ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ವಾಸ್ತು ಶಾಸ್ತ್ರದ ಪ್ರಕಾರ ದೇವರ ಮಂಟಪದ ದಿಕ್ಕಿನ ಮಹತ್ವ

ವಾಸ್ತು ಶಾಸ್ತ್ರದ ಪ್ರಕಾರ ದೇವರ ಮಂಟಪದ ದಿಕ್ಕಿನ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಮಹತ್ವವನ್ನು ಗ್ರಹಿಸುವ ಮೂಲಕ ನಿಮ್ಮ ಮನೆಯಲ್ಲಿ ಸಾಮರಸ್ಯವನ್ನು ಉಂಟು ಮಾಡಿ.

Share:


ಇದರಿಂದ ತಿಳಿಯಬಹುದಾದ ಪ್ರಮುಖ ಅಂಶಗಳು 

 

  • ಮನೆಯ ಈಶಾನ್ಯ ಅಥವಾ ಪೂರ್ವ ಭಾಗದಲ್ಲಿ ದೇವರಮಂಟಪವನ್ನು ಸ್ಥಾಪಿಸುವುದು ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಆಧ್ಯಾತ್ಮಿಕ ಶಕ್ತಿಯೊಂದಿಗೆ ಹೊಂದಿಕೆಯಾಗುತ್ತದೆ.
 
  • ವಿಗ್ರಹಗಳ ಮುಖ ಮತ್ತು ಎತ್ತರದಲ್ಲಿ ನಿಖರತೆ ಇರಲಿ. ಹಾಗೂ ಅವುಗಳನ್ನು ಕೇಂದ್ರೀಕೃತವಾಗಿ ಇರಿಸುವ ಮೂಲಕ ಪ್ರಾರ್ಥನೆಯ ಸಮಯದಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತದೆ.
 
  • ದೇವರಮಂಟಪದಲ್ಲಿ ವಿಗ್ರಹಗಳ ದಟ್ಟಣೆಯನ್ನು ತಪ್ಪಿಸುವಂತೆ ವಾಸ್ತು ಮಾರ್ಗದರ್ಶನವು ತಿಳಿಸುತ್ತದೆ. ಪ್ರತಿಯೊಂದು ವಿಗ್ರಹವನ್ನು ಸರಿಯಾಗಿ ಪೂಜಿಸಬೇಕು.
 
  • ಅವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು, ಉತ್ತಮ ಬೆಳಕು ಬೀಳುವಂತೆ ನೋಡಿಕೊಳ್ಳುವುದು ಮತ್ತು ದೇವರಮಂಟಪಯನ್ನು ಒಪ್ಪ-ಓರಣವನ್ನು ಕಾಪಾಡುವುದು ಹುರುಪು ಮತ್ತು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ.
 
  • ದೇವರಮಂಟಪವನ್ನು ಭಕ್ತಿ ಮತ್ತು ಮನಸ್ಸಿನಿಂದ ಮಾಡಬೇಕು ಮತ್ತು ಶಾಂತಿಯನ್ನು ಮತ್ತು ಸಾಮರಸ್ಯವು ಮನೆಯಲ್ಲಿ ತುಂಬಿಕೊಳ್ಳಲಿ ಎನ್ನುವ ಉದ್ಧೇಶದಿಂದ ಇರಿಸಬೇಕು.
 
  • ವಾಸ್ತು ಪ್ರಕಾರ ದೇವರಮಂಟಪ ದಿಕ್ಕಿನ ತತ್ವಗಳಿಗೆ ಬದ್ಧರಾಗಿರುವುದು ಕೇವಲ ಅದರ ಸ್ಥಳಕ್ಕೆ ಸಂಬಂಧಿಸಿದ್ದಲ್ಲ. ಇದು ನಿಮ್ಮ ದೈನಂದಿನ ಜೀವನದಲ್ಲಿ ಆಧ್ಯಾತ್ಮಿಕತೆ, ಗೌರವ ಮತ್ತು ನಂಬಿಕೆಯನ್ನು ಬೆಳೆಸುವ ಕುರಿತಾಗಿರುತ್ತದೆ.


