ನಮಗೆ ನಿರ್ದಿಷ್ಟವಾಗಿ ಟೈಲ್ಸ್ ಅಂಟಿಸಲು ಒಂದು ಅಂಟು ಬೇಕಿದ್ದರೆ, ತೆಳುವಾದ ಸೆಟ್ ಮಾರ್ಟರ್ ಅನ್ನು ಬಳಸಬಹುದು. ಆದರೆ, ಈ ಮಿಶ್ರಣವು ತೆಳುವಾಗಿದ್ದು, ಇಟ್ಟಿಗೆಗಳು ಅಥವಾ ಭಾರವಾದ ಕಲ್ಲುಗಳಿಗೆ ಬಳಸಲು ಸಾಧ್ಯವಾಗುವುದಿಲ್ಲ. ಇದು ಸಿಮೆಂಟ್, ಮರಳು ಮತ್ತು ನೀರಿನ ಮಿಶ್ರಣವನ್ನು ಒಳಗೊಂಡಿರುತ್ತದೆ. ಇತ್ತೀಚಿನ ದಿನಗಳಲ್ಲಿ ಟೈಲ್ ಮ್ಯಾಸ್ಟಿಕ್‌ನೊಂದಿಗೆ ತೆಳುವಾದ ಸೆಟ್ ಮಾರ್ಟರ್ ಅನ್ನು ಬಳಸುವುದು ಸಾಮಾನ್ಯವಾಗಿದೆ. ನೆಲದ ಅಂಚುಗಳು ಮತ್ತು ಗೋಡೆಗಳಿಗೆ ಟೈಲ್ಸ್ ಅನ್ನು ಅಂಟಿಸಲು ಇದನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತದೆ.
10. ಎಪಾಕ್ಸಿ ಮಾರ್ಟರ್
ಇತ್ತೀಚೆಗೆ ಗಾರೆಗಳ ಪ್ರಕಾರದಲ್ಲಿ ಸಾಮಾನ್ಯವಾಗಿ ಸುಧಾರಣೆ ಅಥವಾ ಪ್ರಗತಿಯನ್ನು ಕಾಣಬಹುದಾಗಿದ್ದು, ಎಪಾಕ್ಸಿ ಮಾರ್ಟರ್ ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಎಪಾಕ್ಸಿ ಗಾರೆಯು ಎಪಾಕ್ಸಿ ರೆಸಿನ್ಸ್, ಸಾಲ್ವೆಂಟ್ಸ್ ಇತ್ಯಾದಿಯನ್ನು ಒಳಗೊಂಡಿರುತ್ತದೆ. ಈ ಪ್ರಕಾರದ ಗಾರೆಯು ಅಂಟುವ ಗುಣವನ್ನು ಹೊಂದಿರುತ್ತದೆ ಮತ್ತು ಜಲನಿರೋಧಕವಾಗಿ ಕೆಲಸ ಮಾಡುತ್ತವೆ. ಇದು ಕಲೆ ನಿರೋಧಕವಾಗಿದ್ದು, ಸಿಮೆಂಟ್ ಗಾರೆಗಿಂತ ವೇಗವಾಗಿ ಗಟ್ಟಿಯಾಗುತ್ತದೆ. ಟೈಲ್ಸ್ ಜೋಡಣೆಯಲ್ಲಿ ಇದನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ.
11. ಅಗ್ನಿ ನಿರೋಧಕ ಗಾರೆ
ಈ ಗಾರೆಯ ಅಡಿಯಲ್ಲಿ ಅಲ್ಯುಮಿನಸ್ ಸಿಮೆಂಟ್ ಗಮನಾರ್ಹ ವಸ್ತುವಾಗಿದೆ. ಸುಟ್ಟ ಇಟ್ಟಿಗೆ ಪುಡಿ ಮತ್ತು ಉತ್ತಮ ಗುಣಮಟ್ಟದ ಸಿಮೆಂಟನ್ನು ಉಪಯೋಗಿಸಿ ಮಿಶ್ರಣ ಮಾಡುವುದರಿಂದ ಗೋಡೆಗೆ ಬೆಂಕಿ ತಾಕದಂತೆ ಈ ಅಗ್ನಿ ನಿರೋಧಕ ಮಾರ್ಟರ್ ರಕ್ಷಿಸುತ್ತದೆ.
12. ಪ್ಯಾಕಿಂಗ್ ಮಾರ್ಟರ್
ಕೆಲವು ಸಂದರ್ಭದಲ್ಲಿ ಸಿಮೆಂಟ್-ಲೋಮ್, ಸಿಮೆಂಟು-ಮರಳು, ಅಥವಾ ಇನ್ನೂ ಕೆಲವೊಮ್ಮೆ ಸಿಮೆಂಟು, ಮರಳು ಮತ್ತು ಲೋಮ್ ಮೂರನ್ನೂ ಮಿಶ್ರಣ ಮಾಡಿ ಪ್ಯಾಕಿಂಗ್ ನಲ್ಲಿ ಬಳಸಲಾಗುತ್ತದೆ. ಇದು ಜಲ ನಿರೋಧಕ ಶಕ್ತಿಯನ್ನು ಹೊಂದಿದ್ದು ಹೆಚ್ಚು ಶಕ್ತಿಯುತ ಹಾಗೂ ಉಪಯುಕ್ತವಾದ ಕಾರಣ ತೈಲ ಬಾವಿಗಳಿಗೆ ಬೈಂಡರ್ ಗಳಾಗಿ ಬಳಸುತ್ತಾರೆ.
13. ಇತರ ರೂಪಾಂತರಗಳು
ಜಿಪ್ಸಮ್, ಸ್ಲ್ಯಾಗ್ ಅಥವಾ ಸಿಮೆಂಟ್ ಜೊತೆಗೆ ಸಿಂಡರ್ ಮತ್ತು ಪ್ಯೂಮಿಸ್ ಅನ್ನು ಸೂಕ್ಷ್ಮ-ಸಂಯೋಜಕವಾಗಿ ಬಳಸುವುದರಿಂದ ಇದು ಧ್ವನಿ ನಿರೋಧಕ ಗುಣವನ್ನು ಅಭಿವೃದ್ಧಿಪಡಿಸುತ್ತದೆ. ಇದರಿಂದ ಧ್ವನಿ ನಿಯಂತ್ರಣ ಮಾಡುವ ಗಾರೆಯನ್ನು ಪಡೆದುಕೊಳ್ಳಬಹುದು. ಅಲ್ಲದೆ ರಾಸಾಯನಿಕ ಧಾಳಿಗೆ ಒಳಗಾಗುವ ಸಂರಚನೆಗಳಿಗೆ ರಾಸಾಯನಿಕ ನಿರೋಧಕ ಮಾರ್ಟರ್ ಅನ್ನು ಬಳಸಬಹುದು. ಕ್ಷ-ಕಿರಣಗಳು ಕೆಟ್ಟ ಪರಿಣಾಮಗಳನ್ನು ಉಂಟು ಮಾಡುವುದರಿಂದ, ಕೊಠಡಿಗಳ ಗೋಡೆಗಳ ಮೂಲಕ ಕ್ಷ-ಕಿರಣಗಳು ಹಾದುಹೋಗುವುದನ್ನು ತಡೆಯಲು ಬೃಹತ್ ಸಾಂದ್ರತೆಯ ಗಾರೆಯನ್ನು (22 KN/m³ ) ಬಳಸಬಹುದು.