Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ನಿರ್ಮಾಣ ಮಾಡುವಾಗ, ರಚನೆಗಳ ಒಳಗಿನ ಗ್ಯಾಪ್‌ಗಳು, ಖಾಲಿಜಾಗಗಳು ಅಥವಾ ಟೊಳ್ಳು ಜಾಗಗಳಿಗೆ ದ್ರವರೂಪದ ಪದಾರ್ಥವನ್ನು ತುಂಬುವ ಒಂದು ವಿಶೇಷ ಪ್ರಕ್ರಿಯೆಯನ್ನು ಗ್ರೌಟಿಂಗ್ ಎಂಉ ಕರೆಯುತ್ತಾರೆ. ರಚನೆಯ ದೃಢತೆ ಸುಧಾರಿಸುವುದು, ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುವುದು ಮತ್ತು ನಿರ್ಮಾಣದ ಯೋಜನೆಯ ವಿವಿಧ ಅಂಶಗಳಿಗೆ ಸ್ಥಿರತೆಯನ್ನು ಕೊಡುವುದು ಗ್ರೌಟಿಂಗ್‌ನ ಉದ್ದೇಶವಾಗಿದೆ. ದಿನಕಳೆದಂತೆ ರಚನೆಯನ್ನು ದುರ್ಬಲಗೊಳಿಸುವ ನೀರು, ಗಾಳಿ ಅಥವಾ ಭಗ್ನಾವಶೇಷಗಳ ಮಧ್ಯದ ಗ್ಯಾಪ್ ಅನ್ನು ತುಂಬುವ ಮೂಲಕ ಗ್ರೌಟಿಂಗ್ ಇಡೀ ರಚನೆಯು ಹಾಳಾಗುವುದಂತೆ ನೋಡಿಕೊಳ್ಳುತ್ತದೆ
ನಿರ್ಮಾಣದ ಸಾಮಗ್ರಿಗಳಿಂದ ತುಂಬಲು ಸಾಧ್ಯವಾಗದ ಗ್ಯಾಪ್ ಅನ್ನು ತುಂಬುವುದು ಗ್ರೌಟಿಂಗ್‌ನ ನಿರ್ಣಾಯಕ ಅಂಶವಾಗಿದೆ. ಈ ಪ್ರಕ್ರಿಯೆಯಲ್ಲಿ ಗ್ರೌಟ್ ನಿರ್ಮಾಣದ ಸಾಮಗ್ರಿಯು, ಮೂಲಭೂತವಾಗಿ ಎಲ್ಲವನ್ನೂ ಒಟ್ಟಿಗೆ ಬಂಧಿಸುವ "ಅಂಟು" ನಂತೆ ಕೆಲಸ ಮಾಡುತ್ತದೆ. ಗ್ರೌಟ್ ಅನ್ನು ಬಳಕೆ ಮಾಡುವುದರಿಂದ ಸ್ಥಳಾಂತರ ಆಗದಂತೆ ತಡೆಯುವ ಮೂಲಕ, ದಿನಕಳೆದಂತೆ ನೆಲೆಗೊಳ್ಳುವ, ಸ್ಥಳಾಂತರಗೊಳ್ಳುವ ಅಥವಾ ಕಟ್ಟಡವು ಶಿಥಿಲಗೊಳ್ಳುವ ಅಪಾಯವನ್ನು ಅದು ಕಡಿಮೆ ಮಾಡುತ್ತದೆ. ಇದು ರಚನೆಯ ಬಾಳಿಕೆಯನ್ನು ಹೆಚ್ಚಿಸುವುದರೊಂದಿಗೆ ವಾಸಮಾಡುವವರಿಗೆ ಮತ್ತು ಸುತ್ತಮುತ್ತಲಿನ ಪರಿಸರದ ಸುರಕ್ಷತೆಗೆ ಸಹಾಯ ಮಾಡುತ್ತದೆ. ಜೊತೆಗೆ ಗ್ರೌಟಿಂಗ್ ಮಾಡುವುದರಿಂದ ನಿರ್ಮಾಣದ ಉತ್ತಮ ಗುಣಮಟ್ಟವನ್ನು ಹೊಂದಲು ಸಹಾಯ ಮಾಡುವ ಮೂಲಕ ನಿರ್ಮಾಣದಗಳು ಹೆಚ್ಚು ಬಾಳಿಕೆ ಬರುವಂತೆ ಮಾಡುತ್ತದೆ.
