Get In Touch

Get Answer To Your Queries

Select a valid category

Enter a valid sub category

acceptence

ಎಲಿವೇಶನ್ ಪ್ಲ್ಯಾನ್ ಎಂದರೇನು? ಅದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಲು ಸಮಗ್ರ ಮಾರ್ಗದರ್ಶಿ

ನಿರ್ಮಾಣದ ಕ್ಷೇತ್ರದಲ್ಲಿ, ಅಂದುಕೊಂಡಿದ್ದನ್ನು ಜಾರಿಗೆ ತರಲು ಮೊದಲೇ ಎಲ್ಲ ಸಿದ್ಧತೆ ಮಾಡಿಕೊಳ್ಳುವುದು ಅಂದರೆ, ಅಳತೆ ಮಾಡಿಕೊಳ್ಳುವುದು ಮತ್ತು ಕಾರ್ಯಗತಗೊಳಿಸುವುದನ್ನು ಒಳಗೊಂಡಿರುತ್ತದೆ. ಯಾವುದೇ ನಿರ್ಮಾಣ ಯೋಜನೆಗೆ ಆಧಾರಸ್ತಂಭದಂತೆ ಪ್ರಾಥಮಿಕ ಅಂಶವೆಂದರೆ "ಎಲಿವೇಶನ್ ಪ್ಲ್ಯಾನ್." ಎಲಿವೇಶನ್ ಪ್ಲ್ಯಾನ್ನ ನಿರ್ಮಾಣ ವಿನ್ಯಾಸವು ಆರ್ಕಿಟೆಕ್ಟರ್, ಬಿಲ್ಡರ್‌ ಮತ್ತು ಎಂಜಿನಿಯರ್‌ಗಳಿಗೆ ಬ್ಲ್ಯೂಪ್ರಿಂಟ್ನಂತೆ ಕಾರ್ಯನಿರ್ವಹಿಸುವ ನಿರ್ಣಾಯಕ ದಾಖಲೆಯಾಗಿದೆ.

Share:


ಕಟ್ಟಡವು ಪೂರ್ಣಗೊಂಡ ಬಳಿಕ ಹೇಗೆ ಕಾಣುತ್ತದೆ ಎಂಬ ಮುನ್ನೋಟವನ್ನು ಎಲಿವೇಶನ್ ಪ್ಲ್ಯಾನ್ ನಮಗೆ ಕೊಡುತ್ತದೆ. ಇದು ಕಟ್ಟಡದ ಎಕ್ಸ್ಟಿರೀಯರ್ ಭಾಗದ ನಿರೂಪಣೆಯಾಗಿದ್ದು, ನಿರ್ಮಾಣದ ಮತ್ತು ಆರ್ಕಿಟೆಕ್ಚರ್ ವಿವರಗಳನ್ನು ಒದಗಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಪ್ಲ್ಯಾನ್ ಕಟ್ಟಡದ ಇಂಟಿರೀಯರ್ ಅನ್ನೂ ಸಹ ವಿವರಿಸಬಹುದು. ಫ್ಲೋರ್ ಪ್ಲ್ಯಾನ್ ಅಥವಾ ರಿಫ್ಲೆಟ್ಟಿಂಗ್ ಸೀಲಿಂಗ್ ಪ್ಲ್ಯಾನ್ ಕಟ್ಟಡದ ವಿನ್ಯಾಸವನ್ನು ತೋರಿಸುವಂತೆಯೆ, ಎಲಿವೇಶನ್ ಪ್ಲ್ಯಾನ್ ಕಟ್ಟಡದ ಎತ್ತರ ಮತ್ತು ಅಪಿಯರನ್ಸ್ ಅನ್ನು ತೋರಿಸುತ್ತದೆ. 

 

ಎಲಿವೇಶನ್ ಪ್ಲ್ಯಾನ್ ಆರ್ಕಿಟೆಕ್ಚರ್, ಬಿಲ್ಡರ್‌ ಮತ್ತು ಮನೆ ಮಾಲೀಕರು ಒಮ್ಮೆ ಕಟ್ಟಡವು ಪೂರ್ಣಗೊಂಡ ನಂತರ ಹೇಗೆ ಕಾಣುತ್ತದೆ ಎಂಬ ಕಲ್ಪನೆಯನ್ನು ಮಾಡಿಕೊಂಡು ಅರ್ಥಮಾಡಿಕೊಳ್ಳಲು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಕಟ್ಟಡದ ಬಾಹ್ಯ ಲಕ್ಷಣಗಳನ್ನು ಮತ್ತು ಅಳತೆಗಳನ್ನು ತೋರಿಸುವ ಮೂಲಕ, ಸುಲಭ ನಿರ್ಮಾಣ, ನಿರ್ವಹಣೆ ಮತ್ತು ಮಾರ್ಪಾಡುಗಳಲ್ಲಿ ಈ ಪ್ಲ್ಯಾನ್ ಸಹಾಯ ಮಾಡುತ್ತದೆ. ಕಟ್ಟಲು ಪ್ರಾರಂಭಿಸುವ ಮೊದಲು ಪ್ರೊಜೆಕ್ಟ್ನಲ್ಲಿ ತೊಡಗಿರುವ ಪ್ರತಿಯೊಬ್ಬರೂ ಡಿಸೈನ್ ಸುಂದರವಾಗಿದೆ ಎಂಬುದನ್ನು ಒಪ್ಪಿಕೊಳ್ಳುವ ಮೂಲಕ, ಸಮಯ, ಸಂಪನ್ಮೂಲಗಳು ಮತ್ತು ಹಣವನ್ನು ಎಲಿವೇಶನ್ ಪ್ಲ್ಯಾನ್ ಉಳಿಸುತ್ತದೆ.

