ಕಾಂಕ್ರೀಟಿನ ಕಾರ್ಯಸಾಮರ್ಥ್ಯ ಎನ್ನುವುದು ಅದನ್ನು ಎಷ್ಟು ಸುಲಭವಾಗಿ ಇಡಬಹುದು ಮತ್ತು ಅಚ್ಚಿನಲ್ಲಿ ತುಂಬಬಹುದಾದ ಅದರ ಸಾಮರ್ಥ್ಯವನ್ನು ಹೇಳುತ್ತದೆ. ಈ ನಿರ್ಣಾಯಕ ಗುಣದ ಮೇಲೆ ಬೇರೆ ಬೇರೆ ಅಂಶಗಳು ಪ್ರಭಾವ ಬೀರುತ್ತವೆ. ಅವುಗಳೆಂದರೆ:
1) ನೀರು ಹಾಗೂ ಸಿಮೆಂಟಿನ ಅನುಪಾತ
ನೀರು ಹಾಗೂ ಸಿಮೆಂಟಿನ ಅನುಪಾತ, ಕಾಂಕ್ರೀಟಿನ ಕಾರ್ಯಸಾಮರ್ಥ್ಯ ಮತ್ತು ಶಕ್ತಿಯನ್ನು ನಿರ್ಧರಿಸುವ ಅತಿ ಮುಖ್ಯ ಅಂಶ. ಈ ಅನುಪಾತ ನೀರಿನ ಪರಿಮಾಣವನ್ನು ಕಾಂಕ್ರೀಟಿನಲ್ಲಿರುವ ಸಿಮೆಂಟಿನ ಪರಿಮಾಣದಿಂದ ಭಾಗಿಸಿದಾಗ ಬರುವುದು. ಈ ಅನುಪಾತ ತುಂಬಾ ಹೆಚ್ಚಾಗಿದ್ದರೆ ನಾವು ಹೆಚ್ಚಿನ ಕಾರ್ಯಸಾಮರ್ಥ್ಯ ಆದರೆ ಕಡಿಮೆ ಬಲಿಷ್ಠತೆ ಮತ್ತು ಬಾಳಿಕೆಯನ್ನು ಪಡೆಯುತ್ತೇವೆ. ಕಡಿಮೆ ಅನುಪಾತ ಗರಿಷ್ಠ ಬಲಿಷ್ಠತೆ ಆದರೆ ಕಡಿಮೆ ಕಾರ್ಯಸಾಮರ್ಥ್ಯವನ್ನು ಕೊಡುವುದು.
2) ಅಗ್ರಿಗೇಟ್ ಗಳ ಗಾತ್ರ ಮತ್ತು ಆಕಾರ.
ಅಗ್ರಿಗೇಟ್ ಗಳ ಗಾತ್ರ, ಆಕಾರ ಮತ್ತು ಅವುಗಳ ಮೇಲ್ಮೈ ವಿನ್ಯಾಸ ಕೂಡಾ ಕಾಂಕ್ರೀಟಿನ ಕಾರ್ಯಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ದೊಡ್ಡ ಅಗ್ರಿಗೇಟ್‍ಗಳು ದೊಡ್ಡ ಖಾಲಿ ಜಾಗಗಳನ್ನು ಸೃಷ್ಟಿಸುವುದರಿಂದ ಕಾರ್ಯಸಾಮರ್ಥ್ಯವನ್ನು ಕುಗ್ಗಿಸುತ್ತವೆ ಮತ್ತು ಗುಂಡನೆಯ ನಯವಾದ ಅಗ್ರಿಗೇಟ್‍ಗಳು ಕಾರ್ಯಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
3) ಅಡ್ಮಿಕ್ಸರ್ಗಳ ಬಳಕೆ
ಕಾಂಕ್ರೀಟಿಗೆ ಅಡ್ಮಿಕ್ಸರುಗಳನ್ನುಸೇರಿಸುವುದರಿಂದ ಅದರ ಕಾರ್ಯಸಾಮರ್ಥ್ಯವು ಸಾಕಷ್ಟು ಮಾರ್ಪಾಡಾಗುತ್ತದೆ. ರಾಸಾಯನಿಕ ಅಡ್ಮಿಕ್ಸರುಗಳಾದ ಜಲ ರೆಡ್ಯೂಸರ್ ಮತ್ತು ಪ್ಲಾಸ್ಟಿಸೈಸರ್ಗಳು ಕಾಂಕ್ರೀಟಿನ ಬಲವನ್ನು ಕಡಿಮೆಗೊಳಿಸದೆ ನೀರು-ಸಿಮೆಂಟ್ ಅನುಪಾತವನ್ನು ಕಡಿಮೆ ಮಾಡಿ ಕಾರ್ಯಸಾಮರ್ಥ್ಯವನ್ನು ಉತ್ತಮಗೊಳಿಸುತ್ತವೆ.
4) ಕಾಂಕ್ರೀಟನ್ನು ಮಿಶ್ರಣ ಮಾಡುವ ವಿಧಾನ:
ಕಾಂಕ್ರೀಟನ್ನು ಮಿಶ್ರಣ ಮಾಡುವ ವೇಗ ಮತ್ತು ಮಿಶ್ರಣದ ವಿಧ ಸೇರಿದಂತೆ ಮಿಶ್ರಗೊಳಿಸುವ ವಿಧಾನ ಮತ್ತು ಸಮಯವು ಕಾಂಕ್ರೀಟಿನ ಕಾರ್ಯಸಾಮರ್ಥ್ಯವನ್ನು ಪ್ರಭಾವಿಸುತ್ತದೆ. ಅತಿಯಾದ ಮಿಶ್ರಣವು ಅಗ್ರಿಗೇಟುಗಳ ಪ್ರತ್ಯೇಕತೆಗೆ ಕಾರಣವಾದರೆ ಕಡಿಮೆ ಪ್ರಮಾಣದ ಮಿಶ್ರಣವು ಒಗ್ಗೂಡದ ಮಿಶ್ರಣಕ್ಕೆ ಕಾರಣವಾಗುತ್ತದೆ.
5) ಕಾಂಕ್ರೀಟ್ ವಿಭಾಗದ ದಪ್ಪ
ಸುರಿಯಲ್ಪಟ್ಟ ಕಾಂಕ್ರೀಟ್ ಪದರದ ದಪ್ಪವು ಕಾರ್ಯಸಾಮರ್ಥ್ಯವನ್ನು ಪ್ರಭಾವಿಸುತ್ತದೆ. ವಿಶೇಷವಾಗಿ, ತೆಳುವಾದ ವಿಭಾಗಗಳಲ್ಲಿ ಮಿಶ್ರಣವು ಫಾರ್ಮ್ ಅಥವಾ ಅಚ್ಚಿನ ಒಳಗೆ ಖಾಲಿ ಜಾಗವನ್ನು ಉಳಿಸದೆ ಪೂರ್ತಿಯಾಗಿ ತುಂಬಿಕೊಳ್ಳಲು ಹೆಚ್ಚು ಕಾರ್ಯಸಾಮರ್ಥ್ಯದ ಕಾಂಕ್ರೀಟ್ ಬೇಕಾಗುತ್ತದೆ.