ನಿರ್ಮಾಣದಲ್ಲಿ ಹಲವಾರು ರೀತಿಯ ಗ್ರೌಟಿಂಗ್ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಹೀಗೆ ಬಳಸುವ ವಸ್ತುವಿನ ಆಯ್ಕೆಯು ನಿರ್ದಿಷ್ಟ ನಿರ್ಮಾಣದ ಅಗತ್ಯವನ್ನು ಅವಲಂಬಿಸಿರುತ್ತದೆ. ಇಲ್ಲಿ, ನಾವು ಕೆಲವು ಪ್ರಮುಖ ಪ್ರಕಾರಗಳ ಕುರಿತು ತಿಳಿದುಕೊಳ್ಳುತ್ತೇವೆ.
ಸಿಮೆಂಟ್ ಸಾಮಾನ್ಯವಾಗಿ ಬಳಸುವ ಗ್ರೌಟಿಂಗ್ ವಸ್ತುವಾಗಿದೆ. ಸಾಮಾನ್ಯವಾಗಿ ಮಣ್ಣು ಕದಲದಂತೆ ಮತ್ತು ರಚನೆಯು ಸಮವಾಗಿರುವಂತೆ ಮಾಡಲು ಇದನ್ನು ಬಳಸಲಾಗುತ್ತದೆ. ಇದೊಂದು ಸಾಮಾನ್ಯ ವಿಧದ ಗ್ರೌಟಿಂಗ್ ಆಗಿದ್ದು, ಸಿಮೆಂಟ್, ನೀರು ಮತ್ತು ಕೆಲವೊಮ್ಮೆ ಮರಳಿನ ಮಿಶ್ರಣವನ್ನು ಗ್ಯಾಪ್ಗಳಿಗೆ ತುಂಬಲಾಗುತ್ತದೆ. ದಿನಕಳೆದಂತೆ ಅದು ಗಟ್ಟಿಯಾಗುತ್ತ ಹೋದಾಗ ಬಲವಾದ ಮತ್ತು ದೃಢವಾದ ಬಂಧನವನ್ನು ಕೊಡುತ್ತದೆ. ಹೀಗೆ ಗಟ್ಟಿಯಾದ ನಂತರ ಸಾಮಗ್ರಿಯು ಒತ್ತೊತ್ತಾಗಿ ಗಟ್ಟಿತನವನ್ನು ಒದಗಿಸುತ್ತದೆ. ಇದರಿಂದಾಗಿ ಇಡೀ ನಿರ್ಮಾಣದ ದೃಢತೆ ಮತ್ತು ಶಕ್ತಿಯನ್ನು ಕೊಡುತ್ತದೆ. ಕಾಂಕ್ರೀಟ್ ನಿರ್ಮಾಣಗಳಲ್ಲಿ ಖಾಲಿಜಾಗಗಳನ್ನು ತುಂಬಲು (ಕಾಂಕ್ರೀಟ್ ಗ್ರೌಟಿಂಗ್ ಎಂದೂ ಕರೆಯುತ್ತಾರೆ), ಬಿರುಕುಗಳನ್ನು ಸರಿಪಡಿಸಲು ಮತ್ತು ಅಡಿಪಾಯಗಳ ಭಾರ-ತಡೆದುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ಈ ರೀತಿಯ ಗ್ರೌಟಿಂಗ್ ಸೂಕ್ತವಾಗಿದೆ.
