ವಾಟರ್‌ಪ್ರೂಫಿಂಗ್‌ ವಿಧಾನಗಳು, ಮಾಡರ್ನ್‌ ಕಿಚನ್‌ ಡಿಸೈನ್ಸ್‌, ಹೋಮ್‌ಗಾಗಿ ವಾಸ್ತು ಸಲಹೆಗಳು, ಮನೆ ನಿರ್ಮಾಣ ವೆಚ್ಚ

ಸಂಪರ್ಕಲ್ಲಿರಿ

ನಿಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯಿರಿ

ಮಾನ್ಯವಾದ ವರ್ಗವನ್ನು ಆಯ್ಕೆಮಾಡಿ

ನಿಮ್ಮ ಉಪ-ವರ್ಗವನ್ನು ಆಯ್ಕೆ ಮಾಡಿ

acceptence

ಮುಂದುವರಿಯಲು ದಯವಿಟ್ಟು ಈ ಪೆಟ್ಟಿಗೆಯನ್ನು ಪರಿಶೀಲಿಸಿ



ಮನೆ ಮತ್ತು ಕಚೇರಿಯಲ್ಲಿ ವಾಸ್ತು ಪ್ರಕಾರ ಕನ್ನಡಿಯ ದಿಕ್ಕು ಹೇಗಿರಬೇಕು

ವಾಸ್ತುವಿನ ಪ್ರಕಾರ ನಿಮ್ಮ ಮನೆ ಮತ್ತು ಕಚೇರಿಯಲ್ಲಿ ಕನ್ನಡಿಯ ಸೂಕ್ತ ದಿಕ್ಕನ್ನು ನಿರ್ಧರಿಸುವ ಮೂಲಕ ವಾಸ್ತುವಿನ ಶಕ್ತಿಯನ್ನು ಅರ್ಥಮಾಡಿಕೊಳ್ಳಿ. ವಾಸ್ತು ತತ್ವಗಳ ಪ್ರಕಾರ ಕನ್ನಡಿಗಳನ್ನು ಸರಿಯಾಗಿ ಇರಿಸಿದಲ್ಲಿ ಧನಾತ್ಮಕತೆ ಮತ್ತು ಸಮೃದ್ಧಿಯನ್ನು ಸುಲಭವಾಗಿ ಹೆಚ್ಚಿಸಿಕೊಳ್ಳಬಹುದು.

Share:


ಇದರಿಂದ ತಿಳಿಯಬಹುದಾದ ಪ್ರಮುಖ ಅಂಶಗಳೆಂದರೆ

 

  • ಕನ್ನಡಿಗಳನ್ನು ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ಇರಿಸಿದಾಗ, ನಿಮ್ಮ ಮನೆ ಮತ್ತು ಕಚೇರಿಯ ಧನಾತ್ಮಕ ಶಕ್ತಿಯನ್ನು ವರ್ಧಿಸಬಹುದು ಮತ್ತು ಆಕರ್ಷಿಸಬಹುದು.
 
  • ಉತ್ತಮ ಆರೋಗ್ಯಕ್ಕಾಗಿ ವಾಸ್ತುವಿನೊಂದಿಗೆ ಹೊಂದಿಸಲು ಹಾಗೂ ತೊಂದರೆ ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಲು ಹಾಸಿಗೆಯ ಎದುರು ಕನ್ನಡಿಗಳನ್ನು ನೇರವಾಗಿ ಇಡುವುದನ್ನು ತಪ್ಪಿಸಿ.
 
  • ಲಿವಿಂಗ್ ರೂಮ್‌ನ ಉತ್ತರ ಅಥವಾ ಪೂರ್ವದ ಗೋಡೆಗಳ ಮೇಲೆ ಕನ್ನಡಿಗಳನ್ನು ಇರಿಸುವುದರಿಂದ ಅನುಗ್ರಹದ ಸಂಕೇತಗಳನ್ನು ಪ್ರತಿಬಿಂಬಿಸುತ್ತವೆ. ಇದು ನಿಮಗೆ ಸಂಪತ್ತು ಮತ್ತು ಅದೃಷ್ಟವನ್ನು ತರಬಲ್ಲದು.
 
  • ಕಚೇರಿಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇರಿಸಿದಲ್ಲಿ, ಅದು ಮುಕ್ತ ಸ್ಥಳಗಳು ಅಥವಾ ಬಾಗಿಲುಗಳ ಮೂಲಕ ಬರುವ ಹೊಸ ಅವಕಾಶಗಳು ಮತ್ತು ಬೆಳವಣಿಗೆಯನ್ನು ಸಂಕೇತಿಸುತ್ತದೆ.
 
  • ಹಾಸಿಗೆಗೆ ಎದುರಾಗಿರುವ ಕನ್ನಡಿಗಳು ಇರದಂತೆ ನೋಡಿಕೊಳ್ಳವುದು, ಸಂಪೂರ್ಣ ಶಕ್ತಿಯ ಪ್ರತಿಫಲನಕ್ಕಾಗಿ ಪೂರ್ಣ-ಉದ್ದದ ಕನ್ನಡಿಗಳನ್ನು ಬಳಸುವುದು ಮತ್ತು ಕನ್ನಡಿಗಳು ಅವ್ಯವಸ್ಥೆಗಳನ್ನು ಪ್ರತಿಬಿಂಬಿಸದೇ ಇರದಂತೆ ನೋಡಿಕೊಳ್ಳುವುದು ಮುಂತಾದ ನಿರ್ದಿಷ್ಟ ವಾಸ್ತು ಸಲಹೆಗಳನ್ನು ಅನುಸರಿಸುವುದು ಸಾಮರಸ್ಯದ ಶಕ್ತಿಯು ಹರಿಯುವಂತೆ ನೋಡಿಕೊಳ್ಳುತ್ತದೆ.
 
  • ವಾಸ್ತು ಪ್ರಕಾರ ಕನ್ನಡಿಯನ್ನು ಸ್ಥಳವು ಆಯಕಟ್ಟಿನಲ್ಲಿ ಇರಿಸುವಿಕೆಯು ಸೌಂದರ್ಯದ ಪರಿಗಣನೆಗಳನ್ನು ಮೀರುವುದರ ಜೊತೆಗೆ ಸಕಾರಾತ್ಮಕತೆ, ಸಮೃದ್ಧಿ ಮತ್ತು ಸಾಮರಸ್ಯದ ವಾತಾವರಣವನ್ನು ಬೆಳೆಸುತ್ತದೆ.


ವಾಸ್ತುಶಿಲ್ಪ ಮತ್ತು ಕಟ್ಟಡಗಳ ಬಗೆಗಿನ ಪ್ರಾಚೀನ ಭಾರತೀಯ ವಿಜ್ಞಾನವಾದ ವಾಸ್ತು ಶಾಸ್ತ್ರವು ನಮ್ಮ ದೈನಂದಿನ ಪರಿಸರದಲ್ಲಿ ಸಾಮರಸ್ಯ ಮತ್ತು ಸಕಾರಾತ್ಮಕ ಶಕ್ತಿಯನ್ನು ಮುಕ್ತಗೊಳಿಸುವ ಕೀಲಿಯನ್ನು ಒಳಗೊಂಡಿರುತ್ತದೆ. ಈ ಸಾಂಪ್ರದಾಯಿಕ ಜ್ಞಾನವು ಗರಿಷ್ಠ ಪ್ರಯೋಜನಗಳನ್ನು ಹೊಂದಲು ಕಟ್ಟಡದೊಳಗಿನ ವಿವಿಧ ಅಂಶಗಳ ಸ್ಥಾನ ಮತ್ತು ಹೊಂದಾಣಿಕೆಗೆ ಮಾರ್ಗದರ್ಶನ ನೀಡುತ್ತದೆ. ಈ ಅಂಶಗಳಲ್ಲಿ, ವಾಸ್ತುವಿನ ಪ್ರಕಾರ ಶಕ್ತಿಗಳನ್ನು ಪ್ರತಿಫಲಿಸುವ ಮತ್ತು ವರ್ಧಿಸುವ ಸಾಮರ್ಥ್ಯದಿಂದಾಗಿ ಕನ್ನಡಿಯ ದಿಕ್ಕು ನಿರ್ಣಾಯಕ ಪಾತ್ರವನ್ನು ಹೊಂದಿದೆ. ಕನ್ನಡಿಯನ್ನು ಇರಿಸುವ ದಿಕ್ಕು ಮನೆ ಅಥವಾ ಕಚೇರಿಯ ಕಂಪನಗಳ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ, ಇದು ವಾತಾವರಣದ ಮೇಲೆ ಮಾತ್ರವಲ್ಲದೆ ಅದರಲ್ಲಿ ವಾಸಿಸುವವರ ಆರೋಗ್ಯ ಮತ್ತು ಸಮೃದ್ಧಿಯ ಮೇಲೂ ಪ್ರಭಾವ ಬೀರುತ್ತದೆ. ಈ ಬ್ಲಾಗ್‌ನಲ್ಲಿ, ಮನೆ ಮತ್ತು ಕಚೇರಿ ಸೆಟ್ಟಿಂಗ್‌ಗಳಲ್ಲಿ ವಾಸ್ತು ಪ್ರಕಾರ ಕನ್ನಡಿಯನ್ನು ಯಾವ ಸ್ಥಾನದಲ್ಲಿ ಇರಿಸಬೇಕು ಎಂಬುದನ್ನು ನಾವು ನೋಡೋಣ. ವಾಸ್ತು ಪ್ರಕಾರ ಕನ್ನಡಿಯನ್ನು ಇರಿಸಲು ನಾವು ಸರಳವಾದ, ಕ್ರಿಯಾತ್ಮಕವಾದ ಒಳನೋಟಗಳನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಇದು ನಿಮ್ಮ ಕಟ್ಟಡಗಳನ್ನು ರೂಪಾಂತರಿಸಲು ಮತ್ತು ಉನ್ನತೀಕರಿಸಲು ನಿಮಗೆ ನೆರವಾಗಬಹುದು.

