ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಇಟ್ಟಿಗೆ ಗಾರೆ ಕೆಲಸದ ವಿಧಗಳು ಮತ್ತು ನಿರ್ಮಾಣದಲ್ಲಿ ಬಳಸುವ ಪರಿಕರಗಳ ಕುರಿತು ತಿಳಿದುಕೊಳ್ಳುವುದು.

ಇಟ್ಟಿಗೆ ಗಾರೆ ಕೆಲಸವು ವಿವಿಧ ರೀತಿಯ ಇಟ್ಟಿಗೆಗಳಲ್ಲಿನ ಖಾಲಿ ಜಾಗೆಯನ್ನು ತುಂಬಲು ನಿರ್ಮಾಣಕ್ಕೆ ಬಳಸುವ ಒಂದು ವಿಧಾನವಾಗಿದೆ. ಮನೆ ನಿರ್ಮಾಣದ ಬಗ್ಗೆ ನಿಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ವಿವಿಧ ರೀತಿಯ ಇಟ್ಟಿಗೆ ಗಾರೆ ಕೆಲಸದ ನಿಮ್ಮ ಮಾರ್ಗದರ್ಶಿ ಇಲ್ಲಿದೆ.

Share:


ಇಟ್ಟಿಗೆ ಗಾರೆ ಕೆಲಸ ಅದರ ಶಕ್ತಿ, ಬಾಳಿಕೆ ಮತ್ತು ಸೌಂದರ್ಯಕ್ಕೆ ಹೆಸರುವಾಸಿಯಾದ ಪ್ರಾಚೀನ ನಿರ್ಮಾಣದ ಒಂದು ವಿಧಾನವಾಗಿದೆ. ಇದು ಇಟ್ಟಿಗೆಗಳನ್ನು ಜಾಗರೂಕತೆಯಿಂದ ಇಡುವುದನ್ನು ಮತ್ತು ಅವುಗಳನ್ನು ಗಾರೆಯೊಂದಿಗೆ ಒಟ್ಟಿಗೆ ಜೋಡಿಸುವುದನ್ನು ಒಳಗೊಂಡಿದೆ. ಕಾಲಾನಂತರದಲ್ಲಿ, ಇಟ್ಟಿಗೆ ಜೋಡಿಸುವ ಬೇರೆ ಬೇರೆ ತಂತ್ರಗಳು ಬಂದಿವೆ, ಪ್ರತಿಯೊಂದೂ ತಂತ್ರವೂ ತನ್ನದೇ ಆದಂತಹ ಗುಣಲಕ್ಷಣಗಳನ್ನು ಹೊಂದಿದೆ. ಈ ಬ್ಲಾಗ್‌ನಲ್ಲಿ, ಈ ಸಾಂಪ್ರದಾಯಿಕ ಕಟ್ಟಡ ವಿಧಾನವನ್ನು ಉತ್ತಮವಾಗಿ ತಿಳಿಯಲು ನಿಮಗೆ ಸಹಾಯ ಮಾಡಲು ನಾವು ಈ ಇಟ್ಟಿಗೆ ಕಲ್ಲಿನ ಗಾರೆ ಕೆಲಸದ ವಿಧಾನಗಳನ್ನು ಅನ್ವೇಷಿಸುತ್ತೇವೆ.

 

 


ಇಟ್ಟಿಗೆ ಗಾರೆ ಕೆಲಸ ಎಂದರೇನು?



