ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಅಡಿಪಾಯಗಳನ್ನು ನಿರ್ಮಿಸಲು ಮಣ್ಣಿನ ವಿಧಗಳು

ಯಾವುದೇ ಕಟ್ಟಡದ ಅಡಿಪಾಯವು ಅದು ನಿಂತಿರುವ ನೆಲದಷ್ಟೇ ಬಲವಾಗಿರುತ್ತದೆ. ಕಟ್ಟಡದ ಅಡಿಪಾಯವನ್ನು ಹಾಕುವಾಗ ವಿವಿಧ ರೀತಿಯ ಮಣ್ಣು ಮತ್ತು ಅವುಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ. ಅಡಿಪಾಯವನ್ನು ನಿರ್ಮಿಸಲು ಬಳಸುವ ಪ್ರಮುಖ ಮಣ್ಣಿನ ವಿಧಗಳು ಮತ್ತು ಅವುಗಳ ವಿಶಿಷ್ಟ ಲಕ್ಷಣಗಳನ್ನು ಅನ್ವೇಷಿಸೋಣ ಬನ್ನಿ.

Share:


• ಮಣ್ಣಿನ ಪ್ರಕಾರವು ನಿರ್ಮಾಣ ಯೋಜನೆಗಳ ಸ್ಥಿರತೆಯ ಮೇಲೆ ಅತೀವವಾಗಿ ಪರಿಣಾಮ ಬೀರುತ್ತದೆ.

 

• ಮರಳು ಮತ್ತು ಕಳಿಮಣ್ಣುಗಳು ಅವುಗಳ ನೀರು ನಿರ್ವಹಣೆ ಮತ್ತು ಸ್ಥಿರತೆಯಿಂದಾಗಿ ಅಡಿಪಾಯವನ್ನು ನಿರ್ಮಿಸಲು ಅತ್ಯುತ್ತಮವಾಗಿದೆ.

 

• ಜೇಡಿಮಣ್ಣು ಮತ್ತು ಪೀಟ್ ಮಣ್ಣುಗಳು, ಅನುಕ್ರಮವಾಗಿ ಅವುಗಳ ಉಬ್ಬುವಿಕೆ ಮತ್ತು ಉನ್ನತ ನೀರು ಹಿಡಿಯುವ ಗುಣಗಳಿಂದಾಗಿ ಅದಕ್ಕೆ ಸೂಕ್ತವಲ್ಲ.

 

• ಅತ್ಯುತ್ತಮ ಮಣ್ಣನ್ನು ಆಯ್ಕೆ ಮಾಡಲು ನಿರ್ಮಾಣವನ್ನು ಪ್ರಾರಂಭಿಸುವ ಮೊದಲೇ ಸೈಟ್ ವಿಶ್ಲೇಷಣೆ ಮತ್ತು ಮಣ್ಣಿನ ಪರೀಕ್ಷೆ ಮಾಡಿಸುವುದು ಬಹಳ ಮುಖ್ಯ.

 


ಕಟ್ಟಡ ನಿರ್ಮಾಣದ ವಿಷಯಕ್ಕೆ ಬಂದಾಗ, ಮಣ್ಣಿನ ಪ್ರಕಾರಗಳನ್ನು ಪರಿಗಣಿಸುವುದು ವಿನ್ಯಾಸಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಎಲ್ಲಾ ರೀತಿಯ ಕಟ್ಟಡಗಳು, ಅದು ಮನೆಯಿರಲಿ, ಅಪಾರ್ಟ್ಮೆಂಟ್ ಕಟ್ಟಡವಿರಲಿ ಅಥವಾ ಒಂದು ಸ್ವತಂತ್ರ ಬಂಗಲೆಯೇ ಆಗಿರಲಿ ಅದು ಮಣ್ಣಿನ ಆಧಾರವನ್ನು ಹೊಂದಿಯೇ ಇರುತ್ತದೆ. ಈ ಬ್ಲಾಗ್‌ನಲ್ಲಿ, ನಿರ್ಮಾಣದಲ್ಲಿ ಯಾವ ಮಣ್ಣನ್ನು ಬಳಸಬೇಕು ಎಂಬುದರ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವಂತೆ ವಿವಿಧ ರೀತಿಯ ಮಣ್ಣುಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಪಡೆಯುತ್ತೀರಿ.