 

 


ವಾಸ್ತು ಪ್ರಕಾರ ಮನೆ ಮತ್ತು ಕಚೇರಿಗೆ ಕನ್ನಡಿಯ ದಿಕ್ಕು ಯಾವುದು?

 

ವಾಸ್ತು ಪ್ರಕಾರ ಕನ್ನಡಿಯ ದಿಕ್ಕು ಎಂದರೆ ನಿಮ್ಮ ಮನೆ ಅಥವಾ ಕಚೇರಿಯೊಳಗೆ ಕನ್ನಡಿಗಳು ಇರುವ ಸ್ಥಳ ಅಥವಾ ಸ್ಥಾನವನ್ನು ಸೂಚಿಸುತ್ತದೆ. ಈ ಸ್ಥಾನವು ಯಾವುದಾದರೂ ಒಂದು ಸ್ಥಳವಾಗಿರದೇ ಉತ್ತಮ ಫಲಿತಾಂಶಗಳಿಗಾಗಿ ಕೆಲವು ನಿಯಮಗಳು ಅಥವಾ ತತ್ವಗಳನ್ನು ಅನುಸರಿಸುತ್ತದೆ. ವಾಸ್ತು ಪ್ರಕಾರ, ಕನ್ನಡಿಗಳು ಶಕ್ತಿಯನ್ನು ಹೀರಿಕೊಳ್ಳುವ ಮತ್ತು ಪ್ರತಿಬಿಂಬಿಸುವ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಅವು ಪ್ರತಿಫಲಿಸುವ ಯಾವುದೇ ಶಕ್ತಿಯನ್ನು ಹಿಗ್ಗಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಕನ್ನಡಿಗಳನ್ನು ಸರಿಯಾಗಿ ಇರಿಸಿದಲ್ಲಿ, ಕಟ್ಟಡದ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅದೇ ರೀತಿ, ತಪ್ಪಾಗಿ ಇರಿಸಿದಲ್ಲಿ ಅವುಗಳು ನೀಡುವ ಫಲಿತಾಂಶವು ವ್ಯತಿರಿಕ್ತವಾಗಿರಬಹುದು.

 

