Get In Touch

Get Answer To Your Queries

Select a valid category

Enter a valid sub category

acceptence


9 ವಿಧದ ಮೆಟ್ಟಿಲುಗಳಿಂದ ನಿಮ್ಮ ಮನೆಯನ್ನು ಎತ್ತರಿಸಿ

ನಿಮ್ಮ ಮನೆಯ ಮಹಡಿಗೆ ವಿಭಿನ್ನ ಸ್ವರೂಪದ ಮೆಟ್ಟಿಲುಗಳನ್ನು ನಿರ್ಮಿಸುವಾಗ ನಿಮ್ಮ ಇಡೀ ಮನೆಯ ಶೈಲಿ, ನಿಮ್ಮ ಸ್ವಂತ ಅಭಿರುಚಿ ಮತ್ತು ನಿಮ್ಮ ಬಜೆಟ್ ನ್ನು ಗಮನದಲ್ಲಿಟ್ಟುಕೊಳ್ಳಬೇಕು. ಉತ್ತಮವಾಗಿ ವಿನ್ಯಾಸಗೊಳಿಸಿದ, ಪ್ರಾಯೋಗಿಕವಾಗಿ ನಿರ್ಮಾಣ ಮಾಡಿದ ಮಹಡಿ ಮೆಟ್ಟಿಲು ನಿಮ್ಮ ಮನೆಯ ಮೌಲ್ಯವನ್ನು, ಮತ್ತು ಆಕರ್ಷಣೆಯನ್ನು ಹೆಚ್ಚಿಸಬಹುದು, ಮಾತ್ರವಲ್ಲ, ನಿಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸಬಹುದು.‌

Share:


ಮೆಟ್ಟಿಲುಗಳು ಕೇವಲ ನಿಮ್ಮ ಮನೆಯ ಕಾರ್ಯನಿರ್ವಹಣೆಯ ಒಂದು ಭಾಗವಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಅವು ನಿಮ್ಮ ಮನೆಯ ಒಟ್ಟಾರೆ ವಿನ್ಯಾಸ ಹಾಗೂ ಸೌಂದರ್ಯಕ್ಕೆ ಕೊಡುಗೆ ನೀಡುವ ಒಂದು ಭಾಗವಾಗಿರಬಹುದು. ನಿಮ್ಮ ಮನೆಗೆ ನಿರ್ಧಿಷ್ಟವಾಗಿ ಹೊಂದಿಕೆಯಾಗುವ ಮಹಡಿ ಮೆಟ್ಟಿಲಿನ ವಿಧವನ್ನು ಹುಡುಕಲು, ಸಾಂಪ್ರದಾಯಿಕ ಶೈಲಿಯಿಂದ ಹಿಡಿದು ಆಧುನಿಕ ಶೈಲಿಯವರೆಗೆ ವ್ಯಾಪಕ ಶ್ರೇಣಿಗಳನ್ನು ನೀವು ಪರಿಶೀಲಿಸಬೇಕು.



ಮಹಡಿ ಮೆಟ್ಟಿಲಿನ ವಿಭಿನ್ನ ವಿಧಗಳು



ಮೆಟ್ಟಿಲುಗಳು ಯಾವುದೇ ಬಹು ಮಹಡಿಯ ಮನೆಯ ಬಹು ಮುಖ್ಯ ಭಾಗವಾಗಿವೆ. ಸುಂದರವಾಗಿ ಕಾಣುವ ಹಾಗೂ ಬಳಕೆಗೂ ಅನುಕೂಲಕರವಾಗಿರುವ ಸಮರ್ಪಕ ವಿಧಧ ಮಹಡಿ ಮೆಟ್ಟಿಲುಗಳನ್ನು ಆಯ್ಕೆ ಮಾಡುವುದುಕಷ್ಟದಾಯಕವಾಗಿದೆ. ನೀವು ಆಯ್ಕೆ ಮಾಡುವ ಮೆಟ್ಟಿಲಿನ ವಿಧವು ನಿಮ್ಮ ಮನೆಯ ಆಯಾಮ, ವಿನ್ಯಾಸ ಮತ್ತು ಅದರೊಳಗಿನ ಜಾಗಕ್ಕೆ ಹೊಂದಿಕೆಯಾಗುವಂತಿರಬೇಕು. ವಿಭಿನ್ನ ಸ್ವರೂಪದ ಮನೆಗಳಿಗೆ ಹೊಂದಿಕೆಯಾಗುವ ಮೆಟ್ಟಿಲುಗಳ ಉದಾಹರಣೆಗಳು ಇಲ್ಲಿವೆ.

