Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಪ್ಲಾಸ್ಟರಿಂಗ್ ಎನ್ನುವುದು ನಿರ್ಮಾಣ ಉದ್ಯಮದಲ್ಲಿ ಅತ್ಯಂತ-ಹಳೆಯ ತಂತ್ರಜ್ಞಾನವಾಗಿದ್ದು, ಗೋಡೆಗಳು, ಸೀಲಿಂಗ್ಗಳು ಅಥವಾ ಮನೆಯ ಇನ್ಯಾವುದೇ ತೆರೆದ ಹೊರಮೈಗಳಿಗೆ ನೀರಿನೊಂದಿಗೆ ಸುಣ್ಣ, ಸಿಮೆಂಟ್, ಮರಳನ್ನು ಮಿಶ್ರಣಮಾಡಿ ತೆಳುವಾಗಿ ಹಚ್ಚುವ ವಿಧಾನವನ್ನು ಪ್ಲಾಸ್ಟರ್ ಎನ್ನುತ್ತಾರೆ . ಪ್ಲಾಸ್ಟರ್ ಮಾಡುವುದರ ಮೂಲ ಉದ್ದೇಶವೆಂದರೆ ಈ ಹೊರಮೈಗಳಿಗೆ ಮೃದುವಾದ ಮತ್ತು nಉಣೂಪಾದ ಫಿನಿಶಿಂಗ್ ಕೊಡುವುದಾಗಿದೆ. ಪ್ಲಾಸ್ಟರ್ ಮಾಡುವುದರಿಂದ ಇಟ್ಟಿಗೆ, ಕಾಂಕ್ರೀಟ್ ಮತ್ತು ಇತರ ವಸ್ತುಗಳನ್ನು ಮರೆಮಾಡುತ್ತದೆ. ಇದು ಪೂರ್ಣವಾಗಿ ಸೌಂದರ್ಯವನ್ನು ಕೊಡುತ್ತದೆಯಾದರೂ, ಗೋಡೆಗಳು ಮತ್ತು ಸೀಲಿಂಗ್ಗಳ ರಕ್ಷಣೆ, ಬಾಳಿಕೆ, ಗೋಡೆಗಳನ್ನು ಲೇವಲ್ ಮಾಡುವುದು ಮತ್ತು ಅಲೈನ್ ಮಾಡುವ ವಿಷಯದಲ್ಲಿ ಪ್ಲಾಸ್ಟರ್ ಮಾಡುವುದು ಹಲವಾರು ಪ್ರಮುಖ ಪಾತ್ರಗಳನ್ನು ವಹಿಸುತ್ತದೆ.
ಅಗತ್ಯಕ್ಕೆ ತಕ್ಕೆಂತೆ, ಪರಿಸರದ ಪರಿಸ್ಥಿತಿಗೆ ತಕ್ಕಂತೆ, ಮನೆಯ ಸೌಂದರ್ಯ ಹೆಚ್ಚಿಸಲು ಸಹಾಯಕವಾಗುವಂತೆ ಮಾಡಲು ಹಲವಾರು ರೀತಿಯ ಪ್ಲಾಸ್ಟರ್‌ಗಳಿವೆ. ನಾವು ಸಾಮಾನ್ಯವಾಗಿ ಬಳಸುವ ಕೆಲವು ರೀತಿಯ ಪ್ಲಾಸ್ಟರ್ ವಿಧಾನಗಳನ್ನು ನೋಡೋಣ.
ಸಿಮೆಂಟ್ ಬಳಸಿ ಪ್ಲಾಸ್ಟರ್ ಮಾಡುವ ವಿಧಾನವನ್ನು ಸಾಮಾನ್ಯವಾಗಿ ಸಿಮೆಂಟ್ ರೆಂಡರಿಂಗ್ ಎಂದು ಕರೆಯಲಾಗುತ್ತದೆ. ಸಿಮೆಂಟ್ ಹಾಗೂ ಮರಳನ್ನು ನೀರು ಬಳಸಿ ಮಿಶ್ರಣ ಮಾಡಿ ಲೇಪನ ಮಾಡಲಾಗುತ್ತದೆ. ಈ ತಂತ್ರವು ಹವಾಮಾನ ಮತ್ತು ಪರಿಸರದ ಪರಿಸ್ಥಿತಿಗಳನ್ನು ಎದುರಿಸಲು ಆ ಪ್ರದೇಶಕ್ಕೆ ತಕ್ಕಂತೆ ಗಟ್ಟಿಯಾಗಿರುತ್ತದೆ ಮತ್ತು ಬಾಳಿಕೆ ಬರುವ ಹೊರಮೈಯನ್ನು ಕೊಡುತ್ತದೆ. ಗೋಡೆಗೆ ರಕ್ಷಣೆಯನ್ನು ಕೊಡಲು ಸಾಮಾನ್ಯವಾಗಿ ಹೊರಭಾಗದಲ್ಲಿ ಇದನ್ನು ಬಳಸಲಾಗುತ್ತದೆ, ಮತ್ತು ಬಹಳಷ್ಟು ರೀತಿಯಲ್ಲಿ ಕಾಣುವಂತೆ ಫಿನಿಶಿಂಗ್ ಮಾಡಲು ಸಾಧ್ಯವಾಗುತ್ತದೆ.