ಅನೇಕರಿಗೆ, ಮನೆಯಲ್ಲಿ ಆಧ್ಮಾತಿಕತೆಗಾಗಿ ಪ್ರಾರ್ಥನಾ ಕೊಠಡಿ ಅಥವಾ ದೇವರಮಂಟಪದಂತಹ ನಿಗದಿತ ಸ್ಥಳವಿಲ್ಲದೆ ಮನೆ ಪೂರ್ಣಗೊಳ್ಳುವುದಿಲ್ಲ. ಈ ಪವಿತ್ರ ಸ್ಥಳವು ದೈನಂದಿನ ಪ್ರಾರ್ಥನೆ ಮತ್ತು ಧ್ಯಾನದ ಸ್ಥಳವಾಗಿ ಕಾರ್ಯನಿರ್ವಹಿಸುವುದಲ್ಲದೆ ಮನೆಯ ಒಳಗೆ ಸಕಾರಾತ್ಮಕ ಶಕ್ತಿಯನ್ನು ಹೊರಸೂಸುವ ಕೇಂದ್ರ ಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಭಾರತೀಯ ವಾಸ್ತುಶಿಲ್ಪ ವಿಜ್ಞಾನದ ಆಳಕ್ಕೆ ಇಳಿದರೆ - ವಾಸ್ತು ಶಾಸ್ತ್ರವು ನಿಮ್ಮ ಮನೆಯಲ್ಲಿ ದೇವರಮಂಟಪದ ದಿಕ್ಕು ಆಧ್ಯಾತ್ಮಿಕ ಬೆಳವಣಿಗೆ ಮತ್ತು ಸಮೃದ್ಧಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಬಗ್ಗೆ ದೀರ್ಘ ಒಳನೋಟಗಳನ್ನು ನೀಡುತ್ತದೆ. ಈ ಬ್ಲಾಗ್ ಪೋಸ್ಟ್ ವಾಸ್ತು ಶಾಸ್ತ್ರದ ಪ್ರಕಾರ ದೇವರಮಂಟಪ ದಿಕ್ಕಿನ ಮಹತ್ವವನ್ನು ಅನಾವರಣಗೊಳಿಸುತ್ತದೆ, ದೇವರಮಂಟಪದ ಸೂಕ್ತ ಸ್ಥಾನಕ್ಕಾಗಿ ತತ್ವಗಳನ್ನು ಅನ್ವೇಷಿಸುತ್ತದೆ ಮತ್ತು ಮನೆಯಲ್ಲಿ ವಾಸಿಸುವರ ಮೇಲೆ ಅದರಿಂದ ಆಗಬಹುದಾದ ಪರಿಣಾಮವನ್ನು ವಿವರಿಸುತ್ತದೆ.

 

 


ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರಮಂಟಪವು ದಿಕ್ಕು



ವಾಸ್ತು ಶಾಸ್ತ್ರದ ಪ್ರಕಾರ, ವಿಭಿನ್ನ ದಿಕ್ಕುಗಳು ವಿಭಿನ್ನ ಶಕ್ತಿಗಳು ಮತ್ತು ಪ್ರಭಾವಗಳನ್ನು ಹೊಂದಿವೆ. ವಾಸ್ತು ಪ್ರಕಾರ ದೇವರಮಂಟಪದ ದಿಕ್ಕು ನಿಮ್ಮ ಆಧ್ಯಾತ್ಮಿಕತೆಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದರ ಒಂದು ನೋಟ ಇಲ್ಲಿದೆ.

