ಯಶಸ್ವಿಯಾಗಿ ಟೆರೇಸ್ ವಾಟರ್‌ಪ್ರೂಫಿಂಗ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಹಂತಗಳ ಸರಣಿಯನ್ನು ಅನುಸರಿಸುವುದು ಮುಖ್ಯವಾಗಿದೆ. ಪ್ರಕ್ರಿಯೆಯ ಅವಲೋಕನ ಇಲ್ಲಿದೆ:
1. ಮೇಲ್ಮೈಯನ್ನು ಸಿದ್ಧಪಡಿಸುವುದು
ಟೆರೇಸ್ ಮೇಲ್ಮೈಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಯಾವುದೇ ಕೊಳಕು, ಚೂರುಗಳು ಅಥವಾ ಬಿದ್ದಿರುವ ವಸ್ತುಗಳನ್ನು ತೆಗೆದುಹಾಕಿ. ಮೇಲ್ಮೈ ನಯವಾದ ಮತ್ತು ಯಾವುದೇ ಅಸಮ ವಸ್ತುಗಳಿಂದ ಮುಕ್ತವಾಗಿದೆ ಎಂಬುದನ್ನು ಪರಿಶೀಲನೆ ಮಾಡಿ.
2. ದುರ್ಬಲಗೊಂಡ ಸಬ್ಸ್ಟ್ರೇಟ್ ದುರಸ್ತಿ ಅಥವಾ ಬಲಪಡಿಸುವಿಕೆ
ಟೆರೇಸ್ ಮೇಲ್ಮೈಯಲ್ಲಿ ಯಾವುದೇ ಕ್ರ್ಯಾಕ್ಗಳು ಅಥವಾ ದುರ್ಬಲಗೊಂಡ ಪ್ರದೇಶಗಳನ್ನು ಗುರುತಿಸಿ ಮತ್ತು ಸರಿಪಡಿಸಿ. ಸೀಲಾಂಟ್, ಗಾರೆ ಅಥವಾ ಇತರ ಸಾಮಗ್ರಿಗಳನ್ನು ಬಳಸಿಕೊಂಡು ಗ್ಯಾಪ್ ಅನ್ನು ತುಂಬಿಸಿ. ವಾಟರ್ಪ್ರೂಫ್ ಪದರಗಳಿಗೆ ಬಲವಾದ ಬೇಸ್ ಉಂಟಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದನ್ನು ಮಾಡಬೇಕು.
3. ಪ್ರೈಮರ್ ಅನ್ನು ಹಚ್ಚಿರಿ
ಟೆರೇಸ್ ಮೇಲ್ಮೈಗೆ ವಾಟರ್ಪ್ರೂಫ್ ಮಾಡುವ ವಸ್ತುಗಳು ಅಂಟಿಕೊಳ್ಳುವುದನ್ನು ಹೆಚ್ಚಿಸಲು ಪ್ರೈಮರ್ ಹಚ್ಚಿರಿ. ಸಬ್ಸ್ಟ್ರೇಟ್ ಮತ್ತು ವಾಟರ್‌ಪ್ರೂಫಿಂಗ್ ಪದರಗಳು ಹಿಡಿದುಕೊಳ್ಳುವುದು ಪ್ರೈಮರ್ ಹಚ್ಚುವುದರಿಂದ ಸುಧಾರಿಸುತ್ತದೆ.
4. ಬೇಸ್ ಕೋಟ್ ಅನ್ನು ಹಚ್ಚಿರಿ
ಆರಿಸಿಕೊಂಡ ವಾಟರ್‌ಪ್ರೂಫಿಂಗ್ ವಸ್ತುಗಳ ಬೇಸ್ ಕೋಟ್ ಅನ್ನು ಮೇಲ್ಮೈಗೆ ಸಮವಾಗಿ ಹಚ್ಚಿರಿ. ಮೂಲ ವಾಟರ್ಪ್ರುಫಿಂಗ್ ಪದರಿನಂತೆ ಬೇಸ್ ಕೋಟ್ ಕೆಲಸ ಮಾಡುತ್ತದೆ. ಜೊತೆಗೆ ನೀರಿನ ಒಳಬರದಂತೆ ತಡೆದು ತಡೆರಹಿತ ತಡೆಗೋಡೆಯನ್ನು ಒದಗಿಸುತ್ತದೆ.
5. ಬಲವರ್ಧಕವನ್ನು ಹಚ್ಚಿರಿ
ಅಗತ್ಯವಿದ್ದರೆ, ವಾಟರ್‌ಪ್ರೂಫಿಂಗ್ ಪದರವನ್ನು ಬಲಪಡಿಸಲು ಫೈಬರ್ಗ್ಲಾಸ್ ಜಾಲರಿ ಅಥವಾ ಅಂತಹುದೇ ವಸ್ತುಗಳೊಂದಿಗೆ ಬೇಸ್ ಕೋಟ್ ಅನ್ನು ಹಚ್ಚಿರಿ.
6. ಮಧ್ಯಂತರ ಕೋಟ್ ಹಚ್ಚಿರಿ
ಹೆಚ್ಚುವರಿ ರಕ್ಷಣೆ ಮತ್ತು ಬಾಳಿಕೆಗಾಗಿ ವಾಟರ್‌ಪ್ರೂಫಿಂಗ್ ಸಾಮಗ್ರಿಗಳ ಮಧ್ಯಂತರ ಕೋಟ್ ಅನ್ನು ಹಚ್ಚಿರಿ. ಈ ಕೋಟ್ ವಾಟರ್ಪ್ರೂಫ್ ತಡೆಗೋಡೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ಬೇಸ್ ಕೋಟ್ನಲ್ಲಿ ಯಾವುದೇ ಖಾಲಿ ಇರುವ ಜಾಗಗಳನ್ನು ತುಂಬುತ್ತದೆ.
7. ಟಾಪ್ ಕೋಟ್ ಹಚ್ಚಿರಿ
ಯುವಿ ಪ್ರತಿರೋಧವನ್ನು ಒದಗಿಸುವ ಮತ್ತು ವಾಟರ್ಪ್ರೂಫ್ ಆಧಾರವಾಗಿರುವ ಪದರಗಳನ್ನು ರಕ್ಷಿಸುವ ಮತ್ತು ದೀರ್ಘಕಾಲೀನ ಫಲಿತಾಂಶಗಳನ್ನು ಕೊಡುವ ಅಂತಿಮ ಪದರವನ್ನು ಒದಗಿಸಲು ಟಾಪ್ ಕೋಟ್ನೊಂದಿಗೆ ಫಿನಿಶಿಂಗ್ ಮಾಡಿರಿ.