Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಮೆಟ್ಟಿಲುಗಳು ಯಾವುದೇ ಬಹು ಮಹಡಿಯ ಮನೆಯ ಬಹು ಮುಖ್ಯ ಭಾಗವಾಗಿವೆ. ಸುಂದರವಾಗಿ ಕಾಣುವ ಹಾಗೂ ಬಳಕೆಗೂ ಅನುಕೂಲಕರವಾಗಿರುವ ಸಮರ್ಪಕ ವಿಧಧ ಮಹಡಿ ಮೆಟ್ಟಿಲುಗಳನ್ನು ಆಯ್ಕೆ ಮಾಡುವುದುಕಷ್ಟದಾಯಕವಾಗಿದೆ. ನೀವು ಆಯ್ಕೆ ಮಾಡುವ ಮೆಟ್ಟಿಲಿನ ವಿಧವು ನಿಮ್ಮ ಮನೆಯ ಆಯಾಮ, ವಿನ್ಯಾಸ ಮತ್ತು ಅದರೊಳಗಿನ ಜಾಗಕ್ಕೆ ಹೊಂದಿಕೆಯಾಗುವಂತಿರಬೇಕು. ವಿಭಿನ್ನ ಸ್ವರೂಪದ ಮನೆಗಳಿಗೆ ಹೊಂದಿಕೆಯಾಗುವ ಮೆಟ್ಟಿಲುಗಳ ಉದಾಹರಣೆಗಳು ಇಲ್ಲಿವೆ.
ನೇರ ವಿಮಾನ ಅಥವಾ ಸ್ಟ್ರೇಟ್ ಫ್ಲೈಟ್ ಮೆಟ್ಟಿಲುಗಳು, ಮಹಡಿಯ ಮೆಟ್ಟಿಲುಗಳ ಒಂದು ಸಾಮಾನ್ಯ ವಿಧವಾಗಿದೆ. ಸಣ್ಣ ಮತ್ತು ದೊಡ್ಡ ಸ್ವರೂಪದ ಎಲ್ಲ ಮನೆಗಳಿಗೆ ಇವು ಹೊಂದಿಕೆಯಾಗುತ್ತವೆ. ಈ ವಿಧಧ ಮೆಟ್ಟಿಲುಗಳು ನೇರವಾಗಿರುತ್ತವೆ. ಮರ, ಕಬ್ಬಿಣ ಅಥವಾ ಕಾಂಕ್ರೀಟ್ ಮುಂತಾದ ಯಾವುದೇ ವಸ್ತುಗಳಿಂದ ಇವುಗಳನ್ನು ಮಾಡಬಹುದು. ಇವು ನಿಮ್ಮ ಮನೆಗೆ ನಯವಾದ ಹಾಗೂ ಆಧುನಿಕ ಲುಕ್ ಅನ್ನು ನೀಡುತ್ತವೆ. ಬಳಕೆಗೆ ಅನುಕೂಲಕರವಾಗಿವೆ. ಮಾತ್ರವಲ್ಲ ಸಾಗಿಸಲು ಅತ್ಯಂತ ಸುಲಭವಾಗಿದೆ.
ಕಾಲು ಭಾಗ ತಿರುಗಿಕೊಂಡಿರುವ ಮೆಟ್ಟಿಲುಗಳು ಸೀಮಿತ ಜಾಗವಿರುವ ಮನೆಗಳು, ನಗರ ಪ್ರದೇಶದ ಮನೆಗಳು ಹಾಗೂ ಸಣ್ಣ ಮನೆಗಳಿಗೆ ಉತ್ತಮ ಆಯ್ಕೆಯಾಗಿದೆ. ಅವು ಪ್ರಾರಂಭದಲ್ಲಿ ನೇರವಾಗಿರುತ್ತವೆ ಮತ್ತು ಇಳಿಯುವಾಗ ಎಂದರೆ, ಲ್ಯಾಂಡಿಂಗ್ ಹಂತದಲ್ಲಿ 90 ಡಿಗ್ರಿ ತಿರುವು ಪಡೆಯುತ್ತವೆ. ಸೀಮಿತ ಜಾಗ ಹೊಂದಿರುವ ಮನೆಗಳಿಗೆ ಈ ವಿಧದ ಮೆಟ್ಟಿಲುಗಳು ಸೂಕ್ತವಾದ ಆಯ್ಕೆಯಾಗಿದೆ.
