Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಈಗ ನೀವು ಕಲ್ಲಿನ ಗಾರೆ ಕೆಲಸ ಎಂದರೇನು ಎಂಬ ಅರಿವನ್ನು ಈಗ ಹೊಂದಿದ್ದೀರಿ, ನೀವು ಯಾವುದೇ ಕಾರಣಕ್ಕೂ ಮಾಡಲೇಬಾರದ ಕೆಲವು ಸಾಮಾನ್ಯ ಕಲ್ಲು ಗಾರೆ ಕೆಲಸದ ತಪ್ಪುಗಳು ಇಲ್ಲಿವೆ.
ಹಲವಾರು ಅಂಶಗಳು ಕಲ್ಲಿನ ನೈಸರ್ಗಿಕ ಬಾಳಿಕೆಯ ಮೇಲೆ ಪರಿಣಾಮ ಬೀರಬಹುದು. ಅದರಲ್ಲಿ ಪೋರ್ ಸ್ಟ್ರಕ್ಚರ್ ಅಂದರೆ ಸಣ್ಣ ರಂದ್ರಗಳಿರುವುದು ಅತ್ಯಂತ ಮುಖ್ಯವಾಗಿದೆ. ಸಣ್ಣ ರಂದ್ರಗಳಿರುವ ರಚನೆ ಮುಖ್ಯವಾಗಿದೆ ಏಕೆಂದರೆ ಇದು ಕಲ್ಲಿನ ಮೂಲಕ ಪ್ರವೇಶಿಸುವ ಮತ್ತು ಚಲಿಸುವ ನೀರಿನ ಪ್ರಮಾಣವನ್ನು ಪ್ರಭಾವಿಸುತ್ತದೆ. ಇದಲ್ಲದೆ, ಕಲ್ಲಿಗೆ ಹಾನಿ ಮಾಡುವ ಲವಣಗಳು ನೀರಿನಿಂದ ಒಳಗೆ ಸೇರುತ್ತವೆ ಮತ್ತು ರಂಧ್ರಗಳಲ್ಲಿ ಸಂಗ್ರಹಗೊಳ್ಳುತ್ತವೆ. ರಂಧ್ರಗಳು ಎಷ್ಟು ಜಾಗವನ್ನು ಸೃಷ್ಟಿಸುತ್ತವೆ, ಜೊತೆಗೆ ಅವು ಹೇಗೆ ರಚನೆಯಾಗುತ್ತವೆ ಎಂಬುದು ನಿರ್ಣಾಯಕ ಅಂಶವಾಗಿದೆ. ಕಡಿಮೆ ಸರಂಧ್ರತೆ ಹೊಂದಿರುವ ಕಲ್ಲುಗಳು ಹೆಚ್ಚು ನೀರು ಜಿನುಗುವುದಕ್ಕೆ ಅವಕಾಶ ಕೊಡುವುದಿಲ್ಲ. ಆದ್ದರಿಂದ ಉಪ್ಪು ಮತ್ತು/ಅಥವಾ ಇಬ್ಬನಿ ಹಾನಿಗೆ ಕಡಿಮೆ ಒಳಗಾಗುತ್ತವೆ. ಕಡಿಮೆ ಸರಂಧ್ರತೆ ಹೊಂದಿರುವ ಕಲ್ಲುಗಳು ಸಾಮಾನ್ಯವಾಗಿ ಹೆಚ್ಚು ಬಾಳಿಕೆ ಬರುತ್ತವೆ. ಹೆಚ್ಚಿನ ಸರಂಧ್ರತೆ ಹೊಂದಿರುವ ಕಲ್ಲು ಹೆಚ್ಚು ನೀರು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ, ಆದರೆ ರಂಧ್ರಗಳು ದೊಡ್ಡದಾಗಿದ್ದರೆ ನೀರು ಕೂಡ ತುಲನಾತ್ಮಕವಾಗಿ ಬೇಗನೆ ಆವಿಯಾಗುತ್ತದೆ.
ಸೆಡಿಮೆಂಟೇಶನ್ ಸಮಯದಲ್ಲಿ ಸೆಡಿಮೆಂಟರಿ ಬಂಡೆಗಳು ರೂಪುಗೊಳ್ಳುತ್ತವೆ. ಅದರ ಬೆಡ್ಡಿಂಗ್ ಸಮತಲಕ್ಕೆ ಸಂಬಂಧಿಸಿದಂತೆ ಕಲ್ಲಿನ ಬ್ಲಾಕ್ ಅನ್ನು ತಪ್ಪಾಗಿ ಹಾಕಿದರೆ, ದೋಷಗಳು ಉಂಟಾಗುತ್ತವೆ.