 

1. ಈಶಾನ್ಯ ದಿಕ್ಕು (ಈಶಾನ್ ಕಾರ್ನರ್):

ಅತ್ಯಂತ ಮಂಗಳಕರ ದಿಕ್ಕು ಎಂದು ಪರಿಗಣಿಸಲಾದ ಈಶಾನ್ಯ ಅಥವಾ ಈಶಾನ್ ಕಾರ್ನರ್‌ ಶಿವನ ನೆಲೆ ಎಂದು ನಂಬಲಾಗಿದೆ. ಈ ಭಾಗದಲ್ಲಿ ದೇವರಮಂಟಪವನ್ನು ಹೊಂದಿರುವುದು ಸಕಾರಾತ್ಮಕ ಶಕ್ತಿಯ ಮುಕ್ತ ಹರಿವಿಗೆ ಸಹಾಯ ಮಾಡುತ್ತದೆ, ಮನೆಯಾದ್ಯಂತ ಶಾಂತಿ ಮತ್ತು ನೆಮ್ಮದಿಯನ್ನು ಉಂಟು ಮಾಡುತ್ತದೆ.

 

2. ಪೂರ್ವ ದಿಕ್ಕು:

ನಿಮ್ಮ ಮನೆಯಲ್ಲಿ ದೇವರಮಂಟಪವನ್ನು ಇರಿಸಲು ಮತ್ತೊಂದು ಅತ್ಯುತ್ತಮವಾದ ದಿಕ್ಕು ಎಂದರೆ ಪೂರ್ವದ ಕಡೆಗಿನ ದಿಕ್ಕು. ಸೂರ್ಯನು ಪೂರ್ವದಲ್ಲಿ ಉದಯಿಸುತ್ತಾನೆ, ಇದು ಬುದ್ಧಿವಂತಿಕೆ ಮತ್ತು ಜ್ಞಾನೋದಯವು ಉಂಟಾಗುವಿಕೆಯನ್ನು ಸಂಕೇತಿಸುವುದರಿಂದ ಈ ದಿಕ್ಕು ಅನೇಕ ಕುಟುಂಬಗಳಿಗೆ ನೆಚ್ಚಿನ ಆಯ್ಕೆಯಾಗಿದೆ.

 

ನೆನಪಿಡಿ, ವಾಸ್ತು ಪ್ರಕಾರ ದೇವರಮಂಟಪದ ದಿಕ್ಕಿಗಾಗಿನ ಈ ನಿಯಮಗಳು ಕೇವಲ ಮಾರ್ಗದರ್ಶನವಾಗಿ ಕಾರ್ಯನಿರ್ವಹಿಸುತ್ತವೆ. ಅತ್ಯಂತ ಮಹತ್ವದ ಅಂಶವೆಂದರೆ ನಮ್ಮ ಹೃದಯಗಳಲ್ಲಿನ ನಂಬಿಕೆ, ಗೌರವ ಮತ್ತು ಭಕ್ತಿ ಇರುವುದು ಮುಖ್ಯ.

 

 

ಮನೆಯ ದೇವರ ಮಂಟಪದಲ್ಲಿ ದೇವತೆಗಳ ಸ್ಥಾನ



ನಿಮ್ಮ ಮನೆಯಲ್ಲಿನ ದೇವರ ಮಂಟಪದ ಪ್ರಶಾಂತ ವಾತಾವರಣವು ನಿಮ್ಮ ಆಧ್ಯಾತ್ಮಿಕ ಅಭ್ಯಾಸದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಿಮ್ಮೊಳಗಿನ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ದೇವರಮಂಟಪದಲ್ಲಿ ದೇವತೆಗಳನ್ನು ಹೇಗೆ ಇರಿಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಪೂಜಾ ಕೋಣೆಗೆ ಕೆಲವು ವಾಸ್ತು ಸಲಹೆಗಳು ಇಲ್ಲಿವೆ.

 

1) ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಇರಿಸುವುದು

ವಿಗ್ರಹಗಳನ್ನು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿದಂತೆ ಇರಿಸಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ನೀವು ಪೂಜೆ ಮಾಡುವಾಗ, ಈ ದಿಕ್ಕುಗಳಿಗೆ ಮುಖ ಮಾಡಿ ಕುಳಿತುಕೊಳ್ಳುವಿರಿ, ಆ ಮೂಲಕ ನಿಮ್ಮ ಪ್ರಾರ್ಥನೆ ಮತ್ತು ಧ್ಯಾನದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಈ ದಿಕ್ಕುಗಳು ಸಮೃದ್ಧಿ ಮತ್ತು ಸಕಾರಾತ್ಮಕತೆಗೆ ಸಂಬಂಧಿಸಿವೆ, ಇದು ದೇವತೆಗಳ ಸ್ಥಾನಕ್ಕೆ ಸೂಕ್ತವಾಗಿದೆ.

