ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ವಿವಿಧ ರೀತಿಯ ಇಳಿಜಾರಿನ ಛಾವಣಿಗಳ ಬಗ್ಗೆ ಮಾಹಿತಿ ಮತ್ತು ಅದರ ಅನುಕೂಲಗಳು

ನೀರು ಹೇಗೆ ಹರಿದು ಹೋಗಬೇಕು ಎನ್ನುವುದನ್ನು ಛಾವಣಿಯ ಯಾವ ರೀತಿಯಲ್ಲಿ ಇಳಿಜಾರು ವ್ಯವಸ್ಥೆಯನ್ನು ಹೊಂದಿಕೊಂಡಿರುತ್ತದೆ. ಸಮತಟ್ಟಾಗಿರುವ ಛಾವಣಿ ಮತ್ತು ಇಳಿಜಾರು ಛಾವಣಿ ಹೀಗೆ ಆಯಾ ನಿರ್ಮಾಣ ವಿನ್ಯಾಸದಲ್ಲಿ ಅಳವಡಿಸಿಕೊಂಡಂತೆ ನೀರು ಹರಿದು ಹೋಗಲು ವ್ಯವಸ್ಥೆ ರೂಪಿಸಲಾಗುತ್ತದೆ. ಈ ಲೇಖನದಲ್ಲಿ ಇಳಿಜಾರಿನ ಛಾವಣಿ ಎಂದರೆ ಏನು ಮತ್ತು ಇಳಿಜಾರಿನ ಛಾವಣಿಗಳ ವಿವಿಧ ವಿಧಗಳನ್ನು ಪರಿಚಯ ಮಾಡಿಕೊಡಲಿದ್ದೇವೆ.

Share:




ಮನೆ ನಿರ್ಮಾಣ ಕಾಮಗಾರಿಗಿಂತ ಮೊದಲು ಪ್ರಾಥಮಿಕವಾಗಿರುವ ಕೆಲವು ಅಂಶಗಳನ್ನು ನೀವು ಗಮನದಲ್ಲಿ ಇರಿಸಿಕೊಳ್ಳಬೇಕಾಗಿರುತ್ತದೆ:

 

  1. ಕಟ್ಟಡಕ್ಕೆ ಅತ್ಯಂತ ದೃಢವಾಗಿರುವ ಗೋಡೆ ಇರಬೇಕು
  2. ಗಾಳಿ ಮತ್ತು ಬೆಳಕು ಸರಿಯಾದ ರೀತಿಯಲ್ಲಿ ಮನೆಯ ಒಳಗೆ ಪ್ರವೇಶಿಸುವಂತಾಗಲು ಕಿಟಕಿಗಳು ಇರಬೇಕು. ಮತ್ತೊಂದು ಪ್ರಮುಖ ಅಂಶವೆಂದರೆ ರಕ್ಷಣಾತ್ಮಕವಾಗಿ ಛಾವಣಿ ಇರಬೇಕು.
  3. ಸರಿಯಾದ ರೀತಿಯಲ್ಲಿ ದೀರ್ಘಾವಧಿಗೆ ಬಾಳಿಕೆ ಬರುವಂಥ ಛಾವಣಿ ಇಲ್ಲದೇ ಇದ್ದರೆ ನಿಮ್ಮ ಮನೆ ಗಾಳಿ, ನೀರು ಮತ್ತು ಬಿಸಿಲಿಗೆ ಒಡ್ಡಿಕೊಳ್ಳಬೇಕಾಗುತ್ತದೆ. ಹೀಗಾದರೆ, ಮನೆಯ ಬಾಳುವಿಕೆಯ ಅವಧಿ ಕಡಿಮೆಯಾಗುತ್ತದೆ.

 

ಮಾನವ ನಾಗರಿಕತೆಯ ಆರಂಭದಿಂದಲೂ ಮನೆ ಸೇರಿದಂತೆ ಕಟ್ಟಡಗಳ ಮೇಲೆ ನಿರ್ಮಿಸಲಾಗುವ ಛಾವಣಿ ಅತ್ಯಂತ ಪ್ರಧಾನ ಅಂಶವಾಗಿದೆ. ಕಟ್ಟಡಗಳಿಗೆ ರಕ್ಷಣೆಯನ್ನು ನೀಡುವುದರ ಜತೆಗೆ ಅದಕ್ಕೆ ನೀರು ಹರಿದು ಹೋಗಲು ಬೇಕಾಗಿರುವ ವ್ಯವಸ್ಥೆಯನ್ನೂ ಅದು ನೀಡುತ್ತದೆ. ನಮಗೆ ಬೇಕಾಗಿರುವ ಕಟ್ಟಡ ವಿನ್ಯಾಸದ ಜತೆಗೆ ಅದಕ್ಕೆ ಅನುಗುಣವಾಗಿರುವ ಚರಂಡಿ ವ್ಯವಸ್ಥೆಯನ್ನು ಅಳವಡಿಸಿಕೊಂಡು ನಿರ್ಮಾಣ ಕಾಮಗಾರಿಯಲ್ಲಿ ನಾವು ಮುಂದುವರಿಯಬೇಕು.