ಮನೆಯ ಅಡಿಪಾಯ ಹಾಕಲು ಉತ್ತಮವಾದ ಮಣ್ಣು ಯಾವುದು?



ಎಲ್ಲಾ ಕಟ್ಟಡಗಳನ್ನು ಬಲವಾದ ಮತ್ತು ಸ್ಥಿರವಾದ ಮಣ್ಣಿನಲ್ಲಿ ನಿರ್ಮಿಸಬೇಕಿರುತ್ತದೆ. ಮಣ್ಣಿನ ಸದೃಢತೆ ಅದರ ಭೌತಿಕ ಗುಣಲಕ್ಷಣಗಳನ್ನು ಅವಲಂಬಿಸಿರುತ್ತದೆ. ಕಟ್ಟಡದ ಅಡಿಯಲ್ಲಿರುವ ಮಣ್ಣು ಸಾಕಷ್ಟು ಬಲವಾಗಿರದಿದ್ದರೆ ಅದು ಅಡಿಪಾಯ ಬಿರುಕು ಬಿಡುವುದಕ್ಕೆ, ಒಡೆಯುವುದಕ್ಕೆ ಕಾರಣವಾಗಬಹುದು ಮತ್ತದು ಕಟ್ಟಡ ಕುಸಿಯುವುದಕ್ಕೆ ಕಾರಣವಾಗಬಹುದು.

 

ಅಡಿಪಾಯವನ್ನು ನಿರ್ಮಿಸಲು ವಿವಿಧ ರೀತಿಯ ಮಣ್ಣು ಮತ್ತು ಅವುಗಳ ಗುಣಲಕ್ಷಣಗಳನ್ನು ಕೆಳಗೆ ನೀಡಲಾಗಿದೆ ಇದು ನಿಮಗೆ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ:


1) ಮರಳು ಮಣ್ಣಿನ ಮೇಲೆ ಅಡಿಪಾಯ



ಕಟ್ಟಡ ನಿರ್ಮಾಣದಲ್ಲಿರುವ ವಿವಿಧ ರೀತಿಯ ಮಣ್ಣುಗಳಲ್ಲಿ ಮರಳು/ಜಲ್ಲಿಕಲ್ಲುಗಳು ಅತಿ ದೊಡ್ಡದಾದ ಕಣಗಳನ್ನು ಹೊಂದಿರುತ್ತವೆ. ದೊಡ್ಡ ಕಣಗಳ ಕಾರಣದಿಂದಾಗಿ, ಈ ರೀತಿಯ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವುದಿಲ್ಲ ಮತ್ತು ನೀರನ್ನು ತ್ವರಿತವಾಗಿ ಹೊರಹಾಕಲು ಅನುವು ಮಾಡಿಕೊಡುತ್ತದೆ ಹಾಗಾಗಿ ಇದು ಕಟ್ಟಡಗಳಿಗೆ ಸೂಕ್ತವಾಗಿರುತ್ತದೆ. ಒತ್ತಿ ಸಂಕುಚಿಸಿದ ಮರಳು/ಜಲ್ಲಿಕಲ್ಲು ಇನ್ನಷ್ಟು ಹೆಚ್ಚು ಸ್ಥಿರತೆಯನ್ನು ನೀಡುತ್ತದೆ ಹಾಗಾಗಿ ಅಡಿಪಾಯವನ್ನು ನಿರ್ಮಿಸಲು ಅಡಿಕ ಸೂಕ್ತವಾಗಿರುತ್ತದೆ.