1. ನೇರ ವಿಮಾನ ಮೆಟ್ಟಿಲುಗಳು

ನೇರ ವಿಮಾನ ಅಥವಾ ಸ್ಟ್ರೇಟ್ ಫ್ಲೈಟ್ ಮೆಟ್ಟಿಲುಗಳು, ಮಹಡಿಯ ಮೆಟ್ಟಿಲುಗಳ ಒಂದು ಸಾಮಾನ್ಯ ವಿಧವಾಗಿದೆ.‌ ಸಣ್ಣ ಮತ್ತು ದೊಡ್ಡ ಸ್ವರೂಪದ ಎಲ್ಲ ಮನೆಗಳಿಗೆ ಇವು ಹೊಂದಿಕೆಯಾಗುತ್ತವೆ. ಈ ವಿಧಧ ಮೆಟ್ಟಿಲುಗಳು ನೇರವಾಗಿರುತ್ತವೆ. ಮರ, ಕಬ್ಬಿಣ ಅಥವಾ ಕಾಂಕ್ರೀಟ್ ಮುಂತಾದ ಯಾವುದೇ ವಸ್ತುಗಳಿಂದ ಇವುಗಳನ್ನು ಮಾಡಬಹುದು. ಇವು ನಿಮ್ಮ ಮನೆಗೆ ನಯವಾದ ಹಾಗೂ ಆಧುನಿಕ ಲುಕ್ ಅನ್ನು ನೀಡುತ್ತವೆ. ಬಳಕೆಗೆ ಅನುಕೂಲಕರವಾಗಿವೆ. ಮಾತ್ರವಲ್ಲ ಸಾಗಿಸಲು ಅತ್ಯಂತ ಸುಲಭವಾಗಿದೆ.

2. ಕಾಲುಭಾಗ ತಿರುಗಿಕೊಂಡಿರುವ ಮೆಟ್ಟಿಲುಗಳು.

ಕಾಲು ಭಾಗ ತಿರುಗಿಕೊಂಡಿರುವ ಮೆಟ್ಟಿಲುಗಳು ಸೀಮಿತ ಜಾಗವಿರುವ ಮನೆಗಳು, ನಗರ ಪ್ರದೇಶದ ಮನೆಗಳು ಹಾಗೂ ಸಣ್ಣ ಮನೆಗಳಿಗೆ ಉತ್ತಮ ಆಯ್ಕೆಯಾಗಿದೆ. ಅವು ಪ್ರಾರಂಭದಲ್ಲಿ ನೇರವಾಗಿರುತ್ತವೆ ಮತ್ತು ಇಳಿಯುವಾಗ ಎಂದರೆ, ಲ್ಯಾಂಡಿಂಗ್ ಹಂತದಲ್ಲಿ 90 ಡಿಗ್ರಿ ತಿರುವು ಪಡೆಯುತ್ತವೆ. ಸೀಮಿತ ಜಾಗ ಹೊಂದಿರುವ ಮನೆಗಳಿಗೆ ಈ ವಿಧದ ಮೆಟ್ಟಿಲುಗಳು ಸೂಕ್ತವಾದ ಆಯ್ಕೆಯಾಗಿದೆ.