ಇಳಿಜಾರಿನ ಛಾವಣಿ ಎಂದರೇನು?

 

ಕೆಲವು ವಿಧಗಳ ಛಾವಣಿಗಳು ಕಟ್ಟಡದ ಕೇಂದ್ರದಿಂದ ಇಳಿಜಾರಾಗಿ ಇರುತ್ತವೆ. ಅವುಗಳಲ್ಲಿ ಸಾಮಾನ್ಯವಾಗಿ ಎರಡು ಭಾಗಗಳು ಇರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ಒಂದು ಭಾಗವನ್ನು ಕೇಂದ್ರೀಕರಿಸಿ ಇಳಿಜಾರಿನಲ್ಲಿ ಇರುತ್ತವೆ. ಇಂಥವುಗಳನ್ನು ಇಳಿಜಾರಿನ ಛಾವಣಿ ಎಂದು ಕರೆಯುತ್ತಾರೆ.

ಛಾವಣಿ ಇಳಿಜಾರನ್ನು ಎತ್ತರವನ್ನು ಸಮತಲದ ಅಳತೆಯಿಂದ ಭಾಗಿಸುವ ಮೂಲಕ ತಿಳಿದುಕೊಳ್ಳಲು ಸಾಧ್ಯವಿದೆ.

ಇಂಥ ಮಾದರಿಯ ಛಾವಣಿ ಇತರ ಮಾದರಿಯ ಛಾವಣಿಗಳಿಗೆ ಹೋಲಿಕೆ ಮಾಡಿದರೆ ಕೈಗೆಟಕುವ ದರದಲ್ಲಿ ಇರುತ್ತದೆ. ಸಾಮಾನ್ಯವಾಗಿ ಅವುಗಳನ್ನು ಮರದಿಂದಲೇ ನಿರ್ಮಿಸಲಾಗಿರುತ್ತದೆ. ಆಧುನಿಕ ಯುಗದಲ್ಲಿ ಅವುಗಳನ್ನು ಕಾಂಕ್ರೀಟ್, ಸುಧಾರಿತ ಕಾಂಕ್ರೀಟ್ ಮತ್ತು ಸಿದ್ಧಪಡಿಸಿದ ಕಾಂಕ್ರೀಟ್ ಬಳಕೆ ಮಾಡಿ ನಿರ್ಮಾಣ ಮಾಡಲಾಗುತ್ತದೆ

 

ಇಂಥ ಛಾವಣಿಗಳನ್ನು ನಿರ್ಮಾಣ ಮಾಡುವ ಸಂದರ್ಭದಲ್ಲಿ ಮರವನ್ನು ಆರಂಭಿಕ ಹಂತದಲ್ಲಿ ಬಳಕೆ ಮಾಡುತ್ತಾರೆ. ಕಾರ್ಖಾನೆ, ಗೋದಾಮುಗಳು, ಗ್ಯಾರೇಜುಗಳ ನಿರ್ಮಾಣದ ವೇಳೆ ಇಳಿಜಾರಿನ ಛಾವಣಿಯನ್ನು ಆಯ್ಕೆ ಮಾಡುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತ, ಮಳೆಯಾಗುವ ಸ್ಥಳಗಳಲ್ಲಿಯೂ ಅದೇ ಮಾದರಿಯನ್ನು ಬಳಕೆ ಮಾಡುತ್ತಾರೆ. ಇದರಿಂದಾಗಿ ಸುಲಭವಾಗಿ ಛಾವಣಿ ಮೇಲೆ ಬಿದ್ದ ನೀರು ಹರಿದು ಹೋಗಲು ಅನುಕೂಲವಾಗುತ್ತದೆ.


ಇಳಿಜಾರಿನ ಛಾವಣಿಗಳ ವಿಧಗಳು

ಆಯಾ ಪ್ರದೇಶ ಹೊಂದಿರುವ ಪರಿಸರ, ಇಳಿಜಾರು ಪ್ರದೇಶಗಳು ಯಾವ ವಿಧವಾಗಿರುವ ಇಳಿಜಾರಿನ ಛಾವಣಿಗಳನ್ನು ಹೊಂದಬೇಕು ಎನ್ನುವುದನ್ನು ನಿರ್ಧರಿಸುತ್ತವೆ.