ಇಟ್ಟಿಗೆ ಗಾರೆ ಕೆಲಸ ಎಂಬುದು ಒಂದು ನಿರ್ಮಾಣ ತಂತ್ರವಾಗಿದ್ದು, ಸ್ಟ್ರಕ್ಚರ್‌ಗಳನ್ನು ಕಟ್ಟಲು ವಿವಿಧ ರೀತಿಯ ಇಟ್ಟಿಗೆಗಳು ಮತ್ತು ಗಾರೆಗಳ ಬಳಕೆಯನ್ನು ಒಳಗೊಂಡಿರುತ್ತದೆ. ಇದು ಅತ್ಯಂತ ಹಳೆಯ ಮತ್ತು ಅತ್ಯಂತ ಜನಪ್ರಿಯ ಕಟ್ಟಡ ನಿರ್ಮಾಣ ವಿಧಾನಗಳಲ್ಲಿ ಒಂದಾಗಿದೆ. ಶಕ್ತಿ, ಬಾಳಿಕೆ ಮತ್ತು ಸೌಂದರ್ಯದ ಆಕರ್ಷಣೆಯಿಂದಾಗಿ ಈ ವಿಧಾನವು ಹೆಸರುವಾಸಿಯಾಗಿದೆ. ಇಟ್ಟಿಗೆ ಗಾರೆ ಕೆಲಸದಲ್ಲಿ, ಇಟ್ಟಿಗೆಗಳನ್ನು ನಿರ್ದಿಷ್ಟ ಮಾದರಿಯಲ್ಲಿ ಎಚ್ಚರಿಕೆಯಿಂದ ಹಾಕಲಾಗುತ್ತದೆ ಮತ್ತು ಗಾರೆಯೊಂದಿಗೆ ಒಟ್ಟಿಗೆ ಜೋಡಿಸಲಾಗುತ್ತದೆ, ಬಲವಾದ ಮತ್ತು ಸ್ಥಿರವಾದ ಸ್ಟ್ರಕ್ಚರ್ ಅನ್ನು ಒದಗಿಸುತ್ತದೆ. 

 

ಜೇಡಿಮಣ್ಣು ಮತ್ತು ಇತರ ವಸ್ತುಗಳಿಂದ ಮಾಡಿದ ಇಟ್ಟಿಗೆಗಳು ಆಯತಾಕಾರದ ಆಕಾರದಲ್ಲಿರುತ್ತವೆ ಮತ್ತು ವಿವಿಧ ಗಾತ್ರಗಳು, ಬಣ್ಣಗಳು ಮತ್ತು ವಿನ್ಯಾಸಗಳಲ್ಲಿ ಅವು ಲಭ್ಯವಿವೆ. ಸ್ಟಕ್ಚರ್‌ನ ಶಕ್ತಿ ಮತ್ತು ಸ್ಥಿರತೆಯನ್ನು ನಿರ್ಧರಿಸುವ ಬಾಂಡ್ ಪ್ಯಾಟರ್ನ್ ಎಂದು ಕರೆಯಲ್ಪಡುವ ವಿವಿಧ ಮಾದರಿಗಳಲ್ಲಿ ಅವುಗಳನ್ನು ಜೋಡಿಸಲಾಗುತ್ತದೆ. ಈ ಮಾದರಿಗಳಲ್ಲಿ ಸ್ಟ್ರೆಚರ್ ಬಾಂಡ್, ಹೆಡರ್ ಬಾಂಡ್, ಫ್ಲೆಮಿಶ್ ಬಾಂಡ್, ಇಂಗ್ಲಿಷ್ ಬಾಂಡ್ ಸೇರಿದಂತೆ ಇನ್ನೂ ಹೆಚ್ಚಿನವು ಇವೆ. ಪ್ರತಿಯೊಂದು ಬಾಂಡ್ ಮಾದರಿಯೂ ತನ್ನದೇ ಆದ ವಿಶಿಷ್ಟವಾದ ಇಟ್ಟಿಗೆಗಳನ್ನು ಹೊಂದಿದೆ ಮತ್ತು ವಿಭಿನ್ನ ಸೌಂದರ್ಯದ ಮಾದರಿಯನ್ನು ನೀಡುತ್ತದೆ. 

