ಹಸಿರು ಮನೆ ನಿರ್ಮಾಣದಿಂದ ಅನೇಕ ಅನುಕೂಲಗಳಿವೆ. ಕಟ್ಟಡವನ್ನು ಕಟ್ಟುವುದರಿಂದ ಹಿಡಿದು ಅದನ್ನು ದುರಸ್ಥಿ ಮಾಡುವ ತನಕ ವಿವಿಧ ಹಂತಗಳಲ್ಲಿ ಈ ಹಸಿರುಮನೆ ಪರಿಕಲ್ಪನೆಯನ್ನು ಅಳವಡಿಸಿಕೊಳ್ಳಬಹುದು. ಅಲ್ಲದೆ ಮನೆ ಕಟ್ಟುವಾಗ ವಾಸ್ತುಶಿಲ್ಪಿಗಳು ಮತ್ತು ಮನೆ ವಿನ್ಯಾಸಕರು ಕಟ್ಟಡ ಕಟ್ಟುವ ಪ್ರಾರಂಭದಲ್ಲಿಯೇ ಈ ರೀತಿಯ ಪರಿಕಲ್ಪನೆಗಳನ್ನು ಅನುಸರಿಸಿದರೆ ಹೆಚ್ಚು ಉಪಯೋಗವಾಗುತ್ತದೆ. ಇದರ ಕೆಲವು ಅನುಕೂಲಗಳು ಇಲ್ಲಿವೆ.
1. ಪರಿಸರದ ಮೇಲಾಗುವ ಅನುಕೂಲತೆಗಳು
ಹಸಿರು ಮನೆಗಳನ್ನು ಕಟ್ಟುವುದರಿಂದ ಪ್ರಮುಖ ಅನುಕೂಲವೆಂದರೆ, ನಮ್ಮ ಪರಿಸರದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಉಂಟು ಮಾಡುತ್ತದೆ. ಇದು ನೀರಿನ ಬಳಕೆಯನ್ನು ಕಡಿಮೆ ಮಾಡುವುದಲ್ಲದೆ, ನವೀಕರಿಸಬಹುದಾದ ಇಂಧನ ಮೂಲಗಳ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ನಮ್ಮ ಸುತ್ತಮುತ್ತಲಿನ ವಾತಾವರಣ ಮತ್ತು ನೈಸರ್ಗಿಕ ಪರಿಸರವನ್ನು ರಕ್ಷಿಸುತ್ತದೆ. ಇದು ಕೇವಲ ನೀರಿನ ತ್ಯಾಜ್ಯ ಬಳಕೆ ಕಡಿಮೆ ಮಾಡುವುದರ ಮೂಲಕ ನೀರಿನ ಮೂಲವನ್ನು ರಕ್ಷಿಸಿ ಪರಿಸರಕ್ಕೆ ಕೊಡುಗೆ ನೀಡುತ್ತದೆ.
2. ವೆಚ್ಚ ಉಳಿತಾಯ ಮತ್ತು ಆರ್ಥಿಕ ಅನುಕೂಲತೆ
ಹಸಿರು ಕಟ್ಟಡಗಳ ನಿರ್ಮಾಣವು ಕಡಿಮೆ ಖರ್ಚು ವೆಚ್ಚಗಳಿಗೆ ಅವಕಾಶ ನೀಡುವಂತ ಒಂದು ಬುದ್ಧಿವಂತ ನಿರ್ಧಾರವಾಗಿದೆ. ಈ ರೀತಿಯಾದ ಮನೆಗಳನ್ನು ಕಟ್ಟುವುದರಿಂದ ನಿವಾಸಿಗಳಿಗೆ ನಿರ್ವಹಣಾ ವೆಚ್ಚಗಳು ಕಡಿಮೆಯಾಗುತ್ತವೆ, ಉತ್ಪಾದಕತೆಯು ಹೆಚ್ಚಾಗಿ. ಯುಟಿಲಿಟಿ ಬಿಲ್‌ಗಳು ಕಡಿಮೆಯಾಗುತ್ತವೆ. ಅಲ್ಲದೆ ವೆಚ್ಚಗಳ ಉಳಿತಾಯದಿಂದಾಗಿ ಹಣಕಾಸಿನ ಸುಧಾರಣೆಯಾಗಿ ಹೂಡಿಕೆಯಿಂದ ಬರುವ ಲಾಭವನ್ನು ಹೆಚ್ಚಿಸುತ್ತದೆ. ಹಸಿರು ಮನೆ ಕಟ್ಟಡಗಳನ್ನು ನಿರ್ವಹಿಸುವುದು ಸುಲಭ ಮತ್ತು ಅದರ ಖರ್ಚುಗಳೂ ಸಹ ಕಡಿಮೆಯಾಗಿರುತ್ತದೆ.
3. ಕಡಿಮೆ ಇಂಧನ ಬಳಕೆ ಮತ್ತು ಉಳಿತಾಯ
ಇತ್ತೀಚಿನ ದಿನಗಳಲ್ಲಿ ಕಡಿಮೆ ಇಂಧನ ಬಳಸಿ ವಾಸಿಸಲು ಯೋಗ್ಯವಾದ ಮನೆಗಳನ್ನು ಕಟ್ಟುವುದು ಒಂದು ದೊಡ್ಡ ಸವಾಲಾಗಿದೆ. ಪರಿಸರ ಸ್ನೇಹಿ ಮನೆಗಳು ಮನೆಯ ಒಳಗಿನ ಉಷ್ಣಾಂಶವನ್ನು ಸರಿದೂಗಿಸಲು ಸಹಾಯಕವಾಗಿದೆ. ಅಲ್ಲದೆ ಇದು ಮನೆಗೆ ಉತ್ತಮ ಗಾಳಿ, ನೈಸರ್ಗಿಕ ಬೆಳಕು ಮತ್ತು ಹಸಿರು ಛಾವಣಿಗಳೂ ಸಹ ಈ ಮನೆಗಳಲ್ಲಿ ವಾಸಿಸಲು ಮತ್ತು ಕೆಲಸ ಮಾಡಲು ಉತ್ತಮ ವಾತಾವರಣವನ್ನು ಸೃಷ್ಠಿಸುತ್ತದೆ.