Share:
Home Building Guide
Our Products
Useful Tools
Waterproofing methods, Modern kitchen designs, Vaastu tips for home, Home Construction cost
Share:
ನೀವು ನದಿಯ ಬಳಿ ಅಥವಾ ಸಡಿಲವಾದ ಮಣ್ಣಿನಲ್ಲಿ ಮನೆ ನಿರ್ಮಿಸಲು ಯೋಚಿಸುತ್ತಿದ್ದರೆ, ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳಿವೆ. ಹೊಳೆದಂಡೆಯ ಆಸ್ತಿಗಳು ಸುಂದರತೆಯಿಂದ ಕೂಡಿರಬಹುದು, ಆದರೆ ಸಡಿಲವಾದ ಮಣ್ಣಿನಲ್ಲಿ ಅಥವಾ ಅದರ ಸಮೀಪದಲ್ಲಿ ಕಟ್ಟಡ ನಿರ್ಮಿಸುವುದು ಜಾಗರೂಕ ಯೋಜನೆ ಮತ್ತು ಸಿದ್ಧತೆಯ ಅಗತ್ಯವಿರುವ ಅನನ್ಯ ಸವಾಲುಗಳೊಂದಿಗೆ ಬರುತ್ತದೆ.
ನದಿಯ ಬಳಿ ಮನೆಯನ್ನು ನಿರ್ಮಿಸುವಾಗ, ಪ್ರವಾಹದ ಸಂಭವನೀಯತೆಯ ಅಪಾಯಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದು ಮತ್ತು ಅದಕ್ಕೆ ಸಿದ್ಧತೆಮಾಡಿಕೊಂಡಿರುವುದು ಬಹಳ ಮುಖ್ಯ. ನದಿಗಳು ಸ್ವಾಭಾವಿಕವಾಗಿ ನೀರಿನ ಮಟ್ಟದಲ್ಲಿ ಏರಿಳಿತಗಳನ್ನು ಕಾಣುತ್ತವೆ ಮತ್ತು ಭಾರೀ ಮಳೆಯ ಸಂದರ್ಭಗಳಲ್ಲಿ ಅನೇಕವು ಆಗಾಗ ಪ್ರವಾಹಕ್ಕೆ ಗುರಿಯಾಗುತ್ತವೆ. ಆದರೆ ನದಿಯ ಬಳಿ ಮನೆ ನಿರ್ಮಿಸುವಾಗ ಜಾಗರೂಕ ಕಟ್ಟಡ ಯೋಜನೆಯೊಂದಿಗೆ ಇದೆಲ್ಲವನ್ನೂ ತಪ್ಪಿಸಬಹುದು. ಸಡಿಲವಾದ ಮಣ್ಣಿನಲ್ಲಿ ನಿರ್ಮಿಸುವಾಗ ಅನುಸರಿಸಬಹುದಾದ ಕೆಲವು ಸಲಹೆಗಳು ಇಲ್ಲಿವೆ.