 

2) ಕೇಂದ್ರ ಬಿಂದು 

ನಿಮ್ಮ ಪೂಜೆಯ ದೇವತೆ ಅಥವಾ ಮುಖ್ಯ ವಿಗ್ರಹವನ್ನು ದೇವರಮಂಟಪದ ಮಧ್ಯದಲ್ಲಿ ಇರಿಸಬೇಕು. ಈ ಕೇಂದ್ರ ಸ್ಥಾನವು ನಿಮ್ಮ ಪ್ರಾರ್ಥನಾ ಕೋಣೆಯ ಕೇಂದ್ರ ಬಿಂದುವಾಗಿದೆ ಎಂದು ಖಚಿತಪಡಿಸುತ್ತದೆ, ಇದು ನಿಮ್ಮ ಜೀವನದಲ್ಲಿ ದೈವತ್ವದ ಕೇಂದ್ರ ಪಾತ್ರವನ್ನು ಸಂಕೇತಿಸುತ್ತದೆ.

 

3) ಎತ್ತರ ಮತ್ತು ಸ್ಥಾನ

ವಾಸ್ತು ಪ್ರಕಾರ ದೇವರಮಂಟಪದ ದಿಕ್ಕಿಗೆ ಅನುಗುಣವಾಗಿ ವಿಗ್ರಹಗಳನ್ನು ತುಂಬಾ ಕಡಿಮೆ ಎತ್ತರ ಅಥವಾ ಹೆಚ್ಚು ಎತ್ತರವಿಲ್ಲದ ಮಟ್ಟದಲ್ಲಿ, ಪೂಜೆಗೆ ಕುಳಿತಾಗ ಪ್ರಾರ್ಥಿಸುವ ವ್ಯಕ್ತಿಯ ಹೃದಯದ ಮಟ್ಟಕ್ಕೆ ಹೊಂದಿಕೆಯಾಗುವಂತೆ ಇರಿಸಬೇಕು. ಇದು ದೇವತೆಗೆ ನೇರ ದೃಷ್ಟಿ ರೇಖೆಯನ್ನು ಸೃಷ್ಟಿಸುತ್ತದೆ, ದೇವರೊಂದಿಗೆ ಉತ್ತಮ ಸಂಪರ್ಕವನ್ನು ಸುಗಮಗೊಳಿಸುತ್ತದೆ. ಮುಂಭಾಗದಲ್ಲಿ ದೇವರಿಗೆ ಅರ್ಪಣೆಗಳು ಮತ್ತು ಪ್ರಾರ್ಥನೆಗಳಿಗೆ ಸಾಕಷ್ಟು ಸ್ಥಳವಿರುವಂತೆ ನೋಡಿಕೊಳ್ಳಿ.

 