ಕಲ್ಲನ್ನು ಗೋಡೆಯಲ್ಲಿ ಹಾಕಿದಾಗ ಅದರ ನೈಸರ್ಗಿಕ ಬೆಡ್ಡಿಂಗ್ ಸ್ಥಾನದಲ್ಲಿ ಇಡಬೇಕು. ಇದರರ್ಥ ಕಲ್ಲುಗಳು ಮೂಲತಃ ರೂಪುಗೊಂಡಂತೆ ಪದರಗಳು ಅಡ್ಡಲಾಗಿ ಹಾಕಬೇಕು. ಆ ರೀತಿಯಲ್ಲಿ ಇಟ್ಟಾಗ ಕಲ್ಲು ಗಟ್ಟಿಯಾಗುತ್ತದೆ. ಜೊತೆಗೆ ಕಡಿಮೆ ನ್ಯೂನತೆಗಳಿಗೆ ಒಳಗಾಗುತ್ತದೆ. ಕಲ್ಲನ್ನು ಲಂಬವಾಗಿ ಹಾಸಿದ್ದರೆ, ಉಪ್ಪು ಹರಳುಗೊಳ್ಳುವ ಅಥವಾ ಇಬ್ಬನಿಯಿಂದ ಉಂಟಾಗುವ ಹಾನಿಗೆ ಅದು ಹೆಚ್ಚು ಒಳಗಾಗುತ್ತದೆ. ಪಕ್ಕದ ಕಲ್ಲುಗಳಿಂದ ಯಾವುದೇ ನಿರ್ಬಂಧವಿಲ್ಲದ ಕಾರಣ ಬೆಡ್ ಪದರಗಳನ್ನು ತಳ್ಳುವುದು ತುಲನಾತ್ಮಕವಾಗಿ ಸುಲಭ.
ಲವಣಗಳು ವಿವಿಧ ರೀತಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಅವು ವಿವಿಧ ಮೂಲಗಳಿಂದ ಬರುತ್ತವೆ. ಅವುಗಳು ಬರುವ ಮೂಲಗಳು ಕಾಂಕ್ರೀಟ್, ಇಟ್ಟಿಗೆ ಮತ್ತು ಗಾರೆ, ಹಾಗೆಯೇ ಮಣ್ಣು ಮತ್ತು ಗಾಳಿಯಿಂದಲೂ ಬರುತ್ತವೆ. ಉಪ್ಪನ್ನು ಮೇಲ್ಮೈಯಲ್ಲಿ ಅಥವಾ ಕಲ್ಲಿನೊಳಗೆ ಅದು ಒಣಗಿದಂತೆ ಸಂಗ್ರಹ ಆಗುತ್ತದೆ. ರಂಧ್ರಗಳೊಳಗಿನ ಸ್ಫಟಿಕೀಕರಣವು ಒತ್ತಡವನ್ನು ಉಂಟುಮಾಡುತ್ತದೆ. ಇದು ಆಗಾಗ್ಗೆ ಹಾನಿಯನ್ನುಂಟು ಮಾಡುತ್ತದೆ. ಕಲ್ಲಿನ ವಿಧ, ಉಪ್ಪಿನ ಪ್ರಕಾರ ಮತ್ತು ರಂಧ್ರಗಳ ಗುಣಲಕ್ಷಣಗಳು - ನಿರ್ದಿಷ್ಟವಾಗಿ ಅವುಗಳ ಸೈಜ್ ಮತ್ತು ವ್ಯವಸ್ಥೆ - ಇವೆಲ್ಲವೂ ಹಾನಿಯ ಸಾಧ್ಯತೆ ಮತ್ತು ವ್ಯಾಪ್ತಿಯ ಮೇಲೆ ಪರಿಣಾಮ ಬೀರುತ್ತವೆ. ನೀವು ಕರಾವಳಿಯ ಬಳಿ ವಾಸಿಸುತ್ತಿದ್ದರೆ ಸಮುದ್ರದ ಲವಣಗಳು ಮತ್ತು ಹ್ಯುಮಿಡಿಟಿಯು ಹೆಚ್ಚಿನ ಸಾಮರ್ಥ್ಯದ ಸಂಯೋಜನೆಯಿಂದಾಗಿ ಉಪ್ಪು ಹರಳುಗೊಳ್ಳುವ ಅಪಾಯವು ಹೆಚ್ಚಾಗುತ್ತದೆ.
