ಗೋಡೆಗಳ ಮೇಲೆ ಟೈಲ್ ಅನ್ನು ಹೇಗೆ ಹಾಕಬೇಕು ಎಂಬುದನ್ನು ಕಲಿಯುವಾಗ, ನಿಮ್ಮ ಮನೆಯಲ್ಲಿ ಕಲಾತ್ಮಕವಾಗಿ ಆಕರ್ಷಕವಾದ ಮತ್ತು ಬಾಳಿಕೆ ಬರುವಂತೆ ಗೋಡೆಯ ಮೇಲೆ ಟೈಲಿಂಗ್ ಮಾಡಲು ಗೋಡೆಯನ್ನು ಸಿದ್ಧಪಡಿಸಿಕೊಳ್ಳಲು ನಿಮಗೆ ಈ ಕೆಳಗಿನ ಸಾಮಗ್ರಿಗಳು ಬೇಕಾಗುತ್ತವೆ.
1. ಸಿಮೆಂಟ್
ಒಣದಾಗ ಜಾಗದಲ್ಲಿ ಸಿಮೆಂಟ್ ಇಟ್ಟುಕಪೊಳ್ಳುವುದನ್ನು ಮರೆಯಬೇಡಿರಿ; ಗಾರೆ ತಯಾರಿಸಲು ನಿಮಗೆ ಸಿಮೆಂಟ್ ಬೇಕಾಗುತ್ತದೆ.
2. ಮರಳು
ಸಿಮೆಂಟ್ ಮತ್ತು ನೀರಿನಿಂದ ಮಿಶ್ರಣ ಮಾಡುವ ಮೂಲಕ ಗಾರೆ ತಯಾರಿಸಲು ನಿಮಗೆ ಉಸುಕು ಬೇಕಾಗುತ್ತದೆ.
3. ಟೈಲ್ ಅಂಟಿಸುವ ಮಿಶ್ರಣ
ನಿಮ್ಮ ಗೋಡೆಯ ಮೇಲೆ ಟೈಲ್ ಕೂಡಿಸಲು ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿಮೇಡ್ ಟೈಲ್ ಅಂಟುಗಳನ್ನು ನೀವು ಬಳಸಬಹುದು.
4. ಟೈಲ್ಸ್
ಗೋಡೆಯ ಟೈಲ್ ಸ್ಥಾಪನೆಯ ನಿಮ್ಮ ಪ್ರದೇಶದ ಸೌಂದರ್ಯಕ್ಕೆ ಸರಿಹೊಂದುವ ಉತ್ತಮ ಗುಣಮಟ್ಟದ ಟೈಲ್ಸ್‌ಗಳನ್ನು ಆರಿಸಿಕೊಳ್ಳಿರಿ.
5. ಕೈ ಕೈಗವಸುಗಳು
ರಕ್ಷಣೆ ಕೊಡುವ ಕೈಗವಸುಗಳು ಅಂದರೆ, ಹ್ಯಾಂಡ್ ಗ್ಲೋವ್ಸ್ಗಳನ್ನು ಧರಿಸುವುದರಿಂದ ವಾಲ್ ಟೈಲ್ಸ್‌ಗಳನ್ನು ಅಳವಡಿಸಲು ಬಳಸುವ ಅಂಟಿನಿಂದ ಉಂಟಾಗುವ ಸಿಮೆಂಟ್ ಉರಿ ಮತ್ತು ಕಿರಿಕಿರಿಯಿಂದ ನಿಮ್ಮನ್ನು ರಕ್ಷಣೆ ಮಾಡುತ್ತದೆ.
6. ಎಪಾಕ್ಸಿ ಗ್ರೌಟ್
ಟೈಲ್ಗಳ ಮಧ್ಯದ ಜಾಗೆಯ ಮಧ್ಯೆ ಟಚ್ ಸೀಲ್ ಅನ್ನು ರಚಿಸಲು ವಾಲ್ ಟೈಲ್ಸ್ ಹಾಕುವ ಕೆಲಸದಲ್ಲಿ ಎಪಾಕ್ಸಿ ಗ್ರೌಟ್ ಬೇಕಾಗುತ್ತದೆ.
7. ಗ್ರೌಟ್ ಫ್ಲೋಟ್
ವಾಲ್ ಟೈಲ್ಸ್ ಹಾಕಲು ಎಪಾಕ್ಸಿ ಗ್ರೌಟ್ ಅನ್ನು ಮೃದುವಾಗಿ ಹಚ್ಚಲು ಈ ಸಾಧನದ ಅಗತ್ಯವಿದೆ.
8. ಸ್ಪಾಂಜ್
ನೀವು ವಾಲ್ ಟೈಲ್ಸ್ ಹಾಕಿ ಮುಗಿಸಿದ ಬಳಿಕ ಗೋಡೆಯ ಮೇಲೆ ಉಳಿದಿರುವ ಗ್ರೌಟ್ ಅನ್ನು ಸ್ವಚ್ಛಗೊಳಿಸಲು ಒದ್ದೆಯಾಗಿರುವ ಸ್ವಚ್ಛವಾದ ಒಂದು ಸ್ಪಾಂಜ್ ಅಗತ್ಯವಿದೆ.
9. ಅಳತೆಯ ಟೇಪ್
ಗೋಡೆಯ ಮೇಲೆ ಟೈಲ್ಸ್‌ಗಳನ್ನು ಅಂಟಿಸುವ ಜಾಗೆಯನ್ನು ಅಳತೆ ಮಾಡಿ ಲೆಕ್ಕಹಾಕಿದ ವಸ್ತುಗಳ ಸರಿಯಾದ ಪ್ರಮಾಣವನ್ನು ನೀವು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ಉಪಕರಣದ ಅಗತ್ಯವಿದೆ.
10. ಡೈಮಂಡ್ ಕಟ್ಟರ್
ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಟೈಲ್ಸ್‌ಗಳನ್ನು ಕಟ್ ಮಾಡಲು ಈ ಉಪಕರಣದ ಅಗತ್ಯವಿದೆ.
11 ಬ್ಯಾಟೆನ್ಸ್
ನೆಲದಿಂದ ಕೆಲವು ಇಂಚುಗಳಷ್ಟು ಮೇಲೆ ಅಂಚುಗಳನ್ನು ಇಟ್ಟುಕೊಳ್ಳಲು ನಿಮಗೆ ಬ್ಯಾಟನ್ ಅಗತ್ಯವಿದೆ.
12. ಕರಣೆ (ಟ್ರೋವೆಲ್)
ವಾಲ್ ಟೈಲ್ಸ್‌ಗಳನ್ನು ಹಾಕುವಾಗ ನೀವು ಮಾಡುವ ಗಾರೆ ಮಿಶ್ರಣವನ್ನು ಹಚ್ಚಲು ಈ ಉಪಕರಣದ ಅಗತ್ಯವಿದೆ.
ವಾಲ್ ಟೈಲಿಂಗ್ ಮಾಡಲು ಹಂತ-ಹಂತದ ವಿಧಾನ
ನಿಮ್ಮ ಮನೆಯ ಅಲಂಕಾರದಲ್ಲಿ ಸುಂದರವಾದ, ಬಾಳಿಕೆ ಬರುವಂತೆ ವಾಲ್ ಟೈಲ್ಸ್ ಹಾಕಲು ಈ ವಾಲ್ ಟೈಲ್ ಅಳವಡಿಕೆಯ ಹಂತಗಳನ್ನು ಅನುಸರಿಸಿ.