 

ಇಟ್ಟಿಗೆ ಗಾರೆ ಕೆಲಸದಲ್ಲಿ ಶಕ್ತಿ ಮತ್ತು ಬಾಳಿಕೆ ಬರುವುದನ್ನು ಹೆಚ್ಚಿಸಲು, ಗಾರೆಯನ್ನು ಬೈಂಡಿಂಗ್ ಏಜೆಂಟ್ ಆಗಿ ಬಳಸಲಾಗುತ್ತದೆ. ಸಿಮೆಂಟ್, ಮರಳು ಮತ್ತು ನೀರಿನ ಮಿಶ್ರಣದಿಂದ ಗಾರೆಯನ್ನು ತಯಾರಿಸಲಾಗುತ್ತದೆ. ಜೊತೆಗೆ ಪ್ರಾಜೆಕ್ಟ್ನ ಅವಶ್ಯಕತೆಗಳನ್ನು ಅವಲಂಬಿಸಿ ಅದರ ಸಂಯೋಜನೆಯು ಬದಲಾಗುತ್ತದೆ. ಇದು ಇಟ್ಟಿಗೆಗಳ ನಡುವಿನ ಖಾಲಿ ಜಾಗೆಯನ್ನು ತುಂಬುವ ಮೂಲಕ, ಸ್ಥಿರತೆಯನ್ನು ಒದಗಿಸುತ್ತದೆ ಮತ್ತು ಯಾವುದೇ ತೇವಾಂಶವು ಗೋಡೆಯ ಒಳಗೆ ಬರುವುದನ್ನು ತಡೆಯುತ್ತದೆ. ನಾವೀಗ ಇಟ್ಟಿಗೆ ಗಾರೆ ಕೆಲಸದ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಂಡಿದ್ದೇವೆ. ಮುಂದಿನ ಭಾಗದಲ್ಲಿ ವಿವಿಧ ರೀತಿಯ ಇಟ್ಟಿಗೆ ಗಾರೆ ಕೆಲಸದ ತಂತ್ರಗಳನ್ನು ಅನ್ವೇಷಿಸಿ.

 

 

ಇಟ್ಟಿಗೆ ಗಾರೆ ವಿಧಗಳು

ಬಳಸಿದ ಗಾರೆ ಪ್ರಕಾರ, ಇಟ್ಟಿಗೆಗಳ ನಿಯೋಜನೆ ಮಾದರಿ ಮತ್ತು ಇಟ್ಟಿಗೆಗಳ ಮಧ್ಯೆ ಹಾಕಲಾದ ಬಂಧಗಳ ಪ್ರಕಾರವನ್ನು ಆಧರಿಸಿ ಇಟ್ಟಿಗೆ ಗಾರೆಯ ತಂತ್ರಗಳನ್ನು ವಿವಿಧ ಪ್ರಕಾರಗಳಾಗಿ  ವರ್ಗೀಕರಿಸಬಹುದು. ಇಟ್ಟಿಗೆ ಗಾರೆ ಕೆಲಸದ ಎರಡು ಸಾಮಾನ್ಯ ವಿಧಗಳು:

 