 

ಈ ಬ್ಲಾಗ್‌ನಲ್ಲಿ, ಎಲಿವೇಶನ್ ಪ್ಲಾನ್ ಎಂದರೇನು, ಅದರ ಪ್ರಾಮುಖ್ಯತೆ ಮತ್ತು ನಿರ್ಮಾಣ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಲ್ಲಿ ಅದು ಹೇಗೆ ಅಮೂಲ್ಯವಾದ ಆಸ್ತಿ ಎಂಬುದನ್ನು ಸಾಬೀತುಪಡಿಸುತ್ತದೆ ಎಂಬುದನ್ನು ನಾವು ತಿಳಿದುಕೊಳ್ಳೋಣ.



ಎಲಿವೇಶನ್ ಡ್ರಾಯಿಂಗ್‌ನಲ್ಲಿ ಏನನ್ನು ಸೇರಿಸಲಾಗಿರುತ್ತದೆ?



ಎಲಿವೇಶನ್ ಡ್ರಾಯಿಂಗ್ ಪ್ಲ್ಯಾನ್​ ನಿರ್ಮಿಸಲು, ಮೇನ್​ ಡೋರ್, ಕಿಟಕಿಗಳು, ರೂಫ್ ಏರಿಯಾ, ಅಳತೆಗಳು, ನಂಬಿಕೆ ಮತ್ತು ಅಳತೆಯಂತೆ ಮಾಡುವ ಅಂಶಗಳನ್ನು ಸೇರಿಸಲಾಗಿದೆ. ಈ ಪ್ಲ್ಯಾನ್ ಅನ್ನು ಸಾಮಾನ್ಯವಾಗಿ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಈ ನಾಲ್ಕು ದಿಕ್ಕುಗಳ ವೀಕ್ಷಣೆಗಳಿಗಾಗಿ ಮಾಡಲಾಗಿದೆ. ಸಾಮಾನ್ಯವಾಗಿ ಎಲಿವೇಶನ್​ ಪ್ಲ್ಯಾನ್​ ಒಳಗೊಂಡಿರುವ ಮುಖ್ಯ ಅಂಶಗಳು ಇಲ್ಲಿವೆ:

 

1. ಆರ್ಕಿಟೆಕ್ಚರ್​ ಡಿಟೇಲ್ಸ್​​

ಈ ಪ್ಲ್ಯಾನ್ ಕಟ್ಟಡದ ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನು ತೋರಿಸುತ್ತದೆ. ಉದಾಹರಣೆಗೆ ಮುಂಭಾಗದ ವಿನ್ಯಾಸ, ಎಕ್ಸ್ಟಿರೀಯರ್ ಫಿನಿಶಿಂಗ್, ಅಲಂಕಾರಿಕ ವಸ್ತುಗಳು ಮತ್ತು ಕಟ್ಟಡದ ಒಟ್ಟಾರೆ ಸೌಂದರ್ಯದ ಆಕರ್ಷಣೆಗೆ ಕೊಡುಗೆ ನೀಡುವ ಇತರ ಅಲಂಕಾರಿಕ ವೈಶಿಷ್ಟ್ಯಗಳನ್ನು ಕೊಡುತ್ತದೆ.

 

2. ಆಯಾಮ

ನಿಖರವಾದ ಅಳತೆ ಮತ್ತು ಆಯಾಮಗಳನ್ನು ಯೋಜನೆಯಲ್ಲಿ ಸೇರಿಸಲಾಗಿರುತ್ತದೆ. ಮುಂಭಾಗದಲ್ಲಿ ಪ್ರತಿ ಅಂಶದ ಸರಿಯಾದ ಸೈಜ್ ಮತ್ತು ಪ್ರಮಾಣವನ್ನು ನಿರ್ಧರಿಸಲು ಬಿಲ್ಡರ್​ಗಳಿಗೆ ಅವಕಾಶ ನೀಡುತ್ತದೆ. ನಿರ್ಮಾಣದ ಸಮಯದಲ್ಲಿ ಈ ಮಾಹಿತಿಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

 

3. ಅಳತೆ

ಅಳತೆ ಪಟ್ಟಿ ಬಳಸಿ ಚಿತ್ರಿಸುವ ಮೂಲಕ ಕಟ್ಟಡದಲ್ಲಿನ ಬೇರೆ ಬೇರೆ ಅಂಶಗಳ ಸೈಜ್ಗಳನ್ನು ಮತ್ತು ಅವುಗಳ ಮಧ್ಯದ ದೂರವನ್ನು ತಿಳಿದುಕೊಳ್ಳಲು ಸಹಾಯವಾಗುವಂತೆ ಆರ್ಕಿಟೆಕ್ಟರ್, ಬಿಲ್ಡರ್‌ ಮತ್ತು ಮನೆ ಮಾಲೀಕರಿಗೆ ಎಲಿವೇಶನ್ ಪ್ಲ್ಯಾನ್ ಅವಕಾಶ ಮಾಡಿಕೊಡುತ್ತದೆ. 

