾಸಗಳ ಜೊತೆಗೆ ಅವುಗಳ ವರ್ತನೆ, ವಿನ್ಯಾಸದಲ್ಲಿ ಪರಿಗಣಿಸಬೇಕಾದ ಅಂಶಗಳು, ಪ್ರಾಯೋಗಿಕ ಅನುಕೂಲತೆಗಳ ಬಗ್ಗೆ ವಿವರಿಸುತ್ತೇವೆ.

 

 


ಏಕಮುಖ ಸ್ಲಾಬ್ ಎಂದರೇನು?

 ಏಕಮುಖ ಸ್ಲಾಬ್ ಎರಡು ಬದಿಗಳಲ್ಲಿ ತೊಲೆಗಳಿಂದ ಆಧರಿಸಲ್ಪಟ್ಟ ಒಂದು ಸರಳ ರೂಪದ ಕಾಂಕ್ರೀಟ್ ಸ್ಲಾಬ್ ಆಗಿದ್ದು ಒಂದು ದಿಕ್ಕಿನಲ್ಲಿ ಭಾರವನ್ನು ಹೊರುವಂತಿರುತ್ತದೆ. ಈ ಬಗೆಯ ಸ್ಲಾಬ್‍ನಲ್ಲಿ ಉದ್ದನೆಯ ಮತ್ತು ಗಿಡ್ಡದ ವ್ಯಾಪ್ತಿಗಳ ನಡುವಣ ಅನುಪಾತವು ಎರಡು ಅಥವಾ ಅದಕ್ಕಿಂತ ಹೆಚ್ಚಿರುತ್ತದೆ. ಇದರ ವಿನ್ಯಾಸವು ಒಂದು ದಿಕ್ಕಿನಲ್ಲಿ ಮಾತ್ರ ಬಾಗುವಿಕೆಯನ್ನು ತಡೆಯುವಂತಿದ್ದು, ವಿಶೇಷವಾಗಿ ಸಣ್ಣ ವ್ಯಾಪ್ತಿಯನ್ನು ಹೊಂದಿರುತ್ತದೆ.

 

 

ದ್ವಿಮುಖ ಸ್ಲಾಬ್ ಎಂದರೇನು?

 ದ್ವಿಮುಖ ಸ್ಲಾಬ್ ಎಲ್ಲಾ ನಾಲ್ಕು ಕಡೆಗಳಿಂದ ವಿವಿಧ ತೊಲೆಗಳಿಂದ ಆಧರಿಸಲ್ಪಟ್ಟಿದ್ದು ಎರಡು ದಿಕ್ಕಿನಲ್ಲಿ ಬಾಗುವಂತಿರುತ್ತದೆ. ಇದು ಹೆಚ್ಚಿನ ಭಾರವನ್ನು ತಡೆಯುವ ಶಕ್ತಿ ಹೊಂದಿದ್ದು ಏಕಮುಖ ಸ್ಲಾಬ್‍ಗಿಂತ ಹೆಚ್ಚಿನ ವ್ಯಾಪ್ತಿ ಹೊಂದಿರುತ್ತದೆ. ದ್ವಿಮುಖ ಸ್ಲಾಬ್ ನಾಲ್ಕೂ ಕಡೆಗಳಿಂದ ತೊಲೆಗಳಿಂದ ಆಧರಿಸಲ್ಪಟ್ಟಿದ್ದು ಎರಡು ದಿಕ್ಕಿನಲ್ಲಿ ಬಾಗುವಿಕೆಯನ್ನು ತಡೆಯುವಂತೆ ವಿನ್ಯಾಸಗೊಂಡಿರುತ್ತವೆ. ಇದು ಉದ್ದ ಮತ್ತು ಗಿಡ್ಡಎರಡೂ ಬದಿಗಳಲ್ಲಿ ವ್ಯಾಪಿಸಿರುತ್ತದೆ.

 

 

ಏಕಮುಖ ಮತ್ತು ದ್ವಿಮುಖ ಸ್ಲಾಬ್ ವ್ಯತ್ಯಾಸಗಳು



 ಏಕಮುಖ ಮತ್ತು ದ್ವಿಮುಖ ಸ್ಲಾಬ್‍ಗಳ ನಡುವೆ ಕೆಲವು ವ್ಯತ್ಯಾಸಗಳಿವೆ. ಆ ನಿರ್ದಿಷ್ಟ ವ್ಯತ್ಯಾಸಗಳನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ.