1. ಮಣ್ಣಿನಲ್ಲಿ ಇಟ್ಟಿಗೆ ಗಾರೆ ಕೆಲಸ



ಜೇಡಿಮಣ್ಣು ಎಂದೂ ಕರೆಯಲ್ಪಡುವ ಮಣ್ಣು ಯುಗಯುಗಾಂತರಗಳಿಂದ ಕಟ್ಟಡ ನಿರ್ಮಾಣದ ಒಂದು ಪ್ರಮುಖ ಸಾಮಗ್ರಿಯಾಗಿದೆ. ಮಣ್ಣಿನ ಇಟ್ಟಿಗೆ ಗಾರೆ ಕೆಲಸದಲ್ಲಿ, ಸಿಮೆಂಟ್ ಬದಲಿಗೆ ಗಾರೆಯಂತೆ ಮಣ್ಣು ಕೆಲಸ ಮಾಡುತ್ತದೆ. ಮಣ್ಣಿನ ಮಿಶ್ರಣವನ್ನು ಬಳಸಿ ಇಟ್ಟಿಗೆಗಳನ್ನು ಜೋಡಿಸಲಾಗುತ್ತದೆ, ಇದು ಸಿಮೆಂಟ್ ಗಾರೆಗಿಂತ ಹೆಚ್ಚು ಸಂಯೋಜನೆಗೊಳ್ಳುತ್ತದೆ. ಈ ಹೊಂದಿಕೊಳ್ಳುವ ಗುಣವು ಸ್ಟ್ರಕ್ಚರ್‌ಗಳು ಭೂಮಿಯ ಚಲನೆಯನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ. ಜೊತೆಗೆ ಉತ್ತಮ ಬೆಂಕಿ ಮತ್ತು ಶಬ್ದ ನಿರೋಧಕವನ್ನು ಒದಗಿಸುತ್ತದೆ. ಮಣ್ಣಿನ ಇಟ್ಟಿಗೆ ಗಾರೆಯು ಸಾಮಾನ್ಯವಾಗಿ ಸಾಂಪ್ರದಾಯಿಕ ಅಥವಾ ಗ್ರಾಮೀಣ ಭಾಗದ ಕಟ್ಟಡಗಳಲ್ಲಿ ಕಂಡುಬರುತ್ತದೆ.

 

ಈ ನಿರ್ದಿಷ್ಟ ರೀತಿಯ ಇಟ್ಟಿಗೆ ಗಾರೆಯನ್ನು ಸ್ಥಳೀಯ ವಸ್ತುಗಳನ್ನು ಬಳಸಿ ತಯಾರಿಸುವುದರಿಂದ ಕಡಿಮೆ ವೆಚ್ಚದಲ್ಲಿ ತಯಾರಾಗುತ್ತದೆ. ಜೊತೆಗೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ. ಉತ್ತಮ ಬೆಂಕಿ ನಿರೋಧಕವಾಗಿಯೂ ಕೆಲಸ ಮಾಡುತ್ತದೆ. ಅಲ್ಲದೆ ಈ ವಿಧಾನವು ದುರಸ್ತಿ ಮಾಡಲು ಸುಲಭವಾಗಿದೆ. ಇಷ್ಟೇ ಅಲ್ಲದೆ ಕಟ್ಟಡಗಳಿಗೆ ಹಳ್ಳಿಗಾಡಿನ ನೋಟವನ್ನು ನೀಡುತ್ತದೆ.

 

2. ಸಿಮೆಂಟ್‌ನಲ್ಲಿ ಇಟ್ಟಿಗೆ ಗಾರೆ ಕೆಲಸ



ಸಿಮೆಂಟ್ನೊಂದಿಗೆ ಇಟ್ಟಿಗೆ ಗಾರೆಯು ಆಧುನಿಕ ನಿರ್ಮಾಣದಲ್ಲಿ ಸಾಮಾನ್ಯವಾಗಿ ಬಳಸುವ ವಿಧವಾಗಿದೆ. ಇದರಲ್ಲಿ ದೃಢವಾದ ಮತ್ತು ದೀರ್ಘಕಾಲೀನ ಸ್ಟ್ರಕ್ಚರ್‌ಗಳನ್ನು ನಿರ್ಮಿಸಲು ಸಿಮೆಂಟ್ ಗಾರೆಯನ್ನು ಜೋಡಿಸುವ ಏಜೆಂಟ್ ಆಗಿ ಬಳಸುತ್ತದೆ. ವಿನ್ಯಾಸದ ಅಗತ್ಯಗಳನ್ನು ಆಧರಿಸಿ ಸ್ಟ್ರೆಚರ್ ಅಥವಾ ಹೆಡರ್ ಬಾಂಡ್‌ನಂತಹ ವಿವಿಧ ಮಾದರಿಗಳಲ್ಲಿ ಇಟ್ಟಿಗೆಗಳನ್ನು ಜೋಡಿಸಲಾಗುತ್ತದೆ. ಈ ರೀತಿಯ ಇಟ್ಟಿಗೆ ಗಾರೆ ಕೆಲಸವು ಬಲವಾದ, ಸ್ಥಿರವಾದ ಮತ್ತು ಬಾಳಿಕೆ ಬರುವಂತ ಕಟ್ಟಡಗಳ ನಿರ್ಮಾಣವನ್ನು ಒದಗಿಸುತ್ತದೆ.