ಮನೆ ನಿರ್ಮಾಣಕ್ಕಾಗಿ ನದಿಯ ಪಕ್ಕದ ಅಥವಾ ಸಡಿಲವಾದ ಮಣ್ಣಿನ ಸೈಟ್ ಅನ್ನು ಸರಿಯಾಗಿ ಸಿದ್ಧಗೊಳಿಸುವಲ್ಲಿ ಒಳಗೊಂಡಿರುವ ವೆಚ್ಚಗಳು ಒಂದು ಸ್ಥಿರವಾದ ನೆಲದ ಮೇಲೆ ಕಟ್ಟಲಾಗುವ ಸಾಮಾನ್ಯ ಕಟ್ಟಡ ನಿರ್ಮಾಣಕ್ಕಿಂತ ಹೆಚ್ಚಿನದಾಗಿರುತ್ತವೆ. ತಾಣ ವಿಶ್ಲೇಷಣೆ, ಗ್ರೇಡಿಂಗ್, ಉತ್ಖನನ, ವಿಶೇಷ ಬುನಾದಿಗಳು ಮತ್ತು ಪ್ರವಾಹ-ನಿರೋಧಕ ಕ್ರಮಗಳಂತಹ ವೆಚ್ಚಗಳಿಗಾಗಿ ಹೆಚ್ಚುವರಿ ಬಜೆಟ್ ಅನ್ನು ನಿಯೋಜಿಸಲು ಮರೆಯದಿರಿ. ನಿಮ್ಮ ಸೈಟ್‌ನ ಅನನ್ಯ ಪರಿಸ್ಥಿತಿಗಳನ್ನು ಅವಲಂಬಿಸಿ ವೆಚ್ಚಗಳಲ್ಲಿ ಬಹಳಷ್ಟು ವ್ಯತ್ಯಾಯವಾಗಬಹುದು, ಹೋಲಿಸಿ ನೋಡಲು ಅನೇಕ ಗುತ್ತಿಗೆದಾರರಿಂದ ಕೋಟ್‌ಗಳನ್ನು ಪಡೆಯಿರಿ. ಅಲ್ಲದೆ, ನದಿಯ ಬಳಿ ಮನೆಯನ್ನು ನಿರ್ಮಿಸುವಾಗ, ಸಮಸ್ಯಾತ್ಮಕ ಮಣ್ಣುಗಳ ಮೇಲೆ ನಿರ್ಮಿಸುವಾಗ ನೀವು ಸಂಭಾವ್ಯ ಅನಿರೀಕ್ಷಿತ ವೆಚ್ಚಗಳನ್ನು ಲೆಕ್ಕಕ್ಕೆ ಪರಿಗಣಿಸಿರಬೇಕು. ಸಾಕಷ್ಟು ಬಜೆಟ್ ಅನ್ನು ಮುಂಗಡವಾಗಿ ಹೊಂದಿಸುವುದರಿಂದ ನೀವು ಸೈಟ್ ಅನ್ನು ಸಂಪೂರ್ಣವಾಗಿ ಸಿದ್ಧಪಡಿಸಬಹುದು ಮತ್ತು ಯಾವುದೇ ಖಂಜೂಸು ಮಾಡದೇ ಸೂಕ್ತವಾದ ನಿರ್ಮಾಣ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.
ಹೊಳೆದಂಡೆಯ ಆಸ್ತಿಗಳು ಅಥವಾ ಸಡಿಲವಾದ, ಸರಿಯುವ ಮಣ್ಣುಗಳಲ್ಲಿ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ವ್ಯಾಪಕ ಅನುಭವವನ್ನು ಹೊಂದಿರುವ ಬಿಲ್ಡರ್ ರನ್ನು ಬಳಸಿಕೊಂಡು ಕೆಲಸ ಮಾಡುವುದು ಅತ್ಯಂತ ಸೂಕ್ತ ಸಲಹೆಯಾಗಿದೆ. ನಿಮ್ಮ ಸೈಟ್‌ನ ನಿರ್ದಿಷ್ಟ ಸವಾಲುಗಳಿಗೆ ಉತ್ತಮ ವಿಧಾನಗಳನ್ನು ಶಿಫಾರಸು ಮಾಡಲು, ಅಗತ್ಯವಿರುವ ಯಾವುದೇ ವಿಶೇಷ ಎಂಜಿನಿಯರಿಂಗ್ ಅವಶ್ಯಕತೆಗಳನ್ನು ಹೊಂದಿಸಿಕೊಳ್ಳಲು ಮತ್ತು ಮಾಮೂಲಿ ಗುತ್ತಿಗೆದಾರರು ಮಾಡಬಹುದಾದ ದುಬಾರಿ ನಿರ್ಮಾಣ ತಪ್ಪುಗಳನ್ನು