ಒಟ್ಟಾರೆಯಾಗಿ, ವಾಸ್ತು ಪ್ರಕಾರ ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಕನ್ನಡಿಗಳನ್ನು ಎಲ್ಲಿ ಮತ್ತು ಹೇಗೆ ಇರಿಸಿದಲ್ಲಿ ಅವು ಹೆಚ್ಚು ಸಕಾರಾತ್ಮಕತೆಯನ್ನು ತರುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಕನ್ನಡಿಯ ದಿಕ್ಕು ಸೂಚಿಸುತ್ತದೆ . ಮಾನವನ ಯೋಗಕ್ಷೇಮವು ಅವನ ಸುತ್ತಮುತ್ತಲಿನ ಪರಿಸರದೊಂದಿಗೆ ಬಲವಾದ ಸಂಬಂಧವನ್ನು ಹೊಂದಿರುತ್ತದೆ. ವಾಸಿಸುವ ಮತ್ತು ಕೆಲಸ ಮಾಡುವ ಸ್ಥಳಗಳಲ್ಲಿ ಪ್ರಜ್ಞಾಪೂರ್ವಕ ಬದಲಾವಣೆಗಳನ್ನು ಮಾಡುವುದರಿಂದ ಮತ್ತು ವಾಸ್ತುವಿನ ಪ್ರಕಾರದ ಕನ್ನಡಿಯ ದಿಕ್ಕುಗಳನ್ನು ಅನುಸರಿಸುವ ಮೂಲಕ, ಅಲ್ಲಿ ವಾಸಿಸುವ ಅಥವಾ ಕೆಲಸ ಮಾಡುವ ಜನರ ಮನಸ್ಥಿತಿ ಮತ್ತು ಒಟ್ಟಾರೆ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಗಳನ್ನು ತರಬಹುದು.


ಮನೆ ಮತ್ತು ಕಚೇರಿಯಲ್ಲಿ ವಾಸ್ತು ಪ್ರಕಾರ ಕನ್ನಡಿಯ ಅಳವಡಿಕೆಯ ಸಲಹೆಗಳು

 

1)ಬೆಡ್‌ರೂಂ ವಾಸ್ತುವಿನಲ್ಲಿ ಕನ್ನಡಿಯ ಪಾತ್ರ.

 



ಬೆಡ್‌ರೂಂನ ವಾಸ್ತುವಿನ ವಿಷಯಕ್ಕೆ ಬಂದಾಗ, ಕನ್ನಡಿಯ ಅಳವಡಿಕೆಯ ಬಗ್ಗೆ ಎಚ್ಚರವಹಿಸಬೇಕು ಎಂದು ಸಲಹೆ ಮಾಡಲಾಗುತ್ತದೆ. ತಾತ್ತ್ವಿಕವಾಗಿ, ಕನ್ನಡಿಗಳನ್ನು ನೇರವಾಗಿ ಹಾಸಿಗೆಯ ಎದುರು ಅಥವಾ ಅವು ಮಲಗಿರುವ ವ್ಯಕ್ತಿಯನ್ನು ಪ್ರತಿಬಿಂಬಿಸುವ ಜಾಗದಲ್ಲಿ ಇಡಬಾರದು. ಏಕೆಂದರೆ ಇದು ವ್ಯಕ್ತಿಗೆ ತೊಂದರೆ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ. ವಾಸ್ತು ಪ್ರಕಾರ ಬೆಡ್‌ ರೂಂನಲ್ಲಿ ಕನ್ನಡಿ ದಿಕ್ಕು ಉತ್ತರ ಅಥವಾ ಪೂರ್ವ ಗೋಡೆಗಳ ಮೇಲೆ ಬರುವಂತೆ ಇಡುವುದು ಉತ್ತಮ, ಅದು ನೇರವಾಗಿ ಹಾಸಿಗೆಗೆ ಎದುರಾಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ವೈಯಕ್ತಿಕ ಶಕ್ತಿಯ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮಗಳನ್ನು ತಡೆಗಟ್ಟಲು, ಬಳಸದೇ ಇದ್ದಾಗ, ವಿಶೇಷವಾಗಿ ರಾತ್ರಿಯಲ್ಲಿ ಕನ್ನಡಿಯನ್ನು ಮುಚ್ಚಿಡಲು ಸಹ ಶಿಫಾರಸು ಮಾಡಲಾಗಿದೆ.

 

2) ಲಿವಿಂಗ್ ರೂಮ್ ವಾಸ್ತುವಿನ ಪ್ರಕಾರ ಕನ್ನಡಿಗಳು ಸ್ಥಾನ

 