 

ಈ ರೀತಿಯ ಇಟ್ಟಿಗೆ ಗಾರೆಯ ಕೆಲಸವು ಹೆಚ್ಚಿನ ಸ್ಟ್ರಕ್ಚರಲ್ ಶಕ್ತಿ ಮತ್ತು ಬಾಳಿಕೆ ಜೊತೆಗೆ ತೇವಾಂಶ, ಬೆಂಕಿ ಮತ್ತು ಹುಳುಗಳ ಬಾಧೆ ನಿರೋಧಕವಾಗಿ ಕೆಲಸ ಮಾಡುತ್, ವ್ಯಾಪಕ ಶ್ರೇಣಿಯ ಸ್ಟ್ರಕ್ಚರ್‌ಗಳನ್ನು ಮಾಡುವ ಅವಕಾಶಗಳು ಮತ್ತು ಆಧುನಿಕ ಮತ್ತು ಸ್ವಚ್ಛವಾದ ಸೌಂದರ್ಯದಂತಹ ಪ್ರಯೋಜನಗಳನ್ನು ನೀಡುತ್ತದೆ. 

ಇದನ್ನೂ ಓದಿ: ಇಟ್ಟಿಗೆಯ ಗುಣಮಟ್ಟವನ್ನು ಪರಿಶೀಲಿಸುವುದು ಹೇಗೆ?

ವಿವಿಧ ವಿಧಾನಗಳಲ್ಲಿ ಬಳಸಲಾಗುವ ಹಲವು ರೀತಿಯ ಇಟ್ಟಿಗೆ ಗಾರೆಯ ಉಪಕರಣಗಳನ್ನು ನಾವು ಈಗ ಅನ್ವೇಷಿಸೋಣ.

 

 

ಇಟ್ಟಿಗೆ ಗಾರೆ ಕೆಲಸಕ್ಕೆ ಬೇಕಾಗುವ ಉಪಕರಣಗಳು ಮತ್ತು ಸಲಕರಣೆಗಳ ವಿಧಗಳು

 

1. ಸುತ್ತಿಗೆ



ಸುತ್ತಿಗೆಯು ಇಟ್ಟಿಗೆ ಗಾರೆ ಕೆಲಸದ ನಿರ್ಮಾಣದಲ್ಲಿ ಬಳಸಲಾಗುವ ಮತ್ತೊಂದು ಅಗತ್ಯದ ಸಾಧನವಾಗಿದೆ. ಇದರ ಉಪಯೋಗ ಸಾಮರ್ಥ್ಯಗಳು ಬಹಳಷ್ಟು ವಿಧದ ಕೆಲಸಗಳಲ್ಲಿ ಇದನ್ನು ಬಿಡದಂತೆ ಬಳಸಲು ಅನಿವಾರ್ಯವಾಗಿದೆ. ಸುತ್ತಿಗೆಯಿಂದ ಪ್ರಮುಖವಾಗಿ ಇಟ್ಟಿಗೆಗಳನ್ನು ಹೊಂದಿಸಲು ಅಥವಾ ಅವುಗಳನ್ನು ಕೆತ್ತುವ ಮೂಲಕ ಇಟ್ಟಿಗೆಗಳನ್ನು ಸಣ್ಣ ತುಂಡುಗಳಾಗಿ ಒಡೆಯಲು ಬಳಸಲಾಗುತ್ತದೆ.  ಅದರೊಂದಿಗೆ, ನಿರ್ಮಾಣದ ಸಮಯದಲ್ಲಿ ಇಟ್ಟಿಗೆಗಳನ್ನು ಮೆಲ್ಲಗೆ ತಟ್ಟುವ ಮೂಲಕ ಮತ್ತು ಕಟ್ಟುವ ಕಾಮಗಾರಿಯನ್ನು ಸರಿಹೊಂದಿಸಲು ಸುತ್ತಿಗೆಗಳನ್ನು ಕೂಡ ಬಳಸಲಾಗುತ್ತದೆ. ಈ ರೀತಿ ಬಳಸುವುದರಿಂದ ಇಟ್ಟಿಗೆಗಳನ್ನು ಭದ್ರವಾಗಿ ಇಟ್ಟು ಕಟ್ಟಲಾಗಿದೆ ಮತ್ತು ಸರಿಯಾಗಿ ಜೋಡಿಸಲಾಗಿದೆ ಎಂಬುದನ್ನು ಇದು ಖಚಿತಪಡಿಸುತ್ತದೆ. 

