ಕಾಂಕ್ರೀಟ್ ಮಾಡುವ ಸಂದರ್ಭದಲ್ಲಿ, ಫಾರ್ಮ್‌ವರ್ಕ್‌ನ ಅರ್ಧಮರ್ಧ ತುಂಬುವುದು ಅಥವಾ ಕಾಂಕ್ರೀಟ್‌ನ ಅಸಮರ್ಪಕ ಸಂಕೋಚನದಿಂದಾಗಿ ಗಟ್ಟಿಯಾದ ಕಾಂಕ್ರೀಟ್‌ನಲ್ಲಿ ಉಳಿದಿರುವ ಖಾಲಿಜಾಗಗಳು ಅಥವಾ ಕುಳಿಗಳನ್ನು ಹನಿಕೊಂಬಿಂಗ್ ಸೂಚಿಸುತ್ತದೆ. ಕಾಂಕ್ರೀಟ್‌ನಲ್ಲಿ ಹನಿಕೊಂಬಿಂಗ್ ಕಾಂಕ್ರೀಟ್‌ನ ಸ್ಟ್ರಕ್ಚರಲ್ ಸಮಗ್ರತೆಯನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ಹೆಚ್ಚು ನೀರು ಒಳಗೆ ಹೋಗುವಂತೆ ಮಾಡುತ್ತದೆ, ಇದು ಹೆಚ್ಚಾಗಿ ತುಕ್ಕು ಹಿಡಿಯುವು ಮತ್ತು ಇತರ ಬಾಳಿಕೆ ಸಮಸ್ಯೆಗಳಿಗೆ ಕಾರಣವಾಗಬಹುದು.
ಆದರೂ ಕೂಡ, ಹನಿಕೊಂಬಿಂಗ್ ಉಂಟಾಗದಂತೆ ಮಾಡಲು ಹಲವು ಕೆಲಸಗಳಿವೆ. ಈ ಬ್ಲಾಗ್‌ನಲ್ಲಿ, ಹನಿಕೊಂಬಿಂಗ್ಗಳಿಗೆ ಸಂಬಂಧಿಸಿದ ಎಲ್ಲವನ್ನೂ, ಅಂದರೆ ಅದಕ್ಕೆ ಕಾರಣಗಳಿಂದ ಶುರುಮಾಡಿ ಅದರ ದುರಸ್ತಿಗೆ ಮತ್ತು ಅದನ್ನು ಸರಿಪಡಿಸುವ ಮಾರ್ಗಗಳನ್ನು ನಾವು ತೋರಿಸುತ್ತೇವೆ. ನಾವೀಗ ಕಾರಣಗಳನ್ನು
ಕಾಂಕ್ರೀಟ್ ಮಾಡುವಾಗ ಹನಿಕೊಂಬಿಂಗ್ ಉಂಟಾಗುವುದಕ್ಕೆ ಕಾರಣಗಳು:
ಸಾಮಾನ್ಯವಾಗಿ ಕಾಂಕ್ರೀಟ್‌ನಲ್ಲಿ ಹನಿಕೊಂಬಿಂಗ್ ಕೆಳಗಿನ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಅಂಶಗಳಿಂದ ಉಂಟಾಗುತ್ತದೆ: ಕಳಪೆ ಸಂಕೋಚನ:
1. ಅಸಮರ್ಪಕ ಸಂಕೋಚನ
ಇದು ನಿರ್ಮಾಣದಲ್ಲಿ ಗಾಳಿ ತುಂಬಿಕೊಂಡು ಖಾಲಿ ಜಾಗೆ ಉಳಿಯುವುದರಿಂದ, ಹನಿಕೊಂಬಿಂಗ್ಗೆ ಕಾರಣವಾಗಬಹುದು. ಇದು ಸಾಮಾನ್ಯವಾಗಿ ಕಾಂಕ್ರೀಟ್ ಹಾಕುವಾಗ ಮತ್ತು ನಂತರ ಸಂಕೋಚನ ಮಾಡುವ ಸಮಯದಲ್ಲಿ ಸಾಕಷ್ಟು ಅದರುವ ಕಾರಣದಿಂದ ಉಂಟಾಗುತ್ತದೆ.
2. ಅಸಮರ್ಪಕ ಮಿಶ್ರಣದ ಅನುಪಾತ
ಮಿಶ್ರಣದ ಅಸಮರ್ಪಕ ಅನುಪಾತಗಳನ್ನು ಬಳಸುವುದು ಕಾಂಕ್ರೀಟ್‌ನಲ್ಲಿ ಹನಿಕೊಂಬಿಂಗ್ಗೆ ಕಾರಣವಾಗಬಹುದು. ಉದಾಹರಣೆಗೆ, ಮಿಶ್ರಣ ಮಾಡುವಾಗ ಹೆಚ್ಚು ನೀರು ಹಾಕುವುದರಿಂದ ಕಾಂಕ್ರೀಟ್ ಹೆಚ್ಚು ತೆಳ್ಳಗಾಗಬಹುದು. ಅದರಿಂದ ನಯವಿಲ್ಲದ ಸಮುಚ್ಚಯಗಳ ಪ್ರತ್ಯೇಕತೆ ಮತ್ತು ನೆಲೆಗೊಳ್ಳುವಿಕೆಗೆ ಕಾರಣವಾಗಬಹುದು.
