1. ಯೋಜನೆಯ ಚರ್ಚೆಗಳು:
ಎಲ್ಲಾ ಭೇಟಿಗಳಲ್ಲಿ ಆರ್ಕಿಟೆಕ್ಟ್ ಅನ್ನು ಸೇರಿಸಿಕೊಳ್ಳುವ ಮೂಲಕ ಅವರೊಂದಿಗೆ ಯೋಜನೆಯ ವಿವಿಧ ಚರ್ಚೆಗಳನ್ನು ನಡೆಸಬೇಕು. ಈ ಚರ್ಚೆಗಳಲ್ಲಿ ಗ್ರಾಹಕರ ಆರಂಭಿಕ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದನ್ನು ಒಳಗೊಂಡಿರುತ್ತದೆ. ಯೋಜನೆಯ ನಿರೀಕ್ಷೆಗಳನ್ನು ಎಚ್ಚರಿಕೆಯಿಂದ ಗಮನಿಸಬೇಕು. ಗ್ರಾಹಕರ ಅವಶ್ಯಕತೆಗಳನ್ನು ಆಧರಿಸಿ ಬಜೆಟ್ ಅನ್ನು ನಿರ್ಧರಿಸಬಹುದು. ಆರ್ಕಿಟೆಕ್ಟ್‌ರೊಂದಿಗೆ ನಡೆಸಬೇಕಾದ ಇತರ ಚರ್ಚೆಗಳೆಂದರೆ:
ಎ. ಸೈಟ್‌ನ ಮಿತಿಗಳು ಮತ್ತು ಸಾಮರ್ಥ್ಯಗಳು
ಬಿ. ಹಣಕಾಸಿನ ಖರ್ಚು-ವೆಚ್ಚಗಳು ಮತ್ತು ಗುರಿಗಳನ್ನು ಚರ್ಚಿಸುವುದು.
ಸಿ. ಅವಶ್ಯಕತೆಯ ಆಧಾರದ ಮೇಲೆ ಬೇರೊಂದು ಸೈಟ್ ಅಥವಾ ಕಟ್ಟಡದ ಆಯ್ಕೆ.
ಡಿ. ಸಂವಹನವನ್ನು ಸುಲಭಗೊಳಿಸಲು ಯೋಜಿಸಲಾದ ಮತ್ತು ಸಿದ್ಧಪಡಿಸಿದ ಕಾರ್ಯವಿಧಾನಗಳನ್ನು ಸಂಯೋಜಿತವಾಗಿರಿಸಲಾಗುತ್ತದೆ.
2. ಡ್ರಾಯಿಂಗ್‌ಗಳು:
ನಿರ್ಮಾಣ ಯೋಜನೆಗಳಲ್ಲಿ ಆರ್ಕಿಟೆಕ್ಟ್‌ಗಳ ದೊಡ್ಡ ಪಾತ್ರವೆಂದರೆ ವಿನ್ಯಾಸಗಳ ಸ್ಕೆಚ್ ಮಾಡುವುದು. ಅವರು ಮನೆಗಳು, ಕಚೇರಿಗಳು, ಶಾಪಿಂಗ್ ಮಾಲ್‌ಗಳು ಮುಂತಾದವುಗಳ ಡ್ರಾಯಿಂಗ್ ಮತ್ತು ವಿನ್ಯಾಸದಲ್ಲಿ ಪರಿಣಿತಿಯನ್ನು ಹೊಂದಿರುತ್ತಾರೆ. ಗ್ರಾಹಕರ ಪರಿಕಲ್ಪನೆಯ ವಿನ್ಯಾಸಗಳನ್ನೂ ಸಹ ಅವರು ರಚಿಸಬಲ್ಲರು. ನಿರ್ಮಾಣ ನಡೆಯುತ್ತಿರುವ ಸ್ಥಳವನ್ನು ಅವಲಂಬಿಸಿ ಎಲ್ಲಾ ಡ್ರಾಯಿಂಗ್‌ಗಳು ವಿವಿಧ ನಿರ್ಮಾಣ ಕಾನೂನುಗಳ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ಪೂರೈಸುವಂತಿರಬೇಕು. ಅಂತಹ ನಿಯಮಗಳಲ್ಲಿ ಅಗ್ನಿಶಾಮಕ ನಿಯಮಗಳು, ಕಟ್ಟಡ ಸಂಹಿತೆಗಳು, ಕಟ್ಟಡ ಶೈಲಿಗಳು, ನಿರ್ಮಾಣ ಸ್ಥಳದ ರಚನೆಗಳು ಮತ್ತು ಪಿನ್ ಕೋಡ್‌ಗಳು ಸೇರಿವೆ.
