Get In Touch

Get Answer To Your Queries

Select a valid category

Enter a valid sub category

acceptence


ಟೈಲ್ಸ್ 101: ವಿವಿಧ ರೀತಿಯ ಟೈಲ್ಸ್‌ಗಳಿಗೆ ಆರಂಭಿಕರ ಮಾರ್ಗದರ್ಶಿ

ನಿಮ್ಮ ಕನಸಿನ ಮನೆಯನ್ನು ಕಟ್ಟುವ ಪ್ರಯಾಣವನ್ನು ಆರಂಭಿಸುವಾಗ, ಟೈಲ್ಸ್ ಕುರಿತು ಮಾತನಾಡುವುದು ಪ್ರಮುಖ ವಿಷಯವಾಗಿದೆ. ಲಭ್ಯವಿರುವ ವಿವಿಧ ಟೈಲ್ಸ್​​ಗಳ ಕುರಿತು ನಿಮ್ಮ ಮಾರ್ಗದರ್ಶಿ ಇಲ್ಲಿದೆ. ಇದನ್ನು ಓದುವ ಮೂಲಕ ನೀವು ತಿಳುವಳಿಕೆಯುಳ್ಳ ನಿರ್ಧಾರವನ್ನು ತೆಗೆದುಕೊಳ್ಳಬಹುದು.

Share:


ಟೈಲ್ಸ್​​ಗಳು ಅವುಗಳ ಬಾಳಿಕೆ, ವೈವಿಧ್ಯತೆ ಮತ್ತು ಸೌಂದರ್ಯದ ಆಕರ್ಷಣೆಯಿಂದಾಗಿ ನೆಲ, ಗೋಡೆಗಳು ಮತ್ತು ಸೀಲಿಂಗ್‌ಗಳಿಗೆ ಜನಪ್ರಿಯ ಆಯ್ಕೆಯಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ರೀತಿಯ ಟೈಲ್ಸ್​​ಗಳಲ್ಲಿ, ನಿಮ್ಮ ನಿರ್ದಿಷ್ಟ ಅಗತ್ಯಗಳಿಗಾಗಿ ಸರಿಯಾದ ಟೈಲ್ಸ್​​ ಆಯ್ಕೆ ಮಾಡಲು ಇದು ಸಹಾಯಮಾಡುತ್ತದೆ. ಲಭ್ಯವಿರುವ ವಿವಿಧ ರೀತಿಯ ಟೈಲ್ಸ್​​​ಗಳು, ಅವುಗಳ ಹೆಸರುಗಳು, ಗುಣಲಕ್ಷಣಗಳು ಮತ್ತು ನಿಮ್ಮ ಮನೆಎಯ ಯಾವ ಭಾಗದಲ್ಲಿ ಯಾವ ಟೈಲ್ಸ್​ ಬಳಸಬಹುದು ಎಂಬುದರ ಕುರಿತು ಈ ಬ್ಲಾಗ್‌ನಲ್ಲಿ ನಾವು ವಿವರಿಸುತ್ತೇವೆ.

 

ನಾವು ಟೈಲ್ಸ್​ ಕುರಿತು ಆಯ್ಕೆ ನಿರ್ಧಾರ ಮಾಡುವ ಮೊದಲು, ಟೈಲ್ಸ್​​ಗಳ ಮೂಲ ಪ್ರಕಾರಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ: ಸೆರಾಮಿಕ್ ಟೈಲ್ಸ್​​ಗಳು, ಪಿಂಗಾಣಿ ಟೈಲ್ಸ್​​ಗಳು, ಗಾಜಿನ ಟೈಲ್ಸ್​​ಗಳು ಮತ್ತು ನೈಸರ್ಗಿಕವಾಗಿ ಸಿಗುವ ಕಲ್ಲಿನ ಟೈಲ್ಸ್​​ಗಳು ಅವುಗಳಲ್ಲಿ ಪ್ರಮುಖ ವಿಧಗಳು. ಇವುಗಳಲ್ಲಿ ಪ್ರತಿಯೊಂದರ ಸಂಯೋಜನೆ, ಕಾಣುವ ಬಗೆ ಮತ್ತು ಕ್ರಿಯಾತ್ಮಕತೆಯ ವಿಷಯದಲ್ಲಿ ವಿಶಿಷ್ಟವಾಗಿರುತ್ತವೆs.



ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಬಗೆಯ ಟೈಲ್ಸ್‌ಗಳು  ಯಾವುವು?

ಇಂಟೀರಿಯರ್ ಡಿಸೈನ್ ಮಾಡಲು ಟೈಲ್ಸ್​​ಗಳು ಅತ್ಯಗತ್ಯ ಸಾಮಗ್ರಿಗಳಾಗಿವೆ. ಅವು ಕಾರ್ಯಾತ್ಮಕವಾಗಿ ಹಾಗೂ ಅಲಂಕಾರ ಎರಡನ್ನೂ ಒದಗಿಸುತ್ತವೆ. ಪ್ರತಿಯೊಂದೂ ಪ್ರತ್ಯೇಕ ಗುಣಲಕ್ಷಣಗಳೊಂದಿಗೆ ಅವು ವಿವಿಧ ವಸ್ತುಗಳಲ್ಲಿ ಬರುತ್ತವೆ. ಉದಾಹರಣೆಗೆ, ಸೆರಾಮಿಕ್ ಟೈಲ್ಸ್​​ಗಳನ್ನು ಅವುಗಳ ಬಾಳಿಕೆ ಮತ್ತು ಹೊಂದಿಕೊಳ್ಳುವ ಗುಣದಿಂದಾಗಿ ಹೆಸರುವಾಸಿಯಾಗಿದ್ದು, ಈ ಟೈಲ್ಸ್​ಗಳು ವ್ಯಾಪವಾಗಿ ಹಾಕಲು ಸೂಕ್ತವಾಗಿವೆ. ಮತ್ತೊಂದೆಡೆ, ಪಿಂಗಾಣಿ ಟೈಲ್ಸ್​ಗಳು ನಿಬಿಡವಾಗಿ ಮತ್ತು ಹೊಂದಿಕೊಳ್ಳುವ ಗುಣದಿಂದ ವೈವಿಧ್ಯಮಯವಾಗಿದ್ದು, ಹೆಚ್ಚಿನ ಜನದಟ್ಟಣೆಯ ಇರುವ ಕಡೆ ಹಾಕಲು ಸೂಕ್ತವಾಗಿವೆ. ಗಾಜಿನ ಟೈಲ್ಸ್​​ಗಳು ಚೈತನ್ಯವನ್ನು ಪರಿಚಯಿಸುತ್ತವೆ ಮತ್ತು ಅಲಂಕಾರಿಕವಾಗಿ ಹೆಚ್ಚಾಗಿ ಬಳಸಲ್ಪಡುತ್ತವೆ, ಆದರೆ ಅಮೃತಶಿಲೆ ಮತ್ತು ಗ್ರಾನೈಟ್ನಂತಹ ನೈಸರ್ಗಿಕ ಕಲ್ಲಿನ ಟೈಲ್ಸ್​​ಗಳು ಶಾಶ್ವತವಾದ ಸೊಬಗುಗಳನ್ನು ತರುತ್ತವೆ. ಆದರೆ ಇವುಗಳಿಗೆ ನಿರಂತರವಾಗಿ ಗಮನಕೊಡುವ ಅಗತ್ಯವಿರುತ್ತದೆ. ಕಟ್ಟಿಗೆಯ ಟೈಲ್ಸ್​​ಗಳು, ಗಟ್ಟಿಮರದ ಮತ್ತು ಫಾಕ್ಸ್ ಮರದ ರೂಪಾಂತರಗಳಲ್ಲಿ ಸಿಗುತ್ತವೆ. ಟೈಲ್ಸ್​​​ನ ಬಾಳಿಕೆಯೊಂದಿಗೆ ಕಟ್ಟಿಗೆಯ ಬೆಚ್ಚಗಿನ ನೋಟವನ್ನು ಕೊಡುತ್ತವೆ. ನಿಮ್ಮ ಪ್ರದೇಶಗಳಿಗೆ ಬೇಕಾಗುವ ಟೈಲ್ಸ್​ಗಳ ಕುರಿತು ನಿರ್ಧಾರ ಮಾಡುವಾಗ ಈ ರೀತಿಯ ಟೈಲ್ಸ್ ಮತ್ತು ಅವುಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಪ್ರತಿಯೊಂದು ಪ್ರಕಾರವನ್ನು ಅರ್ಥಮಾಡಿಕೊಳ್ಳಲು ಸಮಗ್ರವಾಗಿ ಪರಿಶೀಲಿಸೋಣ.