ವೈಶಿಷ್ಟ್ಯ

ಏಕಮುಖ ಸ್ಲಾಬ್

ದ್ವಿಮುಖ ಸ್ಲಾಬ್

ವ್ಯಾಪ್ತಿಯ ದಿಕ್ಕು

ಒಂದೇ ದಿಕ್ಕಿನಲ್ಲಿ ವ್ಯಾಪಿಸಿರುತ್ತದೆ

ಎರಡು ದಿಕ್ಕಿನಲ್ಲಿ ವ್ಯಾಪಿಸಿರುತ್ತದೆ

ಆಧಾರ

ಎರಡು ವಿರುದ್ಧ ದಿಕ್ಕಿನಲ್ಲಿ ತೊಲೆಗಳಿಂದ ಆಧರಿಸಲ್ಪಟ್ಟಿರುತ್ತದೆ

ಎಲ್ಲಾ ನಾಲ್ಕು ದಿಕ್ಕಿನಲ್ಲಿ ತೊಲೆಗಳಿಂದ ಆಧರಿಸಲ್ಪಟ್ಟಿರುತ್ತದೆ.

ಭಾರದ ವರ್ಗಾವಣೆ

ಆಧಾರವಾಗಿರುವ ಎರಡು ತೊಲೆಗಳಿಗೆ ಭಾರವನ್ನು ವರ್ಗಾಯಿಸುತ್ತದೆ

ಭಾರವನ್ನು ಕೆಳಗಿನ ಕಂಬ ಅಥವಾ ಗೋಡೆಗಳಿಗೆ ವರ್ಗಾಯಿಸುತ್ತದೆ.

ದಪ್ಪ

ದಪ್ಪವಾಗಿರುತ್ತದೆ

ತೆಳುವಾಗಿರುತ್ತದೆ

ಬಲಪಡಿಸುವಿಕೆ

ಕಡಿಮೆ ಗಟ್ಟಿಗೊಳಿಸುವಿಕೆ ಸಾಕಾಗುತ್ತದೆ.

ಎರಡೂ ಕಡೆಗಳಲ್ಲಿ ಇದರ ವ್ಯಾಪ್ತಿ ಇರುವುದರಿಂದ ಹೆಚ್ಚು ಬಲಗೊಳಿಸುವಿಕೆ ಬೇಕಾಗುತ್ತದೆ.

ವ್ಯಾಪ್ತಿಯ ಉದ್ದ

ಗಿಡ್ಡನೆಯ ವ್ಯಾಪ್ತಿಗೆ ಸೂಕ್ತ

ಉದ್ದನೆಯ ವ್ಯಾಪ್ತಿಗೆ ಸೂಕ್ತ

ಉಪಯೋಗ

ಉದ್ದನೆಯ ಮತ್ತು ಸಪೂರದ ರಚನೆಗಳಿಗೆ ಸೂಕ್ತ

ಚೌಕಾಕಾರದ ಅಥವಾ ಆಯತಾಕಾರದ ರಚನೆಗಳಿಗೆ ಸೂಕ್ತ


ಏಕಮುಖ ಸ್ಲಾಬ್‍ನ ಅನುಕೂಲ ಮತ್ತು ಅನಾನುಕೂಲಗಳು

 

ಅನುಕೂಲತೆಗಳು:

  • 3.6 ಮೀಟರ್ ತನಕದ ವ್ಯಾಪ್ತಿಗೆ ಲಾಭದಾಯಕ
 
  • ಕಡಿಮೆ ಉಕ್ಕಿನ ಬಳಕೆ ಸಾಕಾಗುತ್ತದೆ
 
  • ಸ್ಲಾಬ್ ದಪ್ಪವಾಗಿರುವುದರಿಂದ ಹೆಚ್ಚಿನ ಬಲವನ್ನು ನೀಡುತ್ತದೆ.

 

ಅನಾನುಕೂಲಗಳು:

  • ಒಂದೇ ದಿಕ್ಕಿನಲ್ಲಿ ಬಾಗುವಿಕೆ ಆಗುವುದರಿಂದ ಭಾರದ ಹಂಚಿಕೆಯ ಮಿತಿ ಕಡಿಮೆಯಿರುತ್ತದೆ.
 
