Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
• ಜಾಗೆಯನ್ನು ಸುಂದರಗೊಳಿಸಲು, ನಿಮ್ಮ ಲಿವಿಂಗ್ ರೂಮ್ನ ಅಳತೆಗೆ ತಕ್ಕಂತೆ ಟೈಲ್ಸ್ಗಳ ಸೈಜ್ ಅನ್ನು ಆಯ್ಕೆಮಾಡಿ.
• ಇಕ್ಕಟ್ಟಾದ ವಾತಾವರಣ ಆಗದಂತೆ ನೋಡಿಕೊಳ್ಳಲು ಕಡಿಮೆ ಸೂರ್ಯನ ಬೆಳಕು ಬೀಳುವ ಪ್ರದೇಶಗಳಲ್ಲಿ ಹಾಕಲು ಹಗುರವಾದ ಟೈಲ್ಸ್‌ಗಳನ್ನು ಆಯ್ಕೆಮಾಡಿ.
• ಗುಣಮಟ್ಟದ ಭರವಸೆ ಮತ್ತು ಟ್ರೆಂಡಿ ವಿನ್ಯಾಸಗಳಿಗಾಗಿ ಪ್ರತಿಷ್ಠಿತ ಟೈಲ್ಸ್ ಬ್ರ್ಯಾಂಡ್‌ಗಳಿಗೆ ಆದ್ಯತೆ ಕೊಡಿ.
• ವಿಟ್ರಿಫೈಡ್ ಅಥವಾ ಸೆರಾಮಿಕ್ ಮಟೆರಿಯಲ್ಗಳನ್ನು ಆಯ್ಕೆಮಾಡಿ, ಹೆಚ್ಚಿನ ಜನದಟ್ಟಣೆಯ ಲಿವಿಂಗ್ ರೂಮ್‌ಗಳಿಗಾಗಿ ಹೆವಿ-ಡ್ಯೂಟಿ, ಆಂಟಿ-ಸ್ಕ್ರಾಚ್ ಟೈಲ್ಸ್‌ಗಳನ್ನು ಆಯ್ಕೆಮಾಡಿ.
• ಆಧುನಿಕ ಸೌಂದರ್ಯವನ್ನು ಹೆಚ್ಚಿಸಲು ಆಹ್ಲಾದಕರ ಬಣ್ಣಗಳು ಮತ್ತು ಈಗಿನ ಕಾಲದ ಮಾದರಿಗಳ ಮೇಲೆ ಕೇಂದ್ರೀಕರಿಸಿ.
ಜಾಗದ ವಿಶೇಷತೆಗಳನ್ನು ಅರ್ಥಮಾಡಿಕೊಳ್ಳದೆಯೇ ಹಲವು ಸಲ ನಾವು ಟೈಲ್ಸ್‌ಗಳನ್ನು ಆಯ್ಕೆಮಾಡಿಕೊಳ್ಳುತ್ತೇವೆ. ಲಿವಿಂಗ್ ರೂಮ್‌ಗೆ ಟೈಲ್ಸ್‌ಗಳನ್ನು ನಾವು ಹೇಗೆ ಆಯ್ಕೆ ಮಾಡಬೇಕೆಂದು ಲೆಕ್ಕಾಚಾರ ಹಾಕಿಕೊಳ್ಳಲು, ಮೊದಲು ಕೋಣೆಯ ಸೈಜ್ ಅನ್ನು ಕಂಡುಕೊಳ್ಳಬೇಕು. ನಿಮ್ಮ ರೂಮ್ನ ಜಾಗೆ ಚಿಕ್ಕದಾಗಿದ್ದರೆ, ದೊಡ್ಡ ಸೈಜ್ನ ಟೈಲ್ಸ್‌ಗಳನ್ನು ಆಯ್ಕೆ ಮಾಡುವುದು ಒಳ್ಳೆಯದು. ಹೀಗೆ ಮಾಡಿದಲ್ಲಿ ಇದು ಯಾವಾಗಲೂ ನಿಮ್ಮ ಸಣ್ಣ ಜಾಗೆ ದೊಡ್ಡದಾಗಿ ಕಾಣುವಂತೆ ಮಾಡುತ್ತದೆ. ಅಲ್ಲದೆ, ನಿಮ್ಮ ಲಿವಿಂಗ್ ರೂಮ್ ದೊಡ್ಡದಾಗಿದ್ದರೆ, ನೀವು ಸಣ್ಣ ಸೈಜ್ನ ಟೈಲ್ಸ್‌ಗಳನ್ನು ಆಯ್ಕೆ ಮಾಡಬಹುದು.
