ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಮನೆಯ ಹುಸಿ ಮೇಲ್ಛಾವಣಿಯ 8 ವಿಧಗಳು

ನಿಮ್ಮ ಮನೆಗೆ ಎಂಟು ಬಗೆಯ ಫಾಲ್ಸ್ ಸೀಲಿಂಗುಗಳನ್ನು ಕಂಡುಕೊಳ್ಳಿ. ಆಧುನಿಕ ಗೃಹಗಳಿಗೆ ಇವು ಸರಳ, ಸುಂದರ ಮತ್ತು ವಾಸ್ತವಿಕ ಸೀಲಿಂಗ್ ಪರಿಹಾರಗಳಾಗಿವೆ.

Share:


ನೀವು ನಿಮ್ಮ ಮನೆಯನ್ನು ಮರುವಿನ್ಯಾಸಗೊಳಿಸುತ್ತಿದ್ದೀರಾ? ಸೂಕ್ತ ಫಾಲ್ಸ್ ಸೀಲಿಂಗ್ ನಿಮ್ಮ ಮನೆಯ ಅಂದ ಮತ್ತು ಕ್ರಿಯಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಬ್ಲಾಗ್ ಲೇಖನದಲ್ಲಿ ನಾವು ವಿವಿಧ ಬಗೆಯ ಫಾಲ್ಸ್ ಸೀಲಿಂಗ್‍ಗಳ ಜಗತ್ತಿನಲ್ಲಿ ವಿಹರಿಸುತ್ತಾ ಭಿನ್ನ ಅಭಿರುಚಿ ಮತ್ತು ಅಗತ್ಯಗಳಿಗೆ ತಕ್ಕ ಆಯ್ಕೆಗಳನ್ನು ಅನ್ವೇಷಿಸುತ್ತೇವೆ. ಸಾಮಗ್ರಿಗಳ ಆಯ್ಕೆಯಿಂದ ಹಿಡಿದು ಫಾಲ್ಸ್ ಸೀಲಿಂಗ್ ವಿನ್ಯಾಸದ ವಿಧಗಳವರೆಗೆ ಹೇಗೆ ನಿರಾಯಾಸವಾಗಿ ನಿಮ್ಮ ಮನೆಯ ಒಳಾಂಗಣವನ್ನು ಮೇಲ್ದರ್ಜೆಗೆ ಏರಿಸಬಹುದೆಂದು ತಿಳಿದುಕೊಳ್ಳಿ. ನೀವು ನಯವಾದ ಆಧುನಿಕ ಸೊಗಡನ್ನು ಬಯಸುತ್ತಿರಬಹುದು ಅಥವಾ ಸಾಂಪ್ರದಾಯಿಕ ಶೈಲಿಯನ್ನು ಇಷ್ಟಪಡುವವರಾಗಿರಬಹುದು, ನಾವು ಇಲ್ಲಿ ಅದೆಲ್ಲವನ್ನೂ ಒಳಗೊಂಡಿರುವ 8 ಅತ್ಯುತ್ತಮ ಫಾಲ್ಸ್ ಸೀಲಿಂಗ್ ವಿನ್ಯಾಸಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ.

 

 


ಫಾಲ್ಸ್ ಸೀಲಿಂಗ್ ಏಕೆ ಬೇಕು?

ನಿಮ್ಮ ಮನೆಯಲ್ಲಿ ಫಾಲ್ಸ್ ಸೀಲಿಂಗೊಂದನ್ನು ಅಳವಡಿಸುವುದರಿಂದ ಮನೆಯ ಸೌಂದರ್ಯ ಮತ್ತು ಪ್ರಾಯೋಗಿಕ ಲಾಭಗಳಿವೆ. ವಿವಿಧ ಬಗೆಯ ಫಾಲ್ಸ್ ಸೀಲಿಂಗ್ ವಿನ್ಯಾಸಗಳನ್ನು ಪರಿಗಣಿಸುವುದು ಏಕೆ ಅತ್ಯುತ್ತಮ ಆಯ್ಕೆ ಎಂಬುದಕ್ಕೆ ಇಲ್ಲಿ ಕೆಲವು ಮುಖ್ಯ ಕಾರಣಗಳಿವೆ:

 

  • ಸೌಂದರ್ಯ ವೃದ್ಧಿ: ಫಾಲ್ಸ್ ಸೀಲಿಂಗುಗಳ ನಿಮ್ಮ ಕೋಣೆಯ ನೋಟವನ್ನು ಮಾರ್ಪಡಿಸುತ್ತವೆ. ನಿಮ್ಮ ಮನೆಗೆ ಪೂರಕವಾದ ಶುದ್ಧ ಮತ್ತು ಸೊಗಸಾದ ಅಲಂಕಾರವನ್ನು ಈ ಫಾಲ್ಸ್ ಸೀಲಿಂಗುಗಳು ನೀಡುತ್ತವೆ.
 