 

 

1. ಸೆರಾಮಿಕ್ ಟೈಲ್ಸ್



ಸೆರಾಮಿಕ್ ಟೈಲ್ಸ್​​ಗಳು ಅವುಗಳ ಬಾಳಿಕೆ, ವೈವಿಧ್ಯತೆ ಮತ್ತು ಕೈಗೆಟುಕುವ ಬೆಲೆಯ ಕಾರಣಗಳಿಂದಾಗಿ ವಸತಿ ಮತ್ತು ವಾಣಿಜ್ಯ ಎರಡೂ ಕಡೆಗಳಳಲ್ಲಿ ಜನಪ್ರಿಯ ಆಯ್ಕೆಯಾಗಿವೆ. ಪಿಂಗಾಣಿ ಮತ್ತು ಮೊಸಾಯಿಕ್ ಸೇರಿದಂತೆ ವಿವಿಧ ರೀತಿಯಲ್ಲಿ ಈ ಟೈಲ್ಸ್​ಗಳು ಲಭ್ಯವಿವೆ.

 

ಎ) ಪಿಂಗಾಣಿ ಟೈಲ್ಸ್​

ಪಿಂಗಾಣಿ ಟೈಲ್ಸ್​​ ಅವುಗಳ ಗಟ್ಟಿತನ ಮತ್ತು ತೇವಾಂಶ, ಕಲೆ ಮತ್ತು ಗೀರು ನಿರೋಧಕ ಗುಣಗಳಿಂದಾಗಿ ಎದ್ದು ಕಾಣುತ್ತವೆ. ಜನ ದಟ್ಟಣೆಯ ಮತ್ತು ಹೊರಾಂಗಣ ಪ್ರದೇಶಗಳಲ್ಲಿ ಹಾಕಲು ಅವು ಪರಿಪೂರ್ಣವಾಗಿವೆ. ವ್ಯಾಪಕ ಶ್ರೇಣಿಯ ಬಣ್ಣಗಳು ಮತ್ತು ಫಿನಿಶಿಂಗ್​ ನಿಂದಾಗಿ, ಅವುಗಳನ್ನು ಸೀಲಿಂಗ್ ಮಾಡುವುದು ಅಥವಾ ಸ್ವಚ್ಛಗೊಳಿಸಲು ಯಾವುದೇ ವಸ್ತುವಿನ ಅಗತ್ಯಲ್ಲ ಜೊತೆಗೆ ಸುಲಭ ನಿರ್ವಹಣೆಯನ್ನು ನೀಡುತ್ತವೆ.

 

ಬಿ) ಮೊಸಾಯಿಕ್ ಟೈಲ್ಸ್

ಮೊಸಾಯಿಕ್ ಟೈಲ್ಸ್, ಸಾಮಾನ್ಯವಾಗಿ 2 ಇಂಚುಗಳಷ್ಟು ಸೈಜ್​ನಲ್ಲಿ ಲಭ್ಯವಿರುವ ವೈವಿಧ್ಯಮಯ ಅಲಂಕಾರಿಕ ಟೈಲ್ಸ್​ಗಳು. ಈ ಟೈಲ್ಸ್​ ಅನ್ನು​ ಸಾಮಾನ್ಯವಾಗಿ ಸೆರಾಮಿಕ್, ಗಾಜು, ಅಥವಾ ನೈಸರ್ಗಿಕ ಕಲ್ಲುಗಳಿಂದ ತಯಾರಿಸಲಾಗಿರುತ್ತದೆ. ಹಾಗೂ ಮೆಶ್​​ ಬಳಸಿ ಜೋಡಿಸಲಾಗುತ್ತದೆ. ಅವುಗಳ ಸಂಕೀರ್ಣ ವಿನ್ಯಾಸಗಳು ಮಾದರಿಗಳನ್ನು ರಚಿಸುವಲ್ಲಿ ಉತ್ಕೃಷ್ಟವಾಗಿವೆ. ಈ ಟೈಲ್ಸ್​ ಅನ್ನು ಸಾಮಾನ್ಯವಾಗಿ ಸೃಜನಾತ್ಮಕ ಆಸಕ್ತಿಯೊಂದಿಗೆ ಬಾತ್​ರೂಮ್​ಗಳು, ಅಡಿಗೆಮನೆಯಲ್ಲಿ ಬಳಸಲಾಗುತ್ತದೆ.

