1. ವೆಂಟಿಲೇಶನ್ ವ್ಯವಸ್ಥೆ
ನಿಮ್ಮ ಮನೆಗೆ ನೀವು ಯಾವ ರೀತಿಯ ವೆಂಟಿಲೇಶನ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂಬ ನಿರ್ಧಾರವನ್ನು ಮಾಡಲು ಪ್ರಮುಖವಾಗಿ ನಿಮ್ಮ ಮನೆಯ ಲೇಔಟ್ ಮತ್ತು ನಿಮ್ಮ ನಿರ್ದಿಷ್ಟ ಅಗತ್ಯಗಳು, ಇವುಗಳ ಮೇಲೆ ಅವಲಂಬಿತವಾಗಿರುತ್ತದೆ. ಸಾಮಾನ್ಯ ಆಯ್ಕೆಗಳಲ್ಲಿ ನ್ಯಾಚುರಲ್ ವೆಂಟಿಲೇಶನ್ (ಕಿಟಕಿಗಳು ಮತ್ತು ಬಾಗಿಲುಗಳ ಮೂಲಕ ಗಾಳಿ ಬರುವಂತೆ), ಮೆಕ್ಯಾನಿಕಲ್ ವೆಂಟಿಲೇಶನ್ ವ್ಯವಸ್ಥೆ (ಎಕ್ಸಾಸ್ಟ್ ಫ್ಯಾನ್‌ಗಳು, ಮೇಲ್ಮಟ್ಟದಲ್ಲಿನ ಫ್ಯಾನ್‌ಗಳು ಮತ್ತು ಇಡೀ-ಮನೆಯಲ್ಲಿನ ಫ್ಯಾನ್‌ಗಳಂತಹವು) ಅಥವಾ ಬ್ಯಾಲನ್ಸಡ್ ವೆಂಟಿಲೇಶನ್, (ಉದಾಹರಣೆಗೆ ಉಷ್ಣವನ್ನು ಪಡೆಯುವ ವೆಂಟಿಲೇಶನ್ ಅಥವಾ ಶಕ್ತಿಯನ್ನು ಪಡೆಯುವ ವೆಂಟಿಲೇಶನ್) ಮುಂತಾದವುಗಳು ಸೇರಿವೆ. ಪ್ರತಿಯೊಂದು ವೆಂಟಿಲೇಶನ್ ವ್ಯವಸ್ಥೆಅ ನುಕೂಲಗತೆಗಳನ್ನು ಹೊಂದಿರುವಂತೆಯೇ ಅನಾನುಕೂಲಗಳನ್ನು ಹೊಂದಿವೆ. ಹೀಗಾಗಿ ನಿಮ್ಮ ಮನೆಗೆ ಹೆಚ್ಚು ಸೂಕ್ತವಾಗುವ ವೆಂಟಿಲೇಶನ್ ವ್ಯವಸ್ಥೆ ಆಯ್ಕೆಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
2. ವೆಂಟಿಲೇಶನ್ ತಂತ್ರ
ನಿಮ್ಮ ಅಗತ್ಯಗಳಿಗೆ ಹೊಂದಿಕೆಯಾಗುವ ಮನೆಯ ವೆಂಟಿಲೇಶನ್ ತಂತ್ರವನ್ನು ನಿರ್ಧರಿಸಿಕೊಳ್ಳಿರಿ. ಉದಾಹರಣೆಗೆ, ನೀವು ಹೆಚ್ಚುವರಿ ತೇವಾಂಶವನ್ನು ಹೊರಗೆ ಹಾಕಲು ಬಯಸಿದರೆ, ಎಕ್ಸಾಸ್ಟ್ ವೆಂಟಿಲೇಶನ್ಗೆ ಆದ್ಯತೆ ನೀಡುವ ವ್ಯವಸ್ಥೆ ಸೂಕ್ತವಾಗುತ್ತದೆ. ಅದಕ್ಕೆ ಬದಲಾಗಿ, ನೀವು ಕನಿಷ್ಟ ವಿದ್ಯುತ್ ಬಳಸಲು ತೀರ್ಮಾನಿಸಿದ್ದರೆ, ಉಷ್ಣ ಅಥವಾ ಎನರ್ಜಿ ರಿಕವರಿ ಸಾಮರ್ಥ್ಯಗಳೊಂದಿಗೆ ಬ್ಯಾಲನ್ಸಡ್ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಿರಿ.