  • ಕಡಿಮೆ ಸ್ಟೀಲ್ ಬಳಕೆಯಿಂದ ಸ್ಲಾಬ್‍ನ ದಪ್ಪ ಹೆಚ್ಚಾಗುತ್ತದೆ.

ದ್ವಿಮುಖ ಸ್ಲಾಬ್‍ನ ಅನುಕೂಲ ಮತ್ತು ಅನಾನುಕೂಲಗಳು

 

ಅನುಕೂಲತೆಗಳು:

  • 6 × 6 ಗಾತ್ರದ ಹಲಗೆಗಳಿಗೆ ಲಾಭದಾಯಕ
 
  • ಹೆಚ್ಚು ಸ್ಟೀಲ್ ಬಳಕೆ ಸ್ಲಾಬನ್ನು ತೆಳ್ಳಗಾಗಿಸುತ್ತದೆ.
 
  • ಎರಡೂ ಬದಿಗಳಲ್ಲಿ ಭಾರದ ಹಂಚಿಕೆಯಾಗುವುದರಿಂದ ಕಟ್ಟಡದ ಬಲವು ವೃದ್ಧಿಸುತ್ತದೆ.

 

ಅನಾನುಕೂಲಗಳು:

  • ಏಕಮುಖ ಸ್ಲಾಬ್‍ಗೆ ಹೋಲಿಸಿದರೆ ಸಂಕೀರ್ಣ ವಿನ್ಯಾಸವನ್ನು ಹೊಂದಿರುತ್ತದೆ.
 
  • ನುರಿತ ಕೆಲಸಗಾರರ ಅಗತ್ಯವಿದೆ.
 
  • ಅಧಿಕ ನಿರ್ಮಾಣ ವೆಚ್ಚ


 

 ಇವೆರಡರಲ್ಲಿ ಯಾವುದನ್ನು ಆಯ್ದುಕೊಳ್ಳಬೇಕು ಎಂಬುದು ಯೋಜನೆಯ ಅಗತ್ಯಗಳಿಗೆ ಅನುಗುಣವಾಗಿ ನಿರ್ಧಾರವಾಗುತ್ತದೆ. ಉದಾಹರಣೆಗೆ, ಅಗತ್ಯವಿರುವ ವ್ಯಾಪ್ತಿ, ಭಾರ ತಡೆಯುವ ಸಾಮರ್ಥ್ಯ, ಕಟ್ಟಡದ ಸೌಂದರ್ಯ ಇತ್ಯಾದಿ. ಏಕಮುಖ ಸ್ಲಾಬ್‍ಗಳು ಸಾಮಾನ್ಯವಾಗಿ ಸಣ್ಣ ಅಥವಾ ಮಧ್ಯಮ ವ್ಯಾಪ್ತಿಗೆ ಮತ್ತು ಸರಳ ವಿನ್ಯಾಸಗಳಿಗೆ ಸೂಕ್ತವಾಗುತ್ತವೆ. ದ್ವಿಮುಖ ಸ್ಲಾಬ್‍ಗಳು ಹೆಚ್ಚಾಗಿ ವಿಶಾಲ ವ್ಯಾಪ್ತಿ ಮತ್ತು ಕಡಿಮೆ ಕಂಬಗಳು ಇರುವಂತಹ ದೊಡ್ಡ ಗಾತ್ರದ ಕಟ್ಟಡಗಳಿಗೆ ಸರಿಹೊಂದುತ್ತವೆ. ಏಕಮುಖ ಮತ್ತು ದ್ವಿಮುಖ ಸ್ಲಾಬ್‍ಗಳ ನಡುವಿನ ವ್ಯತ್ಯಾಸ, ಅವುಗಳ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿದುಕೊಳ್ಳುವುದರಿಂದ ಇಂಜಿನಿಯರ್ಗಳು ಮತ್ತು ನಿರ್ಮಾಣಕಾರರು ಸುರಕ್ಷಿತ, ಕಡಿಮೆ ವೆಚ್ಚದ ಮತ್ತು ಉಪಯುಕ್ತ ಕಟ್ಟಡಗಳ ನಿರ್ಮಾಣಕ್ಕೆ ಸೂಕ್ತ ಆಯ್ಕೆಯನ್ನು ಮಾಡಿಕೊಳ್ಳಬಹುದು.




ಸಂಬಂಧಿತ ಲೇಖನಗಳು


ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....