 

 

2) ಕಟ್ಟಿಗೆಯ ಟೈಲ್ಸ್​​



ಕಟ್ಟಿಗೆಯ ಟೈಲ್ಸ್​​ ಬಾಳಿಕೆ ಮತ್ತು ಅಂಚುಗಳ ಸುಲಭ ನಿರ್ವಹಣೆಯೊಂದಿಗೆ ಮರದ ನೈಸರ್ಗಿಕ ಸೌಂದರ್ಯದ ವಿಶಿಷ್ಟ ಸಂಯೋಜನೆಯನ್ನು ಒದಗಿಸುತ್ತದೆ. ಇದರ ಅಡಿಯಲ್ಲಿ ಎರಡು ರೀತಿಯ ಅಂಚುಗಳಿವೆ:

 

ಎ) ಗಟ್ಟಿಕಟ್ಟಿಗೆಯ ಟೈಲ್ಸ್​​

ಓಕ್, ಮೇಪಲ್ ಮತ್ತು ವಾಲ್‌ನಟ್‌ನಂತಹ ನಿಜವಾದ ಮರಗಳ ಕಟ್ಟಿಗೆಯಿಂದ ತಯಾರಿಸಲಾದ ಕಟ್ಟಿಗೆಯಿಂದ ತಯಾರಿಸಲಾದ ಟೈಲ್ಸ್​ ನೋಡಲು​ ಉತ್ಕೃಷ್ಟ ಗಟ್ಟಿಕಟ್ಟಿಗೆಯ ನೆಲದಂತೆಯೆ ಕಾಣುತ್ತದೆ. ಜೊತೆಗೆ ಈ ರೀತಿಯ ಟೈಲ್ಸ್​​ ಹಲವು ಬಣ್ಣ ಮತ್ತು ವಿನ್ಯಾಸಗಳ ಆಯ್ಕೆಯ ಅವಕಾಶ ಒದಗಿಸುತ್ತದೆ. ಹೆಚ್ಚಿನ ರೂಮ್​ಗಳಿಗೆ, ವಿಶೇಷವಾಗಿ ವಾಸಿಸುವ ಪ್ರದೇಶಗಳು, ಬೆಡ್​ರೂಮ್​ಗಳು ಮತ್ತು ಹಾಲ್​ಗಳಿಗೆ ಸೂಕ್ತವಾಗಿದೆ.

 

ಬಿ) ಫೋಕ್ಸ್​ ಕಟ್ಟಿಗೆಯ ಟೈಲ್ಸ್

ಈ ಟೈಲ್ಸ್​​ಗಳನ್ನು ಕಟ್ಟಿಗೆಯಂತೆ ಕಾಣುವ ಟೈಲ್ಸ್ ಎಂದು ಕರೆಯಲಾಗುತ್ತದೆ. ಫೋಕ್ಸ್​ ವುಡ್​ ಟೈಲ್ಸ್​ಗಳನ್ನು ಸೆರಾಮಿಕ್ ಅಥವಾ ಪಿಂಗಾಣಿಯಿಂದ ಮಾಡಲಾಗಿರುತ್ತದೆ. ಈ ಟೈಲ್ಸ್​​​​ಗಳು ನೋಡಲು ಕಟ್ಟಿಗೆಯ ಟೈಲ್ಸ್​ನಂತೆಯೆ ಕಾಣುತ್ತವೆಯಾದರೂ ಹೆಚ್ಚು ಕಡಿಮೆ ವೆಚ್ಚದಲ್ಲಿ ನಿಜವಾದ ಕಟ್ಟಿಗೆಯ ಎಂಬಂತೆ ಕಾಣುತ್ತವೆ. ಬಣ್ಣ ಹಾಗೂ ಫಿನಿಶಿಂಗ್​ನಲ್ಲಿ  ಆಕರ್ಷಕ ಸ್ಟೈಲ್​ ಕೊಡುತ್ತವೆ. ಈ ಟೈಲ್ಸ್​​ಗಳು ತೇವಾಂಶ, ಗೀಚುಗಳು ಮತ್ತು ಕಲೆಗಳು ಬೀಳದಂತೆ ತಡೆಯುತ್ತವೆ. ಬಾತ್​ರೂಮ್​ ಮತ್ತು ಅಡಿಗೆಮನೆಗಳಂತಹ ಹಸಿಯಾಗುವ ಸ್ಥಳಗಳಿಗೆ ಸೂಕ್ತವಾಗಿವೆ. ಈ ಟೈಲ್ಸ್​ ಹಾಕಿಸಿದರೆ ನಿರ್ವಹಣೆ ಮಾಡುವುದು ಸುಲಭ ಮತ್ತು ಕಟ್ಟಿಗೆಯ ಟೈಲ್ಸ್​​ನಂತೆಯೆ ಕಾಣುವುದು ವಿಶೇಷವಾಗಿದೆ. 