3. ಬಜೆಟ್ (ವೆಚ್ಚ)
ವ್ಯವಸ್ಥೆಗೆ ತಕ್ಕಂತೆ ವ್ಯಯಿಸುವ ಹಣವೂ ಬದಲಾಗುತ್ತದೆ, ಸರಿಯಾದ ರೀತಿಯ ವೆಂಟಿಲೇಶನ್ ವ್ಯಸಸ್ಥೆಗಳು ಮತ್ತು ವೈವಿಧ್ಯತೆಗಳಿಂದ ಆಯ್ಕೆಮಾಡುವಾಗ ನಿಮ್ಮ ಹಣಕಾಸಿನ ಸ್ಥಿತಿಗೆ ತಕ್ಕಂತಹುದನ್ನು ಆಯ್ಕೆ ಮಾಡುವುದು ಮತ್ತು ನಿಮ್ಮ ಬಜೆಟ್ ಅನ್ನು ಯೋಜಿಸುವುದು ಅಗತ್ಯವಾಗಿದೆ.
4. ಸರಿಯಾದ ಸೈಜ್
ವೆಂಟಿಲೇಶನ್ ವ್ಯವಸ್ಥೆ ನಿಮ್ಮ ಮನೆಗೆ ತಕ್ಕ ಸೈಜ್ನಲ್ಲಿದೆ ಎಂಬುದನ್ನು ನೋಡಿಕೊಳ್ಳಿ. ಬೃಹತ್ ಗಾತ್ರದ ವೆಂಟಿಲೇಶನ್ ವ್ಯವಸ್ಥೆ ಕೂಡ ಸರಿಯಾಗದಿರಬಹುದು, ಅದೇ ರೀತಿ ಸಣ್ಣ ಸೈಜಿನ ವ್ಯವಸ್ಥೆಯೂ ನಿಮ್ಮ ವೆಂಟಿಲೇಶನ್ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪರಿಹರಿಸುವುದಿಲ್ಲ. ಮನೆಗೆ ತಕ್ಕ ವ್ಯವಸ್ಥೆ ಆಯ್ಕೆಮಾಡಿಕೊಳ್ಳಿರಿ.
5. ಗಾಳಿಯ ಗುಣಮಟ್ಟ ಮಾನಿಟರ್ ಮಾಡುವುದು
ನಿಮ್ಮ ವೆಂಟಿಲೇಶನ್ ವ್ಯವಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇಂಟಿರೀಯರ್ ಗಾಳಿಯ ಗುಣಮಟ್ಟವನ್ನು ಮಾನಿಟರ್ ಮಾಡುವುದು ಅತ್ಯಗತ್ಯ. ಹ್ಯೂಮಿಡಿಟಿ, ಕಾರ್ಬನ್ ಡೈಆಕ್ಸೈಡ್ ಮಟ್ಟಗಳು ಮತ್ತು ವಸ್ತುಗಳ ಕಣಗಳ ಕುರಿತು ತೀರ್ಮಾನಿಸಲು ಗಾಳಿಯ ಗುಣಮಟ್ಟ ಅಳೆಯುವುದನ್ನು ಒಳಗೊಳ್ಳಬಹುದು. ಇವೆಲ್ಲವೂ ನಿಮಗೆ ವೆಂಟಿಲೇಶನ್ ಹೊಂದಾಣಿಕೆಗಳನ್ನು ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ.
6. ನಿರ್ವಹಣೆ
ಫಿಲ್ಟರ್‌ಗಳು, ಫ್ಯಾನ್‌ಗಳು ಮತ್ತು ಇತರ ಘಟಕಗಳು ದಿನಕಳೆದಂತೆ ಧೂಳು ಮತ್ತು ಕಸ-ಕಡ್ಡಿಯಿಂದ ತುಂಬಬಹುದು, ಅದು ವ್ಯವಸ್ಥೆಯ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ. ನಿಯಮಿತ ನಿರ್ವಹಣೆ ಮತ್ತು ಸೇವೆಗಾಗಿ ತಯಾರಕರು ಕೊಟ್ಟಿರುವ ಶಿಫಾರಸುಗಳನ್ನು ಅನುಸರಿಸಿ.