 

4. ಕಿಟಕಿಗಳು ಮತ್ತು ಬಾಗಿಲುಗಳು

ಎಲಿವೇಶನ್ ಪ್ಲ್ಯಾನ್ನಲ್ಲಿ ಕಿಟಕಿಗಳು ಮತ್ತು ಬಾಗಿಲುಗಳ ನಿಯೋಜನೆ, ಅವುಗಳ ಸೈಜ್ ಹಾಗೂ ವಿನ್ಯಾಸವನ್ನು ಚಿತ್ರಿಸಲಾಗಿರುತ್ತದೆ. ಈ ತೆರೆದ ಜಾಗೆಗಳು ಸಂಪೂರ್ಣ ಡಿಸೈನ್ಲ್ಲಿ ಹೇಗೆ ಕಾಣಿಸುತ್ತವೆ ಎಂಬುದನ್ನು ಎಲಿವೇಶನ್ ಪ್ಲ್ಯಾನ್ ಕೊಡುತ್ತದೆ.

 

5. ರೂಫ್ ಡಿಸೈನ್

ಎಲಿವೇಶನ್ ಪ್ಲ್ಯಾನ್ ರೂಫ್ ಡಿಸೈನ್ ಅನ್ನು ಸಹ ಒಳಗೊಂಡಿದೆ. ಅದರ ಸ್ಲೋಪ್, ಸ್ಟೈಲ್ ಮತ್ತು ಚಿಮಣಿಗಳು ಅಥವಾ ಸ್ಕೈಲೈಟ್‌ಗಳಂತಹ ಯಾವುದೇ ರೂಫ್ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತದೆ. ಇದು ಒಟ್ಟಾರೆ ಹೇಗೆ ಕಾಣುತ್ತದೆ ಎಂಬುದನ್ನು ತಿಳಿದುಕೊಳ್ಳಲು ಎಲಿವೇಶನ್ ಪ್ಲ್ಯಾನ್ ಸಹಾಯ ಮಾಡುತ್ತದೆ. ಜೊತೆಗೆ ಛಾವಣಿಯಲ್ಲಿ ಬಳಸುವ ವಸ್ತುಗಳನ್ನು ಸರಿಯಾಗಿ ಅಳವಡಿಸಲು ಸಹಾಯ ಮಾಡುತ್ತದೆ. 

 

6. ನೇರವಾದ ಎತ್ತರ

ಎಲಿವೇಶನ್ ಡ್ರಾಯಿಂಗ್ ಮಹಡಿಗಳ ಸಂಖ್ಯೆ, ಸೀಲಿಂಗ್ ಎತ್ತರ ಮತ್ತು ರೂಫ್ ಸೇರಿದಂತೆ ಕಟ್ಟಡದ ನೇರ ಆಯಾಮಗಳು ಮತ್ತು ಎತ್ತರಗಳನ್ನು ವಿವರಿಸುತ್ತದೆ.

 

7. ಸಾಮಗ್ರಿಗಳ ಮಾಹಿತಿ

ಎಲಿವೇಶನ್ ಪ್ಲ್ಯಾನ್ ಸಾಮಾನ್ಯವಾಗಿ ಇಟ್ಟಿಗೆ, ಕಲ್ಲು, ಗಾರೆ ಅಥವಾ ಸೈಡಿಂಗ್‌ನಂತಹ ಎಕ್ಸ್ಟಿರೀಯರ್ ಭಾಗದಲ್ಲಿ ಯಾವ ಸಾಮಗ್ರಿಗಳನ್ನು ಬಳಸಬೇಕು ಎಂಬುದನ್ನು ನಿರ್ಧಿಷ್ಟವಾಗಿ ತಿಳಿಸುತ್ತದೆ. ಅದರಿಂದಾಗಿ ನಿರ್ಮಾಣ ಹಂತದಲ್ಲಿ ಬಿಲ್ಡರ್‌ಗಳು ಮತ್ತು ಕಾಂಟ್ರ್ಯಾಕ್ಟರ್ಗಳು ಅರಿತುಕೊಂಡು ಯಾವ ವಸ್ತುಗಳನ್ನು ಬಳಸಬೇಕು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಾಯ ಮಾಡುತ್ತದೆ.