  • ಉಷ್ಣಾಂಶದ ನಿಯಂತ್ರಣ: ಫಾಲ್ಸ್ ಸೀಲಿಂಗುಗಳು ಮನೆಯ ಉಷ್ಣಾಂಶವನ್ನು ನಿಯಂತ್ರಿಸಲು ನೆರವಾಗುತ್ತವೆ. ಕೋಣೆಯಲ್ಲಿ ಗಾಳಿಯಾಡಲು ಇರುವ ಜಾಗವನ್ನು ಕಡಿಮೆ ಮಾಡಿ ನಿಮ್ಮ ಹವಾನಿಯಂತ್ರಕ (ಎಸಿ) ಮತ್ತು ಹೀಟಿಂಗ್ ಸಿಸ್ಟಮ್ಗಳ  ಕಾರ್ಯಕ್ಷಮತೆಯನ್ನು ಹೆಚ್ಚಿಸಿ ನಿಮ್ಮ ಮನೆಯನ್ನು ವರ್ಷಾವಧಿ ಆರಾಮದಾಯಕವಾಗಿ ಇರಿಸುತ್ತವೆ.
 
  • ಶಕ್ತಿಯ ಮಿತವ್ಯಯ: ಫಾಲ್ಸ್ ಸೀಲಿಂಗ್ ಬಳಕೆಯಿಂದ ಉಷ್ಣಾಂಶವನ್ನು ಹೆಚ್ಚಿಸುವ ಅಥವಾ ತಂಪಾಗಿಸುವ ಜಾಗವು ಕಡಿಮೆಯಾಗುವುದರಿಂದ ನಿಮ್ಮ ಇಂಧನ ಬಿಲ್‍ಗಳ ಹಣ ಉಳಿತಾಯವಾಗುತ್ತದೆ. ಈ ಮಿತವ್ಯಯವು ವಿಶೇಷವಾಗಿ ಉತ್ತಮ ಶಾಖ ನಿರೋಧಕ ಫಾಲ್ಸ್ ಸೀಲಿಂಗ್ ಸಾಮಗ್ರಿಗಳನ್ನು ಬಳಸಿದ ಮನೆಗಳಲ್ಲಿ ಕಾಣಬಹುದು.
 
  • ಶಬ್ಧ ನಿಯಂತ್ರಣ: ವಿವಿಧ ಬಗೆಯ ಫಾಲ್ಸ್ ಸೀಲಿಂಗುಗಳ ಒಂದು ಪ್ರಾಯೋಗಿಕ ಉಪಯೋಗವೆಂದರೆ ಅದರ ಶಬ್ಧ ನಿಯಂತ್ರಣ. ಫಾಲ್ಸ್ ಸೀಲಿಂಗುಗಳು ಹೊರಗಿನ ಗದ್ದಲವನ್ನು ಗಣನೀಯವಾಗಿ ಕಡಿಮೆ ಮಾಡುತ್ತವೆ, ಇದರಿಂದ ನಿಮ್ಮ ಮನೆಯು ಹೆಚ್ಚು ನೀರವ ಮತ್ತು ಶಾಂತವಾಗಿರುತ್ತದೆ.
 
  • ವೈರಿಂಗ್ ಮತ್ತು ಪೈಪುಗಳ ಮರೆಮಾಚುವಿಕೆ: ಫಾಲ್ಸ್ ಸೀಲಿಂಗುಗಳು ಎಲೆಕ್ಟ್ರಿಕಲ್ ವೈರುಗಳು, ಪೈಪುಗಳು ಇತ್ಯಾದಿಗಳನ್ನು ಮರೆಮಾಚಿ ಸೀಲಿಂಗನ್ನು ಅಚ್ಚುಕಟ್ಟಾಗಿ ಕಾಣುವಂತೆ ಮಾಡುತ್ತವೆ. ಇದು ಕೇವಲ ನಿಮ್ಮ ಸೀಲಿಂಗ್ ಶುಭ್ರವಾಗಿ ಕಾಣುವಂತೆ ಮಾಡುವುದಲ್ಲದೆ ರಿಪೇರಿ ಮತ್ತು ಪರಿಶೀಲನೆಯಂತಹ ಕೆಲಸಗಳನ್ನು ಸುಲಭಗೊಳಿಸುತ್ತದೆ, ಏಕೆಂದರೆ ಎಲ್ಲವೂ ಅಚ್ಚುಕಟ್ಟಾಗಿ ಇರುವುದಲ್ಲದೆ ಸುಲಭವಾಗಿ ದೊರಕುವಂತಿರುತ್ತವೆ.
 