 

2. ಕರಣೆ (ಟ್ರೋವೆಲ್)



ಟ್ರೋವೆಲ್-ಸಾಮಾನ್ಯವಾಗಿ ಆಡುಭಾಷೆಯಲ್ಲಿ ತ್ಯಾಪಿ ಅಥವಾ ಕರಣೆ ಎಂದು ಕರೆಯಲಾಗುವ ಇದು ಒಂದು ಕೈಯಲ್ಲಿ ಹಿಡಿಯುವ ಸಾಧನವಾಗಿದ್ದು, ಇದನ್ನು ಇಟ್ಟಿಗೆ ಗಾರೆ ಕೆಲಸದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ನಿರ್ಮಾಣ ಪ್ರಕ್ರಿಯೆಯಲ್ಲಿ ಗಾರೆಯನ್ನು ಹರಡುವುದು ಮತ್ತು ಆಕಾರ ಮಾಡುವುದು ಇದರ ಬಳಕೆಯ ಪ್ರಾಥಮಿಕ ಉದ್ದೇಶವಾಗಿದೆ. 

 

ಇದು ಇಟ್ಟಿಗೆಗಳ ಮಧ್ಯೆ ಸುರಕ್ಷಿತ ಬಂಧವನ್ನು ಕೊಡುವುದನ್ನು ಖಚಿತಪಡಿಸುತ್ತದೆ. ಸ್ಟಕ್ಚರ್‌ಗೆ ಒಟ್ಟಾರೆ ಶಕ್ತಿ ಮತ್ತು ಸ್ಥಿರತೆಯನ್ನು ಹೆಚ್ಚಿಸುತ್ತದೆ. ಇಟ್ಟಿಗೆಗಳ ಮೇಲೆ ಉಳಿಯುವ ಹೆಚ್ಚುವರಿ ಗಾರೆಯನ್ನು ಉಜ್ಜಿ ತೆಗೆದು ಗಾರೆ ಕೀಲುಗಳನ್ನು ಸುಗಮಗೊಳಿಸಲು ಮತ್ತು ಪೂರ್ಣಗೊಳಿಸಲು ಮತ್ತು ಅಚ್ಚುಕಟ್ಟಾಗಿ ಮತ್ತು ಆಕರ್ಷಕವಾದ ಫಿನಿಶಿಂಗ್ ಕೊಡಲು ಟ್ರೊವೆಲ್‌ಗಳನ್ನು ಬಳಸಲಾಗುತ್ತದೆ.