ನಾಯಿ ಕಾಲಿನಾಕಾರದ ಮೆಟ್ಟಿಲುಗಳು ಕಾಲು ಭಾಗ ತಿರುಗಿರುವ ಮೆಟ್ಟಿಲಿನಂತೆಯೇ ಇರುತ್ತವೆ. ಆದರೆ, ಲ್ಯಾಂಡಿಂಗ್ ಸಂಪರ್ಕಿಸುವ ಸಂದರ್ಭದಲ್ಲಿ ಎರಡು ಮೆಟ್ಟಿಲುಗಳಿರುತ್ತವೆ. ಈ ವಿಧದ ಮೆಟ್ಟಿಲುಗಳು ದೊಡ್ಡ ಮನೆಗಳಿಗೆ ಸೂಕ್ತವಾಗುತ್ತವೆ. ಸಾಂಪ್ರದಾಯಿಕ ಹಾಗೂ ಶಾಸ್ತ್ರೀಯ ವಿನ್ಯಾಸದ ಮನೆಗಳಿಗೆ ಉತ್ತಮ ಆಯ್ಕೆಯಾಗಿದೆ. ಮನೆಗಳಲ್ಲಿ ಈ ವಿಧಧ ಮೆಟ್ಟಿಲುಗಳು ತಮ್ಮ ಆಕರ್ಷಕವಾದ ಹಾಗೂ ಆಧುನಿಕ ಲುಕ್ ನಿಂದ ಭವ್ಯತೆಯ ಸ್ಪರ್ಷವನ್ನು ನೀಡುತ್ತವೆ.
ತೆರೆದ ನ್ಯೂವೆಲ್ ಮೆಟ್ಟಿಲುಗಳು ದೊಡ್ಡ ಮನೆಗಳಿಗೆ ಸೂಕ್ತವಾಗಿವೆ. ಅಲ್ಲದೆ, ಆಧುನಿಕ ಸಮಕಾಲೀನ ಶೈಲಿಯ ಮನೆಗಳಿಗೆ ಉತ್ತಮ ಆಯ್ಕೆಯಾಗಬಲ್ಲದು. ಈ ವಿಧದ ಮೆಟ್ಟಿಲುಗಳ ನಡುವಿನ ಭಾಗ ಅಥವಾ ನ್ಯೂವೆಲ್ ಅನ್ನು ತೆರೆದಿರುತ್ತದೆ. ಇದು ಹೆಚ್ಚು ವಿಶಾಲವಾಗಿದೆ ಎಂಬ ಭಾವನೆಯಯನ್ನು ಮೂಡಿಸುತ್ತದೆ. ತನ್ನ ಸೊಗಸಾದ ಹಾಗೂ ಸುಂದರವಾದ ಲುಕ್ ನೊಂದಿಗೆ ಈ ಮೆಟ್ಟಿಲುಗಳು ನಿಮ್ಮ ಮನೆಗೆ ಉತ್ತಮ ಪ್ರಶಂಸೆಯನ್ನು ತಂದುಕೊಡುತ್ತವೆ.