  • ಅಗ್ನಿ ಸುರಕ್ಷತೆ: ಫಾಲ್ಸ್ ಸೀಲಿಂಗಿನಲ್ಲಿ ಬಳಸುವ ಕೆಲ ವಸ್ತುಗಳು ಅಗ್ನಿ ನಿರೋಧಕಗಳಾಗಿರುವುದರಿಂದ ಬೆಂಕಿ ಹರಡುವುದನ್ನು ತಡೆಯಲು ಸಹಾಯ ಮಾಡುತ್ತವೆ.
 
  • ತೇವಾಂಶ ಮತ್ತು ಕುಗ್ಗುವಿಕೆಯ ಪ್ರತಿರೋಧಕ: ಸರಿಯಾದ ವಸ್ತುಗಳನ್ನು ಬಳಸಿ ಮಾಡಿದ ಫಾಲ್ಸ್ ಸೀಲಿಂಗ್ ತೇವಾಂಶವನ್ನು ತಡೆಯುತ್ತದೆ ಮತ್ತು ಸುಲಭವಾಗಿ ಕುಗ್ಗುವುದಿಲ್ಲ, ಇದು ದೀರ್ಘ ಬಾಳಿಕೆಗೆ ನೆರವಾಗುತ್ತದೆ.

 

 

8 ವಿಧದ ಫಾಲ್ಸ್ ಸೀಲಿಂಗುಗಳು

 

1. ಪ್ಲಾಸ್ಟರ್ ಆಫ್ ಪ್ಯಾರಿಸಿನ ಫಾಲ್ಸ್ ಸೀಲಿಂಗ್

ಪ್ಲಾಸ್ಟರ್ ಆಫ್ ಪ್ಯಾರಿಸ್ ಮತ್ತು ನೀರಿನ ಮಿಶ್ರಣವನ್ನು ನಿಮಗೆ ಬೇಕಾದ ಆಕಾರದಲ್ಲಿ ಅಚ್ಚು ಮಾಡಿ ತಂತಿಯ ಜಾಲರಿಯ ಮೇಲೆ ಹಾಕಿ ಗಟ್ಟಿಗೊಳಿಸಿ ತಯಾರಿಸಲಾಗುತ್ತದೆ. ಇದು ಗಟ್ಟಿಯಾದ ನಂತರ ಸೀಲಿಂಗಿಗೆ ಅಂಟಿಕೊಳ್ಳುತ್ತದೆ.

 

  • ಅನುಕೂಲತೆಗಳು: ಈ ಬಗೆಯ ಫಾಲ್ಸ್ ಸೀಲಿಂಗ್ ಬೇಕಾದ ಆಕಾರಕ್ಕೆ ತಕ್ಕಂತೆ ತಯಾರಿಸಲು ಸುಲಭ ಮತ್ತು ಅಗತ್ಯಕ್ಕೆ ತಕ್ಕಂತೆ ಬಣ್ಣ ಅಥವಾ ವಿನ್ಯಾಸವನ್ನು ಹೊಂದಬಹುದು. ಇದು ನಯವಾದ ಮೇಲ್ಮೈಯನ್ನು ನೀಡುತ್ತದೆ.
 
  • ಅನಾನುಕೂಲಗಳು: ಪಿಒಪಿಯು ಕಾಲಕ್ರಮೇಣ ಕುಗ್ಗುವುದರಿಂದ ಮತ್ತು ತೇವಾಂಶ ನಿರೋಧಕವಲ್ಲವಾದ್ದರಿಂದ ತೇವದ ವಾತಾವರಣದಲ್ಲಿ ಹೆಚ್ಚು ಬಾಳಿಕೆ ಬರುವುದಿಲ್ಲ.

