Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಹೊಂದಿಕೊಳ್ಳುವ ಮತ್ತು ಆಕರ್ಷಕ ಡೈನಿಂಗ್ ಹಾಲ್ ಅನ್ನು ಮಾಡಿಕೊಳ್ಳಲು ಅದರ ವಿನ್ಯಾಸ ಮತ್ತು ವ್ಯವಸ್ಥೆಗೆ ವಾಸ್ತು ತತ್ವಗಳನ್ನು ಅಳವಡಿಸುವುದು ಅಗತ್ಯವಾಗಿದೆ. ನಿಮ್ಮ ಊಟ ಮಾಡುವ ಸ್ಥಳಕ್ಕೆ ಅಳವಡಿಸಲು ವಾಸ್ತು ಶಾಸ್ತ್ರದ ಕೆಲವು ಅಗತ್ಯ ಅಂಶಗಳು ಇಲ್ಲಿವೆ:
ವಾಸ್ತು ಶಾಸ್ತ್ರದಲ್ಲಿ, ಡೈನಿಂಗ್ ಹಾಲ್ ಇರುವ ಸ್ಥಳವು ಎನರ್ಜಿ ಸೆಳೆಯುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ತಾತ್ತ್ವಿಕವಾಗಿ, ನಿಮ್ಮ ಮನೆಯ ಪಶ್ಚಿಮ ಅಥವಾ ವಾಯುವ್ಯ ವಿಭಾಗದಲ್ಲಿ ನಿಮ್ಮ ಊಟದ ಪ್ರದೇಶವನ್ನು ಇಟ್ಟುಕೊಳ್ಳುವುದು ನಿಮ್ಮ ಅಭಿವೃದ್ಧಿಗೆ ಪೂರಕವಾಗಿದೆ. ಈ ರೀತಿ ಮಾಡುವುದರಿಂದ ಊಟದ ಸಮಯದಲ್ಲಿ ಸಮೃದ್ಧಿ ಮತ್ತು ಏಳಿಗೆಯನ್ನು ನೀಡುತ್ತದೆ ಎಂದು ನಂಬಲಾಗಿದೆ. ಬೆಡ್ರೂಮ್ನಲ್ಲಿ ಅಥವಾ ನಿಮ್ಮ ಮನೆಯ ಮಧ್ಯಭಾಗದಲ್ಲಿ ಊಟದ ಕೋಣೆಯನ್ನು ಮಾಡುವ ಸಾಮಾನ್ಯ ತಪ್ಪನ್ನು ಮಾಡಬೇಡಿ. ಏಕೆಂದರೆ ಈ ಪ್ರದೇಶಗಳು ಮನೆಯೊಳಗೆ ಪಾಸಿಟಿವ್ ಎನರ್ಜಿ ಹರಿದು ಬರುವುದಕ್ಕೆ ಅಡ್ಡಿಯನ್ನುಂಟು ಮಾಡಬಹುದು.
ವಾಸ್ತು ಶಾಸ್ತ್ರದ ಕ್ಷೇತ್ರದಲ್ಲಿ, ವಾಸ್ತುಶಿಲ್ಪ ಮತ್ತು ವಿನ್ಯಾಸದ ಪ್ರಾಚೀನ ಭಾರತೀಯ ವಿಜ್ಞಾನ, ನಿಮ್ಮ ಡೈನಿಂಗ್ ಟೆಬಲ್ ಇರುವ ದಿಕ್ಕು ಕೇವಲ ಸೌಂದರ್ಯದ ವಿಷಯವಲ್ಲ; ಇದು ಸಾಮರ್ಥ್ಯ ಕೊಡುವ ಹಾಗೂ ಸುಖವಾಗಿರುವ ಶಕ್ತಿಯನ್ನು ಒದಗಿಸುತ್ತದೆ ಎಂದು ಆಳವಾಗಿ ಬೇರೂರಿದೆ. ವಾಸ್ತು ತತ್ವಗಳ ಪ್ರಕಾರ, ಡೈನಿಂಗ್ ಟೇಬಲ್ ಅನ್ನು ನಿರ್ಧಿಷ್ಟವಾಗಿ ಇಡಬೇಕು. ಹೀಗೆ ಇಡುವುದರಿಂದ ಕುಟುಂಬದ ಯಜಮಾನ ಊಟ ಮಾಡುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿಕೊಂಡು ಕೂಡುವುದು ಸಾಧ್ಯವಾಗುತ್ತದೆ. ಈ ರೀತಿ ಮಾಡುವುದರಿಂದ ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಇದು ಎಲ್ಲರಿಗೂ ಸಾಮರಸ್ಯದ ಊಟದ ಅನುಭವವನ್ನು ನೀಡುತ್ತದೆ. ಮತ್ತು ಸಕಾರಾತ್ಮಕ ಮಾತುಕತೆಯನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ.