 

1.ಇಳಿಜಾರಿನ ಛಾವಣಿಗಳ ವಿಧಗಳು



 

ನಾವು ಈಗ ತಿಳಿದುಕೊಳ್ಳಲು ಹೊರಟಿರುವ ಛಾವಣಿಗಳ ಪಟ್ಟಿಯಲ್ಲಿ ಇದು ಇತ್ಯಂತ ಸರಳವಾಗಿರುವ ವ್ಯವಸ್ಥೆ. ಒಂದು ಬದಿಗೆ ಇಳಿಜಾರಿನ ಛಾವಣಿ ಸಾಮಾನ್ಯವಾಗಿ ಸಮಬಾಹು ತ್ರಿಕೋನದ ಆಕಾರ ಹೊಂದಿರುತ್ತದೆ. ಅದರಲ್ಲಿ ಒಂದು ಬದಿ ಕಟ್ಟಡದ ಕೇಂದ್ರ ಭಾಗಕ್ಕೆ ಜೋಡಣೆಯಾಗಿರುತ್ತದೆ ಮತ್ತು ಇನ್ನೊಂದು ಕೆಳಮುಖವಾಗಿರುತ್ತದೆ.

 

ಅದಕ್ಕೆ ಗುಡಿಸಲು ಮನೆ, ದೊಡ್ಡಿಯ ಮನೆ, ಇಳಿಜಾರಿನ ಛಾವಣಿ ಎಂದೂ ಕರೆಯುತ್ತಾರೆ. ಒಂದು ಬದಿಯ ಇಳಿಜಾರಿನ ಛಾವಣಿಯ ನಿರ್ಮಾಣಕ್ಕೆ ಹೆಚ್ಚಿನ ವಸ್ತುಗಳು ಬೇಕಾಗುವುದಿಲ್ಲ. ಜತೆಗೆ ಕಡಿಮೆ ವೆಚ್ಚದಲ್ಲಿ ಮುಕ್ತಾಯವಾಗುವುದರ ಜತೆಗೆ, ಹೆಚ್ಚಿನ ವಿನ್ಯಾಸವೂ ಬೇಕಾಗುವುದಿಲ್ಲ.

 

ಅವುಗಳನ್ನು ಸಾಮಾನ್ಯವಾಗಿ ಗ್ಯಾರೇಜುಗಳು, ಉಗ್ರಾಣಗಳ ನಿರ್ಮಾಣದಲ್ಲಿ ಬಳಕೆ ಮಾಡುತ್ತಾರೆ.

 

2. ಎರಡು ಭಾಗದ ಇಳಿಜಾರಿನ ಛಾವಣಿ



 

ಇದು ಎರಡು ವಿರುದ್ಧ ದಿಕ್ಕುಗಳಿಗೆ ಇಳಿದುಕೊಂಡಿರುವ ಛಾವಣಿ ವ್ಯವಸ್ಥೆಯಾಗಿದ್ದು, ಚತುರ್ಭುಜ ತ್ರಿಕೋನಾಕೃತಿಯಲ್ಲಿ ಇರುತ್ತದೆ. ಇಂಥ ವಿನ್ಯಾಸದ ಛಾವಣಿಯನ್ನು ಮನೆಗಳ ನಿರ್ಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಅದರಲ್ಲಿ ಸೂಕ್ತ ರೀತಿಯಲ್ಲಿ ನೀರು ಹರಿದು ಹೋಗಲು ವ್ಯವಸ್ಥೆಗಳನ್ನು ಹೊಂದಲು ಸಾಧ್ಯವಾಗುತ್ತದೆ, ನೋಡುವುದಕ್ಕೂ ಅಂದ ಮತ್ತು ನಿರ್ಮಾಣದಲ್ಲಿ ಹೆಚ್ಚಿನ ಶ್ರಮ ಅಗತ್ಯವಿಲ್ಲ ಎಂಬ ಕಾರಣಕ್ಕಾಗಿ ಈ ವಿನ್ಯಾಸವನ್ನು ಅಳವಡಿಸಲಾಗುತ್ತದೆ.

 

3. ಜೋಡಿ ಛಾವಣಿ


 

ಇದು ಛಾವಣಿಯ ಸರಳ ರೂಪ. ಎರಡು ಭಾಗಗಳಿಗೆ ಇಳಿಜಾರಾಗಿರುವ ಛಾವಣಿಗೆ ಸಮಾನವಾಗಿ ಇರುವುದೇ ಜೋಡಿ ಛಾವಣಿ. ಅದರಲ್ಲಿ ನಿರ್ಮಾಣ ಕಾರ್ಯ ಸುಲಭ ಮತ್ತು ವೆಚ್ಚದಾಯಕವಾಗಿ ಇರುವುದಿಲ್ಲ. ಅಲ್ಲಿ ಮರವನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ.