ಜಿಪ್ಸಮ್ ಪ್ಲಾಸ್ಟರ್ ಮಾಡುವುದನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಪ್ಲಾಸ್ಟರ್ ಎಂದೂ ಕರೆಯುತ್ತಾರೆ. ಮನೆಯ ಇಂಟಿರೀಯರ್ ಹೊರಮೈಗಳಿಗೆ ಬಳಸಲು ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಜಿಪ್ಸಮ್ ನೈಸರ್ಗಿಕವಾಗಿ ಕಂಡುಬರುವ ಖನಿಜವಾಗಿದ್ದು, ನೀರಿನೊಂದಿಗೆ ಬೆರೆಸಿದಾಗ, ಮೃದುವಾದ ಪೇಸ್ಟ್ ಅನ್ನು ಕೊಡುತ್ತದೆ, ಜೊತೆಗೆ ಈ ಪೇಸ್ಟ್ ಅದು ಬೇಗನೆ ಒಣಗುವಿದರೊಂದಿಗೆ ಶುದ್ಧ, ಹೊಳಪಿನ ನೋಟವನ್ನು ಕೊಡುತ್ತದೆ. ಈ ವಿಧಾನದ ಪ್ಲಾಸ್ಟರ್ ಮಾಡುವುದು ಬೆಂಕಿ-ನಿರೋಧಕ ಅಗತ್ಯವಿರುವ ಕಡೆಗಳಲ್ಲಿ ಹಾಗೂ ನೈರ್ಮಲ್ಯ ಮತ್ತು ಶುಚಿತ್ವಕ್ಕೆ ಆದ್ಯತೆ ನೀಡುವ ಸ್ಥಳಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಮಣ್ಣಿನಿಂದ ಪ್ಲಾಸ್ಟರ್ ಮಾಡುವುದು ಅತ್ಯಂತ-ಹಳೆಯ ತಂತ್ರಜ್ಞಾನವಾಗಿದೆ. ಈ ವಿಧಾನದಲ್ಲಿ ಸ್ಥಳೀಯವಾಗಿ ಸಿಗುವ ಮಣ್ಣು ಬಳಸಿ ಒಣಹುಲ್ಲಿನ ಅಥವಾ ಸಗಣಿಯಂತಹ ಇತರ ನೈಸರ್ಗಿಕ ವಸ್ತುಗಳೊಂದಿಗೆ ಬೆರೆಸಿ ನಂತರ ಗೋಡೆಗಳಿಗೆ ಹಚ್ಚಲಾಗುತ್ತದೆ. ಇದು ಪರಿಸರ ಸ್ನೇಹಿ ವಿಧಾನವಾಗಿದ್ದು, ಹಳ್ಳಿಗಾಡಿನ ಮತ್ತು ಮಣ್ಣಿನ ಫಿನಿಶಿಂಗ್ ಕೊಡುತ್ತದೆ. ಇಷ್ಟೇ ಅಲ್ಲದೇ ಬಿಸಿಲಿನ ತಾಪಮಾನ ಅಥವಾ ಬಿಸಿಯನ್ನು ಮಣ್ಣಿನ ಪ್ಲಾಸ್ಟರ್ ತಡೆಯುತ್ತದೆ. ಇದು ಸಾಂಪ್ರದಾಯಿಕ ಮತ್ತು ಬಾಳಿಕೆ ಬರುವ ಕನ್ಸ್ಟ್ರಕ್ಷನ್ ವಿಧಾನವಾಗಿದೆ.
