Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ನೆಲಕ್ಕೆ ಹಾಸಿದ ಟೈಲ್ ಬಿರುಕುಗಳು ನಿಮ್ಮ ಫ್ಲೋರ್ ಟೈಲ್ ಗಳಲ್ಲಿ ಬಿರುಕುಗಳು, ತುಂಡಾಗುವಿಕೆಗಳು ಅಥವಾ ಒಡೆಯುವಿಕೆಯನ್ನು ಸೂಚಿಸುತ್ತವೆ. ಈ ಬಿರುಕುಗಳು ಟೈಲ್‌ಗಳ ಮೇಲ್ಮೈಯ ಮೇಲೆ ಮಾತ್ರ ಪರಿಣಾಮ ಬೀರುವ ಸಣ್ಣ, ಗಮನಿಸಲಾಗದ ಬಿರುಕುಗಳಿಂದ ಹಿಡಿದು ಟೈಲ್‌ನಲ್ಲಿ ಆಳವಾಗಿ ಉಂಟಾದ ದೊಡ್ಡ, ಗಮನಾರ್ಹವಾದ ಬಿರುಕುಗಳವರೆಗೆ ಇರಬಹುದು. ಕೇವಲ ಕಲಾತ್ಮಕತೆಯನ್ನು ಕಳೆದುಕೊಳ್ಳುವುದರ ಹೊರತಾಗಿ, ಕೆಲವು ಸಂದರ್ಭಗಳಲ್ಲಿ, ಈ ಬಿರುಕುಗಳು ಅವುಗಳಿಗೆ ಹೊಂದಿಕೊಂಡಂತೆ ಇರುವ ರಚನಾತ್ಮಕ ಸಮಸ್ಯೆಗಳನ್ನು ಸೂಚಿಸಬಹುದು. ಅದು ನಿಮ್ಮ ಮನೆ ಅಥವಾ ಕಚೇರಿ ನಿರ್ಮಾಣದ ಸಮಗ್ರತೆಗೆ ದೊಡ್ಡ ಅಡೆತಡೆಯನ್ನು ಉಂಟುಮಾಡಬಹುದು.
ನಿಮ್ಮ ಟೈಲ್ಸ್‌ನಲ್ಲಿ ಬಿರುಕುಗಳು, ಸಣ್ಣ ಕೂದಲೆಳೆಯ ಬಿರುಕು ಕೂಡ ಕೇವಲ ಸೌಂದರ್ಯ ಸಮಸ್ಯೆಗಿಂತ ಹೆಚ್ಚಿನದಾಗಿದೆ. ಅವು ನಿಮ್ಮ ಫ್ಲೋರ್ ಕೆಳಗೆ ತೇವಾಂಶದ ಪ್ರವೇಶಕ್ಕೆ ದ್ವಾರಗಳಾಗಿ ಕಾರ್ಯನಿರ್ವಹಿಸಬಹುದು. ಇದು ಶಿಲೀಂಧ್ರದ ಬೆಳವಣಿಗೆಗೆ ಕಾರಣವಾಗುತ್ತದೆ. ಇದಲ್ಲದೆ, ಕಾಲಾನಂತರದಲ್ಲಿ, ಈ ಬಿರುಕುಗಳು ಸಹ ಇನ್ನಷ್ಟು ಆಳವಾಗಿ ನಿಮ್ಮ ಫ್ಲೋರ್‌ಲ್ಲಿ ಮುಗ್ಗರಿಸುವಂತಹ ಅಪಾಯಗಳನ್ನು ಉಂಟುಮಾಡಬಹುದು. ಎಪಾಕ್ಸಿ ಗ್ರೌಟ್‌ನಂತಹ ಸೂಕ್ತವಾದ ಪರಿಹಾರಗಳೊಂದಿಗೆ ಟೈಲ್ ಗಳಲ್ಲಿ ಬಿರುಕುಗಳನ್ನು ತುಂಬುವ ಮೂಲಕ ಅವುಗಳ ತಡೆಗಟ್ಟುವಿಕೆ ಮತ್ತು ತ್ವರಿತ ದುರಸ್ತಿಗಾಗಿ ಈ ಬಿರುಕುಗಳ ಕಾರಣವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ನೆಲಕ್ಕೆ ಹಾಸಿದ ಟೈಲ್ ಗಳಲ್ಲಿ ಬಿರುಕು ಮೂಡಲು ಹಲವಾರು ಅಂಶಗಳು ಕಾರಣವಾಗಿರಬಹುದು. ಫ್ಲೋರ್ ಟೈಲ್ ಗಳು ಬಿರುಕು ಬಿಡುವುದನ್ನು ಪರಿಣಾಮಕಾರಿಯಾಗಿ ತಡೆಯಲು ಈ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅತ್ಯಂತ ಸಾಮಾನ್ಯ ತಪ್ಪುಗಳು ಹೀಗಿವೆ:
ಟೈಲ್ ಬಿರುಕು ಬಿಡುವ ಪ್ರಾಥಮಿಕ ಕಾರಣಗಳಲ್ಲಿ ಬಿರುಸು ಹೊಡೆತಗಳು ಒಂದಾಗಿವೆ. ಭಾರವಾದ ವಸ್ತುಗಳನ್ನು ಟೈಲ್‌ಗಳ ಮೇಲೆ ಬೀಳಿಸಿದಾಗ ಅಥವಾ ಟೈಲ್ ಗಳ ಮೇಲೆ ತೀಕ್ಷ್ಣವಾದ ಹೊಡೆತಗಳು ಉಂಟಾದಾಗ, ಅವು ತಕ್ಷಣವೇ ಬಿರುಕು ಬಿಡಬಹುದು ಅಥವಾ ಕಾಲಾನಂತರದಲ್ಲಿ ದುರ್ಬಲಗೊಳ್ಳಬಹುದು. ಟೈಲ್ ಗಳಿಗೆ ಹಾನಿಯಾಗದಂತೆ ಟೈಲ್ ಹಾಸಿದ ಫ್ಲೋರ್ ಮೇಲ್ಮೈಗಳಲ್ಲಿ ಪೀಠೋಪಕರಣಗಳು ಅಥವಾ ಇತರ ಭಾರವಾದ ವಸ್ತುಗಳನ್ನು ಅತ್ತಿತ್ತ ಎಳೆಯುವಾಗ ಜಾಗರೂಕರಾಗಿರುವುದು ಅತ್ಯಗತ್ಯ.
ಕಳಪೆ ಜೋಡಿಸುವಿಕೆಯ ಅಭ್ಯಾಸಗಳು ಟೈಲ್ ಬಿರುಕುಗಳಿಗೆ ಕಾರಣವಾಗಬಹುದು. ಅಸಮರ್ಪಕವಾಗಿ ಅಂಟಿನ ತುಂಬುವಿಕೆ, ಅಥವಾ ಅಸಮರ್ಪಕ ಗ್ರೌಟಿಂಗ್, ಅಸಮರ್ಪಕ ತಳ ಪದರದ ತಯಾರಿಯು ಸಾಮಾನ್ಯ ಜೋಡಿಸುವಿಕೆಯ ಹಂತದ ತಪ್ಪುಗಳಾಗಿದ್ದು ಅದು ಟೈಲ್ ಗಳು ಬಿರುಕು ಬಿಡಲು ಕಾರಣವಾಗಬಹುದು. ಅಂತಹ ಸಮಸ್ಯೆಗಳನ್ನು ತಡೆಗಟ್ಟಲು ಸರಿಯಾದ ಜೋಡಿಸುವಿಕೆಯ ತಂತ್ರಗಳನ್ನು ಅನುಸರಿಸುವ ವೃತ್ತಿಪರ ಟೈಲ್ ಜೋಡಿಸುವವರನ್ನು ನೇಮಿಸಿಕೊಳ್ಳುವುದು ಬಹಳ ಮುಖ್ಯ.