4) ಅನೇಕ ವಿಗ್ರಹಗಳು

ಅನೇಕ ವಿಗ್ರಹಗಳನ್ನು ಹೊಂದಿರುವುದು ಹಿಂದೂ ದೇವತೆಗಳ ಶ್ರೀಮಂತ ದೇವತಾಗಣವನ್ನು ಸಂಕೇತಿಸುತ್ತದೆಯಾದರೂ, ದೇವರಮಂಟಪದಲ್ಲಿ ವಿಗ್ರಹಗಳ ದಟ್ಟಣೆ ಹೆಚ್ಚಾಗದಂತೆ ನೋಡಿಕೊಳ್ಳುವುದು ಅತ್ಯಗತ್ಯ. ಪ್ರತಿಯೊಂದು ವಿಗ್ರಹವು ಸರಿಯಾಗಿ ಪೂಜಿಸಲ್ಪಡುವುದನ್ನು ಖಚಿತಪಡಿಸಿಕೊಳ್ಳಲು ವಿಗ್ರಹಗಳ ಸಂಖ್ಯೆಯನ್ನು ಮಿತಿಗೊಳಿಸಿ. ಅಲ್ಲದೆ, ಒಂದೇ ದೇವರ ಎರಡು ಒಂದೇ ರೀತಿಯ ವಿಗ್ರಹಗಳನ್ನು ದೇವರಮಂಟಪದಲ್ಲಿ ಇಡುವುದನ್ನು ತಪ್ಪಿಸಿ, ಏಕೆಂದರೆ ಇದು ಗೊಂದಲವನ್ನು ಸೃಷ್ಟಿಸುತ್ತದೆ ಮತ್ತು ಆರಾಧನೆಯ ಕೇಂದ್ರವನ್ನು ದುರ್ಬಲಗೊಳಿಸುತ್ತದೆ.

 

ವಾಸ್ತು ಪ್ರಕಾರ ದೇವತೆಗಳ ಸ್ಥಾನ ಮತ್ತು ದೇವರಮಂಟಪ ದಿಕ್ಕಿನ ಅಂಶಗಳನ್ನು ಪರಿಗಣಿಸುವ ಮೂಲಕ, ನೀವು ದೈವಿಕತೆಯೊಂದಿಗೆ ಹೆಚ್ಚು ಆಳವಾದ ಮತ್ತು ವೈಯಕ್ತಿಕ ಸಂಪರ್ಕವನ್ನು ಹೊಂದುತ್ತೀರಿ. ಈ ಮೂಲಕ ದೇವಾಲಯದ ಸ್ಥಳವು ಶಾಂತಿ, ಆಧ್ಯಾತ್ಮಿಕತೆ ಮತ್ತು ಸಾಮರಸ್ಯದ ದಾರಿದೀಪವಾಗಿ ತನ್ನ ಉದ್ದೇಶವನ್ನು ನಿಜವಾಗಿಯೂ ಪೂರೈಸಲು ಅನುವು ಮಾಡಿಕೊಡುತ್ತದೆ.

 

ಮನೆಯಲ್ಲಿ ಪೂಜಾ ಕೋಣೆಯನ್ನು ನಿರ್ವಹಿಸಲು ಸಲಹೆಗಳು



ನಿಮ್ಮ ಮನೆಯಲ್ಲಿ ಪವಿತ್ರ ಸ್ಥಳವನ್ನು ನಿರ್ಮಿಸುವುದು, ಮನೆಯ ವಾಸ್ತುವಿನಲ್ಲಿ ದೇವಾಲಯದ ತತ್ವಗಳನ್ನು ಅನುಸರಿಸುವುದು ಆಧ್ಯಾತ್ಮಿಕತೆ ಮತ್ತು ಸಾಮರಸ್ಯವನ್ನು ಆಹ್ವಾನಿಸುವ ಒಂದು ಹೆಜ್ಜೆಯಾಗಿದೆ ಮತ್ತು ಅದರ ಪಾವಿತ್ರ್ಯತೆ ಮತ್ತು ಪರಿಣಾಮಕಾರಿತ್ವಕ್ಕೆ ನಿರ್ಣಾಯಕವಾಗಿದೆ.

 