3. ವೆಚ್ಚದ ಅಂದಾಜು:
ವೆಚ್ಚವನ್ನು ಅಂದಾಜಿಸುವುದು ಆರ್ಕಿಟೆಕ್ಟ್‌ನ ಮತ್ತೊಂದು ಪ್ರಮುಖ ಪಾತ್ರವಾಗಿದೆ. ವಿನ್ಯಾಸಗಳನ್ನು ನಿರ್ಮಿಸುವ ಮತ್ತು ಕೆಲಸದ ವಿವಿಧ ಹಂತಗಳನ್ನು ಅರ್ಥಮಾಡಿಕೊಳ್ಳುವುದರ ಜೊತೆಗೆ ಆರ್ಕಿಟೆಕ್ಟ್ ಯೋಜನೆಯ ಬಜೆಟ್ ಅನ್ನೂ ಸಹ ರಚಿಸಲು ಸಹಾಯ ಮಾಡಬಹುದು. ಒಂದು ವೇಳೆ ಬಜೆಟ್ ಅನ್ನು ಗ್ರಾಹಕರು ಹೊಂದಿರದೇ ಇದ್ದಲ್ಲಿ ಆರ್ಕಿಟೆಕ್ಟ್ ಖಂಡಿತವಾಗಿಯೂ ಅವರಿಗೆ ಮುಂಚಿತವಾಗಿ ಎಚ್ಚರಿಕೆ ನೀಡಬಹುದು.
4. ನಿರ್ಮಾಣ ಒಪ್ಪಂದಗಳು:
ಆರ್ಕಿಟೆಕ್ಟ್‌ಗಳು ನಿರ್ಮಾಣದ ವಿವಿಧ ಚಟುವಟಿಕೆಗಳಿಗೆ ಗುತ್ತಿಗೆದಾರರನ್ನು ಆಯ್ಕೆ ಮಾಡಬಹುದು. ಟೆಂಡರ್ ಸ್ವೀಕರಿಸಿದ ನಂತರ ಆರ್ಕಿಟೆಕ್ಟ್ ಟೆಂಡರ್ ವಿಶ್ಲೇಷಣೆ ವರದಿಯನ್ನು ತಯಾರಿಸುತ್ತಾರೆ. ಆರ್ಕಿಟೆಕ್ಟ್ ತೊಡಗಿರುವ ಕೆಲಸದ ಪ್ರಕಾರವು ಅವರೊಡೆನೆ ಮಾಡಿಕೊಂಡಿರುವ ಒಪ್ಪಂದವನ್ನು ಅವಲಂಬಿಸಿರುತ್ತದೆ. ಗ್ರಾಹಕರೊಂದಿಗಿನ ಒಪ್ಪಂದವು ಆರ್ಕಿಟೆಕ್ಟ್ ಯಾವ ಕಾರ್ಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಪೂರ್ಣಗೊಂಡ ಕೆಲಸಕ್ಕೆ ಸಂಬಂಧಿಸಿದ ಪಾವತಿಗಳನ್ನು ಪರಿಶೀಲಿಸಿ ತಿಂಗಳ ಕೊನೆಯಲ್ಲಿ ಇನ್ವಾಯ್ಸ್‌ಗಳನ್ನು ಪರಿಶೀಲಿಸುವುದರಲ್ಲಿ ಆರ್ಕಿಟೆಕ್ಟ್ ಪಾತ್ರವು ಇರುತ್ತದೆ.
5. ಗುತ್ತಿಗೆದಾರರನ್ನು ನೇಮಿಸಿಕೊಳ್ಳುವುದು:
ಆರ್ಕಿಟೆಕ್ಟ್ ಇತರ ನಿರ್ಮಾಣ ವೃತ್ತಿಪರರು ಮತ್ತು ಗುತ್ತಿಗೆದಾರರೊಂದಿಗೆ ಸೇರಿ ಕೆಲಸ ಮಾಡಬೇಕಿರುತ್ತದೆ. ಆದ್ದರಿಂದ ಸೈಟ್‌ನಲ್ಲಿ ಕೆಲಸ ಮಾಡುವ ಗುತ್ತಿಗೆದಾರರನ್ನು ಆಯ್ಕೆ ಮಾಡುವುದು ಆರ್ಕಿಟೆಕ್ಟ್‌ಗೆ ಒಳ್ಳೆಯದು. ಇದರಿಂದ ಕೆಲಸ ಮಾಡಲು ಸರಿಯಾದ ಪರಿಣಿತರನ್ನು ಆರ್ಕಿಟೆಕ್ಟ್ ಆಯ್ಕೆ ಮಾಡುವುದರಿಂದ ಗ್ರಾಹಕರಿಗೆ ಸುಲಭವಾಗುತ್ತದೆ.
6. ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳೊಂದಿಗೆ ಕೆಲಸ ಮಾಡುವುದು:
ಆರ್ಕಿಟೆಕ್ಟ್ ತಾವು ಕೆಲಸ ಮಾಡಲು ಬಯಸುವ ಸಮರ್ಪಕವಾದ ಜನರನ್ನು ನೇಮಿಸಿಕೊಂಡ ನಂತರ, ವಿನ್ಯಾಸವನ್ನು ಅರ್ಥ ಮಾಡಿಕೊಳ್ಳುವ, ಕೆಲಸದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ಮತ್ತು ವಿನ್ಯಾಸವನ್ನು ಉತ್ತಮವಾಗಿ ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ ಕೆಲಸದ ಸಂಬಂಧವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಆರ್ಕಿಟೆಕ್ಟ್‌ನ ಈ ಪಾತ್ರದಿಂದಾಗಿ ಪ್ಲಂಬರ್‌ಗಳು, ಎಲೆಕ್ಟ್ರಿಷಿಯನ್‌ಗಳು, ಇಂಜಿನಿಯರ್‌ಗಳು ಮತ್ತು ಇತರ ಪರಿಣಿತರೊಂದಿಗೆ ಒಟ್ಟುಗೂಡಿ ಸರಿಯಾಗಿ ಕೆಲಸವನ್ನು ಮಾಡಲು ಅನುವು ಮಾಡಿಕೊಡುತ್ತದೆ.
7. ಸೃಜನಾತ್ಮಕತೆ ಮತ್ತು ಹೊಸ ಐಡಿಯಾಗಳು:
ಆರ್ಕಿಟೆಕ್ಟ್‌ನ ಕೆಲಸವು ಕೇವಲ ಪ್ರತಿ ಕಟ್ಟಡವನ್ನು ಇನ್ನೊಂದನ್ನು ಹೋಲುವಂತೆ ನಿರ್ಮಿಸುವುದಲ್ಲ. ಯೋಜನೆಯ ಸೌಂದರ್ಯ ಮತ್ತು ಅದು ಹೇಗೆ ಗೋಚರಿಸುತ್ತದೆ ಎಂಬುದರ ಬಗ್ಗೆಯೂ ಆಲೋಚಿಸಬೇಕಿರುತ್ತದೆ. ಕೆಲವು ಕಟ್ಟಡಗಳು ಕೆಲವು ಆಕಾರಗಳಂತೆ ಕಾಣುವಂತೆ ಮಾಡಬೇಕಿರುತ್ತದೆ ಮತ್ತು ಈ ಕೆಲಸಕ್ಕಾಗಿ ಮನಸೂರೆಗೊಳ್ಳುವ ಹೊಸ ವಿನ್ಯಾಸಗಳನ್ನು ಸಲಹೆ ಮಾಡುವುದು ಆರ್ಕಿಟೆಕ್ಟ್‌ನ ಕೆಲಸವಾಗಿರುತ್ತದೆ.
8. ಗ್ರಾಹಕರೊಂದಿಗೆ ಕೆಲಸ ಮಾಡುವುದು:
ಆರ್ಕಿಟೆಕ್ಟ್‌ಗಳು ಗ್ರಾಹಕರ ಪರವಾಗಿ ಕೆಲಸ ಮಾಡಬೇಕು ಮತ್ತು ನಿರ್ಮಾಣ ನಡೆಯುತ್ತಿರುವ ರಾಜ್ಯ ಮತ್ತು ಸ್ಥಳಕ್ಕೆ ಅಗತ್ಯವಿರುವ ಪರವಾನಗಿಗಳನ್ನು ಪಡೆಯಬೇಕು. ಅವರು ಸರ್ಕಾರದ ಅನುಮೋದನೆಗಾಗಿ ವಿನ್ಯಾಸದ ನೀಲನಕ್ಷೆಯನ್ನು ಸಲ್ಲಿಸಬೇಕು.
9. ಮೇಲ್ವಿಚಾರಣೆ:
ಎಲ್ಲಕ್ಕಿಂತ ಹೆಚ್ಚಾಗಿ, ಯೋಜನೆಯ ಒಟ್ಟಾರೆ ನಿರ್ಮಾಣದಲ್ಲಿ ಆರ್ಕಿಟೆಕ್ಟ್‌ಗಳು ಮೇಲ್ವಿಚಾರಣಾ ಪಾತ್ರವನ್ನು ವಹಿಸುತ್ತಾರೆ. ಅದರ ವಿನ್ಯಾಸವು ಅವರದ್ದೇ ಆಗಿರುವುದ್ದರಿಂದ, ನಿಖರವಾಗಿ ಏನು ಬೇಕು, ಏನು ತಪ್ಪಾಗಬಹುದು ಮತ್ತು ಅದನ್ನು ಹೇಗೆ ಸರಿಪಡಿಸಬೇಕು ಎಂದು ಅವರಿಗೆ ತಿಳಿದಿರುತ್ತದೆ.