ಕಲ್ಲಿನ ಗಾರೆ ಕೆಲಸದ ನಿರ್ಮಾಣದಲ್ಲಿ ಸುಣ್ಣದ ರನ್-ಆಫ್ ಉಂಟಾಗುತ್ತದೆ. ಇದನ್ನು ಸುಣ್ಣದ ಕಲೆ ಎಂದೂ ಕರೆಯುತ್ತಾರೆ. ಇದು ಸಿಮೆಂಟ್ ಮೂಲಕ ಹೆಚ್ಚುವರಿ ನೀರು ಹರಿಯುವಾಗ ಉಂಟಾಗುವ ಒಂದು ವಿದ್ಯಮಾನವಾಗಿದೆ. ಸುಣ್ಣದ ಕಲ್ಲುಗಳಲ್ಲಿ ಆಮ್ಲ ಮಳೆ ಮತ್ತು ಕ್ಯಾಲ್ಸಿಯಂ ಕಾರ್ಬೋನೇಟ್ ನಡುವಿನ ಪ್ರತಿಕ್ರಿಯೆಯ ಪರಿಣಾಮವಾಗಿ, ಕರಗುವ ಲವಣಗಳು ಇತರ ವಸ್ತುಗಳಲ್ಲಿ ಶೇಖರಣೆಗೊ. ಕರಗುವ ಲವಣಗಳು ರೂಪುಗೊಂಡಾಗ, ಅವು ಸುಣ್ಣದ ಕಲ್ಲುಗಳಿಂದ ಹೊರಗೆ ಹೋಗಬಹುದು. ಇಟ್ಟಿಗೆಗಳು ಅಥವಾ ಮರಳುಗಲ್ಲಿನ ಮೇಲೆ ಶೇಖರಣೆಗೊಳ್ಳಬಹುದು. ಈ ಲವಣಗಳು ಸ್ಫಟಿಕೀಕರಣಗೊಂಡಾಗ, ಅವು ಕ್ಷೀಣಿಸದ ವಸ್ತುಗಳೂ ಕ್ಷೀಣಿಸುವಂತೆ ಮಾಡಬಹುದು.
ಅತಿಯಾಗಿ ತೇವ ಮತ್ತು ಘನೀಕರಣಕ್ಕೆ ಒಳಗಾಗುವ ಪ್ರದೇಶಗಳಲ್ಲಿ ಇಬ್ಬನಿ ಸಮಸ್ಯೆಯ ಸಾಧ್ಯತೆ ಹೆಚ್ಚು. ಆಶ್ರಯ ಸರಳ ಗೋಡೆಗಳಲ್ಲಿ, ತೇವ-ನಿರೋಧಕ ಗೋಡೆಯ ಕೆಳಗೆ ಹೊರತುಪಡಿಸಿ, ಇಬ್ಬನಿಯಿಂದ ಹಾನಿ ಆಗುವುದು ಅಪರೂಪ. ಕಟ್ಟಡದ ಸರಂಧ್ರ ರಚನೆಯು, ಅಂದರೆ ಇಟ್ಟಿಗೆ ಕೆಲಸವು ಇಬ್ಬನಿ ಹಾನಿಗೆ ಅದರ ಒಳಗಾಗುವಿಕೆಯನ್ನು ನಿರ್ಧರಿಸುತ್ತದೆ ಮತ್ತು ಹಾನಿಯ ಪ್ರಕ್ರಿಯೆಯು ಒಂದೇ ಆಗಿರುತ್ತದೆ.
ಈ ತಪ್ಪು ಮಾಡುವುದರಿಂದ ಕಲ್ಲಿನ ಗಾರೆ ನಿರ್ಮಾಣದಲ್ಲಿ ಕಲ್ಲಿನ ದೊಡ್ಡ ತುಂಡುಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ, ವಿಶೇಷವಾಗಿ ಕಲ್ಲು ಹಾನಿಗೆ ಒಳಗಾಗುವ ಪ್ರದೇಶದಲ್ಲಿದ್ದರೆ, ಅಂದರೆ ಉದಾಹರನೆಗಾಗಿ ಹೇಳುವುದಾದರೆ ಕುಂಬಿ ಗೋಡೆಗಳು ಅಥವಾ ಪ್ಯಾರಪೆಟ್ಗಳು.