ಸುಣ್ಣದ ಪ್ಲಾಸ್ಟರ್ ಮಾಡುವಾಗ ಸುಣ್ಣವನ್ನು ಮೂಲ ಬಂಧನದ ವಸ್ತುವನ್ನಾಗಿ ಬಳಕೆ ಮಾಡಲಾಗುತ್ತದೆ. ಇದನ್ನು ಶತಮಾನಗಳಿಂದ ಬಳಸಲಾಗುತ್ತಿದೆ ಮತ್ತು ಅದರ ಗಾಳಿಯಾಡುವ ಗುಣ ಮತ್ತು ನಮ್ಯತೆಗೆ ಜಪ್ರೀಯವಾಗಿದೆ. ಇದು ಕನ್ಸ್ಟ್ರಕ್ಷನ್ಗಳು ಬದಲಾಗುತ್ತಿರುವ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಅನುವು ಮಾಡಿಕೊಡುತ್ತದೆ. ಲೈಮ್ ಪ್ಲಾಸ್ಟರ್ ಸಾಮಾನ್ಯವಾಗಿ ಐತಿಹಾಸಿಕ ಕಟ್ಟಡಗಳು ಮತ್ತು ಕಟ್ಟಡಗಳ ಜೀರ್ಣೊದ್ದಾರ ಪ್ರೊಜೆಕ್ಟ್ಗಳಲ್ಲಿ ಕಂಡು ಬರುತ್ತದೆ. ಜೊತೆಗೆ ಕನ್ಸ್ಟ್ರಕ್ಷನ್ ದೃಢವಾಗಿ ಸಂರಕ್ಷಿಲು ಇದು ಸಮರ್ಥವಾಗಿದೆ.
ಹೆಸರೇ ಹೇಳುವಂತೆ, ನೀರು ಮತ್ತು ತೇವಾಂಶವನ್ನು ಹಿಮ್ಮೆಟ್ಟಿಸಲು ವಾಟರ್ಪ್ರೂಫ್ ಪ್ಲಾಸ್ಟರ್ ಮಾಡಲಾಗುತ್ತದೆ. ಬಾತ್ರೂಮ್ಗಳು ಮತ್ತು ಅಂಡರ್ಗ್ರೌಂಡ್ನಂತಹ ತೇವಕ್ಕೆ ಒಳಗಾಗುವ ಪ್ರದೇಶಗಳಿಗೆ ಇದು ಸಮರ್ಪಕ ಆಯ್ಕೆಯಾಗಿದೆ. ಈ ರೀತಿಯ ಪ್ಲಾಸ್ಟರ್ ನೀರಿನ ಪ್ರತಿರೋಧವನ್ನು ಒದಗಿಸುವ ವಸ್ತುಗಳನ್ನು ಒಳಗೊಂಡಿರುತ್ತದೆ. ಇದು ನೀರಿನಿಂದಾಗುವ ಹಾನಿ ಮತ್ತು ಬೂಷ್ಟ ಬೆಳವಣಿಗೆಯನ್ನು ತಡೆಗಟ್ಟಲು ಪರಿಣಾಮಕಾರಿ ಪರಿಹಾರವಾಗಿದೆ.
ವಿವಿಧ ವಿಧಗಳಲ್ಲಿ ಪ್ಲಾಸ್ಟರ್ ಮಾಡುವುದು ಕಟ್ಟಡದ ಬಹಳಷ್ಟು ಉದ್ದೇಶಗಳನ್ನು ಈಡೇರಿಸುತ್ತದೆ. ಇವೆಲ್ಲವೂ ಒಟ್ಟಾರೆ ಕ್ರಿಯಾತ್ಮಕತೆ, ಸುಂದರವಾಗಿ ಮತ್ತು ಕನ್ಸ್ಟ್ರಕ್ಷನ್ ಬಾಳಿಕೆ ಬರುವಂತೆ ಸಹಾಯ ಮಾಡುತ್ತವೆ. ಕಟ್ಟಡವನ್ನು ಕಟ್ಟುವಾಗ ಪ್ಲಾಸ್ಟರ್ ಮಾಡುವುದು ಅಗತ್ಯ ಹಂತವಾಗಿದೆ ಎಂಬುದನ್ನು ತಿಳಿಯಲು ಕೆಲವು ಪ್ರಮುಖ ಕಾರಣಗಳನ್ನು ಮುಂದೆ ನೋಡೋಣ.