2) ಜೇಡಿಮಣ್ಣಿನ ಮೇಲೆ ಅಡಿಪಾಯ



ಕಟ್ಟಡಗಳ ಅಡಿಪಾಯ ಹಾಕುವ ವಸ್ತುವಾಗಿ ಬಳಸಲು ಜೇಡಿಮಣ್ಣು ಸೂಕ್ತವಲ್ಲ. ಅದು ಬೇರೆಬೇರೆ ಋತುಗಳಲ್ಲಿ ಸಂಕೋಚನ-ವಿಕಚನಗಳಿಗೆ ಒಳಗಾಗುತ್ತದೆ ಅದರ ಈ ಪ್ರವೃತ್ತಿಯು ಕಟ್ಟಡದ ಅಡಿಪಾಯದಲ್ಲಿ ಬಿರುಕುಗಳು ಅಥವಾ ಸೀಳುಗಳಿಗೆ ಕಾರಣವಾಗುತ್ತದೆ. ಸಾಕಷ್ಟು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಜೇಡಿಮಣ್ಣಿನಲ್ಲಿ ಹಾಕಲಾಗುವ ಅಡಿಪಾಯ ಸಾಮಾನ್ಯವಾಗಿ ಬಹಳ ಆಳವಾಗಿರುತ್ತದೆ. ಜೇಡಿಮಣ್ಣಿನ ಸಣ್ಣ ಕಣಗಳು ನೀರನ್ನು ದೀರ್ಘಕಾಲ ಹಿಡಿದಿಟ್ಟುಕೊಳ್ಳುತ್ತವೆ. ತೀವ್ರತರದ ಬದಲಾವಣೆಗಳು ಅಡಿಪಾಯದ ಮೇಲೆ ಗಣನೀಯ ಪ್ರಮಾಣದ ಒತ್ತಡವನ್ನು ಉಂಟುಮಾಡಬಹುದು.


3) ಕಳಿಮಣ್ಣಿನ ಫೌಂಡೇಶನ್



ಕಳಿಮಣ್ಣು ನಿರ್ಮಾಣಕ್ಕೆ ಲಭ್ಯವಿರುವ ಮಣ್ಣುಗಳ ಅತ್ಯುತ್ತಮ ವಿಧಗಳಲ್ಲಿ ಒಂದಾಗಿದೆ. ಇದು ಮರಳು, ಹೂಳು ಮತ್ತು ಜೇಡಿಮಣ್ಣಿನ ಒಂದು ಯುಕ್ತ ಸಂಯೋಜನೆಯನ್ನು ಹೊಂದಿರುತ್ತದೆ. ಇದು ಅಡಿಪಾಯು ಗಟ್ಟಿಯಾಗಿ ರೂಪುಗೊಳ್ಳಲು ಅನುವು ಮಾಡಿಕೊಡುತ್ತದೆ. ಕಳಿಮಣ್ಣು ನೀರಿನ ಸಂಪರ್ಕಕ್ಕೆ ಬಂದಾಗ ಕುಗ್ಗುವುದಿಲ್ಲ, ಹಿಗ್ಗುವುದಿಲ್ಲ ಅಥವಾ ಸ್ಥಾನಪಲ್ಲಟಗೊಳ್ಳುವುದಿಲ್ಲ. ಕಳಿಮಣ್ಣಿನ ಏಕೈಕ ಲೋಪವೆಂದರೆ ಈ ರೀತಿಯ ಮಣ್ಣಿನ ಸಂಯೋಜನೆಯಲ್ಲಿ ಕೊಳೆಯದೇ ಉಳಿದ ಪದಾರ್ಥಗಳಿರುವ ಸಾಧ್ಯತೆಯಿದ್ದು ಅವನ್ನು ನಿರ್ಮಾಣದ ಮೊದಲು ಸೋಸಿ ತೆಗೆಯಬೇಕು.