 

 

3) ಗ್ಲಾಸ್ ಟೈಲ್ಸ್



ಹೊಳಪು ಕೊಡುವ ಫಿನಿಶಿಂಗ್, ಬೆಳಕನ್ನು ಪ್ರತಿಫಲಿಸುವದರಿಂದ ಈ ಟೈಲ್ಸ್​ ಹಾಕುವ ಪ್ರದೇಶವನ್ನು ಅವು ಬೆಳಗಿಸುತ್ತವೆ. ಈ ಟೈಲ್ಸ್​​ಗಳು ಬಹಳಷ್ಟು ಡಿಸೈನ್​ಗಳಲ್ಲಿ ಲಭ್ಯವಿರುವುದಂದ ಆಯ್ಕೆ ಮಾಡುವುದು ಸುಲಭ. ಈ ಟೈಲ್ಸ್​​ ಬಾಳಿಕೆ ಬರುತ್ತವೆ, ಕಲೆ ಬೀಳುವುದನ್ನು ತಡೆಯುತ್ತವೆ ಮತ್ತು ಸ್ವಚ್ಛಗೊಳಿಸುವುದು ಕೂಡ ಸುಲಭ. ಹೀಗಾಗಿ ಅಡಿಗೆಮನೆ, ಬಾತ್​ರೂಮ್​​ ಮತ್ತು ಬ್ಯಾಕ್‌ಸ್ಪ್ಲಾಶ್‌ಗಳಲ್ಲಿ ಬಳಸಲು ಜನಪ್ರೀಯವಾಗಿವೆ. ಆದರೆ ಈ ಟೈಲ್ಸ್​​ ಹಾಕಿಸಲು ಹೆಚ್ಚಿನ ಹಣ ಖರ್ಚಾಗಬಹುದು, ಜೊತೆಗೆ ಟೈಲ್ಸ್​ ಹಾಕುವ ಕೆಲಸ ಮಾಡುವವರಿಂದಲೇ ಇವನ್ನು ಹಾಕಿಸಬೇಕಾಗುತ್ತದೆ ಎಂಬುದು ಗಮನಿಸಬೇಕಾದ ಅಂಶವಾಗಿದೆ. 

 

 

4) ಸಿಮೆಂಟ್ ಟೈಲ್ಸ್



ಸಿಮೆಂಟ್ ಟೈಲ್ಸ್​ಗಳನ್ನು ಎನ್ಕಾಸ್ಟಿಕ್ ಟೈಲ್ಸ್ ಎಂದೂ ಕರೆಯುತ್ತಾರೆ. ಈ ಟೈಲ್ಸ್​​ಗಳನ್ನು ಬಣ್ಣದ ಸಿಮೆಂಟ್‌ ಬಳಸಿ ಅತ್ಯಂತ ಕರಕುಶಲತೆಯಿಂದ ತಯಾರಿಸಲಾಗುತ್ತದೆ. ಜೊತೆಗೆ ವಿಶಿಷ್ಟವಾದ ಅಲಂಕಾರಿಕ ಪ್ಯಾಟರ್ನ್​ಗಳು, ಮತ್ತು ಹೊಳೆಯುವ ಬಣ್ಣಗಳಲ್ಲಿ ಈ ಟೈಲ್ಸ್​ ಸಿಗುತ್ತವೆ. ಈ ಟೈಲ್ಸ್​​ ಹೆಚ್ಚು ಬಾಳಿಕೆ ಬರುತ್ತವೆ ಮತ್ತು ಹೆಚ್ಚಿನ ಜನದಟ್ಟನೆ ಸ್ಥಳಗಳಲ್ಲಿ ಹಾಕಲು ಯೋಗ್ಯವಾಗಿವೆ. ಇವು ಜಾರುವುದನ್ನು ತಡೆಯುತ್ತವೆ, ಆದರೆ ಇವು ಚೆನ್ನಾಗಿ ಕಾಣುವಂತೆ ಮಾಡಲು ಸೀಲಿಂಗ್ ಮಾಡುವುದು ಮತ್ತು ಆಗಾಗ್ಗೆ ಸ್ವಚ್ಛಗೊಳಿಸುವ ಅಗತ್ಯವಿದೆ. ಈ ಟೈಲ್ಸ್​​ ಹಾಕಿಸಲು ಹೆಚ್ಚಿನ ಹಣ ಖರ್ಚಾಗುತ್ತದೆಯಾದರೂ, ಶಾಶ್ವತವಾಗಿ ಸುಂದರವಾಗಿ ಕಾಣುತ್ತವೆ ಮತ್ತು ರೂಮ್​ಗೆ ಮೆರಗನ್ನು ಕೊಡುತ್ತವೆ.