 

3. ಸ್ಪಿರಿಟ್ ಲೆವಲ್ (ರಸ ಮಟ್ಟ)



ಸ್ಪಿರಿಟ್ ಲೆವಲ್ ಎಂಬುದು, ಇಟ್ಟಿಗೆ ಗಾರೆ ಕೆಲಸಕ್ಕೆ ಬೇಕಾಗುವ ಅತ್ಯಗತ್ಯ ಒಂದು ಸಾಧನವಾಗಿದೆ. ಇದು ಗೋಡೆಯ ಜೋಡಣೆಯಲ್ಲಿ ನಿಖರತೆಯನ್ನು ಕೊಡುತ್ತದೆ. ಸಮತಲ ಮತ್ತು ಲಂಬ ಸಮತಲಗಳನ್ನು ಪರಿಶೀಲಿಸುವ ಮೂಲಕ, ಇಟ್ಟಿಗೆಗಳನ್ನು ಸಂಪೂರ್ಣವಾಗಿ ಸಮತಲ ಮತ್ತು ನೇರವಾಗಿ ಹಾಕಲಾಗಿದೆ ಎಂಬುದನ್ನು ಸ್ಪಿರಿಟ್ ಲೆವಲ್ ಖಚಿತಪಡಿಸುತ್ತದೆ. ಈ ನಿಖರತೆಯು ಕೊನೆಗೆ ಇಟ್ಟಿಗೆ ಕೆಲಸದ ಸ್ಟಕ್ಚರ್‌ಗೆ ಸಮಗ್ರತೆಯನ್ನು ಹಾಗೂ ಆಕರ್ಷಕ ಸೌಂದರ್ಯವನ್ನು ಹೆಚ್ಚಿಸುತ್ತದೆ.

 

4. ಸಂಯೋಜಕ (ಜಾಯಿಂಟರ್)



ಸಂಯೋಜಕ ಅಥವಾ ಜಾಯಿಂಟರ್ ಇಟ್ಟಿಗೆ ಗಾರೆ ಕೆಲಸದಲ್ಲಿ ಶುದ್ಧ, ನಯವಾದ ಗಾರೆಯಿಂದ ಸಂಧುಗಳನ್ನು ಮಾಡಲು ಬಳಸಲಾಗುವ ವಿಶೇಷ ವಸ್ತುವಾಗಿದೆ. ಇದು ಮೆರಗುಗೊಳಿಸಿದ ನೋಟವನ್ನು ನೀಡುತ್ತದೆ, ಸ್ಟ್ರಕ್ಚರಲ್ ಸಮಗ್ರತೆಯನ್ನು ಹೆಚ್ಚಿಸುತ್ತದೆ ಮತ್ತು ನೀರು ಜಿನುಗಿ ಒಳಗೆ ಬರುವುದರಿಂದ ರಕ್ಷಣೆ ಕೊಡುತ್ತದೆ. ಇಟ್ಟಿಗೆಗಳ ನಡುವೆ ಗಾರೆಯನ್ನು ಹಾಕಿ ಒತ್ತುವ ಮೂಲಕ ಆಕಾರವನ್ನು ಕೊಡಲಾಗುತ್ತದೆ. ಇದು ಗೋಡೆಯ ಸುದೀರ್ಘವಾಗಿ ಬಾಳಿಕೆ ಬರುವಂತೆ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ.

 

5. ತಳ್ಳುಬಂಡಿ 



ಇಟ್ಟಿಗೆ ಗಾರೆ ಕೆಲಸದಲ್ಲಿ ಬಳಸಲು ತಳ್ಳುಬಂಡಿಗಳು ಅನಿವಾರ್ಯ. ಅವುಗಳ ಸಹಾಯದಿಂದ ಇಟ್ಟಿಗೆ, ಗಾರೆ ಮತ್ತು ಇತರ ಸಾಮಗ್ರಿಗಳನ್ನು ನಿರ್ಮಾಣ ಸ್ಥಳದಲ್ಲಿ ಸುಲಭವಾಗಿ ಸಾಗಿಸಲು ಸಾಧ್ಯವಾಗುತ್ತದೆ. ಇದನ್ನು ಬಳಸುವುದರಿಂದ ಸಮಯದ ಉಳಿತಾಯದ ಜೊತೆಗೆ ಕಾರ್ಮಿಕರಿಗೆ ದೈಹಿಕ ಕೆಲಸವನ್ನು ಕಡಿಮೆ ಮಾಡುತ್ತದೆ. ಇಟ್ಟಿಗೆಗಳನ್ನು ಹೆಚ್ಚು ನಿರ್ವಹಣೆ ಇಲ್ಲದೆ ಸಾಗಿಸಲು ಸಾಧ್ಯವಾಗುವುದರಿಂದ ಹೆಚ್ಚು ಕೆಲಸ ಆಗುವಂತೆ ಸಹಾಯ ಮಾಡುತ್ತದೆ.