ಲಿವಿಂಗ್ ರೂಮ್‌ ಎನ್ನುವುದು ನೀವು ವಿಶಾಲತೆ ಮತ್ತು ಪ್ರಕಾಶದ ಪ್ರಜ್ಞೆಯನ್ನು ಉಂಟು ಮಾಡಲು ಕನ್ನಡಿಗಳನ್ನು ಬಳಸಬಹುದಾದ ಪ್ರದೇಶವಾಗಿದೆ. ವಾಸ್ತುವನ್ನು ಅನುಸರಿಸಿಕೊಂಡು ಹೋಗುವುದಾದರೆ, ಕನ್ನಡಿಗಳಿಗೆ ಸೂಕ್ತವಾದ ಸ್ಥಾನವು ಉತ್ತರ ಅಥವಾ ಪೂರ್ವ ಗೋಡೆಗಳು ಆಗಿರುತ್ತವೆ. ಇದು ಅಲ್ಲಿ ವಾಸಿಸುವವರಿಗೆ ಸಂಪತ್ತು ಮತ್ತು ಅದೃಷ್ಟವನ್ನು ತರುತ್ತದೆ ಎಂದು ಭಾವಿಸಲಾಗಿದೆ. ಕನ್ನಡಿಯು ಡೈನಿಂಗ್ ಟೇಬಲ್ ಅಥವಾ ಸಂಪತ್ತು ಅಥವಾ ಸಮೃದ್ಧತೆಯನ್ನು ಸೂಚಿಸುವ ಯಾವುದೇ ಸ್ಥಳಕ್ಕೆ ಎದುರಾಗಿದೆ ಎಂದು ಖಚಿತಪಡಿಸಿಕೊಳ್ಳಿ. ಏಕೆಂದರೆ ಇದು ಪ್ರತಿಫಲನದ ಮೂಲಕ ಏಳಿಗೆಯ ಶಕ್ತಿಯನ್ನು ಪರಿಣಾಮಕಾರಿಯಾಗಿ ದ್ವಿಗುಣಗೊಳಿಸುತ್ತದೆ.

 

3) ಕಛೇರಿ ವಾಸ್ತುವಿನಲ್ಲಿ ಕನ್ನಡಿಗಳ ಪಾತ್ರ

 



ಕಚೇರಿಯ ವ್ಯವಸ್ಥೆಯಲ್ಲಿ, ಸ್ಪಷ್ಟತೆ ಮತ್ತು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುವ ರೀತಿಯಲ್ಲಿ ಕನ್ನಡಿಗಳನ್ನು ಇರಿಸಬೇಕು. ವಾಸ್ತುವಿನಲ್ಲಿ ಹೇಳಿದಂತೆ ಕನ್ನಡಿ ದಿಕ್ಕಿನ ತತ್ವಗಳನ್ನು ಅನುಸರಿಸಿಕೊಂಡು ಹೋಗುವುದಾದರೆ, ಕಚೇರಿಯ ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಕನ್ನಡಿಯನ್ನು ಇರಿಸಿದಲ್ಲಿ, ಇದು ತೆರೆದ ಸ್ಥಳ ಅಥವಾ ಬಾಗಿಲಿನ ನೋಟವನ್ನು ಪ್ರತಿಬಿಂಬಿಸುತ್ತದೆ. ಇದರಿಂದ ಹೊಸ ಅವಕಾಶಗಳು ಮತ್ತು ಬೆಳವಣಿಗೆಯನ್ನು ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವರ್ಕ್ ಸ್ಟೇಷನ್ ಮುಂದೆ ಕನ್ನಡಿಗಳನ್ನು ನೇರವಾಗಿ ಇಡುವುದನ್ನು ತಪ್ಪಿಸುವುದು ಮುಖ್ಯ ಏಕೆಂದರೆ ಇದು ಹೆಚ್ಚಿದ ಒತ್ತಡ ಮತ್ತು ಗೊಂದಲಕ್ಕೆ ಕಾರಣವಾಗಬಹುದು. ಅಲ್ಲದೆ, ಕನ್ನಡಿಗಳು ಯಾವುದೇ ಅಪೂರ್ಣ ಯೋಜನೆಗಳು ಅಥವಾ ಅವ್ಯವಸ್ಥೆಯನ್ನು ಪ್ರತಿಬಿಂಬಿಸದೇ ಇರುವಂತೆ ನೋಡಿಕೊಳ್ಳಿ. ಏಕೆಂದರೆ ಇದು ಸಾಂಕೇತಿಕವಾಗಿ ಕೆಲಸದ ಹೊರೆಯನ್ನು ದ್ವಿಗುಣಗೊಳಿಸುತ್ತದೆ ಮತ್ತು ಉತ್ಪಾದಕತೆಗೆ ಅಡ್ಡಿಯಾಗಬಹುದು.