ಲಿವಿಂಗ್ ರೂಮ್ ಯಾವಾಗಲೂ ಚೆನ್ನಾಗಿ ಬೆಳಕು ಬೀಳುವಂತೆ ಇರುಬೇಕು, ಆದರೂ ಕೆಲವು ಕಡೆಗಳಲ್ಲಿ ಸ್ಥಳಗಳಲ್ಲಿ ಬೆಳಕು ಬೀಳದಿರಬಹುದು. ಅಂತಹ ಸಂದರ್ಭದಲ್ಲಿ, ತಿಳಿ ಬಣ್ಣದ ಶೇಡ್ನ ಟೈಲ್ಸ್‌ಗಳನ್ನು ಬಳಸುವುದು ಒಳ್ಳೆಯದು. ಸೂರ್ಯನ ಕಡಿಮೆ ಬೆಳಕು ಬೀಳುವ ಲಿವಿಂಗ್ ರೂಮ್‌ಗಳಲ್ಲಿ ಗಾಢ ಬಣ್ಣದ ಟೈಲ್ಸ್ ಹಾಕುವುದರಿಂದ ಇಡೀ ರೂಮ್ ಮಾಸಿದಂತೆ ಕಾಣುತ್ತದೆ.
ಸರಿಯಾದ ಲಿವಿಂಗ್ ರೂಮ್ ಟೈಲ್ಸ್ ಡಿಸೈನ್ ಅನ್ನು ಆಯ್ಕೆಮಾಡುವುದು ಸ್ವಯಂ ನಿರ್ಧಾರ ಆಗಿರಬಾರದು. ಹೆಸರುವಾಸಿಯಾದ ಮತ್ತು ಗುಣಮಟ್ಟದ ಉತ್ಪನ್ನಗಳಿಗೆ ಹೆಸರುವಾಸಿಯಾದ ಟೈಲ್ ಬ್ರ್ಯಾಂಡ್‌ಗಳು ತಯಾರಿಸುವ ಟೈಲ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಿ. ಹಲವು ವರ್ಷಗಳಿಂದ ಉದ್ಯಮದಲ್ಲಿರುವ ಟೈಲ್ಸ್ ಬ್ರ್ಯಾಂಡ್‌ಗಳಿಗೆ ಈಗಿನ ಟ್ರೆಂಡ್ ತಿಳಿದಿರುತ್ತದೆ. ಹೀಗಾಗಿ ಅಂತಹ ಬ್ರ್ಯಾಂಡ್‌ಗಳು ನಿಮ್ಮ ಲಿವಿಂಗ್ ರೂಮ್‌ಗೆ ಸರಿಯಾಗುವಂತಹ ಟೈಲ್ಸ್‌ಗಳನ್ನು ಒದಗಿಸುತ್ತವೆ.
ಲಿವಿಂಗ್ ರೂಮ್ ಮನೆಯಲ್ಲಿ ಒಂದು ಸ್ಥಳವಾಗಿದ್ದು ಅದರ ಮೇಲೆ ಹೆಚ್ಚಾಗಿ ನಡೆದಾಡಲಾಗುತ್ತದೆ. ಹೀಗಾಗಿ ಮನೆಯ ಉಳಿದ ಭಾಗಗಳಿಗಿಂತ ಸ್ವಲ್ಪ ಹೆಚ್ಚು ಹೆವಿ ಡ್ಯೂಟಿ ಇರುವ ಟೈಲ್ಸ್‌ಗಳನ್ನು ನೀವು ಆಯ್ಕೆಮಾಡಿಕೊಳ್ಳಬೇಕು. ಜೊತೆಗೆ, ಸ್ಕ್ರಾಚ್-ಪ್ರೂಫ್ ಹಾಗೂ ಸ್ಟೇನ್-ಪ್ರೂಫ್ ಟೈಲ್ಸ್‌ಗಳನ್ನು ಆಯ್ಕೆಮಾಡಿ. ಯಾಕೇಂದರೆ ನಿಮ್ಮ ಕುಟುಂಬದ ಹೆಚ್ಚಿನ ಸದಸ್ಯರು ಈ ಜಾಗದಲ್ಲಿಯೇ ಸುತ್ತಾಡುತ್ತಾರೆ. ಅದರೊಂದಿಗೆ, ವಿಟ್ರಿಫೈಡ್ ಟೈಲ್ಸ್‌ನಿಂದ ಸೆರಾಮಿಕ್ ಟೈಲ್ಸ್‌ಗಳವರೆಗೆ ವಿವಿಧ ರೀತಿಯ ಟೈಲ್ಸ್ಗಳಿವೆ; ನಿಮ್ಮ ಜೀವನಶೈಲಿಯನ್ನು ಅವಲಂಬಿಸಿ ನಿಮ್ಮ ಲಿವಿಂಗ್ ರೂಮ್‌ಗೆ ಟೈಲ್ಸ್ ಡಿಸೈನ್ ಅನ್ನು ಆಯ್ಕೆಮಾಡಿ.