ವೃತ್ತಾಕಾರದ ಮೆಟ್ಟಿಲುಗಳು ತಿರುವನ್ನು ಹೊಂದಿರುತ್ತವೆ ಅಥವಾ ವೃತ್ತಾಕಾರವಾಗಿರುತ್ತವೆ. ಈ ಮಾದರಿಯು ವಿಶಾಲ ಜಾಗವನ್ನು ಹೊಂದಿರುವ ಮನೆಗಳಿಗೆ ಈ ವಿನ್ಯಾಸವು ಸೂಕ್ತವಾವಿದೆ. ಇದನ್ನು ಭವ್ಯವಾದ ಪ್ರವೇಶ ದ್ವಾರ ಹೊಂದಿರುವ ಐಶಾರಾಮಿ ಮನೆಗಳಿಗೆ ಬಳಸಲಾಗುತ್ತದೆ. ಇದು ನಿಮ್ಮ ಮನೆಗಳಿಗೆ ಭವ್ಯವಾದ ನೋಟವನ್ನು ನೀಡುತ್ತದೆ.
ಸುರುಳಿಯಾಕಾರದ ಮೆಟ್ಟುಲುಗಳು ಸುರುಳಿ ಅಥವಾ ಹ್ಯಾಲಿಕಲ್ ಆಕಾರ ಹೊಂದಿರುತ್ತವೆ. ಸೀಮಿತ ಜಾಗದ ಕೋಣೆಗಳಿಗೆ ಅಥವಾ ಸಣ್ಷ ಮನೆಗಳಿಗೆ ಈ ಸ್ವರೂಪದ ಮೆಟ್ಟಿಲುಗಳು ಸೂಕ್ತವಾಗಿವೆ. ಇದು ಆಧುನಿಕ ಅಥವಾ ಸಮಕಾಲೀನ ವಿನ್ಯಾಸದ ಮನೆಗಳಿಗೆ ಉತ್ತಮ ಆಯ್ಕೆಯಾಗಿದೆ. ಇದನ್ನು ಮರ, ಕಬ್ಬಿಣ, ಗ್ಲಾಸ್ ಮುಂತಾದ ವಿವಿಧ ಸಾಮಗ್ರಿಗಳಿಂದ ಮಾಡಬಹುದಾಗಿದೆ. ತನ್ನ ಸೊಗಸಾದ ಹಾಗೂ ನಯವಾದ ಲುಕ್ ನಿಂದ ಈ ರೀತಿಯ ಮೆಟ್ಟಿಲುಗಳು ಖಂಡಿತವಾಗಿ ಆಕರ್ಷಣೀಯವಾಗಿರುತ್ತವೆ.
ಕವಲೊಡೆದ ಮೆಟ್ಟಿಲುಗಳ ವಿಧವು ಅದ್ಭುತವಾದ ಗಮನ ಸೆಳೆಯುವ ವಿನ್ಯಾದವಾಗಿದೆ. ಇದು ವಿಶಾಲ ಜಾಗವನ್ನು ಹೊಂದಿದ ದೊಡ್ಡ ಮನೆಗಳಿಗೆ ಸೂಕ್ತವಾಗಿದೆ. ಲ್ಯಾಂಡಿಂಗ್ ಸಮಯದಲ್ಲಿ ಇದು ಎರಡು ವಿಭಾಗವಾಗುತ್ತದೆ. ಅಥವಾ ಕವಲೊಡೆಯುತ್ತದೆ. ಶಾಸ್ತ್ರೀಯ ಅಥವಾ ಸಾಂಪ್ರದಾಯಿಕ ವಿನ್ಯಾಸ ಹೊಂದಿರುವ ಭವ್ಯವಾದ ಮನೆಗಳಿಗೆ ಈ ಶೈಲಿಯು ಉತ್ತಮ ಆಯ್ಕೆಯಾಗಿದೆ. ಈ ಸ್ವರೂಪದ ಮೆಟ್ಟಿಲುಗಳು ನಿಮ್ಮ ಮನೆಗೆ ಸೊಬಗು ಜಾಗೂ ಉತ್ಕೃಷ್ಟತೆಯ ಸ್ಪರ್ಷವನ್ನು ನೀಡುತ್ತವೆ.