3. ನಾಯಿ ಕಾಲಿನಾಕಾರದ ಮೆಟ್ಟಿಲುಗಳು

ನಾಯಿ ಕಾಲಿನಾಕಾರದ ಮೆಟ್ಟಿಲುಗಳು ಕಾಲು ಭಾಗ ತಿರುಗಿರುವ ಮೆಟ್ಟಿಲಿನಂತೆಯೇ ಇರುತ್ತವೆ. ಆದರೆ, ಲ್ಯಾಂಡಿಂಗ್ ಸಂಪರ್ಕಿಸುವ ಸಂದರ್ಭದಲ್ಲಿ ಎರಡು ಮೆಟ್ಟಿಲುಗಳಿರುತ್ತವೆ. ಈ ವಿಧದ ಮೆಟ್ಟಿಲುಗಳು ದೊಡ್ಡ ಮನೆಗಳಿಗೆ ಸೂಕ್ತವಾಗುತ್ತವೆ. ಸಾಂಪ್ರದಾಯಿಕ ಹಾಗೂ ಶಾಸ್ತ್ರೀಯ ವಿನ್ಯಾಸದ ಮನೆಗಳಿಗೆ ಉತ್ತಮ ಆಯ್ಕೆಯಾಗಿದೆ. ಮನೆಗಳಲ್ಲಿ ಈ ವಿಧಧ ಮೆಟ್ಟಿಲುಗಳು ತಮ್ಮ ಆಕರ್ಷಕವಾದ ಹಾಗೂ ಆಧುನಿಕ ಲುಕ್ ನಿಂದ ಭವ್ಯತೆಯ ಸ್ಪರ್ಷವನ್ನು ನೀಡುತ್ತವೆ.

4.ತೆರೆದ ನ್ಯೂವೆಲ್ ಮೆಟ್ಟಿಲುಗಳು

ತೆರೆದ ನ್ಯೂವೆಲ್ ಮೆಟ್ಟಿಲುಗಳು ದೊಡ್ಡ ಮನೆಗಳಿಗೆ ಸೂಕ್ತವಾಗಿವೆ. ಅಲ್ಲದೆ,‌ ಆಧುನಿಕ ಸಮಕಾಲೀನ ಶೈಲಿಯ ಮನೆಗಳಿಗೆ ಉತ್ತಮ ಆಯ್ಕೆಯಾಗಬಲ್ಲದು. ಈ ವಿಧದ ಮೆಟ್ಟಿಲುಗಳ ನಡುವಿನ ಭಾಗ ಅಥವಾ ನ್ಯೂವೆಲ್ ಅನ್ನು ತೆರೆದಿರುತ್ತದೆ. ಇದು ಹೆಚ್ಚು ವಿಶಾಲವಾಗಿದೆ ಎಂಬ ಭಾವನೆಯಯನ್ನು‌ ಮೂಡಿಸುತ್ತದೆ. ತನ್ನ ಸೊಗಸಾದ ಹಾಗೂ ಸುಂದರವಾದ ಲುಕ್ ನೊಂದಿಗೆ ಈ ಮೆಟ್ಟಿಲುಗಳು ನಿಮ್ಮ‌ ಮನೆಗೆ ಉತ್ತಮ ಪ್ರಶಂಸೆಯನ್ನು ತಂದುಕೊಡುತ್ತವೆ.

5.ವೃತ್ತಾಕಾರದ ಮೆಟ್ಟಿಲುಗಳು

ವೃತ್ತಾಕಾರದ ಮೆಟ್ಟಿಲುಗಳು ತಿರುವನ್ನು ಹೊಂದಿರುತ್ತವೆ ಅಥವಾ ವೃತ್ತಾಕಾರವಾಗಿರುತ್ತವೆ. ಈ ಮಾದರಿಯು ವಿಶಾಲ ಜಾಗವನ್ನು ಹೊಂದಿರುವ ಮನೆಗಳಿಗೆ ಈ ವಿನ್ಯಾಸವು ಸೂಕ್ತವಾವಿದೆ. ಇದನ್ನು ಭವ್ಯವಾದ ಪ್ರವೇಶ ದ್ವಾರ ಹೊಂದಿರುವ ಐಶಾರಾಮಿ ಮನೆಗಳಿಗೆ ಬಳಸಲಾಗುತ್ತದೆ. ಇದು ನಿಮ್ಮ ಮನೆಗಳಿಗೆ ಭವ್ಯವಾದ ನೋಟವನ್ನು ನೀಡುತ್ತದೆ.