 

ಅವುಗಳು ಹಗುರವಾಗಿ ಇರುವುದರಿಂದ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಲೂ ಸುಲಭ. ಅವುಗಳನ್ನು ಗ್ಯಾರೇಜು ಮತ್ತು ಶೆಡ್ ಗಳ ನಿರ್ಮಾಣಕ್ಕೆ ಬಳಕೆ ಮಾಡಲಾಗುತ್ತದೆ. ಅವುಗಳಲ್ಲಿ ನೀರು ಸುಲಭವಾಗಿ ಹರಿದು ಹೋಗುವುದರಿಂದ ಮನೆಗಳ ನಿರ್ಮಾಣದಲ್ಲಿ ಕೂಡ ಉಪಯೋಗಿಸಲಾಗುತ್ತದೆ.

 

4. ಜೋಡಿ ಕ್ಸೋಸ್ ಛಾವಣಿ



 

ಇದು ಕೂಡ ಜೋಡಿ ಛಾವಣಿಯಂತೆಯೇ ಇರುತ್ತದೆ. ಒಂದು ಪ್ರಧಾನವಾಗಿರುವ ವ್ಯತ್ಯಾಸವೆಂದರೆ ಸಮತಲವಾಗಿರುವ ದಿಮ್ಮಿ ಕಟ್ಟಡದ ಎಲ್ಲ ವ್ಯವಸ್ಥೆಗೆ ಪ್ರಧಾನವಾಗಿರುವ ತೊವೆಗೆ ಜೋಡಣೆಯಾಗಿರುತ್ತದೆ. ಅದು ಎಲ್ಲ ಭಾರವನ್ನು ಹೊರುತ್ತದೆ ಮತ್ತು ಜೋಡಿ ಛಾವಣಿ ಆಧಾರವಾಗಿರುವ ಗೋಡೆಗಳಿಗೆ ವರ್ಗಾಯಿಸುತ್ತದೆ.

ಇಂಥ ವಿಧದ ಛಾವಣಿ ಹೆಚ್ಚುವರಿ ಸ್ಥಳದ ಅವಕಾಶ ಮಾಡಿಕೊಡುತ್ತದೆ. ಮೇಲ್ಭಾಗದಲ್ಲಿ ತ್ರಿಕೋನಾಕಾರದ ಸ್ಥಳವನ್ನು ಸೃಷ್ಟಿಸುತ್ತವೆ. ಅದರ ವಿನ್ಯಾಸಕ್ಕೆ ಹೆಚ್ಚು ಶ್ರಮ ಬೇಕಾಗುವುದಿಲ್ಲ ಮತ್ತು ಸುಲಭವಾಗಿ ಅದನ್ನು ಮಾಡಲು ಸಾಧ್ಯವೂ ಇದೆ.

 

5. ಓರೆ ಛಾವಣಿ



 

ಈ ವಿಧವಾಗಿರುವ ಛಾವಣಿಯಲ್ಲಿ ಲಂಬವಾಗಿರುವುದರ ಬದಲು ಇಳಿಜಾರಿನಲ್ಲಿ ಮುಕ್ತಾಯವಾಗುತ್ತದೆ. ಇದು ಎರಡು ಬದಿಗಳಲ್ಲಿ ಇಳಿಜಾರು ಹೊಂದಿರುತ್ತದೆ. ಮೇಲಿನ ಭಾಗಕ್ಕಿಂತ ಕೆಳಗಿನ ಭಾಗ ಹೆಚ್ಚು ಇಳಿಜಾರಾಗಿರುತ್ತದೆ. ಒಂದು ಓರೆ ಛಾವಣಿಯಲ್ಲಿ ಮೇಲ್ಭಾಗದಲ್ಲಿ ಅಗತ್ಯವಾಗಿ ಇರುವ ಸ್ಥಳಾವಕಾಶ ನೀಡುತ್ತದೆ. ಹೆಚ್ಚುವರಿಯಾಗಿ ಹಿಮಪಾತವಾಗುವ ವೇಳೆ ಸುಲಭವಾಗಿ ಅದು ನೀರಾಗಿ ಹರಿದು ಚರಂಡಿಗೆ ಸೇರಲು ಅನುಕೂಲವಾಗುತ್ತದೆ.