ಮರಳುಗಲ್ಲುಗಳಲ್ಲಿ ಬಾಹ್ಯರೇಖೆಯ ಸ್ಕೇಲಿಂಗ್ ಕಂಡುಬರುತ್ತದೆ. ಇದು ರಂಧ್ರಗಳನ್ನು ಮುಚ್ಚುವ ಕ್ಯಾಲ್ಸಿಯಂ ಸಲ್ಫೇಟ್‌ನಿಂದ ಉಂಟಾಗುತ್ತದೆ ಎಂದು ಭಾವಿಸಲಾಗಿದೆ. ಬಂಡೆಯು ಸುಣ್ಣದ ಮರಳುಗಲ್ಲು ಆಗಗಿರದಿದ್ದರೂ ಕೂಡ ಇದು ಸಂಭವಿಸುತ್ತದೆ. ಹೀಗಾಗುವುದರಿಂದ ಕಲ್ಲಿನ ಮುಖದಿಂದ ದಪ್ಪವಾದ ಹೊರಪದರವನ್ನು ಬೇರ್ಪಡುವ ಫಲಿತಾಂಶದಲ್ಲಿ ಕೊನೆಯಾಗುತ್ತದೆ.
ಶತಮಾನಗಳಿಂದ, ಕಬ್ಬಿಣ ಮತ್ತು ಉಕ್ಕಿನ ಕ್ರ್ಯಾಂಪ್ಗಳನ್ನು ಕಲ್ಲಿನ ಫಿಕ್ಸಿಂಗ್ ಸಾಧನಗಳಾಗಿ ಬಳಸಲಾಗುತ್ತದೆ. ಆದರೂ ಕೂಡ, ತುಕ್ಕು ಉಂಟಾಗುವುದು ಈ ಲೋಹದ ಫಿಕ್ಸಿಂಗ್‌ಗಳೊಂದಿಗೆ ಕಲ್ಲನ್ನು ವಿಸ್ತರಿಸಬಹುದು ಮತ್ತು ಒಡೆಯಬಹುದು. ಇದಲ್ಲದೆ, ಕಲ್ಲಿನ ಕುಹರದ ಗೋಡೆಗಳು ಕುಹರದ ಗೋಡೆಯ ಟೈನಿಂದ ಪ್ರಭಾವಿತವಾಗಬಹುದು.
ಕ್ವಾರಿಯಲ್ಲಿ ಸ್ಫೋಟದ ಮೂಲಕ ಕಲ್ಲುಗಳನ್ನು ಹೊರತೆಗೆದರೆ ಹಾನಿಗೊಳಗಾಗಬಹುದು. ಇದು ಆಂತರಿಕ ಒಡೆತಗಳಿಗೆ ಕಾರಣವಾಗಬಹುದು. ಅತಿಯಾದ ಸಲಕರಣೆಯ ಉಪಯೋಗದಿಂದ ಕಲ್ಲಿನ ಮೇಲ್ಮೈಯ ಹಾನಿಗೆ ಕಾರಣವಾಗಬಹುದು.
1. ಉದ್ದವಾದ ಆಯತಾಕಾರದ ಕಲ್ಲುಗಳನ್ನು ಬಳಸುವುರಿಂದ ಗೋಡೆಗಳ ಶಕ್ತಿಯನ್ನು ಹೆಚ್ಚಿಸಲು ಸಹಾಯವಾಗುತ್ತದೆ.
2. ನಿಮ್ಮ ಗೋಡೆಗಳ ಒಳಗಿನ ಮತ್ತು ಹೊರಗಿನ ಭಾಗಗಳನ್ನು ಒಂದೇ ಸಲಕ್ಕೆ ಕಟ್ಟಬೇಕು.
3. ಒಟ್ಟು ದಪ್ಪವು ದಪ್ಪವು 2 ರಿಂದ 2.5 ಸೆಂ.ಮೀ ಒಳಗೆ ಇರಬೇಕು. ಜೊತೆಗೆ ಕಲ್ಲಿನ ಸೈಜ್ ಅನ್ನು ಅವಲಂಬಿಸಿ 1 ಸೆಂ.ಮೀಗಿಂತ ಕಡಿಮೆ ಇರಬಾರದು.