 

2. ಜಿಪ್ಸಮ್ ಫಾಲ್ಸ್ ಸೀಲಿಂಗ್



ಜಿಪ್ಸಮ್ ಫಾಲ್ಸ್ ಸೀಲಿಂಗುಗಳನ್ನು ಜಿಪ್ಸಮ್ ಪ್ಲಾಸ್ಟರ್ ಮತ್ತು ಫೈಬರಿನ ಮಿಶ್ರಣದಿಂದ ತಯಾರಿಸಲಾಗುತ್ತದೆ. ಇವು ಸಾಮಾನ್ಯವಾಗಿ ಚೌಕಾಕಾರವಾಗಿದ್ದು ಲೋಹದ ಚೌಕಟ್ಟಿನ ಮೇಲೆ ಕೂರಿಸಲಾಗುತ್ತದೆ.

 

  • ಅನುಕೂಲತೆಗಳು: ಜಿಪ್ಸಮ್ ಫಾಲ್ಸ್ ಸೀಲಿಂಗುಗಳು ಲಘುವಾಗಿದ್ದು, ಶಬ್ಧ ಮತ್ತು ಬೆಂಕಿ ನಿರೋಧಕಗಳಾಗಿರುತ್ತವೆ. ಇವು ಅಚ್ಚುಕಟ್ಟಾಗಿ ಮತ್ತು ಸಮತಟ್ಟಾಗಿ ಕಾಣುತ್ತವೆ.
 
  • ಅನಾನುಕೂಲಗಳು: ತೇವಾಂಶಕ್ಕೆ ತೆರೆದುಕೊಂಡಾಗ ಡೊಂಕಾಗುವುದರಿಂದ ಇವು ತೇವದ ವಾತಾವರಣಕ್ಕೆ ಸೂಕ್ತವಲ್ಲ.

 

3.  ಮರದ ಫಾಲ್ಸ್ ಸೀಲಿಂಗ್



ಮರದ ಫಾಲ್ಸ್ ಸೀಲಿಂಗುಗಳನ್ನು ಪ್ಲೈವುಡ್, ವುಡ್ ವನೀರ್ ಅಥವಾ MDFನಿಂದ ಮಾಡಲಾಗುತ್ತದೆ. ಅವುಗಳನ್ನು ಫಲಕಗಳಾಗಿ ಅಥವಾ ಮರದ ನೇರ ಹಲಗೆಗಳಾಗಿ ಬಳಸಬಹುದು.

 

  • ಅನುಕೂಲತೆಗಳು: ಮರದ ಬಳಕೆಯು ಸೊಬಗನ್ನು ಹೆಚ್ಚಿಸುತ್ತದೆ ಮತ್ತು ಬೆಚ್ಚಗಿನ ಭಾವವನ್ನು ನೀಡುತ್ತದೆ, ಇದು ಉಷ್ಣ ನಿರೋಧಕವೂ ಹೌದು ಮತ್ತು ವಿವಿಧ ಬಗೆಯ ಫಾಲ್ಸ್ ಸೀಲಿಂಗ್ ವಿನ್ಯಾಸಗಳಿಗೆ ಹೊಂದಿಕೆಯಾಗುತ್ತದೆ.
 
  • ಅನಾನುಕೂಲಗಳು: ಮರವು ದುಬಾರಿ ಮತ್ತು ಗೆದ್ದಲು ಧಾಳಿಗೆ ತುತ್ತಾಗಬಹುದು. ಹಾಗೂ ಇದರ ಅಂದವನ್ನು ಕಾಪಾಡಿಕೊಳ್ಳಲು ನಿರ್ವಹಣೆ ಅಗತ್ಯ.

 

4. ಲೋಹದ ಫಾಲ್ಸ್ ಸೀಲಿಂಗ್ 

ಲೋಹದ ಫಾಲ್ಸ್ ಸೀಲಿಂಗನ್ನು ಅಲ್ಯುಮಿನಿಯಂ ಅಥವಾ ಕಲಾಯಿ ಹಾಕಿದ ಕಬ್ಬಿಣದ ಹಲಗೆಗಳಿಂದ ಮಾಡಲಾಗುತ್ತದೆ ಮತ್ತು ಇವುಗಳನ್ನು ಮೇಲ್ಛಾವಣಿಯ ಗ್ರಿಡ್‍ಗೆ ಅಳವಡಿಸಲಾಗುತ್ತದೆ.