ತಡೆಯಲು ಅವರು ಜ್ಞಾನವನ್ನು ಹೊಂದಿರುತ್ತಾರೆ. ನದಿಗಳ ಬಳಿ ಮನೆಗಳನ್ನು ಕಟ್ಟುವಾಗ, ಸಂಭಾವ್ಯ ಬಿಲ್ಡರ್‌ಗಳು ಮುಂಚೆ ನಿಮ್ಮದೇ ರೀತಿಯ ಸೈಟ್‌ಗಳಲ್ಲಿ ಮಾಡಿದ ಹಿಂದಿನ ನಿರ್ಮಾಣಗಳ ಅನೇಕ ಉದಾಹರಣೆಗಳನ್ನು ಕೇಳಿ ಮತ್ತು ಅವರ ತೃಪ್ತಿಕರತೆಯ ಕುರಿತು ಆಯಾ ಮಾಲೀಕರುಗಳೊಂದಿಗೆ ಮಾತನಾಡಿ. ಸಮಸ್ಯಾತ್ಮಕ ಸೈಟ್‌ನಲ್ಲಿನ ನಿರ್ಮಾಣದಲ್ಲಿ ಅನುಭವ ಹೊಂದಿರುವ ಬಿಲ್ಡರ್‌ಗಳು ಹೆಚ್ಚು ಶುಲ್ಕ ವಿಧಿಸಬಹುದು ಆದರೆ ದೀರ್ಘಾವಧಿಯಲ್ಲಿ ನಿಮಗೆ ಖರ್ಚು ಮತ್ತು ತಲೆನೋವು ಎರಡನ್ನೂ ತಪ್ಪಿಸಬಹುದು.
ನದಿಯ ಬಳಿ ಅಥವಾ ಸಡಿಲವಾದ ಮಣ್ಣಿನಲ್ಲಿ ನಿರ್ಮಿಸುವಾಗ ಪ್ಲಾಟಿನ ಮೇಲೆ ಮನೆಯ ಫ್ಲೋರ್ ಪ್ಲಾನ್ ಅನ್ನು ಹಾಕಿ ಸೂಕ್ತಗೊಳಿಸಿಕೊಳ್ಳುವುದು ಬಹಳ ಮುಖ್ಯ. ನದಿ ತೀರದ ಸೈಟ್‌ಗಳಿಗೆ, ಲೇಔಟ್ ಪ್ರವಾಹದ ಅಪಾಯವನ್ನು ತಗ್ಗಿಸಲು ಸಾಧ್ಯವಾಗುವಂತೆ ನದಿಯ ದಡದಿಂದ ದೂರದಲ್ಲಿ ಮನೆಯನ್ನು ಸೂಚಿಸಬೇಕು. ನದಿಯ ಬಳಿ ಮನೆಯನ್ನು ನಿರ್ಮಿಸುವಾಗ, ಫ್ಲೋರ್ ಪ್ಲಾನ್ ಅನ್ನು ಸ್ವತಃ ಮನೆಯನ್ನೇ ಪ್ರವಾಹಕ್ಕೆ ಪ್ರತಿಯ ಗುರಾಣಿಯನ್ನಾಗಿ ಯೋಜಿಸುವುದನ್ನು ಪರಿಗಣಿಸಿ. ಸಡಿಲವಾದ ಮಣ್ಣಿನಲ್ಲಿ, ಚೊಕ್ಕ ಮನೆ ಲೇಔಟ್‌ಗಳು ಬುನಾದಿಯ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಮತ್ತು ಅಡಿಯ ಮೇಲೆ ಬೀಳುವ ತೂಕ ಹೊರುವಿಕೆಯ ಬೇಡಿಕೆಗಳನ್ನು ಕಡಿಮೆ ಮಾಡುತ್ತದೆ. ಸಣ್ಣ ಅಡಿ ಕ್ಷೇತ್ರವನ್ನು ಹೊಂದಿರುವ ಎತ್ತರಿಸಿದ ಬುನಾದಿ ವಿನ್ಯಾಸವು ಜರಗುವ ನೆಲೆಗಟ್ಟಿನ ಪರಿಸ್ಥಿತಿಗಳನ್ನು ನಿಬಾಯಿಸಲು ಗರಿಷ್ಠ ನಮ್ಯತೆಯನ್ನು ಒದಗಿಸುತ್ತದೆ. ನದಿಯ ಬಳಿ ಮನೆಯನ್ನು ನಿರ್ಮಿಸುವಾಗ, ಯೋಜನೆಗಳನ್ನು ಅಂತಿಮಗೊಳಿಸುವ ಮೊದಲು ಉತ್ತಮವಾದ ಮನೆಯ ಆಕಾರ ಮತ್ತು ಅಭಿಮುಖತೆಯ ಕುರಿತು ನಿಮ್ಮ ಬಿಲ್ಡರ್ ರೊಂದಿಗೆ ಸಮಾಲೋಚಿಸಿ.