1) ಸ್ವಚ್ಛತೆಯೇ ಮುಖ್ಯ

ದೇವರ ಕೋಣೆಯನ್ನು ಸಾರವು ಅದರ ಪರಿಶುದ್ಧತೆಯಲ್ಲಿ ಅಡಗಿದೆ. ನಿಯಮಿತ ಶುಚಿಗೊಳಿಸುವಿಕೆಯಿಂದ ದೇವರ ಕೋಣೆಯನ್ನು ಭೌತಿಕ ಸ್ವಚ್ಧವಾಗಿರಿಸುವುದಲ್ಲದೆ ಅಲ್ಲಿನ ಶಕ್ತಿಯನ್ನು ರೋಮಾಂಚಕ ಮತ್ತು ಸಕಾರಾತ್ಮಕವಾಗಿಡಲು ಸಹಾಯ ಮಾಡುತ್ತದೆ. ವಿಗ್ರಹಗಳನ್ನು ನಿಧಾನವಾಗಿ ಒರೆಸಿ, ಜಾಗದ ಧೂಳನ್ನು ಒರೆಸಿರಿ ಮತ್ತು ತಾಜಾತನವನ್ನು ಕಾಪಾಡಲು ನಿಯಮಿತವಾಗಿ ಬಟ್ಟೆಗಳು ಮತ್ತು ಹೂವುಗಳನ್ನು ಬದಲಾಯಿಸಿ. ದೇವರಮಂಟಪದ ದಿಕ್ಕಿನ ಹೊರತಾಗಿ, ನಿಯಮಿತವಾಗಿ ಸ್ವಚ್ಛಗೊಳಿಸುವಿಕೆಯಿಂದಾಗಿ ದೈವಿಕ ಶಕ್ತಿಯು ಅನಿರ್ಬಂಧಿತವಾಗಿ ನಿಮ್ಮ ಮನೆಯೊಳಗೆ ಹರಿಯುವಂತೆ ಮಾಡಲು ಸಹಾಯ ಮಾಡುತ್ತದೆ.

 

2) ಭಕ್ತಿಯಿಂದ ಇರಿಸುವಿಕೆ

ವಾಸ್ತು ಶಾಸ್ತ್ರದ ಪ್ರಕಾರ ದೇವರಮಂಟಪವನ್ನು ಇರಿಸುವಾಗ ಮತ್ತು ಮನೆಯಲ್ಲಿ ದೇವರಮಂಟಪದ ಮುಂಭಾಗದ ದಿಕ್ಕನ್ನು ಪರಿಗಣಿಸುವಾಗ ಸಕಾರಾತ್ಮಕ ಶಕ್ತಿಯು ಉಂಟಾಗಲು ನೀವು ನಿಮ್ಮ ಮನಸ್ಸಿನಲ್ಲಿನ ಭಕ್ತಿಯ ಬಹಳ ಮುಖ್ಯ. ನಿಮ್ಮ ಮನೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯು ನೆಲೆಸುವುದಕ್ಕಾಗಿ ಪ್ರಾರ್ಥನೆ ಮತ್ತು ಸದುದ್ದೇಶವನ್ನು ಮನಸ್ಸಿನಲ್ಲಿ ಇರಿಸಿಕೊಂಡು ದೇವರಮಂಟಪವನ್ನು ಇರಿಸಿ. ನೆನಪಿಡಿ, ಮನೆಯಲ್ಲಿ ದೇವರ ಸ್ಥಳವು ನಂತರದ ಸಮಯದಲ್ಲಿ ಆಲೋಚಿಸುವ ಸ್ಥಳವಾಗದೇ ಅದು ಪ್ರಾಮುಖ್ಯತೆ ಮತ್ತು ಗೌರವದ ಸ್ಥಳವಾಗಿರಬೇಕು.

 

3) ಅವ್ಯವಸ್ಥೆಯನ್ನು ತಪ್ಪಿಸಿ

ಓರಣವಾಗಿಲ್ಲದ ದೇವರ ಮಂಟಪವು ಸಕಾರಾತ್ಮಕ ಶಕ್ತಿಯ ಹರಿವನ್ನು ತಡೆಯಬಹುದು. ದೇವರಮಂಟಪದ ಸುತ್ತಲಿನ ಪ್ರದೇಶವು ಅನಗತ್ಯ ವಸ್ತುಗಳಿಂದ ಮುಕ್ತವಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಅರ್ಪಣೆಯ ವಸ್ತುಗಳು, ಪೂಜಾ ಪಾತ್ರೆಗಳು ಮತ್ತು ಧಾರ್ಮಿಕ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸಿ. ಸ್ಟೋರೇಜ್‌ ಕಂಪಾರ್ಟ್‌ಮೆಂಟ್‌ಗಳು ಅಥವಾ ಕಪಾಟುಗಳನ್ನು ಬಳಸುವುದರಿಂದ ಸ್ಥಳವನ್ನು ಅಚ್ಚುಕಟ್ಟಾಗಿ ಮತ್ತು ಪ್ರಶಾಂತವಾಗಿಡಲು ಸಾಧ್ಯವಿರುತ್ತದೆ.