3. ಫಾರ್ಮ್‌ವರ್ಕ್ ಸಮಸ್ಯೆಗಳು
ಕಳಪೆ ಗುಣಮಟ್ಟದ ಫಾರ್ಮ್‌ವರ್ಕ್ ಹಾಕುವುದು ಕೂಡ ಹನಿಕೊಂಬಿಂಗ್ಗೆ ಕಾರಣವಾಗಬಹುದು. ಫಾರ್ಮ್‌ವರ್ಕ್ ಅನ್ನು ಸರಿಯಾಗಿ ಸಿದ್ಧತೆ ಮಾಡಿಕೊಳ್ಳದಿದ್ದರೆ ಅಥವಾ ಅದು ಬಿಗಿಯಾಗಿ ಹಿಡಿದುಕೊಳ್ಳದಿದ್ದಲ್ಲಿ ಕಾಂಕ್ರೀಟ್ ಸೋರಿಕೆಯಾಗಬಹುದು. ಅದರ ಪರಿಣಾಮವಾಗಿ ಪೂರ್ಣಗೊಳಿಸಿದ ನಿರ್ಮಾಣದಲ್ಲಿ ಪೊಳ್ಳುಗಳು ಮತ್ತು ಖಾಲಿ ಜಾಗೆಗಳು ಉಂಟಾಗುತ್ತವೆ. ಇದಾಗದಂತೆ ನೋಡಿಕೊಳ್ಳಲು, ಶಟರ್ ಮಾಡುವುದು ಸಾಮಾನ್ಯವಾಗಿದೆ. ನಿರ್ಮಾಣದಲ್ಲಿ ಶಟರ್ ಎನ್ನುವುದು ಕಾಂಕ್ರೀಟ್ ಅನ್ನು ಗಟ್ಟಿಗೊಳಿಸುವವರೆಗೆ ಅದನ್ನು ಹಿಡಿದಿಟ್ಟುಕೊಳ್ಳಲು ನಿರ್ಮಾಣದಲ್ಲಿ ಬಳಸಲಾಗುವ ತಾತ್ಕಾಲಿಕ ಸ್ಟ್ರಕ್ಚರ್ ಆಗಿದೆ.
4. ಅಸಮರ್ಪಕ ಕ್ಯೂರಿಂಗ್
ಕಾಂಕ್ರೀಟ್ ಅನ್ನು ಸರಿಯಾಗಿ ಸಂಸ್ಕರಿಸದಿದ್ದರೆ, ಇದು ಹನಿಕೊಂಬಿಂಗ್ ಸೇರಿದಂತೆ ಬಿರುಕುಗಳು ಮತ್ತು ಪೊಳ್ಳುಗಳು ಉಂಟಾಗಲು ಕಾರಣವಾಗಬಹುದು. ಕಾಂಕ್ರೀಟ್ ಶಕ್ತಿ ಮತ್ತು ಬಾಳಿಕೆ ಬರುವಂತೆ ಆಗುವುದನ್ನು ಖಚಿತಪಡಿಸಿಕೊಳ್ಳಲು ಸರಿಯಾಗಿ ಕ್ಯೂರಿಂಗ್ ಮಾಡುವುದು ಅತ್ಯಗತ್ಯ.
5. ಹಾಂಕ್ರೀಟ್ ಹಾಕುವುದರ ಸಮಸ್ಯೆಗಳು
ಅತ್ಯಂತ ದೂರದಿಂದ ಕಾಂಕ್ರೀಟ್ ಅನ್ನು ಸುರಿಯುವುದು ಅಥವಾ ಅಸಮರ್ಪಕ ಸಾಧನಗಳನ್ನು ಬಳಸಿ ಕಾಂಕ್ರೀಟ್ ಹಾಕುವಂತಗ ಅಸಮರ್ಪಕ ತಂತ್ರಗಳು ಕೂಡ ಹನಿಕೊಂಬಿಂಗ್ಗೆ ಕಾರಣವಾಗಬಹುದು. ಹಾಕಲು ಸಿದ್ಧಪಡಿಸಿಕೊಂಡಿರುವ ವಸ್ತುವು ರಚನಾತ್ಮಕವಾಗಿ ಉತ್ತಮ ಮತ್ತು ಬಾಳಿಕೆ ಬರುವಂತೆ ಮಾಡಲು ಕಾಂಕ್ರೀಟ್‌ನಲ್ಲಿ ಹನಿಕೊಂಬಿಂಗ್ಗಳ ಮೂಲ ಕಾರಣಗಳನ್ನು ಗುರುತಿಸುವುದು ಮತ್ತು ಪರಿಹರಿಸುವುದು ಮುಖ್ಯವಾಗಿದೆ.