ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು
1. ಯಾವ ಬೀಮ್ ಅತ್ಯಂತ ಬಲಯುತವಾಗಿರುತ್ತದೆ?
ಬಲಯುತವಾದ ಬೀಮ್ ಪ್ರಕಾರವು ಅದಕ್ಕೆ ಬಳಸಿದ ವಸ್ತುಗಳು ಮತ್ತು ವಿನ್ಯಾಸದ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯವಾಗಿ ಉಕ್ಕಿನಿಂದ ಬಲಯುತಗೊಳಿಸಲಾದ ಬೀಮ್‌ಗಳು ಹೆಚ್ಚು ಬಲಶಾಲಿಯಾಗಿದ್ದು, ಉತ್ತಮ ಭಾರವನ್ನು ಹೊರುವ ಶಕ್ತಿಯನ್ನು ಹೊಂದಿರುತ್ತದೆ. ಯಾವುದೇ ನಿರ್ಮಾಣ ಕಾರ್ಯದಲ್ಲಿ ಈ ರೀತಿಯ ಬೀಮ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಂದು ಪ್ರಬಲ ಆಯ್ಕೆಯಾಗಿರುತ್ತದೆ. ನಿಮ್ಮ ಯೋಜನೆಗೆ ಯಾವ ಬೀಮ್‌ಗಳನ್ನು ಸೂಕ್ತ ಎಂದು ತಿಳಿಯಲು ಎಂಜಿನಿಯರ್‌ರವರೊಂದಿಗೆ ಸಮಾಲೋಚನೆ ನಡೆಸುವುದು ಉತ್ತಮ.
2. ಕಡಿಮೆ ವೆಚ್ಚದ ಬೀಮ್ ಯಾವುದು?
ಸರಳ ಬೆಂಬಲಿತ ಬೀಮ್‌ಗಳು ಸಾಮಾನ್ಯವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ರಚನೆಗಳಿಗೆ ವೆಚ್ಚದ ದೃಷ್ಟಿಯಿಂದ ಉತ್ತಮ ಆಯ್ಕೆಯಾಗಿರುತ್ತವೆ. ಇತರೆ ವಿಧದ ಬೀಮ್‌ಗಳಿಗೆ ಹೋಲಿಸಿದರೆ ಅವುಗಳನ್ನು ನಿರ್ಮಿಸಲು ಸುಲಭ ಮತ್ತು ಇವುಗಳಿಗೆ ಕಡಿಮೆ ಸಾಮಗ್ರಿಗಳ ಅಗತ್ಯವಿರುತ್ತದೆ.
3. ಬೀಮ್‌ಗಳು ಮತ್ತು ಪಿಲ್ಲರ್‌ಗಳು ಒಂದೇ ಆಗಿರುತ್ತವೆಯೇ?
ಇಲ್ಲ, ಬೀಮ್‌ಗಳು ಮತ್ತು ಪಿಲ್ಲರ್‌ಗಳು ಎರಡೂ ಒಂದೇ ಆಗಿರುವುದಿಲ್ಲ. ಬೀಮ್‌ಗಳು ಭಾರವನ್ನು ತಾಳಿಕೊಳ್ಳಲು ಮತ್ತು ಅದರ ಆಧಾರಕ್ಕೆ ಆ ಭಾರವನ್ನು ವರ್ಗಾಯಿಸಲು ಅಡ್ಡಲಾಗಿ ಅಥವಾ ಇಳಿಜಾರಾಗಿ ನಿರ್ಮಿಸಲಾಗಿರುತ್ತದೆ. ಆದರೆ ಪಿಲ್ಲರ್‌ಗಳು ಬೀಮ್‌ಗಳಿಗೆ ಆಧಾರವಾಗಿರುವ ಲಂಬವಾದ ರಚನೆಯಾಗಿದ್ದು ತನ್ನ ಭಾರವನ್ನು ಅಡಿಪಾಯಕ್ಕೆ ಸಾಗಿಸುತ್ತದೆ.
4. ಬೀಮ್‌ಗಳ ನಡುವೆ ಕನಿಷ್ಠ ಅಂತರ ಎಷ್ಟಿರಬೇಕು?
ಬೀಮ್‌ಗಳ ನಡುವಿನ ಕನಿಷ್ಟ ಅಂತರವು ನಿರ್ದಿಷ್ಟ ನಿರ್ಮಾಣದ ವಿನ್ಯಾಸ ಮತ್ತು ಹೊರುವ ಭಾರದ ಅವಶ್ಯಕತೆಯ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, ಹೆಚ್ಚಿನ ಸಂದರ್ಭಗಳಲ್ಲಿ, ಇಂಜಿನಿಯರ್‌ಗಳು ರಚನೆಯಲ್ಲಿ ಸಾಕಷ್ಟು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಬೀಮ್‌ಗಳ ನಡುವೆ ಕನಿಷ್ಠ 3 ಮೀಟರ್ ದೂರವನ್ನು ಇರಿಸಿಕೊಳ್ಳುವ ಗುರಿಯನ್ನು ಹೊಂದಿರುತ್ತಾರೆ.
5. ಬೀಮ್‌ಗಳಲ್ಲಿ ಉತ್ತಮ ಕಾಂಕ್ರಿಟ್ ಮಿಶ್ರಣದ ಪ್ರಮಾಣ ಎಷ್ಟಿರಬೇಕು?
ಬೀಮ್‌ಗಳಿಗಾಗಿ ಮಿಶ್ರಣ ಮಾಡುವ ಕಾಂಕ್ರೀಟ್‌ನ ಅನುಪಾತವು ರಚನೆಯ ಸಾಮರ್ಥ್ಯ ಮತ್ತು ಬಾಳಿಕೆಗೆ ಅನುಗುಣವಾಗಿರುತ್ತದೆ. ಸಾಮಾನ್ಯವಾಗಿ ವಸತಿ ಮತ್ತು ವಾಣಿಜ್ಯ ಕಟ್ಟಡಗಳಲ್ಲಿನ ಬೀಮ್‌ಗಳಿಗೆ 1 ಭಾಗ ಸಿಮೆಂಟ್, 2 ಭಾಗ ಮರಳು ಮತ್ತು 3 ಅಗ್ರಿಗೇಟ್ ಅನ್ನು ಮಿಶ್ರಣವನ್ನು ಬಳಸಲಾಗುತ್ತದೆ.