ಈ ಪ್ರಕಾರದ ಗ್ರೌಟಿಂಗ್ನಲ್ಲಿ ಪಾಲಿಯುರೆಥೇನ್ ಅಥವಾ ಅಕ್ರಿಲೇಟ್‌ನಂತಹ ನಿರ್ಧಿಷ್ಟ ಪಡಿಸಿದ ಕೆಮಿಕಲ್ ವಸ್ತುಗಳನ್ನು ಸೇರಿಸಿ ಗ್ಯಾಪ್ಗಳಿಗೆ ಇಂಜೆಕ್ಟ್ ಮಾಡುವ ಮೂಲಕ ತುಂಬಲಾಗುತ್ತದೆ. ಈ ಕೆಮಿಕಲ್ಗಳು ಒಂದಕ್ಕೊಂದು ಸಂಪರ್ಕಕ್ಕೆ ಬಂದ ನಂತರ ವಿಸ್ತರಿಸುತ್ತವೆ, ಅಂದರೆ ಹಿಗ್ಗಿಕೊಳ್ಳುತ್ತವೆ. ಅದರಿಂದಾಗಿ ಗ್ಯಾಪ್ಗಳನ್ನು ತುಂಬುವುದು ಸೇರಿದಂತೆ ನೀರು ಸೋರದಂತೆ ಕ್ರ್ಯಾಕ್ ಅಥವಾ ಇನ್ನಾವುದೇ ಗ್ಯಾಪ್ಗಳನ್ನು ಮುಚ್ಚುತ್ತವೆ. ಈ ರೀತಿಯ ಗ್ರೌಟಿಂಗ್ ಪ್ರಮುಖವಾಗಿ ವಾಟರ್ಪ್ರೂಫ್ ಮಾಡಲು, ಮಣ್ಣನ್ನು ಗಟ್ಟಿಯಾಗಿಸಲು ಹಾಗೂ ಭೂಮಿಯ ಒಳಗಿನ ರಚನೆಗಳನ್ನು ಗಟ್ಟಿಗೊಳಿಸಲು ಉಪಯುಕ್ತವಾಗಿದೆ.
ಈ ಪ್ರಕಾರವು ಕಾಲಮ್‌ಗಳು ಮತ್ತು ಕಿರಣಗಳಂತಹ ರಚನಾತ್ಮಕ ಘಟಕಗಳ ನಡುವೆ ಘನ ಸಂಪರ್ಕವನ್ನು ರಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಎಪಾಕ್ಸಿ ಗ್ರೌಟ್, ಒಂದು ರೀತಿಯ ರಚನಾತ್ಮಕ ಗ್ರೌಟ್, ಅಸಾಧಾರಣ ಶಕ್ತಿ ಮತ್ತು ಬಾಳಿಕೆ ನೀಡುತ್ತದೆ. ಬೋಲ್ಟ್‌ಗಳನ್ನು ಜೋಡಿಸಲು, ಹೆಚ್ಚಿನ ಒತ್ತಡದ ಪ್ರದೇಶಗಳಲ್ಲಿ ಕಾಂಕ್ರೀಟ್ ಅಂಶಗಳನ್ನು ಬಲಪಡಿಸಲು ಮತ್ತು ಅಸ್ತಿತ್ವದಲ್ಲಿರುವ ರಚನೆಗಳಲ್ಲಿ ಬಿರುಕುಗಳು ಅಥವಾ ಅಂತರವನ್ನು ತುಂಬಲು ಇದನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