 

6. ಪರ್ಲಿನ್‌ ಛಾವಣಿ



 

ಇದು ಸಮತಲವಾಗಿ ಛಾವಣಿಯಲ್ಲಿ ಇರುವ ವ್ಯವಸ್ಥೆ. ಅದರಲ್ಲಿ ಒಟ್ಟು ಮೂರು ರೀತಿಯ ಸಮತಲವಾಗಿ ಮರವನ್ನು ಬಳಕೆ ಮಾಡಿದ್ದಾರೆ: ಪ್ರಧಾನ ಪ್ಲೇಟ್, ಪ್ಲೇಟ್, ಮತ್ತು ಸಾಮಾನ್ಯವಾಗಿ ಬಳಕೆಯಾದ ಮರ. ಅವುಗಳಿಗೆ ಪೆಯಿಂಟ್ ಅಥವಾ ಗ್ರೀಸ್ ಹಚ್ಚುವ ಮೂಲಕ ಅವುಗಳಿಗೆ ಗಾಳಿ ಸೇರಿದಂತೆ ಪರಿಸರದ ಅಂಶಗಳಿಂದ ರಕ್ಷಣೆ ನೀಡುವಂತೆ ಮಾಡಲಾಗುತ್ತದೆ.

 

ಪರ್ಲಿನ್‌ ಛಾವಣಿ ಕಟ್ಟಡಕ್ಕೆ ವಿಶೇಷವಾಗಿರುವ ರೂಪವನ್ನು ತಂದುಕೊಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ಆಯ್ಕೆಯ ವಿನ್ಯಾಸವನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ.

 

7. ಕಿಂಗ್ ಪೋಸ್ಟ್ ಛಾವಣಿ



 

ಬೃಹತ್ ಗಾತ್ರದ ಸೇತುವೆಗಳು, ಕಟ್ಟಡಗಳು ಮತ್ತು ವಿಮಾನಗಳ ವಿನ್ಯಾಸಗೊಳಿಸುವ ಸಂದರ್ಭಗಳಲ್ಲಿ ಲಂಬವಾಗಿ ಇರುವ ವ್ಯವಸ್ಥೆ. ಕ್ರಾಸ್ ಬೀಮ್ ನಿಂದ ಪ್ರಧಾನವಾಗಿರುವ ಕಂಬ ತ್ರಿಕೋನಾಕೃತಿಯ ಮೇಲೆ ಇರುವಂತೆ ಇರುತ್ತದೆ.

 

ಬೀಮ್ ತ್ರಿಕೋನಾಕೃತಿಯ ಸ್ಥರಕ್ಕೆ ಈಗ ಬೃಹತ್ ಸ್ತಂಭವೇ ಆಧಾರವೇ ಆಗುತ್ತದೆ. ಅದು ಸ್ತರದ ಮೂಲಕ್ಕೆ ಸೇರ್ಪಡೆಯಾಗುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಯ ಸಂದರ್ಭದಲ್ಲಿ ಕೇಂದ್ರ ಭಾಗದಿಂದ ಸಂಪರ್ಕ ಕಡಿದುಕೊಳ್ಳುತ್ತದೆ. ಅದಕ್ಕಿಂತ ಮೊದಲು ಅದು ಮೇಲ್ಭಾಗದ ಸ್ತರವನ್ನು ತಲಪುತ್ತದೆ.

 

ಕಾಲರ್ ಬೀಮ್ ನ ಹೊರತಾಗಿ ಅದಕ್ಕೆ ಸಮಾನಂತರವಾಗಿ ಟೈ ಬೀಮ್ ಬೃಹತ್ ಸ್ತಂಭವನ್ನು ಹಿಡಿದು ಇರಿಸಿಕೊಳ್ಳುತ್ತದೆ.

 

ಕಿಂಗ್ ಪೋಸ್ಟ್ ರೂಫ್ ಅನ್ನು ಸರಳ ರೀತಿಯ ಛಾವಣಿ ನಿರ್ಮಾಣಕ್ಕಾಗಿ ಬಳಕೆ ಮಾಡಲಾಗುತ್ತದೆ. ಇತರ ವಿನ್ಯಾಸಗಳಿಗೆ ಹೋಲಿಕೆ ಮಾಡಿದರೆ ಅಗ್ಗವಾಗಿದೆ. ಜತೆಗೆ ಕ್ಷಿಪ್ರವಾಗಿ ನಿರ್ಮಾಣ ಮಾಡಲೂ ಸಾಧ್ಯವಾಗುತ್ತದೆ. ಈ ವಿನ್ಯಾಸ ಅತ್ಯಂತ ವಿಭಿನ್ನವಾಗಿದೆ ಮತ್ತು ಬೇಕಾಗಿರುವ ಬದಲಾವಣೆಯನ್ನು ಅತ್ಯಂತ ತ್ವರಿತವಾಗಿ ಅಳವಡಿಸಲೂ ಸಾಧ್ಯವಾಗುತ್ತದೆ.