4) ಪೀಟ್ ಅಥವಾ ಇದ್ದಿಲು-ಜೌಗುಮಣ್ಣಿನ ಅಡಿಪಾಯ



ಪೀಟ್ ಮಣ್ಣು ಎಂದರೆ ಕೆಸರುಗದ್ದೆ ಮತ್ತು ಜೌಗು ಪ್ರದೇಶಗಳಂತಹ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದು ಪ್ರಾಥಮಿಕವಾಗಿ ಸಾವಯವ ಪದಾರ್ಥವನ್ನು ಮತ್ತು ಸಸ್ಯರಾಶಿಯನ್ನು ಒಳಗೊಂಡಿರುತ್ತದೆ. ಇದು ಹೆಚ್ಚಿನ ಪ್ರಮಾಣದ ನೀರನ್ನು ಉಳಿಸಿಕೊಳ್ಳುತ್ತದೆ, ಹಾಗಾಗಿ ನಿರ್ಮಾಣಕ್ಕೆ ಸೂಕ್ತವಲ್ಲ. ಒಂದು ಪೀಟ್‌ನ ಅಡಿಪಾಯ ಬಿರುಕುಗಳಿಗೆ ಒಳಗಾಗುವ ಹೆಚ್ಚಿನ ಅಪಾಯದಲ್ಲಿರುತ್ತದೆ ಮತ್ತು ಜರುಗಿ ಸ್ಥಾನ ಬದಲಾಯಿಸಬಹುದು ಮತ್ತು ಕಡಿಮೆ ಭಾರ-ಹೊರುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ರೀತಿಯ ಅಡಿಪಾಯದ ಮೇಲೆ ನೀವು ಕಟ್ಟಡವನ್ನು ನಿರ್ಮಿಸಿದರೆ, ಹಾನಿಯ ಅಪಾಯವು ತುಂಬಾ ಹೆಚ್ಚು.


5) ಕಲ್ಲು ಮಣ್ಣಿನ ಮೇಲೆ ಅಡಿಪಾಯ

ಸುಣ್ಣದ ಕಲ್ಲು, ಗಟ್ಟಿ ಬಳಪ, ಮರಳುಗಲ್ಲು, ಇತ್ಯಾದಿಗಳೆಲ್ಲವೂ ಉತ್ತಮ ಭಾರ-ಹೊರುವ ಸಾಮರ್ಥ್ಯಗಳನ್ನು ಹೊಂದಿದ್ದು ಅಡಿಪಾಯಕ್ಕೆ ಸೂಕ್ತವಾದ ಸಾಮಗ್ರಿಗಳಾಗಿವೆ. ನೀರಿನಿಂದ ಉಂಟಾಗುವ ಹಾನಿಗೆ ಬಂದಾಗ ಕಲ್ಲುತಳಪಾಯವು ಅತ್ಯಂತ ಹೆಚ್ಚು ಸ್ಥಿರ ಹಾಗೂ ಪ್ರತಿರೋಧಕತೆಯುಳ್ಳದ್ದಾಗಿರುತ್ತದೆ. ಕಲ್ಲುತಳಪಾಯದ ಮೇಲೆ ಕಟ್ಟಡ ನಿರ್ಮಿಸುವಾಗ ನೆನಪಿಡಬೇಕಾದ ಪ್ರಮುಖ ವಿಷಯವೆಂದರೆ ಅದು ಚೆನ್ನಾಗಿ ಸಮತಟ್ಟಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು.