ಪ್ಲಾಸ್ಟರ್ ಮಾಡುವುದರಿಂದ ಕಟ್ಟಡ ಕಟ್ಟಲು ಬಳಸಲಾಗಿರುವ ಇಟ್ಟಿಗೆ, ಕಲ್ಲು ಮತ್ತು ಇತರ ಕಟ್ಟಡ ಸಾಮಗ್ರಿಗಳಿಗೆ ಗುರಾಣಿಯಂತೆ ರಕ್ಷಣೆ ಕೊಡುತ್ತದೆ. ಇದು ಹವಾಮಾನ ಬದಲಾವಣೆ ಮತ್ತು ತಾಪಮಾನ ಹೆಚ್ಚಾಗುವುದು ಸೇರಿದಂತೆ ಹೊರಗಿನ ಒತ್ತಡಗಳಿಗೆ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಕಟ್ಟಡದ ಸ್ಟ್ರಕ್ಚರ್ನ್ನು ಬಲಪಡಿಸುವ ಮೂಲಕ, ಪ್ಲಾಸ್ಟರ್ ಮಾಡುವುದು ಕಟ್ಟಡದ ಬಾಳಿಕೆಗೆ ಕೊಡುಗೆ ಕೊಡುತ್ತದೆ.
ನುಣುಪಾದ ಮತ್ತು ಸಮನಾದ ಹೊರಮೈಯನ್ನು ಕೊಡುವುದು ಪ್ಲಾಸ್ಟರ್ ಮಾಡುವುದರ ಮೂಲ ಕಾರ್ಯಗಳಲ್ಲಿ ಒಂದಾಗಿದೆ. ಇದು ಪೇಂಟ್ ಮಾಡಲು ಮತ್ತು ಇತರ ಅಲಂಕಾರಿಕ ವ್ಯವಸ್ಥೆ ಮಾಡಲು ಸೂಕ್ತವಾಗಿದೆ. ಪ್ಲಾಸ್ಟರ್ ಮಾದಿದ್ದರೆ, ಹೊರಮೈಗಳು ಅಡ್ಡಾದಿಡ್ಡಿಯಾಗಿ ಮತ್ತು ಅಪೂರ್ಣವಾದಂತೆಕಾಣುತ್ತದೆ. ಜೊತೆಗೆ ಇದು ಸರಿಯಾಗಿ ಫಿನಿಶಿಂಗ್ ಆಗಂದಂತೆ ಮಾಡಲು ಕಾರಣವಾಗುತ್ತದೆ.
ಮಳೆ, ಗಾಳಿ ಮತ್ತು ಸೂರ್ಯನ ಬೆಳಕಿನಂತಹ ಹೊರಗಿನ ಅಂಶಗಳಿಗೆ ಒಡ್ಡಿಕೊಳ್ಳುವುದರಿಂದ ಕಟ್ಟಡ ಸಾಮಗ್ರಿಗಳ ಹೊರಮೈ ಕಾಲಕಳೆದಂತೆ ಕ್ಷೀಣಿಸಬಹುದು. ಪ್ಲಾಸ್ಟರ್ ಮಾಡುವುದರಿಂದ ಈ ವಾತಾವರಣದ ಬದಲಾವಣೆಯಿಂದ ಉಂಟಾಗಬಹುದಾದ ಹಾನಿಯಿಂದ ಕನ್ಸ್ಟ್ರಕ್ಷನ್ ರಕ್ಷಿಸಲು ತಡೆಗೋಡೆಯನ್ನು ಕೊಡುತ್ತದೆ. ಜೊತೆಗೆ ಮುಂದಿನ ಕಾಲಕಳೆದಂತೆ ಕಟ್ಟಡದ ಗುಣಮಟ್ಟ ಮತ್ತು ಸೌಂದರ್ಯವನ್ನು ಸಂರಕ್ಷಿಸುತ್ತದೆ.
ತೇವಾಂಶವು ಕಟ್ಟಡದ ಒಳಗೆ ಹೋಗಿ ಬೂಷ್ಟ ಬೆಳೆಯಲು, ಬಳಸಿರುವ ವಸ್ತುಗಳು ಕ್ಷೀಣಿಸಲು ಮತ್ತು ಸ್ಟ್ರಕ್ಚರಲ್ ಅಸ್ಥಿರತೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಪ್ಲಾಶ್ಟರ್ ಮಾಡುವುದು, ವಿಶೇಷವಾಗಿ ವಾಟರ್ಪ್ರೂಫ್ ತಂತ್ರದೊಂದಿಗೆ ಜೊತೆಗೂಡಿದಾಗ, ತೇವಾಂಶವು ಗೋಡೆಗಳು ಮತ್ತು ಸೀಲಿಂಗ್ಗಳಿಗೆ ಸೋರಿಕೆಯಾಗದಂತೆ ತಡೆಯುತ್ತದೆ. ಜೊತೆಗೆ ಸ್ಟ್ರಕ್ಚರ್ನ ಸಮಗ್ರತೆಯನ್ನು ಕಾಪಾಡುತ್ತದೆ.