 

8. ಲ್ಯಾಂಡ್​ಸ್ಕೇಪ್​ ಹಾಗೂ ಬಾಹ್ಯ ಲಕ್ಷಣಗಳು

ಕೆಲವು ಸಂದರ್ಭಗಳಲ್ಲಿ, ಈ ಪ್ಲ್ಯಾನ್​ ಉದ್ಯಾನ, ಮಾರ್ಗ, ಚಾಲನಾ ರಸ್ತೆಗಳು ಮತ್ತು ಕಟ್ಟಡದ ಒಟ್ಟಾರೆ ಸೌಂದರ್ಯಕ್ಕೆ ಕೊಡುಗೆ ನೀಡುವ ಇತರ ಬಾಹ್ಯ ವೈಶಿಷ್ಟ್ಯಗಳಂತಹ ಲ್ಯಾಂಡ್​ಸ್ಕೇಪ್​ ಅಂಶಗಳನ್ನು ಸಹ ಸಂಯೋಜಿಸುತ್ತವೆ.


ಮನೆ ನಿರ್ಮಿಸುವಾಗ ಎಲಿವೇಶನ್ ಪ್ಲ್ಯಾನ್​​ ಪ್ರಾಮುಖ್ಯತೆ



ಕಟ್ಟಡದ ಎಲಿವೇಶನ್​ ವಿಚಾರಕ್ಕೆ ಬಂದಾಗ, ಈ ಪ್ಲ್ಯಾನ್​​​ಗಳು ಮಹತ್ವದ ಪ್ರಾಮುಖ್ಯತೆಯನ್ನು ಹೊಂದಿವೆ. ನಿರ್ಮಾಣ ಪ್ರಕ್ರಿಯೆಯಲ್ಲಿ ಎಲಿವೇಶನ್​ ಪ್ಲ್ಯಾನ್​​​ ಏಕೆ ಅತ್ಯಗತ್ಯ ಎಂಬುದರ ವಿವಿಧ ಕಾರಣಗಳನ್ನು ತಿಳಿಯೋಣ:

 

1. ಸುಲಭ ನಿರ್ಮಾಣ

ಈ ಪ್ಲ್ಯಾನ್​​ ಕಟ್ಟಡದ ಹೊರಗಿನ ವಿವರಗಳು, ಆಯಾಮಗಳು ಮತ್ತು ಫಿನಿಶಿಂಗ್​ ಅನ್ನು ತೋರಿಸುವ ಬ್ಲ್ಯೂಪ್ರಿಂಟ್ ಆಗಿಯೂ ಕಾರ್ಯನಿರ್ವಹಿಸುತ್ತವೆ. ಇದು ವಿನ್ಯಾಸವನ್ನು ನಿಖರವಾಗಿ ಕಟ್ಟಲು ನಿರ್ಮಾಣ ತಂಡಗಳಿಗೆ ಸಹಾಯ ಮಾಡುತ್ತದೆ. ಇದು ಸುಗಮ ಮತ್ತು ಹೆಚ್ಚು ಪರಿಣಾಮಕಾರಿ ನಿರ್ಮಾಣ ಪ್ರಕ್ರಿಯೆಗೆ ಕಾರಣವಾಗುತ್ತದೆ.

 

2. ಸುಲಭ ನಿರ್ವಹಣೆ

ಈ ರೀತಿಯ ಯೋಜನೆಯು ಮನೆಮಾಲೀಕರಿಗೆ ತಮ್ಮ ಮನೆಗಳ ಹೊರಭಾಗದಲ್ಲಿ ಅಗತ್ಯವಿರುವ ಯಾವುದೇ ಸಮಸ್ಯೆಗಳನ್ನು ಅಥವಾ ದುರಸ್ತಿಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸುಲಭ ಮಾಡಿಕೊಡುತ್ತದೆ. ನಿರ್ವಹಣೆ ಪ್ರಕ್ರಿಯೆಯು ಸಾಕಷ್ಟು ವ್ಯವಸ್ಥಿತವಾಗಿ ಹಾಗೂ ಕಡಿಮೆ ವೆಚ್ಚದಲ್ಲಿ ನಿರ್ಮಿಸುವ ಭರವಸೆ ಕೊಡುತ್ತದೆ.  

 

3. ಸಂಪನ್ಮೂಲಗಳನ್ನು ಉಳಿಸುತ್ತದೆ

ಎಲಿವೇಶನ್​ ಪ್ಲ್ಯಾನ್ ಮೂಲಕ ಕಟ್ಟಡದ ಎಕ್ಸ್ಟಿರೀಯರ್ ವಿನ್ಯಾಸದ ಸ್ಪಷ್ಟವಾದ ವಿಷನ್​ ಹೊಂದಿರುವ ಮೂಲಕ, ಬಿಲ್ಡರ್‌ಗಳು ನಿರ್ಮಾಣದ ಸಮಯದಲ್ಲಿ ದುಬಾರಿ ತಪ್ಪುಗಳು ಆಗದಂತೆ ತಡೆಯಬಹುದು. ಇದು ಪುನರ್ನಿರ್ಮಾಣ ಅಥವಾ ಡಿಸೈನ್​ ಬದಲಾವಣೆ ತಡೆಯುವ ಮೂಲಕ ಸಮಯ ಮತ್ತು ಸಂಪನ್ಮೂಲ ಈ ಎರಡನ್ನೂ ಉಳಿಸುತ್ತದೆ.