ನಿಮ್ಮ ಡೈನಿಂಗ್ ಹಾಲ್‌ಗೆ ಶಕ್ತಿ ಕೊಡುವ ಮತ್ತು ಜಾಗೆಯ ಮೇಲೆ ಪ್ರಭಾವ ಬೀರುವ ಪರಿಸರವನ್ನು ಬಣ್ಣಗಳು ನಿರ್ವಹಿಸುತ್ತವೆ. ವಾಸ್ತು ಪ್ರಕಾರ ಡೈನಿಂಗ್ ಹಾಲ್‌ಗೆ ಬಣ್ಣವನ್ನು ಆಯ್ಕೆ ಮಾಡುವಾಗ, ಹಳದಿ ಅಥವಾ ಬೀಜ್ ಕಲರ್ ಅಥವಾ ಹಿತವಾದ ಬಣ್ಣಗಳನ್ನು ಆಯ್ಕೆಮಾಡಿ. ಈ ಬಣ್ಣಗಳು ಡೈನಿಂಗ್ ಹಾಲ್ ವಾಸ್ತು ಪ್ರಕಾರ ಇಷ್ಟವಾದ ಮತ್ತು ಪೋಷಣೆಯ ವಾತಾವರಣವನ್ನು ಕೊಡುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ, ನಿಮ್ಮ ಊಟದ ಅನುಭವದ ಉತ್ಸಾಹವನ್ನು ಕುಗ್ಗಿಸುವ ಗಾಢ ಅಥವಾ ಮಂದ ಬಣ್ಣಗಳನ್ನು ಬಳಸದಂತೆ ಸಲಹೆ ನೀಡಲಾಗುತ್ತದೆ.
ಡೈನಿಂಗ್ ಹಾಲ್‌ನ ಎಂಟ್ರನ್ಸ್ ವಾಸ್ತು ವಿನ್ಯಾಸದ ನಿರ್ಣಾಯಕ ಅಂಶವಾಗಿದೆ. ಇದು ಚೆನ್ನಾಗಿ ಬೆಳಕು ಒಳಗೆ ಬರುವಂತೆ ಮತ್ತು ಯಾವುದೇ ಅಡೆತಡೆಗಳಿಂದ ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ಜಾಗಕ್ಕೆ ಧನಾತ್ಮಕ ಶಕ್ತಿಯು ಸಾರಾಗವಾಗಿ ಹರಿದು ಬರುವಂತೆ ಮಾಡುತ್ತದೆ. ಈ ಧನಾತ್ಮಕ ಕಂಪನಗಳನ್ನು ಹೆಚ್ಚಿಸಲು, ಬಾಗಿಲ ಮೇಲೆ ಮಂಗಳಕರ ಚಿಹ್ನೆಗಳು ಅಥವಾ ಕಲಾಕೃತಿಗಳಿಂದ ಅಲಂಕರಿಸುವುದನ್ನು ಗಮನದಲ್ಲಿಟ್ಟುಕೊಳ್ಳಿರಿ.