ಲಿವಿಂಗ್ ರೂಮ್ ಎಂದರೆ ಮನೆಯಲ್ಲಿದ್ದಾಗ ನಿಮ್ಮ ಹೆಚ್ಚಿನ ಸಮಯವನ್ನು ಕಳೆಯುವ ಸ್ಥಳವಾಗಿರುತ್ತದೆ. ಇಲ್ಲಿ ನೀವು ಸಿನಿಮಾ ನೋಡುತ್ತೀರಿ, ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯುತ್ತೀರಿ ಮತ್ತು ಅತಿಥಿಗಳನ್ನು ಉಪಚರಿಸುತ್ತೀರಿ. ಹೀಗಾಗಿ ನೀವು ಆಹ್ಲಾದಕರವಾದ ಬಣ್ಣಗಳು ಮತ್ತು ಪ್ಯಾಟರ್ನ್ಗಳನ್ನು ಆಯ್ಕೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಲಿವಿಂಗ್ ರೂಮ್‌ಗಾಗಿ ಆಧುನಿಕ ಟೈಲ್ಸ್‌ಗಳನ್ನು ಪರಿಗಣಿಸಿ, ಜೊತೆಗೆ ನಿಮ್ಮ ಪೀಠೋಪಕರಣಗಳಿಗೆ ಪೂರಕವಾಗಿರುವ ನ್ಯೂಟ್ರಲ್ ಕಲರ್ ಮತ್ತು ಈಗಿನ ಸಮಕಾಲೀನ ಪ್ಯಾಟರ್ನ್ ಆಯ್ಕೆ ಮಾಡಿದರೆ ರೂಮ್ನ ಅಂದ ಹೆಚ್ಚುತ್ತದೆ.
ಲಿವಿಂಗ್ ರೂಮ್‌ಗಾಗಿ ನೆಲದ ಟೈಲ್ಸ್ಗಳಿಗೆ ಹೆಚ್ಚಿನ ಗಮನ ಕೊಡುವುದು ಮತ್ತು ನಿರ್ವಹಣೆಯ ಅಗತ್ಯವಿರುತ್ತದೆ. ವಿಶೇಷವಾಗಿ ಲಿವಿಂಗ್ ರೂಮ್ ಟೈಲ್ಸ್ ವಿನ್ಯಾಸವನ್ನು ಹುಡುಕುತ್ತಿರುವಾಗ ಬಾಳಿಕೆ ಬರುವ ಮತ್ತು ನಿರ್ವಹಿಸಲು ಸುಲಭವಾದ ಟೈಲ್ಸ್ಗಳನನ್ನು ಆಯ್ಕೆಮಾಡಿಕೊಳ್ಳುವುದಕ್ಕೆ ಆದ್ಯತೆ ಕೊಡಿ. ನಿಮ್ಮ ನೆಲದ ಟೈಲ್ಸ್ಗಳಲ್ಲಿ ಕ್ರ್ಯಾಕ್ ಆಗುವುದನ್ನು ನೋಡಲು ನೀವು ಯಾವುದೇ ಸಮಯದಲ್ಲಿಯೂ ಬಯಸುವುದಿಲ್ಲ, ಆದ್ದರಿಂದ ಹೆಚ್ಚು ಸುದೀರ್ಘ ಬಾಳಿಕೆ ಬರುವ ಹಾಗೂ ಸ್ವಚ್ಛಗೊಳಿಸಲು ಸುಲಭವಾದ ಟೈಲ್ಸ್ಳನ್ನು ಆಯ್ಕೆಮಾಡಿಕೊಳ್ಳುವುದು ಮುಖ್ಯವಾಗಿದೆ.
ಲಿವಿಂಗ್ ರೂಮ್‌ಗಳಿಗೆ ಟೈಲ್ಸ್‌ಗಳನ್ನು ಹೇಗೆ ಆಯ್ಕೆ ಮಾಡುವುದು ಎಂಬುದರ ಕುರಿತು ಇವು ಕೆಲವು ಸಲಹೆಗಳು. ನೀವು ಹೊಸ ಸ್ಥಳಕ್ಕೆ ಹೋಗುತ್ತಿರಲಿ ಅಥವಾ ನಿಮ್ಮ ಮನೆಯನ್ನು ನಿರ್ಮಿಸುತ್ತಿರಲಿ, ಈ ಸಲಹೆಗಳು ನಿಮ್ಮ ಲಿವಿಂಗ್ ರೂಮ್ ಸಜೀವವಾಗಿರಲು ಸಹಾಯ ಮಾಡುತ್ತದೆ. ಅದನ್ನು ಸುಲಭಗೊಳಿಸಲು, ಪರಿಪೂರ್ಣವಾದ ಲಿವಿಂಗ್ ರೂಮ್ ಟೈಲ್ಸ್ ವಿನ್ಯಾಸವನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನೀವು ಯಾವುದೇ ಪ್ರಮುಖ ಹಂತಗಳನ್ನು ಬಿಡಬಾರದು. ಅದನನ್ನು ಹೇಗೆ ಖಚಿತಪಡಿಸಿಕೊಳ್ಳುವುದು ಎಂಬುದರ ಕುರಿತು ನಾವು ಈ ಸಣ್ಣ ವೀಡಿಯೊವನ್ನು ತೋರಿಸುತ್ತಿದ್ದೇವೆ: https://youtu.be/xNzPO4FpehU