 


ವಾಸ್ತು ಪ್ರಕಾರ ಕನ್ನಡಿಯ ಸ್ಥಳವನ್ನು ಆಯ್ಕೆಯಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳು

 

ಮಾಡಬೇಕಾದದ್ದು

 

1) ಉತ್ತರ ಅಥವಾ ಪೂರ್ವ ಗೋಡೆಗಳ ಮೇಲೆ ಕನ್ನಡಿಗಳನ್ನು ಇರಿಸಿ: ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸಲು ಇದು ಸೂಕ್ತವಾಗಿದೆ.

 

2) ಸುಂದರವಾದ ದೃಶ್ಯಗಳನ್ನು ಪ್ರತಿಬಿಂಬಿಸಲು ಕನ್ನಡಿಗಳನ್ನು ಬಳಸಿ: ಪ್ರಕೃತಿ ಅಥವಾ ಸುಂದರವಾದ ಕಲಾಕೃತಿಯನ್ನು ಪ್ರತಿಬಿಂಬಿಸುವ ಕನ್ನಡಿಯನ್ನು ಇಡುವುದು ಸಕಾರಾತ್ಮಕ ಕಂಪನಗಳನ್ನು ದ್ವಿಗುಣಗೊಳಿಸುತ್ತದೆ.

 

3) ಕನ್ನಡಿಗಳನ್ನು ಸ್ವಚ್ಛವಾಗಿ ಮತ್ತು ಸ್ಪಷ್ಟವಾಗಿರುವಂತೆ ನೋಡಿಕೊಳ್ಳಿ: ಕನ್ನಡಿಗಳಲ್ಲಿ ಶುಚಿತ್ವವು ಅತ್ಯಂತ ಮುಖ್ಯವಾಗಿರುತ್ತದೆ ಏಕೆಂದರೆ ಇದು ಶುದ್ಧತೆ ಮತ್ತು ಸಕಾರಾತ್ಮಕ ಶಕ್ತಿಯ ಪ್ರತಿಬಿಂಬವನ್ನು ಖಚಿತಪಡಿಸುತ್ತದೆ.

 

4) ಪೂರ್ಣ-ಉದ್ದದ ಕನ್ನಡಿಗಳನ್ನು ಬಳಸಿ: ಅಂತಹ ಕನ್ನಡಿಗಳು ಇಡೀ ದೇಹದ ಪ್ರತಿಬಿಂಬವನ್ನು ತೋರಿಸುವುದರಿಂದ ಶಕ್ತಿಯ ಹರಿವನ್ನು ಕಡಿತಗೊಳಿಸುವುದನ್ನು ತಪ್ಪಿಸುತ್ತದೆ.

 

5) ಬೆಳಕನ್ನು ಹೆಚ್ಚಿಸಲು ಕನ್ನಡಿಗಳನ್ನು ಬಳಸಿ: ನಿಮ್ಮ ಸ್ಥಳವು ಮಂದವಾಗಿದ್ದರೆ, ನೈಸರ್ಗಿಕ ಬೆಳಕನ್ನು ಪ್ರತಿಫಲಿಸಲು ಮತ್ತು ನಿಮ್ಮ ಮನೆ ಅಥವಾ ಕಚೇರಿಯನ್ನು ಪ್ರಕಾಶಮಾನಗೊಳಿಸಲು ಕನ್ನಡಿಗಳನ್ನು ಇರಿಸಿ.

 

ಮಾಡಬೇಡಿ

 

1) ಹಾಸಿಗೆಗೆ ಎದುರಾಗಿ ಕನ್ನಡಿಗಳನ್ನು ಇರಿಸಬೇಡಿ: ಇದು ವಿಶೇಷವಾಗಿ ಬೆಡ್‌ ರೂಂಗಳಲ್ಲಿ ಮುಖ್ಯವಾಗಿರುತ್ತದೆ. ಏಕೆಂದರೆ ಇದು ಅಶಾಂತಿ ಮತ್ತು ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗುತ್ತದೆ ಎಂದು ನಂಬಲಾಗಿದೆ.

 

2) ಭಿನ್ನಗೊಂಡ ಅಥವಾ ಒಡೆದ ಕನ್ನಡಿಗಳಿಂದ ದೂರವಿರಿ: ಇವು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಒಡೆದ ಅಥವಾ ಭಿನ್ನಗೊಂಡ ಶಕ್ತಿಗೆ ಕಾರಣವಾಗಬಹುದು.