ಸರಿಯಾದ ಬೆಳಕು ನಿಮ್ಮ ಡೈನಿಂಗ್ ಹಾಲ್ ಪರಿಸರಕ್ಕೆ ಉತ್ತಮ ಮನೋಭಾವವನ್ನು ಹೊಂದಿಸಬಹುದು. ವಾಸ್ತು ಪ್ರಕಾರ ಹಗಲಿನಲ್ಲಿ ಡೈನಿಂಗ್ ಹಾಲ್‌ಗೆ ಚೈತನ್ಯ ಮತ್ತು ಶಕ್ತಿಯನ್ನು ತುಂಬಲು ನೈಸರ್ಗಿಕ ಬೆಳಕು ಹೆಚ್ಚಾಗಿ ಬರುವಂತೆ ಮಾಡಿ. ಸಂಜೆಯ ಸಮಯದಲ್ಲಿ, ನಿಮ್ಮ ಊಟಕ್ಕೆ ಸ್ನೇಹಶೀಲ ಮತ್ತು ವಿಶ್ರಾಂತಿ ವಾತಾವರಣವನ್ನು ಸೃಷ್ಟಿಸುವ ಮೃದುವಾದ ಮತ್ತು ಹಿತಕರವಾದ ಬೆಳಕಿನ ಆಯ್ಕೆಗಳನ್ನು ಮಾಡಿಕೊಳ್ಳಿರಿ. ಅದರಿಂದ ಪ್ರತಿ ಊಟದ ಅನುಭವವೂ ಸ್ಮರಣೀಯ ಮತ್ತು ಶಾಂತತೆ ಕೊಡುತ್ತದೆ.
ಈ ಸಲಹೆಗಳ ಹೊರತಾಗಿ, ಡೈನಿಂಗ್ ಹಾಲ್ ವಾಸ್ತುವನ್ನು ಪರಿಗಣಿಸುವಾಗ ಗಮನದಲ್ಲಿ ಇಟ್ಟುಕೊಳ್ಳ ಬಹುದಾದ ಕೆಲವು ಇತರ ವಿಷಯಗಳಿವೆ:
ಓರಣವಾಗಿರುವ ಊಟದ ಸ್ಥಳವು, ವಾಸ್ತು ಪ್ರಕಾರ ಪಾಸಿಟಿವ್ ಎನರ್ಜಿ ಒಳಗೆ ಬರುವುದನ್ನು ಹೆಚ್ಚಿಸುತ್ತದೆ. ಜೊತೆಗೆ ಪ್ರಶಾಂತ ವಾತಾವರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಊಟದ ಜಾಗವನ್ನು ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಇರಿಸಿ. ಈ ಜಾಗದಲ್ಲಿ ಅನಗತ್ಯ ವಸ್ತುಗಳು ಅಸ್ತವ್ಯಸ್ತವಾಗಿ ಸಂಗ್ರಹವಾಗದಂತೆ ನೋಡಿಕೊಳ್ಳಿರಿ.
ನಿಮ್ಮ ಡೈನಿಂಗ್ ಹಾಲ್‌ಗೆ ಕಟ್ಟಿಗೆಯಿಂದ ಮಾಡಿರುವ ಪೀಠೋಪಕರಣ ಆರಿಸಿಕೊಳ್ಳಿ. ಹೀಗೆ ಮಾಡುವುದನ್ನು ವಾಸ್ತು ಪ್ರಕಾರ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಕಟ್ಟಿಗೆಯು ಏಳಿಗೆ ಮತ್ತು ಹೊಂದಾಣಿಕೆಯನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಕಟ್ಟಿಗೆ ಬಳಸುವ ಪ್ರದೇಶದಲ್ಲಿ ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.