ವಿಶೇಷವಾಗಿ ಅಸಮರ್ಪಕ ರಚನೆಗಳಿಂದ ಕೂಡಿದ ಜಾಗದಲ್ಲಿ ಟೈಲ್ ಗಳ ಮೇಲೆ ಅತಿಯಾದ ತೂಕ ಅಥವಾ ಒತ್ತಡವು ಅವುಗಳ ಬಿರುಕಿಗೆ ಕಾರಣವಾಗಬಹುದು. ಭಾರೀ ವಸ್ತುಗಳನ್ನು ನೇರವಾಗಿ ಟೈಲ್ ಗಳ ಮೇಲೆ ಇರಿಸಿದಾಗ ಅಥವಾ ನಿರ್ದಿಷ್ಟ ಜಾಗದ ಮೇಲೆ ಹೆಚ್ಚಿನ ಕೇಂದ್ರೀಕೃತ ತೂಕವಿರುವಾಗ ಬಿರುಕು ಉಂಟಾಗಬಹುದು. ನಿಮ್ಮ ಟೈಲ್ ಗಳ ಮೇಲ್ಮೈಯಲ್ಲಿ ಹೆಚ್ಚು ಭಾರದ ವಸ್ತುವನ್ನು ಇರಿಸುವಾಗ ಜಾಗರೂಕರಾಗಿರಿ ಮತ್ತು ಬಿರುಕುಗಳನ್ನು ತಡೆಗಟ್ಟಲು ಸರಿಯಾದ ಸಂರಕ್ಷಕವನ್ನು ಬಳಸಿ.
ಟೈಲ್ ಬಾಳಿಕೆಯಲ್ಲಿ ತಳಪಾಯ ಅಥವಾ ತಳಪದರವು ಅತ್ಯಂತ ಮಹತ್ವದ ಪಾತ್ರವನ್ನು ವಹಿಸುತ್ತದೆ. ತಳಪದರವು ಹಾನಿಗೊಳಗಾದರೆ, ಬಿರುಕು ಬಿಟ್ಟರೆ ಅಥವಾ ಸಮವಾಗಿಲ್ಲದಿದ್ದರೆ ಅದು ಮೇಲಿನ ಟೈಲ್ ಗಳ ಮೇಲೆ ಒತ್ತಡವನ್ನು ಉಂಟುಮಾಡುವುದರಿಂದ ಇದು ಬಿರುಕುಗಳಿಗೆ ಕಾರಣವಾಗುತ್ತದೆ. ಟೈಲ್ ಅಳವಡಿಸುವ ಮೊದಲು ತಳಪದರವು ಉತ್ತಮ ಸ್ಥಿತಿಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಯಾವುದೇ ರಚನಾತ್ಮಕ ಸಮಸ್ಯೆಗಳು ಇದ್ದಲ್ಲಿ ತ್ವರಿತವಾಗಿ ಪರಿಹರಿಸಿ.
ನಿಯಂತ್ರಣ ಜೋಡಣೆಗಳು ಅಥವಾ ವಿಸ್ತರಣಾ ಜೋಡಣೆಗಳನ್ನು ನೈಸರ್ಗಿಕ ಚಲನೆ ಮತ್ತು ಕಟ್ಟಡ ಸಾಮಗ್ರಿಗಳ ವಿಸ್ತರಣೆಯ ಅವಕಾಶಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ನೆಲ ಹಾಸುಗಳನ್ನು ಹಾಕುವಾಗ ಈ ಜೋಡಣೆಗಳನ್ನು ನಿರ್ಲಕ್ಷಿಸುವುದರಿಂದ ನೆಲಹಾಸಿನ ಚಲನೆಯನ್ನು ನಿರ್ಬಂಧಿಸಿ ಟೈಲ್ ಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡಬಹುದು. ಇದರಿಂದಾಗಿ ಬಿರುಕುಗಳು ಮತ್ತು ಟೈಲ್ ಒಡೆಯುವಿಕೆಗೆ ಉಂಟಾಗಬಹುದು. ಹಾಗಾಗಿ ಜೋಡಣೆಗಳನ್ನು ನಿಯಂತ್ರಿಸಲು ಗಮನ ಕೊಡಿ ಮತ್ತು ವಿಸ್ತರಣೆ ಮತ್ತು ಸಂಕೋಚನಕ್ಕೆ ಸರಿಹೊಂದಿಸಲು ಸರಿಯಾದ ನೆಲಹಾಸಿನ ಅಭ್ಯಾಸಗಳನ್ನು ಅನುಸರಿಸಿ.