ಬೆಂಟೋನೈಟ್ ಗ್ರೌಟಿಂಗ್ ಸಾಮಗ್ರಿಯು ಬೆಂಟೋನೈಟ್ ಜೇಡಿಮಣ್ಣು ಮತ್ತು ನೀರಿನ ಮಿಶ್ರಣದಿಂದ ಜೆಲ್ ರೀತಿಯ ವಸ್ತು ತಯಾರಾಗುತ್ತದೆ. ಅದರ ಉಬ್ಬಿಕೊಳ್ಳುವ ಗುಣದಿಂದಾಗಿ ಬಾವಿಗಳು ಮತ್ತು ಬೋರ್‌ಹೋಲ್‌ಗಳನ್ನು ಮುಚ್ಚಲು ಇದು ಮುಖ್ಯವಾದ ಆಯ್ಕೆಯಾಗಿದೆ, ಯಾಕೇಂದರೆ ಇದು ನೀರಿನೊಂದಿಗೆ ಸೇರಿಕೊಂಡಾಗ ವಿಸ್ತರಿಸುತ್ತದೆ. ಅದರಿಂದಾಗಿ ಸಣ್ಣತೂತುಗಳನ್ನು ಪರಿಣಾಮಕಾರಿಯಾಗಿ ಮುಚ್ಚಲು ಸಾಧ್ಯವಾಗುತ್ತದೆ. ಈ ರೀತಿಯ ಗ್ರೌಟ್ ಅನ್ನು ಹೆಚ್ಚಾಗಿ ಮಣ್ಣನ್ನು ಮುಚ್ಚಲು ಮತ್ತು ಗಟ್ಟಿಗೊಳಿಸಲು ಬಳಸಲಾಗುತ್ತದೆ. ಜೊತೆಗೆ ಇದು ನೀರು ಒಳಬರುವುದನ್ನು ಕೂಡ ತಡೆಯುತ್ತದೆ. ಇಷ್ಟೇ ಅಲ್ಲದೇ ಮುಂದೆ ಆಗಬಹುದಾದ ಭೂಮಿ ಕದಲುವುದನ್ನು ಕಡಿಮೆ ಮಾಡುತ್ತದೆ.
ಇದು ಬಿಟುಮಿನಸ್ ಕೆಲಮಿಕಲ್ ಮಿಶ್ರಣದ ಬಳಕೆಯನ್ನು ಒಳಗೊಂಡಿರುತ್ತದೆ, ಇದು ಅತ್ಯುತ್ತಮವಾದ ನೀರಿನ ಪ್ರತಿರೋಧವನ್ನು ಒದಗಿಸುವ ಸೀಲ್ ಮತ್ತು ವಾಟರ್ಪ್ರೂಫ್ ರೂಫ್ಗಳು, ಫೌಂಡೇಶನ್ಗಳು ಮತ್ತು ಬೇಸ್ಮೆಂಟ್ಗಳ ಸ್ಟ್ರಕ್ಚರ್ಗಳಿಗೆ ಸಹಾಯ ಮಾಡುತ್ತದೆ. ಇದು ಯುವಿ ವಿಕಿರಣ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುವ ಮತ್ತು ಅತ್ಯುತ್ತಮ ಬಾಳಿಕೆ ಬರುವಂತೆ ಮಾಡುತ್ತದೆ. ಸುರಂಗಗಳು ಮತ್ತು ಅಂಡರ್ಗ್ರೌಂಡ್ ಸ್ಟ್ರಕ್ಚರ್ಗಳಲ್ಲಿ ನೀರಿನ ಒಳಬರದಂತೆ ತಡೆಯಲು ಈ ರೀತಿಯ ಗ್ರೌಟಿಂಗ್ ಬಳಸಲಾಗುತ್ತದೆ.
