ನಿಮ್ಮ ಮನೆಯ ಕಟ್ಟುವುದಕ್ಕಿಂತ ಮೊದಲು ಮತ್ತು ಕಟ್ಟುವ ಸಮಯದಲ್ಲಿ ಇದು ನಿಮ್ಮ ದೊಡ್ಡ ಕಳಕಳಿಯಾಗಿರುತ್ತದೆ - ಕಡಿಮೆ ವೆಚ್ಚದ ಮನೆಗಳು ಸುರಕ್ಷಿತವೇ? ಕಡಿಮೆ ವೆಚ್ಚದಲ್ಲಿ ನಿಮ್ಮ ಮನೆಯನ್ನು ಕಟ್ಟುವ ಆಲೋಚನೆಯು ನಿಮ್ಮ ಬಜೆಟ್ ಅನ್ನು ಮೀರದಂತೆ ಪ್ಲ್ಯಾನ್ ಮಾಡಿಕೊಳ್ಳಬೇಕು. ವಸ್ತುಗಳ ಗುಣಮಟ್ಟದಲ್ಲಿ ನೀವು ರಾಜಿ ಮಾಡಿಕೊಳ್ಳಬೇಕಾಗಿಲ್ಲ, ಯಾವಾಗಲೂ ಪ್ರಮಾಣಕ್ಕಿಂತ ಗುಣಮಟ್ಟವನ್ನು ನೆನಪಿಡಿ.
ನಿಮ್ಮ ಮನೆಯನ್ನು ನಿರ್ಮಿಸಲು ಸಹಾಯ ಮಾಡುವ ಕೆಲವು ಕಡಿಮೆ ಬಜೆಟ್ ಮನೆ ಕಟ್ಟುವ ಐಡಿಯಾಗಳನ್ನು ಕೆಳಗೆ ನೀಡಲಾಗಿದೆ:
1) ಮನೆಯನ್ನು ಅಡ್ಡಲಾಗಿ ಕಟ್ಟುವುದಕ್ಕಿಂತ ಲಂಬವಾಗಿ ಕಟ್ಟುವುದು ಇದು ಕಡಿಮೆ ಖರ್ಚಿನದ್ದಾಗಿದೆ. ಅಂದರೆ ನೆಲ ಮಟ್ಟದಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸುವ ಬದಲು ನಿಮ್ಮ ಮನೆಗೆ ಮತ್ತೊಂದು ಮಹಡಿಯನ್ನು ಕಟ್ಟುವುದು ಕಡಿಮೆ ಖರ್ಚಿನದ್ದಾಗಿದೆ. ನಿಮ್ಮ ಪ್ಲಾಟ್ ಅನ್ನು ಸರಿಯಾಗಿ ಬಳಸಿಕೊಳ್ಳಿರಿ. ಮನೆಯನ್ನು ಅಡ್ಡಲಾಗಿ ಕಟ್ಟುವ ಬದಲು ಲಂಬವಾಗಿ ಕಟ್ಟುವುದರಿಂದ ಹಣದ ಉಳಿತಾಯವಾಗುತ್ತದೆ. ಉದಾಹರಣೆಗೆ, ನಾಲ್ಕು ಬೆಡ್ರೂಮ್ಗಳೊಂದಿಗೆ ಒಂದೇ ಅಂತಸ್ತಿನ ಮನೆಯ ಬದಲಿಗೆ ಪ್ರತಿ ಮಹಡಿಗೆ ಎರಡು ಬೆಡ್ರೂಮ್ಗಳೊಂದಿಗೆ ಎರಡು ಅಂತಸ್ತಿನ ಮನೆಯನ್ನು ಕಟ್ಟಿಕೊಳ್ಳಿರಿ.
2) ವಿವರವಾದ ಲೆಡ್ಜರ್ ಅನ್ನು ಇಟ್ಟುಕೊಳ್ಳುವುದು ನಿಮ್ಮ ವೆಚ್ಚಗಳನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ, ಹಾಗೆ ಮಾಡುವುದರಿಂದ ಮುಂದೆ ಆರ್ಕಿಟೆಕ್ಟ್, ಕಂಟ್ರಾಕ್ಟರ್ ಅಥವಾ ಇಂಜಿನಿಯರ್ ಜೊತೆ ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
3) ಮನೆಯನ್ನು ವಿನ್ಯಾಸಗೊಳಿಸುವಾಗ ನಿಮ್ಮ ಕುಟುಂಬದ ಭವಿಷ್ಯದ ಅಗತ್ಯಗಳನ್ನು ಪರಿಗಣಿಸಿ ಉದಾ. ನಿಮ್ಮ ಅಂಬೆಗಾಲಿಡುವ ಮಗುವಿಗೆ ಅದು ಬೆಳೆದಾಗ ಹೆಚ್ಚುವರಿ ಕೊಠಡಿ ಅಗತ್ಯವಾಗುತ್ತದೆ. ನಿಮ್ಮ ಮನೆಯನ್ನು ಕಟ್ಟಿ ಮುಗಿಸಿದ ಬಳಿಕ, ಮತ್ತೆ ಯಾವುದೇ ಬದಲಾವಣೆ ಮಾಡುವುದು ದುಬಾರಿಯಾಗುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.
ಅಂತಿಮವಾಗಿ, ಕಡಿಮೆ ವೆಚ್ಚದ ಮನೆ ಕಟ್ಟುವುದನ್ನು ಪ್ರಾರಂಭಿಸುವ ಮೊದಲು ಎಲ್ಲ ಹಣವನ್ನು ಒಟ್ಟಿಗೆ ಇಟ್ಟುಕೊಳ್ಳಬೇಕಾಗಿಲ್ಲ. ಪ್ರತಿ ಹಂತಕ್ಕೆ ಅನುಗುಣವಾಗಿ ಹಣವನ್ನು ಹೊಂದಿಸಿಕೊಳ್ಳಿರಿ, ಹಾಗೆ ಮಾಡುವುದರಿಂದ ನಿಮ್ಮ ಮನೆ ಪೂರ್ಣವಾಗುವ ಮೊದಲು ಹಣ ಖಾಲಿಯಾಗುವುದಿಲ್ಲ.