 

4) ಬೆಳಕು ಮತ್ತು ವಾತಾವರಣ

ಮನೆಯಲ್ಲಿ ದೇವರಮಂಟಪದ ವಾಸ್ತುವಿಗಾಗಿ ದೇವರ ಕೋಣೆಯಲ್ಲಿ ಉತ್ತಮ ಬೆಳಕು ಅತ್ಯಗತ್ಯ. ಚೆನ್ನಾಗಿ ಬೆಳಕಿರುವ ದೇವರಮಂಟಪವು ಆತ್ಮೀಯವಾದ ಮತ್ತು ಬೆಚ್ಚಗಿನ ಅನುಭವವನ್ನು ನೀಡುತ್ತದೆ. ಸಾಧ್ಯವಾದರೆ ನೈಸರ್ಗಿಕ ಬೆಳಕನ್ನು ಬಳಸಿದಲ್ಲಿ ಅದು ಪವಿತ್ರ ವಾತಾವರಣವನ್ನು ಹೆಚ್ಚಿಸುತ್ತದೆ. ರಾತ್ರಿಯಲ್ಲಿ, ಒಂದು ಸಣ್ಣ ದೀಪದ ಮೂಲಕ ದೈವಿಕತೆಯ ಕಾಪಾಡಿಕೊಳ್ಳಬಹುದು. ಧೂಪ ಅಥವಾ ಪರಿಮಳ ತೈಲಗಳಿಂದ ಬರುವ ಸುಗಂಧವು ಶಾಂತ ವಾತಾವರಣವನ್ನು ಸೃಷ್ಟಿಸಿ ಆಮೂಲಕ ಧ್ಯಾನ ಮತ್ತು ಪ್ರಾರ್ಥನೆಗಳಿಗೆ ಸಹಾಯ ಮಾಡುತ್ತದೆ.



 

ನಿಮ್ಮ ಮನೆಯಲ್ಲಿ ವಾಸ್ತು ಪ್ರಕಾರ ದೇವರಮಂಟಪ ದಿಕ್ಕಿನ ತತ್ವಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಅನುಸರಿಸುವುದು ಸಕಾರಾತ್ಮಕ ಶಕ್ತಿ, ಆಧ್ಯಾತ್ಮಿಕ ಅನುಭೂತಿ ಮತ್ತು ಶಾಂತಿಯನ್ನು ವೃದ್ಧಿಸುವ ಪವಿತ್ರ ಸ್ಥಳವನ್ನು ಉಂಟು ಮಾಡುತ್ತದೆ. ಈ ಎಲ್ಲಾ ತತ್ವಗಳು ಮತ್ತು ನಿಯಮಗಳನ್ನು ಅನುಸರಿಸುವುದು ದೇವರಮಂಟಪಕ್ಕೆ ಉತ್ತಮ ದಿಕ್ಕನ್ನು ನೀಡುವುದಲ್ಲ ಮಾತ್ರವಲ್ಲದೆ, ಮನೆಯಲ್ಲಿ ವಾಸಿಸುವವರ ದೈನಂದಿನ ಜೀವನದಲ್ಲಿ ನಂಬಿಕೆಯನ್ನು ಪೋಷಿಸುವ, ಪ್ರತಿಧ್ವನಿಸುವ ಮತ್ತು ನಂಬಿಕೆಯನ್ನು ಹೆಚ್ಚಿಸುವ ದೈವಿಕ ಸಂಪರ್ಕವನ್ನು ಉಂಟುಮಾಡುತ್ತದೆ.

 



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....