4. ಕಾಂಕ್ರೀಟ್ ಮಿಶ್ರಣಕ್ಕಾಗಿ ಸರಿಯಾದ ಸಿಮೆಂಟ್-ನಿಂದ-ನೀರು ಅನುಪಾತದಲ್ಲಿ ಬಳಸಬೇಕು. ಇದಲ್ಲದೆ ಅದನ್ನು ಮಿಶ್ರಣ ಮಾಡಿದ 30 ನಿಮಿಷಗಳಲ್ಲಿ ಬಳಸಲು ಮರೆಯದಿರಿ.
5. ಸಣ್ಣ ಸಣ್ಣ ಕಲ್ಲುಗಳನ್ನು ಬಳಸುವ ಮೂಲಕ ಗೋಡೆಗೆ ಆಕಾರ ಕೊಡುವುದರೊಂದಿಗೆ ಗೋಡೆಯಲ್ಲಿನ ಸಣ್ಣ ಖಾಲಿ ಜಾಗೆ ತುಂಬಲು ಬಳಸಲಾಗುತ್ತದೆ.
6. ಕಲ್ಲುಗಳು ಗೋಡೆಯಿಂದ ಹೊರಗೆ ಕಾಣುವಂತೆ ಇರಬಾರದು, ಅಂದರೆ ಗೋಡೆಯಿಂದ ಕಲ್ಲುಗಳು ಹೊರಗೆ ಬರಬಾರದು. ಜೊತೆಗೆ ಗಾರೆ ಮಿಶ್ರಣದೊಂದಿಗೆ ಸರಿಯಾಗಿ ಸೇರಿಸಬೇಕು.
7. ಗೋಡೆಗಳನ್ನು ಕಟ್ಟಿದ ಬಳಿಕ ಕನಿಷ್ಠ 7 ದಿನಗಳವರೆಗೆ ಕ್ಯೂರಿಂಗ್ ಮಾಡಬೇಕು.
ನಿರ್ಮಾಣದಲ್ಲಿ ಕಲ್ಲುಗಳನ್ನು ಬಳಸುವುದರಿಂದ ನಿಮ್ಮ ಕಟ್ಟಡವನ್ನು ಗಟ್ಟಿಯಾಗಿಸುತ್ತದೆ ಮತ್ತು ಬಾಳಿಕೆ ಬರುವಂತೆ ಮಾಡುತ್ತದೆ. ಕಲ್ಲು ಸುಮಾರು 104.9 ಎಂಪಿಎ ನಷ್ಟು ಸರಾಸರಿ ಸಂಕುಚಿತ ಶಕ್ತಿಯನ್ನು ಹೊಂದಿದೆ. ಹೀಗಾಗಿ ಇತರ ವಸ್ತುಗಳಿಗಿಂತ ನಿರ್ಮಾಣದಲ್ಲಿ ಬಳಸಲು ಇದು ಉತ್ತಮ ಆಯ್ಕೆಯಾಗಿದೆ. ಕಲ್ಲಿನ ಸಂಕುಚಿತ ಶಕ್ತಿಯು ಹೆಚ್ಚಿನ ಭಾರವನ್ನು ಪುಡಿ ಆಗದೆ ಅಥವಾ ಕ್ರ್ಯಾಕ್ ಆಗದಂತೆ ತಡೆದುಕೊಳ್ಳಬಲ್ಲದು. ಕಲ್ಲಿನ ಶಕ್ತಿಯು ಗಾರೆಯ ಬಲದಿಂದ ಹೆಚ್ಚು ಪ್ರಭಾವಿತವಾಗಿರುತ್ತದೆ.
ಇದು ಕಲ್ಲಿನ ಕಲ್ಲಿನ ಪ್ರಮುಖ ಪ್ರಯೋಜನಗಳಲ್ಲಿ ಒಂದಾಗಿದೆ, ವರ್ಷವಿಡೀ, ಕಟ್ಟಡಗಳು ವಿವಿಧ ರೀತಿಯ ಹವಾಮಾನಕ್ಕೆ ಒಳಗಾಗುತ್ತವೆ. ಮಳೆ, ಆಲಿಕಲ್ಲು ಮತ್ತು ಹಿಮದಂತಹ ಹವಾಮಾನ ಅಂಶಗಳಿಂದ ಉಂಟಾಗುವ ಯಾವುದೇ ಪರಿಣಾಮವನ್ನು ತಡೆದುಕೊಳ್ಳುವ ಸಾಮರ್ಥ್ಯವನ್ನು ಕಲ್ಲಿನ ಗಾರೆ ಕೆಲಸ ಹೊಂದಿದೆ. ಕಲ್ಲು ಮಳೆಗಾಲದಲ್ಲಿ ನೀರನ್ನು ಹೀರಿಕೊಳ್ಳುವುದಿಲ್ಲ, ಹೀಗಾಗಿ ತೇವದಿಂದ ಉಂಟಾಗುವ ಯಾವುದೇ ಸಮಸ್ಯೆಗಳು ಆಗುವುದಿಲ್ಲ.