 

6. ಅಳತೆಯ ಟೇಪ್



ಇಟ್ಟಿಗೆಗಳ ನಡುವೆ ಒಂದೇ ರೀತಿಯ ಅಂತರ ಇರುವಂತೆ ಮಾಡಲು ಅಳತೆಯ ಟೇಪ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಇಟ್ಟಿಗೆಯನ್ನು ಸರಿಯಾಗಿ ಇಡಲು ಹಾಗೂ ನಿಖರವಾಗಿ ಹೊಂದಿಸಿ ನಿರ್ಮಾಣ ಮಾಡುವುದನ್ನು ಖಚಿತಪಡಿಸುತ್ತದೆ. ನಿಖರವಾದ ಅಳತೆಯನ್ನು ತೆಗೆದುಕೊಳ್ಳುವ ಮೂಲಕ ಮೇಸ್ತ್ರಿಗಳು ಗೋಡೆಯನ್ನು ಕಟ್ಟುವಾಗ ಒಂದೇ ಸಮನಾಗಿ ಇರುವುದನ್ನು ಖಚಿತಪಡಿಸುತ್ತಾರೆ. ಇದರಿಂದ ದೃಢತೆ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲಾಗುತ್ತದೆ.



ചുരുക്കത്തിൽ, ശക്തമായതും ഈട് നിൽക്കുന്നതും കാഴ്ചയ്ക്ക് ആകർഷകവുമായ കെട്ടിടങ്ങൾ നിർമ്മിക്കുന്നതിനുള്ള വിപുലമായ പല രീതികൾ ഇഷ്ടികപ്പണി ഉറപ്പുതരുന്നു. പ്രധാനമായും മണ്ണ് ഉപയോഗിച്ചും സിമെന്റ് ഉപയോഗിച്ചും ഉള്ള രണ്ട് തരം ഇഷ്ടികപ്പണികളാണ് ഉള്ളത്. കളിമണ്ണുകൊണ്ടുള്ള ഇഷ്ടികപ്പണി ചെലവ് കുറഞ്ഞതാണ്, അത് പരമ്പരാഗത രൂപവും നൽകുന്നു, അതേസമയം സിമെന്റ് ഉപയോഗിച്ചുള്ള ഇഷ്ടികപ്പണി ഉയർന്ന ഘടനാപരമായ ഉറപ്പും ഒരു നൂതന ഭംഗിയും പ്രദാനം ചെയ്യുന്നു. ഇതിൽ ഏത് രീതി തിരഞ്ഞെടുത്താലും, കൃത്യതയോടെയും സുരക്ഷിതമായും ഇഷ്ടികപ്പണി ചെയ്യുന്നതിൽ ശരിയായ ഉപകരണങ്ങളും സാധനസാമഗ്രികളും ഒരു പ്രധാന പങ്ക് വഹിക്കുന്നു. ചുറ്റികകൾ, കരണ്ടികൾ തുടങ്ങിയ ഉപകരണങ്ങൾ ഇഷ്ടികകളും ചാന്തും ശരിയായ സ്ഥാനങ്ങളിൽ സ്ഥാപിക്കുന്നതിനും രൂപപ്പെടുത്തുന്നതിനും സഹായിക്കുന്നു. കൂടുതലറിയാൻ, ഇഷ്ടികപ്പണിയെക്കുറിച്ചുള്ള ഞങ്ങളുടെ വീഡിയോ നിങ്ങൾക്ക് ഇവിടെ കാണാം.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....