ಟೈಲ್ ಗಳು ಬಿರುಕು ಬಿಡದಿರಲು ಏನು ಮಾಡಬೇಕು ಅಂದಾಗ ಬಿರುಕು ಬಿಡದಂತೆ ತಡೆಗಟ್ಟುವುದು ಮುಖ್ಯವೆನಿಸುತ್ತದೆ. ಕೆಲವು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ, ನೀವು ಫ್ಲೋರ್ ಟೈಲ್ ಗಳು ಬಿರುಕು ಬಿಡುವ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ಬಿರುಕು ಬಿಟ್ಟ ಟೈಲ್ ಅನ್ನು ಸರಿಪಡಿಸುವ ತೊಂದರೆಯನ್ನು ತಪ್ಪಿಸಬಹುದು. ಟೈಲ್ ಬಿರುಕು ಬಿಡುವುದನ್ನು ತಪ್ಪಿಸಲು ಈ ಕೆಳಗಿನ ಸಲಹೆಗಳನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿ:
ಪಿಂಗಾಣಿ ಟೈಲ್ ಗಳು ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಬಿರುಕು ನಿರೋಧಕವಾಗಿರುತ್ತವೆ. ಈ ರೀತಿಯ ಟೈಲ್ ಗಳನ್ನು ಆರಿಸುವುದರಿಂದ ಟೈಲ್ ಬಿರುಕು ಬಿಡುವ ಸಾಧ್ಯತೆಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಪಿಂಗಾಣಿ ಟೈಲ್ ಗಳು ಅವುಗಳ ಶಕ್ತಿಯುತವಾಗಿದ್ದು ಮತ್ತು ತಾಳಿಕೊಳ್ಳುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದು ಹೆಚ್ಚಿನ ಓಡಾಟವಿರುವ ಸ್ಥಳಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಟೈಲ್ ಬಿರುಕು ಬಿಡುವುದನ್ನು ತಡೆಗಟ್ಟಲು ತಳಪದರವನ್ನು ಸೂಕ್ತವಾಗಿ ನಿರ್ಮಿಸುವುದು ಅತ್ಯಗತ್ಯ. ಟೈಲ್ ಗಳಿಗೆ ಸ್ಥಿರ ಮತ್ತು ಸಮನಾದ ಮೇಲ್ಮೈಯನ್ನು ರಚಿಸಲು ಪ್ಲೈವುಡ್ ಮತ್ತು ಕಾಂಕ್ರೀಟ್ ಬೇಸ್ ಅನ್ನು ಬಳಸಿ. ಇದು ತೂಕವನ್ನು ಸಮವಾಗಿ ವಿತರಿಸಲು ಸಹಾಯ ಮಾಡುತ್ತದೆ ಮತ್ತು ಅಸ್ಥಿರವಾದ ಅಡಿಪಾಯದಿಂದಾಗಿ ಉಂಟಾಗುವ ಬಿರುಕಿನ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಟೈಲ್ ಅಳವಡಿಸುವ ಮೊದಲು, ಯಾವುದೇ ಟೊಳ್ಳಾದ ಅಥವಾ ಅಸಮ ಪ್ರದೇಶಗಳಿಗಾಗಿ ತಳಪದರವನ್ನು ಸಂಪೂರ್ಣವಾಗಿ ಪರೀಕ್ಷಿಸಿ. ಈ "ಟೊಳ್ಳಾದ ಸ್ಥಳಗಳು" ಟೈಲ್ ಗಳನ್ನು ದುರ್ಬಲಗೊಳಿಸಬಹುದು ಮತ್ತು ಅವುಗಳು ಬಿರುಕು ಬಿಡಲು ಕಾರಣವಾಗಬಹುದು. ಟೈಲ್ ಹಾಕುವ ಮೊದಲು ತಳಪದರವನ್ನು ಬಲಪಡಿಸುವ ಅಥವಾ ಸರಿಪಡಿಸುವ ಮೂಲಕ ಯಾವುದೇ ಸಮಸ್ಯೆಗಳನ್ನು ಪರಿಹರಿಸಿ.