 

  • ಅನುಕೂಲತೆಗಳು: ಲೋಹದ ಸೀಲಿಂಗುಗಳು ಹೆಚ್ಚು ಬಾಳಿಕೆ ಬರುವಂತವು, ಅಗ್ನಿ ಮತ್ತು ತೇವ ನಿರೋಧಕಗಳು ಮತ್ತು ನಿರ್ವಹಣೆ ಹಾಗೂ ಸ್ವಚ್ಛತೆಗೆ ಅನುಕೂಲಕರವೂ ಆಗಿರುತ್ತವೆ.
 
  • ಅನಾನುಕೂಲಗಳು: ಇವು ಮಳೆ ಬರುವಾಗ ಹೆಚ್ಚು ಶಬ್ಧ ಮಾಡುತ್ತವೆ ಮತ್ತು ಇತರೆ ಫಾಲ್ಸ್ ಸೀಲಿಂಗುಗಳಿಗೆ ಹೋಲಿಸಿದರೆ ದುಬಾರಿಯೂ ಆಗಿವೆ.

 

5. ಫೈಬರ್‍ನ ಫಾಲ್ಸ್ ಸೀಲಿಂಗ್

ಫೈಬರ್ ಸೀಲಿಂಗುಗಳನ್ನು ನೈಸರ್ಗಿಕ ಅಥವಾ ಫೈಬರ್‍ಗಾಜು ಮೊದಲಾದ ಕೃತಕ ವಸ್ತುಗಳಿಂದ ಮಾಡಲಾಗುತ್ತದೆ. ಇವು ಬೇರೆ ಬೇರೆ ಗಾತ್ರ ಮತ್ತು ವಿನ್ಯಾಸದಲ್ಲಿ ಲಭ್ಯವಿರುತ್ತವೆ.

 

  • ಅನುಕೂಲತೆಗಳು: ಇವು ಶಬ್ಧವನ್ನು ಹೀರಿಕೊಳ್ಳುವ ಗುಣ ಹೊಂದಿದ್ದು ಅಳವಡಿಸಲು ಸುಲಭವಾಗಿವೆ.
 
  • ಅನಾನುಕೂಲಗಳು: ಫೈಬರ್ ಮೇಲ್ಛಾವಣಿಗಳು ವಿನ್ಯಾಸದ ದೃಷ್ಟಿಯಿಂದ ಅಗತ್ಯಕ್ಕೆ ತಕ್ಕಂತೆ ಮಾರ್ಪಾಟು ಮಾಡುವ ಗುಣ ಹೊಂದಿಲ್ಲ ಮತ್ತು ನೋಡಲು ತೀರಾ ಸಾಧಾರಣವೆಂಬಂತೆ ಕಾಣುತ್ತವೆ.

 

 6. ಗಾಜಿನ ಫಾಲ್ಸ್ ಸೀಲಿಂಗ್



 ಈ ಬಗೆಯ ಸೀಲಿಂಗಿನಲ್ಲಿ ಸಾಮಾನ್ಯವಾಗಿ ಫ್ರೋಸ್ಟೆಡ್ ಅಥವಾ ಟಿಂಟೆಡ್ ಗಾಜಿನ ಫಲಕಗಳನ್ನು ಬಳಸಲಾಗುತ್ತದೆ. ಇವುಗಳ ಬಳಕೆ ಕಡಿಮೆ ಇದ್ದರೂ ಕೆಲವು ಆಧುನಿಕ ಮನೆಗಳಲ್ಲಿ ಅಥವಾ ವಾಣಿಜ್ಯ ಸಂಕೀರ್ಣಗಳಲ್ಲಿ ಇವನ್ನು ಕಾಣಬಹುದು.

 

  • ಅನುಕೂಲತೆಗಳು: ಗಾಜು ಬೆಳಕನ್ನು ತನ್ಮೂಲಕ ನಿಗದಿತ ಪ್ರಮಾಣದಲ್ಲಿ ಹರಿಯಗೊಡುವುದರಿಂದ ಒಳಗಿನ ಜಾಗವು ಪ್ರಕಾಶಮಾನವಾಗಿರುತ್ತದೆ. ಇದೊಂದು ಆಧುನಿಕ ಬಗೆಯ ಫಾಲ್ಸ್ ಸೀಲಿಂಗ್ ಆಗಿದ್ದು ಸ್ವಚ್ಛಗೊಳಿಸಲು ಸುಲಭವಾಗಿದೆ.
 