 

4. ಸುಲಭ ಮಾರ್ಪಾಡು

ಕಟ್ಟಡಕ್ಕೆ ಮಾರ್ಪಾಡುಗಳು ಅಥವಾ ಸೇರ್ಪಡೆಗಳನ್ನು ಮಾಡಬೇಕಾದಾಗ ಈ ಪ್ಲ್ಯಾನ್​ ಪ್ರಮುಖವಾಗಿ ಅಮೌಲ್ಯವಾಗಿವೆ. ಕೋಣೆಯನ್ನು ವಿಸ್ತರಿಸಲು, ಕಿಟಕಿಯನ್ನು ಅಳವಡಿಸುವಾಗ ಅಥವಾ ರೂಫ್​ಗಳನ್ನು ಬದಲಾಯಿಸುವಾಗ, ಈ ಪ್ಲ್ಯಾನ್ ರೆಫರನ್ಸ್​ ಪಾಯಿಂಟ್​ನಂತೆ ಕೆಲಸ ಮಾಡುತ್ತದೆ.

 

5. ಸುಲಭ ಅಳವಡಿಕೆ

ಎಲಿವೇಶನ್ ಡ್ರಾಯಿಂಗ್ ತಯಾರಿಸುವಾಗ ಸುಲಭವಾದ ಅಳವಡಿಕೆಯು ಒಂದು ಪ್ರಮುಖ ಪರಿಗಣನೆಯಾಗಿದೆ. ಅಸ್ತಿತ್ವದಲ್ಲಿರುವ ಗೋಡೆಗಳು ಅಥವಾ ಮರಗಳು ರೂಫ್​ಗಳ ನಿರ್ಮಾಣಕ್ಕೆ ಅಡೆತಡೆಯಾಬಗುದು. ಹೀಗಾಗಿ ಎಲಿವೇಶನ್ ಪ್ಲ್ಯಾನ್​ ಮಾಲೀಕರು ಅಥವಾ ಬಿಲ್ಡರ್​ಗೆ ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಅರಿಯಲು ಹಾಗೂ ನಿವಾರಿಸಲು ಪರಿಹಾರ ಕೊಡುತ್ತದೆ. 


ಎಲಿವೇಶನ್ ಡ್ರಾಯಿಂಗ್ ಎಂದರೇನು ಮತ್ತು ಎಲಿವೇಶನ್ ಪ್ಲಾನ್ ಡ್ರಾಯಿಂಗ್ ಅನ್ನು ಬಿಡಿಸುವ ವಿಧಾನಗಳು


1. ಮುಖ್ಯ ಮಹಡಿ ಗೋಡೆಯ ಬೇಸ್​ಲೈನ್​ ಅನ್ನು ಚಿತ್ರಿಸುವುದು

ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ಎಲಿವೇಶನ್ ಪ್ಲ್ಯಾನ್​ ರಚಿಸಲು, ನೀವು ಮೇನ್​​ ಫ್ಲೋರ್​ ಗೋಡೆಯ ಬೇಸ್​ಲೈನ್​ ಅನ್ನು ಬರೆಯುವ ಮೂಲಕ ಆರಂಭಿಸಬೇಕು. ನಿಮ್ಮ ಫ್ಲೋರ್​​ನ ಪ್ಲ್ಯಾನ್​ ರೇಖಾಚಿತ್ರಗಳನ್ನು ಉಲ್ಲೇಖಿಸಿ ಮತ್ತು ಯಾವುದೇ ಗೋಡೆಗಳ ಸಮತಲ ಅಂತರವನ್ನು ಅಳೆಯುವ ಮೂಲಕ ಇದನ್ನು ಮಾಡಬಹುದು. ಹೊರಗಿನ ಸೈಡ್‌ವಾಲ್‌ಗಳಿಗೆ ಯಾವುದೇ ಸೈಡಿಂಗ್ ವಸ್ತುಗಳ ದಪ್ಪವನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.

 

2. ಗೋಡೆಯ ಎತ್ತರವನ್ನು ನಿರ್ಧರಿಸುವುದು

ಮುಖ್ಯ ಫ್ಲೋರ್​ ಗೋಡೆಗಳನ್ನು ಅಳತೆ ಮಾಡಿದ ನಂತರ, ನೀವು ಹೊರಗಿನ ಗೋಡೆಗಳಿಗೆ ನೇರ ರೇಖೆಗಳನ್ನು ಎಳೆಯಬೇಕು. ನೆಲದ ಎತ್ತರಕ್ಕಿಂತ ಗೋಡೆಗಳು ಎಷ್ಟು ಎತ್ತರದಲ್ಲಿರುತ್ತವೆ ಎಂಬುದನ್ನು ನಿರ್ಧರಿಸಲು ಇದು ಮುಖ್ಯವಾಗಿದೆ. ಕಟ್ಟಡದ ವಿಭಾಗದೊಳಗಿನ ಕೋಣೆಗಳಲ್ಲಿನ ಸೀಲಿಂಗ್‌ಗಳ ಎತ್ತರವನ್ನು ಪರಿಗಣಿಸಿ ಮತ್ತು ಅದರ ಮೇಲಿನ ಯಾವುದೇ ಮಹಡಿ ಅಥವಾ ಸೀಲಿಂಗ್ ತೊಲೆಗಳ ಎತ್ತರವನ್ನು ಸೇರಿಸಿ ಚಿತ್ರಿಸಬೇಕು.