ತಾಪಮಾನ ಏರಿಳಿತಗಳಿಗೆ ಒಳಗಾಗುವ ವಿಸ್ತಾರವಾದ ಪ್ರದೇಶಗಳಲ್ಲಿ ಅಥವಾ ಸ್ಥಳಗಳಲ್ಲಿ, ವಿಸ್ತರಣೆ ಜೋಡಣೆಗಳಿಗೆ ಅವಕಾಶ ನೀಡುವುದು ಅವಶ್ಯಕವಾಗಿದೆ. ಈ ಜೋಡಣೆಗಳು ಟೈಲ್ ಗಳ ನೈಸರ್ಗಿಕ ಚಲನೆಯನ್ನು ಸರಿಹೊಂದಿಸುವ ಮೂಲಕ ಒತ್ತಡದಿಂದ ಉಂಟಾಗುವ ಬಿರುಕುಗಳನ್ನು ತಡೆಯುತ್ತವೆ. ವೃತ್ತಿಪರ ಟೈಲ್ ಅಳವಡಿಸುವವರೊಂದಿಗೆ ಸಮಾಲೋಚಿಸಿ ಅಥವಾ ವಿಸ್ತರಣೆ ಜೋಡಣೆಗಳ ಸೂಕ್ತ ಅಂತರ ಮತ್ತು ನಿಯೋಜನೆಯನ್ನು ನಿರ್ಧರಿಸಲು ಉದ್ಯಮದ ಮಾರ್ಗಸೂಚಿಗಳನ್ನು ಅನುಸರಿಸಿ.
ಬಿರುಕು ಬಿಟ್ಟ ಅಥವಾ ತುಂಡಾದ ಟೈಲ್ ಗಳನ್ನು ನಿಭಾಯಿಸಲು ತೊಂದರೆಯಾಗಬಹುದು. ಆದರೆ ಅವುಗಳ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ತಡೆಗಟ್ಟುವ ಕ್ರಮಗಳನ್ನು ಅಳವಡಿಸಿಕೊಳ್ಳುವುದು ನಿಮ್ಮ ಸಮಯ, ಹಣ ಮತ್ತು ಹತಾಶೆಯನ್ನು ಕಡಿಮೆಗೊಳಿಸಬಹುದು. Lಈ ಬ್ಲಾಗ್‌ನಲ್ಲಿ ವಿವರಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಬಿರುಕು-ಮುಕ್ತ ಮತ್ತು ದೀರ್ಘಾವಧಿಯ ಟೈಲ್ ಹಾಸಿದ ಮೇಲ್ಮೈಗಳನ್ನು ಆನಂದಿಸುವ ಸೂಕ್ತ ಹಾದಿಯಲ್ಲಿ ನೀವಿರುತ್ತೀರಿ. ಹೆಚ್ಚು ಸವಿವರವಾದ ಟೈಲ್ ಜೋಡಣಾ ಸಲಹೆಗಳು ಮತ್ತು ತಂತ್ರಗಳಿಗಾಗಿ, ಸರಿಯಾದ ಟೈಲ್ ಜೋಡಣೆಯ ಅಭ್ಯಾಸಗಳ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಒದಗಿಸುವ ಟೈಲ್ ಜೋಡಣೆಯ ಸಲಹೆಗಳ ಕುರಿತು ನಮ್ಮ ವೀಡಿಯೊವನ್ನು ವೀಕ್ಷಿಸಿ.