 

8. ಕಾಲರ್ ಬೀಮ್ ಛಾವಣಿ



ಮರದ ತೊಲೆ ಮತ್ತು ಕಟ್ಟಡದ ತಳಭಾಗದಿಂದ ಏರಿಸಲಾಗಿರುವ ಸ್ಥಳದ ನಡುವೆ ಆಧಾರಕ್ಕಾಗಿ ಲಂಬವಾಗಿ ಇರಿಸಲಾಗಿರುವ ಕಾಲರ್ ಟೈ. ಅದು ಸಾಮಾನ್ಯವಾಗಿ ಕೇಂದ್ರ ಭಾಗದಲ್ಲಿಯೇ ಇರುತ್ತದೆ.

 

ಛಾವಣಿಯಲ್ಲಿ ಇರಿಸಲಾಗಿರುವ ಮರದ ತೊಲೆಗಳು ಭಾರವನ್ನು ತಡೆಯುವಲ್ಲಿ ನೆರವಾಗುತ್ತವೆ. ಅವುಗಳು ಕಾಲರ್ ಟೈ ಮೇಲೆ ಹೆಚ್ಚು ಅವಲಂಬನೆಯನ್ನು ಹೊಂದುವುದನ್ನೂ ತಡೆಯುತ್ತದೆ.

 

ಕಾಲರ್ ಬೀಮ್ ಛಾವಣಿಯು ದೀರ್ಘ ಅಂತರ ಛಾವಣಿಗೆ ಅತ್ಯಂತ ಸುರಕ್ಷಿತವಾಗಿರುವ ವ್ಯವಸ್ಥೆಯಾಗಿರುತ್ತದೆ.

 

ಇಳಿಜಾರಿನ ಛಾವಣಿ ನಿರ್ಮಾಣ ಮಾಡುವುದರಿಂದ ಉಂಟಾಗುವ ಅನುಕೂಲಗಳೇನು?



1. ವಿನ್ಯಾಸ: ಆಕೃತಿ ಮತ್ತು ಗಾತ್ರಗಳು

ಇಳಿಜಾರಿನ ಛಾವಣಿ ಹೆಚ್ಚಿನ ವಿನ್ಯಾಸ, ಆಕೃತಿ ಮತ್ತು ಗಾತ್ರಕ್ಕೆ ಅವಕಾಶ ಮಾಡಿಕೊಡುತ್ತದೆ. ಕಟ್ಟಡ ವಿನ್ಯಾಸಕಾರ ತನೆಗೆ ಬೇಕಾದ ವಿನ್ಯಾಸ ಮತ್ತು ಆಯ್ಕೆ ಮಾಡಲು ಸ್ವಾತಂತ್ರ್ಯ ಹೊಂದಿರುತ್ತಾನೆ. ಇದರ ಜತೆಗೆ ಅದರ ನಿರ್ಮಾಣಕ್ಕೆ ಬೇಕಾದ ವಸ್ತುಗಳನ್ನು ಬಳಕೆ ಮಾಡಲು ಅವಕಾಶವೂ ಇರುತ್ತದೆ. ಇದರಿಂದಾಗಿ ಹೆಚ್ಚು ಲೋಪವಿಲ್ಲದೆ ಛಾವಣಿಯನ್ನು ನಿರ್ಮಾಣ ಮಾಡಲು ಅವಕಾಶವೂ ಸಿಗುತ್ತದೆ.

 

2. ಇಂಧನದಲ್ಲಿ ಉಳಿತಾಯ

ಇಳಿಜಾರಿನ ಛಾವಣಿ ಹೊರ ವಲಯದಲ್ಲಿ ಪ್ರಕೃತಿ ಸಹಜವಾಗಿ ಇರುವ ಗಾಳಿ ಮತ್ತು ಬೆಳಕು ಹರಿದಾಡಲು ಅನುಕೂಲ ಮಾಡಿಕೊಡುತ್ತದೆ. ಅದು ಇಂಧನ ವೆಚ್ಚವನ್ನು ಶೇ.25ರಿಂದ ಶೇ.30ರಷ್ಟು ಉಳಿತಾಯ ಮಾಡುವಲ್ಲಿ ನೆರವಾಗುತ್ತದೆ.

 

3. ಗಾಳಿ, ಬಿಸಿಲಿನಿಂದ ಕಟ್ಟಡಕ್ಕೆ ರಕ್ಷಣೆ

ತ್ರಿಕೋನಾಕಾರದಲ್ಲಿ ಇರುವುದರಿಂದ ಇಳಿಜಾರಿನ ಛಾವಣಿ ಸದೃಢ ಮತ್ತು ಸುರಕ್ಷಿತವಾಗಿ ಇರುತ್ತದೆ. ಅವುಗಳು ಅತ್ಯಂತ ಪ್ರತಿಕೂಲವಾಗಿರುವ ಹಿಮಪಾತ, ಮಳೆ ಮತ್ತು ರಭಸವಾಗಿರುವ ಗಾಳಿಯಿಂದ ಕಟ್ಟಡವನ್ನು ರಕ್ಷಿಸುವಲ್ಲಿ ಛಾವಣಿ ನೆರವಾಗುತ್ತದೆ.