 

 

5) ವಿಟ್ರಿಫೈಡ್ ಟೈಲ್ಸ್



ವಿಟ್ರಿಫೈಡ್ ಟೈಲ್ಸ್ ಬಾಳಿಕೆ ಬರುವುದರಿಂದ ಮತ್ತು ಹಲವು ವಿಷಯಗಳಲ್ಲಿ ಚೆನ್ನಾಗಿರುವದರಿಂದ ವಿವಿಧ ಸ್ಥಳಗಳ ಫ್ಲೋರಿಂಗ್​ಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಟೈಲ್ಸ್​ಗಳ ಸಾಮರ್ಥ್ಯ, ಕಡಿಮೆ ಪೊರೊಸಿಟಿಯು, ಸುಲಭ ನಿರ್ವಹಣೆಯು ವಸತಿ ಹಾಗೂ ವಾಣಿಜ್ಯ ಯೋಜನೆಗಳಿಗೆ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಅವು ವಿವಿಧ ಪ್ರಕಾರಗಳಲ್ಲಿ ದೊರೆಯುತ್ತವೆ. ಅವುಗಳೆಂದರೆ:

 

ಎ) ಹೊಳೆಯುವಂತೆ ಪಾಲಿಶ್​ ಮಾಡಿದ ವಿಟ್ರಿಫೈಡ್ ಟೈಲ್ಸ್

ಹೊಳೆಯುವಂತೆ ಪಾಲಿಶ್ ಮಾಡಲಾಗಿರುವ ವಿಟ್ರಿಫೈಡ್ ಟೈಲ್ಸ್, ಅಥವಾ ಪಿಜಿವಿಟಿ, ಅಂದರೆ  ವಿಟ್ರಿಫೈಡ್ ಟೈಲ್ಸ್‌ಗಳ ಮೇಲೆ ಹೊಳೆಯುವ  ಪದಾರ್ಥವನ್ನು ಹಚ್ಚಿ ಪಾಲಿಶ್​  ಮಾಡುವ ಮೂಲಕ ತಯಾರಿಸಲಾಗಿರುವ ಹೊಳಪಿನ ಫಿನಿಶಿಂಗ್​ ಹೊಂದಿರುವ ಸೆರಾಮಿಕ್ ಟೈಲ್ಸ್​. ಈ ಟೈಲ್ಸ್​​​ಗಳು ಆಧುನಿಕ ಇಂಟಿರೀಯರ್​ಗಳಿಗೆ ಹೊಳಪು ಬರುವ ಮತ್ತು ಬಾಳಿಕೆ ಬರುವ ಆಯ್ಕೆ ಕೊಡುತ್ತವೆ. ಜೊತೆಗೆ ಇವು ವಿವಿಧ ಡಿಸೈನ್​ಗಳು ಮತ್ತು ಬಣ್ಣಗಳಲ್ಲಿ ದೊರೆಯುತ್ತವೆ. ವಸತಿ ಮತ್ತು ವಾಣಿಜ್ಯ ಸ್ಥಳಗಳಿಗೆ ಬಳಸಲು ಈ ಟೈಲ್ಸ್​ಗಳು ಸೂಕ್ತವಾಗಿವೆ.