ಇಂಟಿರೀಯರ್ ಹಾಗೂ ಎಕ್ಸ್ಟಿರೀಯರ್ ಭಾಗಗಳಲ್ಲಿ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಪ್ಲಾಸ್ಟರ್ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಒರಟಾದ ಮತ್ತು ಅಸಮವಾಗಿರುವ ಹೊರಮೈಗಳನ್ನು ಹೊಳೆಯುವ ಹೊರಮೈಗಳಾಗಿ ಪರಿವರ್ತಿಸುತ್ತದೆ. ಜೊತೆಗೆ ಪ್ಲಾಸ್ಟರ್ ಮಾಡುವುದರಿಂದ ಹೊರಮೈ ಮೇಲೆ ಪೇಂಟ್ ಬಳಸಿ ಹಾಗೂ ವಾಲ್ ಪೇಪರ್ಗಳನ್ನು ಹಾಕುವ ಮೂಲಕ ಸುಂದರವಾಗಿ ಕಾಣುವಂತೆ ಮಾಡಲು ಅವಕಾಶವಾಗುತ್ತದೆ.
ನಾವು ತಿಳಿಸಿದಂತೆ, ಪ್ರೊಜೆಕ್ಟ್ಗೆ ಅಗತ್ಯವಾದಂತೆ ನಿರ್ದಿಷ್ಟ ಮತ್ತು ಆದ್ಯತೆಗಳನ್ನು ಪೂರೈಸಲು ವಿವಿಧ ರೀತಿಯಲ್ಲಿ ಪ್ಲಾಸ್ಟರ್ ಮಾಡಬಹುದು. ಪ್ಲಾಸ್ಟರ್ ಮಾಡುವ ಪ್ರಕ್ರಿಯೆಯ ಕುರಿತು ನಿಮ್ಮ ತಿಳುವಳಿಕೆಯನ್ನು ಇನ್ನಷ್ಟು ಹೆಚ್ಚಿಸಲು, ಯೂಟ್ಯೂಬ್ನಲ್ಲಿ ಗೋಡೆಗೆ ಹೇಗೆ ಪ್ಲಾಸ್ಟರ್ ಮಾಡುವುದು ಎಂಬುದನ್ನು ತಿಳಿವಳಿಕೆಯ ವೀಡಿಯೊವನ್ನು ವೀಕ್ಷಿಸಲು ನಿಮ್ಮನ್ನು ಉತ್ತೇಜಿಸುತ್ತಿದ್ದೇವೆ. ಆ ರೀತಿ ಮಾಡುವುದರಿಂದ, ಆಧುನಿಕ ಕನ್ಸ್ಟ್ರಕ್ಷನ್ ಪ್ರಜೊಕ್ಟ್ಗಳಲ್ಲಿ ಅಗತ್ಯ ತಂತ್ರದ ಅರಿವನ್ನು ನೀವು ಪಡೆಯುತ್ತೀರಿ. ಆ ಮೂಲಕ ನಾವು ನಮ್ಮ ಸೇವೆ ಮುಂದುವರೆಸಲು ನೀವು ಪ್ರೋತ್ಸಾಹಿಸಿದಂತಾಗುತ್ತದೆ.
ಸುಣ್ಣದ ಪ್ಲಾಸ್ಟರ್ ಮೊದಲು ಒಣಗಿದಾಗ ಕುಗ್ಗುವಿಕೆಯಿಂದಾಗಿ ಸಣ್ಣ ಸಣ್ಣ ಬಿರುಕುಗಳು ಕಂಡು ಬರಬಹುದು. ಆದರೆ ಇಂತಹುದನ್ನು ಮೇಲಿನಿಂದಲೇ ಸುಲಭವಾಗಿ ಸರಿಪಡಿಸಬಹುದು.