 

ದೀರ್ಘ ಕಾಲ ಕಟ್ಟಡ ಬಾಳಿಕೆ ಬರುವಂತೆ ಮಾಡುವಂತಾಗಲು ಗೋಡೆಗಳಿಗೆ ರಕ್ಷಣೆ ನೀಡಲು ಛಾವಣಿಯನ್ನು ನಿರ್ಮಾಣವನ್ನೂ ಮಾಡಬಹುದು.

 

4. ವೆಚ ನಿಯಂತ್ರಣದ ಮೂಲಕ ಹೆಚ್ಚುವರಿ ಸ್ಥಳ

ಓರೆ ಮತ್ತು ಜೋಡಿ ಕ್ಲೋಸ್ ಇಳಿಜಾರಿನ ಛಾವಣಿ ನೆರವಿನಿಂದ ನಿಮ್ಮ ಮನೆಯಲ್ಲಿ ಹೆಚ್ಚುವರಿ ಸ್ಥಳವನ್ನು ನೀವು ಪಡೆಯಲು ಸಾಧ್ಯ. ಅದಕ್ಕಾಗಿ ನೀವು ಹೆಚ್ಚುವರಿಯಾಗಿ ಹಣವನ್ನು ಖರ್ಚು ಮಾಡಬೇಕಾದ ಅಗತ್ಯವಿಲ್ಲ.

 

5. ಮಳೆ ನೀರಿನ ಮರು ಬಳಕೆ

ಇಳಿಜಾರಿನ ಛಾವಣಿಯಿಂದಾಗಿ ಮಳೆ ನೀರನ್ನು ಸಂಗ್ರಹಿಸಿ ಹಲವು ರೀತಿಯಲ್ಲಿ ಮರು ಬಳಕೆ ಮಾಡಲು ಅನುಕೂಲವಾಗಲಿದೆ. ಈ ಮೂಲಕ ಮಳೆ ನೀರು ಕೊಯ್ಲು ವ್ಯವಸ್ಥೆಯನ್ನೂ ಅಳವಡಿಸಿದಂತಾಗುತ್ತದೆ. ಇಳಿಜಾರಿನ ಛಾವಣಿ ವ್ಯವಸ್ಥೆಯಲ್ಲಿ ಹೊರಗಿನ ಚರಂಡಿ ವ್ಯವಸ್ಥೆ ಪರೋಕ್ಷವಾಗಿ ಇರುತ್ತದೆ.v



ಇಳಿಜಾರಿನ ಛಾವಣಿಗಳ ಹಲವಾರು ವಿಧಗಳ ರಚನಾತ್ಮಕತೆ, ನಿರ್ಮಾಣಕ್ಕೆ ಆಗುವ ವೆಚ್ಚ, ಸಮಯದ ಉಳಿತಾಯ ಮತ್ತು ಅವುಗಳು ನೀಡುವ ವಿಶಿಷ್ಟ ಸೌಂದರ್ಯದ ವೈಶಿಷ್ಟತೆಗಳನ್ನು ಪರಿಗಣಿಸುವ ಮೂಲಕ ನಾವು ನಿರ್ಮಾಣ ಮಾಡುವ ಯಾವುದೇ ಕಟ್ಟಡಕ್ಕೆ ಸುಲಭವಾದ ಮತ್ತು ಅಭೇದ್ಯವಾದ ರಕ್ಷಣೆಯನ್ನು ನಿರ್ಮಿಸಲು ಸಾಧ್ಯವಾಗಲಿದೆ

ಈಗ ನಿಮಗೆ ಇಳಿಜಾರಿನ ಛಾವಣಿ ಎಂದರೇನು ಮತ್ತು ಅವುಗಳ ವಿಧಗಳು, ಅವುಗಳನ್ನು ಯಾವ ಸಂದರ್ಭದಲ್ಲಿ ಬಳಕೆ ಮಾಡಲು ಸಾಧ್ಯ, ಯಾವ ಸಂದರ್ಭದಲ್ಲಿ ನಿಮ್ಮ ಮನೆಯ ನಿರ್ಮಾಣದಲ್ಲಿ ಅದನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ತಿಳಿವಳಿಕೆ ಉಂಟಾಗಿರಬಹುದು. ಅದು ನಿಮ್ಮ ಕಟ್ಟಡಕ್ಕೆ ದೀರ್ಘಕಾಲಿಕವಾಗಿರುವ ಗರಿಷ್ಠ ರಕ್ಷಣೆಯನ್ನು ಹೇಗೆ ನೀಡುತ್ತದೆ ಎಂಬ ವಿಚಾರವೂ ನಿಮಗೆ ಮನವರಿಕೆಯಾಗಿದೆ ಎಂಬ ವಿಶ್ಲಾಸ ನಮ್ಮದು.



