Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ಮರಳಿನ ವಿಶಿಷ್ಟ ಗುಣಲಕ್ಷಣಗಳಿಂದಾಗಿ ನಿರ್ಮಾಣದಲ್ಲಿ ನಿರ್ದಿಷ್ಟ ಕಡೆಗಳಲ್ಲಿ ಬಳಕೆ ಮಾಡಲು ವಿವಿಧ ರೀತಿಯ ಮರಳಿಗೆ ಆದ್ಯತೆ ನೀಡಲಾಗುತ್ತದೆ. ನಿರ್ಮಾಣದಲ್ಲಿ ಸಾಮಾನ್ಯವಾಗಿ ಬಳಸುವ ವಿವಿಧ ಪ್ರಕಾರದ ಮರಳಿನ ಕುರಿತು ತಿಳಿದುಕೊಳ್ಳೋಣ.
ನದಿ ಮರಳು ನೈಸರ್ಗಿಕವಾಗಿ ನದಿ ಪಾತ್ರಗಳಿಂದ ದೊರೆಯುವ ಪ್ರಕಾರದ ಮರಳಾಗಿದೆ. ಈ ಮರಳಿನ ಮೃಧುವಾದ, ದುಂಡಗಿನ ಕಣಗಳು ಇದು ಹೆಚ್ಚು ಕಾರ್ಯಕ್ಷಮತೆಯನ್ನು ಕೊಡುವಂತೆ ಮಾಡುತ್ತವೆ. ಅದರ ಗುಣಗಳ ಕಾರಣದಿಂದಾಗಿ, ನದಿ ಮರಳನ್ನು ನಿರ್ಮಾಣ ಕಾರ್ಯಗಳಲ್ಲಿ ಬಳಸಲಾಗುತ್ತದೆ. ಅಂದರೆ ಇಟ್ಟಿಗೆಗಳನ್ನು ಹೊಂದಿಸುವಾಗ, ಪ್ಲಾಸ್ಟರ್ ಮಾಡುವಾಗ ಮತ್ತು ಕಾಂಕ್ರೀಟ್ ಮಿಶ್ರಣ ಮಾಡುವಾಗ ಬಳಸಲಾಗುತ್ತದೆ. ನಿಖರವಾಗಿ ಹಾಗೂ ಗಮನ ಕೊಟ್ಟು ಮಾಡುವ ನಿರ್ಮಾಣ ಕಾರ್ಯಗಳಲ್ಲಿ ಇದನ್ನು ಬಳಸಲಾಗುತ್ತದೆ. ಇಂಥ ಮರಳಿನ ದುಂಡಗಿನ ಕಣಗಳು ಮಿಶ್ರಣ ಮಾಡುವುದಕ್ಕೆ ಹಾಗೂ ಕರಾರುವಕ್ಕಾಗಿ ಇರಿಸಲು ಸುಲಭವಾಗಿಸುತ್ತದೆ. ಹೀಗಾಗಿ ಈ ಮರಳು ನಿಖರತೆ ಅಗತ್ಯವಿರುವ ಕಾಮಗಾರಿಗಳಲ್ಲಿ ಬಳಸಲು ಜನಪ್ರಿಯ ಆಯ್ಕೆಯಾಗಿದೆ.
‘ಕಾಂಕ್ರೀಟ್ ಮರಳು’ ಎಂಬುದು ಕಾಂಕ್ರೀಟ್ ಮಿಶ್ರಣಗಳಲ್ಲಿ ಬಳಸಲು ವಿಶೇಷವಾಗಿ ತಯಾರಿಸಿದ ಮರಳಾಗಿದೆ. ಇದು ಅದರ ಒರಟಾದ ವಿನ್ಯಾಸದಿಂದಾಗಿ ಜನಪ್ರೀಯವಾಗಿದೆ. ಕಲ್ಮಶಗಳನ್ನು ಎಚ್ಚರಿಕೆಯಿಂದ ತೆಗೆದುಹಾಕುವ ಮೂಲಕ ಈ ಮರಳನ್ನು ಸಂಸ್ಕರಣೆ ಮಾಡಲಾಗುತ್ತದೆ. ಫೌಂಡೇಶನ್ಗಳು, ವಾಹನಗಳು ಚಲಿಸುವ ರಸ್ತೆಗಳು ಮತ್ತು ಕಾಲುದಾರಿಗಳಂತಹ ನಿರ್ಮಾಣಗಳಿಗೆ ಗಟ್ಟಿಯಾದ ಹಾಗೂ ಬಾಳಿಕೆ ಬರುವ ಕಾಂಕ್ರೀಟ್ ತಯಾರಿಸಲು ‘ಕಾಂಕ್ರೀಟ್ ಮರಳು’ ಸೂಕ್ತವಾಗಿದೆ. ಇದರ ಒರಟಾದ ವಿನ್ಯಾಸವು ಸ್ಟ್ರಕ್ಚರ್ಗಳ ಒಟ್ಟಾರೆ ಸ್ಥಿರತೆ ಮತ್ತು ಗಟ್ಟಿತನಕ್ಕೆ ಕೊಡುಗೆ ನೀಡುತ್ತದೆ, ಇದು ಲೋಡ್-ಬೇರಿಂಗ್ ಬಳಕೆಗೆ ವಿಶೇಷವಾಗಿ ಸೂಕ್ತವಾಗಿದೆ.