ಸಮಸ್ಯಾತ್ಮಕ ಮಣ್ಣಿನಲ್ಲಿ ಕಟ್ಟಡ ನಿರ್ಮಿಸುವಾಗ ಯೋಜನೆಯ ಕಾಲಾವಳಿಯು ಹಿಂಜುವ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಹೆಚ್ಚುವರಿ ಸೈಟ್ ಸಿದ್ಧತೆಯ ಕಾಮಗಾರಿ, ಉತ್ಖನನ, ವಿಶೇಷ ಅಡಿಪಾಯ ಮತ್ತು ಸಂಭಾವ್ಯ ಹವಾಮಾನ ವಿಳಂಬಗಳು ವಿಶಿಷ್ಟವಾದ ಮನೆ ನಿರ್ಮಾಣದ ಕಾಲಾವಳಿಯನ್ನು ಸುಲಭವಾಗಿ ದ್ವಿಗುಣಗೊಳಿಸಬಹುದು ಅಥವಾ ಮೂರು ಪಟ್ಟು ಹೆಚ್ಚಿಸಬಹುದು. ನಿಮ್ಮ ಒಪ್ಪಂದದ ದಾಖಲೆಗಳಲ್ಲಿ ಅಗತ್ಯವಿರುವ ಹೆಚ್ಚುವರಿ ಸಮಯವನ್ನು ನಿಮ್ಮ ಬಿಲ್ಡರ್ ಗೆ ಸ್ಪಷ್ಟವಾಗಿ ವಿವರಿಸಿ, ತರುವಾತ ಯಾವುದೇ ಅನಿರೀಕ್ಷತೆಗಳಿರಬಾರದು. ನಿಮ್ಮ ವೇಳಾಪಟ್ಟಿಯನ್ನು ಯೋಜಿಸುವಾಗ ಆರಂಭಿಕ ಅಂದಾಜುಗಳನ್ನು ಮೀರಿ 20-30% ಹೆಚ್ಚುವರಿಯನ್ನು ಬಫರ್‌ನೊಂದಿಗೆ ನಿರ್ಮಿಸುವುದು ಜಾಣತನವಾಗಿದೆ. ಯೋಜನೆಯು ಮುಂದುವರೆದಂತೆ ಕಾಲಾವಳಿಯ ಪರಿಣಾಮಗಳ ಕುರಿತು ನಿಮ್ಮ ಗುತ್ತಿಗೆದಾರರೊಂದಿಗೆ ನಿಕಟ ಸಂವಹನದಲ್ಲಿರಿ.