7. ವೃತ್ತಿಪರರಿಂದ ಅಳವಡಿಸುವುದು
ನೀವು ಮೆಕ್ಯಾನಿಕಲ್ ವೆಂಟಿಲೇಶನ್ ವ್ಯವಸ್ಥೆಯನ್ನು ಅಳವಡಿಸುತ್ತಿದ್ದರೆ, ಅದನ್ನು ವೃತ್ತಿಪರರರಿಂದ ಸ್ಥಾಪಿಸಲು ಸಲಹೆ ನೀಡಲಾಗುತ್ತದೆ. ವಿವಿಧ ರೀತಿಯ ವೆಂಟಿಲೇಶನ್ ವ್ಯವಸ್ಥೆಗಳ ಸರಿಯಾದ ಅಳವಡಿಕೆ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸುರಕ್ಷತಾ ಮಾನದಂಡಗಳಿಗೆ ಬದ್ಧವಾಗಿದೆ ಎಂದು ಖಚಿತಪಡಿಸುತ್ತದೆ.
ನೀವು ವಿವಿಧ ರೀತಿಯ ವೆಂಟಿಲೇಶನ್ ವ್ಯವಸ್ಥೆಗಳಿಂದ ಒಂದನ್ನು ಆಯ್ಕೆ ಮಾಡುವ ಮೊದಲು, ನೀವು ಅನುಭವಿ ಇಂಜಿನಿಯರ್ಗೆ ಈ ಕೆಳಗಿನ ಪ್ರಶ್ನೆಗಳನ್ನು ಕೇಳಬೇಕು:
• ಕಟ್ಟಡದಲ್ಲಿ ಒಟ್ಟಾರೆ ಗಾಳಿಯ ಒಳ ಹರಿವಿನ ದಿಕ್ಕು ಸ್ವಚ್ಛವಾದ ಸ್ಥಳದಿಂದ ಕೊಳಕಿನ ವಲಯಗಳತ್ತ ಇದೆಯೇ?
• ಪ್ರತಿ ಕೋಣೆಗೆ ತಾಜಾ ಗಾಳಿಯನ್ನು ಒದಗಿಸುವಲ್ಲಿ ವೆಂಟಿಲೇಶನ್ ವ್ಯವಸ್ಥೆಯು ಎಷ್ಟು ಪರಿಣಾಮಕಾರಿಯಾಗಿದೆ?
• ಪ್ರತಿ ಕೋಣೆಯಿಂದ ವಾಸನೆಯನ್ನು ಹೊರಗೆಹಾಕುವಲ್ಲಿ ವೆಂಟಿಲೇಶನ್ ವ್ಯವಸ್ಥೆಯು ಎಷ್ಟು ಪರಿಣಾಮಕಾರಿಯಾಗಿದೆ?
ಮನೆಗಳಿಗೆ ವೆಂಟಿಲೇಟರ್ ವಿನ್ಯಾಸವನ್ನು ನಿರ್ಧರಿಸಲು ಕೆಲವು ಸಲಹೆಗಳು
• ಸಣ್ಣ ಕಿಟಕಿಗಳ ಮೂಲಕ ಕ್ರಾಸ್ ವೆಂಟಿಲೇಶನ್
• ಬಾಗಿಲುಗಳ ಮೇಲೆ ನೆಟ್ಗಳನ್ನು ಅಳವಡಿಸುವುದು, ಆ ಮೂಲಕ ಗಾಳಿಯು ಹಾದು ಒಳಗೆ ಹೋಗುತ್ತದೆ
• ಒಳಗೆ ತಾಜಾ ಗಾಳಿ ಸಿಗುವಂತೆ ಮಾಡಲು ಒಳಾಂಗಣ ಸಸ್ಯಗಳನ್ನು ನೆಡಬೇಕು