ವಾಸ್ತು ಶಾಸ್ತ್ರದಲ್ಲಿ ಪೂರ್ವಕ್ಕೆ ಮುಖ ಮಾಡಿರುವ ಮನೆಯ ಮಹತ್ವ
ಮೊದಲ ಬೆಳಕು ಬೀಳುವ ಸೂರ್ಯ ಹುಟ್ಟುವ ದಿಕ್ಕಿನ ಸಂಬಂಧದಿಂದಾಗಿ ಪೂರ್ವಾಭಿಮುಖವಾಗಿರುವ ಮನೆಗಳನ್ನು ವಾಸ್ತು ಶಾಸ್ತ್ರದಲ್ಲಿ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಮೇನ್ ಡೋರ್ ಪೂರ್ವಕ್ಕೆ ಮುಖ ಮಾಡಿರುವುದರಿಂದ ಅದು ಪಾಸಿಟಿವ್ ಎನರ್ಜಿ, ಯಶಸ್ಸು ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ವಿಟಮಿನ್ ಡಿ ಸಮೃದ್ಧವಾಗಿರುವ ಮುಂಜಾನೆ ಸೂರ್ಯನ ಎಳೆ ಬಿಸಿಲು ಸಂಪೂರ್ಣವಾಗಿ ಮನೆಯಲ್ಲಿ ಬೀಳುತ್ತದೆ. ಅದು ಮನೆಯಲ್ಲಿ ವಾಸಿಸುವವವರ ಆರೋಗ್ಯ ಮತ್ತು ಸೌಖ್ಯವನ್ನು ವೃದ್ಧಿಸುತ್ತದೆ. ಪೂರ್ವಾಭಿಮುಖವಾದ ಮನೆ ವಾಸ್ತು ಪ್ರಕಾರ ಮನೆಯಲ್ಲಿರುವವರಿಗೆ ಯಾಕೆ ಲಾಭವನ್ನು ತರುತ್ತದೆ ಎಂಬುದರ ಕುರಿತು ಇಲ್ಲಿದೆ:
1) ಜ್ಞಾನೋದಯದ ಸಂಕೇತ
ಪೂರ್ವ ದಿಕ್ಕು ಸೂರ್ಯ ಉದಯಿಸುವುದಕ್ಕೆ ಸಂಬಂಧಿಸಿದೆ, ಇದು ಬೆಳಕು, ಜ್ಞಾನ ಮತ್ತು ಆಧ್ಯಾತ್ಮಿಕ ಬೆಳವಣಿಗೆಯನ್ನು ಸಂಕೇತಿಸುತ್ತದೆ. ಪೂರ್ವಕ್ಕೆ ಮನೆ ಮಾಡಿರುವ ಮನೆಗಳು ಈ ಶಕ್ತಿಯನ್ನು ಬಳಸಿಕೊಳ್ಳುತ್ತವೆ ಎಂದು ನಂಬಲಾಗಿದೆ, ನಿವಾಸಿಗಳಿಗೆ ಜ್ಞಾನೋದಯ ಮತ್ತು ಸ್ಪಷ್ಟತೆಯನ್ನು ಸುಗಮಗೊಳಿಸುತ್ತದೆ.
2) ಪಾಸಿಟಿವ್ ಎನರ್ಜಿಯನ್ನು ತರುವುದು
ವಾಸ್ತು ಶಾಸ್ತ್ರದ ಪ್ರಕಾರ, ಪೂರ್ವಕ್ಕೆ ಎದುರಾಗಿರುವ ಎಂಟ್ರನ್ಸ್ ಮಂಗಳಕರವೆಂದು ನಂಬಲಾಗಿದೆ. ಅದು ಮನೆಗೆ ಪಾಸಿಟಿವ್ ಕಂಪನಗಳನ್ನು ಆಹ್ವಾನಿಸುತ್ತದೆ. ಇದು ಬೆಳಿಗ್ಗೆ ಬಹುತೇಕ ಸೂರ್ಯನ ಕಿರಣಗಳು ಬೀಳುವುದರಿಂದ ಉಂಟಾಗುತ್ತದೆ. ಆಗ ಒಳಾಂಗಣ ಪರಿಸರ ಶುದ್ಧೀಕರಣವಾಗುತ್ತದೆ. ಪಾಸಿಟಿವಿಟಿಯನ್ನು ತರುತ್ತದೆ ಎಂದು ನಂಬಲಾಗಿದೆ.