ದಪ್ಪ ಮರಳು ಎಂದೂ ಕರೆಯಲ್ಪಡುವ ಪಿಟ್ ಸ್ಯಾಂಡ್ ಅನ್ನು ನೈಸರ್ಗಿಕ ನಿಕ್ಷೇಪಗಳಿಂದ ತೆಗೆಯಲಾಗುತ್ತದೆ. ಈ ರೀತಿಯ ಮರಳು ಸಮಗ್ರವಾದ ವಿನ್ಯಾಸವನ್ನು ಹೊಂದಿದೆ, ಇದು ಮೃಧುವಾದ ನದಿ ಮರಳಿಗಿಂತ ಬೇರೆಯಾಗಿರುತ್ತದೆ. ಈ ಮರಳನ್ನು ಮೇಲ್ಮೈ ಲೆವೆಲಿಂಗ್ ಮಾಡಲೂ ಸೇರಿದಂತೆ ವಿವಿಧ ನಿರ್ಮಾಣ ಕಾಮಗಾರಿಗಳಲ್ಲಿ ಬಳಸಲಾಗುತ್ತದೆ. ಜೊತೆಗೆ ಪಾದಚಾರಿ ಮಾರ್ಗದಲ್ಲಿ ಹಾಕುವ ಕಲ್ಲುಗಳಿಗೆ ಬೆಡ್ ವಸ್ತುವಾಗಿ, ಕೊಳವೆಗಳು ಮತ್ತು ಇತರ ಸೌಲಭ್ಯಗಳನ್ನು ಅಳವಡಿಸಲು ಈ ಮರಳನ್ನು ಬಳಸಲಾಗುತ್ತದೆ. ಬೇರೆ ಮರಳಿಗೆ ಹೋಲಿಕೆ ಮಾಡಿದರೆ ಹೂಳು ಮತ್ತು ಜೇಡಿಮಣ್ಣಿನ ಅಂಶದಿಂದಾಗಿ ಕಾಂಕ್ರೀಟ್ ಕೆಲಸಕ್ಕೆ ಶಿಫಾರಸು ಮಾಡಲಾಗುವುದಿಲ್ಲ.ಆದರೂ, ಪಿಟ್ ಮರಳು ಇತರ ನಿರ್ಮಾಣಗಳ ಬಳೆಕಯಲ್ಲಿ ಬಳಸಬಹುದಾಗಿದೆ
ಗಟ್ಟಿಯಾದ ಕಲ್ಲುಬಂಡೆಗಳನ್ನು ಯಂತ್ರಗಳ ಸಹಾಯದಿಂದ ಪುಡಿಮಾಡುವ ಮೂಲಕ ಎಂ-ಸ್ಯಾಂಡ್, ಅಥವಾ ತಯಾರಿಸಿದ ಮರಳನ್ನು ಉತ್ಪಾದಿಸಲಾಗುತ್ತದೆ. ಇದು ಇದನ್ನು ಅಗತ್ಯ ಗಾತ್ರಕ್ಕೆ ತಕ್ಕಂತೆ ಒಂದೇ ರೂಪದಲ್ಲಿ ತಯಾರಿಸಲಾಗುತ್ತದೆ. ಇದು ನೈಸರ್ಗಿಕ ನದಿ ಮರಳನ್ನು ಹೋಲುತ್ತದೆ ಮತ್ತು ಉತ್ತಮ ಗುಣಮಟ್ಟದಿಂದಾಗಿ ಎಂ-ಸ್ಯಾಂಡ್ ಮಾನ್ಯತೆ ಪಡೆದಿದಿದೆ. ಅತ್ಯುತ್ತಮ ಗುಣಮಟ್ಟದ ಮರಳು ಕಡ್ಡಾಯವಾಗಿರುವ ಕಡೆಗಳಲ್ಲಿ ಅಂದರೆ, ಕಾಂಕ್ರೀಟ್ ಉತ್ಪಾದನೆ, ಪ್ಲ್ಯಾಸ್ಟರಿಂಗ್ ಮತ್ತು ಸಾಮಾನ್ಯ ನಿರ್ಮಾಣಕ್ಕಾಗಿ ನಿರ್ಮಾಣದಲ್ಲಿ ಎಂ-ಸ್ಯಾಂಡ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಈ ಮರಳಿನ ನಿರ್ಧಿಷ್ಟ ಕಣಗಳ ಗಾತ್ರವು ಗುಣಮಟ್ಟದ ಪ್ರಯೋಜನವನ್ನು ನೀಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇದನ್ನು ನದಿ ಮರಳಿಗೆ ಪರ್ಯಾಯವಾಗಿ ನಿರ್ಮಾಣ ಕಾಮಗಾರಿಗಳಲ್ಲಿ ವಿಶ್ವಾಸಾರ್ಹವಾಗಿ ಬಳಕೆ ಮಾಡಲಾಗುತ್ತಿದೆ.