6. ಸುರುಳಿಯಾಕಾರದ ಮೆಟ್ಟಿಲುಗಳು

ಸುರುಳಿಯಾಕಾರದ ಮೆಟ್ಟುಲುಗಳು ಸುರುಳಿ ಅಥವಾ ಹ್ಯಾಲಿಕಲ್ ಆಕಾರ ಹೊಂದಿರುತ್ತವೆ. ಸೀಮಿತ ಜಾಗದ ಕೋಣೆಗಳಿಗೆ ಅಥವಾ ಸಣ್ಷ ಮನೆಗಳಿಗೆ ಈ ಸ್ವರೂಪದ ಮೆಟ್ಟಿಲುಗಳು ಸೂಕ್ತವಾಗಿವೆ. ಇದು ಆಧುನಿಕ ಅಥವಾ ಸಮಕಾಲೀನ‌ ವಿನ್ಯಾಸದ ಮನೆಗಳಿಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ಮರ, ಕಬ್ಬಿಣ, ಗ್ಲಾಸ್ ಮುಂತಾದ ವಿವಿಧ ಸಾಮಗ್ರಿಗಳಿಂದ ಮಾಡಬಹುದಾಗಿದೆ. ತನ್ನ ಸೊಗಸಾದ ಹಾಗೂ ನಯವಾದ ಲುಕ್ ನಿಂದ ಈ ರೀತಿಯ ಮೆಟ್ಟಿಲುಗಳು ಖಂಡಿತವಾಗಿ ಆಕರ್ಷಣೀಯವಾಗಿರುತ್ತವೆ.

7. ಕವಲೊಡೆದ ಮೆಟ್ಟಿಲುಗಳು

ಕವಲೊಡೆದ ಮೆಟ್ಟಿಲುಗಳ ವಿಧವು ಅದ್ಭುತವಾದ ಗಮನ ಸೆಳೆಯುವ ವಿನ್ಯಾದವಾಗಿದೆ. ಇದು ವಿಶಾಲ ಜಾಗವನ್ನು ಹೊಂದಿದ ದೊಡ್ಡ ಮನೆಗಳಿಗೆ ಸೂಕ್ತವಾಗಿದೆ. ಲ್ಯಾಂಡಿಂಗ್ ಸಮಯದಲ್ಲಿ ಇದು ಎರಡು ವಿಭಾಗವಾಗುತ್ತದೆ. ಅಥವಾ ಕವಲೊಡೆಯುತ್ತದೆ. ಶಾಸ್ತ್ರೀಯ ಅಥವಾ ಸಾಂಪ್ರದಾಯಿಕ ವಿನ್ಯಾಸ ಹೊಂದಿರುವ ಭವ್ಯವಾದ ಮನೆಗಳಿಗೆ ಈ ಶೈಲಿಯು ಉತ್ತಮ ಆಯ್ಕೆಯಾಗಿದೆ. ಈ ಸ್ವರೂಪದ ಮೆಟ್ಟಿಲುಗಳು ನಿಮ್ಮ‌ ಮನೆಗೆ ಸೊಬಗು ಜಾಗೂ ಉತ್ಕೃಷ್ಟತೆಯ ಸ್ಪರ್ಷವನ್ನು ನೀಡುತ್ತವೆ.