3) ಆರೋಗ್ಯ ಮತ್ತು ಏಳಿಗೆಯ ಹೆಬ್ಬಾಗಿಲು
ಪೂರ್ವಾಭಿಮುಖವಾದ ಮನೆಗೆ ಪ್ರವೇಶಿಸುವ ಸೂರ್ಯನ ಎಳೆ ಬಿಸಿಲು ಕೇವಲ ಬಿಸಿಲಲ್ಲ; ಅದರಲ್ಲಿ ವಿಟಮಿನ್ ಡಿ ಸಮೃದ್ಧವಾಗಿರುತ್ತದೆ. ಅದು ನಿವಾಸಿಗಳ ಆರೋಗ್ಯವನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತದೆ. ಅದರೊಂದಿಗೆ, ಪ್ರಕಾಶಮಾನವಾದ, ಉತ್ಸಾಹ ತರುವ ಬೆಳಕು ನೈತಿಕತೆ, ಉತ್ಪಾದಕತೆ ಮತ್ತು ಆರ್ಥಿಕ ಯಶಸ್ಸನ್ನು ಅಭಿವೃದ್ಧಿ ಪಡಿಸುತ್ತದೆ ಎಂದು ನಂಬಲಾಗಿದೆ.
4) ಸಾಮಾಜಿಕ ಸಾಮರಸ್ಯವನ್ನು ಬೆಳೆಸಲು
ಪೂರ್ವ ದಿಕ್ಕು ಸಾಮಾಜಿಕ ಸಹಚರ್ಯಕ್ಕೂ ಕೂಡ ಸಂಬಂಧಿಸಿದೆ. ಈ ದಿಕ್ಕಿಗೆ ಮುಖ ಮಾಡಿರುವ ಮನೆಗಳು ನಿವಾಸಿಗಳ ಮಧ್ಯೆ ಮತ್ತು ವಿಶಾಲ ಜನಸಮುದಾಯದೊಂದಿಗೆ ಸಾಮರಸ್ಯವನ್ನು ಬೆಳೆಸುತ್ತವೆ ಎಂದು ಭಾವಿಸಲಾಗಿದೆ. ಜೊತೆಗೆ ಸಾಮಾಜಿಕ ಸ್ವಾಸ್ಥ್ಯವನ್ನು ವೃದ್ಧಿಸುತ್ತದೆ.
5) ಅಭಿವೃದ್ಧಿ ಹೊಂದುತ್ತಿರುವ ಕುಟುಂಬಗಳಿಗೆ ಯೋಗ್ಯವಾಗಿದೆ
ಅಭಿವೃದ್ಧಿ ಮತ್ತು ಚೈತನ್ಯದೊಂದಿಗಿನ ಅದರ ಸಂಬಂಧಗಳನ್ನು ಗಮನಿಸಿದರೆ, ಯುವ ದಂಪತಿ ಅಥವಾ ಅಭಿವೃದ್ಧಿ ಹೊಂದುತ್ತಿರುವ ಕುಟುಂಬಗಳಿಗೆ ಪೂರ್ವಾಭಿಮುಖವಾಗಿರುವ ಮನೆಯನ್ನು ಹೆಚ್ಚಾಗಿ ಶಿಫಾರಸು ಮಾಡಲಾಗುತ್ತದೆ. ಮನೆಯ ಕಿರಿಯ ಸದಸ್ಯರ ಅಭಿವೃದ್ಧಿ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುತ್ತದೆ.