ಈ ರೀತಿಯ ಗ್ರೌಟಿಂಗ್ ಸಾಮಗ್ರಿಯು ಎಪಾಕ್ಸಿ, ಪಾಲಿಯುರೆಥೇನ್ ಅಥವಾ ಇತರ ದ್ರವ ರೂಪದ ಅಂಟುಗಳನ್ನು ಬಳಸಿಕೊಂಡು ತಯಾರಿಸಲಾಗುತ್ತದೆ. ಜೊತೆಗೆ ಅದು ಕ್ಯೂರಿಂಗ್ ಆದಾಗ ಬಲವಾದ ಬಂಧನ ಉಂಟಾಗಿ ಗಟ್ಟಿಯಾಗುತ್ತದೆ. ಈ ರೇಸಿನ್ ಹೆಚ್ಚಿನ ಕರ್ಷಕ ಮತ್ತು ಸಂಕುಚಿತ ಶಕ್ತಿಯನ್ನು ಒದಗಿಸುತ್ತವೆ. ಇದು ಹಲವಾರು ಕಡೆಗಳಲ್ಲಿ ಬಳಸಲು ಸೂಕ್ತವಾಗಿದೆ. ಅದರ ಅತ್ಯುತ್ತಮ ಅಂಟಿಕೊಳ್ಳುವ ಗುಣಲಕ್ಷಣಗಳು ಮತ್ತು ಶಕ್ತಿಯಿಂದಾಗಿ ಕಾಂಕ್ರೀಟ್ನಲ್ಲಿ ಉಂಟಾಗುವ ಕ್ರ್ಯಾಕ್ಗಳನ್ನು ಸರಿಪಡಿಸಲು ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ನಿರ್ಮಾಣದಲ್ಲಿ ಗ್ರೌಟಿಂಗ್ ಏನು ಎಂಬುದನ್ನು ಅರ್ಥಮಾಡಿಕೊಳ್ಳುವಾಗ ಅದರ ಹಲವಾರು ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಅದರ ಕೆಲವು ಪ್ರಮುಖ ಅನುಕೂಲಗಳು ಮುಂದಿವೆ:
ಗ್ರೌಟ್ ನಿರ್ಮಾಣ ಸಾಮಗ್ರಿಗಳು ಖಾಲಿ ಅಥವಾ ಟೊಳ್ಳು ಜಾಗಗಳನ್ನು ತುಂಬುವ ಸಾಮರ್ಥ್ಯವನ್ನು ಹೊಂದಿವೆ. ಅದರಿಂದಾಗಿ ಒಟ್ಟಾರೆ ರಚನೆಯ ಸ್ಥಿರತೆಯನ್ನು ಹೆಚ್ಚಿಸುತ್ತದೆ.
ನೀರು ಮತ್ತು ಇತರ ದ್ರವ ಸೋರಿಕೆಯನ್ನು ತಡೆಯುವ ತಡೆಗೋಡೆಯಾಗಿ ಗ್ರೌಟ್ ಕೆಲಸ ಮಾಡುತ್ತದೆ.
ಸಿಮೆಂಟ್ ಗ್ರೌಟಿಂಗ್ ವಸ್ತುಗಳಂತಹ ಗ್ರೌಟ್‌ಗಳು ಹೆಚ್ಚಿನ ಶಕ್ತಿ ಮತ್ತು ಸಪೋರ್ಟ್ ಕೊಡುವ ಮೂಲಕ ಸ್ಟ್ರಕ್ಚರ್ಗಳ ಭಾರ ಹೊರುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ಎಪಾಕ್ಸಿ ಗ್ರೌಟ್ನಂತಹ ಕೆಲವು ವಸ್ತುಗಳು ತುಕ್ಕು ಹಿಡಿಯದಂತೆ ತಡೆಯುತ್ತವೆ, ಕನ್ಸ್ಟ್ರಕ್ಷನ್ನ ಬಾಳಕೆಯನ್ನು ಹೆಚ್ಚು ಮಾಡುತ್ತವೆ.
ಅಡಿಪಾಯ ಅಥವಾ ನೆಲದೊಳಗಿನ ರಚನೆಗಳಲ್ಲಿ ಇಂತಹ ಗ್ರೌಟ್‌ಗಳು ಮಣ್ಣನ್ನು ಗಟ್ಟಿಮಾಡುವಲ್ಲಿ ವಿಶೇಷವಾಗಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಸಣ್ಣ ತೂತುಗಳು ಮತ್ತು ಗ್ಯಾಪ್ಗಳನ್ನು ಪರಿಣಾಮಕಾರಿಯಾಗಿ ಗ್ರೌಟ್ ಮುಚ್ಚುತ್ತದೆ. ಜೊತೆಗೆ ನೀರಿನ ಒಳನುಸುಳುವಿಕೆ ಅಥವಾ ಮಣ್ಣು ಒಳಗೆ ಬರುವುದನ್ನು ತಡೆಯುತ್ತದೆ.