 

ಬಿ) ಗ್ಲೇಜ್ಡ್​​​ ವಿಟ್ರಿಫೈಡ್ ಟೈಲ್ಸ್

GVT ಟೈಲ್ಸ್ ಎಂದು ಕರೆಯಲ್ಪಡುವ ಗ್ಲೇಜ್ಡ್​​ ಅಂದರೆ ಹೊಳೆಯುವಂತೆಪಾಲಿಶ್​ ಮಾಡಲಾಗಿರುವ ವಿಟ್ರಿಫೈಡ್ ಟೈಲ್ಸ್. ಇವು ವೈವಿಧ್ಯಮಯ ವಿನ್ಯಾಸ ಮತ್ತು ನಮೂನೆಗಳೊಂದಿಗೆ ಹೊಳೆಯುವ ಪದರನ್ನು ಹೊಂದಿರುತ್ತವೆ. ಈ ಟೈಲ್ಸ್​​ ಪಿಜಿವಿಟಿ ಗಿಂತ ಕಡಿಮೆ ಹೊಳಪಿನ ಫಿನಿಶಿಂಗ್​ ಹೊಂದಿದ್ದರೂ, ಅವು ಬಹುಮಖ  ಸೌಂದರ್ಯ ಕೊಡುತ್ತವೆ. ಈ ಬಾಳಿಕೆ ಬರುವ ಮತ್ತು ವಾಟರ್​-ರೆಸಿಸ್ಟಂಟ್​ ಟೈಲ್ಸ್​​ಗಳನ್ನು ಸಾಮಾನ್ಯವಾಗಿ ಅಡಿಗೆಮನೆ, ಬಾತ್​ರೂಮ್​ ಮತ್ತು ಲಿವಿಂಗ್​ ರೂಮ್​ನಂತಹ ಇಂಟಿರೀಯರ್ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಇವು ಪಿಂಗಾಣಿಗಳ ಕಂಡರೂ ನೈಸರ್ಗಿಕ ವಸ್ತುಗಳಂತೆ ಕಾಣುತ್ತವೆ.  

 

ನ್ಯಾಚುರಲ್ ಸ್ಟೋನ್ ಟೈಲ್ಸ್, ಕ್ವಾರಿ ಟೈಲ್ಸ್, ಟೆರಾಕೋಟಾ ಟೈಲ್ಸ್ ಮತ್ತು ಮೆಟಲ್ ಟೈಲ್ಸ್‌ಗಳಂತಹ ಅನೇಕ ರೀತಿಯ ಟೈಲ್ಸ್‌ಗಳು ಲಭ್ಯವಿವೆ. ಇವುಗಳಿಂದ ನಿಮ್ಮ ಮನೆಗೆ ಸೂಕ್ತವಾಗಿ ಹೊಂದಿಕೊಳ್ಳುವ   ಆಯ್ಕೆ ಮಾಡಬಹುದು.



ಈ ಬ್ಲಾಗ್​ನ ಲೇಖನದಲ್ಲಿ, ಇಂಟಿರೀಯರ್ ಮತ್ತು ಎಕ್ಸ್ಟಿರೀಯರ್ ವಿನ್ಯಾಸದಲ್ಲಿ ಸಾಮಾನ್ಯವಾಗಿ ಬಳಸುವ ವಿವಿಧ ರೀತಿಯ ಟೈಲ್‌ಗಳ ಕುರಿತು ನಾವು ತಿಳಿದುಕೊಂಡಿದ್ದೆವೆ. ಇವಲ್ಲದೆ, ಮಾರ್ಬಲ್, ಗ್ರಾನೈಟ್, ಟೆರಾಕೋಟಾ ಮತ್ತು ಟ್ರಾವರ್ಟೈನ್‌ನಂತಹ ಇತರ ರೀತಿಯ ಟೈಲ್ಸ್​​​ಗಳಿವೆ. ಪ್ರತಿಯೊಂದೂ ವಿಶಿಷ್ಟವಾದ ಸೌಂದರ್ಯವನ್ನು ನೀಡುತ್ತದೆ. ಪ್ರತಿಯೊಂದು ವಿಧವು ವಿಭಿನ್ನ ಸಂದರ್ಭಗಳಲ್ಲಿ ಮತ್ತು ಮನೆ ವಿನ್ಯಾಸಗಳಲ್ಲಿ ಮೌಲ್ಯವನ್ನು ಹೊಂದಿದೆ. ಈ ಆಯ್ಕೆಗಳನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಆದ್ಯತೆಗಳಿಗೆ ಸೂಕ್ತವಾದ ಸುಂದರ ಮತ್ತು ಕ್ರಿಯಾತ್ಮಕ ಸ್ಥಳಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ.



ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....