 

3. ಕಿಟಕಿಗಳು ಮತ್ತು ಬಾಗಿಲಿನ ಔಟ್​ಲೈನ್​​ಗಳನ್ನು ಎಳೆಯುವುದು

ಗೋಡೆಯ ಎತ್ತರವನ್ನು ನಿರ್ಧರಿಸಿದ ನಂತರ, ಕಿಟಕಿಗಳು ಮತ್ತು ಬಾಗಿಲುಗಳ ಔಟ್​ಲೈನ್​​ಗಳನ್ನು ಎಳೆಯುವುದನ್ನು ಮುಂದುವರೆಸಬೇಕು. ಹೊರಗಿನ ಬಾಗಿಲುಗಳು ಮತ್ತು ಕಿಟಕಿಗಳನ್ನು ಸರಿಯಾದ ಜಾಗದಲ್ಲಿ ಇರುವಂತೆ ಮಾಡಲು ನಿಮ್ಮ ಮಹಡಿಗಳ ಹಾರಿಜಾಂಟಲ್​ ಲೈನ್​ನಿಂದ ಅಳತೆ ಮಾಡಿ. ನಿಖರತೆಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಎಲಿವೇಶನ್​ ಬ್ಲ್ಯೂಪ್ರಿಂಟ್​ನಲ್ಲಿ ಪ್ರತಿಯೊಂದು ಕಿಟಕಿ ಮತ್ತು ಬಾಗಿಲಿನ ಅಳತೆಯನ್ನು ಬರೆಯಿರಿ.

 

4. ಮೇಲ್ಛಾವಣಿಗಳನ್ನು ಚಿತ್ರಿಸುವುದು

ಮೇಲ್ಛಾವಣಿಗಳನ್ನು ಚಿತ್ರಿಸುವಾಗ, ನೀವು ಈಗ ನಿಮ್ಮ ಪ್ಲ್ಯಾನ್​ಗಾಗಿ ಬಯಸಿದ ಮೇಲ್ಛಾವಣಿಯನ್ನು ರಚಿಸಬಹುದು. ಅಪೇಕ್ಷಿತ ಆರ್ಕಿಟೆಕ್ಚರ್​ ಶೈಲಿಯನ್ನು ಪಡೆಯಲು ಗೇಬಲ್, ಶೆಡ್, ಹಿಪ್ ಅಥವಾ ಗ್ಯಾಂಬ್ರೆಲ್‌ನಂತಹ ವಿವಿಧ ರೂಫ್​ ಪ್ರಕಾರಗಳಿಂದ ಆಯ್ಕೆಮಾಡಿಕೊಳ್ಳಿರಿ. ಡ್ರಾಫ್ಟ್ ಮಾಡಲಾಗುತ್ತಿರುವ ಬಾಹ್ಯ ಎತ್ತರದ ಯೋಜನೆಯಲ್ಲಿ ಮೇಲ್ಛಾವಣಿಯು ಬಾಹ್ಯ ಗೋಡೆಯ ಕೆಳಗೆ ಅತಿಕ್ರಮಿಸುತ್ತದೆಯೇ ಅಥವಾ ಬೀಳುತ್ತದೆಯೇ ಎಂಬುದನ್ನು ಗಣನೆಗೆ ತೆಗೆದುಕೊಳ್ಳಿ, ಇದು ಸುಸಂಬದ್ಧ ಮತ್ತು ನೋಡಲು ಆಹ್ಲಾದಕರವಾದ ಡಿಸೈನ್ ಕೊಡುತ್ತದೆ.

 

5. ಜಗಲಿ ಮತ್ತು ಮೊಗಸಾಲೆ ಸೇರಿಸುವುದು

ಕಿಟಕಿಗಳು, ಬಾಗಿಲುಗಳು, ಛಾವಣಿ ಮತ್ತು ಪ್ರಾಥಮಿಕ ಡ್ರಾಯಿಂಗ್ ಮಾಡಿದ ಬಳಿಕ, ನೀವು ಮನೆ ಮುಂದಿನ ಜಗಲಿ ಅಥವಾ ಕಟ್ಟೆಗಳು ಅಥವಾ ವರಾಂಡ ಮತ್ತು ಮೆಟ್ಟಿಲುಗಳನ್ನು ಸೇರಿಸಬೇಕು. ನಿಮ್ಮ ಮುಖ್ಯ ಮಹಡಿ ಮತ್ತು ಮನೆಯ ಸುತ್ತಲಿನ ಭೂದೃಶ್ಯದ ಅಂತಿಮ ಹಂತದ ನಡುವಿನ ಎತ್ತರ ವ್ಯತ್ಯಾಸವನ್ನು ನಿಖರವಾಗಿ ಚಿತ್ರಿಸಿರುವುದನ್ನು ಖಚಿತಡಿಸಿಕೊಳ್ಳಬೇಕು.