ಯುಟಿಲಿಟಿ ಮರಳನ್ನು ಕೆಲವೊಂದು ಬಾರಿ ಫಿಲ್ ಸ್ಯಾಂಡ್ ಅಥವಾ ಬ್ಯಾಕ್ಪಿಲ್ ಸ್ಯಾಂಡ್ ಅಂದರೆ ಭರ್ತಿ ಮಾಡುವ ಮರಳು ಎಂದು ಕರೆಯಲಾಗುತ್ತದೆ. ಒರಟಾದ ವಿನ್ಯಾಸದಿಂದಾಗಿ ಗುರುತಿಸಲಾಗುವ ಈ ಮರಳು, ಸುಲಭವಾದ ಸಂಕೋಚನ ಮಾಡುವುದು ಅಂದರೆ, ಅದನ್ನು ಸುಲಭವಾಗಿ ಒತ್ತುವ ಮೂಲಕ ಗಟ್ಟಿಗೊಳಿಸಬಹುದಾಗಿದೆ. ಇದು ನಿರ್ಮಾಣ ಕಾರ್ಯಗಳಲ್ಲಿ ಟ್ರೆಂಚ್ಗಳನ್ನು ಭರ್ತಿ ಮಾಡಲು, ಪೈಪ್ಗಳಿಗೆ ಬೆಡ್ ರೂಪದಲ್ಲಿ ಹಾಕಲು ಮತ್ತು ಉತ್ಖನನ ಪ್ರದೇಶಗಳಲ್ಲಿ ಕಂದಕಗಳನ್ನು ಮುಚ್ಚುವ ಉದ್ದೇಶವನ್ನು ಪೂರೈಸುತ್ತದೆ. ಸುಲಭವಾಗಿ ಒತ್ತುವ ಮೂಲಕ ಸ್ಥಿರವಾಗಿ ನೆಲೆಗೊಳ್ಳುವ ಯುಟಿಲಿಟಿ ಮರಳಿನ ಸಾಮರ್ಥ್ಯವು ವಿವಿಧ ನಿರ್ಮಾಣ ಕಾಮಗಾರಿಗಳಲ್ಲಿ ದೃಢವಾದ ಫೌಂಡೇಶನ್ ಹಾಕಲು ಅನಿವಾರ್ಯವಾಗಿದೆ.
ಫಿಲ್ ಸ್ಯಾಂಡ್ ನೋಡಲು ಹಾಗೂ ಆ ಮರಳಿನ ಗುಣಲಕ್ಷಣಗಳು ಯುಟಿಲಿಟಿ ಮರಳಿನಂತೆಯೇ ಇವೆ. ಈ ಮರಳಿನ ಒರಟಾದ ವಿನ್ಯಾಸ ಮತ್ತು ಉತ್ತಮ ನೀರು ಹೊರಹಾಕುವ ಸಾಮರ್ಥ್ಯಗಳು ವಿಶೇಷವಾಗಿವೆ. ಕಟ್ಟಡದ ಫಂಡೇಶನ್ ಮತ್ತು ರಸ್ತೆ ನಿರ್ಮಾಣ, ಜೊತೆಗೆ ದೊಡ್ಡ ದೊಡ್ಡ ಖಾಲಿ ಜಾಗೆಗಳನ್ನು ತುಂಬಲು ಇದನ್ನು ಬಳಸಿಕೊಳ್ಳಲಾಗುತ್ತದೆ. ಒತ್ತಿ ಹಾಕುವ ಮೂಲಕ ಗಟ್ಟಿಯಾದ ನೆಲೆಯನ್ನು ಮಾಡಲು ಫಿಲ್ ಸ್ಯಾಂಡ್ ಹಾಕಿ ಒತ್ತಲಾಗುತ್ತದೆ. ಇದು ಗಟ್ಟಿಯಾದ ಫೌಂಡೇಶನ್ ಬೇಕಾಗಿರುವ ಯೋಜನೆಗಳಿಗೆ ಅತ್ಯಗತ್ಯವಾಗಿದೆ.
