4) ವಿಸ್ತರಣೆಗೊಳ್ಳುವ ಬಿರುಕುಗಳು
ಕಾಂಕ್ರೀಟ್ ತಾಪಮಾನ ಮತ್ತು ತೇವಾಂಶದ ಮಟ್ಟದಲ್ಲಿನ ಬದಲಾವಣೆಗಳಿಂದ ವಿಸ್ತರಿಸಿದಾಗ ಮತ್ತು ಸಂಕುಚಿತಗೊಂಡಾಗ ಎಕ್ಸ್ಪಾನ್ಶನ್ (ವಿಸ್ತರಣೆ) ಬಿರುಕುಗಳು ಉಂಟಾಗುತ್ತವೆ. ಈ ರೀತಿಯ ಬಿರುಕುಗಳು ಸಾಮಾನ್ಯವಾಗಿ ನೋಡಲಿಕ್ಕೆ ಸರಳ ರೇಖೆಯಂತೆ ಕಾಣುತ್ತವೆ, ಇವು ಕಾಂಕ್ರೀಟ್‌ನ ಮೇಲ್ಭಾಗದಲ್ಲಿ ಇರುತ್ತವೆ. ತೀವ್ರವಾದ ಹವಾಮಾನ ಪರಿಸ್ಥಿತಿಗಳು ಮತ್ತು ಅಸಮರ್ಪಕ ಜಾಯಿಂಟ್ ಹಾಕುವುದು ಸೇರಿದಂತೆ ವಿವಿಧ ಅಂಶಗಳಿಂದ ಎಕ್ಸ್ಪಾನ್ಶನ್ ಬಿರುಕುಗಳು ಉಂಟಾಗಬಹುದು. ತಾಪಮಾನದಲ್ಲಿನ ಬದಲಾವಣೆಗಳಿಂದಾಗಿ ಬಿರುಕುಗಳು ಉಂಟಾಗುತ್ತವೆ ಮತ್ತು ಸಾಮಾನ್ಯವಾಗಿ ಅವುಗಳನ್ನು ಉಷ್ಣ ಬಿರುಕುಗಳು ಎಂದು ಕರೆಯಲಾಗುತ್ತದೆ. ವಿಶಿಷ್ಟವಾಗಿ ಸ್ಟ್ರಕ್ಚರಲ್ ಸಂಬಂಧವಿಲ್ಲದಿದ್ದರೂ, ಎಕ್ಸ್ಪಾನ್ಶನ್ ಬಿರುಕುಗಳು ಕಾಂಕ್ರೀಟ್‌ಗೆ ನೀರು ಸೋರುವಂತೆ ಮಾಡುತ್ತವೆ, ಇದು ಇತರ ರೀತಿಯ ಬಿರುಕುಗಳು ಮತ್ತು ಹಾನಿಗೆ ಕಾರಣವಾಗಬಹುದು. ಸರಿಯಾದ ಅಳವಡಿಕೆ ತಂತ್ರಗಳು ಮತ್ತು ಎಕ್ಸ್ಪಾನ್ಶನ್ ಜಾಯಿಂಟ್ಗಳ ಬಳಕೆಯ ರಚನೆಯಿಂದ ವಿಸ್ತರಣೆ ಬಿರುಕುಳನ್ನು ತಡೆಯಲು ಸಹಾಯ ಮಾಡುತ್ತದೆ.
5) ಹೀವಿಂಗ್ ಬಿರುಕುಗಳು
ಕಾಂಕ್ರೀಟ್‌ನ ಕೆಳಗಿರುವ ನೆಲವು ಊದಿದಾಗ ಅಥವಾ ಸರಿದಾಡಿದಾಗ ಹೀವಿಂಗ್ ಬಿರುಕುಗಳು ಸಂಭವಿಸುತ್ತವೆ, ಇದರಿಂದಾಗಿ ಕಾಂಕ್ರೀಟ್ ಮೇಲಕ್ಕೆ ಏರುತ್ತದೆ. ಈ ರೀತಿಯ ಬಿರುಕುಗಳು ಸಾಮಾನ್ಯವಾಗಿ ತೀವ್ರವಾದ ತಾಪಮಾನ ಬದಲಾವಣೆಗಳು, ತೇವಾಂಶ ಬದಲಾವಣೆಗಳು ಅಥವಾ ಫ್ರೀಜ್-ಥೋ ಸೈಕಲ್ಗಳಿಂದ ಉಂಟಾಗುತ್ತದೆ. ಹೀವಿಂಗ್ ಬಿರುಕುಗಳು ಕಾಂಕ್ರೀಟ್‌ಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತವೆ, ಜೊತೆಗೆ ಗೋಡೆಗಳು ಅಥವಾ ಅಡಿಪಾಯಗಳಂತಹ ಸುತ್ತಮುತ್ತಲಿನ ಸ್ಟ್ರಕ್ಚರ್ಗಳ ಹಾನಿಗೂ ಕಾರಣವಾಗಬಹುದು. ಸರಿಯಾದ ಒಳಚರಂಡಿ, ಮಣ್ಣಿನ ಸಂಕೋಚನ ಮತ್ತು ಅನುಸ್ಥಾಪನಾ ತಂತ್ರಗಳು ಹೀವಿಂಗ್ ಬಿರುಕುಗಳನ್ನು ಉಂಟಾಗುವುದನ್ನು ತಡೆಯಲು ಸಹಾಯ ಮಾಡುತ್ತವೆ. ಹೀವಿಂಗ್ ಬಿರುಕುಗಳು ಈಗಾಗಲೇ ಆಗಿದ್ದರೆ, ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಅವುಗಳ ಮೂಲ ಕಾರಣವನ್ನು ಪರಿಹರಿಸುವುದು ಮುಖ್ಯವಾಗಿದೆ.