ಕಾಂಕ್ರೀಟ್ನಲ್ಲಿನ ಬಿರುಕುಗಳು ಮತ್ತು ಹಾನಿಗಳನ್ನು ಸರಿಪಡಿಸಲು ರೆಸಿನ್ ಹಾಗೂ ಎಪಾಕ್ಸಿ ಗ್ರೌಟ್ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಕೊನೆಯದಾಗಿ ಎಲ್ಲವನ್ನೂ ಸೇರಿಸಿ ಹೇಳುವುದಾದರೆ, ರಚನೆಯಲ್ಲಿ ಗ್ರೌಟಿಂಗ್ ಎಂದರೆ ಏನು ಎಂಬುದನ್ನು ನಾವು ತಿಳಿದುಕೊಳ್ಳುವುದರೊಂದಿಗೆ, ನಿರ್ಮಿಸಲಾಗುವ ರಚನೆಯಲ್ಲಿ ಸ್ಥಿರತೆ, ಶಕ್ತಿ ಮತ್ತು ಬಾಳಿಕೆಗಳನ್ನು ಹೇಗೆ ಹೆಚ್ಚಿಸಬಹುದು ಎಂಬುದನ್ನು ಅರಿಯುತ್ತೇವೆ. ಹೀಗೆ ಮಾಡುವುದು ಅಗತ್ಯವಾಗಿದೆ ಎಂಬುದನ್ನು ನಾವು ತಿಳಿದುಕೊಳ್ಳುತ್ತೇವೆ. ನಿರ್ಮಾಣ ವೃತ್ತಿಯಲ್ಲಿ ತೊಡಗಿಕೊಂಡಿರುವವರು ನಿರಂತರವಾಗಿ ಕಡಿಮೆ ಖರ್ಚಿನ ಮತ್ತು ಬಾಳಿಕೆ ಬರುವ ನಿರ್ಮಾಣ ಪರಿಹಾರಗಳನ್ನು ಹುಡುಕುತ್ತಿರುತ್ತಾರೆ. ಆದ್ದರಿಂದ ಸೂಕ್ತವಾದ ಗ್ರೌಟಿಂಗ್ ಟೆಕ್ನಿಕ್ ಅನ್ನು ಅರ್ಥಮಾಡಿಕೊಳ್ಳುವುದು ಮತ್ತು ಅಳವಡಿಸಿಕೊಳ್ಳುವುದು ಹೆಚ್ಚು ಯಶಸ್ವಿ ಮತ್ತು ಬಾಳಿಕೆಯ ಯೋಜನೆಗಳಿಗೆ ಅಗತ್ಯವಾಗಿದೆ.
ಹೌದು, ರೀಗ್ರೌಟ್ ಮಾಡುವ ಮೊದಲು ಹಳೆಯ ಗ್ರೌಟಿಂಗ್ ತೆಗೆದುಹಾಕಲು ಶಿಫಾರಸು ಮಾಡಲಾಗಿದೆ. ಸರಿಯಾದ ಬಂಧನವನ್ನು ಹೊಂದಲು, ಮೊದಲು ಮ ಆಡಿದ್ದ ಗ್ರೌಟಿಂಗ್ ತೆಗೆದುಹಾಕುವುದು ಅಗತ್ಯವಾಗಿದೆ. ಯಾಕೇಂದರೆ ಹಳೆಯ ಗ್ರೌಟಿಂಗ್ ಬೂಷ್ಟು ಅಥವಾ ಕೊಳೆಯಿಂದ ಕೂಡಿರುತ್ತದೆ. ಹಳೆಯ ಅಥವಾ ಹಾನಿಗೊಳಗಾದ ಗ್ರೌಟ್ ಅನ್ನು ಹಾಗೆಯೇ ಇಟ್ಟುಕೊಂಡು ಮತ್ತೆ ಗ್ರೌಟಿಂಗ್ ಮಾಡುವುದು ಲೇಯರ್ ಸರಿಯಾಗಿ ಕೂಡದೇ ವೈಫಲ್ಯಕ್ಕೆ ಕಾರಣವಾಗಬಹುದು.