ನಿರ್ಮಾಣ ಕಾಮಗಾರಿಗಳಲ್ಲಿ ಬಳಸಲಾಗುವ ಈ ವಿವಿಧ ರೀತಿಯ ಮರಳನ್ನು ಅವುಗಳ ವಿಶಿಷ್ಟ ಗುಣಲಕ್ಷಣಗಳು ಮತ್ತು ನಿರ್ದಿಷ್ಟ ಕಡೆಗಳಲ್ಲಿ ಬಳಕೆಯಾಗುವ ಗುಣಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ನಿರ್ಮಾಣ ಯೋಜನೆಗಳ ಸ್ಟ್ರಕ್ಚರಲ್ ಹಾಗೂ ಕ್ರಿಯಾತ್ಮಕ ಅವಶ್ಯಕತೆಗಳನ್ನು ಮರಳು ಪೂರೈಸುತ್ತದೆ. ಮನೆ ನಿರ್ಮಾಣಕ್ಕೆ ಯಾವ ಮರಳು ಉತ್ತಮ ಎಂದು ಕೇಳುವುದು ಸಾಮಾನ್ಯವಾಗಿದೆ, ಆದರೆ ಈ ಪ್ರಶ್ನೆಗೆ ಸೂಕ್ತ ಉತ್ತರ ಸಿಗದಂತಾಗಿದೆ. ಹೆಚ್ಚಿನ ನಿರ್ಮಾಣಗಳಲ್ಲಿ ಬಳಸಲು ನದಿ ಮರಳು ಮತ್ತು ಕಾಂಕ್ರೀಟ್ ಮರಳು ಸೂಕ್ತವಾಗಿವೆ ಆದರೂ, ವಿಶೇಷ ಉದ್ದೇಶಗಳಿಗಾಗಿ, ಅಂದರೆ ನೆಲವನ್ನು ಸಮ ಮಾಡುವುದು ಅಥವಾ ಖಾಲಿ ಜಾಗೆ ತುಂಬಲು ಪಿಟ್ ಮರಳು, ಯುಟಿಲಿಟಿ ಸ್ಯಾಂಡ್ ಅಥವಾ ಫಿಲ್ ಸ್ಯಾಂಡ್ ಹೆಚ್ಚು ಸೂಕ್ತವಾಗಿವೆ. ಜೊತೆಗೆ ಎಂ-ಸ್ಯಾಂಡ್ ಅನ್ನು ನದಿ ಮರಳಿಗೆ ಪರ್ಯಾಯ ಮರಳು ಎಂದು ಪರಿಗಣಿಸಬಹುದಾಗಿದೆ.
ಅಂತಿಮವಾಗಿ, ನಿರ್ಮಾಣ ಕಾಮಗಾರಿಗಳಲ್ಲಿ ಬಳಸಲಾಗುವ ವಿವಿಧ ಮರಳಿನ ಆಯ್ಕೆಯು ಉತ್ತಮ-ಗುಣಮಟ್ಟದ ಮತ್ತು ಬಾಳಿಕೆ ಬರುವಂತಹ ಸ್ಟ್ರಕ್ಚರ್ಗಳನ್ನು ಕಟ್ಟಲು ನಿರ್ಣಾಯಕ ಅಂಶವಾಗಿದೆ. ಅದು ಕಲ್ಲಿನ ಕೆಲಸ, ಕಾಂಕ್ರೀಟ್ ಉತ್ಪಾದನೆ, ಭರ್ತಿ ಮಾಡುವ ಅಥವಾ ಸಮತಟ್ಟು ಮಾಡುವುದು ಆಗಿರಲಿ ಅಂಥ ಕೆಲಸಗಳಿಗೆ, ನದಿ ಮರಳಿನಿಂದ ಹಿಡಿದು ಕಾಂಕ್ರೀಟ್ ಮರಳಿನವರೆಗೆ, ಪಿಟ್ ಸ್ಯಾಂಡ್ನಿಂದ ಎಂ-ಸ್ಯಾಂಡ್ ವರೆಗೆ, ಪ್ರತಿಯೊಂದು ವಿಧದ ಮರಳೂ ನಿರ್ದಿಷ್ಟ ಉದ್ದೇಶವನ್ನು ಪೂರೈಸುತ್ತದೆ. ನಿರ್ಮಾಣದಲ್ಲಿ ಬಳಸಲಾಗುವ ಈ ರೀತಿಯ ಮರಳಿನ ವಿಧಗಳ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಮೂಲಕ, ನಿಮ್ಮ ಯೋಜನೆಗೆ ಯಾವ ರೀತಿಯ ಮರಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಕುರಿತು ತಿಳುವಳಿಕೆಯುಳ್ಳ ನಿರ್ಧಾರವನ್ನು ನೀವು ತೆಗೆದುಕೊಳ್ಳಬಹುದು.