6) ಓವರ್‌ಲೋಡ್ ಬಿರುಕುಗಳು
ಕಾಂಕ್ರೀಟ್ ಮೇಲೆ ಇರಿಸಲಾದ ತೂಕವು ಅದಕ್ಕಿರುವ ಸಾಮರ್ಥ್ಯವನ್ನು ಮೀರಿದಾಗ ಓವರ್‌ಲೋಡ್ ಬಿರುಕುಗಳು ಸಂಭವಿಸುತ್ತವೆ. ಇದು ಭಾರೀ ಯಂತ್ರೋಪಕರಣಗಳು ಅಥವಾ ವಾಹನಗಳು ಅಥವಾ ಅತಿಯಾದ ಜನ ದಟ್ಟಣೆಯಿಂದ ಉಂಟಾಗಬಹುದು. ಓವರ್‌ಲೋಡ್ ಬಿರುಕುಗಳು ವಿಶೇಷವಾಗಿ ಅಪಾಯಕಾರಿ, ಏಕೆಂದರೆ ಅವು ಕಾಂಕ್ರೀಟ್ ಮತ್ತು ಸುತ್ತಮುತ್ತಲಿನ ಸ್ಟ್ರಕ್ಚರ್ಗಳ ಸಮಗ್ರತೆಯನ್ನು ಕಡಿಮೆ ಮಾಡಬಹುದು. ಸರಿಯಾದ ಭಾರ ಹಂಚಿಕೆ, ಬಲವರ್ಧನೆ ಮತ್ತು ನಿರ್ವಹಣೆ ಓವರ್‌ಲೋಡ್ ಬಿರುಕುಗಳನ್ನು ರೂಪಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ. ಓವರ್‌ಲೋಡ್ ಬಿರುಕುಗಳು ಇದ್ದರೆ, ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚು ಬಾಳಿಕೆ ಬರುವ ಕಾಂಕ್ರೀಟ್ ಅನ್ನು ಬಳಸಿ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದು ಮುಖ್ಯವಾಗಿದೆ.
7) ಬಲವರ್ಧನೆಯ ತುಕ್ಕು
ಕಾಂಕ್ರೀಟ್ ಒಳಗೆ ಸ್ಟೀಲ್ ತುಕ್ಕು ಹಿಡಿಯಲು ಪ್ರಾರಂಭಿಸಿದಾಗ ತುಕ್ಕು ಸಂಭವಿಸುತ್ತದೆ, ಇದು ಕಾಂಕ್ರೀಟ್ ವಿಸ್ತರಣೆಯಾಗಲು ಮತ್ತು ಬಿರುಕು ಉಂಟಾಗಲು ಕಾರಣವಾಗುತ್ತದೆ. ತೇವಾಂಶ, ಉಪ್ಪು ಅಥವಾ ಇತರ ನಾಶಕಾರಿ ವಸ್ತುಗಳಿಗೆ ಒಡ್ಡಿಕೊಳ್ಳುವುದರಿಂದ ಈ ರೀತಿಯ ಬಿರುಕುಗಳು ಹೆಚ್ಚಾಗಿ ಉಂಟಾಗುತ್ತವೆ. ಬಲವರ್ಧನೆಯ ತುಕ್ಕು ಗಂಭೀರ ಸಮಸ್ಯೆಯಾಗಿರಬಹುದು, ಏಕೆಂದರೆ ಇದು ಕಾಂಕ್ರೀಟ್ ಮತ್ತು ಸುತ್ತಮುತ್ತಲಿನ ಸ್ಟ್ರಕ್ಚರ್ಗಳ ಸಮಗ್ರತೆಗೆ ಹಾನಿ ಮಾಡಬಹುದು. ಸರಿಯಾದ ಕಾಂಕ್ರೀಟ್ ಮಿಶ್ರಣ ವಿನ್ಯಾಸ, ನಿಯೋಜನೆ ಮತ್ತು ನಿರ್ವಹಣೆಯು ಬಲವರ್ಧನೆಯ ತುಕ್ಕು ಸಂಭವಿಸುವುದನ್ನು ತಡೆಯಲು ಸಹಾಯ ಮಾಡುತ್ತದೆ. ಬಲವರ್ಧನೆಯ ತುಕ್ಕು ಇದ್ದರೆ, ಹೆಚ್ಚಿನ ಹಾನಿಯನ್ನು ತಡೆಗಟ್ಟಲು ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲು ಮುಖ್ಯವಾಗಿದೆ.
ಇದನ್ನೂ ಓದಿ: ಕಾಂಕ್ರೀಟ್ ಕ್ಯೂರಿಂಗ್ ಮಾಡುವುದು ಹೇಗೆ ಮತ್ತು ವಿವಿಧ ಕ್ಯೂರಿಂಗ್ ವಿಧಾನಗಳು