ತಾಳಿಕೆಯ ನಿರ್ಮಾಣ ತಂತ್ರಗಳನ್ನು ಮತ್ತು ಜಾರುವ ಮಣ್ಣಿನ ಪರಿಸ್ಥಿತಿ ಮತ್ತು ಪ್ರವಾಹದ ಅಪಾಯಗಳಿಗೆ ಸೂಕ್ತವಾದ ವಸ್ತುಗಳನ್ನು ಬಳಸಿಕೊಳ್ಳುವುದು ದೀರ್ಘಾವಧಿಯಲ್ಲಿ ನಿಮ್ಮ ಸೈಟ್‌ನ ಸವಾಲುಗಳ ಎದುರು ತಡೆದು ನಿಲ್ಲುವ ಮನೆಯನ್ನು ನಿರ್ಮಿಸಲು ನಿರ್ಣಾಯಕವಾಗಿವೆ. ಇವುಗಳ ಕೆಲವು ಉದಾಹರಣೆಗಳಲ್ಲಿ ರಿಇನ್ಫೋರ್ಸ್ಡ್ ಡೀಪ್ ಪೈಲ್ ಅಡಿಪಾಯಗಳು, ಹೆಚ್ಚುವರಿ ಆಳವುಳ್ಳ ಫೂಟಿಂಗ್‌ಗಳೊಂದಿಗೆ ಎತ್ತರಿಸಿದ ಬುನಾದಿ ಗೋಡೆಗಳು, ಉಕ್ಕಿನ ರಿಇನ್ಫೋರ್ಸ್ಡ್ ಕಾಂಕ್ರೀಟ್ ಸ್ಲಾಬ್‌ಗಳು, ಬೇಸ್‌ಮೆಂಟ್ ಸುತ್ತಲೂ ಸಂಪೂರ್ಣ ಜಲನಿರೋಧಕ ಉಪಚಾರಗಳು ಮತ್ತು ಅಡಿಪಾಯಗಳು, ಗೆದ್ದಲು ನಿರೋಧಕ ಚಿಕಿತ್ಸೆಗಳು, ಹುಗಿದ ಯುಟಿಲಿಟಿ ಲೈನ್‌ಗಳು ಮತ್ತು ಫ್ರೆಂಚ್ ಡ್ರೈನ್‌ಗಳು ಸೇರಿವೆ. ನಿಮ್ಮ ನಿರ್ದಿಷ್ಟ ಸೈಟ್‌ಗೆ ಅನುಗುಣವಾಗಿ ಸರಿಯಾದ ಪರಿಹಾರೋಪಾಯಗಳನ್ನು ಬಳಸುವುದು ದಶಕಗಳವರೆಗೆ ನಿಮ್ಮ ನದಿ ತೀರದ ಮನೆಯ ರಚನಾತ್ಮಕ ಸಮಗ್ರತೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ.
ನದಿಯ ಬಳಿ ಅಥವಾ ಸಡಿಲವಾದ, ಜಾರುವ ಮಣ್ಣಿನಲ್ಲಿ ಮನೆಯನ್ನು ನಿರ್ಮಿಸುವುದು ವಿಶೇಷ ಯೋಜನೆ, ವಿಶ್ಲೇಷಣೆ, ಬಜೆಟ್ ಮತ್ತು ನಿರ್ಮಾಣ ತಂತ್ರಗಳು ತಾಳಿಕೆ ಬರುವ ಕಟ್ಟಡವನ್ನು ರಚಿಸಲು ಅಗತ್ಯವಿವೆ. ಅನುಭವಿ ಗುತ್ತಿಗೆದಾರರು ಮತ್ತು ಇಂಜಿನಿಯರ್‌ಗಳ ಸಂಗಡ ಕಾಮಗಾರಿ ಮಾಡುವುದು, ಸಿದ್ಧತೆಗೆ ಸಮಯವನ್ನು ಅನುಮತಿಸುವುದು, ಪ್ರವಾಹ ಮತ್ತು ಪಲ್ಲಟ-ನಿರೋಧಕ ವಸ್ತುಗಳನ್ನು ಬಳಸುವುದು ಮತ್ತು ರಕ್ಷಣಾತ್ಮಕ ವಿನ್ಯಾಸದ ಅಂಶಗಳನ್ನು ಅಳವಡಿಸುವುದು ಅಪಾಯಗಳನ್ನು ಕಡಿಮೆ ಮಾಡಲು ಮತ್ತು ವ್ಯಾಪಕವಾದ ಮನೆ ಹಾನಿಯನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಸರಿಯಾದ ಚಾಕುಚಕ್ಯತೆ ಮತ್ತು ಸೈಟ್ ಸಿದ್ಧತೆಯೊಂದಿಗೆ, ನಿಮ್ಮ ಕನಸಿನ ಮನೆಯನ್ನು ನೀವು ನೀರಿನ ಬಳಿ ಅಥವಾ ಸಮಸ್ಯಾತ್ಮಕ ಮಣ್ಣಿನಲ್ಲಿ ಸುರಕ್ಷಿತವಾಗಿ ನಿರ್ಮಿಸಬಹುದು ಮತ್ತು ಆನಂದಿಸಬಹುದು.