  • ಅನಾನುಕೂಲಗಳು: ಗಾಜು ಸುಲಭವಾಗಿ ಒಡೆಯಬಹುದು, ದುಬಾರಿ ಮತ್ತು ಉತ್ತಮ ಉಷ್ಣ ನಿರೋಧಕವಲ್ಲ

 

 7. ಪಿವಿಸಿ ಫಾಲ್ಸ್ ಸೀಲಿಂಗ್



ಪಿವಿಸಿ ಅಥವಾ ಪಾಲಿ ವಿನೈಲ್ ಕ್ಲೋರೈಡ್ ಫಲಕಗಳು ಮನೆ ಮತ್ತು ಕಛೇರಿಗೆ ಸೂಕ್ತವಾಗಿದ್ದು ವಿವಿಧ ಬಣ್ಣ ಮತ್ತು ಮಾದರಿಗಳಲ್ಲಿ ಲಭ್ಯವಿವೆ.

 

  • ಅನುಕೂಲತೆಗಳು: ಇವುಗಳು ಜಲ-ಪ್ರತಿಬಂಧಕ, ಅಳವಡಿಕೆಗೆ ಸುಲಭ ಮತ್ತು ಕನಿಷ್ಟ ನಿರ್ವಹಣೆಯನ್ನು ಬೇಡುತ್ತವೆ.
 
  • ಅನಾನುಕೂಲಗಳು: ಪಿವಿಸಿ ಫಲಕಗಳು ಸುಟ್ಟಾಗ ವಿಷಕಾರಿ ಅನಿಲಗಳನ್ನು ಬಿಡುಗಡೆ ಮಾಡುತ್ತವೆ ಮತ್ತು ಇವು ಹೆಚ್ಚು ಪರಿಸರ ಸ್ನೇಹಿಯಲ್ಲ.

 

8. ಫ್ಯಾಬ್ರಿಕ್ ಮತ್ತು ಸಿಂಥೆಟಿಕ್ ಲೆದರ್‍‍ನ ಫಾಲ್ಸ್ ಸೀಲಿಂಗ್

ಈ ಬಗೆಯ ಸೀಲಿಂಗ್‍ನಲ್ಲಿ ಫ್ಯಾಬ್ರಿಕ್ ಅಥವಾ ಸಿಂಥೆಟಿಕ್ ಲೆದರ್‍ಅನ್ನು ನೋಡಲು ನಯವಾಗಿ ಕಾಣುವಂತೆ ಒಂದು ಚೌಕಟ್ಟಿನ ಮೇಲೆ ವಿಸ್ತರಿಸಲಾಗುತ್ತದೆ.

 

  • ಅನುಕೂಲತೆಗಳು: ಒಂದು ಬಗೆಯ ಅನನ್ಯ ಸೌಂದರ್ಯವನ್ನು ಇದು ನೀಡುತ್ತದೆ ಮತು ಸುಲಭವಾಗಿ ಮೇಲ್ಛಾವಣಿಯ ಲೋಪಗಳನ್ನು ಮರೆಮಾಚುತ್ತದೆ. ಅಕೌಸ್ಟಿಕ್‍ನ್ನು ಉತ್ತಮಪಡಿಸಲು ಸಹ ಇದನ್ನು ಬಳಸಬಹುದು.
 
  • ಅನಾನುಕೂಲಗಳು: ಇದರ ಬಳಕೆ ವಿರಳ ಮತ್ತು ಇದರ ಸ್ವಚ್ಛತೆಯೂ ಕಷ್ಟ. ಈ ಬಗೆಯ ಫಾಲ್ಸ್ ಸೀಲಿಂಗ್ ಬೇರೆ  ಬಗೆಗಳಷ್ಟು ಬಾಳಿಕೆ ಬರುವುದಿಲ್ಲ.

 

 

ಫಾಲ್ಸ್ ಸೀಲಿಂಗ್‍ನ ವೆಚ್ಚದ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮ್ಮ ಮನೆಯ ಫಾಲ್ಸ್ ಸೀಲಿಂಗಿನ ವೆಚ್ಚವನ್ನು ಲೆಕ್ಕ ಹಾಕುವಾಗ ಕೆಲವೊಂದು ಅಂಶಗಳನ್ನು ಪರಿಗಣಿಸುವುದು ಅವಶ್ಯಕ. ವಿವಿಧ ಬಗೆಯ ಫಾಲ್ಸ್ ಸೀಲಿಂಗ್‍ಗಳಲ್ಲಿ ವೆಚ್ಚದ ಹಂಚಿಕೆ ಇಂತಿದೆ:

 