ಶುಚಿಗೊಳಿಸದೆಯೇ ನೀವು ಗ್ರೌಟ್ ಅನ್ನು ಹೆಚ್ಚು ಕಾಲ ಹಾಗೆ ಇರಲು ಬಿಟ್ಟಲ್ಲಿ, ಅದು ಟೈಲ್ಸ್ ಮೇಲ್ಮೈಯಲ್ಲಿ ಗಟ್ಟಿಯಾಗುತ್ತ ಹೋಗುತ್ತದೆ. ಮುಂದೆ ಅನ್ನು ತೆಗೆದುಹಾಕುವುದು ಕಷ್ಟವಾಗುತ್ತದೆ. ಇದು ಅವ್ಯವಸ್ಥೆಯಂತೆ ಕಾಣುತ್ತದೆ ಮತ್ತು ಸ್ವಚ್ಛಗೊಳಿಸಲು ಹೆಚ್ಚು ಕಾರ್ಮಿಕರನ್ನು ತೆಗೆದುಕೊಳ್ಳಬಹುದು.
ಹೆಚ್ಚಿನ ಪ್ರಮಾಣಿತ ಗ್ರೌಟ್‌ಗಳನ್ನು ಕ್ಯೂರಿಂಗ್ ಮಾಡಲಜು ಮತ್ತು ಸಂಪೂರ್ಣವಾಗಿ ಹೊಂದಿಸಲು ಸುಮಾರು 24 ರಿಂದ 48 ಗಂಟೆಗಳ ಅಗತ್ಯವಿದೆ. ಆದರೂ, ಇದು ಗ್ರೌಟ್ ವಿಧ, ತಯಾರಕರ ಮಾರ್ಗಸೂಚಿಗಳು ಮತ್ತು ತೇವಾಂಶದ ಮಟ್ಟಗಳು ಮತ್ತು ತಾಪಮಾನದಂತಹ ಪರಿಸರ ಪರಿಸ್ಥಿತಿಗಳನ್ನು ಅವಲಂಬಿಸಿರುತ್ತದೆ.
ಸಾಮಾನ್ಯ ಪರಿಸ್ಥಿತಿಗಳಲ್ಲಿ ಗ್ರೌಟಿಂಗ್ ಮಾಡುವ ಮೊದಲು ಟೈಲ್ಸ್ಗಳನ್ನು ಒದ್ದೆ ಮಾಡುವ ಅಗತ್ಯವಿರುವುದಿಲ್ಲ. ಆದತರೆ, ವಿಪರೀತ ಬಿಸಿ ಅಥವಾ ಕಡಿಮೆ ತೇವಾಂಶ ಇರುವ ಪರಿಸರಗಳಲ್ಲಿ, ಟೈಲ್ಸ್ ಅನ್ನು ಒದ್ದೆ ಮಾಡುವುದರಿಂದ ಟೈಲ್ಸ್‌ಗೆ ಗ್ರೌಟ್‌ನಿಂದ ತೇವಾಂಶವನ್ನು ತ್ವರಿತವಾಗಿ ಹೊರಹಾಕುವುದನ್ನು ತಡೆಯಬಹುದು.
ವಿಶಿಷ್ಟವಾಗಿ, ಕುಗ್ಗದ ಗ್ರೌಟ್, ಹೆಚ್ಚಿನ ಸಾಮರ್ಥ್ಯದ, ದ್ರವ ಸಿಮೆಂಟ್ ಗ್ರೌಟ್ ಅನ್ನು ಸಾಮಾನ್ಯವಾಗಿ ಗ್ರೌಟಿಂಗ್ ಮಾಡಲು ಬಳಸಲಾಗುತ್ತದೆ, ಅದರ ವಿಶಿಷ್ಟ ಗುಣಲಕ್ಷಣಗಳಲ್ಲಿ ಕುಗ್ಗದೇ ಇರುವಿಕೆ ಮತ್ತು ಹೆಚ್ಚಿನ ಹರಿವು ಕಾರಣವಾಗಿದೆ.