ಪ್ಲಾಸ್ಟರ್ ಮಾಡಿದ ನಂತರ, ಗೋಡೆಗಳನ್ನು ಸಂಪೂರ್ಣವಾಗಿ ಒಣಗಲು ಬಿಡಲಾಗುತ್ತದೆ. ಪ್ಲಾಸ್ಟರ್ ಒಣಗಿದ ನಂತರ, ಪೇಂಟಿಂಗ್ ಅಥವಾ ವಾಲ್‌ಪೇಪರ್ ಮಾಡುವ ಮೊದಲು ಮೃದುವಾದ ಫಿನಿಶಿಂಗ್ ಮಾಡಿಕೊಳ್ಳಲು ಸ್ಯಾಂಡ್ ಪೇಪರ್ನಿಂದ ಪಾಲಿಶ್ ಮಾಡುವ ಹಂತಕ್ಕೆ ಗೋಡೆಗಳನ್ನು ತಯಾರು ಮಾಡಬಹುದು.
ನೀವು ಆಯ್ದುಕೊಂಡ ಪ್ಲಾಸ್ಟರ್ ವಿಧಗಳನ್ನು ಅವಲಂಬಿಸಿ ಕ್ಯೂರಿಂಗ್ ಮಾಡುವ ತೆಗೆದುಕೊಳ್ಳುವ ದಿನಗಳು ಬದಲಾಗುತ್ತವೆ. ಸಾಮಾನ್ಯವಾಗಿ, ಸಿಮೆಂಟ್ ಪ್ಲಾಸ್ಟರ್, ಕ್ಯೂರಿಂಗ್ ಪ್ಲಾಸ್ಟರ್ ಮರುದಿನದಿಂದಲೇ ಶುರುಮಾಡಿ ಕನಿಷ್ಠ 7 ದಿನಗಳವರೆಗೆ ಕ್ಯೂರಿಂಗ್ ಮಾಡುವುದನ್ನು ಮುಂದುವರೆಯಬೇಕು.
ಹೌದು, ಪ್ಲ್ಯಾಸ್ಟರಿಂಗ್ ನಂತರ ನೀವು ಗೋಡೆಗಳನ್ನು ಚಿತ್ರಿಸಬಹುದು ಆದರೆ ಪ್ಲ್ಯಾಸ್ಟರ್ ಸಂಪೂರ್ಣವಾಗಿ ಶುಷ್ಕವಾಗಿರುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಪ್ಲಾಸ್ಟರ್ ಸಂಪೂರ್ಣವಾಗಿ ಒಣಗಿದ ನಂತರ, ಪ್ಲ್ಯಾಸ್ಟರ್ ಅನ್ನು ಮುಚ್ಚಲು ಮತ್ತು ಗೋಡೆಯೊಳಗೆ ಬಣ್ಣವನ್ನು ಹೀರಿಕೊಳ್ಳುವುದನ್ನು ತಡೆಯಲು ಪ್ರೈಮಿಂಗ್ ಪೇಂಟ್ ಅನ್ನು ಅನ್ವಯಿಸಲು ಸೂಚಿಸಲಾಗುತ್ತದೆ.
ಮನೆಯ ಇಂಟೀರಿಯರ್ ಗೋಡೆಗಳಿಗೆ ಸಾಮಾನ್ಯವಾಗಿ ಪ್ಲಾಸ್ಟರ್ ಮಿಕ್ಸ್ ಮಾಡಿಕೊಳ್ಳಲು 1 ಭಾಗ ಸಿಮೆಂಟ್ ಹಾಗೂ 6 ಭಾಗ ಮರಳು ಬಳಸಿ ಈ ರೇಶೋದಲ್ಲಿ ಮಿಕ್ಸ್ ಮಾಡಿಕೊಳ್ಳಬೇಕು. ಆದರೆ ಎಕ್ಸ್ಟಿರೀಯರ್ ಗೋಡೆಗಳಿಗೆ ಅಥವಾ ತೇವಾಂಶಕ್ಕೆ ತೆರೆದುಕೊಮಡಿರುವ ಹೊರಮೈಗಳಿಗೆ, 1 ಭಾಗ ಸಿಮೆಂಟ್ ಮತ್ತು 4 ಭಾಗಗಳ ಮರಳಿನ ರೇಶೋ ಬಳಸಿ ಮಿಕ್ಸ್ ಮಾಡಿಕೊಳ್ಳಲಾಗುತ್ತದೆ. ಆದರೂ, ನಿರ್ದಿಷ್ಟ ಅವಶ್ಯಕತೆಗಳಿಗೆ ತಕ್ಕಂತೆ ಇದು ಬದಲಾಗಬಹುದು.