  • ಸಾಮಗ್ರಿಗಳು: ನೀವು ಆಯ್ಕೆ ಮಾಡುವ ಸಾಮಗ್ರಿಯು ವೆಚ್ಚದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಸಾಮಾನ್ಯವಾಗಿ ಬಳಸುವ ಫಾಲ್ಸ್ ಸೀಲಿಂಗ್ ಸಾಮಗ್ರಿಯೆಂದರೆ ಪಿಒಪಿ, ಜಿಪ್ಸಮ್, ಮರ, ಪಿವಿಸಿ ಮತ್ತು ಫೈಬರ್‌ಗಾಜು ಪ್ರತಿಯೊಂದೂ ಭಿನ್ನ ದರಪಟ್ಟಿಯನ್ನು ಹೊಂದಿವೆ.
 
  • ವಿನ್ಯಾಸ: ಹೆಚ್ಚು ನುರಿತ ಕಾರ್ಮಿಕರನ್ನು ಮತ್ತು ಸಮಯವನ್ನು ಬೇಡುವ ಸಂಕೀರ್ಣ ವಿನ್ಯಾಸಗಳು ಹೆಚ್ಚು ದುಬಾರಿ. ಸಾದಾ,ಸರಳರೇಖೆಯ ವಿನ್ಯಾಸಗಳು ಕಡಿಮೆ ಖರ್ಚಿನವುಗಳಾದರೆ ಸಂಕೀರ್ಣ ಮಾದರಿ ಮತ್ತು ವಿನ್ಯಾಸಗಳು ದುಬಾರಿಯಾಗಿರುತ್ತವೆ.
 
  • ವಿಸ್ತೀರ್ಣ: ವಿಸ್ತೀರ್ಣ ಹೆಚ್ಚಾದಷ್ಟು ಖರ್ಚು ಹೆಚ್ಚು. ಇದರ ಲೆಕ್ಕ ಸರಳ – ಹೆಚ್ಚು ಸಾಮಗ್ರಿಗಳು ಮತ್ತು ಕಾರ್ಮಿಕರು, ಹೆಚ್ಚು ವೆಚ್ಚ.
 
  • ಕಾರ್ಮಿಕರ ಕೂಲಿ: ನೀವು ಯಾವ ಸ್ಥಳದಲ್ಲಿ ಇದ್ದೀರಿ ಎಂಬುದರ ಮೇಲೆ ಕಾರ್ಮಿಕರ ಕೂಲಿಯು ಗಣನೀಯವಾಗಿ ಏರುಪೇರಾಗುತ್ತದೆ. ಸಣ್ಣ ಪಟ್ಟಣಗಳಿಗಿಂತ ಮೆಟ್ರೊಪಾಲಿಟನ್ ನಗರಗಳಲ್ಲಿ ಕೂಲಿ ಬಹುತೇಕ ಹೆಚ್ಚಾಗಿರುತ್ತದೆ.

 

 

ಖರ್ಚಿಗೆ ತಕ್ಕ ಮೌಲ್ಯ ಅಥವಾ ಪ್ರತಿಫಲವನ್ನು ಪಡೆಯುವುದು

 ಫಾಲ್ಸ್ ಸೀಲಿಂಗ್‍ನ್ನು ಆಯ್ಕೆ ಮಾಡಿಕೊಳ್ಳುವುದೆಂದರೆ ಕೇವಲ ಮನೆಯನ್ನು ಚೆಂದಗಾಣಿಸುವುದಷ್ಟೇ ಅಲ್ಲ, ಉತ್ತಮ ಬೆಳಕಿನ ವ್ಯವಸ್ಥೆ, ಶಬ್ಧ ಮತ್ತು ಉಷ್ಣ ಪ್ರತಿಬಂಧಕತೆ ಇತ್ಯಾದಿಗಳಿಂದ ಅದರ ಗುಣಮಟ್ಟವನ್ನು ವರ್ಧಿಸುವುದು.  ನಿಮ್ಮ ಹೂಡಿಕೆಗೆ ತಕ್ಕ ಪ್ರತಿಫಲ ಸಿಗುವುದೆಂದು ಖಾತ್ರಿಪಡಿಸಿಕೊಳ್ಳಲು:

 

  • ಆದ್ಯತೆಗನುಸಾರ ನಿಮ್ಮ ಅವಶ್ಯಕತೆಗಳನ್ನು ಗುರುತಿಸಿ.
 