ಮಣ್ಣು ಮತ್ತು ಅಡಿಪಾಯಗಳ ವಿಷಯವಾಗಿ ಪರಿಗಣಿಸಬೇಕಾದ ಸಂಗತಿಗಳು

ಇಷ್ಟೊಂದು ತರಹೇವಾರಿ ಆಯ್ಕೆಗಳೊಂದಿಗೆ, ಕಟ್ಟಡ ನಿರ್ಮಾಣದಲ್ಲಿ ಮಣ್ಣಿನ ವಿಧಗಳನ್ನು ಪರಿಗಣಿಸುವಾಗ ನೆನಪಿನಲ್ಲಿಡಬೇಕಾದ ಕೆಲವು ಸಂಗತಿಗಳಿವೆ. ಪ್ರತಿಯೊಂದು ಕಟ್ಟಡದ ಅಡಿಪಾಯವು ಬಲವಾಗಿರಬೇಕು, ಸಮರ್ಥವಾಗಿರಬೇಕು ಮತ್ತು ಉತ್ತಮವಾಗಿ ಕಟ್ಟಲ್ಪಟ್ಟಿರಬೇಕು. ಬಳಸಲಾದ ಮಣ್ಣು ಅದರ ಗುಣಲಕ್ಷಣಗಳನ್ನು ಅವಲಂಬಿಸಿ ಅಡಿಪಾಯದ ಮೇಲೆ ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಸಾಮಾನ್ಯವಾಗಿ, ಹೆಚ್ಚು ಕಲ್ಲುಗಳು, ಮರಳು ಮತ್ತು ಜಲ್ಲಿಕಲ್ಲುಗಳನ್ನು ಹೊಂದಿರುವ ಮಣ್ಣು ಬಲವಾಗಿರುತ್ತದೆ ಮತ್ತು ಬದಲಾಗುವ ಋತುಗಳನ್ನು ತಡೆದು ನಿಲ್ಲಬಲ್ಲದಾಗಿರುತ್ತದೆ. ನೀರಿನ ಸಂಪರ್ಕಕ್ಕೆ ಬಂದಾಗ ಹೆಚ್ಚು ಹಿಗ್ಗದ ಅಥವಾ ಕುಗ್ಗದ ಮಣ್ಣನ್ನು ಆರಿಸಿಕೊಳ್ಳಿ. ಸಾವಯವ ಪದಾರ್ಥವನ್ನು ಹೊಂದಿರುವ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುವ ಪ್ರವೃತ್ತಿಯನ್ನು ಹೊಂದಿದ್ದು ಇದು ಅಡಿಪಾಯದ ಸ್ಥಾನಪಲ್ಲಟ ಮತ್ತು ಬಿರುಕುಗಳಿಗೆ ಕಾರಣವಾಗಬಹುದು. ನಿರ್ಮಾಣಕ್ಕೆ ಉತ್ತಮವೆನಿಸುವ ಮಣ್ಣುಗಳು ಸಾಮಗ್ರಿಗಳು ತುಕ್ಕು ಹಿಡಿಯುವುದನ್ನು ತಡೆಯಲು ಸಮತೋಲಿತ ರಸಾಯನಿಕ ಸಂಯೋಜನೆಯನ್ನು ಹೊಂದಿರಬೇಕು.




ಕೊನೆಯಲ್ಲಿ, ಅಡಿಪಾಯವನ್ನು ನಿರ್ಮಿಸಲು ಸರಿಯಾದ ರೀತಿಯ ಮಣ್ಣಿನ ಆಯ್ಕೆಯು ಯಾವುದೇ ಕಟ್ಟಡ ರಚನೆಯ ಸ್ಥಿರತೆ ಮತ್ತು ದೀರ್ಘಾಯುಷ್ಯವನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ನಿರ್ಣಾಯಕ ಕ್ರಮವಾಗಿದೆ. ಪ್ರತಿಯೊಂದು ಪ್ರಮುಖ ಮಣ್ಣಿನ ವಿಧಗಳು ತಮ್ಮದೇ ಆದ ವಿಶಿಷ್ಟ ಗುಣಲಕ್ಷಣಗಳೊಂದಿಗೆ ಬರುತ್ತವೆ ಮತ್ತು ಎಂಜಿನಿಯರ್‌ಗಳು ಮತ್ತು ಬಿಲ್ಡರ್‌ಗಳು ಈ ಗುಣಲಕ್ಷಣಗಳನ್ನು ಅರ್ಥಮಾಡಿಕೊಂಡಿರುವುದು ಅತ್ಯಗತ್ಯ. ಇದು ಹಿಗ್ಗುವ ಜೇಡಿಮಣ್ಣಾಗಿರಲಿ, ಮರಳು ಮಣ್ಣು ಅಥವಾ ಕಳಿಮಣ್ಣು ಆಗಿರಲಿ, ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರಿಯಾದ ಸೈಟ್ ವಿಶ್ಲೇಷಣೆ ಮತ್ತು ಮಣ್ಣಿನ ಪರೀಕ್ಷೆಯು ಅನಿವಾರ್ಯವಾಗಿದೆ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....