ವಿಂಡರ್ ಶೈಲಿಯ ಮೆಟ್ಟಿಲುಗಳು ಕಾಲು ಭಾಗ ತಿರುವಾಗಿರುವ ಮೆಟ್ಟಿಲುಗಳಂತೆಯೇ ಇರುತ್ತವೆ. ಆದರೆ, ಲ್ಯಾಂಡಿಂಗ್ ಸಮಯದಲ್ಲಿ ಹೆಚ್ಚು ವಿಶಾಲವಾಗಿ ತಿರುವು ಹೊಂದಿರುತ್ತವೆ. ಸೀಮಿತ ಪ್ರದೇಶ ಹೊಂದಿದ ಮನೆಗಳಿಗೆ ಜಾಗೂ ಸಾಂಪ್ರದಾಯಿಕ ಶಾಸ್ತ್ರೀಯ ವಿನ್ಯಾಸದ ಮನೆಗಳಿಗೆ ಈ ರೀತಿಯ ಮೆಟ್ಟಿಲುಗಳು ಉತ್ತಮ ಆಯ್ಕೆಯಾಗಿದೆ. ಈ ವಿಧದ ಮೆಟ್ಟಿಲುಗಳು ನಿಮ್ಮ ಮನೆಗೆ ನಯವಾದ ಹಾಗೂ ಕ್ರಿಯಾತ್ಮಕ ಆಯ್ಕೆಯಾಗಿದೆ.
ಇಂಗ್ಲಿಷ್ ವರ್ಣಮಾಲೆಯ ಯು ಅಕ್ಷರದ ಸ್ವರೂಪದಲ್ಲಿರುವ ಮೆಟ್ಟಿಲುಗಳು ನಾಯಿ ಕಾಲಿನಾಕಾರದ ಮೆಟ್ಟಿಲಿನ ಸ್ವರೂಪದಂತೆಯೇ ಇರುತ್ತದೆ. ಆದರೆ, ಮೆಟ್ಟಿಲು ಹತ್ತುವ ಪ್ರಾರಂಭದಲ್ಲಿ ಹೆಚ್ಚುವರಿ ಮೆಟ್ಟಿಲುಗಳು ಯು ಆಕಾರವನ್ನು ಸೃಷ್ಟಿಸುತ್ತವೆ. ಇದು ವಿಶಾಲ ಜಾಗ ಹೊಂದಿದ ಭವ್ಯ ಮನೆಗಳಿಗೆ ಈ ವಿನ್ಯಾಸ ಹೆಚ್ಚು ಸೂಕ್ತವಾಗಿದೆ. ಅಲ್ಲದೆ, ಭವ್ಯ ವಿನ್ಯಾಸ ಹೊಂದಿದ ಮನೆಗಳಿಗೆ ಉತ್ತಮ ಆಯ್ಕೆಯಾಗಿದೆ. ಈ ಶೈಲಿಯ ಮೆಟ್ಟಿಲುಗಳ ಭವ್ಯವಾದ ಹಾಗೂ ಗಮನ ಸೆಳೆಯುವ ನೋಟವು ಮನೆಮಾತಾಗುವಂತೆ ಮಾಡುತ್ತದೆ.
ಸರಿಯಾದ ಸಾಮಗ್ರಿಗಳು, ವಿನ್ಯಾಸ ಮತ್ತು ನಿರ್ಮಾಣ ತಂತ್ರಗಳಿಂದ ಉತ್ತಮವಾಗಿ ನಿರ್ಮಿಸಿದ ಮೆಟ್ಟಿಲುಗಳು ಕಟ್ಟಡದ ಸೌಂದರ್ಯವನ್ನು ಹಾಗೂ ಸಮರ್ಪಕ ಕಾರ್ಯನಿರ್ವಹಣೆಯ ಪ್ರಮಾಣವನ್ನು ಹೆಚ್ಚಿಸುತ್ತದೆ. ಅಲ್ಲದೆ, ಅದನ್ನು ಬಳಸುವವರ ಸುರಕ್ಷತೆ ಹಾಗೂ ಸೌಂದರ್ಯವನ್ನು ಖಚಿತಪಡಿಸುತ್ತದೆ.