  • ಗುಣಮಟ್ಟ ಮತ್ತು ವೆಚ್ಚವನ್ನು ಸರಿದೂಗಿಸಿ ಸಾಮಗ್ರಿಗಳನ್ನು ಜಾಣ್ಮೆಯಿಂದ ಆಯ್ದುಕೊಳ್ಳಿ.
 
  • ದೀರ್ಘಕಾಲದ ನಿರ್ವಹಣೆ ಮತ್ತು ಬಾಳಿಕೆಯನ್ನು ಗಮನದಲ್ಲಿರಿಸಿಕೊಳ್ಳಿ.
 
  • ಅಂತಿಮವಾಗಿ ಫಾಲ್ಸ್ ಸೀಲಿಂಗ್‍ನ ವೆಚ್ಚವು ಉಲ್ಲೇಖಿಸಿರುವ ಅಂಶಗಳ ಆಧಾರದಲ್ಲಿ ಬದಲಾಗುತ್ತದೆ. ಆದರೆ ಸಾಧಾರಣ ಖರ್ಚಿನೊಂದಿಗೆ ಸಹ ನೀವು ವಿವಿಧ ಬಗೆಯ ವಿನ್ಯಾಸದ ಫಾಲ್ಸ್ ಸೀಲಿಂಗ್‍ನಲ್ಲಿ ಸೂಕ್ತ ಆಯ್ಕೆಯನ್ನು ಮಾಡಿಕೊಂಡು ನಿಮ್ಮ ಮನೆಯ ಸೌಂದರ್ಯವರ್ಧನೆ ಮಾಡುವುದರ ಜೊತೆಗೆ ಆರಾಮದಾಯಕ ವಾತಾವರಣವನ್ನು ಖಾತ್ರಿಗೊಳಿಸಿಕೊಳ್ಳಬಹುದು.



ಫಾಲ್ಸ್ ಸೀಲಿಂಗ್‍ನ ವಿಧವನ್ನು ಆಯ್ದುಕೊಳ್ಳುವಾಗ ಕೋಣೆಯು ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ, ನಿಮ್ಮ ಬಜೆಟ್ ಏನು ಮತ್ತು ನಿಮ್ಮ ಮನಸ್ಸಿನಲ್ಲಿರುವ ಒಟ್ಟಾರೆ ಮನೆಯ ರೂಪ ಇವೆಲ್ಲವನ್ನೂ ಗಣನೆಗೆ ತೆಗೆದುಕೊಳ್ಳಿ. ಪಿಒಪಿ ಮತ್ತು ಜಿಪ್ಸಮ್‍ನ ಸೊಬಗಿನಿಂದ ಹಿಡಿದು ಪಿವಿಸಿ ಮತ್ತು ಫೈಬರ್‍ನ ಉಪಯುಕ್ತತೆಯವರೆಗೆ ಪ್ರತಿಯೊಂದು ವಸ್ತುವೂ ವಿಭಿನ್ನ ಅನುಕೂಲವನ್ನು ಹೊಂದಿದೆ. ಫಾಲ್ಸ್ ಸೀಲಿಂಗ್‍ನ ವಿಧಗಳು ಮತ್ತು ಅದರ ಅನುಕೂಲಗಳನ್ನು ಅರಿತುಕೊಳ್ಳುವುದರಿಂದ ನಿಮ್ಮ ಮನೆಯ ಒಳಾಂಗಣವನ್ನು ಹೇಗೆ ಉತ್ತಮಗೊಳಿಸಬೇಕೆಂದು ನಿರ್ಧರಿಸಲು ಸುಲಭವಾಗುತ್ತದೆ. ನಿಮಗೆ ಅಗತ್ಯಕ್ಕೆ ಸರಿಹೊಂದುವ ಆಯ್ಕೆಯನ್ನು ಮಾಡಲು ವಿವಿಧ ಫಾಲ್ಸ್ ಸೀಲಿಂಗ್ ವಿನ್ಯಾಸಗಳ ಬಗ್ಗೆ ತಿಳಿದುಕೊಳ್ಳಿ. ನೆನಪಿಡಿ, ಸರಿಯಾಗಿ ಆಯ್ಕೆ ಮಾಡಿಕೊಂಡ ಫಾಲ್ಸ್ ಸೀಲಿಂಗ್ ನಿಮ್ಮ ಮನೆಯ ಅಂದವನ್ನು ಹೆಚ್ಚಿಸುವುದಲ್ಲದೆ ಅದರ ಕ್ರಿಯಾತ್ಮಕತೆಯನ್ನೂ ವೃದ್ಧಿಸುತ್ತದೆ.




ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....