8 ವಿಂಡರ್ ಮೆಟ್ಟಿಲುಗಳು

ವಿಂಡರ್ ಶೈಲಿಯ ಮೆಟ್ಟಿಲುಗಳು ಕಾಲು ಭಾಗ ತಿರುವಾಗಿರುವ ಮೆಟ್ಟಿಲುಗಳಂತೆಯೇ ಇರುತ್ತವೆ. ಆದರೆ, ಲ್ಯಾಂಡಿಂಗ್ ಸಮಯದಲ್ಲಿ ಹೆಚ್ಚು ವಿಶಾಲವಾಗಿ ತಿರುವು ಹೊಂದಿರುತ್ತವೆ. ಸೀಮಿತ‌ ಪ್ರದೇಶ ಹೊಂದಿದ ಮನೆಗಳಿಗೆ ಜಾಗೂ ಸಾಂಪ್ರದಾಯಿಕ ಶಾಸ್ತ್ರೀಯ ವಿನ್ಯಾಸದ ಮನೆಗಳಿಗೆ ಈ ರೀತಿಯ ಮೆಟ್ಟಿಲುಗಳು ಉತ್ತಮ ಆಯ್ಕೆಯಾಗಿದೆ. ಈ ವಿಧದ ಮೆಟ್ಟಿಲುಗಳು ನಿಮ್ಮ ಮನೆಗೆ ನಯವಾದ ಹಾಗೂ ಕ್ರಿಯಾತ್ಮಕ ಆಯ್ಕೆಯಾಗಿದೆ.

9. U ಆಕಾರದ ಮೆಟ್ಟಿಲುಗಳು

ಇಂಗ್ಲಿಷ್ ವರ್ಣಮಾಲೆಯ ಯು ಅಕ್ಷರದ ಸ್ವರೂಪದಲ್ಲಿರುವ ಮೆಟ್ಟಿಲುಗಳು ನಾಯಿ‌ ಕಾಲಿನಾಕಾರದ ಮೆಟ್ಟಿಲಿನ ಸ್ವರೂಪದಂತೆಯೇ ಇರುತ್ತದೆ. ಆದರೆ, ಮೆಟ್ಟಿಲು ಹತ್ತುವ ಪ್ರಾರಂಭದಲ್ಲಿ ಹೆಚ್ಚುವರಿ ಮೆಟ್ಟಿಲುಗಳು ಯು ಆಕಾರವನ್ನು ಸೃಷ್ಟಿಸುತ್ತವೆ. ಇದು ವಿಶಾಲ ಜಾಗ ಹೊಂದಿದ ಭವ್ಯ ಮನೆಗಳಿಗೆ ಈ ವಿನ್ಯಾಸ ಹೆಚ್ಚು ಸೂಕ್ತವಾಗಿದೆ. ಅಲ್ಲದೆ, ಭವ್ಯ ವಿನ್ಯಾಸ ಹೊಂದಿದ ಮನೆಗಳಿಗೆ ಉತ್ತಮ ಆಯ್ಕೆಯಾಗಿದೆ. ಈ ಶೈಲಿಯ ಮೆಟ್ಟಿಲುಗಳ ಭವ್ಯವಾದ ಹಾಗೂ ಗಮನ ಸೆಳೆಯುವ ನೋಟವು ಮನೆಮಾತಾಗುವಂತೆ ಮಾಡುತ್ತದೆ.



ಸರಿಯಾದ ಸಾಮಗ್ರಿಗಳು, ವಿನ್ಯಾಸ ಮತ್ತು ನಿರ್ಮಾಣ ತಂತ್ರಗಳಿಂದ ಉತ್ತಮವಾಗಿ ನಿರ್ಮಿಸಿದ ಮೆಟ್ಟಿಲುಗಳು ಕಟ್ಟಡದ ಸೌಂದರ್ಯವನ್ನು ಹಾಗೂ ಸಮರ್ಪಕ ಕಾರ್ಯನಿರ್ವಹಣೆಯ ಪ್ರಮಾಣವನ್ನು‌ ಹೆಚ್ಚಿಸುತ್ತದೆ. ಅಲ್ಲದೆ, ಅದನ್ನು ಬಳಸುವವರ ಸುರಕ್ಷತೆ ಹಾಗೂ ಸೌಂದರ್ಯವನ್ನು ಖಚಿತಪಡಿಸುತ್ತದೆ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....