ಕಲ್ಲಿನ ಗಾರೆ ಕೆಲಸವು ಬೇರೆ ನಿರ್ಮಾಣ ವಿಧಾನಗಳಿಗಿಂತ ಹೆಚ್ಚಿನ ಪ್ರಯೋಜನವನ್ನು ಹೊಂದಿದೆ. ಯಾಕೆಂದರೆ ಕಲ್ಲು ಎಲ್ಲಕ್ಕಿಂತ ಹೆಚ್ಚು ಸವೆತವನ್ನು ತಡೆದುಕೊಳ್ಳುತ್ತದೆ. ಪೀಠೋಪಕರಣಗಳನ್ನು ಸರಿಸುವುದರಿಂದ ಕಲ್ಲಿನ ಮೇಲೆ ಸಣ್ಣ ಗೀಚು ಮತ್ತು ಸೀಳು ಉಂಟಾಗಬಹುದು, ಅದು ಗೋಡೆಗಳ ಮೇಲೆ ಡೆಂಟ್ಗಳು ಉಂಟಾಗುವಂತೆ ಮಾಡಬಹುದು. ಅಂತಹ ಸಮಸ್ಯೆಗಳು ಕಲ್ಲಿನಲ್ಲಿ ಆಗುವುದಿಲ್ಲ. ಇದು ಬಾಗುವುದು, ಸುರಳಿ, ಸೀಳುವುದು, ಡೆಂಟಿಂಗ್ ಮತ್ತು ಉಬ್ಬುವಿಕೆಗೆ ಕೂಡ ನಿರೋಧಕವಾಗಿದೆ. ಈ ಎಲ್ಲವೂ ಸುದೀರ್ಘ ಬಾಳಿಕೆ ಬರಲು ಕಾರಣವಾಗಿವೆ.
ಕಲ್ಲಿನ ಗಾರೆ ಕೆಲಸದಿಂದ ನಿರ್ಮಿಸಲಾದ ಕಟ್ಟಡಗಳಿಗೆ ಅವುಗಳ ಸುದೀರ್ಘ ಬಾಳಿಕೆ ಕಾರಣದಿಂದಾಗಿ ಅತ್ಯಂತ ಕಡಿಮೆ ನಿರ್ವಹಣೆ ಸಾಕಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಇಟ್ಟಿಗೆ ಕಲ್ಲಿನ ಗಾರೆಗೆ ಪ್ಲಾಸ್ಟರ್ ಮಾಡುವುದು ಮತ್ತು ಬಣ್ಣ ತೊಳೆಯುವ ಅಗತ್ಯವಿರುತ್ತದೆ.
ಕಲ್ಲಿನ ಗಾರೆ ಕೆಲಸ ಎಂದರೇನು ಮತ್ತು ಸಾಮಾನ್ಯ ಕಲ್ಲಿನ ಗಾರೆ ಕೆಲಸದಲ್ಲಿ ನೀವು ಮಾಡಬಾರದ ತಪ್ಪುಗಳ ಕುರಿತು ನೀವು ತಿಳಿದುಕೊಳ್ಳಬೇಕಾಗಿರುವುದು ಇಲ್ಲಿದೆ. ಸೂಕ್ತ ಕಲ್ಲುಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಭದ್ರವಾದ ಫೌಂಡೇಶನ್ ಹಾಕುವವರೆಗೆ, ಕಲ್ಲು ಮತ್ತು ಕಲ್ಲಿನ ಗಾರೆ ಕೆಲಸದ ಬಗ್ಗೆ ಆಲೋಚನೆ ಮಾಡುವಾಗ ಮಾಡಬಾರದ 8 ತಪ್ಪುಗಳ ಕುರಿತು ನಮ್ಮ ಮಾರ್ಗದರ್ಶಿ ಮಾಹಿತಿ ನೀಡಿದೆ. ಹೀಗೆ ಮಾಡಿದಲ್ಲಿ ನಿಮ್ಮ ಯೋಜನೆ ಕಾಲದೊಂದಿಗೆ ದೃಢವಾಗಿ ಉಳಿಯುತ್ತದೆ.