 

3) ಕನ್ನಡಿಗಳನ್ನು ನೇರವಾಗಿ ಯಾವುದೇ ಬಾಗಿಲಿನ ಎದುರು ಇಡಬೇಡಿ: ಇದು ಮನೆಯ ಮುಖ್ಯ ಪ್ರವೇಶದ್ವಾರವಾಗಿರಲಿ ಮತ್ತು ಮನೆಗೊಳಗಿನ ಬಾಗಿಲುಗಳಾಗಿರಲಿ. ಏಕೆಂದರೆ ಇದು ಶಕ್ತಿಯನ್ನು ದೂರ ತಳ್ಳುತ್ತದೆ.

 

4)ಕನ್ನಡಿಗಳು ನಕಾರಾತ್ಮಕ ಚಿತ್ರಗಳನ್ನು ಪ್ರತಿಬಿಂಬಿಸುವುದನ್ನು ತಪ್ಪಿಸಿ: ಕನ್ನಡಿಗಳು ಅವ್ಯವಸ್ಥೆ, ಕಸದ ತೊಟ್ಟಿಗಳು ಅಥವಾ ನಕಾರಾತ್ಮಕ ಶಕ್ತಿಯ ಯಾವುದೇ ಮೂಲವನ್ನು ಪ್ರತಿಬಿಂಬಿಸಬಾರದು.

 

5) ಹಳೆಯ, ಮಬ್ಬಾದ ಕನ್ನಡಿಗಳನ್ನು ಬಳಸಬೇಡಿ: ಇವು ಪ್ರತಿಬಿಂಬಗಳು ಮತ್ತು ಶಕ್ತಿಯನ್ನು ವಿರೂಪಗೊಳಿಸಬಹುದು ಮತ್ತು ವಾಸ್ತು ಶಾಸ್ತ್ರದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.

 

ವಾಸ್ತು ಪ್ರಕಾರ ಕನ್ನಡಿ ದಿಕ್ಕಿನಲ್ಲಿ ಮಾಡಬೇಕಾದ ಮತ್ತು ಮಾಡಬಾರದ ಈ ಸರಳ ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಅನುಸರಿಸುವ ಮೂಲಕ ಮತ್ತು ವಾಸ್ತುವಿಗೆ ಅನುಗುಣವಾಗಿ ಎಚ್ಚರಿಕೆಯಿಂದ ಕನ್ನಡಿಯನ್ನು ಇರಿಸುವ ಮೂಲಕ, ನಿಮ್ಮ ಮನೆ ಮತ್ತು ಕಚೇರಿಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವನ್ನು ನೀವು ಉತ್ತಮಗೊಳಿಸಬಹುದು.



 

ಒಟ್ಟಾರೆಯಾಗಿ, ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಕನ್ನಡಿಗಳನ್ನು ಇರಿಸುವುದು ಕೇವಲ ಮನೆಯ ಸೌಂದರ್ಯ ಮೀರಿದ ಅಂಶಗಳನ್ನು ಒಳಗೊಂಡಿರುತ್ತದೆ. ಇದು ಸಕಾರಾತ್ಮಕತೆ, ಸಮೃದ್ಧಿ ಮತ್ತು ಸಾಮರಸ್ಯದೊಂದಿಗೆ ಅನುರಣಿಸುವ ಸ್ಥಳವನ್ನು ರಚಿಸಲು ಶಕ್ತಿಯನ್ನು ನಿರ್ದೇಶಿಸುವ ಬಗ್ಗೆ. ನೀವು ನಿಮ್ಮ ಸ್ಥಳವನ್ನು ಮರುವಿನ್ಯಾಸಗೊಳಿಸಿ ಅಥವಾ ಕನ್ನಡಿಯನ್ನು ಬದಲಾಯಿಸಿ, ವಾಸ್ತು ಪ್ರಕಾರ ಕನ್ನಡಿ ದಿಕ್ಕಿನ ಈ ಸಣ್ಣ ಸಣ್ಣ ಅಂಶಗಳು ನಿಮ್ಮ ಯೋಗಕ್ಷೇಮ ಮತ್ತು ಯಶಸ್ಸಿನ ಮೇಲೆ ಗಮನಾರ್ಹವಾದ ಪರಿಣಾಮಗಳನ್ನು ಬೀರಬಹುದು.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು





  ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....