 

6. ಚರ್ಚಿಸಿ

ಪ್ರತಿಕ್ರಿಯೆ ಮತ್ತು ಒಳನೋಟಗಳನ್ನು ಸಂಗ್ರಹಿಸಲು ಸಂಬಂಧಿತ ಜೊತೆಗಾರರೊಂಧಿಗೆ ಆರಂಭಿಕ ರೇಖಾಚಿತ್ರದ ಕುರಿತು ಚರ್ಚಿಸಿ. ಈ ಸಂಪರ್ಕಿಸಿ ಮಾಡುವ ವಿಧಾನವು ವಿನ್ಯಾಸದ ಸಮಗ್ರ ಪರಿಶೀಲನೆ ಪಡೆಯಲು ಅನುಕೂಲವಾಗುತ್ತದೆ. ಅಗತ್ಯವಿರುವ ಬದಲಾವಣೆಯನ್ನು ತಿಳಿಸುವುದನ್ನು ಖಚಿತಪಡಿಸುತ್ತದೆ. ನಂತರ ಯೋಜನೆಯನ್ನು ಮಾರ್ಪಡಿಸುವ ಮೂಲಕ ರೇಖಾಚಿತ್ರವನ್ನು ಹೆಚ್ಚಿಸಬಹುದು.

 

7. ವಿನ್ಯಾಸವನ್ನು ಅಂತಿಮಗೊಳಿಸಿ

ಅಗತ್ಯ ಬದಲಾವಣೆಗಳು ಮತ್ತು ಸಲಹೆಗಳನ್ನು ಸೇರಿಸಿದ ನಂತರ ಎತ್ತರದ ರೇಖಾಚಿತ್ರದ ವಿನ್ಯಾಸವನ್ನು ಅಂತಿಮಗೊಳಿಸಬೇಕು. ಇದು ಮನೆ ಮಾಲೀಕನ ದೃಷ್ಟಿಗೆ ಹೊಂದಿಕೆಯಾಗುತ್ತದೆಯೇ, ಕಟ್ಟಡ ಸಂಕೇತಗಳು ಮತ್ತು ನಿಬಂಧನೆಗಳನ್ನು ಪೂರೈಸುತ್ತದೆಯೇ ಮತ್ತು ಯಾವುದೇ ನಿರ್ದಿಷ್ಟ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.



ಅಂತಿಮವಾಗಿ, ಎಲಿವೇಶನ್ ಪ್ಲ್ಯಾನ್​ ಕಟ್ಟಡದ ಹೊರಭಾಗ ಸುಂದರವಾಗಿ ಕಾಣುವಂತೆ ಮಾಡುತ್ತದೆ. ನೀವು ಮನೆಮಾಲೀಕರಾಗಿರಲಿ, ಬಿಲ್ಟರ್​ ಆಗಿರಲಿ ಅಥವಾ ಆರ್ಕಿಟೆಕ್ಟರ್​ ಆಗಿರಲಿ, ಕಟ್ಟಡದ ನಿರ್ಮಾಣವನ್ನು ಸರಿಯಾಗಿ ಮುಗಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಇದು ಅಗತ್ಯವಾಗಿದೆ. ಎಲಿವೇಶನ್​ ಪ್ಲ್ಯಾನ್​ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಕಲ್ಪನೆಯನ್ನು ವಾಸ್ತವಕ್ಕೆ ತರಲು ಸಹಾಯ ಮಾಡುತ್ತದೆ.



ಪದೇ ಪದೇ ಕೇಳಲಾಗುವ ಪ್ರಶ್ನೆಗಳು

 

1. ಫ್ಲೋರ್​ ಪ್ಲ್ಯಾನ್​ ಅಥವಾ ಎಲಿವೇಶನ್​ ಪ್ಲ್ಯಾನ್​, ಇವುಗಳಲ್ಲಿ ಯಾವುದು ಮೊದಲು ಬರುತ್ತದೆ?

ಸಾಮಾನ್ಯವಾಗಿ, ವಿನ್ಯಾಸ ಪ್ರಕ್ರಿಯೆಯಲ್ಲಿ ಎಲಿವೇಶನ್​ ಪ್ಲ್ಯಾನ್​​ಗಿಂಗತ ಮೊದಲು ಫ್ಲೋರ್​ ಪ್ಲ್ಯಾನ್​ ಬರುತ್ತದೆ. ಎಲಿವೇಶನ್​ ಡ್ರಾಯಿಂಗ್​ಗಳಿಗೆ ಕಟ್ಟಡದ ಎತ್ತರದ ಅರಿವಿನ ಅಗತ್ಯವಿರುತ್ತದೆ, ಸ್ಟ್ರಕ್ಚರ್​ನ ಫುಟ್​ಪ್ರಿಂಟ್​ ಮಾಡಿದ ನಂತರ ಮಾತ್ರ ಅದನ್ನು ನಿರ್ಧರಿಸಬಹುದು.

 

2. ಎಲಿವೇಶನ್​ನಲ್ಲಿ ಎಷ್ಟು ವಿಧಗಳಿವೆ?