ನೀವು ಊಟ ಮಾಡುವ ಮೊದಲು, ಒಂದು ಚಿಕ್ಕ ಪ್ರಾರ್ಥನೆಯನ್ನು ಅಥವಾ ಉಪಕಾರದ ಸ್ಮರಣೆಯನ್ನು ಮಾಡಿ ಎಂದು ಸಲಹೆ ನೀಡಲಾಗುತ್ತದೆ. ಈ ಅಭ್ಯಾಸವು ಸಕಾರಾತ್ಮಕತೆಯನ್ನು ಹುಟ್ಟುಹಾಕುತ್ತದೆ. ಮತ್ತು ಆಹಾರಕ್ಕೆ ದೈವಾನುಗ್ರಹವನ್ನು ಕೊಡುತ್ತದೆ. ಜೊತೆಗೆ ಅದು ಕೃತಜ್ಞತೆ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸುತ್ತದೆ ಎಂದು ನಂಬಲಾಗಿದೆ.
ಶೌಚಾಲಯದ ಪಕ್ಕದಲ್ಲಿ ಅಥವಾ ಅದರ ಮೇಲುಗಡೆ ಡೈನಿಂಗ್ ಹಾಲ್ ಇರಬಾರದು. ಯಾಕೆಂದರೆ ಇದನ್ನು ಡೈನಿಂಗ್ ಹಾಲ್‌ಗೆ ಸಂಬಂಧಿಸಿದ ವಾಸ್ತು ಪ್ರಕಾರ ಅಶುಭವೆಂದು ಪರಿಗಣಿಸಲಾಗುತ್ತದೆ. ಶೌಚಾಲಯಗಳು ನೆಗೆಟಿವ್ ಎನರ್ಜಿ ಹೊಂದಿರುತ್ತವೆ. ಮತ್ತು ಅವುಗಳ ಸಾಮೀಪ್ಯವು ಊಟದ ಪ್ರದೇಶಕ್ಕೆ ಪಾಸಿಟಿವ್ ಎನರ್ಜಿಯು ಹರಿದು ಬರುವುದಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ.
ವಾಸ್ತು ಪ್ರಕಾರ ಡೈನಿಂಗ್ ಹಾಲ್ ನಿರ್ಮಿಸುವುದು ನಿಮ್ಮ ಮನೆಯೊಳಗೆ ಪಾಸಿಟಿವ್ ಎನರ್ಜಿ, ಹೊಂದಾಣಿಗೆ ಹಾಗೂ ಸೌಖ್ಯವನ್ನು ಹೆಚ್ಚಿಸುವ ದೊಡ್ಡ ದಾರಿಯಾಗಿದೆ. ಈ ಬ್ಲಾಗ್‌ನಲ್ಲಿ, ನಿಮ್ಮ ಡೈನಿಂಗ್ ಹಾಲ್ ವಾಸ್ತುವಿನ ಮೇಲೆ ಪರಿಣಾಮ ಬೀರುವ ದಿಕ್ಕುಗಳು, ಬೆಳಕು ಮತ್ತು ಇತರ ಅಂಶಗಳ ಕುರಿತು ನಾವು ಚರ್ಚಿಸಿದ್ದೇವೆ. ಈ ಸಲಹೆಗಳು ತಮ್ಮದೇ ಆದ ರೀತಿಯಲ್ಲಿ ಉಪಯುಕ್ತವಾಗಿದ್ದರೂ, ವೃತ್ತಿಪರರನ್ನು ಸಂಪರ್ಕಿಸಿ ಅನುಕೂಲಕ್ಕೆ ತಕ್ಕಂತೆ ಸಲಹೆ ಪಡೆಯುವುದು ನಿಮ್ಮ ಉತ್ತಮ ನಿರ್ಧಾರವಾಗಿದೆ. ಹೆಚ್ಚಿನ ಮಾಹಿತಿಗಾಗಿ, ನೀವು ನಮ್ಮ ಬ್ಲಾಗ್ ಅನ್ನು ಮನೆಗೆ ವಾಸ್ತು ಸಲಹೆಗಳು ಎಂಬಲ್ಲಿ ಪರಿಶೀಲಿಸಬಹುದು.