ಸಂಬಂಧಿತ ಲೇಖನಗಳು


ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ವಿಧಾನಗಳು: ಸಂಪೂರ್ಣ ಮಾರ್ಗದರ್ಶಿ | ಅಲ್ಟ್ರಾಟೆಕ್

ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ವಿಧಾನಗಳು: ಸಂಪೂರ್ಣ ಮಾರ್ಗದರ್ಶಿ

ಬೇಸ್​ಮೆಂಟ್ ವಾಟರ್​ಪ್ರೂಫಿಂಗ್ ಎಂದರೆ, ನೀರಿನಿಂದ ಉಂಟಾಗುವ ಹಾನಿಯನ್ನು ತಡೆಯಲು ಮತ್ತು ಬೂಷ್ಟು ಬೆಳೆಯುವುದರಿಂದಾಗುವ ಇತರ ವೆಚ್ಚದಾಯಕ ಸಮಸ್ಯೆಗಳನ್ನು ತಡೆಯುವುದಾಗಿದೆ. ಈ ಸಮಸ್ಯೆಗಳನ್ನು ತಡೆಯಲು ಬೇಸ್​ಮೆಂಟ್​ ವಾಟರ್​ಪ್ರೂಫಿಂಗ್ ಮಾಡುವುದು ಅತ್ಯಗತ್ಯ. ಎಕ್ಸ್ಟೀರಿಯರ್ ಮತ್ತು ಇಂಟೀರಿಯರ್ ಬೇಸ್​ಮೆಂಟ್ ವಾಟರ್​ಪ್ರೂಫಿಂಗ್​ ಬಗ್ಗೆ ಮುಂದೆ ಮತ್ತಷ್ಟು ತಿಳಿದುಕೊಳ್ಳಿರಿ.

ಸೋರುತ್ತಿರುವ ಛಾವಣಿಯನ್ನು ರಿಪೇರಿ ಮಾಡುವುದು ಹೇಗೆ? ಅಲ್ಟ್ರಾ ಟೆಕ್ ಸಿಮೆಂಟ್

ಸೋರುತ್ತಿರುವ ಛಾವಣಿಯನ್ನು ರಿಪೇರಿ ಮಾಡುವುದು ಹೇಗೆ?

ಈ‌ ಸಮಗ್ರ ಮಾಹಿತಿಯನ್ನು ಓದಿಕೊಂಡು ಸೊರುತ್ತಿರುವ ಛಾವಣಿಯನ್ನು ರಿಪೇರಿ ಮಾಡುವುದನ್ನು ಹೇಗೆ ಎಂದು ಕಂಡುಕೊಳ್ಳಬಹುದು.ಛಾವಣಿಗೆ ನೀರು ಮಾಡುವ ಹಾನಿಯನ್ನು ಕಡಿಮೆ ಮಾಡಿ, ಸೀಲಿಂಗ್ ಸೋರುವುದನ್ನು ರಿಪೇರಿ ಪ್ರಕ್ರಿಯೆಯನ್ನು ಶುರು‌ಮಾಡಿ.

ನಿರ್ಮಾಣದಲ್ಲಿ ಬಳಸಲಾಗುವ ಸ್ಲಾಬ್‌ನ ವಿಧಗಳು |ಅಲ್ಟ್ರಾಟೆಕ್ ಸಿಮೆಂಟ್

ನಿರ್ಮಾಣದಲ್ಲಿ ಬಳಸಲಾಗುವ ಸ್ಲಾಬ್‌ನ ವಿಧಗಳು |ಅಲ್ಟ್ರಾಟೆಕ್ ಸಿಮೆಂಟ್

ವಿವಿಧ ರೀತಿಯ ಸ್ಲಾಬ್‌ಗಳು ಹೆಚ್ಚುವರಿ ಪ್ರಯೋಜನಗಳನ್ನು ಹೊಂದಿವೆ. ಮನೆ ಕಟ್ಟಡ ಮತ್ತು ನಿರ್ಮಾಣ ಉದ್ಯಮದಲ್ಲಿ ಸ್ಲಾಬ್‌ಗಳ ವಿಧಗಳು ಮತ್ತು ಅವುಗಳ ಕಾರ್ಯಗಳನ್ನು ಅರ್ಥಮಾಡಿಕೊಳ್ಳಲು ಈ ಬ್ಲಾಗ್ ಅನ್ನು ಓದಿ.


ವೀಡಿಯೊಗಳನ್ನು ಶಿಫಾರಸು ಮಾಡಿ

 




  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....