ಮುಂಭಾಗ, ಹಿಂಭಾಗ, ಪಾರ್ಶ್ವ ಮತ್ತು ಆಂತರಿಕ ಎತ್ತರಗಳು ಸೇರಿದಂತೆ ಹಲವಾರು ರೀತಿಯ ಎತ್ತರಗಳಿವೆ. ಈ ಎತ್ತರದ ರೇಖಾಚಿತ್ರಗಳು ಕಟ್ಟಡದ ವಾಸ್ತುಶಿಲ್ಪದ ವಿನ್ಯಾಸವನ್ನು ಅವಲಂಬಿಸಿ ವಿಭಿನ್ನ ಮುನ್ನೋಟ ಮತ್ತು ವಿವರಗಳನ್ನು ನೀಡುತ್ತವೆ.

 

3. ಮನೆಯ ನಾಲ್ಕು ಎಲಿವೇಶನ್​ಗಳು ಯಾವುವು?

ಮನೆಯ ನಾಲ್ಕು ಎಲಿವೇಶನ್​ಗಳಲ್ಲಿ ಮುಂಭಾಗ, ಹಿಂಭಾಗ, ಎಡಭಾಗ ಮತ್ತು ಬಲಭಾಗದ ಎಲಿವೇಶನ್​ಗಳು ಸೇರಿವೆ. ಈ ಎಲಕಿವೇಶನ್​ಗಳು ವಿಭಿನ್ನ ದೃಷ್ಟಿಕೋನಗಳಿಂದ ಕಟ್ಟಡದ ಹೊರಭಾಗದ ಸಮಗ್ರ ನೋಟವನ್ನು ಒದಗಿಸುತ್ತದೆ, ಡಿಸೈನರ್​ಗಳು ಮತ್ತು ಆರ್ಕಿಟೆಕ್ಟರ್​ಗಳು ಸ್ಟ್ರಕ್ಚರ್​ ಆಯಾಮಗಳು, ವೈಶಿಷ್ಟ್ಯಗಳು ಮತ್ತು ಸೌಂದರ್ಯದ ನೋಟವನ್ನು ನಿಖರವಾಗಿ ಚಿತ್ರಿಸಲು ಅನುವು ಮಾಡಿಕೊಡುತ್ತದೆ.


ಸಂಬಂಧಿತ ಲೇಖನಗಳು



ಶಿಫಾರಸು ಮಾಡಿದ ವೀಡಿಯೊಗಳು



ಮನೆ ಕನ್‌ಸ್ಟ್ರಕ್ಷನ್‌ಗಾಗಿ ಎಸ್ಟಿಮೇಟಿಂಗ್ ಟೂಲ್ಸ್


ವೆಚ್ಚ ಕ್ಯಾಲ್ಕುಲೇಟರ್

ಪ್ರತಿಯೊಬ್ಬ ಮನೆ ನಿರ್ಮಾಣ ಮಾಡುವವರು ತಮ್ಮ ಕನಸಿನ ಮನೆಯನ್ನು ನಿರ್ಮಿಸಲು ಬಯಸುತ್ತಾರೆ ಆದರೆ ಅದು ಅವರ ಬಜೆಟ್‌ ವೆಚ್ಚವನ್ನು ಮೀರದಂತೆ ಇರಿಸಿಕೊಳ್ಳಲು ಬಯಸುತ್ತಾರೆ. 

logo

ಇಎಂಐ ಕ್ಯಾಲ್ಕುಲೇಟರ್

ಮನೆ ನಿರ್ಮಾಣಕ್ಕೆ ಹಣಕಾಸು ಒದಗಿಸಿಕೊಳ್ಳುವ ಅತ್ಯುತ್ತಮ ಮಾರ್ಗಗಳಲ್ಲಿ ಮನೆ-ಸಾಲವನ್ನು ತೆಗೆದುಕೊಳ್ಳುವುದು ಒಂದಾಗಿರುತ್ತದೆ, ಆದರೆ ಮನೆಯನ್ನು ನಿರ್ಮಿಸುವವರು ಎಷ್ಟು ಕಂತುಗಳನ್ನು ಪಾವತಿಸಬೇಕೆಂದು ತಿಳಿಯಲು ಬಯಸುತ್ತಾರೆ. 

logo

ಪ್ರಾಡಕ್ಟ್ ಪ್ರೆಡಿಕ್ಟರ್

ಮನೆಯನ್ನು ನಿರ್ಮಿಸುವ ಆರಂಭಿಕ ಹಂತಗಳಲ್ಲಿ, ಮನೆ ನಿರ್ಮಿಸುವವರು ಸರಿಯಾದ ಉತ್ಪನ್ನಗಳನ್ನು ಆಯ್ಕೆ ಮಾಡುವುದು ಮುಖ್ಯವಾಗಿರುತ್ತದೆ. 

logo

ಅಂಗಡಿ ಪತ್ತೆಕಾರಕ

ಮನೆ ಕಟ್ಟುವವರಿಗೆ, ಮನೆಯ ಕಟ್ಟಡದ ಬಗ್ಗೆ ಎಲ್ಲಾ ಅಮೂಲ್ಯವಾದ ಮಾಹಿತಿಯನ್ನು ಪಡೆಯುವ ಸರಿಯಾದ ಅಂಗಡಿಯನ್ನು ಕಂಡುಹಿಡಿಯುವುದು ಮುಖ್ಯವಾಗಿದೆ.

logo

Loading....